ವೈದ್ಯ ವೈವಿಧ್ಯ
drhsmohan@gmail.com
100 ವರ್ಷಗಳ ನಂತರವೂ ಒಬ್ಬ ವ್ಯಕ್ತಿ ಬದುಕಬಲ್ಲನೆ ಎಂಬುದನ್ನು ಮುಂಚಿತವಾಗಿಯೇ ಹೇಳಿದರೆ ಹೇಗೆ? ಈ ನಿಟ್ಟಿನಲ್ಲಿ ಅಮೆರಿಕದ ಸಂಶೋಧನೆ ಮಹತ್ವದ ಘಟ್ಟವೊಂದನ್ನು ತಲುಪಿದೆ. ದೀರ್ಘಕಾಲ ಬದುಕಿದ ವ್ಯಕ್ತಿಗಳಲ್ಲಿ ಕಂಡು ಬಂದ ಗುರುತು ಸೂಚಕಗಳನ್ನು ಆಧರಿಸಿ ನಡೆಸಲಾದ ಸಂಶೋಧನೆಯ ವಿವರಗಳನ್ನು ವಿಜ್ಞಾನ ಪತ್ರಿಕೆ ಸೈನ್ಸ್ ವರದಿ ಮಾಡಿದೆ.
ನೂರು ವರ್ಷ ದಾಟಿದ ಕೆಲವರನ್ನಾದರೂ ನಾವು ನಮ್ಮ ಸನಿಹದಲ್ಲಿ ಇತ್ತೀಚಿಗೆ ಕಂಡಿರಬಹುದು. ಇಂಥವರು ಇಷ್ಟು ಸುದೀರ್ಘ ಕಾಲ ಬದುಕಲು ಏನು ಕಾರಣ? ಏನಿದರ ರಹಸ್ಯ? ಈ ಅಂಶ ವಿಜ್ಞಾನಿಗಳಿಗೆ ಹಲವು ಕಾಲಗಳಿಂದ ದೊಡ್ಡ ಪ್ರಶ್ನೆಯಾಗಿದೆ. ಆ ರಹಸ್ಯ ತಿಳಿಯಲು ಅವರು ಹಲವಾರು ವರ್ಷಗಳಿಂದ ವಿವಿಧ ಅಧ್ಯಯನದಲ್ಲಿ ತೊಡಗಿದ್ದಾರೆ.
1900 ರ ನಂತರ ಮಾನವನ ಜೀವಿತಾವಧಿ ಎರಡು ಪಟ್ಟುಗಿಂತಲೂ ಜಾಸ್ತಿಯಾಗಿದೆ. 1900 ರಲ್ಲಿ 31 ವರ್ಷ ಇದ್ದ ಅದು 2023 ರ ಹೊತ್ತಿಗೆ 73.2 ಆಗಿದ್ದು 2050 ರ ಹೊತ್ತಿಗೆ 77.1 ಆಗಲಿದೆ ಎನ್ನಲಾಗಿದೆ. ಹಾಗೆಯೇ ನೂರು ವರ್ಷ ಅಥವಾ ಅದಕ್ಕಿಂತ ಜಾಸ್ತಿ ಬದುಕುವ ಜನರ ಸಂಖ್ಯೆಯು ಜಾಸ್ತಿ ಯಾಗಲಿದೆ. ಶತಾಯುಷಿಗಳು ಎಂದು ಕರೆಯಲ್ಪಡುವ ಇವರು 2015 ರಲ್ಲಿ ಜಗತ್ತಿನಾದ್ಯಂತ 450000 ಜನರು ಇದ್ದರೆ, 2050 ರ ಹೊತ್ತಿಗೆ ಸಂಖ್ಯೆ ೩.೭ ಮಿಲಿಯನ್ ತಲುಪಲಿದೆ ಎನ್ನಲಾಗಿದೆ.
೨೦೦೦ ದ ಹೊತ್ತಿಗೆ ಕೈಗೊಂಡ ಅಧ್ಯಯನದಲ್ಲಿ ೨೦೦೫ ಮತ್ತು ೨೦೩೦ ರ ನಡುವೆ ಈ ಸಂಖ್ಯೆ ನಾಲ್ಕು ಪಟ್ಟು ಜಾಸ್ತಿ ಯಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಕೆಲವೇ ವ್ಯಕ್ತಿಗಳು ನೂರು ವರ್ಷ ಮತ್ತು ಅದಕ್ಕೂ ಜಾಸ್ತಿ ಬದುಕುತ್ತಾರೆ, ಉಳಿದವರು ಈ ಸುದೀರ್ಘ ಕಾಲ ಬದುಕುತ್ತಿಲ್ಲ ಏಕೆ ಎಂಬ ಬಗ್ಗೆ ಸ್ಪಷ್ಟವಾಗಿ ಇನ್ನೂ ಗೊತ್ತಾಗಿಲ್ಲ. ಇದನ್ನು ನಿಖರವಾಗಿ ಪತ್ತೆ
ಹಚ್ಚಲು ಹಲವು ಅಧ್ಯಯನಗಳು ಹಲವಾರು ವರ್ಷಗಳಿಂದ ನಡೆಯುತ್ತಿವೆ. ಇತ್ತೀಚೆಗೆ ಅಮೆರಿಕಾದ ಬಾಸ್ಟನ್ ವಿಶ್ವವಿದ್ಯಾ ನಿಲಯದ ಮೆಡಿಕಲ್ ಸ್ಕೂಲ್ ನ ಸಂಶೋಧಕರು ಒಂದು ಅಂಶವನ್ನು ಹೊರಗೆಡವಿದ್ದಾರೆ. ಈ ಶತಾಯುಷಿಗಳಲ್ಲಿ ಒಂದು ವಿಶಿಷ್ಟ ಪ್ರತಿರೋಧ ಜೀವಕೋಶದ ಸೇರ್ಪಡುವಿಕೆ ಮತ್ತು ಚಟುವಟಿಕೆ ಇರುತ್ತದೆ.
ಇದರ ದೆಸೆಯಿಂದ ಅವರ ದೇಹದ ಪ್ರತಿರೋಧ ವ್ಯವಸ್ಥೆ ತುಂಬಾ ಚಟುವಟಿಕೆಯಿಂದ ಕೂಡಿದ್ದು ಅವರಿಗೆ ಹೆಚ್ಚಿನ ವರ್ಷಗಳ ಕಾಲ ಜೀವಿಸಲು ಅನುವು ಮಾಡಿಕೊಡುತ್ತದೆ. ಈ ಅಂಶ ಭವಿಷ್ಯದಲ್ಲಿ ಹೆಚ್ಚು ಕಾಲ ಬದುಕಲು ಒಂದು ಚಿಕಿತ್ಸೆಯಾಗಿ ಮಾರ್ಪಡಲು ಸಾಧ್ಯವಿದೆ ಎಂದು ವಿಜ್ಞಾನಿಗಳ ಅಭಿಮತ. ಈ ಅಧ್ಯಯನ ಇತ್ತೀಚಿನ ಲ್ಯಾನ್ಸೆಟ್ ಇ ಬಯೋ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ.
ವಯಸ್ಸಾದ ನಂತರ ಪ್ರತಿರೋಧ ವ್ಯವಸ್ಥೆಯ ಬದಲಾವಣೆಗಳು: ನಮಗೆ ವಯಸ್ಸಾದ ನಂತರ ದೇಹದ ಎಲ್ಲಾ ಅಂಗಾಂಗ ಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಹಾಗೆಯೇ ದೇಹದ ಪ್ರತಿರೋಧ ವ್ಯವಸ್ಥೆಯಲ್ಲೂ ಬದಲಾವಣೆ ಸ್ವಾಭಾವಿಕವಾಗಿ
ಆಗುತ್ತದೆ. ವಯಸ್ಸಾದ ನಂತರ ಪ್ರತಿರೋಧ ವ್ಯವಸ್ಥೆಯಲ್ಲಿ ಎರಡು ರೀತಿಯ ಬದಲಾವಣೆಗಳಾಗುತ್ತವೆ. ಒಂದನ್ನು ಇಮ್ಯೂನೊ ಸೆನೆಸನ್ಸ್ ಎನ್ನಲಾಗುತ್ತದೆ. ಅಂದರೆ ಇದರಲ್ಲಿ ವಯಸ್ಸಿಗೆ ಅನುಗುಣವಾಗಿ ಪ್ರತಿರೋಧ ವ್ಯವಸ್ಥೆ ಕುಂಠಿತ ಗೊಳ್ಳುತ್ತಾ ಹೋಗುತ್ತದೆ. ಹೀಗೆ ಬದಲಾದಾಗ ವಯಸ್ಸಾದ ವ್ಯಕ್ತಿಗಳಲ್ಲಿ ಪ್ರತಿರೋಧ ಕ್ರಿಯೆ ಗಮನಾರ್ಹವಾಗಿ ಕುಂಠಿತ ಗೊಳ್ಳುತ್ತಾ ಹೋಗುತ್ತದೆ.
ಅಂಥ ವ್ಯಕ್ತಿಗಳು ವಿವಿಧ ಸೋಂಕು ರೋಗಗಳು, ಆಟೋ ಇಮ್ಯೂನ್ ಕಾಯಿಲೆಗಳು ಹಾಗೂ ವಿವಿಧ ಕ್ಯಾನ್ಸರ್ ಕಾಯಿಲೆಗಳಿಗೆ
ಒಳಗಾಗುವ ಸಾಧ್ಯತೆ ಜಾಸ್ತಿ. ಹಾಗೆಯೇ ಉರಿಯೂತದ ಅಂಶ ವ್ಯಕ್ತಿ ವಯಸ್ಸಾದಂತೆ ಜಾಸ್ತಿಯಾಗುತ್ತಾ ಹೋಗುತ್ತದೆ. ರಕ್ತ ಮತ್ತು ದೇಹದ ಬೇರೆ ಬೇರೆ ಭಾಗಗಳಲ್ಲಿ ಉರಿಯೂತಕ್ಕೆ ಸಂಬಂಧಪಟ್ಟ ಸೂಚ್ಯಂಕಗಳು ಜಾಸ್ತಿಯಾಗುತ್ತಾ ಹೋಗುತ್ತವೆ. ಇದರ ಪರಿಣಾಮ ಎಂದರೆ ದೇಹದಲ್ಲಿ ವಿವಿಧ ಕಾಯಿಲೆಗಳು ಬರುವ ಸಾಧ್ಯತೆ ಜಾಸ್ತಿಯಾಗುತ್ತಾ ಹೋಗುತ್ತವೆ.
ನರವ್ಯೂಹದ ಡಿಜನರೇಟಿವ್ ಕಾಯಿಲೆಯಾದ ಆಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆಯೂ ಜಾಸ್ತಿ. ಹಾಗಾಗಿ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ವ್ಯಕ್ತಿಗೆ ವಯಸ್ಸಾದಂತೆ ಬದಲಾಗುತ್ತಾ ಹೋಗುತ್ತದೆ. ಟರ್ಫ್ ಮೆಡಿಕಲ್ ಸೆಂಟರ್‌ನ ಇನ್‌ಸ್ಟಿಟ್ಯೂಟ್
ಫಾರ್ ಕ್ಲಿನಿಕಲ್ ರೀಸರ್ಚ್ ಮತ್ತು ಹೆಲ್ತ್ ಪಾಲಿಸಿ ಸ್ಟಡೀಸ್‌ನ ಡಾ. ತನ್ಯಾ ಕರಗಿಯಾನಿಸ್ ಮತ್ತು ಅವರ ತಂಡ ಶತಾಯುಷಿ ಗಳ ಪ್ರತಿರೋಧ ವ್ಯವಸ್ಥೆಯನ್ನು ಅಧ್ಯಯನ ಮಾಡಲು ತೊಡಗಿದರು. ಸಾಮಾನ್ಯವಾಗಿ ವಯಸ್ಸಾದ ನಂತರ ಉಂಟಾಗುವ ಬದಲಾವಣೆಗಳು ಇಂತಹವರಲ್ಲಿ ಹೇಗಿರುತ್ತವೆ? ಹಾಗೆಯೇ ವಯಸ್ಸಾದ ನಂತರ ಬರುವ ಕಾಯಿಲೆಗಳು ಇಂತಹವರಲ್ಲಿ
ಏನಾಗುತ್ತವೆ ಎಂಬುದು ಈ ಅಧ್ಯಯನದ ಮುಖ್ಯ ಉದ್ದೇಶ.
ಹೆಚ್ಚಿನ ಶತಾಯಿಷಿಗಳಲ್ಲಿ ವಯಸ್ಸಾದ ನಂತರ ಬರುವ ಕಾಯಿಲೆಗಳು ತುಂಬಾ ತಡವಾಗಿ ಆರಂಭಗೊಳ್ಳಲು ತೊಡಗಿದವು.
ಹಾಗಾಗಿ ಇಂಥವರ ದೇಹದಲ್ಲಿ ತೀರಾ ವಯಸ್ಸಾದವರಲ್ಲಿ ಸಹಿತ ಪ್ರತಿರೋಧ ವ್ಯವಸ್ಥೆ ಜಾಗೃತವಾಗಿರುತ್ತದೆ. ಈ ಅಧ್ಯಯನ ದಲ್ಲಿ ಸಂಶೋಧಕರು ಇಂಗ್ಲೆಂಡ್ ಸೆಂಟನೇರಿಯನ್ ಸ್ಟಡಿ-ಇದರಲ್ಲಿ ನೋಂದಾಯಿಸಿದ ಏಳು ಜನ ಶತಾಯುಷಿಗಳ ರಕ್ತದ ಸ್ಯಾಂಪಲ್ಲಿನ -ರಿ-ರಲ್ ಬ್ಲಡ್ ಮಾನೋನ್ಯೂಕ್ಲಿಯಾರ್ ಸೆಲ್ -ಇವುಗಳ ಮೇಲೆ ಸಿಂಗಲ್ ಸೆಲ್ ಸೀಕ್ವೆನ್ಸಿಂಗ್ ಎಂಬ
ಪರೀಕ್ಷೆ ನಡೆಸಿದರು. ಅವರು ಕಡಿಮೆ ವಯಸ್ಸು ಮತ್ತು ತುಂಬಾ ಮುದಿ ವಯಸ್ಸು-ಇವುಗಳಲ್ಲಿನ ನಿರ್ದಿಷ್ಟ ಪ್ರತಿರೋಧ ಜೀವಕೋಶಗಳಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಿದರು.
ಹಾಗೆಯೇ ಅವರು ಅದೇ ಜೀವಕೋಶಗಳ ಜೀನ್ ಎಕ್ಸ್ ಪ್ರೆಶನ್ ನಮೂನೆಗಳನ್ನು ಪರೀಕ್ಷಿಸಿದರು. ಅದರಲ್ಲಿ ವಿಶೇಷವಾಗಿ ಇಳಿ ವಯಸ್ಸಿನಲ್ಲಿ ವಿಶೇಷವಾಗಿರುವ ಗುಣಗಳನ್ನು ಹುಡುಕಲು ಈ ಪರೀಕ್ಷೆ ಕೈಗೊಂಡರು.
ಶತಾಯುಷಿಗಳಲ್ಲಿ ಭಿನ್ನ ರೀತಿಯ ಬದಲಾವಣೆಗಳು : ಶತಾಯುಷಿಗಳಲ್ಲಿ ತುಂಬಾ ಸಹಜವಾದ ಪ್ರತಿರೋಧ ಪ್ರತಿಕ್ರಿಯೆಗಳು ಇರುವುದನ್ನು ಇವರು ಖಚಿತಪಡಿಸಿದರು. ಹಿಂದಿನ ಈ ರೀತಿಯ ಅಧ್ಯಯನಗಳಲ್ಲಿ ಸಹಿತ ಇದೇ ರೀತಿಯ ಜೀವಕೋಶಗಳ ಪ್ರತಿರೋಧ ವ್ಯವಸ್ಥೆ ಇರುವುದು ಕಂಡು ಬಂದಿತ್ತು. ತೀರಾ ವಯಸ್ಸಾದರೂ ವಯಸ್ಸಿನ ಲಕ್ಷಣಗಳು ಅವರಲ್ಲಿ ಕಾಣಿಸಿಕೊಳ್ಳದೇ ಸಹಜ ವಯಸ್ಕರಲ್ಲಿ ಇರುವ ರೀತಿ ಇರುವ ಪ್ರತಿರೋಧ ವ್ಯವಸ್ಥೆ ವಿಶೇಷವೇ ಸರಿ.
ಹಾಗೆಯೇ ಅವರುಗಳ ಜೀನ್‌ಗಳಲ್ಲಿ ಅಪರೂಪದ ದೀರ್ಘಕಾಲದ ವಯಸ್ಸಿನ ಛಾಯೆ ಇರುವ ಗುರುತುಗಳನ್ನು ನಿರ್ದಿಷ್ಟವಾಗಿ ಸಂಶೋಧಕರಿಗೆ ಕಾಣಸಿಕ್ಕಿತು. ಹಾಗಾಗಿ ಅವರುಗಳ ಜೀನ್‌ಗಳನ್ನು ವಿವರವಾಗಿ ಪರೀಕ್ಷಿಸುವುದರಿಂದ ಇಂಥವರು ಬಹಳ ದೀರ್ಘ ಕಾಲ ಬದುಕುತ್ತಾರೆ ಎಂಬ ಅಂಶವನ್ನು ಸ್ಪಷ್ಟವಾಗಿ ಗುರುತಿಸಬಹುದು ಎಂದು ಸಂಶೋಧಕರ ಅಭಿಮತ. ಹಾಗಾಗಿ ನಮ್ಮ ಈ ಸಂಶೋಧನೆ ಆರೋಗ್ಯವಂತರಾಗಿ ಹೇಗೆ ದೀರ್ಘಕಾಲ ಬದುಕಬಹುದು ಎಂಬ ವಿಷಯದಲ್ಲಿ ಚಿಕಿತ್ಸೆಗೆ ಅನುಕೂಲ ವಾಗುವ ಸಂಶೋಧನೆಯನ್ನು ಭವಿಷ್ಯದಲ್ಲಿ ಕೈಗೊಳ್ಳಬಹುದು ಎಂದು ಇವರ ಅಭಿಪ್ರಾಯ.
ಹಾಗಾಗಿ ಇವರ ಪ್ರತಿರೋಧ ವ್ಯವಸ್ಥೆಯ ಜೀವಕೋಶಗಳನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಿ, ಚಿಕ್ಕ ವಯಸ್ಸಿನಿಂದಲೇ
ದೀರ್ಘಕಾಲ ಬದುಕಲು ಬೇಕಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಅಗತ್ಯ ಅಂಶಗಳನ್ನು ಹುಡುಕಿ ತೆಗೆದು ಅವುಗಳನ್ನು ಅನುಸರಿಸಬೇಕು ಎಂಬುದು ಅವರ ಸಲಹೆ. ಈ ಸಂಶೋಧನಯನ್ನು ವಿವರವಾಗಿ ಅವಲೋಕಿಸಿದ ಈ ರಂಗದಲ್ಲಿ ಸಂಶೋಧನೆ ನಡೆಸುತ್ತಿರುವ ಮತ್ತೊಬ್ಬ ಸಂಶೋಧಕ ಡಾ. ಕೈಸರ್ ಅವರು ಈ ರೀತಿ ದೀರ್ಘಕಾಲ ಬದುಕಿದ ನೂರು ವರ್ಷ
ದಾಟಿಯೂ ಮುಂದಿನ ಜೀವನ ಸಾಗಿಸುತ್ತಿರುವ ಈ ಶತಾಯುಷಿಗಳಲ್ಲಿ ನಾವು ಕಲಿಯಬೇಕಾದದ್ದು ಬಹಳಷ್ಟು ಇದೆ.
ಅವರ ಪ್ರತಿರೋಧ ವ್ಯವಸ್ಥೆಯನ್ನು ಕೂಲಂಕುಷವಾಗಿ ಅವಲೋಕಿಸುವಾಗ ಅಲ್ಲಿ ಏನಾಗುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಹಾಗೆಯೇ ಇವರಿಗೆ ಸಿಕ್ಕಿದ ಈ ಸೌಭಾಗ್ಯವನ್ನು ಬೇರೆ ಯವರಿಗೂ ಸೂಕ್ತ ಚಿಕಿತ್ಸೆಯ ಮೂಲಕ ದೊರೆಯುವಂತೆ ಮಾಡಲು ಸಾಧ್ಯವೇ ಎಂಬುದು ನಮ್ಮ ಈಗಿನ ಆದ್ಯತೆ. ಈ ದಿಸೆಯಲ್ಲಿ ನಾವೆಲ್ಲಾ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂಬುದು ಅವರ ಅಭಿಪ್ರಾಯ.
ಈ ರೀತಿಯ ಚಿಕಿತ್ಸೆಯ ಜೊತೆಗೆ ಈ ಶತಾಯುಷಿಗಳ ಆರೋಗ್ಯವಂತ ಜೀವನ ಶೈಲಿಯೂ ಅನುಕರಣ ಯೋಗ್ಯವಾಗಿರುತ್ತದೆ. ಅದರ ಬಗ್ಗೆಯೂ ಗಮನ ಹರಿಸಬೇಕು ಎಂದು ಮತ್ತೊಬ್ಬ ಸಂಶೋಧಕಿ ಕ್ಯಾಥಲೀನ್ ಕ್ಯಮರೂನ್ ನುಡಿಯುತ್ತಾರೆ. ಹಾಗೆಯೇ ಇದು ತುಂಬಾ ಆರಂಭಿಕ ಸಂಶೋಧನೆ, ಜೊತೆಗೆ ತುಂಬಾ ಕಡಿಮೆ ಜನರನ್ನು ರೀತಿಯ ಶತಾಯುಷಿಗಳನ್ನು ಒಳಗೊಂಡು
ಸುದೀರ್ಘ ಅವಽಯ ಅಧ್ಯಯನದ ಅಗತ್ಯವಿದೆ ಎಂಬುದು ಅವರ ಅಭಿಮತ. ಹಾಗೆಯೇ ಇಂಥ ಶತಾಯುಷಿಗಳ ಕೌಟುಂಬಿಕ ವಿವರಗಳ ಬಗ್ಗೆಯೂ ನಾವು ಗಮನಹರಿಸಬೇಕು ಎಂಬುದು ಅವರ ಅಭಿಪ್ರಾಯ.
೧೦೦ ವರ್ಷಗಳ ನಂತರವೂ ಒಬ್ಬ ವ್ಯಕ್ತಿ ಬದುಕಬಲ್ಲನೆ ಎಂಬುದನ್ನು ಮುಂಚಿತವಾಗಿಯೇ ಹೇಳಿದರೆ ಹೇಗೆ? ಈ ನಿಟ್ಟಿನಲ್ಲಿ ಅಮೆರಿಕದ ಮತ್ತೊಂದು ವಿಜ್ಞಾನಿಗಳ ಸಂಶೋಧನೆ ಮಹತ್ವದ ಘಟ್ಟವೊಂದನ್ನು ತಲುಪಿದೆ. ತುಂಬಾ ದೀರ್ಘಕಾಲ ಬದುಕಿದ ವ್ಯಕ್ತಿಗಳಲ್ಲಿ ಕಂಡು ಬಂದ ಗುರುತು ಸೂಚಕಗಳನ್ನು ಆಧರಿಸಿ ನಡೆಸಲಾದ ಈ ಸಂಶೋಧನೆಯ ವಿವರಗಳನ್ನು ವಿಜ್ಞಾನ ಪತ್ರಿಕೆ ಸೈನ್ಸ್ ವರದಿ ಮಾಡಿದೆ.
ಬೋಸ್ಟನ್‌ನ ವಿಜ್ಞಾನಿಗಳು ನೂರಕ್ಕೂ ಹೆಚ್ಚು ವರ್ಷ ಬದುಕಿದ ಹಲವಾರು ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿ ಒಂದು
ರೀತಿಯಲ್ಲಿ ಗಣಿತದ ಮಾಡೆಲ್ ಮಾದರಿ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಹಾಗೆಯೇ ಅಂಥ ವ್ಯಕ್ತಿಗಳ ವಂಶವಾಹಿಗಳನ್ನು ಸಂಶೋಽಸಿ ಅದರಲ್ಲಿ ಇರುವ ವಂಶವಾಹಿ ರಹಸ್ಯವನ್ನು ವಿಜ್ಞಾನಿಗಳು ಹೊರಗೆಡವಿದ್ದಾರೆ. ಸುದೀರ್ಘ ಕಾಲದ ಈ
ಅಧ್ಯಯನದಲ್ಲಿ ೧೦೦೦ ಕ್ಕೂ ಹೆಚ್ಚಿನ ಶತಾಯುಷಿಗಳ ವಂಶವಾಹಿಗಳನ್ನು ಅಧ್ಯಯನ ಮಾಡಿದ್ದಾರೆ. ಬೇರೆ ಸಾಮಾನ್ಯ ವ್ಯಕ್ತಿಗಳ ವಂಶವಾಹಿಗಳಿಗಿಂತ ಭಿನ್ನವಾದ ವಂಶವಾಹಿ ಮಾರ್ಕರ್‌ಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.
ದೀರ್ಘಾಯುಷ್ಯ ನಿಜವಾಗಿಯೂ ಅವಶ್ಯವೇ? : ಈ ಎಲ್ಲಾ ಸಂಶೋಧನೆಗಳ ಹೊರತಾಗಿಯೂ ನಮಗೆ ಒಂದು ಸಂದೇಹ ಕಾಡುತ್ತದೆ. ಮನುಷ್ಯನಿಗೆ ಈ ರೀತಿಯ ಬಹಳ ಕಾಲ ಬದುಕುವ ದೀರ್ಘಾಯುಷ್ಯ ನಿಜವಾಗಿಯೂ ಅವಶ್ಯವೇ? ಇಳಿವಯಸ್ಸಿ ನಲ್ಲಿ ಮನುಷ್ಯನಿಗೆ ನೂರೆಂಟು ದೈಹಿಕ, ಮಾನಸಿಕ ಸಮಸ್ಯೆಗಳು ಬರುತ್ತವೆ. ಹಾಗಾಗಿ ಶತಾಯುಷ್ಯ ಅಥವಾ ದೀರ್ಘಾಯುಷ್ಯ ನಿಜವಾಗಿಯೂ ಅವಶ್ಯಕತೆಯೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ದೀರ್ಘಕಾಲದ ಆಯುಷ್ಯವನ್ನು ನಾವು ಬಯಸಿದರೆ
ವಯಸ್ಸಾದಂತೆ ಒಂದು ರೀತಿಯ ಏಕತಾನತೆ, ಬೇಸರ, ಅಸಹನೆ ಬರುವ ಸಾಧ್ಯತೆ ಹೆಚ್ಚು ಎಂದು ಬಹುತೇಕ ಚಿಂತಕರು ಅಭಿಪ್ರಾಯ ಪಡುತ್ತಾರೆ.
ಮಾನವ ಜೀವಿಗಳಾದ ನಾವು ಈ ಭೂಮಿಯನ್ನು ಲೆಕ್ಕಕ್ಕಿಂತ ಜಾಸ್ತಿ ಸಂಖ್ಯೆಯಲ್ಲಿ ತುಂಬಿಕೊಂಡಿದ್ದೇವೆ. ನಮಗೆ ಅಗತ್ಯ ವಿರುವುದಕ್ಕಿಂತ ಜಾಸ್ತಿ ಆಹಾರವನ್ನು ಭಕ್ಷಿಸಿ ಮುಂದಿನ ಪೀಳಿಗೆಗಳಿಗೆ ಜೀವಿಸಲು ಅಯೋಗ್ಯವಾದ ವಾತಾವರಣವನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಚಿಂತನೆಯೂ ಕೇಳಿ ಬರುತ್ತಿದೆ.
ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳ ಅಗಾಧ ಪ್ರಗತಿಯಿಂದ ನಮ್ಮ ಆಯುಷ್ಯ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಸ್ತುಸ್ಥಿತಿ. ಆಯುಷ್ಯವನ್ನು ಹೆಚ್ಚಿಸಿಕೊಳ್ಳಲು ಚಿಕಿತ್ಸೆ ಸಿಗುತ್ತದೆ ಎಂದಾದರೆ ಶ್ರೀಮಂತರು ಆ ಚಿಕಿತ್ಸೆಗೆ ಮೊರೆ ಹೋಗುತ್ತಾರೆ.
ಆಗ ಉಂಟಾಗುವ ಉಳ್ಳವರ ಮತ್ತು ಇಲ್ಲದವರ ನಡುವಿನ ಅಸಮತೋಲನವನ್ನು ಗಮನಿಸಿ. ೧೯೯೦ ರ ಈಚೆಗೆ ಮನುಷ್ಯ ನಿಗೆ ಬೆಳವಣಿಗೆಯ ಹಾರ್ಮೋನನ್ನು ಕೊಟ್ಟು ಆಯುಷ್ಯ ವೃದ್ಧಿಸಲು ಯತ್ನಿಸಲಾಯಿತು.
ಇದು ನಿಜವಾಗಿಯೂ ಆಯುಷ್ಯ ವೃದ್ಧಿ ಮಾಡುತ್ತದೆ ಎಂಬ ಬಗ್ಗೆ ಪ್ರಬಲ ಸಾಕ್ಷಿಗಳು ಇಲ್ಲದಿದ್ದರೂ ಹಲವು ಕಂಪೆನಿಗಳು ಈ
ಔಷಧದ ಮಾರಾಟದಿಂದ ಹೇರಳವಾಗಿ ಹಣ ಮಾಡುತ್ತಿವೆ. ಅಮರತ್ವ ನಮಗೆ ವಿವಿಧ ಸಮಸ್ಯೆಗಳನ್ನು ತರಬಲ್ಲದು. ದೀರ್ಘಾ ಯುಷ್ಯ ಒಂದು ಶಾಪವೇ ಆಗಬಹುದು.