Friday, 20th September 2024

ವಿಶ್ಲೇಷಣಾತ್ಮಕ ಚಿಂತನೆಯೇ ಬೇರೆ, ದುರ್ಬುದ್ಧಿಯೇ ಬೇರೆ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಕಾಡುಗಳ್ಳ ವೀರಪ್ಪನ್ ಹತನಾಗಿ 17 ವರ್ಷಗಳಾಗುತ್ತಾ ಬಂತು. ನಿರುಪಯೋಗಿ ರಾಜಕಾರಣಿಗಳ ಭಾಷಣವನ್ನು ವರದಿ ಮಾಡುವ ನೀರಸ ಕೆಲಸದಿಂದ ವೀರಪ್ಪನ್ ಆಗಾಗ್ಗೆ ವಿಮುಕ್ತಿ ನೀಡುತ್ತಿದ್ದ. ಯಾವ ಹೊತ್ತಿನಲ್ಲಿ ದೂರದ ಮಹದೇಶ್ವರ ಬೆಟ್ಟದಿಂದ ಅದಾವ ಸುದ್ದಿ ಬರುತ್ತದೆಂದು ಊಹಿಸಲಾಗುತ್ತಿರಲಿಲ್ಲ.

He had us guessing all the time and always kept us on our toes. ಮೊಬೈಲ್ ಫೋನ್ ಲಭ್ಯವಿರಲಿಲ್ಲ. ಲ್ಯಾಪ್ ಟಾಪ್ ಬರುವಿಕೆಯ
ಸೂಚನೆಯೇ ಇರಲಿಲ್ಲ. ಸಮಯದ ಅಭಾವವಿದ್ದಾಗ ಟೆಲಿಫೋನ್ ಬೂತ್‌ನಿಂದ ಬೆಂಗಳೂರಿಗೆ ಫೋನ್ ಮಾಡಿ ವರದಿ ವದರುವುದೊಂದೇ ದಾರಿ. ಅಲ್ಲಿ ಗೊಣಗು ತ್ತಲೇ ಟೈಪ್ ಮಾಡಿಕೊಳ್ಳುತ್ತಿದ್ದವರಿಗೆ ಕೆಲವು ಜಾಗಗಳ ಹೆಸರಿನ ಪರಿಚಯವಿರುತ್ತಿರಲಿಲ್ಲ, ಸ್ಪೆಲ್ಲಿಂಗನ್ನು ತಿಳಿಸಬೇಕಾಗುತ್ತಿತ್ತು.

ಇದೆಲ್ಲಕ್ಕೂ ಗಡುವನ್ನು ಮೀರಬಾರದೆಂಬ ಆತಂಕ. ಕೈಯಲ್ಲೇ ಸ್ಫುಟವಾಗಿ ಬರೆದು ಫ್ಯಾಕ್ಸ್ ಮಾಡಿದ್ದೂ ಇದೆ. ಫ್ಯಾಕ್ಸ್ ಸೌಲಭ್ಯ ಎಲ್ಲೆಡೆ ಇರಲಿಲ್ಲ. ಊಟನಿದ್ರೆ ಗಳತ್ತ ಗಮನ ಹೋಗುತ್ತಿರಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಟ್ಯಾಕ್ಸಿ ಬುಕ್ ಮಾಡಿ ದೌಡಾಯಿಸುತ್ತಿದ್ದುದೇ ಬಂತು. ನನ್ನ ಬಳಿ ಕ್ಯಾಸೆಟ್ಟುಗಳ ಸಂಗ್ರಹವಿತ್ತು. ನನಗೆ ಎಲ್ಲಾ ಬಗೆಯ ಸಂಗೀತ ಇಷ್ಟ. ಭಾಷೆ-ದೇಶ-ಪ್ರಾಂತ್ಯಗಳ ಗಡಿಯಿಲ್ಲ. ಬಗೆಬಗೆಯ ಹಾಡುಗಳನ್ನು ಒಂದೇ ಕ್ಯಾಸೆಟ್ಟಿನಲ್ಲಿ ರೆಕಾರ್ಡ್ ಮಾಡಿಸುತ್ತಿದ್ದೆ. ಈಗಿನ ಸರೆಗಮ ಕಾರ್‌ವಾನ್ ಹಾಡುಗಳ ಸಂಗ್ರಹವನ್ನೂ ಮೀರಿಸುವ ವಿಭಿನ್ನತೆ. ಮುಂದಿನದ್ದು ಯಾವ ಹಾಡೆಂದು ಕೇಳುವವರಿಗೆ ನಿರೀಕ್ಷಿಸಲಾಗುತ್ತಿರಲಿಲ್ಲ.

ಜೋಗುಳದ ಬದಲು ನನ್ನ ಕ್ಯಾಸೆಟ್ಟಿನ ಹಾಡುಗಳನ್ನು ಮಗುವಿಗೆ ಕೇಳಿಸಿ ಮಲಗಿಸಲಾಗದಂಥ ಆಯ್ಕೆ! ವೀರಪ್ಪನ್ ಕಾರ್ಯಕ್ಷೇತ್ರಕ್ಕೆ ಹೋಗುವಾಗ ಆ ಕೆಲವು ಕ್ಯಾಸೆಟ್ಟುಗಳನ್ನು ಕಾರಿನಲ್ಲಿ ಹಾಕಿಸುತ್ತಿದ್ದೆ. ಡ್ರೈವರ್ ತೂಕಡಿಸದಿರಲು ಇದು ಸಹಾಯವಾಗುತ್ತಿತ್ತು. ನನ್ನ ಕಾರ್ಯವ್ಯಾಪ್ತಿ ಮೀರಿ, ವೀರಪ್ಪನ್ನನ್ನು ಹಿಡಿಯುವ
ಮಾರ್ಗೋಪಾಯಗಳ ಕುರಿತು ನಾನು ತಲೆಕೆಡಿಸಿಕೊಂಡಿದ್ದೂ ಉಂಟು. ಒಂದು ಕಾಲಘಟ್ಟದಲ್ಲಿ, ವೀರಪ್ಪನ್ ಪೊಲೀಸರು ತನ್ನ ಬೆನ್ನತ್ತಲಾರರೆಂಬ ನಂಬಿಕೆಯಲ್ಲಿ, ನಿರುಮ್ಮಳನಾಗುತ್ತಿದ್ದನೆಂಬ ಮಾಹಿತಿ ಇತ್ತು.

ಪೊಲೀಸ್ ಅಥವಾ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ಮಾಡಿ, ಕುಕೃತ್ಯವೆಸಗಿದ ಆಜುಬಾಜಿನಲ್ಲೇ ಇರುತ್ತಿದ್ದ. ಅಂದಿನ ಬೆಮೆಲ್ (BEML) ಮುಖ್ಯಸ್ಥ ರಾದ ಅಪ್ರಮೇಯನ್ ಅವರನ್ನು ಸಂಪರ್ಕಿಸಿ, ಕಡಿಮೆ ಅವಧಿಯಲ್ಲಿ, ಸದ್ದಿಲ್ಲದೇ ಸುರಂಗವನ್ನು ನಿರ್ಮಿಸಿ ಅವನ ಮೇಲೆರಗುವ ಸಾಧ್ಯತೆ ಕುರಿತು ಚರ್ಚಿಸಿದ್ದೆ. (ಪ್ರಬಲ ಶತ್ರುವಾದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ಇದೇ ತಂತ್ರವನ್ನು ಬಳಸಿ ಇಸ್ರೇಲ್ ದಿಕ್ಕಿನತ್ತ ಸುರಂಗ ಗಳನ್ನು ನಿರ್ಮಿಸಿರುವ ಕುರಿತು ಇತ್ತೀಚಿಗೆ ವರದಿಯಾಗಿತ್ತು.) ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ಹೈದರಾಬಾದ್ ಮೂಲದ ಕ್ಯಾಪ್ಟನ್ ಗಿರಿ ಎಂಬುವವರು ನರ ಹಂತಕನನ್ನು ಬಲಿಹಾಕುವುದಾಗಿ ಅದನ್ನು ಚರ್ಚಿಸಲು ಮೈಸೂರಿಗೆ ಭೇಟಿ ನೀಡಿದ್ದರು. ಅವರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸ ಮೂಡಿತ್ತು. ಹಾಗೆಂದೇ, ಅವರಿಗೆ ಸರ್ಕಾರದ ಅನುಮತಿ ಕೊಡಿಸಲೆಂದು ಅಂದಿನ ಐಜಿಯಾದ ಶಂಕರ್ ಬಿದರಿ ಅವರ ಬಳಿ ಕರೆದೊಯ್ದಿದ್ದೆ.

ವಿಶೇಷ ಕಾರ್ಯ ಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಬಿದರಿ ವ್ಯವಸ್ಥಿತವಾಗಿ ದಂತಚೋರನ ಗ್ಯಾಂಗನ್ನು ದುರ್ಬಲಗೊಳಿಸಿದ್ದರು. ಕಗ್ಗಂಟಾದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಆಲೋಚನಾಕ್ರಮದ ದಿಕ್ಕನ್ನೇ ಬದಲಾಯಿಸಬೇಕಾಗುತ್ತದೆ. ನಮ್ಮದು ಯಾವುದೇ ವೃತ್ತಿಯಾಗಿರಲಿ, ಅಲ್ಲಿಯ ಒಟ್ಟಾರೆ ವಾತಾ ವರಣಕ್ಕೆ ನಮ್ಮ ಮನಸ್ಸು ಒಗ್ಗಿಹೋಗಿರುತ್ತವೆ. ಎಲ್ಲೋ ತಪ್ಪು ಮಾಡುತ್ತಿರುತ್ತೇವೆ. ಸರಳವಾದ ವಿಚಾರಗಳೂ ಹೊಳೆಯದಿರುವ ಸಾಧ್ಯತೆ ಇರುತ್ತದೆ. ಉದಾ ಹರಣೆಗೆ, ಮಾಧ್ಯಮದಲ್ಲಾಗುವ ಕಾಗುಣಿತದ ತಪ್ಪುಗಳು. ಅವೆಲ್ಲಾ ತಪ್ಪುಗಳೂ ಭಾಷಾ ಸಾಮರ್ಥ್ಯದ ಅಭಾವದಿಂದ ಸಂಭವಿಸುವುದಿಲ್ಲ. ಮನಸ್ಸು ಮತ್ತು ಕಣ್ಣುಗಳ ನಡುವಿನ ಸಂಯೋಜನೆಯ ಕೊರತೆಯಿಂದಲೂ ಉಂಟಾಗುತ್ತದೆ.

ನಮ್ಮ ಬಾಸ್ ಒಬ್ಬರಿದ್ದರು. ಅವರಿಗೆ ನನ್ನ ಮೇಲೆ ರೇಗುವ ಹಂಬಲ. ಅದಕ್ಕಾಗಿ ನಾನು ತಪ್ಪು ಮಾಡಲೆಂದು ನಿತ್ಯ ಕಾಯುತ್ತಿದ್ದರು. ಅವರ ಇಂಗಿತದ ಅರಿವಿದ್ದ ನಾನು ಅವರ ಬಯಕೆ ಪೂರೈಕೆಯಾಗದಂತೆ ಹೆಚ್ಚಿನ ಎಚ್ಚರವಹಿಸುತ್ತಿದ್ದೆ. ಹಾಗಿದ್ದೂ ನನ್ನ ಕಣ್ಣುಗಳು ನನಗೇ ಮೋಸಮಾಡದಂತೆ ಜಾಗ್ರತೆಯಿಂದಿರುತ್ತಿದ್ದೆ. ಮುದ್ರಣಕ್ಕೆ ಪುಟಗಳನ್ನು ಕಳಿಸುವ ಮೊದಲು ಟೇಬಲ್ ನಿಂದ ಅಷ್ಟು ದೂರ ನಡೆದು ಹೋಗಿ ಮನಸ್ಸನ್ನೊಮ್ಮೆ ಕೊಡವಿ ಕಣ್ಣುಗಳಲ್ಲಿ ಹೊಸತನ ತುಂಬಿಕೊಂಡು ಬಂದು ಪುಟಗಳತ್ತ ಮತ್ತೊಮ್ಮೆ ದೃಷ್ಟಿ ಬೀರುತ್ತಿದ್ದೆ.

ನಮ್ಮ ಮನಸ್ಸನ್ನು ನಾವಿರುವ ವಾತಾವರಣವೇ ಕವಿದಿರುತ್ತದೆ. ಆ ಮುಸುಕಿನಿಂದ ಹೊರಬಂದು ನೋಡಿದಾಗ ನಮ್ಮ ಚಿಂತನೆಯ ಕ್ರಮ ಬದಲಾಗುತ್ತದೆ.
ಇದನ್ನೇ ಔಟ್ ಆಫ್ ದ ಬಾಕ್ಸ್ ಅಪ್ರೋಚ್ ಎನ್ನುತ್ತಾರೆ. ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಇದು ಅವಶ್ಯಕ. ವಿಮರ್ಶಾತ್ಮಕ ಚಿಂತನಾಕ್ರಮವೇ ಹೊಸ
ಆಲೋಚನೆಗಳ ಉಗಮ ಸ್ಥಾನ. ಸೃಜನಶೀಲತೆ ವಿಮರ್ಶಾತ್ಮಕ ಆಲೋಚನೆಯ ಗರ್ಭದಲ್ಲಿರುತ್ತದೆ. ಇದನ್ನು ವಿದ್ಯಾರ್ಥಿಗಳಲ್ಲಿ ಪೊರೆಯಬೇಕು. ಮನೆಯೇ ಮೊದಲ ಪಾಠಶಾಲೆಯಾದ್ದರಿಂದ, ಮಾತೆಯೇ ಮಗುವಿನ ಕ್ರಿಯಾಶಕ್ತಿಗೆ ನೀರೆರೆಯಬೇಕು. ಮನೆಗಿಂತ ವಿಶಾಲವಾದ ಪ್ರಯೋಗಶಾಲೆ ಮತ್ತೊಂದಿಲ್ಲ.

ನಾವು ಮನೆಯಲ್ಲೇ ನಿತ್ಯ ನಿರತರಾಗಿರುವ ಸಣ್ಣ ಪುಟ್ಟ ಕೆಲಸಗಳಲ್ಲೂ ಕಾರ್ಯವೈಖರಿಯನ್ನು ಸುಧಾರಿಸಲು, ಕ್ಷಮತೆಯನ್ನು ಹೆಚ್ಚಿಸಲು ಅವಕಾಶವಿರುತ್ತದೆ.
ಹಲ್ಲುಜ್ಜುವುದನ್ನೇ ತೆಗೆದುಕೊಳ್ಳಿ. ಕೋಡುಬಳೆಗೆ ನೀಳವಾಗಿ ಹೊಸೆಯುವ ಹಿಟ್ಟಿನ ಕಾಲುಭಾಗದಷ್ಟು ಪೇಸ್ಟನ್ನು ಟೂತ್ ಬ್ರಷ್ ಮೇಲೆ ಹೊಯ್ಯುವ ಜಾಹೀರಾತನ್ನು ನೋಡುತ್ತೇವೆ. ಹಲ್ಲುಜ್ಜಲು ಅಷ್ಟು ಪೇಸ್ಟ್ ಅಗತ್ಯವಿಲ್ಲ. ಅರ್ಧ ಅಥವಾ ಮುಕ್ಕಾಲು ಸೆಂಟಿಮೀಟರ್ ನಷ್ಟು ಪೇಸ್ಟ್ ಸಾಕು. ಬಲಿತ ಬಟಾಣಿ ಕಾಳಷ್ಟು ಪೇಸ್ಟ್ ಹಲ್ಲುಗಳನ್ನೂ ಸ್ವಚ್ಛಗೊಳಿಸುತ್ತದೆ, ಬಾಯಿಯ ವಾಸನೆಯನ್ನೂ ಹೋಗಲಾಡಿಸುತ್ತದೆ. ಇನ್ನು, ಬ್ರಷ್‌ನ ಆಯ್ಕೆ. ಅದರ ವಿನ್ಯಾಸದಿಂದ ಹಿಡಿದು, ಬ್ರಷ್‌ನ ಗಡಸು ತನದಿಂದ ಹಿಡಿದು ಅದರ ಬಳಕೆ/ನಿರ್ವಹಣೆ ಹೀಗೆ ಪ್ರತಿ ಹೆಜ್ಜೆಯ ಹಿಂದೆಯೂ ಚಿಂತನೆ ಅಗತ್ಯ.

ಸೂಚ್ಯವಾಗಷ್ಟೇ ತಿಳಿಸುತ್ತಿದ್ದೇನೆ. ಆದರೆ, ಬೆಡಗಿನ ಲೋಕದ ಪ್ರತಿಕ್ಷಣದ ಮಾಯೆಯಿಂದ ಕೆಡವಲ್ಪಡುವ ನಾವು ನಮ್ಮ ಬುದ್ಧಿಮತ್ತೆಯನ್ನು ಜಾಹೀರಾತಿನ ರೂಪದರ್ಶಿಯ ಪದತಲದಲ್ಲಿ ಬಿಟ್ಟಿರುತ್ತೇವೆ. ಸಣ್ಣದೊಂದು ಕೀಟಲೆಗೆ ಸಕಾಲ. ಅಮಿತಾಬ್ ಬಚ್ಚನ್ ಸೂಪರ್ ಸ್ಟಾರ್ ಆದ್ದರಿಂದ ಅನುಕರಿಸಲ್ಪಡುತ್ತಾರೆ. ಒಂದು
ಕಾಲಕ್ಕೆ ಆತನ ಹೇರ್ ಸ್ಟೈಲನ್ನು ಅನುಕರಿಸದ ಯುವಕನೇ ಪಾಪಿ. ಆತ ಎಡಚ. ಎಡಗೈಯಲ್ಲೇ ಬರ್ಗರ್ ತಿನ್ನುವುದಕ್ಕೆ (ಛೀ!) ಆತನಿಂದ ಪ್ರೇರೇಪಿತರಾದವರು ಅಸಂಖ್ಯಾತ ಯುವಕರು. ನಾಯಕನಟನಾಗಿ ಆತ ನಟಿಸಿದ ಒಂದು ಚಿತ್ರದಲ್ಲಿ ಊಟಕ್ಕೆ ತಟ್ಟೆಯ ಮುಂದೆ ಕುಳಿತಾಗ ತಾಯಿ ಕೈತೊಳೆಯುವುದನ್ನು ನೆನಪಿಸು ತ್ತಾಳೆ.

ವನರಾಜನಾದ ಸಿಂಹ ಕೈ ತೊಳೆದು ತಿನ್ನುತ್ತದೆಯೇ, ಎಂದು ನಾಯಕ ಕೇಳುತ್ತಾನೆ. ಇದರಿಂದ ಪ್ರಭಾವಿತರಾದ ಮಕ್ಕಳನ್ನು ನಿಜಜೀವನದಲ್ಲಿ ತಿದ್ದಬೇಕಾದ ಭಾರ ಮಾತೆಯರದ್ದು. ಸಿಂಹ ತೊಳೆಯದಿರುವುದು ಕೈಯೊಂದನ್ನೇ ಅಲ್ಲ ಅಂತ ಅವರು ಮಕ್ಕಳಿಗೆ ನೆನಪುಮಾಡಬಹುದು! ನಮಗೆಲ್ಲರಿಗೂ ಮನವರಿಕೆಯಾಗ ಬೇಕಾದ ಮಹತ್ತರವಾದ ಅಂಶವೊಂದಿದೆ. ನಮ್ಮ ಅಸ್ತಿತ್ವಕ್ಕೆ ಬೆಲೆ ಕಟ್ಟುವುದೇ ಸಮಾಜ. ಆ ಬೆಲೆ ಅಗ್ಗವಾಗದಂತೆ ನಾವು ನಡೆಯಬೇಕು. ಸಮಾಜಕ್ಕೆ ನಾವೇನು ಕೊಡಬಲ್ಲೆವು ಎಂಬ ಪ್ರಶ್ನೆ ಸದಾ ನಮ್ಮನ್ನು ಕಾಡಿದಾಗ ಮಾತ್ರ ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ನಾವು ದೂರುವ ಸಾಧ್ಯತೆ ಇಲ್ಲವಾಗುವುದಿಲ್ಲವಾದರೂ ಕಡಿಮೆಯಾಗುತ್ತದೆ, ಜಟಿಲ ಸಮಸ್ಯೆಗಳ ನಡುವೆಯೂ ಬದುಕು ಸಹನೀಯವಾಗುತ್ತದೆ.

ಪರೋಪಕಾರಾರ್ಥಮಿದಂ ಶರೀರಂ ಎಂಬ ನಂಬಿಕೆ ಸಾರ್ವರ್ತ್ರಿಕವಾದಾಗ ಪ್ರಯೋಜನಕಾರೀ ಆಲೋಚನೆಗಳ ಸುನಾಮಿಯೇ ಉಕ್ಕಿ ಹರಿಯುತ್ತದೆ. ಈ ವಿಪ್ಲವವನ್ನು ಸಾಧ್ಯವಾಗಿಸಲು ನಾಡಿನ ಸಮಸ್ತ ಜನತೆಯೂ ಆಲೋಚನಾ ಕ್ರಮದಲ್ಲಿ ಹೊಸತನ ರೂಪಿಸಿಕೊಳ್ಳಬೇಕಾಗಿದೆ. ಇದಕ್ಕೊಂದು ಉದಾಹರಣೆ ನೀಡುತ್ತೇನೆ. ರೈಲಿನ ಬೋಗಿಯಲ್ಲಿ ಕುಳಿತ ಮಧ್ಯ ವಯಸ್ಸೂ ತಲುಪದ ವ್ಯಕ್ತಿ ಮಾಸ್ಕ್ ಧರಿಸಿರಲಿಲ್ಲ. ಆತನಿಗಿಂತ ಹಿರಿಯ ಸಹಪ್ರಯಾಣಿಕರೊಬ್ಬರು ಮಾಸ್ಕ್ ಧರಿಸಲು ವಿನಂತಿಸಿದರು. ವಿನಯದಿಂದ ತನ್ನ ತಪ್ಪನ್ನು ಒಪ್ಪಿಕೊಂಡು ಮಾಸ್ಕ್ ಧರಿಸುವ ಬದಲು ಆತ ಽಮಾಕಿನಿಂದ ವರ್ತಿಸಿದ.

ತಾನು ಉನ್ನತ ಹುದ್ದೆಯ ರೈಲ್ವೆ ಅಽಕಾರಿ, ತನಗೇ ಬುದ್ಧಿ ಹೇಳುತ್ತೀಯಾ ಎಂದು ಗದರಿದ. ಉದ್ಧಟತನವನ್ನು ಅಷ್ಟಕ್ಕೇ ನಿಲ್ಲಿಸದೆ, ಮನಸ್ಸು ಮಾಡಿದರೆ ತಾನು ದೂರಿದವನಿಗೆ ಏನೆಲ್ಲಾ ತೊಂದರೆ ಕೊಡಬಹುದೆಂದು ಬೆದರಿಸಿದ. ದೂರಿದವರು ಬೆಚ್ಚಿದರು. ಇದನ್ನು ವೀಕ್ಷಿಸಿದ ಒಬ್ಬರು ಪೊಗರು ತೋರಿದ ಅಧಿಕಾರಿಯ ವಿರುದ್ಧ ರೈಲ್ವೆ ಮುಖ್ಯಸ್ಥರಿಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿದರು. ಅದರ ಮೇರೆಗೆ ತ್ವರಿತವಾಗಿ ಕಾರ್ಯನಿರತರಾದ ಮೇಲಧಿಕಾರಿಗಳು ದರ್ಪ ಪ್ರದರ್ಶಿಸಿದ ಅಧಿಕಾರಿಯ ಮೇಲೆ ಕ್ರಮ ಜರುಗಿಸಲು ಮುಂದಾದರು. ದಬ್ಬಾಳಿಕೆ ಮಾಡಿದ ಆತ ಇನ್ನೂ ಪ್ರಯಾಣಿಸುತ್ತಿರುವಾಗಲೇ ವಿಚಾರಣೆಗೆ ರೈಲ್ವೆ ಪೊಲೀಸರು ಪ್ರತ್ಯಕ್ಷ ವಾದರು. ಮಾಸ್ಕ್ ನಿಯಮವನ್ನು ಉಲ್ಲಂಸುವುದು ತನ್ನ ಜನ್ಮಸಿದ್ಧ ಹಕ್ಕೆಂಬಂತೆ ವರ್ತಿಸಿದ್ದ ಅಧಿಕಾರಿ ಅಷ್ಟು ಹೊತ್ತಿಗೆ ಬೇರೊಂದು ಕಂಪಾಟ್ಮೆಂಟ್‌ಗೆ ಸ್ಥಳ ಬದಲಾಯಿಸಿದ್ದವನು ಯಾರ ಮೇಲೆ ದರ್ಪ ತೋರಿದ್ದನೋ ಅವರ ಮುಂದೆ ನಿಂತು ಕೈ ಮುಗಿದು ಕ್ಷಮೆ ಕೋರಿದನು. ಆತನ ವಿರುದ್ಧ ದೂರು ನೀಡಿದ ವ್ಯಕ್ತಿ ತಾನೇ ದೂರು ನೀಡಿದ್ದೆಂದು ತಿಳಿಸಲಾಗಿ ಅವರಲ್ಲೂ ಕ್ಷಮೆ ಯಾಚಿಸಿದನು.

ದೂರುದಾರರು ನನ್ನ ಮಿತ್ರರೆಂದು ಆದರಾಭಿಮಾನದಿಂದ ತಿಳಿಸುತ್ತಿದ್ದೇನೆ. ಅವರ ಉದ್ದೇಶವಾದರೂ, ತಪ್ಪಿತಸ್ಥ ಅಧಿಕಾರಿಯನ್ನು ಸರಿ ದಾರಿಗೆ ತರುವುದಾಗಿತ್ತೇ ಹೊರತು ಆತನನ್ನು ಶಿಕ್ಷೆಗೆ ಗುರಿಪಡಿಸುವುದಾಗಿರಲಿಲ್ಲ. ಅವರ ಕ್ರಮವನ್ನು ಶ್ಲಾಘಿಸಿದ ತಪ್ಪಿತಸ್ಥ ಅಧಿಕಾರಿ ಅವರನ್ನು ಚಹಾಗೂ ಆಮಂತ್ರಿಸಿದರು. ಪ್ರಸಂಗ ಶುಭಾಂತ್ಯ ಕಂಡಿತು. ಸ್ನೇಹಿತರ ಸದುದ್ದೇಶಿತ ಕೋರಿಕೆಯ ಮೇರೆಗೆ ಹೆಚ್ಚಿನ ವಿವರಗಳನ್ನು ನೀಡುತ್ತಿಲ್ಲ. ತಂತ್ರಜ್ಞಾನದ ಸದ್ಬಳಕೆ ಈ ರೀತಿಯಾಗಲು ಮುಖ್ಯ
ಕಾರಣ ಸ್ನೇಹಿತರ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸಾಮಾಜಿಕ ಕಳಕಳಿ. ಆಕ್ರಮಣಕಾರಿ ಅಽಕಾರಿಯನ್ನು ಎಷ್ಟು ಚುರುಕಾಗಿ ಮತ್ತು ಸಮರ್ಥವಾಗಿ
ನಿಭಾಯಿಸಿದರೆಂದು ಖುಷಿಯಾಯಿತು.

ಡಿವಿ ಗುಂಡಪ್ಪನವರ ಜ್ಞಾಪಕಚಿತ್ರಶಾಲೆ ಪುಸ್ತಕ ಸರಣಿಯಲ್ಲಿ ಬೈರಾಗಿಯಂತೆ ಜೀವನ ನಡೆಸಿದ ಶಿವಪಿಚ್ಚಯ್ಯ ಮೊದಲಿಯಾರ್ ಎಂಬುವ ಗಾರೆಕೆಲಸದವರ
ವ್ಯಕ್ತಿಚಿತ್ರಣವಿದೆ. ಎಂಜಿನಿಯನರ್ ಮಾಗರ್ದರ್ಶನದಲ್ಲಿ ಕಟ್ಟಲ್ಪಡುತ್ತಿರುವ ಮನೆಯೊಂದರ ಮುಂಬಾಗಿಲ ವಾಸ್ಕಲ್ ಕೂಡಿಸಲು ತಡಕಾಡುತ್ತಿರುವಾಗ, ರಸ್ತೆಯಲ್ಲಿ
ಹಾದುಹೋಗುತ್ತಿದ್ದ ಶಿವಪಿಚ್ಚಯ್ ದೂರದಿಂದಲೇ ನೋಡಿ, ಸಮಸ್ಯೆಯನ್ನು ಬಗೆಹರಿಸುತ್ತಾರೆ. ನಮ್ಮ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಲು ಹಾರ್ವರ್ಡ್ ಡಿಗ್ರಿ ಹೊತ್ತವರೇನು ಬೇಕಿಲ್ಲ. ಬೈರಾಗಿ ಮೋದಿಯೇ ಸಾಕು. ವಿಮರ್ಶಾತ್ಮಕ ಚಿಂತನೆಯೂ ಅವರಿಗಿದೆ, ಕ್ರಿಯಾಶೀಲತೆಯೂ ಇದೆ. ಜನಪರ ಕಾಳಜಿಯಂತೂ ಕೇಳಲೇ ಬೇಕಿಲ್ಲ. ಆದರೆ ಅದನ್ನು ಕಾಣುವ ಮನಸ್ಸು ಅವರ ವಿರೋಽಗಳಿಗಿಲ್ಲ. ಅವರಿಗೆ ಅನಾದಿಕಾಲದಿಂದಲೂ, ಅನಾಯಾಸವಾಗಿ ದೊರಕುತ್ತಿದ್ದ ಹುಲುಸಾದ ಮೇವಿಗೆ ಸಂಚಕಾರ ಬಂದಿದ್ದೇ ಅವರ ಅರಣ್ಯರೋದನಕ್ಕೆ ಕಾರಣವಾಗಿದೆ.

ವಂಶಾವಳಿ ಆಡಳಿತ ತರುವ ಸಮಸ್ಯೆ ಏನೆಂದರೆ ವಂಶದ ಕುಡಿಗಳು ದೇಶವನ್ನು ತಮ್ಮ ಕುಟುಂಬದ ಜಾಗೀರೆಂದು ಪರಿಗಣಿಸುವುದು. ಆ ಜಾಗೀರನ್ನು ಮತ್ತೆ ಪಡೆಯಲು ಏನೆಲ್ಲಾ ಕಸರತ್ತು ನಡೆಸುತ್ತಿವೆ! ಅಂತಹ ಅನೇಕ ವರಸೆಗಳಲ್ಲಿ ಒಂದು ಅಮೆರಿಕದಲ್ಲಿ ಇದೇ ಶುಕ್ರವಾರದಿಂದ ಆರಂಭವಾಗಲಿರುವ ಮೂರುದಿನದ ಹಿಂದೂ ವಿರೋಧಿ ಸಮ್ಮೇಳನ. ಜಗವೆಲ್ಲಾ ಇಸ್ಲಾಂ ಭಯೋತ್ಪಾದನೆಯಿಂದ ನಲುಗುತ್ತಿರುವಾಗ, ದಶಕಗಳ ಕಾಲ ಹಿಡಿದ ಭ್ರಷ್ಟಾಚಾರವೆಂಬ ಗ್ರಹಣದಿಂದ ದೇಶ ಮುಕ್ತವಾಗುವ ಆಶಾಭಾವನೆ ಮೂಡುತ್ತಿರುವಾಗ, ಅಡೆತಡೆಗಳ ನಡುವೆಯೂ ಮತಾಂತರ ಅವ್ಯಾಹತವಾಗಿ ನಡೆಯುತ್ತಿದ್ದು ಹಿಂದೂಗಳು ಆತಂಕಕ್ಕೀಡಾಗಿರು ವಾಗ, ಅವೆಲ್ಲ ವಿಚಾರಗಳನ್ನು ಬಿಟ್ಟು ಹಿಂದೂ ಧರ್ಮದ ಬುಡಕ್ಕೇ ಕೊಳ್ಳಿ ಇಡಲು ಸಜ್ಜಾಗಿರುವರರದ್ದು ಔಟ್ ಆಫ್ ದ ಬಾಕ್ಸ್ ಥಿಂಕಿಂಗ್ ಎನ್ನಲಾಗದು. ಅದು ದೇಶಭ್ರಷ್ಟರ ಅಪ್ಪಟ ದುರ್ಬುದ್ಧಿ.

ಮನಃಶಾಸ್ತ್ರಜ್ಞರ ಪ್ರಕಾರ ಸೃಜನಶೀಲತೆಗೂ, ಅಪರಾಧಿ ಮನಸ್ಥಿತಿಗೂ ಒಂದು ಕೂದಲೆಳೆಯಷ್ಟೇ ಅಂತರ. ಸೃಜನಶೀಲರಾಗದ ಅಬ್ಬೇಪಾರಿಗಳು
ಇನ್ನೇನಾದಾರು?