ಚಿನಕುರುಳಿ
ಎಚ್.ಆನಂದರಾಮ ಶಾಸ್ತ್ರೀ
*ರಾಜಕಾರಣಿಗಳು ಸುಳ್ಳು ಹೇಳದಿರುವುದು
*ಚಿತ್ರನಟರು ಅಪ್ಪಟ ಕನ್ನಡದಲ್ಲಿ ಸಂದರ್ಶನ ನೀಡುವುದು
*ಕನ್ನಡಪರ ಹೋರಾಟಗಾರರು ಶುದ್ಧ ಕನ್ನಡ ಮಾತನಾಡುವುದು
*ಬೆಂಗಳೂರಿನ ಕನ್ನಡಿಗರು ಕನ್ನಡದಲ್ಲಿ ಮಾತನಾಡುವುದು
*ಬೆಂಗಳೂರಿನಲ್ಲಿರುವ ಹಿಂದಿ, ತಮಿಳು ಭಾಷಿಕರು ಕನ್ನಡ ಕಲಿಯುವುದು
*ದಿನಪತ್ರಿಕೆಗಳು ಒಂದು ದಿನವಾದರೂ ಮುದ್ರಣದೋಷವಿಲ್ಲದೆ ಪ್ರಕಟವಾಗುವುದು
*ಸುದ್ದಿವಾಹಿನಿಗಳು ಒಂದು ದಿನವಾದರೂ ಸಕಾರಾತ್ಮಕ ಸುದ್ದಿಗಳನ್ನೇ ಬಿತ್ತರಿಸುವುದು
*ಒಂದು ದಿನದ ಮಟ್ಟಿಗಾದರೂ ದಿನಪತ್ರಿಕೆಗಳ ಮುಖಪುಟದಲ್ಲಿ ರಾಜಕಾರಣಿಗಳ ಸುದ್ದಿ ಇಲ್ಲದಿರುವುದು
*ಪ್ರಶಸ್ತಿಗಳಿಗಾಗಿ ಯಾರೂ ಲಾಬಿ ಮಾಡದಿರುವುದು
*ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಸಾಹಿತ್ಯಾಸಕ್ತರು ಸ್ವಇಚ್ಛೆಯಿಂದ ಹಾಜರಾಗುವುದು
*ಹಲವು ‘ಗಣ್ಯ’ ಸಾಹಿತಿಗಳು ಜನರಿಗೆ ಅರ್ಥವಾಗುವಂತೆ ಭಾಷಣ ಮಾಡುವುದು ಮತ್ತು ಕವಿಗಳು ಅರ್ಥವಾಗುವಂಥ ನವ್ಯಕಾವ್ಯ ರಚಿಸುವುದು
*ಯೋಗ್ಯರಿಗಷ್ಟೇ ಪ್ರಶಸ್ತಿಗಳನ್ನು ನೀಡುವುದು
*ಕ್ಲಿನಿಕ್ಕಿಗೆ ಬಂದ ರೋಗಿಗಳನ್ನು ಖಾಸಗಿ ವೈದ್ಯರು ಕಾಯಿಸದಿರುವುದು
*ಬೆಂಗಳೂರಿನಲ್ಲಿ ಒಂದು ದಿನವಾದರೂ ಎಲ್ಲಿಯೂ ಟ್ರಾಫಿಕ್ ಜಾಮ್ ಆಗದಿರುವುದು
*ಒಂದು ದಿನದ ಮಟ್ಟಿಗಾದರೂ ಬೆಂಗಳೂರು ಕಸಮುಕ್ತವಾಗಿರುವುದು
*ಬೆಂಗಳೂರಿನ ಎಲ್ಲ ಫಲಕಗಳಲ್ಲಿ ಕನ್ನಡವೂ ರಾರಾಜಿಸುವುದು
*ಬೆಂಗಳೂರಿನ ಆಟೋಗಳವರು ಕರೆದಲ್ಲಿಗೆ ಬರುವುದು ಮತ್ತು ಮೀಟರ್ ಪ್ರಕಾರವೇ ಹಣ ತೆಗೆದುಕೊಳ್ಳುವುದು
*ಬಿಬಿಎಂಪಿ ಚುನಾವಣೆ ನಡೆಯುವುದು
*ಬೆಂಗಳೂರಿನಲ್ಲಿ ಸಾಕಷ್ಟು ಸಾರ್ವಜನಿಕ ಮೂತ್ರಾಲಯಗಳ ವ್ಯವಸ್ಥೆ ಆಗುವುದು
*ಬೆಂಗಳೂರಿನ ಎಲ್ಲಾ ರಸ್ತೆ ಗುಂಡಿಗಳು ಮುಚ್ಚಲ್ಪಡುವುದು
*ಒಂದು ದಿನದ ಮಟ್ಟಿಗಾದರೂ ಬೆಂಗಳೂರು ಬ್ಯಾನರ್, ತಾತ್ಕಾಲಿಕ ಹೋರ್ಡಿಂಗ್, ಬಂಟಿಂಗ್ ಇತ್ಯಾದಿಗಳಿಂದ ಮುಕ್ತವಾಗಿರುವುದು
*ಇಡೀ ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗಾದರೂ ವಿದ್ಯುತ್ ಕೈಕೊಡದಿರುವುದು
*ಒಂದು ದಿನದ ಮಟ್ಟಿಗಾದರೂ ಬಿಎಂಟಿಸಿ ಬಸ್ಸುಗಳು ಸ್ಟಾಪುಗಳ ನಿಲ್ಲುವುದು
*ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಟಿಕೆಟ್ ದರಗಳು ಜನರ ಕೈಗೆಟುಕುವಂತೆ ಇರುವುದು ಮತ್ತು ಅಲ್ಲಿಯ ಆಹಾರ-ಪಾನೀಯಗಳ ಬೆಲೆಗಳು ಆಕಾಶದಿಂದ ಕೆಳಕ್ಕಿಳಿಯುವುದು
*ಮಲ್ಲಿಕಾರ್ಜುನ ಖರ್ಗೆಯವರು, ದೇವೇಗೌಡರು, ಯಡಿಯೂರಪ್ಪನವರು ನಗುವ ಅಭ್ಯಾಸ ಬೆಳೆಸಿಕೊಳ್ಳುವುದು
ಸದಾನಂದಗೌಡರು ನಗದಿರುವ ಅಭ್ಯಾಸ ಬೆಳೆಸಿಕೊಳ್ಳುವುದು
*ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಅಳದಿರುವ ಅಭ್ಯಾಸ ಬೆಳೆಸಿಕೊಳ್ಳುವುದು
*ಕುಮಾರಸ್ವಾಮಿಯವರು ಒಂದು ಸಲವಾದರೂ ಒಂದು ವಾಕ್ಯವನ್ನಾದರೂ ವ್ಯಾಕರಣಬದ್ಧವಾಗಿ ಹೇಳುವುದು ಮತ್ತು ಆ ವಾಕ್ಯಕ್ಕೆ ಪೂರ್ಣವಿರಾಮ ನೀಡುವುದು
*ಕಸಾಪ ಅಧ್ಯಕ್ಷ ಮಹೇಶ ಜೋಶಿ ವಿವಾದಾಸ್ಪದ ಹೇಳಿಕೆಗಳನ್ನು ನೀಡದಿರುವುದು
*ಯಕ್ಷಗಾನ ವೇಷಧಾರಿಗಳು ಹಾದಿ ಬೀದಿಗಳಲ್ಲಿ ಕುಣಿಯುವುದನ್ನೂ, ಸಿಕ್ಕಸಿಕ್ಕಲ್ಲ ವೇಷ ಧರಿಸಿ ನಿಲ್ಲುವುದನ್ನೂ ಕೈಬಿಡುವುದು
*ಸರಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವುದು ಮತ್ತು ಕಚೇರಿಯ ಅವಧಿಯಲ್ಲಿ ಹೊರಕ್ಕೆ ಹೋಗದಿರುವುದು
*ಒಂದು ದಿನದ ಮಟ್ಟಿಗಾದರೂ ಸರಕಾರಿ ನೌಕರರು ಲಂಚ ತೆಗೆದುಕೊಳ್ಳದಿರುವುದು
*ಪೊಲೀಸರು ಜನರನ್ನು ಗೌರವದಿಂದ ಮಾತನಾಡಿಸುವುದು
*ಒಂದು ದಿನವಾದರೂ ಎ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು
*ಒಂದು ದಿನದ ಮಟ್ಟಿಗಾದರೂ ಜನರು ತಮ್ಮ ಮೊಬೈಲ್‌ಗಳಲ್ಲಿ ಪುಗಸಟ್ಟೆ ಮಾತನ್ನೂ ಅನವಶ್ಯಕ ನೋಟಗಳನ್ನೂ ನಿಲ್ಲಿಸುವುದು
*ಚಲನಚಿತ್ರಗಳಲ್ಲಿ ಜುಟ್ಟಿನ ಬ್ರಾಹ್ಮಣರನ್ನು, ಟೋಪಿಯ ಪಾರ್ಸಿಗಳನ್ನು, ಮಾರ್ವಾಡಿಗಳನ್ನು, ಪೊಲೀಸರನ್ನು ಹಾಸ್ಯದ ಹೆಸರಿನಲ್ಲಿ ಅಪಹಾಸ್ಯಕ್ಕೆ ಗುರಿ ಮಾಡದಿರುವುದು
*ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ‘ಗ್ರಾಹಕ-ಸ್ನೇಹಿ’ ಸೇವೆ ದೊರೆಯುವುದು
*ಒಂದು ದಿನದ ಮಟ್ಟಿಗಾದರೂ ಯಾವುದೇ ಸ್ವಾಮೀಜಿ-ಧರ್ಮಗುರು ಯಾವುದೇ ಸಾಮಾಜಿಕ ಹೋರಾಟದಗಲೀ ರಾಜಕೀಯ ಸಮಾರಂಭದಗಲೀ ಭಾಗವಹಿಸದಿರುವುದು
*ಬೀದಿ ನಾಯಿಗಳ ಮತ್ತು ಪಟಾಕಿಗಳ ಪರ-ವಿರೋಧ ವಾದ-ವಿವಾದ ನಡೆಯದಿರುವುದು
*ಕೊನೆಯದಾಗಿ, ನಾನು ಇಂಥ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಳ್ಳದಿರುವುದು!
(ಲೇಖಕರು ಹಿರಿಯ ಸಾಹಿತಿ)
ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?