Thursday, 28th November 2024

ಅಜಾತ ಶತ್ರು- ಅಟಲ್ ಬಿಹಾರಿ ವಾಜಪೇಯಿ

ತನ್ನಿಮಿತ್ತ

ಪ್ರಕಾಶ ತದಡಿಕರ

(ವಾಜಪೇಯಿ ಪುಣ್ಯಸ್ಮರಣೆ)

ಭಾರತದ ರಾಜಕೀಯ ಬಾನಂಗಣದ ದೃವತಾರೆ ಅಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ, ಕವಿಹೃದಯದ ಸಾಮ್ರಾಟ, ನವ ಭಾರತದ ಹರಿಕಾರ ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾನವೀಯ ಅಂತಃಕರಣದ ಜನಾನುರಾಗಿಯಾಗಿ
ಕೋಟ್ಯಂತರ ಭಾರತೀಯರ ಹೃದಯದಲ್ಲಿ ಇಂದಿಗೂ ನೆಲೆಸಿದ್ದಾರೆ.

ನಮ್ಮ ದೇಶದ ಸುಕೃತ ಫಲವೋ ಏನೋ ಭಾರತ ಮಾತೆಯ ಮಡಿಲಲ್ಲಿ ವಾಜಪೇಯಿಯಂತಹ ಭಾವ ಜೀವಿ, ಹಿಂದುಸ್ಥಾನವು ಎಂದು ಮರೆಯದ ಭಾರತ
ರತ್ನ, ಅಪ್ಪಟ ರಾಷ್ಟ್ರಪ್ರೇಮಿ, ಅತ್ಯುತ್ತಮ ಸಂಸದೀಯ ಪಟು, ಅಪ್ರತಿಮ ವಾಗ್ಮಿ ,ವಿಶ್ವ ಕಂಡ ಅತ್ಯುತ್ತಮ ನಾಯಕ, ಕವಿ ಹೃದಯದ ಭಾವಜೀವಿ, ಶಾಂತಿಧೂತ, ಹೆಸರಾಂತ ಪತ್ರಕರ್ತ, ಚಿಂತಕ ಅಂತಃಕರಣದ ಹೃದಯವಂತ ಹುಟ್ಟಿ ಭಾರತದ ರತ್ನವಾಗಿಯೇ ಬಾಳಿ ಬದುಕಿದರು. ರಾಜಕೀಯದಲ್ಲಿ
ಬಹುಕಾಲದಿಂದ ಸಕ್ರಿಯರಾಜಕಾರಣಿಯಾಗಿ ತಮ್ಮ ಅಪೂರ್ವ ಯೋಗದಾನವನ್ನು ನೀಡಿದ ಭಾರತೀಯ ರಾಜಕಾರಣದ ಭೀಷ್ಮ ಪಿತಾಮಹ ಎಂದು ಕರೆಯಲ್ಪಡುವ ಅಟಲ್ ಬಿಹಾರಿ ವಾಜಪೇಯಿ ಆಗ ೧೬, ೨೦೧೮ರಂದು ೯೩ನೇ ವಯಸ್ಸಿನಲ್ಲಿ ಅಸ್ತಂಗತರಾದರು.

ಅಟಲ್ ಬಿಹಾರಿ ವಾಜಪೇಯಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಡಿಸೆಂಬರ್ ೨೫, ೧೯೨೪ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ
ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದರು. ತಂದೆ ಒಬ್ಬ ಕವಿ ಮತ್ತು
ಶಾಲೆಯ ಸಾಮಾನ್ಯ ಶಿಕ್ಷಕರಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಗ್ವಾಲಿಯರ್‌ನ ಸರಸ್ವತಿ ಶಿಶು ಮಂದಿರ ದಲ್ಲಿ ಪಡೆದ ಅಟಲ್ ಜೀ ಅವರು ವಿಕ್ಟೋರಿಯಾ
ಕಾಲೇಜಿನಲ್ಲಿ (ಈಗ ಲಕ್ಷ್ಮಿ ಬಾಯಿ ಕಾಲೇಜು) ಅಧ್ಯಯನ ಮಾಡಿ ಪದವಿಯನ್ನು ಪಡೆದರು.

ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷಾ ಪ್ರೌಢಿಮೆ ಬೆಳೆಸಿದ್ದ ವಾಜಪೇಯಿ ಅವರು ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದಿದ್ದರು.೧೯೩೯ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಸ್ವಯಂಸೇವಕರಾಗಿ ಸೇರ್ಪಡೆಗೊಂಡ ವಾಜಪೇಯಿ ಅವರು ಆರೆಸ್ಸೆಸ್ ಹಿರಿಯ ಮುಖಂಡ ಬಾಬಾ ಸಾಹೇಬ್ ಆಪ್ಟೆ(ಉಮಾಕಾಂತ್ ಕೇಶವ್ ಆಪ್ಟೆ) ಅವರಿಂದ ಪ್ರಭಾವಿತರಾಗಿ ೧೯೪೦-೪೪ ರವರೆಗೆ ಆರೆಸ್ಸೆಸ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ನಂತರ ಪೂರ್ಣಾವಧಿ ಕಾರ್ಯಕರ್ತರಾದರು. ಅವರು ಹಿಂದಿ ಮಾಸಿಕ ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್ ಮತ್ತು ವೀರ್ ಅರ್ಜುನ್ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

೧೯೪೨ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿದ್ದ ವಾಜಪೇಯಿ ಅವರು ತಮ್ಮ ವೃತ್ತಿಜೀವನವನ್ನು ರಾಜಕೀಯದಲ್ಲಿ
ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಾರಂಭಿಸಿ ಬ್ರಿಟಿಷರ ವಿರುದ್ಧ ಭಾರತೀಯರು ನಡೆಸುತ್ತಿದ್ದ ಹೋರಾಟ ಸಂದರ್ಭದಲ್ಲಿ ಅಟಲ್ ಕೂಡ ಸಂಗ್ರಾಮಕ್ಕೆ ಧುಮುಕಿದರು. ಅಲ್ಲಿಂದ ಆರಂಭವಾಯಿತು ಅಟಲ್ ಜಿ ಅವರ ರಾಜಕೀಯ ಜೀವನ. ನಂತರ ಅವರು ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ನೇತೃತ್ವದಲ್ಲಿ ಹಿಂದುತ್ವ ಜಾಗೃತಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನೆಯಾದ ಹಿಂದೂ ಬಲಪಂಥೀಯ ರಾಜಕೀಯ ಪಕ್ಷವಾದ ಭಾರತೀಯ ಜನ ಸಂಘ (ಬಿಜೆಎಸ್) ಕ್ಕೆ ಸೇರಿದರು.ಭಾರತೀಯ ರಾಷ್ಟ್ರ ರಾಜಕಾರಣದಲ್ಲಿ ಸಭ್ಯ, ಗೌರವಾನ್ವಿತ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರು ೧೯೭೭ ರಲ್ಲಿ ಜನತಾ ಸಂಘದ ಮೊದಲ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ ಅವರಿಗೆ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂದರ್ಭದಲ್ಲಿ ಅಮೆರಿಕದ ಅಸೆಂಬ್ಲಿ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ದಾಖಲೆ ಬರೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸ್ಥಾಪಿತ ಭಾರತೀಯ ಜನ ಸಂಘ ೧೯೮೦ರಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಭೈರಾನ್ ಸಿಂಗ್ ಶೆಖಾವತ್ ಸೇರಿದಂತೆ ಜನಸಂಘ ಮತ್ತು ಆರೆಸ್ಸೆಸ್‌ನ ಹಲವು ಸಹೋ
ದ್ಯೋಗಿಗಳನ್ನು ಒಂದೆಡೆ ಸೇರಿಸಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ, ಏಕಾತ್ಮ ಮಾನವತಾವಾದ ಹಾಗೂ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡು ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡಿತು. ಈ ಮೂಲಕ ‘ಭಾರತೀಯ ಜನತಾ ಪಕ್ಷ’ (ಬಿಜೆಪಿ) ಸ್ಥಾಪನೆಯಾಯಿತು.

ಬಿಜೆಪಿಯ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದ ವಾಜಪೇಯಿ ಅವರು ತಮ್ಮ ಅತ್ಯುತ್ತಮ ಮಾತುಗಾರಿಕೆ, ಸರಳತೆಯಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಪಡೆದರು. ವಾಜಪೇಯಿ ಅವರು ೧೯೫೭ ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಬಲರಾಂಪುರ್‌ನಿಂದ ಚುನಾಯಿತರಾದರು.ಅವರು ೧೯೬೮ರಲ್ಲಿ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾದರು. ೧೯೯೧, ೧೯೯೬, ೧೯೯೮, ೧೯೯೯ ಹಾಗೂ ೨೦೦೪ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆ ಆಗಿದ್ದ ಅವರು ಲೋಕಸಭೆಗೆ ಹತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ಉತ್ತಮ ಸೇವೆಸಲ್ಲಿಸಿದ್ದ ಅವರಿಗೆ ೧೯೯೪ ರಲ್ಲಿ ಉತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿ ಕೂಡ ಲಭಿಸಿತ್ತು.೧೯೯೬ ರ ಮೇ ತಿಂಗಳಿನಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಸತತ ನಾಲ್ಕು ದಶಕಗಳ ಕಾಲ ವಿಪಕ್ಷ ಸ್ಥಾನದಲ್ಲಿದ್ದ ವಾಜಪೇಯಿ ಅವರು ೧೯೯೬ರಲ್ಲಿ ಪ್ರಥಮ ಬಾರಿಗೆ ಭಾರತದ ೧೦ನೇ ಪ್ರಧಾನಿ ಯಾಗಿ ಅಧಿಕಾರ ಸ್ವೀಕರಿಸಿದರು.

ಆದರೆ ಬಹುಮತದ ಕೊರತೆಯಿಂದಾಗಿ ಕೇವಲ ೧೩ ದಿನಗಳ ರಾಜೀನಾಮೆ ನೀಡಬೇಕಾಯ್ತು. ನಂತರ ೧೯೯೮ರಲ್ಲಿ ಮತ್ತೆ ನಡೆದ ಚುನಾವಣೆಯಲ್ಲಿ ಮತ್ತೆ
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ೧೯೯೯ ರವರೆಗೂ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಎಐಎಡಿಎಂಕೆ ಪಕ್ಷವು ಬೆಂಬಲ ವಾಪಸ್
ಪಡೆದ ಪರಿಣಾಮ ಕೇವಲ ೧೩ ತಿಂಗಳುಗಳ ಆಡಳಿತ ನಡೆಸಿ ರಾಜೀನಾಮೆ ನೀಡಬೇಕಾಯ್ತು. ೧೯೯೯ ರಲ್ಲಿ ನಡೆದ ಚುನಾವಣೆಯಲ್ಲಿ ೩೦೩ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಅಸ್ತಿತ್ವಕ್ಕೆ ಬಂದು ವಾಜಪೇಯಿ ನೇತೃತ್ವದಲ್ಲಿ ಎನ್‌ಡಿಎ ಮಿತ್ರಕೂಟ ಪೂರ್ಣಾವಧಿಯ ಅಧಿಕಾರ ನಡೆಸಿತು.

೧೯೯೮ ರಿಂದ ೨೦೦೪ ರವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ದೇಶದ ಅಭಿವೃದ್ಧಿಗೆ ಭದ್ರ ಬುನಾದಿಹಾಕಿ ದೇಶದ ವಿದೇಶ ನೀತಿಗೆ ಹೊಸ ದಿಸೆ ನೀಡಲು ವ್ಯವಸ್ಥಿತವಾಗಿ ಶ್ರಮಿಸಿದ, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಸಮರ್ಥ ಜನನಾಯಕ. ಕಾಂಗ್ರೆಸ್ಸೇತರ ಸರಕಾರದಲ್ಲಿ ಪ್ರಧಾನಿಯಾಗಿ ಐದು ವರ್ಷ ಪೂರ್ಣಾವಽ ಪೂರೈಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಅಟಲ್ ಬಿಹಾರಿ ವಾಜಪೇಯಿ ಅವರದು.

ಭಾರತದ ದೀರ್ಘಕಾಲೀನ ರಕ್ಷ ಣಾ ಅಗತ್ಯಗಳತ್ತ ಗಮನ ಹರಿಸಿದ ಪ್ರಧಾನಿ ವಾಜಪೇಯಿ ಅವರು ರಕ್ಷ ಣಾ ನೀತಿಗಳಿಗೆ ಸಂಬಂಧಿಸಿದಂತೆ ಕೆಗೊಂಡ
ಕ್ರಮಗಳು ಅವರ ವಜ್ರದಷ್ಟು ದೃಢ ಮನಸ್ಸು ಮತ್ತು ರಾಷ್ಟ್ರ ರಕ್ಷಣೆಯ ಅತೀವ ಇಚ್ಛೆಯ ಪ್ರತೀಕವಾಗಿದ್ದು ರಾಷ್ಟ್ರನಿಷ್ಠೆ, ವಿವೇಕ, ದೂರದರ್ಶಿತ್ವ ಹಾಗೂ ಕತೃತ್ವ ಶಕ್ತಿಗೆ ಸಾಕ್ಷಿಯಾಗಿದೆ .ಮೇ ೧೯೯೮ರಂದು ಯಶಸ್ವಿಯಾಗಿ ಪೋಖ್ರಾನ್-೨ ಅಣ್ವಸ ಪರೀಕ್ಷೆಗಳನ್ನು ಮಾಡುವ ಮೂಲ ವಿಜಯ ಪತಾಕೆಯನ್ನು ಹಾರಿಸಿ, ಇಡೀ ಜಗತ್ತೂ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡಿ ದೇಶದ ರಕ್ಷಣೆ ವಿಷಯದಲ್ಲಿ ನಿಖರ ನಿರ್ಣಯವೊಂದನ್ನು ಕೆಗೊಳ್ಳಲು ಭಾರತ ಸಮರ್ಥ ಎಂಬುದನ್ನು ವಾಜಪೇಯಿ ಅವರು ತೋರಿಸಿಕೊಟ್ಟರು. ಭಾರತದ ಅಣ್ವಸ್ತ್ರ ಪರೀಕ್ಷೆಯಿಂದಾಗಿ ಹಲವಾರು ಬಲಿಷ್ಠ ರಾಷ್ಟ್ರಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿಸಿದರು. ವಾಜಪೇಯಿ ಅವರು ತಮ್ಮ ನೇತೃತ್ವದಲ್ಲಿ ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿ ಇಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಬಗೆಹರಿಸಿದ್ದನ್ನು ಅಂತರಾಷ್ಟ್ರೀಯ ನಾಯಕರೂ ಕೊಂಡಾಡಿದರು.

೧೯೯೯ರಲ್ಲಿ ಮೇ ಮತ್ತು ಜುಲೈ ನಡುವೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು ಈ ಸಮಯ ದಲ್ಲೂ ಕೂಡ ವಾಜಪೇಯಿ ಅವರು ಅದೇ ಕೆಚ್ಚೆದೆಯನ್ನು ತೋರಿಸಿದರು. ವೆರಿಸೇನೆಯನ್ನು ಬಡಿದಟ್ಟಲು ದಿಟ್ಟ ಕ್ರಮ ಕೈಗೊಂಡು ಭಾರತೀಯ ಸೇನೆಯನ್ನು ಹುರಿದುಂಬಿಸಿ ಗೆಲ್ಲುವಂತೆ ಮಾಡಿದ ಕೀರ್ತಿ ಸಹ ರಾಜಕೀಯ ಮುತ್ಸದ್ಧಿ ವಾಜಪೇಯಿ ಅವರದು. ಈ ಯುದ್ಧ ಪ್ರಧಾನ ಮಂತ್ರಿ ವಾಜಪೇಯಿ ಯವರ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು. ಪಾಕಿಸ್ತಾನಕ್ಕೆ ಕಾರ್ಗಿಲ್ ಯುದ್ಧದ ಮೂಲಕ ಪಾಠ ಕಲಿಸಿದ್ದು ಅವರ ಸಾಧನೆಗಳಂದು. ಪ್ರಧಾನಿಯಾಗಿ ಅಟಲ್ ಜಿ ಯವರ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳು ಶ್ಲಾಘನೀಯ.

೧೯೯೯-೨೦೦೪ ಅವಽಯಲ್ಲಿ ಆರ್ಥಿಕತೆ, ತೆರಿಗೆ ಪದ್ಧತಿ, ಮೂಲ ಸೌಕರ್ಯ ಅಭಿವೃದ್ಧಿಗೆ ತೆಗೆದುಕೊಂಡ ಕ್ರಮಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಉದಾರವಾದಿ ವಾಜಪೇಯಿ ನೀಡಿದ ಕೊಡುಗೆ. ಭ್ರಷ್ಟಾಚಾರ ರಹಿತ ಆಡಳಿತ, ಸರ್ವ ಶಿಕ್ಷಾ ಅಭಿಯಾನ, ಹೊಸ ಟೆಲಿಕಾಂ ನೀತಿ, ರಾಷ್ಟ್ರೀಯ ಹೆzರಿ
ಪ್ರಾಽಕಾರದ ಸ್ಥಾಪನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಹಲವು ಯಶಸ್ವಿ ಯೋಜನೆಗಳ ರೂವಾರಿ ಅಟಲ್ ಜಿ ಅವರ ದೂರ
ದೃಷ್ಟಿತ್ವದ -ಲವಾಗಿವೆ. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ ೧೫ ಸಾವಿರ ಕಿ.ಮೀ. ಉದ್ದದ ಸುವರ್ಣ ಚತುಷ್ಪಥ ಹೆzರಿಯನ್ನು
ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು.

ಅಲ್ಲದೆ ಕ್ಷಿಪಣಿ ನಿರೋಧಕ ರಕ್ಷಾ ಕವಚವನ್ನು ಭೇದಿಸುವ ಶಬ್ದಾತೀತ ವೇಗದಲ್ಲಿ ಕ್ರಮಿಸಿ ವೈರಿಯ ಹುಟ್ಟಡಗಿಸುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ರಷ್ಯಾ ಜೊತೆಗೂಡಿ ರೂಪುಗೊಂಡಿದ್ದು ಅಟಲ್ ಅವರ ಆಡಳಿತದಲ್ಲಿ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ
ಅವರ ಅಧಿಕಾರವಧಿಯ ಕಾಲವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು. ವಿತ್ತೀಯ ಕೊರತೆ ನೀಗಿಸಲು ಜಾರಿಗೆ ತಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಜಾರಿಗೆ ತಂದ ಹೆಗ್ಗಳಿಕೆ ವಾಜಪೇಯಿ ಅವರಿಗೆ ಸಲ್ಲುತ್ತದೆ. ಹಣಕಾಸು ನಿರ್ವಹಣೆಯಲ್ಲಿ ಶಿಸ್ತು, ಬದ್ಧತೆ ಮತ್ತು ಉತ್ತರದಾಯಿತ್ವ ಈ ಕಾಯ್ದೆಯ
ಆಶಯವಾಗಿದ್ದು ಈ ಕಾಯ್ದೆ ಯಿಂದಾಗಿಯೇ ದೇಶದ ಆರ್ಥಿಕತೆ ಶಿಸ್ತು ಕಾಯ್ದು ಕೊಂಡುಮುಂದುವರೆದಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಽಯ ದೇಶದ ಜಿಡಿಪಿ ಶೇ.೬ -೭ರಷ್ಟು ದಾಟಿತು. ಹಣದುಬ್ಬರ ನಿಯಂತ್ರಣಕ್ಕೆ ಬಂದು ವಿವಿಧ ಸಾಲಗಳ ಮೇಲಿನ ಬಡ್ಡಿದರವು ಕನಿಷ್ಠ ಮಟ್ಟಕ್ಕೆ ಇಳಿಯಿತು. ಗೃಹಸಾಲ ಶೇ ೭.೫ ಕ್ಕೆ ತಗ್ಗಿ ಬಹುತೇಕ ಮಧ್ಯಮ ವರ್ಗದವರ ಸ್ವಂತ ಮನೆಯ ಕನಸು ನನಸಾಯಿತು. ಮೊಬೈಲ್ ಮಾರುಕಟ್ಟೆ ಖಾಸಗಿಯವರಿಗೆ ಮುಕ್ತವಾದ ನಂತರ ಹತ್ತಕ್ಕೂ ಹೆಚ್ಚು ಕಂಪನಿಗಳು ಮೊಬೈಲ್ ಸೇವೆ ಒದಗಿಸಲಾರಂಭಿಸಿ ದುಬಾರಿ ಕರೆ ದರವನ್ನು ಇಳಿಸಿದವು ಹಾಗೂ ಎಸ್ಟಿಡಿ ಕರೆಗಳೂ ಸಹ ಸ್ಥಳೀಯ ಕರೆಗಳ ದರಕ್ಕೆ ಇಳಿದವು. ೧೯೯೯ ರಲ್ಲಿ ಜಾರಿಗೆ ತಂದ ದೂರ ಸಂಪರ್ಕ ನೀತಿಯು ದೇಶದಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿತು. ಈ ಎಲ್ಲ ಅಗಾಧ ಪರಿವರ್ತನೆಯ ಕ್ರೆಡಿಟ್ ವಾಜಪೇಯಿ ಅವರಿಗೆ ಸಲ್ಲುತ್ತದೆ. ಅವರೊಬ್ಬಕ್ರಾಂತಿಕಾರಕ ಆರ್ಥಿಕ ಸುಧಾರಣೆಯ ರೂವಾರಿ ಮತ್ತು ಶಕಿ ಭಾವಜೀವಿಯಾಗಿದ್ದ ವಾಜಪೇಯಿ ಅವರು ಕವಿತೆಗಳ ಮೂಲಕ ಸಾಹಿತ್ಯ ಪ್ರೇಮಿಯೂ ಆಗಿದ್ದು
ಮೇರಿ ಎಕ್ಯಾವನ್ ಕವಿತಾಂಯೇ, ಶ್ರೇಷ್ಠ ಕವಿತಾ, ನಯೀ ದಿಶಾ, ಕ್ಯಾ ಕೋಯಾ ಕ್ಯಾ ಪಾಯಾ, ಸಂವೇದನಾ ಅವರ ಕೆಲವು ಕವಿತಾ ಸಂಕಲನಗಳು.
ಅಟಲ್ ಜೀ ಬರೆದ ಪುಸ್ತಕಗಳು ಅನೇಕ.. ಹಾಗೆಯೇ ಅವರಿಗೆ ಅರಸಿ ಬಂದ ಪ್ರಶಸ್ತಿಗಳೂ ಅಷ್ಟೇ.

೧೯೯೨ ರಲ್ಲಿ ಪದ್ಮ ವಿಭೂಷಣ, ೧೯೯೪ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, ೧೯೯೪ರಲ್ಲಿ ಉತ್ತಮ ರಾಜಕೀಯ ಪಟು ಗೌರವ, ಹಾಗೂ ೧೯೯೪ರ ಪಂಡಿತ್
ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ ೨೦೧೫ ರಲ್ಲಿಭಾರತ ರತ್ನ ಪ್ರಶಸ್ತಿ ೨೦೧೫ ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿಗಳು ಮುಖ್ಯವಾದವು. ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ರಾಷ್ಟ್ರ ಕಂಡ ಅತ್ಯಂತ ಶ್ರೇಷ್ಟ ಪ್ರಧಾನಿ. ಭಾರತದ ಅದಮ್ಯ ಚೇತನ. ಭಾರತ ಮಾತೆಯ ಹೆಮ್ಮೆಯ ಪುತ್ರ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ಇಂತಹ ಸರ್ವ ಜನಪ್ರಿಯ ಅಮೋಘ ಶಕ್ತಿಯನ್ನು ಕಳೆದುಕೊಂಡ ದೇಶಕ್ಕೆ ಭರಿಸಲಾರದ ನಷ್ಟವಾಗಿದೆ.

ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ವಾಜಪೇಯಿ ಅವರು ಈಗ ನಮ್ಮನ್ನಗಲಿದ್ದರೂ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದಿzರೆ. ಅಟಲ್ ಬಿಹಾರಿ ವಾಜ
ಪೇಯಿ ಅವರ ನೆನಪು ಎಂದಿಗೂ ಶಾಶ್ವತವಾಗಿರುತ್ತದೆ. ಕವಿ ಹೃದಯಿ ಪದಪುಂಜಗಳ ಸಾಹಿತಿ, ಅಪ್ರತಿಮ ಹೋರಾಟಗಾರ,ಽಮಂತ ರಾಜಕಾರಣಿ
ಸಂಘಟನೆಯ ಚತುರ, ದೂರದೃಷ್ಟಿಯ ಮಹಾನ್ ನಾಯಕ ಅಭಿವೃದ್ಧಿಯ ಹರಿಕಾರ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜೀ
ಅವರಿಗೆ ನಮನಗಳು.