ತನ್ನಿಮಿತ್ತ
ಡಾ.ಸುಧಾಕರ ಹೊಸಳ್ಳಿ
ಡಿಸೆಂಬರ್ ೬, ೧೯೫೬ರಂದು ಭಾರತದ ರತ್ನ ಒಂದು ಇಹಲೋಕ ತ್ಯಜಿಸಿದ ವಿಷಮ ಘಳಿಗೆ, ಭಾರತದ ನೆಲ ಕಳೆದುಕೊಂಡ ಅನರ್ಘ್ಯ ರತ್ನಗಳಲ್ಲಿ ಅಂಬೇಡ್ಕರ್ ಅವರದ್ದು ಮಾಸಿ ಹೋಗದ ನೆನಪಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರರ ಸ್ಮರಣೆ ಎಲ್ಲ ಕಾಲಕ್ಕೂ ಸ್ವೀಕೃತವೇ, ಶೋಷಿತ ಸಮಾಜ ತಂದೆ ಕಳೆದುಕೊಂಡ ಭಾವವನ್ನು ಹೊರಸೂಸಿದರೆ, ಭಾರತಾಂಬೆ ಮಗನನ್ನು ಕಳೆದುಕೊಂಡ ಕರುಳು ಬಳ್ಳಿಯ ಸಂಬಂಧವನ್ನು ತೆರೆದಿಡುತ್ತಾಳೆ.
ಈ ಬಾರಿ ೨೦೨೪ ಡಿಸೆಂಬರ್ ೬ರ ಕಾಲಘಟ್ಟದಲ್ಲಿ ಪುನರಾವರ್ತಿತ ನಡವಳಿಕೆಗಳ, ಸಂಪ್ರದಾಯಗಳ ಜೊತೆಗೆ ಪ್ರಸ್ತುತ ಮಹಾ ಪರಿ
ನಿರ್ವಾಣ ದಿನವೂ ಪ್ರeವಂತ ಭಾರತೀಯರಲ್ಲಿ ಹೊಸದೊಂದು ಹೊಣೆಗಾರಿಕೆಯನ್ನು ಸೃಜಿಸಿದೆ. ಅದು ಸಂವಿಧಾನಕ್ಕೆ ೭೫ ತುಂಬಿದ ಹೊತ್ತು.
ಮಹಾ ಪರಿನಿರ್ವಾಣದ ನೆಲೆಗಟ್ಟು ಸಂವಿಧಾನ ರಚನಕಾರರ, ಸಂವಿಧಾನ ಶಿಲ್ಪಿಯ ಅಂತರಾಳ ವನ್ನು ಅವಲೋಕಿಸುವ, ಸಮಾಜಕ್ಕೆ ನೈಜವಾಗಿ
ಬಗೆದು ತೋರಿಸುವ ತುರ್ತುಂಟು ಮಾಡಿದ ಇಂತಹ ಸಂದರ್ಭದಲ್ಲಿ ಸಂವಿಧಾನ ರಚನೆಯಾಗಿ ೭೫ ವರ್ಷಗಳು ಕಳೆದ ನಂತರವೂ ಸಂವಿಧಾನದ ಕುರಿತು, ಅದರ ಮೂಲಾಂಶಗಳ ಕುರಿತು, ಒಂದಿಷ್ಟು ಗೊಂದಲಗಳು ಇವೆ ಅಥವಾ ಆಗಾಗ ಗೊಂದಲಗಳನ್ನು ಕೃತಕವಾಗಿ ಸೃಜಿಸಲಾಗುತ್ತದೆ.
ಆದ್ದರಿಂದ ಸಂವಿಧಾನ ದಿನಾಚರಣೆಯ ಸ್ಮರಣೆ ಹಾಗೂ ಮಹಾ ಪರಿನಿರ್ವಾಣದ ಹೊತ್ತಿನಲ್ಲಿ ಸಂವಿಧಾನದ ಆತ್ಮ ಏನಾಗಿತ್ತು? ಸಂವಿಧಾನ
ರಚನಕಾರರ ಮೂಲ ಉದ್ದೇಶ ಏನು? ಯಾವ ಕೆಲವು ಸಂಗತಿಗಳು ಸಂವಿಧಾನದ ಭಾಗವಾಗಲೇಬೇಕು ಎಂದು ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರು ಕಟಿಬದ್ಧತೆಯನ್ನು ಹೊಂದಿದ್ದರು ಎಂಬುದರ ಕುರಿತಾಗಿ ಲಿಖಿತ ಅವಲೋಕನದ ಮೂಲಕ ಕೃತಕ ಸೃಷ್ಟಿಯಾಗ ಬಹುದಾದ ಗೊಂದಲಗಳಿಗೆ ಉತ್ತರರೂಪಕದ ತೆರೆಯಲಿಯಬೇಕಾದದ್ದು ಪ್ರಜ್ಞಾವಂತ ನಾಗರಿಕರ, ಕರ್ತವ್ಯ.
ನಾಲ್ಕು ನವಂಬರ್, ೧೯೪೮ ರಂದು ಸಂವಿಧಾನ ರಚನಾ ಸಭೆಯು ಸುದೀರ್ಘ ಚರ್ಚೆ, ವಿಮರ್ಶೆ, ಅವಲೋಕನದ ಮುಖೇನ ರೂಪಿಸಿದ ಕರಡು
ಪ್ರತಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಭೆಯ ಮುಂದೆ ಮಂಡಿಸಿದರು. ಅದೊಂದು ಮಂಡನೆಯನ್ನು ಸೂಕ್ಷ್ಮವಾಗಿ ಅಂತರ್ಗತ ಮಾಡಿಕೊಂಡರೆ ಸಂವಿಧಾನದ ಸದಾಶಯ ಏನೆಂಬುದರ ಅರಿವಾಗುತ್ತದೆ. ಈ ದೃಷ್ಟಿಯಲ್ಲಿ ಉದಾಹರಿಸಬಹುದಾದ ಕೆಲವು ಮೂಲಾಂಶ ಗಳೆಂದರೆ, ‘ಅಧ್ಯಕ್ಷೀಯ ಮಾದರಿಯ ತಿರಸ್ಕಾರ’‘: ಅಂಬೇಡ್ಕರರು ಭಾರತಕ್ಕೆ ಅಮೆರಿಕ ಮಾದರಿಯ ಅಧ್ಯಕ್ಷೀಯ ಪದ್ಧತಿಯನ್ನು ನಿರಾಕರಿಸುತ್ತಾ ಅಮೆರಿಕನ್ ಮತ್ತು ಸ್ವಿಜರ್ಲ್ಯಾಂಡ್ ವ್ಯವಸ್ಥೆಗ ಹೆಚ್ಚಿನ ಸ್ಥಿರತೆಯನ್ನು ಹೊಂದಿವೆ, ಆದರೂ ಅವುಗಳ ಜವಾಬ್ದಾರಿಯ ಪ್ರಮಾಣ ಕಡಿಮೆ ಇರುತ್ತದೆ
ಹಾಗಾಗಿ ಬ್ರಿಟನ್ ಮಾದರಿಯ ಸಂಸದೀಯ ವ್ಯವಸ್ಥೆ ಹೆಚ್ಚಿನ ಜವಾಬ್ದಾರಿ ಬರುವ ಸೂಚಕವಾಗಿದ್ದು ನಾನು ಅದನ್ನು ಅನುಮೋದಿಸುತ್ತೇನೆ
ಎಂದಿದ್ದರು.
‘ಕೇಂದ್ರಕ್ಕೆ ಪರಮಾಽಕಾರ’: ಇತ್ತೀಚೆಗೆ ಕೇರಳ ತಾನು ವಿದೇಶಾಂಗ ಅಧಿಕಾರಿಯನ್ನು ನೇಮಕ ಮಾಡಿದ್ದು, ಪಶ್ಚಿಮ ಬಂಗಾಳ ಕೇಂದ್ರದ ವಿರುದ್ಧ
ಸೆಡ್ಡು ಹೊಡೆದದ್ದು, ತಮಿಳುನಾಡು ಕೇಂದ್ರದ ಪರಮಾಧಿಕಾರವನ್ನು ಒಪ್ಪುವುದಿಲ್ಲ ಎಂದದ್ದು, ಅನುದಾನದ ತಾರತಮ್ಯದ ಕಾರಣ ನೀಡಿ
ಕರ್ನಾಟಕ ಸರಕಾರ ಕೇಂದ್ರದ ವಿರುದ್ಧ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದು ಅರಿವಿಗಿರುವ ವಿಷಯ ವಸ್ತು, ಚಿಂತಕ ಬ್ರೈಸ್ ಅವರ ಹೇಳಿಕೆಯನ್ನು ಉದಾಹರಿಸುತ್ತಾ ಅಮೆರಿಕ ದಲ್ಲಿರುವ ಯಾವುದೇ ರಾಜ್ಯ ಸ್ವತಂತ್ರವಾಗಿ ತನ್ನ ಸಂವಿಧಾನವನ್ನು ಬದಲಿಸಬಹುದು ಆದರೆ
ಭಾರತದ ಯಾವುದೇ ರಾಜ್ಯವು ಎಂತದ್ದೇ ಸಂದರ್ಭದಲ್ಲಿ ಇಂತಹ ಅವಕಾಶವನ್ನು ಹೊಂದಲು ಸಾಧ್ಯವೇ ಇಲ್ಲ, ಸಂವಿಧಾನವನ್ನು ರೂಪಿಸುವಾಗ
ಸಂಯುಕ್ತ ವ್ಯವಸ್ಥೆಯ ಮಾದರಿಯಲ್ಲಿ ಸಂರಕ್ಷಿಸಿದ್ದರು ಕಾಲ ಮತ್ತು ಸಂದರ್ಭದಲ್ಲಿ ಅನುಗುಣವಾಗಿ ಭಾರತ ಏಕಾತ್ಮಕ ಸರ್ಕಾರದ ಮಾದರಿ
ಯಲ್ಲಿ ಅಽಕಾರ ಚಲಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂಬ ಕಠಿಣ ನಿಲುವು ಮತ್ತು ಸಂದೇಶವನ್ನು ಅಂಬೇಡ್ಕರರು ವ್ಯಕ್ತಪಡಿಸಿದ್ದರು.
‘ಸಂವಿಧಾನ ಎಂದರೆ ಎರವಲು ಮಾತ್ರವಲ್ಲ’: ಕರಡು ಸಂವಿಧಾನವು ಆಸ್ಟ್ರೇಲಿಯಾದ ಸಂವಿಧಾನವನ್ನು ಅನುಸರಿಸಿದೆ ಅಥವಾ ಅತಿಯಾಗಿ
ಅದನ್ನು ಅನುಸರಿಸಿದೆ ಎಂದಷ್ಟೇ ಹೇಳಿದರೆ ಸಾಲದು, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಂಯುಕ್ತ ಆಡಳಿತ ವ್ಯವಸ್ಥೆಯಲ್ಲಿ ಸಹಜ
ವಾಗಿಯೇ ಇರುವ ಅನನ್ಯತೆ ಹಾಗೂ ಅತಿ ಸೂತ್ರ ನಿಷ್ಠೆಯನ್ನು ಮೀರಲು ನಮ್ಮ ಕರಡು ಸಂವಿಧಾನವು ಹಲವು ಹೊಸ ಮಾರ್ಗಗಳನ್ನು ಅನುಸರಿಸಿದೆ ಮತ್ತು ಇವು ಅತಿ ವಿಶಿಷ್ಟವಾಗಿದೆ ಈಗಾಗಲೇ ರೂಪಿತವಾಗಿರುವ ಜಾಗತಿಕ ಸಂವಿಧಾನದ ಚೌಕಟ್ಟನ್ನು ಅಭ್ಯಾಸ ಮಾಡುವುದು ಹೊಸ ಸಂವಿಧಾನ ರಚನೆಯ ಆದ್ಯ ಕರ್ತವ್ಯವೇ ಆಗಿದೆ ಹಾಗಾಗಿ ಕೆಲವು ಅಂಶಗಳನ್ನು ವಿವಿಧ ದೇಶಗಳ ಸಂವಿಧಾನದಿಂದ ಎರವಲು ಪಡೆಯಲಾಗಿದೆ ಹಾಗಂತ ಮಾತ್ರಕ್ಕೆ ಭಾರತ ಸಂವಿಧಾನದಲ್ಲಿ ಸ್ವತಂತ್ರವಾದದ್ದು ಏನೂ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಸದನದ ಗಮನಕ್ಕೆ ತಂದಿದ್ದರು ೨೦೧೯ರಲ್ಲಿ ಸಿಂಗಪುರ ಸಂವಿಧಾನ ಭಾರತ ಸಂವಿಧಾನದಲ್ಲಿನ ಬೇಸಿಕ್ ಸ್ಟ್ರಕ್ಚರ್ ನಿಯಮವನ್ನು ತನ್ನ ಸಂವಿಧಾನಕ್ಕೆ ಯಥಾವತ್ತಾಗಿ ಅಳವಡಿಸಿಕೊಂಡಿರುವುದನ್ನು ಗಮನಿಸಬಹುದು.
‘ಸಂವಿಧಾನ ತಿದ್ದುಪಡಿ’: ಕಾಲಕಾಲಕ್ಕೆ ಎದುರಾಗ ಬಹುದಾದ ಹೊಸ ನಿರೀಕ್ಷೆಗಳಿಗೆ ಅನುಗುಣವಾಗಿ ೩೬೮ನೇ ವಿಽಯ ಅಡಿಯಲ್ಲಿ ಭಾರತ ಸಂವಿಧಾನ ವನ್ನು ತಿದ್ದುಪಡಿ ಮಾಡಬಹುದು ಮತ್ತು ತಿದ್ದುಪಡಿ ಮಾಡಲೇಬೇಕು, ಆಗ ಮಾತ್ರ ಸಂವಿಧಾನ ತನ್ನ ಮಹತ್ವವನ್ನು ಉಳಿಸಿಕೊಂಡು ಹೋಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿzರೆ, ಆದಾಗಿಯೂ ಹಾಗಾಗ ಸಂವಿಧಾನ ಬದಲಾವಣೆ ಮತ್ತು ಸಂವಿಧಾನ ತಿದ್ದುಪಡಿಯ ನಡುವೆ
ಅನಗತ್ಯ ಗೊಂದಲ ಸೃಷ್ಟಿಯಾಗುವುದನ್ನು ಗಮನಿಸಲಾಗಿದೆ.
‘ಮುಸ್ಲಿಂ ಲೀಗ್ ಬಾರದಿದ್ದರೂ ಸಂವಿಧಾನ ರಚನೆಯಾಗಲೇಬೇಕು’: ೧೭ ಡಿಸೆಂಬರ್ ೧೯೪೬ ರಂದು ಡಾ.ಜೈಕರ್ ಅವರು ಮುಸ್ಲಿಂ ಲೀಗ್
ಬರೋವರೆಗೂ ಸಂವಿಧಾನ ರಚನೆಯ ಕಾರ್ಯವನ್ನು ಮುಂದೂಡುವಂತೆ ಮಂಡಿಸಿದ್ದ ತಿದ್ದುಪಡಿ ಯನ್ನು ವಿರೋಧಿಸಿ ಮಾತನಾಡಿದ್ದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಈ ತಿದ್ದುಪಡಿ ಮತ್ತು ನಡವಳಿಕೆ ಸಂವಿಧಾನ ರಚನಾ ಸಭೆಯ ಅಂತಿಮ ತೀರ್ಮಾನವನ್ನು ಕುರಿತು ಮುಸ್ಲಿಂ ಲೀಗ್
ನಿರಾಕರಣಾಽಕಾರವನ್ನು (ವೀಟೋ) ಚಲಾಯಿಸಬಹುದು ಎಂಬಂತೆ ಮುಸ್ಲಿಂ ಲೀಗೆ ಪ್ರೋತ್ಸಾಹ ಕೊಡುವಂತಿದೆ, ಈ ಸಭೆಯ ಭಾವಿ ಚಟುವಟಿಕೆ
ಗಳಿಗೆ ಬೆದರಿಕೆ ಒಡ್ಡುವ ಪ್ರಕ್ರಿಯೆ ಇದಾಗಿದ್ದು ಇದು ಸ್ವೀಕಾರವಲ್ಲ, ಮುಸ್ಲಿಂ ಲೀಗ್ ಬಾರದೇ ಸಂವಿಧಾನ ರಚನಾ ಕಾರ್ಯ ನಿರಂತರವಾಗಿರು
ತ್ತದೆ ಮತ್ತು ಅದು ನಿರಂತರವಾಗಿ ಸಾಗಬೇಕು ಎಂದು ಸಂವಿಧಾನ ರಚನಾ ಸಭೆಯಲ್ಲಿ ಗುಡುಗಿದ್ದರು.
‘ಭಾರತ ಒಟ್ಟಾಗುವುದನ್ನು ಜಗತ್ತಿನ ಯಾವ ಶಕ್ತಿಯು ತಡೆಯಲು ಸಾಧ್ಯವಿಲ್ಲ’: ತಮಗೆ ಸಂವಿಧಾನ ರಚನಾ ಸಭೆಯಲ್ಲಿ ಮೊದಲು ಮಾತ
ನಾಡಲು ಅವಕಾಶ ಸಿಕ್ಕ ದಿವಸದಂದು ಅಂಬೇಡ್ಕರ್ ರವರು ಇಂದು ನಾವು ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಹೋಳಾಗಿರು
ವುದು ವಾಸ್ತವವೇ ಆಗಿದ್ದರೂ, ಸಮಯ ಮತ್ತು ಸನ್ನಿವೇಶ ಬಂದಾಗ ಈ ದೇಶ ಒಂದಾಗುವುದನ್ನು ಜಗತ್ತಿನ ಯಾವ ಶಕ್ತಿಯು ತಡೆಯಲಾರದು,
ನಮ್ಮೆಲ್ಲ ಜಾತಿ ಮತಗಳ ನಡುವೆಯೂ ನಾವು ಯಾವುದೋ ಒಂದು ರೂಪದಲ್ಲಿ ಸಂಯುಕ್ತ ಜನಾಂಗವಾಗುತ್ತೇವೆ ಎನ್ನುವುದರಲ್ಲಿ ನನಗೆ
ಕಿಂಚಿತ್ತು ಅನಿಶ್ಚಿತತೆ ಇಲ್ಲ ಎಂದು ಐಕ್ಯ ಭಾರತದ ಪ್ರತಿಪಾದನೆ ಮಾಡಿದ್ದರು.
‘ಪ್ರಸ್ತಾವನೆಯಲ್ಲಿ ಭಾರತೀಯರಾದ ನಾವು ಅವಳ ಪ್ರಜೆಗಳು ಎಂದು ಸಂಬೋಧಿಸಬೇಕೆಂಬ ಆಗ್ರಹ’: ೧೭ ಅಕ್ಟೋಬರ್ ೧೯೪೯ ರಂದು
ಎಚ್.ವಿ.ಕಾಮತ್ ಅವರು ನಾನು ಪ್ರಸ್ತಾವನೆಯ ಮೂಲ ಪಟ್ಟಿದೊಡನೆ ಸ್ವಲ್ಪ ಸ್ವಾತಂತ್ರ್ಯವನ್ನು ವಹಿಸಿದ್ದೇನೆ. ನಾನು ತಿಳಿಸಿದ ರೀತಿ ೧೯೪೬ರ
ಡಿಸೆಂಬರ್‌ನಲ್ಲಿ ನೆಹರುರವರು ಮಂಡಿಸಿದ ಗಣರಾಜ್ಯ ನಿರ್ಣಯದಲ್ಲಿ ಅವಳ ಭವಿಷ್ಯದ ಆಡಳಿತ ಎಂಬ ಪದಗಳನ್ನು ಉಪಯೋಗಿಸಿದ್ದಾರೆ
ತಾಯಿನಾಡಿಗೆ ಅವಳು ಎಂಬುದು ತಕ್ಕ ಪದ, ಈಗಿರುವಾಗ ಪ್ರಸ್ತಾವನೆಯಲ್ಲಿ ನಾವು ಅವಳ ಪ್ರಜೆಗಳು ಎಂದು ಹೇಳಬೇಕೆ ಹೊರತು ಅದರ
ಪ್ರಜೆಗಳು ಎಂದಲ್ಲ, ಸಂವಿಧಾನ ಸಭೆಯ ಈ ಘನತೆಯುಳ್ಳ ಸದನದಲ್ಲಿ ಭಗವದ್ಗೀತೆಯ ಸೂರ್ತಿ ಉಸದಲ್ಲಿ ನಾವು ಈ ಸಂವಿಧಾನವನ್ನು ಶ್ರದ್ಧಾಯುಕ್ತ ವಾಗಿ ದೇವರಿಗೆ ನಿವೇದಿಸಿ ಸಮರ್ಥಿಸೋಣ ಎಂದು ಅಗ್ರಹ ಮಾಡಿದ್ದರು.
ಅಂಬೇಡ್ಕರನ್ನು ಸೇರಿದಂತೆ ಸಂವಿಧಾನ ರಚನಾ ಸಭೆಯ ಅನೇಕ ಸದಸ್ಯರು ಭವಿಷ್ಯ ಭಾರತಕ್ಕಾಗಿ ರಚನೆಯಾಗುವ ಸಂವಿಧಾನ
ಪರಕೀಯತೆ ತೊಡೆದು ಹಾಕಿ, ಭಾರತೀಯತೆಯ ಗುಣ ವಿಶೇಷಗಳನ್ನು, ನೆಲ ಧರ್ಮದ ಪರಂಪರೆಗಳನ್ನು ಆದರ್ಶವಾಗಿ ಇಟ್ಟುಕೊಂಡು ಅದು
ಅಡಿಯಲ್ಲಿ ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬ ಭಾರತೀಯನಿಗೂ ಭಾರತೀಯತೆಯ ಬಗ್ಗೆ ಹೆಮ್ಮೆ ಮೂಡಿಸುವಂತಿರಬೇಕು, ಸಂವಿಧಾನವು
ಭಾರತದ ಐಕ್ಯತೆಯನ್ನೇ ಪ್ರತಿಪಾದಿಸಬೇಕು, ಪ್ರಭಾವಿಸಬೇಕು, ಪ್ರೇರೇಪಿಸಬೇಕು ಎಂಬ ಸದಾಶಯವನ್ನು ಹೊಂದಿದ್ದರು.
ವಸ್ತು ಸ್ಥಿತಿ ಮತ್ತು ಶೋಧಿತ ಸತ್ಯ ಹೀಗಿದ್ದರೂ, ಭಾರತವನ್ನು ವಿಘಟಿಸುವ, ಭಾರತೀಯತೆ ಯನ್ನು ಕೀಳಾಗಿ ಕಾಣುವ ಆಲೋಚನೆಗಳ ಜೊತೆ
ಸಂವಿಧಾನವನ್ನು ಅದರ ನಿಯಮಗಳನ್ನು ಸಮೀಕರಿಸುವ ಪ್ರಯತ್ನ ಸಾಗುತ್ತಲೇ ಬಂದಿದೆ, ಈ ಹಿನ್ನೆಲೆಯಲ್ಲಿ ಸಂವಿಧಾನ ರಚನೆಯ ಕಾಲಘಟ್ಟ
ದಲ್ಲಿ ನಡೆದ ಚರ್ಚೆಗಳು ಹಾಗೂ ಒತ್ತಿದ ಅಂತಿಮ ಮುದ್ರೆಯ ಬಗ್ಗೆ ಸಂಶೋಧನಾತ್ಮಕವಾಗಿ ಅಭ್ಯಾಸ ಮಾಡುವ ಮೂಲಕ ಸದರಿ ಸಂಗತಿಗಳಿಗೆ
ಉತ್ತರವನ್ನು ನೀಡಬಹುದು ಹಾಗೂ ಸಂವಿಧಾನ, ಅಂಬೇಡ್ಕರ್ ಶ್ರೇಷ್ಠತೆಯನ್ನು ಪೀಳಿಗೆಯಿಂದ ಪೀಳಿಗೆಗೆ ಪ್ರಸರಿಸುತ್ತ ಸಾಗಬಹುದು.
ಆ ಮೂಲಕ ದೇಶ ತುಂಡು ಮಾಡುವ ಯಾವುದೇ ನಡವಳಿಕೆಗಳಿಗೆ ಸಂವಿಧಾನ ಮತ್ತು ಸಂವಿಧಾನ ರಚನಾಕಾರರು ಅವಕಾಶ ನೀಡಿರಲಿಲ್ಲ
ಎಂಬ ಸಾರ್ವತ್ರಿಕ ತತ್ವವನ್ನು ಸಾರಲು ಬಹುದು. ಇಂತಹ ತೌಲನಿಕ ಸಂಶೋಧನೆ ಅವಲೋಕನ ವಿಮರ್ಶೆ ಸಮಾಜವನ್ನು ಅಸ್ಥಿರಗೊಳಿಸಲು,
ವಿಘಟನಾ ಕಾರ್ಯದ ಅಜೆಂಡಾ ಇಟ್ಟುಕೊಂಡ ವರಿಗೆ, ನಿಜ ರಾಷ್ಟ್ರೀಯವಾದಿಯ ಹೃದಯ ಕಿರಣಗಳನ್ನು ಭಾರತೀಯ ಯುವ ಸಮಾಜಕ್ಕೆ
ಹೊಕ್ಕಿಸುವ ಮುಖಾಂತರ ಈ ನೆಲದ ವಿರೋಧಿ ಗಳ ಖಾಯಿಲೆಗೆ ಮದ್ದು ನೀಡಬಹುದು ಈ ಮೂಲಕ ಸಂವಿಧಾನವನ್ನು, ಅಂಬೇಡ್ಕರ್ ಅವರ
ಆಶಯವನ್ನು ಸಾಣೆ ಹಿಡಿದಂತೆ ಹೊಳಪಿಸಬಹುದು.
(ಲೇಖಕರು: ಹವ್ಯಾಸಿ ಬರಹಗಾರರು)
ಇದನ್ನೂ ಓದಿ: sudhakar Hosally ok