Friday, 20th September 2024

ಬೇರೆ ಪಕ್ಷಕ್ಕೆ ಓಟಾಕೋಕೆ ನಮ್ ಸಿಂಬಲ್ ಬಳಸಂಗಿಲ್ಲ- ಕಾಂಗ್ರೆಸ್

ತುಂಟರಗಾಳಿ

ಸಿನಿಗನ್ನಡ

ಲೀಲಾವತಿ ಮತ್ತು ವಿನೋದ್ ರಾಜ್ ಅವರ ಕುಟುಂಬ ಮತ್ತೊಮ್ಮೆ ಸುದ್ದಿಯಲ್ಲಿದೆ. ನಿರ್ದೇಶಕ ಪ್ರಕಾಶ್ ರಾಜ್ ಮೇಹು ವಿನೋದ್ ರಾಜ್ ಅವರ ಫ್ಯಾಮಿಲಿಗೆ ಸಂಬಂಧಪಟ್ಟ ರಹಸ್ಯವೊಂದನ್ನು, ಇನ್ ಫ್ಯಾಕ್ಟ್ ಸುಳ್ಳೊಂದನ್ನು ಬಯಲಿಗೆಳೆದು ಲೀಲಾವತಿ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿzರೆ.
ಇಷ್ಟು ವರ್ಷ ವಿನೋದ್ ರಾಜ್ ಮತ್ತು ಲೀಲಾವತಿ ಅವರು ಎಲ್ಲ ಕಡೆ ತಾಯಿಗಾಗಿ ಮದುವೆಯನ್ನೇ ಆಗದೆ ಅಮ್ಮನನ್ನು ನೋಡಿಕೊಳ್ಳುತ್ತಿರುವ ತ್ಯಾಗಮಯಿ ಮಗ ವಿನೋದ್ ರಾಜ್ ಅಂತ ಎಲ್ಲ ಕಡೆ ಬಿಂಬಿಸಿಕೊಂಡಿದ್ದರು.

ಆದರೆ ಈಗ ಅವರಿಗೆ ಮದುವೆ ಆಗಿ ಹೆಂಡತಿ ಮಗ ಎಲ್ಲರೂ ಇರೋದು ಪ್ರೂಫ್ ಸಮೇತ ಗೊತ್ತಾದ ಮೇಲೆ ಪ್ರಕಾಶ್ ರಾಜ್ ಮೇಹು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋ ಮಾಡಿದ್ದಾರೆ. ಇದು ವಿನೋದ್ ರಾಜ್ ಮತ್ತು ಲೀಲಾವತಿ ಅವರಿಗೆ ಸಿಟ್ಟು ತರಿಸಿದೆಯಂತೆ. ಪಾಪ ಪ್ರಕಾಶ್ ರಾಜ್ ಮೇಹು ಅವರೇನೂ ವಿನೋದ್ ರಾಜ್ ಕೊಲೆ ಮಾಡಿದ್ದಾರೆ, ಕಳ್ಳತನ ಮಾಡಿದ್ದಾರೆ ಅಂತ ಆಪಾದನೆ ಹೊರಿಸಿಲ್ಲ. ಅವರು ಮದುವೆ ಆಗಿಲ್ಲ ಅನ್ನೋದು ಸುಳ್ಳು. ಮದುವೆ ಆಗಿದೆ, ಕುಟುಂಬವೂ ಇದೆ ಅಂತ ಹೇಳಿದ್ದಾರೆ. ಈ ಮಾತಿಗೆ ಅದ್ಯಾಕೆ ಸಿಟ್ಟು ಬರಬೇಕೋ ದೇವರೇ ಬಲ್ಲ. ಆದರೂ ತಾಯಿ ಮಗ ಇಬ್ಬರೂ ಇನ್ನೊಬ್ಬರ ಅಂತರಂಗದ ವಿಷಯಕ್ಕೆ ಕೈ ಹಾಕಿ ನೆಮ್ಮದಿ ಕದಡುವ ಕೆಲಸ ಮಾಡಬಾರದು ಅಂತ ಗುಡುಗಿದ್ದಾರೆ.

ಇದನ್ನು ಕೇಳಿದವರು ಇದು ಪಾಕಿಸ್ತಾನ, ಭಯೋತ್ಪಾದಕತೆಯ ವಿರುದ್ಧ ಮಾತನಾಡಿದಂತಿದೆ ಅಲ್ವಾ ಅಂತ ಮಾತಾಡಿಕೊಳ್ಳುತ್ತಿzರೆ. ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತಾಡ್ತಾ ಇಷ್ಟು ವರ್ಷಗಳಿಂದ ಸಿಂಪಥಿ ತೆಗೆದುಕೊಂಡೇ ಬರ್ತಾ ಇರೋ ಲೀಲಾವತಿ ಅವರ ಬಾಯಲ್ಲಿ ಇಂಥ ಮಾತೇ ಅನ್ನೋ ಆಶ್ಚರ್ಯ ಎಲ್ಲರದ್ದು. ರವಿ ಬೆಳಗೆರೆ ಅವರೊಂದಿಗೆ ಕೈ ಮಿಲಾಯಿಸಿ ಡಾ. ರಾಜ್ ಕುಮಾರ್ ಅವರ ಕುಟುಂಬದ ಅಂತರಂಗದ ವಿಚಾರ ಗಳನ್ನು ಮಾತಾಡಿ, ರಾಜ್ ಲೀಲಾ ವಿನೋದ ಅಂತೆ ಪುಸ್ತಕ ಬರೆಸಿದಾಗ ಲೀಲಾವತಿ ಅವರಿಗೆ ಇನ್ನೊಬ್ಬರ ಬಗ್ಗೆ ಆಧಾರ ಇಲ್ಲದೆ ಹಗುರವಾಗಿ ಅನುಮಾನ ಬರೋ ಥರ ಮಾತಾಡಬಾರದು ಅನ್ನೋ ಜ್ಞಾನೋದಯ ಯಾಕೆ ಆಗಲಿಲ್ಲ ಅನ್ನೋದು ಮಾತ್ರ ವಿನೋದ್ ರಾಜ್ ಯಾರ ಮಗ ಅನ್ನೋದಕ್ಕಿಂತ ದೊಡ್ಡ ರಹಸ್ಯ.

ಲೂಸ್ ಟಾಕ್

ಅತೃಪ್ತ ಶಾಸಕ (ಕಾಲ್ಪನಿಕ ಸಂದರ್ಶನ)
ಮಿಸ್ಟರ್ ಪೊಲಿಟಿಶಿಯನ್, ಅವಕಾಶವಾದಿ ಥರ ನೀವ್ಯಾಕೆ ಪಕ್ಷಾಂತರಿ ತಳಿ ಆಗಿದ್ದು?
-ಏನ್ ಮಾಡೋಕಾಗುತ್ತೆ, ಎಲ್ರೂ ಹಂಗೇನೇ. ಒಂದು ಪಕ್ಷ, ಅವರ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಇನ್ನೊಂದ್ ಪಕ್ಷಕ್ಕೆ ಹೋಗ್ತಾರೆ.

ಅ ನಿಮ್ಮ ಪಕ್ಷದಲ್ಲಿ ನಿಮ್ಮವರನ್ನೇ ಬಯ್ಕೊಂಡ್ ಓಡಾಡ್ತಾ ಇದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಿಮಗೆ ಯಾಕೆ ಕೊಡಲಿಲ್ಲ?
-ಅದ್ ಹಂಗೇ. ಬಕೆಟ್ ಹಿಡಿದವರಿಗೆ ಟಿಕೆಟ್ ಕೊಡಲಿಲ್ಲ. ಆದರೆ, ಪಕ್ಷಕ್ಕೆ ಡ್ಯಾಮೇಜ್ ಮಾಡಿದವರ ಇಮೇಜ್ ಚೆನ್ನಾಗಿದೆಯಂತೆ.

ವಯಸ್ಸಾದವರಿಗೆ ಚುನಾವಣೆಯಲ್ಲಿ ಮಣೆ ಹಾಕಲ್ಲ ಅಂತ ನಿಮ್ಮ ಪಕ್ಷದವರು ಹೇಳಿದ್ದಾರಂತಲ್ಲ?
-ಅಯ್ಯೋ, ಚುನಾವಣೆಗೆ ಬಿಡಿ, ನೆಟ್ಟಗೆ ಅವರ ಕಾಲ ಮೇಲೆ ನಿಂತ್ಕೊಳ್ಳೋಕೇ ಆಗದಿದ್ದವರಿಗೆ ಟಿಕೆಟ್ ಕೊಟ್ಟಿಲ್ವೇ. ಇದು ಚುನಾವಣೆ ಅಲ್ಲ ಚಿತಾವಣೆ.
ಆದ್ರೂ ಈ ವಯಸ್ಸಲ್ಲೂ ಇನ್ನೊಂದ್ ಪಕ್ಷಕ್ಕೆ ಹೋಗಿ ಏನ್ ಸಾಧನೆ ಮಾಡ್ತೀರಾ -ವಯಸ್ಸಾಗಿದೆ ಅಷ್ಟೇ ಆಯಾಸ ಆಗಿಲ್ಲ. ಆಯಸ್ಸು ಇನ್ನೂ ಗಟ್ಟಿ ಇದೆ. ಓಲ್ಡ್ ಈಸ್ ಬೋಲ್ಡ ಅನ್ನೋದು ರಾಜಕೀಯದಲ್ಲಿ ಫೇಮಸ್ ಮಾತು.

ಅದ್ಸರಿ, ಅತೃಪ್ತ ಶಾಸಕರೇ 
-ರೀ, ನನ್ನನ್ನ ಅತೃಪ್ತ ಶಾಸಕ ಅಂತೆ ಕರೀಬೇಡ್ರೀ. ನಂದು ಸಿಡಿ ಎ ರಿಲೀಸ್ ಆಗಿದೆ. ನಾನು ಅತೃಪ್ತ ಅಲ್ಲ, ಸಂತೃಪ್ತ.

ನೆಟ್ ಪಿಕ್ಸ್
ತನ್ನ ಆಡಳಿತದಲ್ಲಿ ಪ್ರಜೆಗಳನ್ನ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವ ಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ.

ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ.

ಇವನನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿ ಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು. ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಖೇಮುನನ್ನು ಕೇಳಿದ.

ಅದಕ್ಕೆ ಖೇಮು ಹೇಳಿದ, ‘ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ ನಮ್ಮನ್ನ ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಕಳಕಳಿ, ಉದ್ದೇಶ, ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ ಮಾತ್ರ ಮುಖ್ಯ. ಗೊತ್ತಾಯ್ತಾ?’

ಲೈನ್ ಮ್ಯಾನ್

ನಮ್ಮವರಿಗೆ ಟಿಕೆಟ್ ಕೊಡದಿದ್ರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕ್ತೀವಿ ಅನ್ನೋದು ಯಾವ ಮಠದ ಸ್ವಾಮೀಜಿ?
-ಮುತ್ತಿಗೆ ಮಠ
ಇಂದಿನ ರಾಜಕಾರಣದಲ್ಲಿ ಟಿಕೆಟ್ ಸಿಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ
-ಅವ್ರ್ ಯಾವ್ ಜನ ಅನ್ನೋದೂ ಮುಖ್ಯ ಆಗುತ್ತೆ.
ಕೋಟಾ ಶ್ರೀನಿವಾಸ್ ಪೂಜಾರಿ ಅವರು ಎಂಎಲ್ ಸಿ ಯಾಕೆ ಆದ್ರು?
-ಎಂಎಲ್‌ಎ ಆಗೋಕೆ ಯಾವ ಕೋಟಾದಲ್ಲೂ ಅವರಿಗೆ ಟಿಕೆಟ್ ಕೊಡಲಿಲ್ಲ ಅದಕ್ಕೆ.

ರಾಜಕೀಯ ರಹಸ್ಯ

‘ಎಕ್ಸ್’ ಸಿಎಂ ಗಳಾದ ಮೇಲೂ ಅವರಿಗೆ ‘ಝೆಡ್’ ಸೆಕ್ಯುರಿಟಿ ಕೊಟ್ರೂ ನಮ್ ಜನ ‘ವೈ?’ ಅಂತ ಕೇಳಲ್ಲ.

ಈ ಸಲ ಐಪಿಎಲ್ ನಲ್ಲಿ ಸಿಎಸ್ಕೆ ಪರ ಚೆನ್ನಾಗಿ ಆಡ್ತಾ ಇರೋ ಅಜಿಂಕ್ಯಾ ರಹಾನೆ ಬಗ್ಗೆ ಧೋನಿ ಶಾಸ್ತ್ರ ಕೇಳೋಕ್ ಹೋದಾಗ
ಧೋನಿ- ‘ಶಾಸ್ತ್ರಿ’ಗಳೇ, ಸ್ವಲ್ಪ ನಮ್ ರಹಾನೆ ಭವಿಷ್ಯ ನೋಡಿ ಹೇಳಿ
ಶಾಸ್ತ್ರಿ – ಆಷಾಢ ಕಳೆದು ಶ್ರಾವಣ ಬಂದ್ರೆ, ಫುಲ್ ಟಾಪಲ್ ಬರ್ತಾನೆ.
ಧೋನಿ – ಹ್ಞೂ.. ಬಂದ್ಬುಡು, ಟಾಪಲ್ಲಿ ಗಾಯಕ್ವಾಡ್, ಕಾನ್ವೇ ಇದ್ದಾರೆ. ರಹಾನೆ ಮಿಡ್ಲ್ ಆರ್ಡರ್ ಬ್ಯಾಟ್ಸ ಮನ್. ಅದೆಂಗ್ ಟಾಪಲ್ ಬರ್ತಾನೆ?

ಅಮೃತ ಕುಡಿದೂ ಸಾಯೋ ಕೆಪ್ಯಾಸಿಟಿ ಇರೋದು ಯಾರಿಗೆ?
-ನಮ್ ಆರ್‌ಸಿಬಿ ಪ್ಲೇಯರ್ಸ್‌ಗಳಿಗೆ
ಕುಡುಕರ ಪರ ಹೋರಾಟಕ್ಕೆ ಬೇಕಿರೋದು
-ಸ್ಪಿರಿಟ್
RCB ಫ್ಯಾನ್‌ಗಳ ರಜಿನಿಕಾಂತ್ ವರ್ಷನ್
-ನಾವ್ ಒಂದ್ ಮ್ಯಾಚ್ ಗೆದ್ರೆ, ಕಪ್ ಗೆದ್ದಂಗೆ!
ಎಲೆಕ್ಷನ್ ಸ್ಪೆಷಲ್ ಬೇರೆ ಪಕ್ಷಕ್ಕೆ ಓಟು ಹಾಕೋಕೆ ನಮ್ಮ ಪಕ್ಷದ ಸಿಂಬಲ್ ಬಳಸೋ ಹಾಗಿಲ್ಲ ಅಂತ
ಕಾಂಗ್ರೆಸ್ ನೋರು ಸ್ಟೇ ಆರ್ಡರ್ ತಂದ್ರೆ?