Saturday, 14th December 2024

ಅಮೆರಿಕದ ಮರ್ಯಾದೆ ತೆಗೆದ ಟ್ರಂಪ್‌ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ನಾವು ಹೊರದೇಶದಲ್ಲಿ ಸಹಜವಾಗಿ ಅಲ್ಪಸಂಖ್ಯಾತರು. ಇಲ್ಲಿ ಎಷ್ಟೇ ಸಮಯ ಇದ್ದರೂ, ಪೌರತ್ವ ಪಡೆದುಕೊಂಡರೂ ಈ ಪರಕೀಯ ಭಾವನೆ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಸದಾ ಜತೆಯ ಇರುತ್ತದೆ. ಈ ಕಾರಣದಿಂದಲೇ ಸಂಘ ಸಂಸ್ಥೆಗಳನ್ನು ನಾವಿಲ್ಲಿ ಕಟ್ಟಿಕೊಂಡಿರುತ್ತೇವೆ.

ಕನ್ನಡ ಸಂಘ ಗಳು, ಜಾತಿ ಧರ್ಮಾಧಾರಿತ ಸಂಘಗಳು ಕಟ್ಟಿಕೊಂಡು ಒಂದು ಕಡೆ ಸೇರುತ್ತ, ನಮ್ಮ ಹಬ್ಬಗಳನ್ನು, ಸ್ವಾತಂತ್ರ್ಯೋ ತ್ಸವ, ಗಣರಾಜ್ಯೋತ್ಸವ ಮೊದಲಾದ ಉತ್ಸವಗಳನ್ನು ಆಚರಿಸಿ ಕೊಳ್ಳುತ್ತ ಒಂದು ರೀತಿಯ ಸೆಕ್ಯೂರ್ ಸರ್ಕಲ್ ಹುಟ್ಟಿಹಾಕಿ ಕೊಂಡಿರುತ್ತೇವೆ. ಮನುಷ್ಯ ಸಂಘ ಜೀವಿ ಎನ್ನುವ ಎಕ್ಸ್ಟೆನ್ಷನ್ ಅದು. ನಮ್ಮ ಮಕ್ಕಳಿಗೆ ನಮ್ಮ ಭಾಷೆ ಕಲಿಸುವುದು, ಮಂತ್ರ ಉಪನಿಷತ್, ಸಂಸ್ಕೃತಿಯನ್ನು ಪರಿಚಯಿಸುವುದು, ನಮ್ಮಲ್ಲಿನ ಟ್ಯಾಲೆಂಟ್‌ಗಳಿಗೆ, ಸಂಸ್ಕೃತಿಗೆ ಒಂದು ವೇದಿಕೆ ಕಲ್ಪಿಸುವುದು ಇವೆಲ್ಲ ಈ ಸಂಘ ಸಂಸ್ಥೆಗಳಲ್ಲಿ ನಿರಂತರವಾಗಿ ಮಾಡುವ ಕೆಲಸ.

ಇದೆಲ್ಲದರ ಜತೆ ಅಗಬಹುದಾದ ಅತ್ಯುತ್ತಮ ಉಪಯೋಗ ಎಂದರೆನೆಟ್ವರ್ಕಿಂಗ್. ಹೀಗೆ ಪರಿಚಯ ವಾದವರ ಜತೆ ಮಾತನಾಡುತ್ತ ಭಾರತದ – ಕರ್ನಾಟಕದ ರಾಜಕೀಯ, ಸದ್ಯದ – ಇತ್ತೀಚಿನ ಬೆಳವಣಿಗೆ ಮೊದಲಾದ ವಿಚಾರಗಳ ಮೇಲೆ ಚರ್ಚಿಸುವುದು ಸಾಮಾನ್ಯ. ಮನುಷ್ಯ ಪ್ರಾಣಿಗಳಲ್ಲಿ ಎರಡು ವರ್ಗ – ಮೊದಲನೆಯದು ರಾಜಕೀಯ ವಿದ್ಯಮಾನಗಳಲ್ಲಿ ಆಸಕ್ತಿಯುಳ್ಳವರದು.
ಇನ್ನೊಂದು ಅಯ್ಯೋ ಅದೆಲ್ಲ ಇದ್ದದ್ದೇ – ನಮಗೇನಾಗುವುದಿದೆ’ ಎನ್ನುವವರದು.

ಈ ನಮಗೇನಾಗುವುದಿದೆ ಎಂದು ಡಿಸ್ಕನೆಕ್ಟ್ ಆಗಿರುವ ವರ್ಗದ ಮನುಷ್ಯರು ಸಾಮಾನ್ಯವಾಗಿ ಅಷ್ಟಾಗಿ ಗುಂಪಿನಲ್ಲಿ ಹೊಂದಿ ಕೊಳ್ಳುವುದಿಲ್ಲ. ಏಕೆಂದರೆ ನಮ್ಮನ್ನೆಲ್ಲ ಅಲ್ಲಿ ಒಟ್ಟುಗೂಡಿಸಿದ ದೇಶ ರಾಜ್ಯ ಎನ್ನುವ ಮೂಲ ಭಾವದಿಂದಲೇ ಅವರು ವಿಮುಕ್ತ ರಾಗಿರುತ್ತಾರೆ. ಇನ್ನೊಂದು ವರ್ಗವೇ ದೊಡ್ಡದು. ಅಮೆರಿಕಾಕ್ಕೆ 1960ರಿಂದ ಇಲ್ಲಿನವರೆಗೂ ಭಾರತದಿಂದ ವಲಸೆ ಬರುತ್ತಲೇ ಇದ್ಧಾರೆ. ಬಹಳ ಮೊದಲು ಇಲ್ಲಿಗೆ ಬಂದ ಬಹುತೇಕರು ಭಾರತದ ಆಗುಹೋಗುಗಳ ವಿಚಾರಕ್ಕೆ ಬಂದಾಗ ಅವರದೇ ಆದ ಓಬಿರಾಯನ ಕಾಲದ ಭಾವನೆ ಯನ್ನೇ ಹೊಂದಿರುತ್ತಾರೆ.

ಅವರು ದೇಶ ಬಿಟ್ಟು ಬಂದಾಗ ಇಂಟರ್ನೆಟ್ ಇರಲಿಲ್ಲ – ಹಾಗಾಗಿ ಮನೆಯಿಂದ ತಿಂಗಳು ಎರಡು ತಿಂಗಳಿಗೊಮ್ಮೆ ಬರುತ್ತಿದ್ದ ಪತ್ರ, ಟ್ರಂಕ್ ಕಾಲ್‌ಗಳು ಅವರ ದೇಶದ – ರಾಜ್ಯದ ಜತೆ ಇದ್ದ – ಬಹುಕಾಲ ನಡೆದುಕೊಂಡು ಬಂದ ಕೊಂಡಿ. ಅವರು ಆಗೆಲ್ಲ ಭಾರತಕ್ಕೆ ಭೇಟಿ ನೀಡುತ್ತಿದ್ದುದೂ ಕಡಿಮೆ. ಇಲ್ಲಿಯೇ ಮಕ್ಕಳಾಗಿ – ಆ ಮಕ್ಕಳು ಇಲ್ಲಿಯೇ ಬೆಳೆದು ಮದುವೆ ಆಗಿ ಇಲ್ಲಿನವರೇ ಆಗಿಹೋಗಿದ್ಧಾರೆ.

ಆದರೂ ಅವರಿನ್ನೂ ಆಂತರ್ಯದಲ್ಲಿ ಸಂಪೂರ್ಣ ಅಮೆರಿಕನ್ನರೂ ಅಲ್ಲ – ಅತ್ತ ಭಾರತೀಯರೂ ಆಗಿ ಉಳಿದಿಲ್ಲ. ಅವರಲ್ಲಿ
ಕೆಲವರಿಗಂತೂ ಭಾರತವೆಂದರೆ ಇನ್ನೂ ಅದೇ ಹಳೆಯ ದಶಕಗಳ ಹಿಂದಿನ ದೇಶದಂತೆಯೇ ಉಳಿದುಬಿಟ್ಟಿದೆ ಎನ್ನುವ ಭಾವನೆ.
ತೀರಾ ಇತ್ತೀಚಿಗೆ – ಕಳೆದ ಎರಡು ದಶಕದಿಂದೀಚೆ ಇಲ್ಲಿಗೆ ಬಂದವರಿಗೂ ಮತ್ತು ಅದಕ್ಕಿಂತ ಮೊದಲು ವಲಸೆ ಬಂದವರಿಗೂ
ಇಂಟರ್ನೆಟ್ ಕಾರಣದಿಂದಾಗಿ ವೈಚಾರಿಕವಾಗಿ ಅಜ ಗಜ ಅಂತರ ವಿರುವುದು ಈ ರೀತಿಯ ಸಂಘ ಸಂಸ್ಥೆಗಳ ಕಾರ್ಯಕ್ರಮ ಗಳಲ್ಲಿ
ಒಟ್ಟಿಗೆ ಸೇರುವಾಗ ಅನುಭವಕ್ಕೆ ಬರುತ್ತದೆ. ಇದಕ್ಕೆ ತೀರಾ ವ್ಯತಿರಿಕ್ತದಂತೆ ಇರುವವರಿದ್ದರೂ ಅವರು ನಮ್ಮಲ್ಲಿಯೇ ಅಲ್ಪಸಂಖ್ಯಾ ತರು.

ಈ ರೀತಿಯ ಸರಿಯಾದ ರಾಜಕೀಯ, ವಿದ್ಯಮಾನಗಳ ಬಗ್ಗೆ ಮಾಹಿತಿಯೇ ಇಲ್ಲದವರ ಜತೆ ಮಾತನಾಡುವುದು ಬಹಳ ಕಷ್ಟ.
ಅವರು ಅಲ್ಲಿ ಇಲ್ಲಿ – ವಾಟ್ಸಾಪ್‌ನಲ್ಲಿ ಬರುವ -ರ್ವರ್ಡ್ ಮೊದಲಾದವುಗಳನ್ನು ನೋಡಿಕೊಂಡು ಅವರದೇ ಆದ  ಕಲ್ಪನೆ ಗಳನ್ನು ಭಾರತದೆಡೆಗೆ ಬೆಳೆಸಿಕೊಂಡಿರುತ್ತಾರೆ. ಅವರು ಭಾರತಕ್ಕೆ ಭೇಟಿ ಕೊಡುವುದೂ ಐದಾರು ವರ್ಷಕ್ಕೊಮ್ಮೆ ಒಂದೆರಡು ವಾರ ಅಷ್ಟೇ. ಅಂಥವರು ರಾಹುಲ್ ಗಾಂಧಿ ವಿಶ್ವೇಶ್ವರಯ್ಯ’ ಎಂದು ಹೇಳಿದ, ತಡವರಿಸಿದ ವಿಡಿಯೋ ನೋಡಿ ಅಂತಹ ರಾಜಕಾರಣಿ ಮುನ್ನಡೆಸುವ ರಾಷ್ಟ್ರೀಯ ಪಕ್ಷ 52 ಸೀಟ್ ಪಡೆದದ್ಧಾದರೂ ಹೇಗೆ? ಭಾರತದಲ್ಲಿ ಜನರು ಅಷ್ಟೆಲ್ಲ ಮೂರ್ಖರೇ ಎಂದೆಲ್ಲ ತೀರಾ ಅಪ್ರಸ್ತುತ ಪ್ರಶ್ನಿಸುತ್ತಾರೆ.

ನಿರ್ಭಯಾ ಮೊದಲಾದ ಅತ್ಯಾಚಾರದ ಹೇಯ ಕೃತ್ಯ ನಡೆದದ್ದು – ಅದರ ಸುತ್ತ ಬರುವ ಸುದ್ದಿ ಗಲಾಟೆಗಳನ್ನು ಅಲ್ಪ ಸ್ವಲ್ಪ
ತಿಳಿದುಕೊಂಡು, ಅಮೆರಿಕಾದ ಪತ್ರಿಕೆಗಳಲ್ಲಿ ಬರುವ ಅರೆಬೆಂದ, ಭಾರತವನ್ನು ತುಚ್ಛವಾಗಿ ತೋರಿಸುವ ಸುದ್ದಿಗಳನ್ನು ನೋಡಿ
ಅದೇ ಭಾರತ – ಭಾರತ ಸೇ- ಅಲ್ಲ ಎಂದೆಲ್ಲ ಏನೇನೇನೆಲ್ಲ ಹೇಳುತ್ತಿರುತ್ತಾರೆ. ಮೋದಿ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಬದುಕ ಲಾಗುತ್ತಿಲ್ಲ, ಮೋದಿ ಕರೋನಾ ಸರಿಯಾಗಿ ನಿರ್ವಹಿಸಿಲ್ಲ, ಮಮತಾ ಬ್ಯಾನರ್ಜಿ ಮೋದಿಗಿಂತ ವಾಸಿಯಂತೆ ಹೀಗೆಲ್ಲ ಏನೇನೋ ಅವರವರದೇ ಆದ ಅಭಿಪ್ರಾಯಗಳನ್ನೇ ನಂಬಿಕೊಂಡು ವಾದಕ್ಕಿಳಿಯುತ್ತಾರೆ.

ಅಂಥವರಿಗೆ ಭಾರತದಂಥ ದೇಶದ – ಭಾರತ ಬಿಡಿ ಕರ್ನಾಟಕ ರಾಜ್ಯದ ರಾಜಕೀಯದ ಅರಿವು ಪೂರ್ಣ ಪ್ರಮಾಣದಲ್ಲಿರುವುದಿಲ್ಲ. ಇಂದಿನ ಕಾಲದಲ್ಲಿ ದೇಶ ಹೀಗಿದೆ ಎಂದು ನೈಜ ಅರಿವು ಅಂಥವರಲ್ಲಿ ಮೂಡಿಸುವುದು ಜಪ್ಪಯ್ಯ ಎಂದರೂ ಸಾಧ್ಯವಾಗುವು ದಿಲ್ಲ. ಅವರಿಗೆ ನಮ್ಮ ವಾದ ಕೇಳುವ ಸಹನೆಯೂ ಇರುವುದಿಲ್ಲ. ಅವರು ಕರ್ನಾಟಕದ ಸ್ಥಳೀಯ ಸುದ್ದಿ – ಪತ್ರಿಕೆಗಳನ್ನು ತೀರಾ ಹತ್ತಿರದಿಂದ ರೆಗ್ಯುಲರ್ ಆಗಿ ಓದಿ ತಿಳಿದು ಒಂದಕ್ಕೊಂದು ಜೋಡಿಸಿ ಅರ್ಥಮಾಡಿಕೊಂಡಿರುವುದಿಲ್ಲ.

ಅವರಿಗೆಲ್ಲ ಅಮೆರಿಕನ್ ಪತ್ರಿಕೆಗಳು ಬಿತ್ತರಿಸುವ ಭಾರತದ ಸುದ್ದಿಯೇ ಇದಮಿತ್ತಂ. ನ್ಯೂಯೋರ್ಕ್ ಟೈಮ್ಸ, ವಾಷಿಂಗ್ಟನ್ ಪೋಸ್ಟ್ ಮೊದಲಾದ ಪತ್ರಿಕೆಗಳು, ಸಿ. ಎನ್.ಎನ್, -ಕ್ಸ್ ಮೊದಲಾದ ವಾಹಿನಿಗಳಿಗೆ ಭಾರತ, ಉಳಿದ ದೇಶಗಳನ್ನು ಹೊಗಳುವು ದಕ್ಕಿಂತ ತೆಗಳುವುದರ ಏನೋ ಒಂದು ಸಂತೃಪ್ತಿ. ಈ ಪತ್ರಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಹೊಂದಿರುವುದರಿಂದ ಭಾರತದಲ್ಲಿನ ಬಲಪಂಥೀಯ ವಿಚಾರಕ್ಕೆ ವ್ಯತಿರಿಕ್ತವಾಗಿ ಬರೆದರೆ – ಭಾರತದ ನೆಚ್ಚಿನ ಪ್ರಧಾನಿ – ಮಂತ್ರಿಯ ವಿರುದ್ಧ ಬರೆದರೆ ಅದನ್ನೇ ನಂಬಿಕೊಂಡುಬಿಡುತ್ತಾರೆ.

ನ್ಯೂಯೋರ್ಕ್ ಟೈಮ್ಸ್, ಪೋಸ್ಟ್‌ನ ಭಾರತದೆಡೆಗಿನ ಸುದ್ದಿ ಲೇಖನಗಳನ್ನು ಓದಿದಾಗಲೆಲ್ಲ ಅದು ಪೂರ್ಣ ಸತ್ಯವಲ್ಲ ಎನ್ನುವುದು ಭಾರತದ ಜತೆ ಕನೆಕ್ಟ್ ಇರುವವರಿಗೆಲ್ಲ ತಿಳಿಯುತ್ತದೆ. ಈ ಪತ್ರಿಕೆಗಳಲ್ಲಿ ವಿಷಯ ಸತ್ಯವಿದ್ದರೂ ಪೂರ್ಣವಾಗಿ ಕೊಡದೇ ಭಾರತ ವನ್ನು ಕೆಳಮಟ್ಟದಲ್ಲಿಯೇ ಚಿತ್ರಿಸುತ್ತವೆ. ನಿಜ ಸಂಪೂರ್ಣ ವಿಚಾರವೇ ಬೇರೆಯಿರುತ್ತದೆ. ಅದಲ್ಲದೆ ಕೇವಲ ನೆಗೆಟಿವ್ ಸುದ್ದಿ ಗಳನ್ನು ಮಾತ್ರ ಪ್ರಕಟಿಸಿ ಸತ್ಯಕ್ಕೆ ವ್ಯತಿರಿಕ್ತವಾಗಿಯೇ ಭಾರತದಂಥ ದೇಶಗಳನ್ನು ಈ ಪತ್ರಿಕೆಗಳು ವಾಹಿನಿಗಳು ಚಿತ್ರಿಸುತ್ತವೆ.

ದುರದೃಷ್ಟವೆಂದರೆ ಭಾರತದ ಕೂತು ಈ ಪತ್ರಿಕೆಗಳಿಗೆ ಋಣಾತ್ಮಕ ಚಿತ್ರಣವನ್ನು ಬರೆದುಕೊಡುವ ಒಂದು ದೊಡ್ಡ ದಂಡೇ ಇದೆ.
ಅವರೆಲ್ಲ ಭಾರತದ ಅಂತಾರಾಷ್ಟ್ರೀಯ ಬುದ್ಧಿಜೀವಿಗಳು. ಆದರೆ ಈ ಸಲ ಇಂತಹ ಸ್ಥಿತಿಯಲ್ಲಿ ಬಹುಷಃ ಮೊದಲ ಬಾರಿ ನಿಂತದ್ದು ಅಮೆರಿಕಾ. ಹಾಗೆ ನಿಲ್ಲಲು ಕಾರಣವಾದದ್ದು ಟ್ರಂಪ್ ಮಹಾಶಯ. ಇಲ್ಲಿಯವರೆಗೆ ಅಮೇರಿಕನ್ ಪತ್ರಿಕೆಗಳು ಮಾಡಿ ಕೊಂಡು ಬಂದ ಕೆಲಸ ಈಗ ಮಾಡಿದ್ದು ಜಗತ್ತಿನ ಉಳಿದೆಲ್ಲ ದೇಶಗಳ ಪತ್ರಿಕೆಗಳು.

Every dog has its day ಎನ್ನುತ್ತಾರಲ್ಲ ಹಾಗೆ. ಇಲ್ಲಿ ನಾನು ಅಮೆರಿಕಾ ಮೇಲೆ – ಇನ್ನೊಂದು ದೇಶ ಕೆಳಗೆ ಎಂದೆಲ್ಲ ವಾದಿಸಲು ಹೊರಟದ್ದಲ್ಲ. ಆದರೆ ಟ್ರಂಪ್ ಅವಾಂತರದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಗ್ರಹಿಸುವವರಿಗೆ ಒಂದು ಸರಿಯಾದ ಚಿತ್ರಣವನ್ನು ಚಿಕ್ಕದಾಗಿ ನೀಡಬೇಕು ಎನ್ನುವುದೇ ಇಲ್ಲಿನ ಉದ್ದೇಶ.

ಹಾಗಾದರೆ ಆದzದರೂ ಏನು? ಟ್ರಂಪ್ ಸೋತದ್ದು ಇಲ್ಲಿನವರೆಗೂ ಒಪ್ಪಿಕೊಂಡಿರಲಿಲ್ಲ – ಆ ಸುದ್ದಿ ನಿಮಗೆ ತಿಳಿದೇ ಇರುತ್ತದೆ. ಟ್ರಂಪ್ ಜಗಮೊಂಡ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಬೇಕಾಬಿಟ್ಟಿ ರಾಜಕಾರಣಕ್ಕೆ – ಟ್ವೀಟ್‌ಗಳಿಗೆ, ಯಡವಟ್ಟು ನಿರ್ಧಾರಗಳಿಗೆ, ಪ್ರಜಾಪ್ರಭುತ್ವದಲ್ಲಿ ಯಾವ ಪ್ರಮಾಣದಲ್ಲಿ ಸರ್ವಾಧಿಕಾರಿಯಾಗಬಹುದು ಎನ್ನುವುದಕ್ಕೆಲ್ಲ ಟ್ರಂಪ್ ಒಂದು ಅನ್ವರ್ಥ. ಅಮೆರಿಕಾದ ರಾಜಕಾರಣದ ಎಲ್ಲ ಲಜ್ಜೆ ಇತಿ ಮಿತಿಗಳನ್ನು ಮೀರಿ ವ್ಯವಹರಿಸಿದ ಅಧ್ಯಕ್ಷ.

ಅಮೆರಿಕಾದ ಮಟ್ಟಿಗೆ ಇಂದಿನ ಯುಗದಲ್ಲಿ ಇದು ಹೊಸ ಅನುಭವವೇ. ಹಾಗಂತ ಭಾರತದ ರಾಜಕಾರಣವನ್ನು ಗ್ರಹಿಸಿದವರಿಗೆ, ನಮ್ಮ ಪುಡಾರಿಗಳ ಚುನಾವಣೋತ್ತರ ಹೇಳಿಕೆಗಳನ್ನು ಕೇಳಿದವರಿಗೆ ಟ್ರಂಪ್ ಏನೋ ಹೊಸ ವಿತಂಡಕ್ಕೆ ಕೈ ಹಾಕಿದ್ದಾನೆ ಎಂದೆನಿಸುವುದಿಲ್ಲ. ನಮ್ಮಲ್ಲಿಯೂ ಚುನಾವಣೆ ಆಗುವುದಕ್ಕಿಂತ ಮೊದಲೇ, ಆದ ಮೇಲೆ, ಮತ ಎಣಿಕೆಯಾಗುವಾಗ, ಫಲಿತಾಂಶ
ಬಂದಾಗ ಹೀಗೆ ಎಲ್ಲ ಸಂದರ್ಭದಲ್ಲಿ ಚುನಾವಣಾ ನ್ಯಾಯಯುತವಾಗಿ ನಡೆದಿಲ್ಲ, ಮತ ಎಣಿಕೆಯಲ್ಲಿ ಮೋಸವಾಗಿದೆ ಎಂದೆಲ್ಲ ಬಡಬಡಾಯಿಸುವ, ಆರೋಪಿಸುವ ಪಕ್ಷದವರನ್ನು, ರಾಜಕಾರಣಿಗಳನ್ನು ನೋಡಿರುತ್ತೇವೆ.

ಟ್ರಂಪ್ ಮಾಡಿದ್ದೂ ಅದನ್ನೇ – ಈ ಚುನಾವಣಾ ಎಣಿಕೆ ನ್ಯಾಯಯುತವಾಗಿ ನಡೆದಿಲ್ಲ, ಮತದಾನ – ಪೋಸ್ಟಲ್ ಮಠದಲ್ಲಿ ಅವ್ಯವಹಾರವಾಗಿದೆ ಎಂದು. ಆದರೆ ವ್ಯತ್ಯಾಸವೆಂದರೆ ಇಲ್ಲಿ ಈ ರೀತಿ ಆರೋಪಿಸುತ್ತಿದ್ದುದು ಹಾಲಿ, ಅಧಿಕಾರದಲ್ಲಿರುವ ಅಧ್ಯಕ್ಷ.
ಅಮೆರಿಕಾ ಅಧ್ಯಕ್ಷ ಎಂದರೆ ಕಮಾಂಡರ್ ಇನ್ ಚೀ-. ನಮ್ಮಲ್ಲಿ ಪ್ರಧಾನಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಮುನ್ನಡೆಸು
ವವರಾದರೆ ಕಮಾಂಡರ್ ಇನ್ ಚೀ- ಪ್ರಧಾನಿಯಾಗಿರುವುದಿಲ್ಲ.

ಎಲ್ಲ ಸೇನಾದಳಗಳು ಪ್ರಧಾನಿ ಮತ್ತು ರಕ್ಷಣಾಮಂತ್ರಿಯ ಅಣತಿಯಂತೆ ನಡೆದುಕೊಂಡರೂ ಅವರೆಲ್ಲರ ಬಾಸ್ ರಾಷ್ಟ್ರಾಧ್ಯಕ್ಷ.
ಪ್ರಧಾನಿ ಎ ಮೀರಿದರೆ ರಾಷ್ಟ್ರಾಧ್ಯಕ್ಷ ದಂಡ ಕೈಗೆತ್ತಿಕೊಳ್ಳಲು ಅವಕಾಶವಿದೆ. ಆದರೆ ಪ್ರಜಾಪ್ರಭುತ್ವವಿದ್ದರೂ ಅಧ್ಯಕ್ಷೀಯ
ಆಡಳಿತ ವಿರುವ ದೇಶಗಳಲ್ಲಿ ಈ ಸೇನೆಯಿಂದ ಹಿಡಿದು ಎಲ್ಲ ಕೇಂದ್ರಾಳಿತಕ್ಕೊಳಪಡುವ ಸಂಸ್ಥೆಗಳು ನೇರವಾಗಿ ಆಜ್ಞೆ ಪಡೆಯು
ವುದು ಅಧ್ಯಕ್ಷರಿಂದಲೇ.

ಹಾಗಾಗಿಯೇ ಇಲ್ಲಿ – ಸರ್ವಾಧಿಕಾರಿ ಮನಸ್ಥಿತಿಯವನೊಬ್ಬ ಅಧ್ಯಕ್ಷ ಪಟ್ಟದಲ್ಲಿ ಕೂತರೆ ಅಂದು ಅಧಿಕಾರದ ಪ್ರತ್ಯೇಕತೆ ಇರುವು ದಿಲ್ಲ. ಅಧ್ಯಕ್ಷನಾದವ ನಿಗೆ ಸರ್ವ ಅಧಿಕಾರ. ಅಂತಹ ಸ್ಥಾನದಲ್ಲಿ ಕೂತ ಟ್ರಂಪ್ ತನ್ನ ಮನೆ ವೈಟ್ ಹೌಸ್‌ನ ಎದುರುಗಡೆ ಸಭೆ ಸೇರಿ – ಜನರನ್ನು ಸೇರಿಸಿ ಇಲ್ಲಿನ ಸಂಸತ್ತಿಗೆ ಮುತ್ತಿಗೆ ಹಾಕೋಣ ಎಂದು ಹೇಳಿದಾಗ ಆತನಷ್ಟೇ ಮೊಂಡರಾಗಿದ್ದ ಅಲ್ಲಿ ಸೇರಿದ ವರು ಆತ ಹೇಳಿದ್ದನ್ನೇ ಪಾಲಿಸಿದ್ಧಾರೆ. ನಂತರ ಇದೆಲ್ಲ ನಡೆದುಹೋಗಿದೆ.

ಅಮೆರಿಕನ್ ವ್ಯವಸ್ಥೆಗೆ ಮತ್ತು ಇಲ್ಲಿನ ರಾಜಕೀಯ ಶಿಷ್ಟಾಚಾರಕ್ಕೆ ತೀರಾ ವ್ಯತಿರಿಕ್ತವಾದ ನಡೆ ಅದು. ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿನ ಸಂಸತ್ತಿಗೆ ಮುತ್ತಿಗೆ ಹಾಕಿದಾಗ ಸಹಜವಾಗಿ ಅಲ್ಲಿ ಆ ದಿನ ಇದ್ದ ಸೆಕ್ಯೂರಿಟಿ ವ್ಯವಸ್ಥೆಗೆ ಜನರನ್ನು ನಿಭಾಯಿಸಲು ಸಾಧ್ಯ ವಾಗಿಲ್ಲ. ಇಲ್ಲಿನ ಸಂಸತ್ತಿಗೆ ಸಮಾನವಾದ ಕಟ್ಟಡ ಕೆಪಿಟಲ್ ಬಿಲ್ಡಿಂಗ್. ಅದರ ಭದ್ರತೆ ನೋಡಿಕೊಳ್ಳುವ ಉಸ್ತುವಾರಿ ಕ್ಯಾಪಿಟಲ್ ಪೊಲೀಸರದ್ದು. ಕ್ಯಾಪಿಟಲ್ ಇರುವ ವಾಷಿಂಗ್ಟನ್ ಡಿಸಿಯ ಸ್ಥಳೀಯ ಪೊಲೀಸರು ಕ್ಯಾಪಿಟಲ್ ಭದ್ರತೆಯ ಉಸಾಬರಿಗೆ ಹೋಗುವುದಿಲ್ಲ.

ಇಂಥದ್ದೊಂದು ಗಲಾಟೆ ಮುತ್ತಿಗೆ ನಡೆಯಬಹುದು ಎಂದಾದಾಗ ಸಾಮಾನ್ಯವಾಗಿ ಅಧ್ಯಕ್ಷರೇ ಅದನ್ನು ತಡೆಯಲು ಬೇಕಾದ ಮುನ್ನೆಚ್ಚರಿಕೆಯನ್ನು ವಹಿಸುತ್ತಾರೆ. ಆದರೆ ಇಲ್ಲಿ ಇಂತಹ ಗಲಾಟೆಗೆ ಕರೆ ಕೊಟ್ಟದ್ದೇ ಅಧ್ಯಕ್ಷ ಟ್ರಂಪ್. ಈ ಇಡೀ ಘಟನೆಯಲ್ಲಿ ಭಾಗವಹಿಸಿದವರು ಟ್ರಂಪ್‌ನ ಕಟ್ಟಾ ಕುರುಡು ಹಿಂಬಾಲಕರು. ಟ್ರಂಪ್‌ನ ಜತೆ ಅನ್ಯಾಯವಾಗಿದೆ ಎನ್ನುವುದೇ ಅವರೆಲ್ಲರ ನಂಬಿಕೆ. ಅವರಿಗೆಲ್ಲ ಟ್ರಂಪ್ ಹೇಳಿದ್ದೇ ಪರಮ ಸತ್ಯ. ಅದನ್ನು ಪರಾಮರ್ಶಿಸಿ ನೋಡುವ ಮನಸ್ಥಿತಿ ಅವರದ್ದಲ್ಲ. ಹಾಗಾಗಿಯೇ ಇದೆಲ್ಲ ಗಲಾಟೆ ನಡೆದದ್ದು. ಎಕ್ಸ್ಟ್ರೀಮ್ ಬಲಪಂಥೀಯರನ್ನು ಓಲೈಸಿಕೊಂಡೆ ಅಧಿಕಾರಕ್ಕೆ ಬಂದ ಟ್ರಂಪ್ ಹೆಚ್ಚಿಗೆ ಕಷ್ಟ ಪಡದೇ ಇವರನ್ನೆಲ್ಲ ಎತ್ತಿ ಕಟ್ಟಿದ್ದಾನೆ. ಗಲಾಟೆ, ಮುತ್ತಿಗೆ, ಐದು ಸಾವು ಇವೆಲ್ಲ ನಡೆದು ಹೋಗಿದೆ.

ಒಟ್ಟಾರೆ ಇದೆಲ್ಲದರಿಂದ ಸಾಬೀತಾಗಿದ್ದೇನೆಂದರೆ ಅಮೆರಿಕಾದಂಥ ದೇಶದಲ್ಲಿಯೂ ಒಬ್ಬ ರಾಜಕಾರಣಿ ಜನರ ಗುಂಪನ್ನು ಹೇಗೆ
ಬೇಕಾದರೂ ಪ್ರೇರೇಪಿಸಬಹುದು ಎನ್ನುವುದು. ಹಾಗಂತ ಈ ಪುಂಡರ ಗುಂಪೇ ಅಮೆರಿಕಾ ಎಂದು ನಾನು ಹಲವಾರು ಬಾರಿ
ವಾಷಿಂಗ್ಟನ್ ಡಿಸಿಗೆ ಹೋಗಿದ್ದೇನೆ. ನಮ್ಮ ಮನೆಯಿಂದ ಮೂರು ತಾಸಿನ ದಾರಿ. ವೈಟ್ ಹೌಸ್ ಮತ್ತು ಕ್ಯಾಪಿಟಲ್ ಸುತ್ತ
ಓಡಾಡಿದ್ದೇನೆ. ವೈಟ್ ಹೌಸ್‌ಗಾಗಲಿ ಅಥವಾ ಕ್ಯಾಪಿಟಲ್ ಬಿಲ್ಡಿಂಗ್‌ಗಾಗಲಿ ಅಂತಹ ಹೇಳಿಕೊಳ್ಳುವ ಭದ್ರತೆ ಕಣ್ಣಿಗೆ ಕಾಣಿಸುವು ದಿಲ್ಲ. ಇಲ್ಲಿನ ರಾಜ್ಯಗಳ ಕ್ಯಾಪಿಟಲ್ ಬಿಲ್ಡಿಂಗ್ ಕೂಡ ಯಾವುದೇ ಅತಿಯಾದ ಭದ್ರತೆ ಇರುವುದಿಲ್ಲ.

ಪೆನ್ಸಿಲ್ವೇನಿಯಾ ಅವೆನ್ಯೂ ನಲ್ಲಿ ನಿಂತರೆ ಎದುರಿಗೆ ಒಂದು ಬೇಲಿ ಆಚೆ ವೈಟ್ ಹೌಸ್ ನೋಡಬಹುದು. ಅಲ್ಲಿ ಎದುರಿಗೆ ಎಂಟು ಹತ್ತು ಪೊಲೀಸರು ಕಾಣಬಹುದು ಅಷ್ಟೇ. ಅಲ್ಲ ಹತ್ತಾರು ಸೆನ್ಸಾರ್ ಗಳು ಇದ್ದು ಒಳನುಸುಳಲು ಸಾಧ್ಯವಿಲ್ಲ, ಆದರೆ ಒಮ್ಮಿಂದೊಮ್ಮೆಲೇ ಐದಾರು ನೂರು ಮಂದಿ ಒಳ ಹೊಕ್ಕಲು ಪ್ರಯತ್ನಿಸಿದರೆ ನಿಭಾಯಿಸುವುದು, ತಡೆಹಿಡಿಯುವುದು ಅಸಾಧ್ಯವೇ.

ಕ್ಯಾಪಿಟಲ್ ಬಿಲ್ಡಿಂಗ್‌ಗಂತೂ ಬೇಲಿಯೇ ಇಲ್ಲ. ಅಮೆರಿಕಾದ ಆಂತರಿಕ ಮತ್ತು ಬಾಹ್ಯ ಬೇಹುಗಾರಿಕೆ ಮತ್ತು ಕಾನೂನು ವ್ಯವಸ್ಥೆ
ಹೇಗಿದೆಯೆಂದರೆ ಇಂಥದ್ದೊಂದು ಗಲಾಟೆಯಾಗುತ್ತದೆ ಎಂದಾದರೆ ಅದಕ್ಕೆ ಆ ಕ್ಷಣದಲ್ಲಿ ಪ್ರತಿರೋಧ ತಯಾರಿ ಮಾಡಿಕೊಳ್ಳ ಲಾಗುತ್ತದೆ. ಅದು ಬಿಟ್ಟರೆ ಸಹಜ ದಿನಗಳಲ್ಲಿ ಅಷ್ಟೊಂದು ಪೊಲೀಸ್ ಭದ್ರತೆ ಅವಶ್ಯಕವಿರುವುದಿಲ್ಲ. ಸಾಮಾನ್ಯವಾಗಿ ಯಾವುದೇ ಮುಂದುವರಿದ ದೇಶಗಳಲ್ಲಿ ಗೋಡೆ ಕಟ್ಟಿ – ಹತ್ತಾರು ಸುತ್ತಿನ ಬೇಲಿ ಹಾಕಿ ಭದ್ರತೆ ಒದಗಿಸುವ ಪದ್ಧತಿಯಿರುವುದಿಲ್ಲ. ಇಲ್ಲಿನ ಏರ್ಪೋರ್ಟ್‌ನಿಂದ ಹಿಡಿದು ಅತಿ ಸೆಕ್ಯೂರ್ ಎನ್ನುವ ಪ್ರದೇಶಗಳಲ್ಲ ಭದ್ರತೆ ಭಾರತದಲ್ಲಿ ಕಂಡಂತೆ ಕಾಣಿಸುವುದಿಲ್ಲ.

9/11 ಘಟನೆ ನಡೆದ ನಂತರ ಭದ್ರತೆಯಲ್ಲಿ ಬಹಳ ಬದಲಾವಣೆಯಾದರೂ ಉಳಿದ ದೇಶಗಳಿಗೆ ಹೋಲಿಸಿದರೆ ಅಷ್ಟೊಂದು ಸೆಕ್ಯುರಿಟಿಯ ಅವಶ್ಯಕವಾಗಿರುವುದಿಲ್ಲ. ದೇಶ ಮಾಡರ್ನ್ ಆದಂತೆ, ಮುಂದುವರಿದಂತೆ ನಾಗರೀಕರೇ ಬದಲಾಗಿ ಸೆಕ್ಯೂರಿಟಿ ಅವಶ್ಯಕತೆ ಕಡಿಮೆಯಾಗುತ್ತ ಹೋಗುತ್ತದೆ. ಹೀಗೆಲ್ಲ ಇರುವಾಗ ಸ್ವತಃ ದೇಶದ ಕಮಾಂಡರ್ ಇನ್ ಚೀ- ಇಂತಹ ಕ್ಯಾಪಿಟಲ್ ಬಿಲ್ಡಿಂಗ್ ಮೇಲೆ ದಂಡೆತ್ತಿ ಹೋಗುವಂಥ ಒಂದು ಚೀಪ್ ಕೆಲಸಕ್ಕೆ ಅನುಮೋದಿಸಿದರೆ ಈ ರೀತಿಯ ಘಟನೆಗಳು ನಡೆಯುವುದು ತಪ್ಪಿಸಲಾಗುವುದಿಲ್ಲ.

ಒಟ್ಟಾರೆ ಅಮೆರಿಕಾದ ವ್ಯವಸ್ಥೆ ಟ್ರಂಪ್‌ನಂಥ ಒಬ್ಬ ರಾಜಕಾರಣಿ – ಅಧ್ಯಕ್ಷನನ್ನು ಇತ್ತೀಚೆಗೆ ನೋಡದ್ದರಿಂದ ಇದೆಲ್ಲ ಘಟನೆ ಈ
ಹಂತದಲ್ಲಿ ನಡೆದುಹೋಯಿತು. ಈ ಘಟನೆಯಿಂದ ಅಮೆರಿಕಾ ಜಾಗತಿಕವಾಗಿ ಮರ್ಯಾದೆ ಕಳೆದುಕೊಂಡಿದೆ. ಇಷ್ಟುದಿನ ಅವರಿವರ ಮನೆಯ ದೋಸೆ ತೂತು ಎನ್ನುತ್ತಿದ್ದ ಅಮೆರಿಕಾಕ್ಕೆ ಈಗ ಮೊದಲ ಬಾರಿ ದೋಸೆ ಮಾಡಿ, ನೋಡಿ – ತನ್ನ ದೋಸೆಯ ಕತೆಯೂ ಇಷ್ಟೇ ಎಂದು ತಿಳಿದಂತಿದೆ. ಈ ರೀತಿ ಮರ್ಯಾದೆ ಮೂರಾಬಟ್ಟೆ ಮಾಡಿದ ಅಗ್ಗಳಿಕೆ ಟ್ರಂಪ್‌ನದು.

ಟ್ರಂಪ್ ಇದನ್ನೆಲ್ಲ ಮಾಡಿದ್ದೇಕೆ? ಇದರಿಂದ ಏನು ಪ್ರಯೋಜನವಾದೀತು ಎಂಬಿತ್ಯಾದಿ ಪ್ರಶ್ನೆ ಖುದ್ದು ತನಗೆ ತಾನು ಕೇಳಿ ಕೊಂಡಂತಿಲ್ಲ. ಏಕೆಂದರೆ ಇಲ್ಲಿನ ವ್ಯವಸ್ಥೆ ಆತ ಅದೆಷ್ಟೇ ತಿಣುಕಾಡಿಕೊಂಡರು ಆತನನ್ನು ಅಧ್ಯಕ್ಷನಾಗಿ ಮುಂದುವರಿಯಲು ಬಿಡುವುದಿಲ್ಲ ಎಂದು ಟ್ರಂಪ್ ಗೂ ಗೊತ್ತಿತ್ತು. ಹಾಗಂತ ಕಳೆದ ನಾಲ್ಕು ವರ್ಷ ಟ್ರಂಪ್ ದೇಶವನ್ನೆಲ್ಲ ದಂಗೆಯೇಳುವಂತೆ ಮಾಡಿದ್ಧಾನೆಂದೇನಲ್ಲ. ಆದರೆ ಈ ಚುನಾವಣೆಯಾದ ನಂತರ ಮಾತ್ರ ಆತನ ವರಸೆ ಸಂಪೂರ್ಣ ಬದಲಾಗಿದೆ.

ಚುನಾವಣೆಯಲ್ಲಿ ಬೈಡನ್ ಪಡೆದ ಮತ ಎಂಟುಕೋಟಿಗಿಂತ ಸ್ವಲ್ಪ ಜಾಸ್ತಿಯಾದರೆ ಟ್ರಂಪ್ ಪಡೆದ ಮತ ಏಳುವರೆ ಕೋಟಿಗಿಂತ ಸ್ವಲ್ಪ ಕಡಿಮೆ. ಅಂತರ ಕೇವಲ ಐದು ಪ್ರತಿಶತ. ಹಾಗಂತ ಆತನಿಗೆ ಮತ ಹಾಕಿದವರೆಲ್ಲ ಚುನಾವಣೋತ್ತರ ಆತನನ್ನು ಅನುಮೋದಿಸುತ್ತಾರೆಂದೇನಲ್ಲ ಅಥವಾ ಆತ ಮಾಡಿದ ಮಂಗಾಟಗಳನ್ನೆಲ್ಲ ಒಪ್ಪುತ್ತಾರೆಂದೇನೂ ಅಲ್ಲ. ಆತನ ಕಪಿ ಚೇಷ್ಟೆ ಗಳನ್ನು ಖಂಡಿಸಿ ಈಗ ಆತನ ಜತೆಯಿರುವ ಬಹುತೇಕ ಪ್ರಭಾವಿ ವ್ಯಕ್ತಿಗಳು ದೂರವಾಗಿದ್ದಾರೆ. ಆತನ ಈ ನಡೆಗಳನ್ನು ಖಂಡಿಸಿ ಆತನನ್ನು ಉಚ್ಚಾಟಿಸಲು ಎರಡನೇ ಬಾರಿ ಅಮೆರಿಕಾ ಸಂಸತ್ತು ತಯಾರಾಗಿ ನಿಂತಿದೆ.

ಇನ್ನು ಕೇವಲ ಮೂರು ದಿನ – ಆಮೇಲೆ ಟ್ರಂಪ್ ಮನೆಗೆ ಹೋಗಲೇ ಬೇಕು. ಬೈಡನ್ ಅಧ್ಯಕ್ಷ ಗಾದಿ ಏರಲೇ ಬೇಕು. ಅದೆಲ್ಲ ಗೊತ್ತಿದ್ದರೂ ಟ್ರಂಪ್ ಈ ರೀತಿ ನಡೆದುಕೊಂಡದ್ದೇಕೆ? ಇದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅಮೆರಿಕಾ ಇಂದು ಜಗತ್ತಿನ ಅವಶ್ಯಕತೆ. ಅಮೆರಿಕಾದ ಅಧ್ಯಕ್ಷನಾದವನು ತೆಗೆದುಕೊಳ್ಳುವ ನಿರ್ಧಾರಗಳು ಜಗತ್ತಿನ ಎಲ್ಲ ರಾಷ್ಟ್ರಗಳ ಮೇಲೆ ಪ್ರಭಾವ ಬೀರುತ್ತವೆ. ಅದೇ ಕಾರಣಕ್ಕೆ ಅಮೆರಿಕಾವನ್ನು ಜಗತ್ತೆನ್ನುವ ಮನೆಯ ದೊಡ್ಡಣ್ಣ ಎಂದು ವ್ಯಾಖ್ಯಾನಿಸುವುದು.

ಇಂದಿನ ಈ ಸಾಂಕ್ರಾಮಿಕದ ಸಮಯದಲ್ಲಿ ಅಮೆರಿಕಾ ಇಲ್ಲದಿದ್ದರೆ ಲಸಿಕೆ ಇಷ್ಟು ಬೇಗ ಸಿದ್ಧವಾಗುತ್ತಿರಲಿಲ್ಲ. ಸಾಂಕ್ರಾಮಿಕ ದಿಂದಾಗಿ ಉಂಟಾದ ಸ್ಥಿತಿಯನ್ನು ಬಳಸಿಕೊಂಡು ಚೀನಾ ಅದಿನ್ನೆಷ್ಟು ದೇಶದ ಮೇಲೆ ಆಕ್ರಮಣ ಮಾಡುತ್ತಿತ್ತೇನೋ. ಇದೇ ಸ್ಥಿತಿ ಬಳಸಿಕೊಂಡು ಪಾಕಿಸ್ತಾನ ಬಾಲ ಬಿಚ್ಚಬಹುದಿತ್ತು, ರಷ್ಯಾ ಕಿತಾಪತಿ ಮಾಡಬಹುದಿತ್ತು.

ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಹದ್ದುಬಸ್ತಿನಲ್ಲಿವೆ ಎಂದರೆ ಅದಕ್ಕೆ ಅಮೆರಿಕಾದೆಡೆಗೆ ಇರುವ ಹೆದರಿಕೆಯೇ ಕಾರಣ. ಅಮೆರಿಕಾದಲ್ಲಿದ್ದೇನೆ ಎನ್ನುವ ಕಾರಣಕ್ಕೆ ಇಲ್ಲಿನ ಬಗ್ಗೆ ಪುಂಗಿ ಊದುತ್ತಿದ್ದೇನೆ ಎಂದುಕೊಳ್ಳಬೇಡಿ. ಹಾಗಂತ ಅಮೆರಿಕಾ ಮಾಡಿದ್ದೆಲ್ಲ ಸರಿ ಎನ್ನುವ ವಿಚಾರವೂ ನನ್ನದಲ್ಲ. ಈ ಎಲ್ಲ ಮಾತುಗಳನ್ನು ಅಂತಾರಾಷ್ಟ್ರೀಯ ವಿದ್ಯಮಾನಗಳ ಪ್ರಜ್ಞೆಯ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ಅಮೆರಿಕಾ ದೇಶದ ಬಲಿಷ್ಠ ಆರ್ಥಿಕತೆ ಒಂದು ಕಡೆ.

ಪ್ರಪಂಚದ ಬಲಿಷ್ಠ ಕಂಪನಿಗಳಿರುವುದು ಅಮೆರಿಕಾದಲ್ಲಿ. ಅಮೆರಿಕಾ ಮಕಾಡೆ ಮಲಗಿದರೆ ಭಾರತದ ಮತ್ತು ಹಲವು ದೇಶಗಳ ಮೆಟ್ರೋ ನಗರಗಳ ಆರ್ಥಿಕತೆ ಬುಡಮೇಲಾಗುತ್ತದೆ. ಜಗತ್ತಿನ ವಾಹನ, ಇಂಧನ ಮಾರುಕಟ್ಟೆ ಕುಸಿಯುತ್ತದೆ. ಅಮೆರಿಕಾ ಆರ್ಥಿಕತೆ ಸ್ವಲ್ಪ ಬುಡಮೇಲಾದರೂ ಅದರ ಪರಿಣಾಮ ಜಗತ್ತಿನ ಎಲ್ಲ ದೇಶಗಳಲ್ಲಿ ಉಂಟಾಗುತ್ತದೆ – ಜಾಗತಿಕ ಡಿಪ್ರೆಶನ್ ಶುರುವಾಗುತ್ತದೆ. ಅದೆಷ್ಟೋ ಯುದ್ಧಗಳು ನಡೆಯುವುದಕ್ಕೆ ಮತ್ತು ಅದಕ್ಕಿಂತ ಮುಖ್ಯವಾಗಿ ನಡೆಯದಿರುವುದಕ್ಕೆ ಅಮೆರಿಕಾ ಕಾರಣ.

ಅದೆಷ್ಟೋ ಆಧುನಿಕ ಸಂಸ್ಕೃತಿ – ಒಳ್ಳೆಯದೋ, ಕೆಟ್ಟದ್ದೋ – ಹುಟ್ಟುವುದು ಅಮೆರಿಕಾದ. ಜಗತ್ತಿನ ಅತಿ ದೊಡ್ಡ ಸಾಫ್ಟ್ವೇರ್, ವಾಹನ, ಮೆಡಿಸಿನ್, ತೈಲ, ಬಟ್ಟೆ, ಎಲೆಕ್ಟ್ರಾನಿಕ್ ಮಾರುಕಟ್ಟೆ ಇಂದಿಗೂ ಅಮೆರಿಕಾವೇ. ಎ8, ಎ20 ದೇಶಗಳನ್ನು ಒಟ್ಟಿಗೆ ನಡೆಸಿ ಕೊಂಡು ಹೋಗುವ ದೇಶ ಅಮೆರಿಕಾ. ಯುನೈಟೆಡ್ ನೇಷನ್ ಇಂದಿಗೂ ಕೆಲಸ ಮಾಡುತ್ತಿದೆ ಎಂದಾದರೆ ಅದು ಅಮೆರಿಕಾದ ಆರೈಕೆಯಿಂದಲೇ. ಯು.ಎನ್. ನ ಸೆಕ್ಯೂರಿಟಿ ಕೌನ್ಸಿಲ್‌ನ ಕಾಯಂ ಸದಸ್ಯ ಮತ್ತು ಅತಿ ಹೆಚ್ಚು ಪ್ರಭಾವವಿರುವ ದೇಶ ಅಮೆರಿಕಾ. ರಷ್ಯಾ, ಚೀನಾ ಮೊದಲಾದ ಪ್ರಜಾಪ್ರಭುತ್ವವಲ್ಲದ, ಪಾಕಿಸ್ತಾನದಂಥ ಅಬ್ಬೆ ಪಾರಿ ದೇಶಗಳನ್ನು ಹದ್ದುಬಸ್ತಿನಲ್ಲಿಡಲು ಅಮೆರಿಕಾ ಬೇಕೇ ಬೇಕು.

ಇರಾನ್, ಉತ್ತರ ಕೊರಿಯಾ ಮೊದಲಾದ ಅಣ್ವಸ ದೇಶಗಳ ಅಂಕುಶ ಅಮೆರಿಕಾ. ಅಮೆರಿಕಾ ಇಲ್ಲದಿದ್ದರೆ ಜಗತ್ತಿನ ದೇಶಗಳನ್ನು ಮುನ್ನಡೆಸಿಕೊಂಡು ಹೋಗುವ ಜಾಗತಿಕ ಪರ್ವ ಇನ್ನೊಂದು ದೇಶವಾಗಿರುತ್ತಿತ್ತು, ನಿಜ. ಆದರೆ ಆ ದೇಶ ಚೀನಾ ಆಗಿರಬಹುದಿತ್ತು ಅಥವಾ ರಷ್ಯಾ ಆಗಿರಬಹುದಿತ್ತು. ಹಾಗಾದಲ್ಲಿ ಜಗತ್ತು ಖಂಡಿತವಾಗಿ ಹೀಗಿರುತ್ತಿರಲಿಲ್ಲ. ಈ ಎಲ್ಲ ಕಾರಣದಿಂದ, ದೊಡ್ಡಣ್ಣನ ಸ್ಥಾನದಲ್ಲಿ ಅಮೆರಿಕಾ ಇರುವ ಕಾರಣದಿಂದ ಅಲ್ಲಿನ ಗದ್ದುಗೆ ಏರುವ ವ್ಯಕ್ತಿ ಮುಖ್ಯವಾಗುತ್ತಾನೆ. ಟ್ರಂಪ್ ಕಾಲ ಇನ್ನು ಮೂರು ದಿನದಲ್ಲಿ ಮುಗಿಯುವುದಿದೆ. ಅದಕ್ಕಿಂತ ಮೊದಲೇ ಆತನನ್ನು ಕಿತ್ತೊಗೆಯುವ ಪ್ರಯತ್ನ ನಡೆಯುತ್ತಿದೆ.

ಅದಾದ ನಂತರ ಮತ್ತೆ ಅಮೆರಿಕಾ ಹಿಂದಿನಂತೆ ಸಹಜವಾಗುತ್ತದೆ. ಆ ಕಾರಣಕ್ಕೆ ಜಾಗತಿಕ ಮುಖಂಡರು ಟ್ರಂಪ್‌ನ ಚೇಷ್ಟೆ ಗಳನ್ನೆಲ್ಲ ಅಮೆರಿಕಾ ಎನ್ನುವ ಕಾರಣದಿಂದ ಸಹಿಸಿಕೊಂಡಿದ್ದಾರಷ್ಟೇ. ಇಂತಹ ಶಕ್ತಿಯುತ ದೇಶವೊಂದಕ್ಕೆ – ಇಲ್ಲಿನ ಜನರಿಗೆ
ಎಂಥವರಿಗೆ ಅಧಿಕಾರ ಕೊಡಬೇಕು, ಎಂಥವರಿಗೆ ಅಧಿಕಾರ ಕೊಡಬಾರದು ಎನ್ನುವ ಪಾಠವನ್ನು ಟ್ರಂಪ್ ಅಧಿಕಾರದ ಕೊನೆ ಯಲ್ಲಿ ತನ್ನ ಅತಿವ್ಯವಹಾರದಿಂದ ಕಲಿಸಿ ಹೋಗುತ್ತಿದ್ದೇನೆ.

ನಾವು ಟ್ರಂಪ್ ವರ್ತನೆ ನೋಡಿ ಜಗತ್ತು ನಕ್ಕಷ್ಟು ಅಮೆರಿಕಾ ಮತದಾರರಿಗೆ ತಮ್ಮ ನಾಲ್ಕು ವರ್ಷದ ಹಿಂದಿನ ತಪ್ಪಿನ ಅರಿವು
ಹೆಚ್ಚುತ್ತಿದೆ. ಇನ್ನೊಮ್ಮೆ ಅಮೆರಿಕಾ ಮತದಾರರು ಇಂತಹ ತಪ್ಪು ಮಾಡಬಾರದು ಎಂದು ಟ್ರಂಪ್ ನಮ್ಮೆಲ್ಲರ ವತಿಯಿಂದ ಇಲ್ಲಿನ
ಮತದಾರನಿಗೆ ತೋರಿಸಿಕೊಟ್ಟಿದ್ದೇನೆ. ಅದಕ್ಕಾಗಿ ಟ್ರಂಪ್‌ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು.