Friday, 22nd November 2024

ಕೋವಿಡ್ ಲಸಿಕೆ: ಸವಾಲು, ಸಮಸ್ಯೆ !

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

ಕರೋನಾ ಉಪಟಳ ಅನುಭವಿಸುತ್ತಿರುವ ಜಗತ್ತು ಈಗ ಕೋವಿಡ್ ವ್ಯಾಕ್ಸೀನ್ ನಿರೀಕ್ಷೆಯಲ್ಲಿದೆ. ಹಲವು ಲಸಿಕೆಗಳು ಪ್ರಾಯೋಗಿಕ ಹಂತದ ಅಂತಿಮ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ.

ಹಾಗೆಯೇ ಹಲವು ದೇಶಗಳ ಸರಕಾರಗಳು ಈ ವ್ಯಾಕ್ಸೀನ್‌ಗಳನ್ನು ನಾಗರಿಕರಿಗೆ ವಿತರಿಸುವಲ್ಲಿ ತಮ್ಮ ತಮ್ಮ ಯೋಜನೆಗಳನ್ನು
ರೂಪಿಸುತ್ತಿವೆ. ನಮ್ಮ ಕೇಂದ್ರ ಸರಕಾರ ತಾನು 4 ಗುಂಪುಗಳಿಗೆ ಉಚಿತವಾಗಿ ಲಸಿಕೆ ಹಂಚುತ್ತೇನೆ ಎಂದು ಇತ್ತೀಚೆಗೆ ಪ್ರಕಟಣೆ ಹೊರಡಿಸಿತು.

ಕೇಂದ್ರ ಸರಕಾರದ ಆದ್ಯತೆಯ ಗುಂಪುಗಳೆಂದರೆ : ಆರೋಗ್ಯ ಕಾರ್ಯಕರ್ತರು-ವೈದ್ಯರು, ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆ ಯರು. ಎರಡನೇ ವರ್ಗ ಎಂದರೆ ಕೋವಿಡ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮುನ್ನಲೆಯ ಕೆಲಸಗಾರರು ಅಂದರೆ ಪೊಲೀ
ಸ್ ಮತ್ತು ಸೈನಿಕರು, ಮೂರನೆಯ ವರ್ಗ ಎಂದರೆ 50 ವರ್ಷ ಮೇಲಿನವರು, ನಾಲ್ಕನೇ ವರ್ಗ ಎಂದರೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 50 ವರ್ಷದ ಒಳಗಿನವರು.

ಈ ಕಾರ್ಯಕ್ರಮ ಮೇಲ್ನೋಟಕ್ಕೆ ಬಹಳ ಸರಳವಾಗಿ ತೋರುತ್ತದೆ. ಆದರೆ ಇದು ಅಷ್ಟು ಸುಲಭವಾಗಿ ಕಾರ್ಯಸಾಧುವಲ್ಲ. ವ್ಯಾಕ್ಸೀನ್‌ಗಳು ಸೀಮಿತ ಪ್ರಮಾಣದಲ್ಲಿ ಲಭ್ಯವಿರುವಾಗ ಈ ಮೇಲಿನ 4 ಗುಂಪುಗಳ ಯಾರಿಗೆ ಇನ್ನೂ ಜಾಸ್ತಿ ಆದ್ಯತೆ ಕೊಡ
ಲಾಗುತ್ತದೆ? ಹೀಗೆ ತಜ್ಞರು ತಮ್ಮ ಸಂದೇಹ ವ್ಯಕ್ತಪಡಿಸುತ್ತಾರೆ. ಯಾರಿಗೆ ಮೊದಲು ಕೊಡುವುದು ಎಂಬ ಅಂಶ ಯಾವ ರೀತಿಯ ವ್ಯಾಕ್ಸೀನ್ ನಮಗೆ ಲಭ್ಯವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗುತ್ತದೆ.

ಅಂದರೆ ಲಭ್ಯವಾಗಬಹುದಾದ ವ್ಯಾಕ್ಸೀನ್ ಕಡಿಮೆ ವಯಸ್ಸಿನವರಲ್ಲಿ ಹೆಚ್ಚು ಪರಿಣಾಮಕಾರಿಯಾ ಅಥವಾ ವಯಸ್ಸಾದವರಲ್ಲಿ ಹೆಚ್ಚು ಪರಿಣಾಮಕಾರಿಯಾ ಅನ್ನುವುದರ ಮೇಲೆ ಅವಲಂಬಿತವಾಗುತ್ತದೆ. ಇನ್ನೂ ಹೆಚ್ಚಿನ ಸಮಸ್ಯೆ ಎಂದರೆ ಈ ವ್ಯಾಕ್ಸೀನ್
ಗಳನ್ನು ಜನರಿಗೆ ಕೊಡುವಾಗ ಮತ್ತು ಸಾಗಾಟ ಮಾಡುವಾಗ ತುಂಬಾ ಕಡಿಮೆ ತಾಪಮಾನದಲ್ಲಿರಿಸಬೇಕಾದ ಅನಿವಾರ್ಯತೆ ಇದೆ. ಹಾಗೆ ಅವನ್ನು ಅತಿ ಕಡಿಮೆ ತಾಪಮಾನದಲ್ಲಿಟ್ಟು ಹಂಚುವ ವ್ಯವಸ್ಥೆ ಕಷ್ಟವಾಗಬಹುದು. ಅದರಲ್ಲಿಯೂ ಆರ್‌ಎನ್‌ಎ
ವ್ಯಾಕ್ಸೀನ್‌ಗಳನ್ನು -70 ಡಿಗ್ರಿಯಿಂದ -80 ಡಿಗ್ರಿಯ ಅತಿ ಶೀತದ ತಾಪಮಾನದಲ್ಲಿರಿಸಬೇಕು.

ಹಿಂದಿನ ಅನುಭವದ ಪ್ರಕಾರ ಎಬೋಲಾ ವ್ಯಾಕ್ಸೀನ್ ಕೊಡುವಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಪಶ್ಚಿಮ ಆಫ್ರಿಕಾದ ಹವಾಮಾನದಲ್ಲಿ ಈ ಕಡಿಮೆ ತಾಪಮಾನದಲ್ಲಿ ಎಬೋಲಾ ವ್ಯಾಕ್ಸೀನ್ ಹಂಚುವುದು ಕಷ್ಟವಾದರೂ ಅದನ್ನು ಹೇಗೋ ನಿಭಾಯಿಸಲಾಯಿತು. ಅದು ಕೆಲವು ನೂರು ಸಾವಿರ ಡೋಸ್ ಆಗಿದ್ದರಿಂದ ನಿಭಾಯಿಸುವುದು ತೀರಾ ಕಷ್ಟವಾಗಲಿಲ್ಲ. ಆದರೆ ಈಗ ಹಲವು ಮಿಲಿಯನ್ ಡೋಸ್ ಗಳು ಅಗತ್ಯವಿರುವುದರಿಂದ ಅದನ್ನು ಜನರಲ್ಲಿ ಸೂಕ್ತವಾಗಿ ಹಂಚುವುದು ಭಾರತದಲ್ಲಿ ಮಾತ್ರವಲ್ಲ ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ಸಹಿತ ಕಷ್ಟವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈಗ ತಯಾರಾಗುತ್ತಿರುವ ಕೆಲವು ವ್ಯಾಕ್ಸೀನ್ ಗಳಲ್ಲಿ ತೀರಾ ಕಡಿಮೆಯಲ್ಲದ ತಾಪಮಾನದಲ್ಲಿ ಇಡಬಹುದಾದ ವ್ಯಾಕ್ಸೀನ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗುತ್ತಿದೆ. ಆದರೆ ಮೊದಲು ಈಗ ಮುಂಚೂಣಿಯಲ್ಲಿರುವ ವ್ಯಾಕ್ಸೀನ್‌ಗಳು ಆ ವಿಭಾಗ ದಲ್ಲಿ ಇಲ್ಲ ಎನ್ನಲಾಗುತ್ತಿದೆ. ಭಾರತದಲ್ಲಿ ಈ ರೀತಿಯ ಸಮಸ್ಯೆ ಮೊದಲು ಎದುರಾಗಿರಲಿಲ್ಲ. ಇಲ್ಲಿ ಕಡಿಮೆ ತಾಪಮಾನ ದಲ್ಲಿರಿ
ಸಲು ಬೇಕಾದ ಕೋಲ್ಡ ಫ್ರೀಜರ್‌ಗಳು ಮಾತ್ರವಲ್ಲ, ನಿರಂತರ ವಿದ್ಯುಚ್ಛಕ್ತಿಯ ಅವಶ್ಯಕತೆಯೂ ಇದೆ.

ಹಾಗಾಗಿ ಈ ವ್ಯಾಕ್ಸೀನ್‌ಗಳನ್ನು ಹೀಗೆ ಸತತ ವಿದ್ಯುತ್ ಲಭ್ಯವಿರುವ ದೊಡ್ಡ ನಗರ ಮತ್ತು ಪಟ್ಟಣಗಳಲ್ಲಿ ಮಾತ್ರ ಇರಿಸಿ ಅಲ್ಲಿಗೇ ಸುತ್ತ ಮುತ್ತಲಿನ ಜನರು ಬಂದು ವ್ಯಾಕ್ಸೀನ್ ತೆಗೆದು ಕೊಳ್ಳುವಂತೆ ಮಾಡುವ ಬಗ್ಗೆ ಚಿಂತನೆ ನಡೆಸಲಾ ಗುತ್ತಿದೆ. ಹಾಗಾಗಿ ಈ
ಕೋವಿಡ್ ವ್ಯಾಕ್ಸೀನ್ ಹಂಚು ವಲ್ಲಿ ಸೂಕ್ತ ಸಾಗಾಟದ ವ್ಯವಸ್ಥೆ, ಅತಿ ಕಡಿಮೆ ತಾಪ ಮಾನದಲ್ಲಿ ಇರಿಸುವ ವ್ಯವಸ್ಥೆ ಬೇಕಾಗಿರುವು ದರಿಂದ ಇದು ಆರ್ಥಿಕವಾಗಿಯೂ ಹೊರೆಯಾಗುತ್ತಾ ಹೋಗುತ್ತದೆ. ಈಗ ಕೊನೆಯ ಹಂತದಲ್ಲಿರುವ ಇಂಗ್ಲೆಂಡಿನ ಆಕ್ಸ್ ಫರ್ಡ್
ವ್ಯಾಕ್ಸೀನ್‌ಗೆ ತೀರಾ ಕಡಿಮೆ ತಾಪಮಾನದಲ್ಲಿರಿಸುವ ಅವಶ್ಯಕತೆ ಅಗತ್ಯವಿಲ್ಲ ಎನ್ನಲಾಗುತ್ತಿದೆ.

ಹಾಗಾಗಿ ಈಗಿರುವ ಎಂದಿನ ಇತರ ಲಸಿಕೆಗಳಂತೆ ಇದನ್ನು ಕೊಡಬಹುದು. ಭಾರತದ ವ್ಯಾಕ್ಸೀನ್ ಈ ಮಧ್ಯೆ ಭಾರತದ ಸ್ವಂತ ವ್ಯಾಕ್ಸೀನ್ ಬಗ್ಗೆ ಸುದ್ದಿ ಬರತೊಡಗಿದೆ. ಪೂನಾದ ಜೆನ್ನೋವಾ ಫಾರ್ಮಾಸುಟಿಕಲ್ ಕಂಪನಿಯ ಆರ್‌ಎನ್‌ಎ ವ್ಯಾಕ್ಸೀನ್
೨೦೨೧ರ ಮಾರ್ಚ್‌ನಲ್ಲಿ ಹೊರಬರಬಹುದೆಂದು ನಿರೀಕ್ಷಿಸ ಲಾಗಿದೆ. ಇದು ಬಯಲಾಜಿಕಲ್ ಮೂಲದ ವ್ಯಾಕ್ಸೀನ್ ಆದ್ದರಿಂದ ಅದಕ್ಕೆ ಸಂಬಂಧಿಸಿದ ವ್ಯವಸ್ಥೆ ಹಾಗೂ ಔಷಧದ ಪ್ರಾಧಿಕಾರದ ಅನುಮತಿ ಇವೆ ಶಿಷ್ಟಾಚಾರದಿಂದ ಇದು ತಡವಾಯಿತು ಎನ್ನಲಾಗಿದೆ.

ಮೇಲಿನ ಕಂಪನಿಯ ವಕ್ತಾರರ ಪ್ರಕಾರ ಫೈಜರ್‌ನ ವ್ಯಾಕ್ಸೀನ್ ಕೇವಲ 60 ಮಿಲಿಯನ್ ಡೋಸ್‌ಗಳ ಉತ್ಪಾದನೆ ಸಾಧ್ಯ ಎಂದು ತಿಳಿಸಿzರೆ. ಆದರೆ ಜಗತ್ತಿನಲ್ಲಿ ಒಂದು ಬಿಲಿಯನ್‌ಗಿಂತಲೂ ಜಾಸ್ತಿ ವ್ಯಾಕ್ಸೀನ್ ಅವಶ್ಯಕತೆ ಇದೆ. ಹಾಗಾಗಿ ಭಾರತದ ತಮ್ಮ ವ್ಯಾಕ್ಸೀನ್ ಗೆ ಒಳ್ಳೆಯ ಸ್ಕೋಪ್ ಇದೆ ಎಂದು ಅವರ ಅಭಿಪ್ರಾಯ. ಈ ಮಧ್ಯೆ ಫೈಜರ್ ಕಂಪನಿಯು ವೃತ್ತ ಪತ್ರಿಕೆಗಳಲ್ಲಿ ತಮ್ಮ ವ್ಯಾಕ್ಸೀನ್ 90% ರಷ್ಟು ಸಫಲವಾಗಿದೆ ಎಂದು ಹೇಳಿಕೊಂಡಿದೆ. 3ನೇ ಹಂತದಲ್ಲಿನ ಪ್ರಯೋಗದ ಫಲಿತಾಂಶದ ಮೇಲೆ ಆ ಕಂಪನಿ ಹಾಗೆ ಹೇಳಿಕೊಂಡಿದೆ. ನಮ್ಮ ಭಾರತದ ವ್ಯಾಕ್ಸೀನ್ ಸಹಿತ ಆರ್‌ಎನ್‌ಎ ವ್ಯಾಕ್ಸೀನ್.

ಇದರ ದೃಢತೆಯ ಬಗ್ಗೆ ಆರಂಭದಲ್ಲಿ ಆ ಕಂಪನಿಯವರಿಗೆ ಅಳುಕಿತ್ತು. ಕಾರಣ ಎಂದರೆ ಈ ರೀತಿಯ ವ್ಯಾಕ್ಸೀನ್ ಈಗಾಗಲೇ ಚಾಲಿ
ಯಲ್ಲಿರಲಿಲ್ಲ. ಆದರೀಗ ಸಫಲತೆ ಕಂಡು ಭಾರತದ ವ್ಯಾಕ್ಸೀನ್ ಕಂಪನಿಗೆ ಸ್ವಲ್ಪ ಸಮಾಧಾನ ಹಾಗೂ ಕಂಪನಿಯ ಆತ್ಮವಿಶ್ವಾಸ ಹೆಚ್ಚಿದೆ. ಆರ್‌ಎನ್‌ಎ ವ್ಯಾಕ್ಸೀನ್ ಎಂದರೇನು ? ಕರೋನಾ ವೈರಸ್‌ನ ಜೆನೆಟಿಕ್ ಸೀಕ್ವೆನ ಒಂದು ಅಂಶವನ್ನು ಉಪಯೋಗಿಸಿ ದೇಹಕ್ಕೆ ಚುಚ್ಚಲಾಗುತ್ತದೆ. ಒಮ್ಮೆ ದೇಹದೊಳಗೆ ಬಂದ ನಂತರ ಅಲ್ಲಿನ ಜೀವಕೋಶಗಳು ಆಂಟಿಜೆನ್‌ನ್ನು ಉತ್ಪಾದಿಸುತ್ತವೆ. ಅದಕ್ಕೆ ಸೂಕ್ತವಾದ ಆಂಟಿಬಾಡಿಯನ್ನು ದೇಹದ ಪ್ರತಿರೋಧ ವ್ಯವಸ್ಥೆ ಹುಟ್ಟುಹಾಕುತ್ತದೆ. ಹಾಗಾಗಿ ವೈರಸ್ ಅನ್ನೇ ದೇಹಕ್ಕೆ ಚುಚ್ಚಿ ಪ್ರತಿರೋಧ ವ್ಯವಸ್ಥೆಯನ್ನು ಹುಟ್ಟು ಹಾಕುವ ಬದಲು ಮೇಲಿನ ಈ ಕ್ರಮ ಹೆಚ್ಚು ಸುರಕ್ಷಿತ ಎನ್ನಲಾಗಿದೆ.

ಇನ್ನು ವ್ಯಾಕ್ಸೀನ್‌ನ ಇತರ ಸಮಸ್ಯೆಗಳತ್ತ ಗಮನ ಹರಿಸೋಣ. 4 ವಾರಗಳ ಅಂತರದಲ್ಲಿ ಈ ವ್ಯಾಕ್ಸೀನ್ ನ 2 ಡೋಸ್‌ಗಳನ್ನು ನೀಡಬೇಕಾಗುತ್ತದೆ. ಈಗ ಅಂತಿಮ ಹಂತದಲ್ಲಿರುವ ಎ ವ್ಯಾಕ್ಸೀನ್‌ಗಳನ್ನು ಹೀಗೆ 2 ಡೋಸ್‌ಗಳಲ್ಲಿ ಕೊಡಬೇಕಾಗುತ್ತದೆ. ಪೋಲಿಯೋ ವಿರುದ್ಧ ವ್ಯಾಕ್ಸೀನ್‌ಗಳನ್ನು ಇದೇ ರೀತಿ ಒಂದು ತಿಂಗಳ ಅಂತರದಲ್ಲಿ ಕೊಟ್ಟು ಅಭ್ಯಾಸವಿರುವುದರಿಂದ ಇದು
ಕಷ್ಟವಾಗಲಾರದು ಎಂದು ಆರೋಗ್ಯ ಕಾರ್ಯಕರ್ತರ ಅಭಿಮತ.

ಪೋಲಿಯೋ ವ್ಯಾಕ್ಸೀನ್ ಹನಿಗಳನ್ನು ಬಾಯಿಯ ಮೂಲಕ ಕೊಡು ವುದಾಗಿತ್ತು. ಆದರೆ ಈಗ ಬರುವ ಕೋವಿಡ್ ವ್ಯಾಕ್ಸೀನ್‌ಗಳು ಇಂಜೆಕ್ಷನ್ ಗಳ ರೂಪದ್ದಾದರೂ ಬೇರೆ ಎಲ್ಲವೂ ಮೊದಲಿನ ಪೋಲಿಯೋ ವ್ಯಾಕ್ಸೀನ್ ರೀತಿಯೇ ಆಗಿದ್ದರಿಂದ ಅದು ಕಷ್ಟವಾಗ ಲಿಕ್ಕಿಲ್ಲ ಎಂಬ ಭಾವನೆಯಿದೆ. ದಡಾರ ಮತ್ತು ರುಬೆ ವ್ಯಾಕ್ಸೀನ್‌ಗಳನ್ನು ಈ ರೀತಿಯ ಇಂಜೆಕ್ಷನ್ ರೂಪದಲ್ಲಿಯೇ ಒಂದು ತಿಂಗಳ ಅಂತರದಲ್ಲಿ ಕೊಟ್ಟ ಅನುಭವ ಈಗಾಗಲೇ ಇದೆ ಎಂದು ಹಿರಿಯ ಆರೋಗ್ಯ ಕಾರ್ಯಕರ್ತರು ಅಭಿಪ್ರಾಯ ಪಡುತ್ತಾರೆ.

ಇದುವರೆಗೆ ಇದ್ದ ರಾಷ್ಟ್ರೀಯ ವ್ಯಾಕ್ಸೀನ್ ಕಾರ್ಯಕ್ರಮ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಈ ಕೋವಿಡ್ ವ್ಯಾಕ್ಸೀನ್ ಎಲ್ಲಾ ವಯೋ ಮಾನದವರಿಗೂ ಅದರಲ್ಲಿಯೂ ತೀರಾ ವಯಸ್ಸಾದವರಿಗೂ ಕೊಡುವ ಅವಶ್ಯಕತೆ ಇದೆ. ಹಾಗಾಗಿ
ರಾಷ್ಟ್ರೀಯ ವ್ಯಾಕ್ಸೀನ್ ಕಾರ್ಯಕ್ರಮದ ಹಿಂದಿನ ಅನುಭವಗಳು ಎಷ್ಟು ಪ್ರಮಾಣದಲ್ಲಿ ಈ ಕೋವಿಡ್ ವ್ಯಾಕ್ಸೀ ನ್ ಕೊಡುವಲ್ಲಿ ಉಪಯೋಗವಾಗುತ್ತದೆ ಎಂದು ಕಾದು ನೋಡಬೇಕಷ್ಟೆ. ಜನಸಂಖ್ಯೆಯ 60-70% ಜನರಲ್ಲಿ ವ್ಯಾಕ್ಸೀನ್ ಪ್ರಯೋಗ ಮಾಡಿದರೆ ಈ ಸಾಂಕ್ರಾಮಿಕ ಕೊನೆಗೊ ಳ್ಳುತ್ತದೆ ಎನ್ನಲಾಗಿದೆ.

ಹಾಗಾಗಿ ಈಗ ಉಚಿತವಾಗಿ ವ್ಯಾಕ್ಸೀನ್ ಲಭ್ಯ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ. ಹಾಗೆಂದು ವ್ಯಾಕ್ಸೀನ್ ಜಾಸ್ತಿ ಪ್ರಮಾಣದಲ್ಲಿ ಲಭ್ಯವಾದಾಗ ಅವುಗಳನ್ನು ಮಾರಾಟಕ್ಕೆ ಇಡಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಕಡಿಮೆ ಪ್ರಮಾಣದಲ್ಲಿ ಮಾತ್ರ ಲಭ್ಯವಿದ್ದಾಗ ಈಗ ಸರಕಾರ ಸೂಚಿಸಿದಂತೆ ಮೊದಲು ತಿಳಿಸಿದ ಆದ್ಯತಾ ವರ್ಗಕ್ಕೆ ಮೀಸಲಿಡಬೇಕಾಗುತ್ತದೆ ಎಂದು ತಜ್ಞರ ಅಭಿಮತ. ಕೆಲವು ಕಂಪನಿಗಳಿಗೆ ವ್ಯಾಕ್ಸೀನ್‌ಗಳನ್ನು ಕೊಳ್ಳಲು ಸರಕಾರ ಅನುಮತಿ ಕೊಡಬಹುದೆಂಬ ಅಭಿಪ್ರಾಯವಿದೆ. ಅಲ್ಲದೆ ಹೆಚ್ಚಿನ ಬೆಲೆಯ ವ್ಯಾಕ್ಸೀನ್‌ಗಳನ್ನು ಕೊಳ್ಳಲು ಅನುಕೂಲವಿರುವ ಶ್ರೀಮಂತ ವರ್ಗ ಇದನ್ನು ಕೊಳ್ಳಲು ಅವಕಾಶ ಮಾಡಿ ಕೊಡಲಾಗುತ್ತದೆ.

ಭಾರತದಲ್ಲಿ ಹಂಚಲು ಯೋಗ್ಯ ವಲ್ಲದ ವ್ಯಾಕ್ಸೀನ್ ಗಳನ್ನು ಅದರ ಬೆಲೆಯ ದೃಷ್ಟಿಯಿಂದ ಅಥವಾ ಅತಿ ಕಡಿಮೆ ತಾಪಮಾನ ದಲ್ಲಿರಿಸಬೇಕಾದ ಅನಿವಾರ್ಯತೆ ಇರುವ ವ್ಯಾಕ್ಸೀನ್‌ಗಳನ್ನು ಅದನ್ನು ಕೊಳ್ಳಲು ಅನುಕೂಲವಿರುವ ಕಂಪನಿಗಳಿಗೆ, ಸಂಸ್ಥೆಗಳಿಗೆ ಹಾಗೂ ವೈಯಕ್ತಿಕವಾಗಿಯೂ ತೀರಾ ಹೆಚ್ಚಿನ ಬೆಲೆಯಿಟ್ಟು ಅವರುಗಳಿಗೆ ಕೊಳ್ಳಲು ಉತ್ತೇಜನ ಕೊಡಲಾಗುತ್ತದೆ ಎಂದು ತಜ್ಞರ ಅಭಿಪ್ರಾಯ.

ಫೈಜರ್‌ನ ವ್ಯಾಕ್ಸೀನ್ : ಈಗ ಬಹುರಾಷ್ಟ್ರೀಯ ಕಂಪನಿ ಫೈಜರ್‌ನ ವ್ಯಾಕ್ಸೀನ್ ಬಗ್ಗೆ ಜಗತ್ತಿನಾದ್ಯಂತ ಹೆಚ್ಚು ಚರ್ಚೆ ನಡೆಯುತ್ತಿದೆ. ಇದು ಪ್ರಯೋಗದ ಅಂತಿಮ ಹಂತದಲ್ಲಿರುವುದರಿಂದ ಬೇಗ ಹೊರಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಮೂರನೆಯ ಹಂತ ದ ಟ್ರಯಲ್ 40000 ಜನ ಸ್ವಯಂ ಸೇವಕರಲ್ಲಿ ಕೈಗೊಂಡು ಅವರಲ್ಲಿ 90% ಸಫಲವಾಗಿದೆ ಎಂದು ಆ
ಕಂಪನಿ ಯ ವಕ್ತಾರರು ಹೇಳಿದ್ದಾರೆ. ಇದು ಅಮೆರಿಕದ ಫೈಜರ್ ಮತ್ತು ಜರ್ಮನಿಯ ಬಯೋನ್ ಟೆಕ್ ಕಂಪನಿಗಳ ಸಹಯೋಗ ದೊಂದಿಗೆ ಅಭಿವೃದ್ಧಿ ಪಡಿಸಿದುದು. ಇವರು ಮೊನ್ನೆ ಸೆಪ್ಟೆಂಬರ್‌ನಲ್ಲಿ 164 ಸ್ವಯಂ ಸೇವಕರಲ್ಲಿ ಪರೀಕ್ಷಿಸಲಾಗಿ 60% ಸ-ಲತೆಯುಳ್ಳ ವ್ಯಾಕ್ಸೀನ್ ಎಂದು ಹೇಳಲಾಗುತ್ತಿತ್ತು.

ಆದರೆ ಈ ಅಂತಿಮ ಹಂತದ ಫಲಿತಾಂಶ ಕಂಪನಿಯವರಲ್ಲದ ಬೇರೆಯ ತಜ್ಞರ ಅಭಿಪ್ರಾಯ ಎಂದು ಹೇಳಲಾಗುತ್ತಿದೆ. ಆದರೆ ಒಂದು ಒಪ್ಪಿದ ಕ್ರಮವಾದ ಮೇಲ್ಮಟ್ಟದ ಜರ್ನಲ್ ನಲ್ಲಿ ಈ ಪ್ರಯೋಗದ ಬಗ್ಗೆ ಸಂಶೋಧನಾ ಪ್ರಬಂಧಗಳು ಇನ್ನೂ ಪ್ರಕಟ ವಾಗಿಲ್ಲ. ಈಗಾಗಲೇ ತಿಳಿಸಿದಂತೆ ಇದನ್ನು -70 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಇರಿಸಬೇಕಾಗುತ್ತದೆ. ಇದು ಈ ವ್ಯಾಕ್ಸೀನ್‌ನ ಋಣಾತ್ಮಕ ಗುಣ. ಹಾಗೆಯೇ ಇದರ ಬೆಲೆಯೂ ಬಾರಿ ದುಬಾರಿಯಾಗಬಹುದೆಂಬ ನಿರೀಕ್ಷೆ ಇದೆ.

ಹಾಗಾಗಿ ಇದು ಭಾರತ ದಂತಹ ವಿಪರೀತ ಜನಸಂಖ್ಯೆ ಇರುವ ದೇಶಕ್ಕೆ ಹೆಚ್ಚು ಹೊಂದುವುದಿಲ್ಲ ಎಂಬ ಅಭಿಪ್ರಾಯವಿದೆ. ಫೈಜರ್‌ನ ಈ ವ್ಯಾಕ್ಸೀನ್ ಕೋವಿಡ್ ಕಾಯಿಲೆ ಹರಡುವುದನ್ನು ತಡೆಗಟ್ಟುತ್ತದೆಯಾ ಅಥವಾ ಕಾಯಿಲೆಯು ತೀವ್ರ ಪ್ರಮಾಣಕ್ಕೆ ಹೋಗುವುದನ್ನು ತಡೆಯುವುದೇ ಎಂಬ  ಅಂಶ ಇನ್ನೂ ಸ್ಪಷ್ಟವಾಗಿಲ್ಲ. ಹಾಗೆಯೇ ಇದು ತೀರಾ ವಯಸ್ಸಾದವರಲ್ಲಿಯೂ ಉಪಯೋಗವಾಗುತ್ತದೆ ಯಾ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.

ರಷ್ಯಾದ ಸ್ಪುಟ್ನಿಕ್ ವಿ ವ್ಯಾಕ್ಸೀನ್: ರಷ್ಯಾದ ಸ್ಪುಟ್ನಿಕ್ ವಿ ವ್ಯಾಕ್ಸೀನ್ 92% ಸಫಲತೆ ಹೊಂದಿದೆ ಎಂದು ಇತ್ತೀಚೆಗೆ ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿಕೊಂಡಿದೆ. ಈ ವ್ಯಾಕ್ಸೀನ್‌ನ ಮೂರನೆಯ ಹಂತದ ಟ್ರಯಲ್‌ನಲ್ಲಿ 20000 ಜನರಲ್ಲಿ ಒಂದು ಡೋಸ್ ಮತ್ತು 1600 ಜನರಲ್ಲಿ 2 ಡೋಸ್‌ಗಳ ಫಲಿತಾಂಶದ ಮೇಲೆ ಹೇಳಲಾಗಿದೆ.

14 ದಿನಗಳ ಅಂತರದಲ್ಲಿ 2 ಡೋಸ್ ಗಳನ್ನು ಕೊಡಲಾಗಿದೆ. ವ್ಯಾಕ್ಸೀನ್ ತೆಗೆದುಕೊಂಡ ಗುಂಪು ಮತ್ತು ಏನೂ ಔಷಧವಿಲ್ಲದೆ ಬರೀ ಇಂಜೆಕ್ಷನ್ ತೆಗೆದುಕೊಂಡ ಗುಂಪು ( Placebo) ಇವುಗಳ ಮಧ್ಯೆ ವಿಶ್ಲೇಷಿಸಿ 92% ಸಫಲತೆ ಎಂದು ಗೊತ್ತಾಗಿದೆ. ಇದು ಮೊದಲು ತಿಳಿಸಿದ ಫೈಜರ್ ವ್ಯಾಕ್ಸೀನ್‌ನ ಸಫಲತೆಗೆ ತುಂಬಾ ಹತ್ತಿರವಾಗಿದೆ. ರಷ್ಯಾದ ವ್ಯಾಕ್ಸೀನ್ ಟ್ರಯಲ್ ಹಲವಾರು ದೇಶ ಗಳಲ್ಲಿ ನಡೆಯುತ್ತಿತ್ತು. 2 ಮತ್ತು 3ನೇ ಹಂತದ ಟ್ರಯಲ್ ಭಾರತದಲ್ಲಿಯೂ ಹಲವೆಡೆ ನಡೆಯುತ್ತಿತ್ತು.

ರಷ್ಯಾದ ಗೆಮಾಲಯ ರೀಸರ್ಚ್ ಫೌಂಡೇಶನ್‌ನ ಈ ವ್ಯಾಕ್ಸೀನ್‌ಗೆ ಹೈದರಾಬಾದ್ ರೆಡ್ಡೀಸ್ ಲ್ಯಾಬೋ ರೇಟರಿ ಕಂಪನಿಯ ಸಹಿತ ಪಾಲುದಾರರು. ರಷ್ಯಾದ ಸ್ಪುಟ್ನಿಕ್ ವಿ ವ್ಯಾಕ್ಸೀನ್‌ನ ಸಫಲತೆಯ ವರದಿ ಬಂದ ನಂತರ ಅದನ್ನು ರಷ್ಯಾದ ಎಲ್ಲಾ ಕಡೆ
ವಿತರಿಸಲು ನಂತರ ಜಗತ್ತಿನ ಇತರೆಡೆಯಲ್ಲಿಯೂ ವಿತರಿಸಲು ತಯಾರಿ ನಡೆಯುತ್ತಿದೆ. ಹಾಗಾಗಿ ಇದರ ಉತ್ಪಾದನಾ ಘಟಕದಲ್ಲಿ ಇದರ ಉತ್ಪಾದನೆಯ ಸಂಖ್ಯೆ ಯನ್ನು ತೀವ್ರವಾಗಿ ಹೆಚ್ಚಿಸಲಾಗುತ್ತಿದೆ.

ಇದರ ಉಪ ಯೋಗ ಆರಂಭವಾಗುತ್ತಿದ್ದಂತೆ ಕೋವಿಡ್ 19 ಸೋಂಕಿನ ಪ್ರಮಾಣ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗು ತ್ತಿದೆ. ಫೈಜರ್‌ನ ವ್ಯಾಕ್ಸೀನ್ ನಂತೆಯೇ ಈ ಸ್ಪುಟ್ನಿಕ್ ವ್ಯಾಕ್ಸೀನ್ ಬಗ್ಗೆ ವರದಿ ಸಹಿತ ಇನ್ನೂ ಪ್ರತಿಷ್ಠಿತ ವೈಜ್ಞಾಬಿಕ ಜರ್ನಲ್‌ನಲ್ಲಿ ಬಂದಿಲ್ಲ. ಇವೆ  ವಿಡ್ ಕಾಯಿಲೆ ತೀವ್ರತೆ ಕಡಿಮೆ ಮಾಡಲು ತೀವ್ರವಾಗಿ ಜರು ಗುತ್ತಿರುವ ವಿದ್ಯಮಾನಗಳ ಒಂದು ನೋಟ ಎಂದು ಹೇಳಬಹುದು. ಈ ಸ್ಪುಟ್ನಿಕ್ ವ್ಯಾಕ್ಸೀನ್‌ಗೆ ಎಮರ್ಜೆನ್ಸಿ ಉಪಯೋಗದ ಅನುಮತಿ ರಷ್ಯಾದಲ್ಲಿ ದೊರಕಿರುವುದರಿಂದ ಹಲವಾರು
ವೈದ್ಯರಿಗೆ ಮತ್ತು ವೈದ್ಯಕೀಯ ಕಾರ್ಯಕರ್ತರಿಗೆ ಅಲ್ಲಿ ಪ್ರಯೋಗಿಸಲಾಗಿದೆ.

ಮೊದಲು ತಿಳಿಸಿದ ಟ್ರಯಲ್‌ನಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರಿಗಲ್ಲದೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ 10000 ಜನರಿಗೆ ಇದನ್ನು ಕೊಡಲಾಗಿದೆ. ಅವರಲ್ಲಿ ಕಂಡುಕೊಂಡ ಪ್ರಕಾರ ಇಲ್ಲಿಯೂ 90% ಫಲಿತಾಂಶ ಈ ವ್ಯಾಕ್ಸೀನ್ ಗಿದೆ ಎನ್ನಲಾಗಿದೆ. ಇದನ್ನೂ -70 ಡಿಗ್ರಿ ಸೆಲ್ಸಿಯಸ್‌ನ ಕಡಿಮೆ ತಾಪಮಾನದಲ್ಲಿ ಇರಿಸಬೇಕಾಗುತ್ತದೆ.