ಎಚ್.ಕೆ.ಮಧು, ದೋಹಾ, ಕತಾರ್
ದೊಡ್ಡ ದೊಡ್ಡ ತಾರೆಯರ ತಾರಾಗಣದ ಸಿನಿಮಾಗಳ ಬಗ್ಗೆೆ ವಿಪರೀತ ಪ್ರಚಾರವಾಗಿ, ಚಿತ್ರ ಬಿಡುಗಡೆಯಾದರೆ ಪ್ರಳಯವಾಗೋದು ಗ್ಯಾಾರಂಟಿ ಎಂಬ ಮಟ್ಟಿಿಗೆ ಭರಾಟೆಯ ಜಮಾವಣೆಯಾಗಿಬಿಟ್ಟಿಿರುತ್ತದೆ. ಸಿನಿಮಾ ಬಿಡುಗಡೆ ಹಿಂದಿನ ದಿನ, ತಾರೆಯರ ಅಭಿಮಾನಿಗಳ ವರಸೆಗಳ, ಮಜಲುಗಳಿಗೆ ಬೇರೆಯ ವ್ಯಾಾಖ್ಯಾಾನವೇ ಬರೆಯಲಾಗುತ್ತದೆ. ಚಿತ್ರ ಬಿಡುಗಡೆಯಾಗಿ ಬೆಳ್ಳಂಬೆಳಗಿನ ಪ್ರಥಮ ಪ್ರದರ್ಶನದಲ್ಲಿ ಕಟ್ಟಿಿದ ಎಲ್ಲಾ ಮಹಲುಗಳು ಪಲ್ಟಿಿಯಾದಾಗ ಕಾರಣಗಳ ಹುಡುಕುವಿಕೆಗೆ ಪ್ರಯತ್ನಗಳಾಗುತ್ತವೆ. ಕಥೆ ಸರಿಯಿಲ್ಲ, ಮಂದಗತಿಯಲ್ಲಿ ಸಾಗುವ ಸಿನಿಮಾ, ಸಿನಿಮಾದ ಪೂರ್ವಾರ್ಧ, ಉತ್ತರಾರ್ಧ ಬಗೆಗಿನ ಹೋಲಿಕೆ, ನಾಯಕ ನಟನ ಸಾಮರ್ಥ್ಯಕ್ಕೆೆ ಸರಿಯಾಗದ ಪಾತ್ರ, ಹಿನ್ನೆೆಲೆ ಸಂಗೀತ ಭಾರಿ ಅಬ್ಬರ, ಜಾಳುಜಾಳಾದ ಸಂಕಲನ ಇತ್ಯಾಾದಿ…
ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಚುನಾವಣೆ ಘೋಷಣೆಗೆ ಮುನ್ನ ಹಾಗೂ ನಂತರ ಚುನಾವಣಾ ಫಲಿತಾಂಶ ಹೊರಬಂದ ಮೇಲೆ ಮೇಲಿನ ಮಾತುಗಳನ್ನು ಚಾಚೂ ತಪ್ಪದೇ ಅನ್ವಯಿಸಬಹುದು. ತಾರಾಮೌಲ್ಯವೊಂದಿದ್ದರೆ ಮಾತ್ರ ಚಿತ್ರ ಗೆಲ್ಲಲಾರದೆಂಬುದು ಸಾರ್ವಕಾಲಿಕ ಸತ್ಯ. ಅದು ಕೇವಲ ಒಂದು ಹಂತದವರೆಗೆ ಚಿತ್ರಕ್ಕೆೆ ಪ್ರಚಾರ ಮತ್ತು ನಿರೀಕ್ಷಣೆ ಮೂಡಿಸಲು ಸಹಕಾರಿಯಾಗುತ್ತದೆ. ಕತೆ, ಚಿತ್ರಕತೆ, ಇಡೀ ತಾರಾಬಳಗ-ತಂತ್ರಜ್ಞರ ಶ್ರಮ, ನಿರ್ದೇಶಕನ ಕೈಚಳಕ ಹೀಗೆ ಎಲ್ಲವೂ ಲೆಕ್ಕಕ್ಕೆೆ ಬರುತ್ತದೆ. ಗೆಲುವು ಮತ್ತು ಸೋಲುಗಳಲ್ಲಿ ಈ ಪ್ರತಿಯೊಂದು ಅಂಶವಿರುತ್ತದೆ. ಗೆದ್ದಾಗ-ಸೋತಾಗ, ಅವರಿವರು ಅಥವಾ ಬೇರೇನೋ ಕಾರಣವೆಂಬುವುದು ಸರಿ ಕಾಣದಾದರೂ ಜಯ-ಅಪಜಯಗಳು ಮುಂಚೂಣಿಯಲ್ಲಿರವ ಮಂದಿಯ ಹೆಗಲೇರುವುದು ಸರಳ ಸಹಜ.
ಈ ಬಾರಿ ಇವಿಎಂ ಯಂತ್ರಗಳ ಬಗ್ಗೆೆ ಚುನಾವಣೆಗಳಲ್ಲಿ ತಮಗೆ ವ್ಯತಿರಿಕ್ತ ಫಲಿತಾಂಶ ಬಂದಾಗ ಇವಿಎಂಗಳ ಮೇಲೆ ಗೂಬೆ ಕೂರಿಸಿ ಬೊಬ್ಬೆೆ ಹಾಕುವ ಮಂದಿಯೇ ಈಗ ಕಾಣುತ್ತಿಿಲ್ಲ. ಮಹಾರಾಷ್ಟ್ರ-ಹರಿಯಾಣ ಫಲಿತಾಂಶಗಳು ಇವಿಎಂಯಂತ್ರಗಳನ್ನು ಸದ್ಯದ ಮಟ್ಟಿಿಗೆ ದೋಷರಹಿತವನ್ನಾಾಗಿಸಿದೆ. ಮೋದಿ-ಅಮಿತ್ ಶಾ ಇವಿಎಂಯಂತ್ರಗಳನ್ನು ತಮ್ಮ ಅನುಕೂಲಕ್ಕೆೆ ಬಳಸಿಕೊಳ್ಳುವವರೆಂಬ ಅಪವಾದ ಪ್ರಸ್ತುತಕ್ಕೆೆ ದೂರಾಗಿದೆ.
ಈ ಎರಡು ರಾಜ್ಯಗಳ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆ. ದಾಖಲೆಯಲ್ಲಿ ಗೆದ್ದು ಅಧಿಕಾರ ಮತ್ತೆೆ ಮರಳುವ ಪಕ್ಷಕ್ಕೆೆ ಹರಿಯಾಣ ಮರ್ಮಾಘಾತ ನೀಡಿದೆ. ಮಹಾರಾಷ್ಟ್ರವನ್ನು ತೆವಳುತ್ತಾಾ ಉಳಿಸಿಕೊಂಡಿದೆ. ದೇವೇಂದ್ರ- ನರೇಂದ್ರರ ಜತೆಗೆ ಆದಿತ್ಯ ಠಾಕ್ರೆೆ ತ್ರಿಿವಳಿಗಳಿಗೆ, ಜೀವನದ ಇಳಿ ಸಂಜೆಯಲ್ಲಿರುವ ಪವಾರ್ ಸಖತ್ತಾಾಗೇ ಪವಾರ್ ಬ್ರೇಕ್ ಹಾಕಿದ್ದಾರೆ. ಹರಿಯಾಣದಲ್ಲಿ ಪೂರ್ಣ ಮನೋಹರ, ಮಿಕ್ಕವರೆಲ್ಲಾ ಹರೋಹರ ಎಂಬ ಪಂಡಿತರಿಗೆ ಖಡಕ್ ಟಕ್ಕರ್ ಬಿದ್ದಿದೆ.
ಪ್ರತಿಯೊಂದು ಚುನಾವಣೆಯೂ ಬೇರೆ ಬೇರೆಯೇ. ರಾಜ್ಯಕ್ಕೆೆ ಸಂಬಂಧ ಪಟ್ಟ ವಿಷಯಗಳು, ಜ್ವಲಂತ ಸಮಸ್ಯೆೆಗಳು, ಜನಪ್ರತಿನಿಧಿಗಳ ಒಡನಾಟ, ಕ್ಷೇತ್ರದಾಭಿವೃದ್ಧಿಿ, ಎದುರಾಳಿಗಳ ತಂತ್ರ-ಪ್ರತಿತಂತ್ರ, ನಾಯಕನಾರೆಂಬ ಚರ್ಚೆ ಮುಂತಾದವು. ಹಬ್ಬಬ್ಬಕ್ಕೂ ಒಬ್ಬಟ್ಟೆೆ ಸಿಹಿ ಖಾದ್ಯವಾಗಲಾರದು. ಅದು ಸ್ವಾಾರಸ್ಯವೂ ಅಲ್ಲ, ಸಿಂಧುವೂ ಅಲ್ಲ. ಬ್ಯಾಾಂಕ್‌ನಲ್ಲಿ ಹಣವಿಟ್ಟವರ ಆಕ್ರಂಧನ ಮುಗಿಲು ಮುಟ್ಟಿಿದಾಗಲೂ ಪರಿಹಾರದ ಕುರುಹು ಕೂಡ ನೀಡದಿರುವುದು, ಬರುವವರನ್ನೆೆಲ್ಲಾ ಬರಮಾಡಿಕೊಂಡು ನಿಷ್ಠಾಾವಂತ ಕಾರ್ಯಕರ್ತರನ್ನು, ಪಕ್ಷಕ್ಕಾಾಗಿ ವರ್ಷಾನುಗಟ್ಟಲೆ ದುಡಿದ ನಾಯಕರನ್ನು ಕಡೆಗಣಿಸುವುದು, ದುಡುಕಿನ ನಿರ್ಧಾರ, ಜನಗಳ ಜತೆ ಸ್ಪಂದನೆಯ ಕೊರತೆ ಮುಂತಾದ ಕಾರಣಗಳು ನಿರೀಕ್ಷೆಗಳನ್ನು ಬುಡಮೇಲು ಮಾಡಿಬಿಡುತ್ತವೆ. ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ಕೆಳಮುಖವಾಗುವ ಪ್ರಕ್ರಿಿಯೆಯ ಸೂಚನೆಗಳು.
ಮತದಾರ ಪ್ರಭುವಿನ ಮತಗಳ ಎಣಿಕೆ ಪೂರ್ಣವಾಗದೆ ಫಲಿತಾಂಶವನ್ನು ನಿಖರವಾಗಿ ಹೇಳಲಾಗದು. ಫಲಿತಾಂಶದ ದಿಕ್ಸೂಚಿಗಳು ಶೇ.100 ರಷ್ಟು ಸರಿಯಿರದು. ಸುದ್ದಿ ಮಾಧ್ಯಮಗಳು ದಿನ ರಾತ್ರಿಿಯೆನ್ನದೆ ಪುಂಖಾನುಪುಂಖವಾಗಿ ಪ್ರಸಾರ ಮಾಡಿ, ತಮ್ಮ ವಿಶ್ಲೇಷಣೆ, ಚರ್ಚೆ, ಗೊಂದಲಗಳನ್ನು ಪ್ರಸಾರ ಮಾಡುತ್ತಾಾ, ತಮ್ಮ ಬೆನ್ನನ್ನು ತಾವೇ ತಟ್ಟಿಿಕೊಳ್ಳಬಹುದಷ್ಟೇ.
ಪ್ರಕೃತಿಯಲ್ಲಿ ಏರಿಳಿತಗಳು ಸಹಜ. ಯಾವುದೇ ಸನ್ನಿಿವೇಶ, ಸಾಧನೆ ಅಥವಾ ವ್ಯಕ್ತಿಿಯ ಯಶಸ್ಸು ಆರೋಹಣದಲ್ಲೇ ಸದಾ ಇರಲಾರದು. ಆರೋಹಣಗೊಂಡ ಪ್ರತಿಯೊಂದು ಅವರೋಹಣವಾಗಲೇಬೇಕು. ಕೆಲವು ಬಾರಿ ಈ ಪ್ರಕ್ರಿಿಯೆಯ ಸ್ಥಿಿತಿ ದೀರ್ಘಾವಧಿಯದಾಗಿರಬಹುದು ಅಷ್ಟೇ. ಅದು ಪ್ರಕೃತಿ, ಈ ಸೃಷ್ಟಿಿಯನ್ನು ನಡೆಸುವ ರೀತಿ. ಪ್ರಕೃತಿ ನಿಯಮವಿರುವುದರಿಂದಲೇ ಮೇಲೇರುವುದು ಒಂದು ಗರಿಷ್ಠ ಮುಟ್ಟಿಿದಾಗ, ಕೆಳಮುಖವಾಗುವುದು ತಾನೇ ತಾನಾಗಿ ನಡೆದುಬಿಡುತ್ತದೆ.
ಇತಿಹಾಸದಲ್ಲಿ ಇದಕ್ಕೆೆ ಪುಷ್ಟಿಿಕೊಡುವ ಲೆಕ್ಕವಿಲ್ಲದಷ್ಟು ಘಟನೆಗಳಿವೆ. ಮೀಸೆ ತಿರುವಿದ ಮಂದಿ ಮಣ್ಣು ಮುಕ್ಕಿಿದ ನಿದರ್ಶನಗಳಿವೆ. ವಿಶ್ವವನ್ನೇ ಆಳಿ, ಮೆರೆದ ರಾಜಮಹಾರಾಜರ ಅವನತಿಯ ಪುರಾವೆಗಳಿವೆ. ಕಾಲಗರ್ಭದಲ್ಲಿ ತಾವೇ ಶಾಶ್ವತವೆಂದು ಭಾವಿಸಿದವರ ಗುರುತೇ ಸಿಗದೇ ಹೂತುಹೋದವರ ಪಳೆಯುಳಿಕೆಗಳ ಚಿತ್ರಗಳಿವೆ. ಇದು ಆಳಿದವರ , ಆಳುತ್ತಿಿರುವವರ, ಆಳುವವರ ವೃತ್ತಾಾಂತಗಳಿಗೆ ತಳಪಾಯ.