Thursday, 28th November 2024

Arvind Limbavali Column: ನಿರಂತರವಾಗಿರುವ ವಕ್ಫ್‌ ಅಟ್ಟಹಾಸಕ್ಕೆ ಕೊನೆಯೆಂದು ?

ಒಡಲಾಳ

ಅರವಿಂದ ಲಿಂಬಾವಳಿ

ದೇಶದಲ್ಲಿನ ವಕ್ಫ್ ಕಾಯಿದೆಗೆ ತಿದ್ದುಪಡಿ‌ ತರಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ, ರಾಜ್ಯದಲ್ಲಿ
ಕಳೆದೊಂದು ತಿಂಗಳಿಂದ ವಕ್ ನೋಟಿಸ್ ಎನ್ನುವ ವಿವಾದ ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರೈತರ ಕೃಷಿಭೂಮಿ, ದೇವಾಲಯಗಳು, ಶಾಲಾ ಮೈದಾನಗಳು ಸೇರಿದಂತೆ ಶತಮಾನಗಳ ಇತಿಹಾಸವಿರುವ ಮಠಗಳ ಜಾಗ ತನ್ನದು ಎನ್ನುವ ‘ಧಾರ್ಷ್ಟ್ಯ’ದ ವಕ್ಫ್ ಬೋರ್ಡ್‌ನ ನೋಟಿಸ್ ಸಾರ್ವಜನಿಕರ‌ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ.

ಅನೇಕ ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಏಕಾಏಕಿಯಾಗಿ ‘ಇದು ನಿಮ್ಮದಲ್ಲ, ವಕ್ಫ್ ಆಸ್ತಿ’ ಎಂದರೆ
ಹೇಗಾಗಬೇಡ? ಈ ಸರಣಿ ನೋಟಿಸ್‌ಗಳ ವಿವಾದಕ್ಕೆ ಸರಕಾರ ತಾತ್ಕಾಲಿಕವಾಗಿ ತೇಪೆ ಹಚ್ಚುವ ಕಾರ್ಯ ಮಾಡಿದ್ದರೂ,‌ ಇದಕ್ಕೊಂದು ಶಾಶ್ವತ ಪರಿಹಾರದ ಅಗತ್ಯವಿದೆ. ವಕ್ಫ್ ನೋಟಿಸ್ ಶುರುವಾಗಿದ್ದೇ ಆಗಿದ್ದು, ಆಸ್ತಿಯನ್ನು‌ ವಾಪಸು ಪಡೆಯಬೇಕೆಂಬ ಸಚಿವರ ‘ಸೂಚನೆ’ ಬಂತು. ಬಳಿಕ
ಜನಾಕ್ರೋಶಕ್ಕೆ ಮಣಿದು ರಾಜ್ಯ ಸರಕಾರ ನೋಟಿಸ್‌ಗಳನ್ನು ಹಿಂಪಡೆಯುವ ಕೆಲಸ ಮಾಡಿತು. ಈ ಎಲ್ಲ ಗೊಂದಲ, ವಿವಾದದ ಕಾರಣಕ್ಕೆ, ಯಾವೆಲ್ಲ ಅಮಾಯಕರ ಆಸ್ತಿ ಮೇಲೆ ವಕ್ಫ್ ಕೆಂಗಣ್ಣು ಬಿದ್ದಿದೆ ಎಂಬುದನ್ನು ಪರಿಶೀಲಿಸಲು ನಾನು ‘ವಾರ್ ರೂಂ’ ಆರಂಭಿಸಿದ್ದು ಒಂದು ಭಾಗ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ಕಾಯಿದೆಯ ಪ್ರಸ್ತುತತೆ ಬಗ್ಗೆಯೇ ಹಲವಾರು ಪ್ರಶ್ನೆಗಳು ಎದ್ದಿವೆ.

ಈ ಪ್ರಶ್ನೆಗಳಿಗೆ ಪೂರಕವಾಗಿಯೇ ಕೇಂದ್ರ ಸರಕಾರ ‘ವಕ್ಫ್ ಕಾಯಿದೆ’ ತಿದ್ದುಪಡಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಜಂಟಿ ಸದನ ಸಮಿತಿಯನ್ನು ರಚಿಸಲಾಗಿದೆ. ಆದರೆ, ಆ ಕಾಯಿದೆಯ ಬಗ್ಗೆ ಪರಾಮರ್ಶೆ ಮಾಡುವ ಮೊದಲು ರಾಜ್ಯದಲ್ಲಾದ ವಿವಾದವನ್ನು ಗಮನಿಸಬೇಕಿದೆ.

ವಕ್ಫ್ ನ ಹುಚ್ಚಾಟದ ನೋಟಿಸ್‌ಗಳಿಂದ ನೂರಾರು ರೈತರು ಆತಂಕಕ್ಕೆ ಒಳಗಾಗಿ ಏನು ಮಾಡಬೇಕು ಎನ್ನುವ ಗೊಂದಲದಲ್ಲಿದ್ದರು. ಈ ನೋಟಿಸ್‌ಗಳಿಗೆ ಯಾವ ರೀತಿಯ ಕಾನೂನು ಹೋರಾಟ ನಡೆಸಬೇಕು? ಪಹಣಿಯಲ್ಲಿ ವಕ್ಫ್ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ? ಎಂಬುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಾನು ‘ವಾರ್ ರೂಂ’ ಆರಂಭಿಸಿ, ಅದಕ್ಕೆ ನೇರವಾಗಿ ದೂರು ನೀಡಲು
ಅನುಕೂಲವಾಗುವಂತೆ ವಾಟ್ಸ್ಯಾಪ್ ನಂಬರ್ ನೀಡಲಾಯಿತು. ಈ ‘ವಾರ್ ರೂಂ’ ಅನ್ನು ಆರಂಭಿಸಿದಾಗಿನಿಂದ ಹತ್ತಾರು ದೂರುಗಳು ಬಂದಿವೆ. ಅದರಲ್ಲಿ ರೈತರ ಜಮೀನು, ದೇವಾಲಯಗಳಿರುವ ಜಾಗ ‘ತನ್ನದೆಂದು’ ವಕ್ಫ್ ನೋಟಿಸ್ ನೀಡಿರುವುದು ಮಾತ್ರವಲ್ಲದೇ, ಸರಕಾರಿ ಶಾಲೆಯ ಮತ್ತು ಇತರೆ ಸರಕಾರಿ ಜಾಗದ ಮೇಲೆಯೂ ತನ್ನ ಅಧಿಪತ್ಯ ಸಾಧಿಸಲು ಮುಂದಾಗಿರುವುದು ಸ್ಪಷ್ಟವಾಗಿ ಗೋಚರವಾಗಿದೆ.

ಆದರೆ ಈ ಎಲ್ಲವನ್ನು ಮೀರಿ ಮುಸ್ಲಿಂ ಸಮುದಾಯದ ಬಡ ರೈತರ ಜಮೀನನ್ನೂ ತನ್ನದೆಂದು ವಕ್ಫ್ ಘೋಷಿಸಿಕೊಂಡಿರುವ ಹಲವು
ದೂರುಗಳು ಬಂದಿವೆ. ಉದಾಹರಣೆಗೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಸೈಯದ್ ಅಹ್ಮದ್ ಎನ್ನುವವರ ಜಮೀನು ತನ್ನದೆಂದು ವಕ್ ಘೋಷಿಸಿಕೊಂಡಿದೆ. ಇದೇ ರೀತಿ ಗದಗದ ನದಾಫ್, ಬಳ್ಳಾರಿಯ ಫಕೀರಪ್ಪ ಸೇರಿದಂತೆ ಹಲವರ‌ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ಸೇರಿಸುವ ಮೂಲಕ ಹಿಂದುಗಳಿಗೆ ಮಾತ್ರವಲ್ಲದೇ, ಮುಸ್ಲಿಂ ಸಮುದಾಯದ ಬಡ ರೈತರ ಹೊಟ್ಟೆಯ ಮೇಲೂ ಹೊಡೆಯುವ ಪ್ರಯತ್ನವನ್ನು ವಕ್ಫ್
ಬೋರ್ಡ್ ಮಾಡಿದೆ.

ದಿಷ್ಟೇ ಅಲ್ಲದೆ, ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಘೋಷಿಸಿಕೊಂಡಿರುವ ಪಟ್ಟಿಯಲ್ಲಿ ಹತ್ತಾರು ಮಠಗಳ, ದೇವಾಲಯಗಳ ಹಾಗೂ ರೈತರ ಆಸ್ತಿ ಸೇರಿರುವುದು ದುರಂತ. ಬಸವ ತತ್ತ್ವಗಳನ್ನು ಪ್ರಚಾರ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ಹತ್ತಾರು ವಿರಕ್ತ ಮಠಗಳು ಆರಂಭಗೊಂಡೇ ಶತಮಾನ ಕಳೆದಿವೆ. ಈ ಮಠಗಳು ಶತಮಾನಗಳಿಂದ ಅದೇ ಸ್ಥಳದಲ್ಲಿವೆ. ಆದರೂ ಮಠವಿರುವ ಸ್ಥಳ ತನ್ನದು ಎನ್ನುವ ಉದ್ಧಟತನ ತೋರಿದೆ ವಕ್ಫ್. ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಮಹಾಂತೇಶ್ವರ ಮಠ, ಸೇಡಂ ತಾಲೂಕಿನ ಐದು ಶತಮಾನದ ಇತಿಹಾಸವಿರುವ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನದ ಐದು ಎಕರೆ ಭೂಮಿ, ವಿಜಯಪುರ ಸಿಂಧಗಿ ವಿರಕ್ತ ಮಠದ ಆಸ್ತಿ, ಗದಗದ ಗಜೇಂದ್ರಗಢ, ಸೋಮವಾರ ಪೇಟೆ ಪಟ್ಟಣದ ರೇಂಜರ್ ಬ್ಲಾಕ್‌ನ ಶ್ರೀ ವನದುರ್ಗಿ ದೇವಾಲಯದ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವುದು ಈಗ ಬೆಳಕಿಗೆ ಬಂದಿದೆ.

ಮಠಗಳು ಸೇರಿದಂತೆ ಹತ್ತಾರು ಸರಕಾರಿ ಶಾಲೆ, ಭೂಮಿ ತನ್ನದೆಂದು ವಕ್ಫ್ ‘ಏಕಾಏಕಿ’ ಘೋಷಿಸಿಕೊಂಡು ನೋಟಿಸ್ ನೀಡಿದೆ. ಇನ್ನು ನಾನು ಆರಂಭಿಸಿರುವ ‘ವಾರ್ ರೂಂ’ಗೆ ಬಂದಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ ಗ್ರಾಮದ, ಸೀಗನಹಳ್ಳಿ ಒಂದನೇ ಕಾಲೋನಿ
ಯಲ್ಲಿರುವ ಸರಕಾರಿ ಶಾಲೆ ಹಾಗೂ ಸಮುದಾಯ ಭವನ ಮತ್ತು ಕುಡಿಯುವ ನೀರಿನ ಘಟಕ ಹಾಗೂ ಫಕೀರಸ್ವಾಮಿ ದೇವಸ್ಥಾನ
ಈ ಎಲ್ಲವುಗಳನ್ನು ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟಿದ್ದಾರೆ.

ಇದೇ ರೀತಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನಾಗನಾಥ, ಹೊಸಲ್ಲಪ್ಪ ಅವರ ಮೂರು ಎಕರೆ, ಚಿಂಚೋಳಿ ತಾಲೂಕಿನ ಸಿದ್ರಾಮಯ್ಯ ಮಠ, ಚಾಮರಾಜನಗರದ ರಮೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ರಾಜಶೇಖರ್ ಬಿಲ್ವಮನೆ, ಧಾರವಾಡದ ಗುರುರಾಜ್ ಅಣ್ಣೀಗೇರಿ, ರಾಮನಗರದ ಸತೀಶ್ ಚಂದ್ರ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಂದಿರುವ ಹತ್ತಾರು ಸಂತ್ರಸ್ತರ ದೂರುಗಳನ್ನು ಇಲ್ಲಿ ಹೇಳಬಹುದು. ಇನ್ನು ‘ವಾರ್‌ರೂಂ’ ಹೊರತಾಗಿ ರಾಜ್ಯಾದ್ಯಂತ ಎದ್ದಿರುವ ವಿವಾದವನ್ನು ಗಮನಿಸಿದರೆ,
ಇನ್ನೂ ಹತ್ತುಪಟ್ಟು ಈ ಸಮಸ್ಯೆಯಿದೆ ಎಂದರೆ ತಪ್ಪಾಗುವುದಿಲ್ಲ. ಹಾಗಾದರೆ ಈ ರೀತಿ ಬೇಕಾಬಿಟ್ಟಿ ವಕ್ಫ್ ಆಸ್ತಿ ಎಂದು ಘೋಷಿಸಿಕೊಳ್ಳಲು ಸಾಧ್ಯವೇ ಎನ್ನುವ ಅನೇಕರ ಪ್ರಶ್ನೆಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿನ ತಿದ್ದುಪಡಿಯಿಂದ ‘ಹೌದು’ ಎನ್ನುವ ಉತ್ತರ ನೀಡಬೇಕಾಗಿದೆ. ೧೯೯೫ರ ಕಾಯಿದೆಯ ಪ್ರಕಾರ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ದಾನ-ಧರ್ಮದ ಉದ್ದೇಶಕ್ಕಾಗಿ ಮುಸ್ಲಿಂ ಸಮುದಾಯದ ವ್ಯಕ್ತಿ,
ಅ ಹೆಸರಲ್ಲಿ ನೀಡಿರುವ ಭೂಮಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇದರ ಮೂಲ ಉದ್ದೇಶ ಮುಸ್ಲಿಂ ಸಮುದಾಯದ ಶ್ರೀಮಂತ ವ್ಯಕ್ತಿ ತನ್ನಲ್ಲಿರುವ ಆಸ್ತಿಯನ್ನು ಸಮುದಾಯದ ಬಡವರಿಗೆ ಅಥವಾ ಮುಸ್ಲಿಂ ಧರ್ಮದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲು ನೀಡುವುದಾಗಿದೆ.
ಆದ್ದರಿಂದ ವಕ್ ಆಸ್ತಿಯನ್ನು ಅ ಹೆಸರಲ್ಲಿಯೇ ನೋಂದಣಿ ಮಾಡಲಾಗುತ್ತದೆ. ಒಮ್ಮೆ ಈ ರೀತಿ ಭೂಮಿಯನ್ನು ದಾನ ಮಾಡಿದ ಬಳಿಕ ಈ ಆಸ್ತಿ ಆಯಾ ರಾಜ್ಯದ ವಕ್ಫ್ ಬೋರ್ಡ್ ಸ್ವಾಧೀನಕ್ಕೆ ಬರುತ್ತದೆ. ಅಲ್ಲಿನ ಬೋರ್ಡ್‌ಗಳು ಸಮುದಾಯದ ಕೆಲಸದಲ್ಲಿ ತೊಡಗಿಸಿಕೊಳ್ಳುವವರಿಗೆ ದಾನ, ವರ್ಗಾವಣೆ ಅಥವಾ ಲೀಸ್ ರೂಪದಲ್ಲಿ ನಿರ್ದಿಷ್ಟ ಮೊತ್ತಕ್ಕೆ ನೀಡಬಹುದು.

ಈ ಆಸ್ತಿಯಿಂದ ಬರುವ ಹಣವನ್ನು ಶೈಕ್ಷಣಿಕ ಕಾರ್ಯಗಳಿಗೆ, ಮಸೀದಿಯ ಅಭಿವೃದ್ಧಿಗೆ ಬಳಸಬೇಕೆಂದು ಕಾಯಿದೆಯಲ್ಲಿದೆ. ಆದರೆ ಈ ಆಸ್ತಿಯ ಮೇಲೆ ಯಾವುದೇ ಕಾರಣಕ್ಕೂ ಯಾರೂ ಹಕ್ಕು ಸಾಧಿಸುವಂತಿಲ್ಲ. ಈ ಕಾನೂನಿನನ್ವಯ ಇಡೀ ದೇಶದಲ್ಲಿ ಸುಮಾರು ೮.೭ ಲಕ್ಷ ಆಸ್ತಿಗಳಿದ್ದು, ಇದರ ವಿಸ್ತೀರ್ಣ ೯.೪ ಲಕ್ಷ ಎಕರೆಯಾಗುತ್ತದೆ. ಈ ಎಲ್ಲ ಆಸ್ತಿಯ ಮೌಲ್ಯ ೧.೨ ಲಕ್ಷ ಕೋಟಿ ರು. ಆಗುತ್ತದೆ ಎನ್ನುವ ಅಂಕಿ-ಅಂಶವನ್ನು ಕೇಂದ್ರ ಸರಕಾರ ನೀಡಿದೆ. ಈ ಕಾಯಿದೆಯಲ್ಲಿ ಉತ್ತರ ಪ್ರದೇಶ ಒಂದರಲ್ಲಿಯೇ ಸುಮಾರು ೧.೨೪ ಲಕ್ಷ ಆಸ್ತಿಗಳಿವೆ. ಕರ್ನಾಟಕದಲ್ಲಿ ೪೭,೩೬೨ ವಕ್ಫ್
ಆಸ್ತಿಗಳಿದ್ದು, ಇವುಗಳ ಒಟ್ಟು ವಿಸ್ತೀರ್ಣ ೧,೧೦,೩೯೯ ಎಕರೆ ಎಂದು ಹೇಳಲಾಗಿದೆ.

ಈ ಪ್ರಮಾಣದಲ್ಲಿ ಆಸ್ತಿ ಹೊಂದಿರುವ ವಕ್ಫ್ ಬೋರ್ಡ್ ವಿರುದ್ಧ ಇರುವ ಬಹುದೊಡ್ಡ ಆರೋಪವೆಂದರೆ, ಸಮುದಾಯದ ಬಡವರಿಗೆ ಅಥವಾ ಸರ್ವಾಂಗೀಣ ಅಭಿವೃದ್ಧಿಗೆ ಬಳಸಬೇಕಾದ ಈ ಆಸ್ತಿಯನ್ನು, ಮುಸ್ಲಿಂ ಸಮುದಾಯದ ಕೆಲವೇ ಕೆಲವು ಪಟ್ಟಭದ್ರರ ಕೈಗೆ ಸಿಗುವಂತೆ ಮಾಡಿದೆ ಎನ್ನುವುದು. ಈ ಕಾರಣಕ್ಕಾಗಿಯೇ ನಮ್ಮ ಸರಕಾರದ ಅವಧಿಯಲ್ಲಿ ಅನ್ವರ್ ಮನಪ್ಪಾಡಿ ಅವರ ನೇತೃತ್ವದಲ್ಲಿ ವಕ್ಫ್ ಬೋರ್ಡ್‌ನಲ್ಲಿ ಆಗಿರುವ
ಅಕ್ರಮದ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಲಾಯಿತು.

ಮನಪ್ಪಾಡಿ ಅವರ ವರದಿಯಲ್ಲಿ ಸುಮಾರು ೫೦ ಸಾವಿರ ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿ ಅಕ್ರಮವಾಗಿ ವರ್ಗಾಯಿಸಲಾಗಿದೆ ಎನ್ನುವ ಗಂಭೀರ ಆರೋಪವಿದೆ. ವಿಪರ್ಯಾಸವೆಂದರೆ, ಈ ವರದಿ ನೀಡಿ ದಶಕ ಕಳೆದರೂ, ವರದಿಯ ಆಧಾರದಲ್ಲಿ ಕ್ರಮವಹಿಸುವಲ್ಲಿ ಪಕ್ಷಾತೀತವಾಗಿ ಎಲ್ಲ ಸರಕಾರಗಳು ವಿಫಲವಾಗಿದೆ.

ಮೊದಲೇ ಹೇಳಿದಂತೆ ವಕ್‌ನ ಆಸ್ತಿಯ ಸುತ್ತ ಮುಸ್ಲಿಂ ಸಮುದಾಯದ ಕೆಲವೇ ಕೆಲವು ಬಲಾಢ್ಯ ಕುಟುಂಬಗಳ ಕಬಂಧಬಾಹುಗಳಿವೆ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಖಮರುಲ್ಲಾ ಇಸ್ಲಾಂ, ಜಾಫರ್ ಷರೀಫ್, ಸಿ.ಎಂ.ಇಬ್ರಾಹಿಂ, ರೋಷನ್ ಬೇಗ್, ಎನ್.ಎ.ಹ್ಯಾರಿಸ್, ರೆಹ್ಮಾನ್ ಖಾನ್, ಇಕ್ಬಾಲ್ ಅನ್ಸಾರಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಹೆಸರಲ್ಲಿ ಅಥವಾ ಅವರ ಕುಟುಂಬ ಸದಸ್ಯರ ಹೆಸರಲ್ಲಿ ಸಾವಿರಾರು ಕೋಟಿ ರು. ಆಸ್ತಿಯಿರುವುದು ದಾಖಲೆಗಳಿಂದ ಸಾಬೀತಾಗಿದೆ. ಈ ಎಲ್ಲ ಆಸ್ತಿಗೂ ಒಂದೊಂದು ಕಾರಣ ನೀಡಿ, ಲೀಸ್‌ಗೆಂದು
ಪಡೆದುಕೊಂಡು ಬಳಿಕ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರೂ ಯಾವೊಬ್ಬ ಮುಸ್ಲಿಂ ನಾಯಕರೂ ಈ ಬಗ್ಗೆ ಪ್ರಶ್ನೆ ಎತ್ತದಿರುವುದು ವಿಪರ್ಯಾಸ.

ಆದರೆ ಈ ಪೈಕಿ ಅನೇಕ ಆಸ್ತಿಗಳನ್ನು ಕೆಲ ಬಲಾಢ್ಯರು ಅಕ್ರಮವಾಗಿ ಅಥವಾ ತೀರಾ ಕಡಿಮೆ ಬೆಲೆಗೆ ಒತ್ತುವರಿ ಮಾಡಿಕೊಂಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಆದರೆ ವಕ್ ಕಾನೂನಿನಲ್ಲಿ ವಕ್ಫ್ಮಂಡಳಿಗಳು ದೇಶದ ಯಾವುದೇ ಭಾಗದ ಜಮೀನನ್ನು ತಮ್ಮ ಜಮೀನು ಎಂದು ಘೋಷಿಸಿಕೊಳ್ಳಲು ಈ ಹಿಂದೆ ಅವಕಾಶವಿತ್ತು. ಆದರೀಗ ಕೇಂದ್ರ ಸರಕಾರ ತರಲು ಹೊರಟಿರುವ ತಿದ್ದುಪಡಿ ಕಾಯಿದೆಯಲ್ಲಿ ಆಸ್ತಿಯನ್ನು
ಘೋಷಿಸಿಕೊಳ್ಳುವುದಕ್ಕೆ ನಿರ್ದಿಷ್ಟ ಕಾರಣ ಹಾಗೂ ದಾಖಲೆಗಳನ್ನು ಒದಗಿಸಬೇಕು ಹಾಗೂ ಆಸ್ತಿಯನ್ನು ವಕ್ಫ್ ಗೆ ನೀಡಿದ್ದರೂ, ಮಾಲೀಕತ್ವದ ಬಗ್ಗೆ ಸ್ಥಳೀಯ ಜಿಽಕಾರಿಗಳು ಕ್ರಮವಹಿಸಬೇಕಿದೆ. ಇದರೊಂದಿಗೆ ಈವರೆಗೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರಿಗೆ ಅವಕಾಶವಿರಲಿಲ್ಲ, ಆದರೀಗ ಮುಸ್ಲಿಮೇತರ ಸದಸ್ಯರನ್ನೂ ಸೇರಿಸಬೇಕು ಎನ್ನುವ ಅಂಶವನ್ನು ತಿದ್ದುಪಡಿ ಕಾಯಿದೆಯಲ್ಲಿ ಸೇರಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ.

ವಕ್ಫ್ ನ ಈ ಸರ್ವಾಽಕಾರಿ ಧೋರಣೆಗೆ ಕೊಕ್ಕೆ ಹಾಕಲು ಕೇಂದ್ರ ಸರಕಾರ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವುದು ಸ್ವಾಗತಾರ್ಹ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವುದು ಉತ್ತಮ ಸಂಗತಿ. ಆದರೆ ತಿದ್ದುಪಡಿಯಾಗುವ ಹೊಸ್ತಿಲಲ್ಲಿಯೇ, ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಈ ಸಮಸ್ಯೆ ಗಾಬರಿ ಹುಟ್ಟಿಸುವ ವಿಷಯವಾಗಿದೆ. ಮುಸ್ಲಿಂ ಸಮುದಾಯದ ಅಭಿವೃದ್ಧಿ, ಶಿಕ್ಷಣಕ್ಕೆಂದು ಮೀಸಲಿರುವ ವಕ್ಫ್ ಆಸ್ತಿ ಎನ್ನುವ ಈ ಕಾಯಿದೆ ಖಟ್ಟರ್ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಇಲ್ಲ. ಟರ್ಕಿ, ಲಿಬಿಯಾ, ಸುಡಾನ್, ಇರಾಕ್‌ನಂಥ ಮುಸ್ಲಿಂ ರಾಷ್ಟ್ರಗಳಲ್ಲಿ ವಕ್ಫ್ ಎನ್ನುವ ಪರಿಕಲ್ಪನೆ ಇಲ್ಲದಿರುವಾಗ ಭಾರತದಲ್ಲಿ ಈ ಕಾಯಿದೆಯ ಅಗತ್ಯವೇನಿದೆ? ಈ ಹಿಂದೆ ಅಲ್ಪಸಂಖ್ಯಾತರ ಓಲೈಕೆಗೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಾಡಿರುವ ಈ ಕಾಯಿದೆಯಿಂದಾಗಿರುವ ಎಡವಟ್ಟುಗಳು ಜಗಜ್ಜಾಹೀರವಾದ ಬಳಿಕವೂ ಈ ಕಾಯಿದೆಯನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆಯೇ ಎನ್ನುವುದು ಈಗಿರುವ ಪ್ರಶ್ನೆ.

ಕೊನೆಯದಾಗಿ, ಈಗ ಶುರುವಾಗಿರುವ ಈ ವಕ್ಫ್ ನೋಟಿಸ್ ಎನ್ನುವ ವಂಚನೆಯ ಬಿಸಿ ತಟ್ಟಿಲ್ಲವೆಂದು ಅನೇಕರು ಸುಮ್ಮನಿದ್ದಾರೆ. ಆದರೆ ನಿಮಗೆ ತಿಳಿಯದೇ ನಿಮ್ಮ ಬಂಗಾರದಂಥ ಭೂಮಿಯ ಮೇಲೆ ವಕ್ಫ್ ನ ಕರಿನೆರಳು ಬಿದ್ದಿದೆಯೇ ಎಂದು ಪರಿಶೀಲಿಸಿಕೊಳ್ಳುವುದು ಉತ್ತಮ. ಇಂದು ಅದು ಕರಿನೆರಳು ಬೀರದಿದ್ದರೂ, ಮುಂದೊಂದು ದಿನ ಬೀರುವುದೇ ಇಲ್ಲ ಎಂಬ ಭಂಡ ಧೈರ್ಯದಲ್ಲಿ ಯಾರಾದರೂದ್ದರೆ ಅದು ಅವರ ಮೂರ್ಖತನ. ಸನಾತನ ಭಾರತದಲ್ಲಿ ಹಿಂದೂ ರೈತರ ಮೇಲೆ, ದೇವಾಲಯದ ಆಸ್ತಿಯ ಮೇಲೆ ವಕ್ಫ್ ಬೋರ್ಡ್ ಮಾಡುತ್ತಿರುವ ‘ಭೂ ಜಿಹಾದಿ’ಗೊಂದು ಅಂತಿಮ ಮೊಳೆ ಹೊಡೆಯುವ ಅಗತ್ಯವಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಕಾಯಿದೆಯಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಸೇರಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳ ಆಸ್ತಿಗೆ ರಕ್ಷಣೆ ನೀಡಬೇಕಿದೆ. ಇಲ್ಲದಿದ್ದರೆ ಮುಂದೊಂದು ದಿನ ಇಡೀ ದೇಶವೇ
ತನ್ನ ಆಸ್ತಿ ಎನ್ನುವ ‘ಹುಂಬತನ’ವನ್ನು ವಕ್ಫ್ ಬೋರ್ಡ್ ಪ್ರದರ್ಶಿಸಿದರೂ ಅಚ್ಚರಿಪಡಬೇಕಿಲ್ಲ.

(ಲೇಖಕರು ಮಾಜಿ ಶಾಸಕರು ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವರು)

ಇದನ್ನೂ ಓದಿ: WaqfAmendmentAct2024