ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಚಲನಚಿತ್ರಗಳ ಬಗ್ಗೆ ನನ್ನ ಒಲವು ಕಡಿಮೆನೇ. ಹಾಲಿವುಡ್ ಸಿನಿಮಾಗಳ ಒಂದು ನೂರೈವತ್ತು ಸಿಡಿಗಳನ್ನು ನೋಡಲಿಕ್ಕೆ ಪುರುಸೊತ್ತಾ ಗದೇ ಹಾಗೆಯೇ ಇಟ್ಟಿದ್ದೇನೆ. ಅದಕ್ಕಿಂತ ಹೆಚ್ಚು ಬೇಸರವಿರುವುದಕ್ಕೆ ಕಾರಣ ನಾನು ಓದದೇ ಬಿಟ್ಟಿರುವ ಪುಸ್ತಕಗಳ ಸಂಖ್ಯೆ ಹೆಚ್ಚುತ್ತಿರು ವುದು.
ಸಿನಿಮಾ ದೃಶ್ಯ ಮಾಧ್ಯಮವಾದ್ದರಿಂದ ಹೆಚ್ಚು ಪ್ರಭಾವಶಾಲಿ. ಉತ್ತಮ ಕಾವ್ಯವೊಂದು ಓದುಗನ ಕಲ್ಪನಾ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತೆ ಉತ್ತಮ ಸಿನಿಮಾವೊಂದು ಪ್ರೇಕ್ಷಕರಿಗೆ ಅದೇ ಪ್ರಮಾಣದ ಸವಾಲನ್ನೊಡ್ಡುವುದು ಸಾಧ್ಯವಿಲ್ಲವೆಂತಲ್ಲ, ಕಷ್ಟ. ಮಿಲನ್ ಕುಂದೇರಾ ತನ್ನ ಕಾದಂಬರಿಯನ್ನು ಯಾವುದೇ ನಿರ್ಮಾಪಕ ಬೆಳ್ಳಿತೆರೆಗೆ ತಂದು ಅದನ್ನು ಅಪಮೌಲ್ಯಗೊಳಿಸಬಾರದು ಎಂಬ ಕಾರಣಕ್ಕೆ ರಚಿಸಿದ ಕೃತಿ Immortality. ಅದೇನೇ ಇರಲಿ, ನನಗೊಂದು, ಒಂದೇ ಒಂದು, ಸಿನಿಮಾ ಮಾಡುವ ಹಂಬಲವಿದೆ. ಮಾಡಿದ್ದೇ ಆದಲ್ಲಿ, ಮರಳಿ ಬ್ರಹ್ಮದತ್ತ ಎಂಬ ವಸ್ತುವಿನ ಸುತ್ತ ಹೆಣೆದ ಕತೆ ಅದಾಗಿರುತ್ತದೆ.
ಸಹಮನಸ್ಕ ಸ್ನೇಹಿತರಾದ ಭಾಷ್ಯಮ್ ಅಯ್ಯಂಗಾರ್ ಭರವಸೆ ಬಿಡದೆ ಎಷ್ಟೋ ವರ್ಷಗಳಿಂದ ಕೇಳುತ್ತಲೇ ಇದ್ದಾರೆ: ಏನಾಯ್ತು ನಿಮ್ಮ Back to Brahminism ಸಿನಿಮಾ? ನನ್ನ ಸಿನಿಮಾವನ್ನು ಯಾರು ನೋಡುತ್ತಾರೋ ಯಾರು ಬಿಡುತ್ತಾರೋ ಕಾಣೆ, ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಲಾರರು ಎಂಬುದು ನನ್ನ ಸಕಾರಣ ಅಂದಾಜು. ಅವರನ್ನು ದೂರವಿಡಲು ಚಿತ್ರದ ಶೀರ್ಷಿಕೆಯೇ ಸಾಕು. ಮತ್ತೊಂದು, ಭಾಷೆಯ ತೊಡಕು. ಏಕೆಂದರೆ ಅದು ಇಂಗ್ಲಿಷ್ ನಲ್ಲಿರುತ್ತದೆ. ಹಂಗಾದ್ರೆ ಅವರಿಗೆ ಇಂಗ್ಲಿಷ್ ಬರೊಲ್ವಾ? ಬರೊಲ್ಲ ಅನ್ಸುತ್ತೆ. ಹಿಂದಿ ಬರೊಲ್ಲ, ಅದಕ್ಕೇ, ದಿ ಕಾಶ್ಮೀರ್ ಫೈಲ್ಸ್ ಚಿತ್ರಾನ ನೋಡೊಲ್ಲ ಅಂತ ಘೋಷಿಸಿದ್ದಾರೆ.
ಹಿಂದಿ ಬರ್ದೇ ಇರೋ ಅಮೆರಿಕದ ಸೆನೆಟರ್‌ಗಳು, ಡೆಮೊಕ್ರಾಟ್ಸ್, ರಿಪಬ್ಲಿಕ ಎರಡೂ ಪಕ್ಷದವರು, ಅದನ್ನು ನೋಡಿ ಚಿತ್ರ ಚೆನ್ನಾಗಿದೆ ಅಂದ್ರಲ್ಲ! ಚಿತ್ರಕ್ಕೆ ಇಂಗ್ಲಿಷ್ ಸಬ್‌ಟೈಟಲ್ಸ್ ಇವೆ, ಅದನ್ನ ಓದಿ ಅರ್ಥ ಮಾಡಿಕೊಂಡಿzರೆ. ಒಂದೋ, ಸಿದ್ದರಾಮಯನ್ನವರಿಗೆ ಇಂಗ್ಲಿಷ್ ಬರೊಲ್ಲ, ಮತ್ತೊಂದೋ ಕಣ್ಣು ಮಂಜಾಗಿ ಯಾವುದೇ ಭಾಷೆಯ ಸಬ್ಟೈಟಲ್ಸ ಅವರಿಗೆ ಕಾಣದೇ ಇರಬಹುದು. ಒಂದು ನಿಮಿಷ. ಇನ್ನೂ ಒಂದು ಕಾರಣ ಇರಬಹುದು.
ಜಿಹಾದಿಗಳೊಂದಿಗೆ ಗುರುತಿಸಿಕೊಂಡು ದಲಿತ ಮತ್ತು ಮುಸ್ಲಿಮರಿಗೆ ಕೇಂದ್ರ ಸರಕಾರದ ವಿರುದ್ಧ ಬಂಡೇಳಲು ಪ್ರಚೋದಿಸುತ್ತಿರುವ ಆಕಾರ್ ಪಟೇಲ್ ಎಂಬ ದೇಶದ್ರೋಹಿ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್ನ (ಇಂಡಿಯಾ) ಮುಖ್ಯಸ್ಥನಾಗಿದ್ದ. ಭಾರತದ ಸೇನೆ ಕಾಶ್ಮೀರಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗುತ್ತಿದೆ ಎಂದು ಲಾವಣಿ ಹಾಡುತ್ತಾ ಒಂದಿಪ್ಪತ್ತು ಕಾಶ್ಮೀರಿ ಮುಸ್ಲಿಂ ಹುಡುಗರನ್ನು ಅಟ್ಟಿಕೊಂಡು ದೇಶದ ವಿವಿಧ ನಗರಗಳಲ್ಲಿ ಸೈನ್ಯದ ವಿರುದ್ಧ ಅಪಪ್ರಚಾರ ಮಾಡುವುದು ಆತನ ಅಜೆಂಡಾ. ಅವನ ಭಾರತ ಯಾತ್ರೆ ಮೊದಲು ಆರಂಭವಾಗಿದ್ದು ಬೆಂಗಳೂರಿನಲ್ಲಿ.
ಬೆನ್ಸನ್ ಟೌನಿನಲ್ಲಿರುವ ಥಿಯೊಸೊಫಿಕಲ್ ಸೊಸೈಟಿಯಲ್ಲಿ. ಹತ್ತಿರದ ಶಿವಾಜಿನಗರ, ಮುನಿರೆಡ್ಡಿ ಪಾಳ್ಯದಿಂದ ಕರೆತಂದಿದ್ದ ಸುಮಾರು ಮುನ್ನೂರು ಮುಸ್ಲಿಮರು ಅಲ್ಲಿ ಸಭಿಕರು. ಅದಕ್ಕೆ ಕವರೇಜ್ ನೀಡಲು ಒಂದಷ್ಟು ಮಂದಿ ಆಯ್ದ ಪತ್ರಕರ್ತರು. ಅವನ ದುಷ್ಟ ಅಜೆಂಡಾವನ್ನು ಬಯಲುಗೊಳಿಸಲು ಒಂದೈದು ಕಾಶ್ಮೀರಿ ಪಂಡಿತರು ನಿಯೋಜಕರನ್ನು ಒತ್ತಾಯಿಸಿ ವೇದಿಕೆಯ ಮೇಲೆ ಅವಕಾಶ ಪಡೆದಿದ್ದರು.
ಷರತ್ತುಬದ್ಧವಾಗಿ ಅವರಿಗೆ ಅವಕಾಶ ನೀಡಲಾಗಿತ್ತು. ಆ ಪಂಡಿತರ ಪೈಕಿ ಜಿಹಾದಿಗಳ ನರಮೇಧದಿಂದ ಬಚಾವಾಗಿ ಬಂದಿದ್ದ ಪತ್ರಕರ್ತ ಆರ್.ಕೆ. ಮಟ್ಟೂ ಸಹಾ ಇದ್ದರು. ಅರ್ಧ ಭಯ, ಅರ್ಧ ಆಕ್ರೋಶದ ಅವರು ಆಕಾರ್ ವಿರುದ್ಧ ದನಿ ಎತ್ತಿದ್ದೇ ತಡ ಸಭೆಯಲ್ಲಿ ಅಸಮಾಧಾ ನದ ಹೊಗೆ ಎದ್ದಿತು. ಪಾಕಿಸ್ತಾನದ ಪರವಾಗಿ ಘೋಷಣೆಗಳೂ ಮೊಳಗಿದವು. ಮುಂದಾಲೋಚನೆಯಿಂದ ಪೊಲೀಸರಿಗೆ ಸೂಚನೆ ನೀಡಿದ್ದ ರಿಂದ ಗಲಭೆಯಾಗಲಿಲ್ಲ, ಪಂಡಿತರ ಮೇಲೆ ಹಯಾಗಲಿಲ್ಲ.
ದೇಶ ವಿರೋಧಿ ಚಟುವಟಿಕೆಯ ವಿರುದ್ಧ ಮಟ್ಟೂ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ದಾಖಲೆಯಾಗಿ ಅವರು, ಅವರ ಮಿತ್ರರು ಚಿತ್ರೀಕರಿಸಿದ್ದ ವೀಡಿಯೊವನ್ನು ನೀಡಿದರು. ಇಂಡಿಯನ್ ಎಕ್ಸ್ಪ್ರೆಸ್ ಬೆಂಗಳೂರು ಬ್ಯುರೋ ಮುಖ್ಯಸ್ಥ ರಾಗಿದ್ದ ಮಟ್ಟೂ ಪೊಲೀಸ್ ಕಮಿಷ ನರ್ ಎನ್. ಎಸ್. ಮೇಘರಿಕ್ ಅವರನ್ನೂ ಭೇಟಿ ಮಾಡಿದರು. ಗೃಹ ಸಚಿವರಾಗಿದ್ದ ಪರಮೇಶ್ವರರಿಗೆ ಫೋನಾಯಿಸಿದರು. ಪರಮೇಶ್ವರ್ ಕರೆಯನ್ನು ನಿರಾಕರಿಸಿದರು. ಮುಖ್ಯಮಂತ್ರಿಯ ಕಚೇರಿಗೂ ಎಡತಾಕಿದರು. ಏನೂ ಪ್ರಯೋಜನವಾಗಲಿಲ್ಲ.
ಕೊನೆಗೆ, ಆ ಕಚೇರಿಯಿಂದ ಲಭಿಸಿದ ಮಾಹಿತಿಯೆಂದರೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ದಿಗ್ವಿಜಯ್ ಸಿಂಗ್ ಈ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿ ವಹಿಸಿದ್ದರು. ಮತ್ತಷ್ಟು ಕೆದಕಿದಾಗ, ಪ್ರಭಾವದ ಮೂಲ ಅಹ್ಮದ್ ಪಟೇಲ್ ಮತ್ತು ಗುಲಾಮ್ ನಬಿ ಆಜಾದ್ ಎಂಬುದು ಬೆಳಕಿಗೆ ಬಂತು. ಇಂತಹ ಪ್ರಕರಣಗಳ ಮೇಲೆ ಮಾಧ್ಯಮ ಬೆಳಕು ಬೀರಿದ್ದೇ ಆದರೆ ಆ ಬೆಳಕು ಸಾಮಾನ್ಯವಾಗಿ ಮಂದವಾಗಿರುತ್ತದೆ. ಚಿತ್ರಮಂದಿರದ ಒಳಾಂಗಣದ ಬೆಳಕಿನಂತೆ ಮಬ್ಬಾಗಿರುತ್ತದೆ.
ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಕಳಿಸಲಾಯಿತೆಂದು ಪರಮೇಶ್ವರಪ್ಪ ಹೇಳಿಕೆ ನೀಡಿ ಕೈ ತೊಳೆದುಕೊಂಡರು. ಅಲೆಲೆಲೆಲೆ, ಭಯೋತ್ಪಾದಕರಿಗೆ ಎಚ್ಚರಿಕೆ ಕೊಟ್ಟು ಕಳಿಸಲಿಕ್ಕಾ ಈ ವ್ಯಕ್ತಿಗೆ ಗೃಹಖಾತೆಯನ್ನು ನೀಡಿದ್ದು? ಪ್ರಕರಣವನ್ನು ಅಲ್ಲಿಗೇ ಬಿಡದ ಮಟ್ಟೂ ಕೇಂದ್ರ ಗೃಹಸಚಿವರಿಗೆ ಸುದ್ದಿ ಮುಟ್ಟಿಸಿದರು. ಆಮ್ನೆಸ್ಟಿ ಇಂಟರ್ನ್ಯಾಷನಲ್ (ಇಂಡಿಯಾ)ಗೆ ಕತ್ತಿನ ಮೇಲೆ ಕೈಯಿಟ್ಟು ದೇಶದಿಂದ ಹೊರದಬ್ಬಲು ದೂರು ನಾಂದಿಯಾಯಿತು.
ಅಂದು ಹಿಂಬದಿಗೆ ಬರೆಬೀಳಿಸಿಕೊಂಡ ನಂತರವೂ ಆಕಾರ್ ತನ್ನ ಜಾಯಮಾನವನ್ನು ಬಿಟ್ಟಿಲ್ಲ. ಈತ ಗುಜರಾತ್ನ ಗಾಂಚೀ ಸಮುದಾ ಯದ ವಿರುದ್ಧ ಬರೆದ ನಂತರ ಬಂಧಿತನಾದ. 2019ರಲ್ಲಿ ಮೋದಿ ಪುನರಾಯ್ಕೆಗೊಂಡ ನಂತರ ಈತನ ಅರಣ್ಯರೋದನ ಮುಗಿಲನ್ನು ಮುಟ್ಟಿತು. ಸರಕಾರವನ್ನು ಹೀನಾಮಾನವಾಗಿ ಬೈಯುತ್ತಾ ಕಾಲಕ್ಷೇಪ ನಡೆಸುವುದು ಈತನ ಪೂರ್ಣಾವಧಿ ಉದ್ಯೋಗ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನೂ ನಪುಂಸಕರೆಂದು ಕರೆದಿದ್ದಾನೆ. ಸದ್ಯಕ್ಕೆ ವಿದೇಶಾಂಗ ಸಚಿವರಾದ ಜೈಶಂಕರ್ ಅವರಿಗೆ ರಾಹುವಿನಂತೆ ಅಮರಿಕೊಂಡಿದ್ದಾನೆ.
ಕ್ಯಾಲಿಫೋರ್ನಿಯಾನಲ್ಲಿ ಪ್ರೊಫೆಸರ್ ಆಗಿರುವ ಅವರ ಸಹೋದರ ಸಂಜಯ್ ಸುಬ್ರಹ್ಮಣ್ಯಂ ಏಕೆ ಭಾರತದ ಮುಸ್ಲಿಮರನ್ನು ಹಿಂಸಿಸು ತ್ತಿರುವ ಜೈಶಂಕರ್ ಮತ್ತವರ ಕುಟುಂಬದವರ ವಿರುದ್ಧ ದನಿ ಎತ್ತಬಾರದೆಂದು ಗುಬ್ಬಿಸುತ್ತಿದ್ದಾನೆ. ಭಾರತ ಸರಕಾರದ ವಿರುದ್ಧ ತಾನು ಮಾಡುತ್ತಿರುವ ಮಿಥ್ಯಾರೋಪಗಳಿಗೆ ಮತ್ತಷ್ಟು ಪ್ರಚಾರ ಗಿಟ್ಟಿಸಿಕೊಳ್ಳಲು ಅಮೆರಿಕದ ನೆಲವನ್ನು ಬಳಸಿಕೊಳ್ಳುವುದರ ಜತೆಗೆ ಪಾಕಿಸ್ತಾ ನದ ಪರ ನಿಂತ ಕಿಸುಬಾಯಿದಾಸರ ಬೆಂಬಲವನ್ನೂ ಪಡೆದಿದ್ದಾನೆ.
ಆಕಾರ್ ಕುರಿತಂತೆ ಸಿದ್ದರಾಮಯ್ಯ ಮೃದು ಧೋರಣೆ ತಳೆಯಲು ಇಷ್ಟು ಸಾಕಲ್ಲವೇ? ಕಾಶ್ಮೀರದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಭಯೋತ್ಪಾದಕರಿಗೆ ತಮ್ಮ ನರಮೇಧದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ರೆಲಿವ್, ಸೆಲಿವ್ ಅಥವಾ ಗೆಲಿವ್ (ಮತಾಂತರಗೊಳ್ಳು, ಜಾಗ ಖಾಲಿಮಾಡು ಅಥವಾ ಸಾಯಿ) ಎಂದು ಮಸೀದಿಗಳಿಂದ ಕರೆ ನೀಡಿದ ನರರಾಕ್ಷಸರು ಬಯಸಿದ್ದು ಪಂಡಿತರು ಓಡಿಹೋಗುವುದನ್ನು ನೋಡುವುದನ್ನ. ತಮ್ಮನ್ನು ಜೈಲಿನಲ್ಲಿ ಭೇಟಿಮಾಡಿದ ಮನೋವಿಶ್ಲೇಷಕ ರೊಂದಿಗೆ ಮಾತನಾಡಿದ ಅವರು ಅದಕ್ಕೆ ಕೊಟ್ಟ ಸಮಜಾಯಿಷಿ ಮದ್ದುಗುಂಡನ್ನು ಅಪವ್ಯಯ ಮಾಡುವುದು ತಪ್ಪುತ್ತದೆಂದು. ಪಂಡಿತರು ಮನೆಮಠ ಬಿಟ್ಟು ಕಾಲ್ಕಿತ್ತಾಗ ಅವರ ಮುಖಗಗಳಲ್ಲಿದ್ದ ಭಯವನ್ನು ಅವರು ನೋಡಿ ಖುಷಿಪಡುತ್ತಿದ್ದರು.
ಇಂಥದೇ ಪಾಶವೀ ವಿಕೃತಿಯನ್ನು ದ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡುವುದಿಲ್ಲವೆಂಬ ನಿಲುವಿನಿಂದ ಸಿದ್ದರಾಮಯ್ಯ ಪ್ರದರ್ಶಿಸಿದ್ದಾರೆ. ಸಿದ್ಧರಾಮಯ್ಯನವರ ಅದೃಷ್ಟ, ಅವರಿಗೆ ದೇಶದ ಒಂದು ಭಾಗದ ಪ್ರಮುಖ ಜನಾಂಗ ದಾರುಣವಾಗಿ ಸಾಮೂಹಿಕ ಹತ್ಯೆಗೊಳಗಾಗುವ ದುರಂತದ ಪರಿಷ್ಕೃತ ಆವೃತ್ತಿಯನ್ನೂ ನೋಡದೆ ಉಳಿಯುವ ಆಯ್ಕೆಯ ಸ್ವಾತಂತ್ರ್ಯವಿದೆ. ಆ ಆಯ್ಕೆಯ ಸ್ವಾತಂತ್ರ್ಯವನ್ನು ಎಂದಿನ ಉದ್ಧಟತನದಿಂದ ದುರ್ಬಳಕೆ ಮಾಡಿರುವ ಅವರು ಜಿಹಾದಿಗಳಿಗೆ ಅವರ ಕುಕೃತ್ಯಗಳನ್ನು ಮುಂದುವರೆಸಲು ಹಸಿರು ನಿಶಾನಿ ತೋರಿದ್ದಾ ರೆಂದೇ ನನ್ನ ವ್ಯಾಖ್ಯಾನ. ತನ್ನ ಸ್ವಕ್ಷೇತ್ರದಲ್ಲಿ ಸೋಲುಂಡ ಮೇಲೂ ಹಿಂದೂ ಮತದಾರರಿಗೆ ಅವರ ಮತಗಳ ಅವಶ್ಯಕತೆ ತನಗಿಲ್ಲವೆಂಬ ದುರಹಂಕಾರದ ಸಂದೇಶವನ್ನು ರವಾನಿಸಿದ್ದಾರೆ.
ಅವರ ರಾಜಕೀಯ ಭವಿಷ್ಯವನ್ನು ದಫನ್ ಮಾಡುವಷ್ಟು ಪಂಡಿತ ಮತದಾರರು ಅವರ ಕ್ಷೇತ್ರದಲ್ಲಿಲ್ಲ ಎಂಬ ದೃಢ ವಿಶ್ವಾಸ ಮೂಡಿಸಿರುವ ಠೇನ್ಕಾರವದು. ಅದೇ ಕಾರಣಕ್ಕೆ ನ್ಯಾಯಾಲಯ ನಿಂದನೆಯಾದೀತೆಂಬ ಸಣ್ಣ ಆತಂಕವೂ ಇಲ್ಲದೆ ಹಿಜಾಬ್ ವಿಷಯದಲ್ಲಿ ಉಚ್ಚ ನ್ಯಾಯಾ ಲಯದ ತೀರ್ಪನ್ನು ವಿರೋಧಿಸಿ ನಡೆದ ಮೂಲಭೂತವಾದಿಗಳ ಬಂದನ್ನು ಬೆಂಬಲಿಸಿದರು. ಕೊಡಗನ್ನು ಕರ್ನಾಟಕದ ಕಾಶ್ಮೀರವೆಂದು ಹೇಳುವುದುಂಟು.
ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂಬ ಅವರ ಹಗಲುಗನಸು ಈಡೇರಿಬಿಟ್ಟರೆ ಇಡೀ ಕರ್ನಾಟಕವೇ ಕಾಶ್ಮೀರವಾಗುವುದಕ್ಕೆ ದಿನಗಣನೆ ಆರಂಭವಾದಂತೆ, ಬರೆದಿಟ್ಟುಕೊಳ್ಳಿ. ಆ ದುರಂತ ಕರ್ನಾಟಕದ ಜನತೆಯ ಪಾಲಿಗೆ ಬಾರದಿರಲಿ. ಪಿ. ಲಂಕೇಶ್ ದುರಂತ ಪ್ರಜ್ಞೆಯ ಬಗ್ಗೆ ಆಗಾಗ್ಗೆ ಪ್ರಸ್ತಾಪಿಸುತ್ತಿದ್ದರು. ಅವರು ಮತ್ತು ಅವರ ಓರಗೆಯ ಮತ್ತೊಂದಷ್ಟು ಜನ ಲೇಖಕರು ದುರಂತ ಪ್ರಜ್ಞೆಯನ್ನು ಆವಾಹಿಸಿಕೊಳ್ಳು ವುದೇ ಆಧುನಿಕ ಸೃಜನಶೀಲತೆ ಗಟ್ಟಿಗೊಳ್ಳಲು ಪೂರ್ವಷರತ್ತು ಎಂಬಂತೆ ಬರೆಯುತ್ತಿದ್ದರು. (ಅವರ ಪ್ರಕಾರ ಜಡತ್ವ ಮಡುಗಟ್ಟಿ ರುವ) ಸಮಾಜದ ಸುಧಾರಣೆಗೆ ಅವರಾರೂ ಕಾರ್ಯತಂತ್ರವನ್ನು ಪಿಸಿದ್ದು, ಸುಮಾರು ವರ್ಷಗಳ ಕಾಲ ಕೊಂಡು ಓದುತ್ತಿದ್ದ ಲಂಕೇಶ್ ಪತ್ರಿಕೆ ಯಲ್ಲಿ, ನನಗಂತೂ ಕಾಣಲಿಲ್ಲ.
ಮನಸ್ಸಿನಂತೆ ಮಹಾದೇವ ಎಂಬ ನಾಣ್ಣುಡಿಯಂತೆ, ಅಫೀಮಿಗೆ ದಾಸರಾಗುವಂತೆ ದುರಂತ ಪ್ರಜ್ಞೆಯನ್ನೇ ಮನಸ್ಸಿನ ಡಿಫಾಲ್ಟ್ ಮೋಡ್ ಆಗಿಸಿಕೊಂಡು ಸುಮ್ಮಸುಮ್ಮನೆ ಮರುಗುವುದು, ಮರುಗುತ್ತಲೇ ಇರುವುದು, ಕರುಬುವುದು, ಗೋಳೋ ಎಂದು ಅಳುವುದು ಮಾಡುತ್ತಿದ್ದ ಆ ಪರಿವಾರದ ಸದಸ್ಯರ ಬಾಳುಗಳೇ ದುರಂತಮಯವಾಗಿಬಿಟ್ಟವು. ಅದಕ್ಕಿಂತ ದೊಡ್ಡ ದುರಂತವೆಂದರೆ ಆ ಸರಣಿ ದುರಂತಗಳು ಬಡಿದವರ ಅರಿವಿಗೇ ಬಾರದಿದ್ದುದು. ಅಂದರೆ, ಆ ಮಟ್ಟಿಗೆ ದುರಂತ ಪ್ರಜ್ಞೆ ಅವರನ್ನು ಆವರಿಸಿಕೊಂಡುಬಿಟ್ಟಿತ್ತು.
ಒಂದಷ್ಟು ನಶೆ ಬೇಕಾದಾಗ ಗಾಂಜಾ ಎಳೆಯುವ ಡ್ರಗ್ ವ್ಯಸನಿಯಂತೆ, ವ್ಯಕ್ತಿತ್ವದ ಅದಾವ ಅಪೂರ್ಣತೆಯನ್ನು ಮುಚ್ಚಿಕೊಳ್ಳಲು ದುರಂತ ಭಾವವನ್ನು ಪ್ರಜ್ಞೆಯ ಬೋಗುಣಿಯ ತುಂಬಾ ತುಂಬಿಕೊಳ್ಳುತ್ತಿದ್ದರೋ ಕಾಣೆ. ಸಾವು, ಕುಡಿತ, ಸಲಿಂಗಕಾಮ, ಖಿನ್ನತೆ ಮುಂತಾದ ವಿಷಯಗಳನ್ನೇ ತನ್ನ ಕಾವ್ಯಕ್ಕೆ ಕಥಾವಸ್ತುವನ್ನಾಗಿಸಿಕೊಂಡ ಬೋದಿಲೇರನನ್ನು ಆಗಾಗ್ಗೆ ಎಳೆತಂದು ಅವನ ಕವಿತೆಯನ್ನು ಪ್ರಸಾದ ವನ್ನಾಗಿಸಿ ದುರಂತ ಪ್ರಜ್ಞೆಯನ್ನು ಲಂಕೇಶ್ ಒಂದಷ್ಟು ಹಂಚುತ್ತಿದ್ದರು.
ಪತ್ರಿಕೆಗಾಗಿ ಕೊಟ್ಟ ಕಾಸಿಗೆ ಪ್ರತಿಯಾಗಿ ಪಡೆದ ರವಷ್ಟು ದುರಂತ ಪ್ರಜ್ಞೆಯೇ ಕಾಶ್ಮೀರ ಫೈಲ್ಸ್ ಚಿತ್ರವನ್ನು ನಾನು ವೀಕ್ಷಿಸಲು ಪ್ರೇರೇಪಿ ಸಿತು. ಪತ್ರಿಕೆಯ ಓದುಗನಾಗಿ ನನ್ನನ್ನು ಕವಿದಿದ್ದ ದುರಂತ ಪ್ರಜ್ಞೆ ಏನೂ ಅಲ್ಲ ಎಂಬುದನ್ನು ಫೈಲ್ಸ್ ನೋಡಿದಾಗ ಅನಿಸಿತು. ಕಾಶ್ಮೀರಿ ಪಂಡಿತರು ಅನುಭವಿಸಿದ, ಅನುಭವಿಸುತ್ತಿರುವ ಘನ ಘೋರ ದುರಂತದ ಮುಂದೆ ಸದರಿ ಸಿನಿಮಾದಿಂದ ಆವೃತವಾದ ದುರಂತ ಪ್ರಜ್ಞೆ ಏನೂ ಅಲ್ಲ ಅನ್ನಿಸಿದೆ.
ಪತ್ರಿಕೆಯ ಓದಿನಿಂದ ಪ್ರಚೋದಿತವಾದ ಜಾಳು ದುರಂತ ಪ್ರಜ್ಞೆ ಕಾಲ್ಪನಿಕ ದುರಂತವೊಂದರ ದುರ್ಬಲ ಫೋಟೊಕಾಪಿ ಎಂದು ಮನ ವರಿಕೆಯಾಯಿತು. ಪತ್ರಿಕೆಯ ಕಾರಣದಿಂದ ಹೊಸ ನೈಜ ದುರಂತ ಪ್ರಜ್ಞೆ ಇದೀಗ ಕವಿದಿದೆ. ನಾಡಿನ ಸಾಕ್ಷೀ ಪ್ರಜ್ಞೆ ಎಂದೆ ಘೋಷಿಸಿ ಕೊಂಡ ಪತ್ರಿಕೆಯಲ್ಲಿ ಕಾಶ್ಮೀರ ಪಂಡಿತರ ಹತ್ಯಾಕಾಂಡ ಕುರಿತು ಅದೆಷ್ಟು ವರದಿಗಳು ಬಂದವೋ ಕಾಣೆ. ಮುಸ್ಲಿಮರದ್ದು ಶೌರ್ಯ, ಹಿಂದೂಗಳು ಅಂಜುಬುರುಕರು ಎಂದು ಲಂಕೇಶ್ ಪ್ರಚೋದನಕಾರಿಯಾಗಿ ಬರೆಯುತ್ತಿದ್ದರ ನೆನಪು ಮಾಸಿಲ್ಲ.
ನಾವು ಸಾಕಷ್ಟು ಚಿತ್ರಗಳಲ್ಲಿ ವೀಕ್ಷಿಸಿರುವ ಒಂದು ಪರಿಚಿತ ಸನ್ನಿವೇಶ. ನಿಜ ಜೀವನದಲ್ಲೂ ನಡೆಯುವಂಥದ್ದೇ. ಅತ್ಯಾಚಾರಿಗಳಿಂದ ಓಡಿ ತಪ್ಪಿಸಿಕೊಂಡ ಹೆಣ್ಣುಮಗಳು ಆಶ್ರಯ ಸಿಕ್ಕಿತೆಂದು ಕಂಡ ಯಾವುದೋ ಹತ್ತಿರದ ಮನೆಗೆ ಹೊಕ್ಕುವ ಆಕೆ ಆ ಮನೆಯಾತನಿಂದ ಬಲಾ ತ್ಕಾರಕ್ಕೆ ಒಳಗಾಗುವುದು. ಹತ್ಯಾಕಾಂಡದಿಂದ ತಪ್ಪಿಸಿಕೊಂಡ ಕಾಶ್ಮೀರದ ಪಂಡಿತರ ಪಾಡೂ ಅಂಥದ್ದೇ. ಮುಸ್ಲಿಂ ಭಯೋತ್ಪಾ ದಕರ ಅಮಾನುಷತೆಯಿಂದ ತಪ್ಪಿಸಿಕೊಂಡು ಬಂದ ಬಡಜೀವಗಳಿಗೆ ಸಿಕ್ಕಿದ್ದು ಭಯೋತ್ಪಾದಕರನ್ನು ಮೀರಿಸುವಂಥ ನಪುಂಸಕ ಕ್ರೌರ್ಯ. ಪ್ರಜಾಪ್ರಭುತ್ವದ ಎಲ್ಲ ರಂಗಗಳಲ್ಲೂ ಕಣ್ಣಿಗೆ ರಾಚುವ ಸ್ಥಾಪಿತ ನಿರ್ವೀರ್ಯತೆ.
ಮುಂಚೆಯೇ, ಮೈಮನಗಳ ತುಂಬಾ ಮಾಗದ ಗಾಯ. ಅದಕ್ಕೆ ಔಷಧೋಪಚಾರಗಳನ್ನು ನೀಡದ ಹದಗೆಟ್ಟ ಸರಕಾರಗಳು. ಹಣ ಪಡೆದು ಅಳಬಲ್ಲ ರುಡಾಲಿಗಳಿಗೂ ಬರ. ನ್ಯಾಯವೂ ಇಲ್ಲ, ನೆರವೂ ಇಲ್ಲ. ಸಹಾನುಭೂತಿಯನ್ನು ಕೊಂದವರತ್ತ ಹರಿಸುವ ದೇಶ. ಹಂತಕನನ್ನೇ ಬರಮಾಡಿಕೊಂಡು ಫೋಟೊ ಹೊಡೆಸಿಕೊಳ್ಳುವ ನರಸತ್ತ ಪ್ರಧಾನಿ. ಇದಲ್ಲವೇ ದುರಂತ!
ಈ ದುರಂತಗಳನ್ನೆಲ್ಲವನ್ನೂ ದುರಂತಯೋಗ್ಯವೆಂದು ಪರಿಗಣಿಸದ ಶಿಖಂಡಿ ಮಾಧ್ಯಮ. ಇಂತಹ ಕೊಳೆತು ನಾರುವ ಗೊಬ್ಬರದ ಮಧ್ಯ ದಿಂದ ಹುಟ್ಟಿದ ಚಿತ್ರ ದ ಕಾಶ್ಮೀರ್ ಫೈಲ್ಸ್. ತಮ್ಮ ಐತಿಹಾಸಿಕ ಪಾಶವೀ ಪ್ರವೃತ್ತಿಯನ್ನು ಕಾಶ್ಮೀರದಲ್ಲಿ ಏಳನೇ ಬಾರಿಗೆ ಮೆರೆದ ಮುಸ್ಲಿಮರ ಕೃತ್ಯಗಳಿಗೆ ಕನ್ನಡಿ ಹಿಡಿದಿರುವ ವಿವೇಕ್ ಅಗ್ನಿಹೋತ್ರಿ ಅಂದಿನ ದುರಂತವನ್ನು ಸಮಸ್ತ ಜಗತ್ತಿಗೆ ಪುನರ್ಪಚಯಿಸಿದ್ದಾರೆ.
ಈ ಚಿತ್ರದ ವಿಮರ್ಶೆ ನಾನು ಮಾಡುತ್ತಿಲ್ಲ. ಅದಕ್ಕೆ ನ್ಯಾಯ ಒದಗಿಸುವಂತಹ ವಿಮರ್ಶೆ ಬರೆಯಲು ಈ ಪತ್ರಿಕೆಯ ಒಂದು ಪುಟವೇ ಬೇಕು. ಅದರ ಬಗ್ಗೆ ಎಲ್ಲರೂ ಹೇಳುವುದನ್ನೇ ನಾನೂ ಹೇಳುತ್ತೇನೆ. ಇದು ಅಂತರ ರಾಷ್ಟ್ರೀಯ ಗುಣಮಟ್ಟದ ಚಿತ್ರ.
ಮಾಧ್ಯಮವನ್ನೂ ಸೇರಿದಂತೆ ಇಡೀ ವ್ಯವಸ್ಥೆಯ ಸ್ವಾರ್ಥವನ್ನೂ, ನಿಷ್ಕ್ರಿಯತೆಯನ್ನೂ, ಗೋಸುಂಬೆತನವನ್ನೂ ವಿವೇಕ್ ಕಲಾತ್ಮಕವಾಗಿ ಹೊರತಂದಿದ್ದಾರೆ. ಅಭಿನಯದಲ್ಲಂತೂ ಒಬ್ಬರನ್ನೊಬ್ಬರು ಮೀರಿಸುತ್ತಾರೆ. (ಮೈಸೂರಿನಲ್ಲಿ) ಚಿತ್ರ ಪ್ರದರ್ಶನದ ನಂತರ ನಡೆದ ಸಂವಾದದಲ್ಲಿ ಚಿತ್ರದ ಪಾತ್ರಧಾರಿ ಹಾಗೂ ಸಹೋದ್ಯೋಗಿ ಪ್ರಕಾಶ್ ಬೆಳವಾಡಿ ಮತ್ತು ನನ್ನ ಹಿರಿಯ ಮಾಧ್ಯಮ ಸಹೋದ್ಯೋಗಿ ಆರ್. ಕೆ. ಮಟ್ಟೂ ಪಾಲ್ಗೊಂಡಿದ್ದರು. ಅವರಿಬ್ಬರೂ, ನಾನೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಸೇವೆ ಸಲ್ಲಿಸಿದವರೇ. ಆ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಯಲ್ಲಿ ಕಾಶ್ಮೀರ್ ಫೈಲ್ಸ್ ಗೆ ಒಂದೂವರೆ ಸ್ಟಾರ್ ರೇಟಿಂಗ್ ಕೊಡಲಾಗಿದೆ. ಕಾಶ್ಮೀರ್ ಫೈಲ್ಸ್, ವ್ಯವಸ್ಥೆಯಲ್ಲಿ ತುಂಬಿ ತುಳುಕಾ ಡುತ್ತಿರುವ ಜೋಭಧ್ರಗಳ, ಹೊಣೆಗೇಡಿಗಳ ಮುಖಕ್ಕೆ ರಾಚಿ ಬಡಿದಿದೆ. ಆ ಹೊಡೆತದಿಂದ ಪಾಠ ಕಲಿತಿಲ್ಲವೆನ್ನುವುದು ಇಂತಹ ವಿಮರ್ಶೆ ಗಳಿಂದ ತಿಳಿದುಬರುತ್ತದೆ.
ಚಿತ್ರದಲ್ಲಿ ಕ್ರೌರ್ಯವನ್ನು ವಿಜೃಂಭಿಸಲಾಗಿದೆ ಎಂಬ ಸುಳ್ಳನ್ನು ಹರಡಲಾಗುತ್ತಿದೆ. ವಾಸ್ತವದಲ್ಲಿ ಕಾಶ್ಮೀರಿ ಹಿಂದೂಗಳು ಅನುಭವಿಸಿದ ನರಕ ಯಾತನೆಯ ಎರಡು ಪರ್ಸೆಂಟ್ ಕ್ರೌರ್ಯವನ್ನೂ ವಿವೇಕ್ ತೋರಿಸಿಲ್ಲ. ಸಂತ್ರಸ್ತರ ಪರವಾಗಿ ನೈತಿಕ ದನಿ ಎತ್ತಬೇಕಾದ್ದು ಎಲ್ಲ ನಾಗರಿಕರ ಕರ್ತವ್ಯ. ಬರ್ಬರತೆ ಯನ್ನು ಅರಗಿಸಿಕೊಳ್ಳುವ ಅಂತಃಸತ್ವ ಹಿಂದೂಗಳಿಗಿದೆ. ಆದರೆ, ಮುಂದೆಂದೂ ಮತಾಂಧತೆ ಮರು ಕಳಿಸದಂತೆ ಕ್ರಮಗಳನ್ನು ಶೀಘ್ರವಾಗಿ ಜಾರಿ ಗೊಳಿಸಲೆಂದು ಸರಕಾರದ ಮೇಲೆ ಒತ್ತಡ ಹೇರಬೇಕು. ಆ ಕ್ರಮಗಳು ಯಾವ ಬಗೆಯ ದ್ದೊಂದು ಮುಂದಿನ ವಾರ ಬರೆಯುತ್ತೇನೆ.
ಕಾಶ್ಮೀರ ಪಂಡಿತರ ಮಾರಣಹೋಮವನ್ನು ಚಿತ್ರಿಸಿದ ಕಾಶ್ಮೀರ್ ಫೈಲ್ಸ್ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಚರ್ಚೆಯ ಹಾದಿ ತಪ್ಪಿಸಲು ದಲಿತ್ ಕಾರ್ಡನ್ನು ಯಥೇಚ್ಛವಾಗಿ ಬಳಕೆಯಾಗುತ್ತಿದೆ. ಅವರಾರೂ ದಲಿತರ ಹಿತಚಿಂತಕರಲ್ಲ. ಕಾಶ್ಮೀರಿ ಪಂಡಿತರ ರಕ್ತ ರಕ್ತವಲ್ಲ ಎಂದು ಹೇಳಿ ಮಾರಣ ಹೋಮವನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುತ್ತಿರುವ ಕ್ಷುದ್ರರು. ಜೀವದ ಅಮೂಲ್ಯತೆಯನ್ನು ಅರಿಯದ ಹೇಡಿಗಳು. ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ದಲಿತರ ಮೇಲೆ ಅವ್ಯಾಹತವಾಗಿ ನಡೆದುಬಂದ ದೌರ್ಜನ್ಯವನ್ನು ಮರೆ ಮಾಚುತ್ತಿರುವ ಸುಳ್ಳುಬುರುಕರು.
ನಮ್ಮದೇ ಪಶ್ಚಿಮ ಬಂಗಾಳದಲ್ಲಿ ದಲಿತರನ್ನು ಕಮ್ಯುನಿಷ್ಟರು ಸದೆಬಡಿದಿರುವುದನ್ನು ಮುಚ್ಚಿ ಹಾಕುತ್ತಿರುವ ಹುಸಿ ದಲಿತಪರರು. ಮುಸ್ಲಿಂ ಮತಾಂಧತೆಯ ಬಗ್ಗೆ ಡಾ.ಅಂಬೇಡ್ಕರ್ ಅವರಿಗಿಂತ ಮುಕ್ತವಾಗಿ, ನಿರ್ಭಿಡೆಯಿಂದ ಮಾತನಾಡಿದ ನಾಯಕರು ಅಪರೂಪ. ಹಾಗಿರುವಾಗ ದಲಿತರನ್ನು ಜಿಹಾದಿಗಳ ಬಾಯಿಗೆ ಹಾಕುವ ಹುನ್ನಾರ ಈ ದರಿದ್ರಗಳದ್ದು. ನನ್ನ ಕಣ್ಣೀರಿಗೆ ಯಾವುದೇ ವಾಲ್ವ್ ಇಲ್ಲ. ಜೀವ ಯಾರದ್ದೇ
ಆದರೂ ಅದರ ಹಾನಿಯಾದರೆ ಹೃದಯ ಸಮಾನವಾಗಿ ಮಿಡಿಯುತ್ತದೆ. ಜೀವಕ್ಕೆ ಜಾತಿಯಿಲ್ಲ. ಈ ಸಂದರ್ಭದಲ್ಲಿ, ವಿವೇಕ್ ಅಗ್ನಿಹೋತ್ರಿ ಅವರ ಹೆಸರನ್ನು ಕುರಿತು ಒಂದು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
ಅವರ ತಂದೆ ಡಾ. ಪ್ರಭು ದಯಾಳ್ ಅಗ್ನಿಹೋತ್ರಿ, ಸಂಸ್ಕೃತ ಪ್ರೊಫೆಸರ್. ಹಲವು ದಲಿತ ಅಭ್ಯರ್ಥಿಗಳನ್ನೂ ಪಿ.ಎಚ್ಡಿಗೆ ತಯಾರು ಮಾಡಿ ದ್ದಾರೆ. ಅವರಲ್ಲಿ ಒಬ್ಬ ವಿದ್ಯಾರ್ಥಿಯ ಹೆಸರು ರಂಜನ್. ಅವನು ದಯಾಳರ ಅಚ್ಚುಮೆಚ್ಚಿನ ವಿದ್ಯಾರ್ಥಿಯೂ ಹೌದು. ಅವನಂತೆ ತಮ್ಮ ಮಗ ವಿವೇಕ್ ಆಗಲೆಂದು ದಯಾಳರ ಹಂಬಲ. ಅದೇ ಕಾರಣಕ್ಕೆ ವಿವೇಕ್ ಅಗ್ನಿಹೋತ್ರಿ ಅವರ ಹೆಸರಿನ ಮಧ್ಯದಲ್ಲಿ ರಂಜನ್ ಸೇರಿ ಕೊಂಡ. ವಿವೇಕ್ ಈ ವಿಷಯವನ್ನು ದೊಡ್ಡದು ಮಾಡಿ ದಲಿತಪರನೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ತನ್ನ ಬ್ಯಾಂಕ್ ಖಾತೆಯನ್ನು ಭದ್ರ ಮಾಡಿಕೊಂಡಿಲ್ಲ. ಬ್ರಾಹ್ಮಣ್ಯದ ಬಗ್ಗೆ ನಾನು ಮಾಡಲಿಚ್ಚಿಸುವ ಸಿನಿಮಾಗೆ ಅಂಥದ್ದೇ ಆಶಯದ ಬುನಾದಿ ಇರುತ್ತದೆ.