Thursday, 12th December 2024

ಕೋವಿಡ್ 19 ಎಂಬ ಬಯೋಲಾಜಿಕಲ್ ವೆಪನ್

ಅಭಿವ್ಯಕ್ತಿ

ಡಾ.ಎನ್.ಭಾಸ್ಕರ ಆಚಾರ್ಯ

ಯಾವುದೇ ಒಂದು ಪ್ರಾಕೃತಿಕ ಅನಾಹುತವಾದರೆ, ಆಳುವ ಸರಕಾರಕ್ಕೆ ಅದು ಅಗ್ನಿ ಪರೀಕ್ಷೆ. ಅದನ್ನು ಸರಿಯಾದ ಕ್ರಮದಲ್ಲಿ
ನಿಭಾಯಿಸುವುದು ತಂತಿಯ ಮೇಲಿನ ನಡಿಗೆ. ಅದಕ್ಕೆ ಬೇಕಾದ, ಬಜೆಟ್ ಅನ್ನು ಒದಗಿಸುವುದೂ ಕಷ್ಟಕರ, ಅದಕ್ಕಾಗಿಯೇ ಕಾದಿರಿಸಿದ ನಿಧಿಯಿದ್ದರೂ, ಕೆಲವೊಮ್ಮೆ ಅದು ಪೂರ್ತಿ ಪರಿಹಾರಕೊಡಲು ಸಾಕಾಗುವುದಿಲ್ಲ.

ಅಲ್ಲದೇ, ಅದನ್ನು ಹಾನಿ, ನಷ್ಟಕ್ಕೊಳಗಾದ, ಪ್ರತಿಯೊಬ್ಬ -ಲಾನುಭವಿಗೆ ತಲುಪಿಸುವುದಂತೂ ಇನ್ನಷ್ಟು ತ್ರಾಸದಾಯಕ, ಈಗಿನ ಒಂದು ಆಡಳಿತಾತ್ಮಕ ವ್ಯವಸ್ಥೆಯಿಂದಾಗಿ ಅದು ಮಧ್ಯದಲ್ಲಿ ಸೋರಿ ಹೋಗುತ್ತಾ ಜನರನ್ನು ತಲುಪುವಾಗ, ಹಿಡಿಸೂಡಿಯಷ್ಟಿ ದ್ದುದು ಹಿಡಿಕಡ್ಡಿಯಷ್ಟಾಗುವುದು ಸಹಜ. ಯಾವುದೇ ಪಕ್ಷದ ಸರಕಾರವಿದ್ದರೂ ವಿರೋಧ ಪಕ್ಷದವರಿಂದ ಆ ಬಗ್ಗೆ ಆರೋಪ ವಿದ್ದೇ ಇರುತ್ತದೆ. ಅದು ಸ್ವಲ್ಪಮಟ್ಟಿಗೆ ಸತ್ಯವೂ ಆಗಿರುತ್ತದೆ. ಹಾಗಾಗಿ, ನೆರೆಪರಿಹಾರ, ಬರಪರಿಹಾರ ಎನ್ನುವುದು ಆಡಳಿತ ಪಕ್ಷದವರಿಗೊಂದು ವರದಾನ ಎಂದು ಭಾವಿಸುವವರೇ ಹೆಚ್ಚು.

ಅದೇ ರೀತಿಯಲ್ಲಿ ಈ ಕರೋನಾ – ಕೋವಿಡ್ 19ರ ಸಂಕಟ ಕೂಡಾ ಎಂದು ಸಾರ್ವಜನಿಕರಲ್ಲಿ ಹೆಚ್ಚಿನ ಜನ ಭಾವಿಸಿರುತ್ತಾರೆ.
ಕೆಲವೇ ಕೆಲವು ಜನ ಅಂಥ ಸುದ್ದಿಗಳನ್ನು ಹುಟ್ಟುಹಾಕುತ್ತಾರೆ. ಎಲ್ಲಾತರದ ಮಾಧ್ಯಮದವರೂ ಸತ್ಯಾಸತ್ಯತೆಯನ್ನು ನೋಡದೇ,
ಅದನ್ನು ಪಸರಿಸುತ್ತಾರೆ. ಜನರಂತೂ ನಂಬುವುದು ಅಂಥಾ ಸುದ್ದಿಗಳನ್ನೆ! ಸುಳ್ಳು ಸುದ್ದಿಗಳು ಮಾಡುವ ಅನಾಹುತಗಳಂತೂ ಮತ್ತಷ್ಟು ಕೆಟ್ಟದಾಗಿರುತ್ತವೆ.

ಪ್ರತಿಯೊಂದು ಮನೆಯನ್ನು ಕ್ವಾರಂಟೈನ್ ಮಾಡಲು ನಲ್ವತ್ತು ಸಾವಿರದಷ್ಟು ಬಿಲ್ಲು ಮಾಡುತ್ತಾರೆ ಎಂಬ ಸುದ್ದಿಯೊಂದು
ಪ್ರಚಾರದಲ್ಲಿತ್ತು. ಬಹುಶಃ ಅಷ್ಟರಲ್ಲೆ ಎಚ್ಚೆತ್ತ ಬೆಂಗಳೂರು ನಗರಪಾಲಿಕೆಯವರು, ‘ಅದಕ್ಕೆ ವ್ಯಯಿಸುವ ಹಣ ಎರಡು ಸಾವಿರ ದಿಂದ ಮೂರು ಸಾವಿರದವರೆಗೆ ಮಾತ್ರ. ಕೆಲವೊಂದು ಸಂದರ್ಭಗಳಲ್ಲಿ, ಐದು ಸಾವಿರವಾಗಬಹುದು’ ಎಂದು ಸ್ಪಷ್ಟೀ ಕರಣ ನೀಡಿ, ಅದರಂತೆ, ಹಂತ ಹಂತವಾಗಿ, ಯಾವ ಕೆಲಸಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂಬ ವಿವರಣೆಯನ್ನು ದಿನಪತ್ರಿಕೆ ಗಳಲ್ಲಿ ನೀಡಿದರು. ಬಹುಶಃ ಆ ಸುಳ್ಳು ಸುದ್ದಿಯ ಪ್ರಚಾರ ಅಲ್ಲಿಗೆ ನಿಂತುಹೋಯಿತು. ಈಗ ಇನ್ನೊಂದು ಬಗೆಯ ಅಪಪ್ರಚಾರ ನಡೆಯು ತ್ತಿದೆ. ‘ಯಾರೂ ಕೋವಿಡ್ ಪರೀಕ್ಷೆಗೆ ಒಳಗಾಗ ಬೇಡಿ.

ಸುಮ್ಮನೆ ಟೆಸ್ಟ್ ಮಾಡಿದಂತೆ ಮಾಡಿ, ಪಾಸಿಟಿವ್ ಎಂದು ಕೊಡುತ್ತಾರೆ. ಐಸೋಲೇಶನ್ ಮಾಡಬೇಕೆಂದು ಹೇಳುತ್ತಾರೆ. ಇಲ್ಲ
ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಎಂದು ಹೇಳುತ್ತಾರೆ. ಮನೆಯನ್ನು ಕ್ವಾರಂಟೈನ್ ಮಾಡುತ್ತಾರೆ. ಒಂದೊಂದು ಪಾಸಿಟಿವ್ ಕೇಸಿಗೂ ಸರಕಾರದಿಂದ ಸಾವಿರಗಟ್ಟಲೆ ರುಪಾಯಿ ಸಿಗುತ್ತದೆ. ಹೆಚ್ಚೆಚ್ಚು ಪಾಸಿಟಿವ್ ಕೇಸು ತೋರಿಸಿದಷ್ಟೂ ಹೆಚ್ಚು ಲಾಭ ಅವರಿಗೆ, ಅದೊಂದು ಮಾಫಿಯಾ ಆಗಿದೆ.’ ಎಂದೆಲ್ಲಾ ಹಬ್ಬಿಸುತ್ತಿದ್ದಾರೆ. ಹಾಗೆ ಮಾಡುವವರು ಸಾಮಾನ್ಯ ಜನರಂತೂ ಅಲ್ಲ.

‘ಇದರಲ್ಲಿ ತಮಗೆ ಏನೂ ಸಿಗುವುದಿಲ್ಲವಲ್ಲ. ಈ ಅಽಕಾರಿಗಳು, ವೈದ್ಯರು, ಕೋವಿಡ್ ಹೆಸರಲ್ಲಿ ಲಕ್ಷಗಟ್ಟಲೆ ಬಾಚುತ್ತಿದ್ದಾರಲ್ಲ. ಇವರೆಲ್ಲಾ ತಮ್ಮೊಡನೆ ರಾಜಿಗೆ ಬರಲಿ. ಪಾಲುಕೊಡಲಿ ಎನ್ನುವ ಮನೋಭಾವವಿರುವ ಕೆಲವು ಅಬ್ಬೆಪಾರಿಗಳು, ಅಂಥಾ ಕೆಲಸ ಮಾಡುತ್ತಿರಬಹುದು. ಆದರೆ ಎಂದಿನಂತೆ ಹೆಚ್ಚಿನ ಜನ ಇಂಥವರನ್ನೆ ನಂಬುತ್ತಾರೆ. ಹಾಗಾಗಿ, ಕೋವಿಡ್ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿ ಅಪಾಯಕ್ಕೀಡಾಗುತ್ತಿದ್ದಾರೆ. ಈ ವಿಷಯದಲ್ಲಿ, ಜಿಲ್ಲಾಧಿಕಾರಿಯೊಬ್ಬರು, ಮಾಧ್ಯಮ ಕ್ಷೇತ್ರದವರನ್ನು ಕರೆದು’ ಯಾವುದೇ ಆಧಾರವಿಲ್ಲದೇ ಇಂಥಾ ಸುದ್ದಿಗಳನ್ನು ಪ್ರಚಾರ ಮಾಡಬೇಡಿ. ಆದರೆ ಸರಿಯಾದ ಸಾಕ್ಷ್ಯ ಇದ್ದಲ್ಲಿ, ದೂರುಕೊಡಲು ಆಕ್ಷೇಪವಿಲ್ಲ. ವಿಚಾರಣೆ ಕೈಗೊಳ್ಳುತ್ತೇವೆ.

ಇಂಥಾ ಸುಳ್ಳು ಪ್ರಚಾರದಿಂದಾಗಿ ಕೋವಿಡ್- 19 ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ತಳೆದು ಮರಣಾಂತಿಕ ಸ್ಥಿತಿಯಲ್ಲಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಾಗುವವರ ಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಹೆಚ್ಚಿದೆ. ಅಂಥವರಿಗೆ, ಐಸಿಯುಗಳಲ್ಲಿ, ಬೆಡ್ ಸಿಗುವುದು ಕಷ್ಟವಾಗಿದ್ದುಇದರಿಂದ ಸಾವು ಹಾಗೂ ನರಳುವಿಕೆಯ ಪ್ರಮಾಣ ಹೆಚ್ಚಾಗುತ್ತಿದೆ.’ ಎಂದು ಹೇಳಬೇಕಾಗಿ ಬಂದುದು ವಿಷಾದ ನೀಯ. ಅಂದರೆ ಪ್ರಜಾಪ್ರಭುತ್ವದ ನಾಲ್ಕನೆ ಕಾವಲು ಎಂದು ಪರಿಗಣಿಸುವ ಸುದ್ದಿ ಮಾಧ್ಯಮಗಳು ಇಂಥಾ ಅತಿರೇಕಕ್ಕಿಳಿದಿವೆ ಎನ್ನುವುದು ತೀರಾ ಗಂಭೀರ ವಿಷಯ.

ಇಂಥಾ ಸುಳ್ಳು ಸುದ್ದಿಗಳಿಂದ ಪ್ರಭಾವಿತರಾದ ಜನತೆಯಲ್ಲಿ ಅತಿಯಾದ ಆತ್ಮವಿಶ್ವಾಸ, ನಿರ್ಲಕ್ಷ್ಯ ಹಾಗೂ ಅಪನಂಬಿಕೆಗಳ ಸೃಷ್ಟಿಯಾಗಿ ಅದರಿಂದಾಗಿ ಅನೇಕ ಕೋವಿಡ್ 19 ರೋಗಿಗಳ ಜೀವಹಾನಿ, ನರಳುವಿಕೆ ಇತ್ಯಾದಿಗಳನ್ನು ಒಬ್ಬ ವೈದ್ಯನಾಗಿ ಪ್ರತ್ಯಕ್ಷ
ನೋಡಿ, ಕೇಳಿ ಗೊತ್ತಿರುವುದರಿಂದ ಇದೆಲ್ಲವನ್ನು ಇಲ್ಲಿ ಹೇಳಬೇಕಾಗಿ ಬಂತು. ಕೋವಿಡ್ 19 ಎನ್ನುವುದೊಂದು ವಿಚಿತ್ರ ರೋಗ. ಅದರ ಸಂಪೂರ್ಣ ನಡವಳಿಕೆ ಇನ್ನೂ ವೈದ್ಯ ವಿಜ್ಞಾನಿಗಳ ಅರಿವಿಗೆ ಸಿಕ್ಕಿಲ್ಲ. ಬಹುಶಃ ಮಹತ್ವಾಕಾಂಕ್ಷಿ ದೇಶವೊಂದರ ಪ್ರಯೋಗಶಾಲೆಯಲ್ಲಿ  ಸ್ಪಷ್ಟಿಗೊಂಡ ವೈರಾಣು ಅದು. ಬಯೋಲಾಜಿಕಲ್ ವೆಪನ್ ಆಗಿ ಉಪಯೋಗಿಸಲು ಉದ್ದೇಶಿಸಿದ ಅದು, ನೈಸರ್ಗಿಕವಾಗಿ ಉತ್ಪತ್ತಿಯಾದುದಲ್ಲ.

ಆಕಸ್ಮಿಕವಾಗಿಯೋ ಉದ್ದೇಶ ಪೂರ್ವಕವಾಗಿಯೋ ಅದು ಅಲ್ಲಿನ ಪ್ರಯೋಗಾಲಯದಿಂದ ಹಬ್ಬಲು ಪ್ರಾರಂಭಿಸಿತು. ಯುದ್ಧಾ ಕಾಂಕ್ಷಿಯಾದ ಯಾವುದೇ ದೇಶ ಕೂಡಾ, ತನ್ನ ಕೆಲವೊಂದು ಸೈನಿಕರ, ನಾಗರಿಕರ ಬಲಿಕೊಡಲು ತಯಾರಾಗಿಯೇ ಇರುತ್ತದೆನ್ನು ವುದು ಸಾರ್ವಕಾಲಿಕ ಸತ್ಯ. ಬಹುಶಃ ಅದರ ಹತೋಟಿಗಾಗಿ ಸಾಕಷ್ಟು ರಕ್ಷಣಾ ಕ್ರಮಗಳನ್ನು ಕೈಗೊಂಡು ನಂತರವೇ ಅದನ್ನು ಹೊರ ಜಗತ್ತಿಗೆ ಪಸರಿಸುವಂತೆ ಮಾಡಿರಬೇಕೆಂಬ ಶಂಕೆ, ಜಗತ್ತಿನ ಇತರ ಅನೇಕ ರಾಷ್ಟ್ರಗಳಲ್ಲಿದೆ.

ಅದೇನೆ ಇರಲಿ, ಅದು ಯಾರನ್ನು ಹೇಗೆ ಕಾಡುತ್ತದೆನ್ನುವುದು ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದಿದೆ. ವಯಸ್ಸಾದವ ರನ್ನು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು, ಮೂತ್ರಪಿಂಡ, ಯಕೃತ್ತು, ಹೃದಯ ಇತ್ಯಾದಿಗಳ ಕಾಯಿಲೆ ಇರುವವ ರನ್ನು ಅದು ತೀವ್ರವಾಗಿ ಕಾಡುತ್ತದೆ ಎನ್ನುವುದು ಸತ್ಯವಾದರೂ, ಯುವಕರಲ್ಲಿ, ಮಧ್ಯ ವಯಸ್ಕರಲ್ಲಿ ಅದು ಮರಣಾಂತಿಕ ವಾಗಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಇತ್ತೀಚೆಗೆ ತಾನೇ ಶಸ್ತ್ರ ಚಿಕಿತ್ಸಾ ತಜ್ಞ ಯುವ ವೈದ್ಯರೊಬ್ಬರು, ಅದು ಬಾಧಿಸಿದ ಮೂರೇ ದಿನಕ್ಕೆ, ದೈವಾಧೀನರಾದ ಪ್ರಸಂಗ ನಮ್ಮ ಕಣ್ಮುಂದೆ ಇದೆ.

ಮಯೋಕಾರ್ಡೈಟಿಸ್ ಅಂದರೆ ಹೃದಯದ ಉರಿಯೂತದಿಂದ, ಅವರು ಮರಣ ಹೊಂದಿರಬೇಕೆಂದು ಹೇಳಲಾಗುತ್ತಿದೆ. ಇದೇ
ರೀತಿಯಲ್ಲಿ ಮರಣ ಹೊಂದಿದ ಅನೇಕ ರೋಗಿಗಳ ಬಗ್ಗೆಯೂ ವರದಿಗಳಿವೆ. ಹೆಚ್ಚಾಗಿ ರೋಗಿ ಕೆಮ್ಮುವಾಗ, ಸೀನುವಾಗ ಹೊರ ಬಿದ್ದ ಡ್ರಾಪ್ ಲೆಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆ ವೈರಾಣುಗಳು ತುಂಬಿಕೊಂಡಿದ್ದು, ಅದರ ಸಾಮೀಪ್ಯಕ್ಕೆ ಬಂದ ಮನುಷ್ಯ ರಲ್ಲಿ ಅವು ಸೋಂಕು ಉಂಟು ಮಾಡುತ್ತವೆ. ಅವು ರೋಗಿಯ ಸುಮಾರು ಎರಡು ಮೀಟರ್ ಪರಿಧಿಯೊಳಗೇ ಪಸರಿಸಿಕೊಂಡಿ ರುವುದರಿಂದ ಪರಸ್ಪರ ಅಂತರ, ಕಡಿಮೆಯೆಂದರೆ ಎರಡು ಮೀಟರ್ ಇರಬೇಕು ಎಂದು ವಿಧಿಸಿರುವುದು. ಅಲ್ಲದೆ, ಆ ಸಂದರ್ಭ ಗಳಲ್ಲಿ, ರೋಗಿ ಹಾಗೂ ಆತನ ಸಮೀಪದ ವ್ಯಕ್ತಿ, ಬಾಯಿ ಮತ್ತು ಮೂಗಿಗೆ ಮಾಸ್ಕ್ ಹಾಕಿಕೊಂಡಲ್ಲಿ ಅದು ಹಬ್ಬುವ ಸಂಭವ, ಬಹಳಷ್ಟು ಕಡಿಮೆಯಾಗುತ್ತದೆ.

ಮಾಸ್ಕ್ ಹಾಕಿಕೊಳ್ಳದ ವ್ಯಕ್ತಿಯೊಬ್ಬ ಎರಡು ಮೀಟರ್ ಪರಿಧಿಯೊಳಗೆ, ಮಾಸ್ಕ್ ಧರಿಸದ ರೋಗಿಯೊಬ್ಬನ ಬಳಿ, 15 ನಿಮಿಷಗಳಿ ಗಿಂತಲೂ ಹೆಚ್ಚು ಕಾಲ ಇದ್ದಲ್ಲಿ, ಆತ ರೋಗಿಯ ಪ್ರಾಥಮಿಕ ಸಂಪರ್ಕಿತ ವ್ಯಕ್ತಿ ಎಂದು ಪರಿಗಣಿಸಲ್ಪಡುತ್ತಾನೆ. ಆತನಿಗೆ, ಸೋಂಕು ತಗಲುವ ಸಂಭವ ಅತೀ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ರೋಗಿ, ಕೆಮ್ಮಲೇ, ಸೀನಲೇಬೇಕೆಂದು ಇಲ್ಲ. ರೋಗಿಯ ಉಸಿರಾಟದ ಗಾಳಿಯಿಂದ ವೈರಾಣು ಹಬ್ಬಬಹುದು ಅಥವಾ ರೋಗಿಯ ದೇಹ ಸಂಪರ್ಕದಿಂದಲೂ ಹಬ್ಬಬಹುದು. ರೋಗಿಯ ದೇಹದಿಂದ ಸ್ರವಿಸುವ ಯಾವುದೇ ದ್ರವದ ಸಂಪರ್ಕದಿಂದಲೂ ಅದು ಹಬ್ಬಬಹುದು. ವ್ಯಕ್ತಿಗಳ ನಡುವೆ ಕನಿಷ್ಠ 2ಮೀಟರ್ ಅಂತರ ಹಾಗೂ ಮುಖಕ್ಕೆ ಮಾಸ್ಕ್ ಅನ್ನು ಕಡ್ಡಾಯ ಮಾಡಿರುವುದು. ಕೈಗಳನ್ನು ಸಾಬೂನಿನಿಂದ ತೊಳೆಯಲು ಹೇಳುವುದು ಇದೇ ಕಾರಣಕ್ಕಾಗಿ.

ಅದೃಷ್ಟವಶಾತ್ ಕೋವಿಡ್ 19 ವೈರಾಣು ಸಾಧಾರಣ ಸಾಬೂನಿನ ದ್ರಾವಣದಲ್ಲಿ 20 ಸೆಕೆಂಡ್‌ಗಳಷ್ಟು ಕಾಲ ಸಂಪರ್ಕದಲ್ಲಿದ್ದಲ್ಲಿ ನಾಶವಾಗುವುದರಿಂದ ಬೇರಾವುದೇ ಹೆಚ್ಚಿನ ಸಾಮರ್ಥ್ಯದ, ಹೆಚ್ಚಿನ ದರದ ಕ್ರಿಮಿನಾಶಕ ದ್ರಾವಣಗಳನ್ನು ಬಳಸುವ ಅಗತ್ಯವಿಲ್ಲ ವಾಗಿದೆ. ಹೆಚ್ಚೆಂದರೆ ಒಂದು ಮನೆಗೆ ತಿಂಗಳಿಗೆ ಒಂದೋ ಎರಡೋ ಸೋಪ್ ಹೆಚ್ಚಿಗೆ ತೆಗೆದುಕೊಂಡರೆ ಅದೇ ಸಾಕಾಗಬಹುದು. ಅದೇ ರೀತಿ 560 ಸೆಂಟಿಗ್ರೇಡ್‌ಗಿಂತ ಹೆಚ್ಚಿನ ಉಷ್ಣಾಂಶವಿದ್ದಲ್ಲಿ ವೈರಾಣುಗಳು ಸಾಯುತ್ತವೆ. ಆದರೆ ಅಷ್ಟು ಉಷ್ಣತೆಯುಳ್ಳ ಬಿಸಿನೀರನ್ನು ಉಪಯೋಗಿಸಿ ಮುಖ, ಬಾಯಿ ತೊಳೆದುಕೊಂಡರೆ, ಅಲ್ಲಿನ ಚರ್ಮಕ್ಕೆ ಹಾನಿಯಾಗಬಹುದು ಅದೇ ರೀತಿ ಉಗಿ (ಸ್ಟೀಮ್)ಯನ್ನು ಹೆಚ್ಚು ಹೊತ್ತು ತೆಗೆದುಕೊಂಡರೂ ಶ್ವಾಸಕೋಶಗಳಿಗೆ ಹಾನಿಯಾಗಬಹುದು.

ವೈರಾಣುಗಳ ಸಂಖ್ಯೆ (ವೈರಲ್ ಲೋಡ್) ಹೆಚ್ಚಿದ್ದಲ್ಲಿ, ಸೋಂಕಿತ ವ್ಯಕ್ತಿಯಲ್ಲಿ, ತೀವ್ರತರವಾದ ಪರಿಣಾಮ ಉಂಟಾಗುತ್ತದೆ. ಬಹುಶಃ ಅತ್ಯಂತ ಕಡಿಮೆ ವೈರಾಣುಗಳ ಸೋಂಕು ತಗಲಿದ್ದಲ್ಲಿ, ಸೋಂಕಿತನ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಆತ ಕೋವಿಡ್ 19 ಪಾಸಿಟಿವ್ ಎಂದು ಪರೀಕ್ಷೆಗಳಿಂದ ತಿಳಿದು ಬಂದರೂ ಆತನಲ್ಲಿ ರೋಗಲಕ್ಷಣಗಳು ಯಾವುದೂ ಕಾಣಿಸದೆ, ಸಾಧಾರಣ 15 ರಿಂದ 21 ದಿನಗಳ ನಂತರ ತಾನಾಗಿಯೇ ವೈರಾಣು ಸೋಂಕು ನಿವಾರಣೆಯಾಗಬಹುದು. ವೈರಾಣುವಿನ ಈ ಒಂದು ಗುಣದಿಂದಾ ಗಿಯೇ ಹೆಚ್ಚಿನ ವ್ಯಕ್ತಿಗಳಲ್ಲಿ, ಏನೂ ತೊಂದರೆಯಾಗದೆ ಇರುವುದರಿಂದ, ಉಳಿದವರೂ ಈ ಕಾಹಿಲೆಯ ಸೋಂಕನ್ನು ಲಘುವಾಗಿ ಭಾವಿಸಿ ನಿರ್ಲಕ್ಷ್ಯ ತಾಳುವುದರಿಂದ, ತನ್ನ ಮನೆಯವರಿಗೂ ಅದನ್ನು ಹಬ್ಬಿಸುವುದು ಅಲ್ಲದೆ ಸೋಂಕು ತಗುಲಿದ ಎರಡನೇ ವಾರದಲ್ಲಿ, ತೀವ್ರತರವಾದ ತೊಂದರೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ತೀರ ನಿರ್ಲಕ್ಷ್ಯಮಾಡಿದಲ್ಲಿ, ಪರಿಣಾಮ ಗಳೂ ಗಂಭೀರವಾಗಿರುತ್ತವೆ.

ಸೋಂಕು ತಗಲಿರುವ ವ್ಯಕ್ತಿಗೆ, ಸಾಧಾರಣ 2 ರಿಂದ 12 ದಿನಗಳ ಅವಧಿಯಲ್ಲಿ ಸಾಮಾನ್ಯವಾಗಿ ಕಾಹಿಲೆಯ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಚಳಿ ಜ್ವರ, ಮೂಗು, ಗಂಟಲಿನಲ್ಲಿ ಶೀತದ ಲಕ್ಷಣಗಳು, ಕೆಲವೊಮ್ಮೆ ತಲೆನೋವು, ಕುತ್ತಿಗೆಯಲ್ಲಿ, ಹಾಲ್ರಸ ಗ್ರಂಥಿ ಗಳು ಊದಿಕೊಳ್ಳುವುದು. ಹೊಟ್ಟೆನೋವು, ಬೇಧಿ ಇವೆಲ್ಲಾ ಇದರ ಲಕ್ಷಣಗಳು ಕೆಲವೊಮ್ಮೆ ಇವ್ಯಾವುದೇ ಲಕ್ಷಣಗಳೂ ಇಲ್ಲದೇ ಇರಬಹುದು ಹೆಚ್ಚಾಗಿ ಜನಸಾಮಾನ್ಯರು ಸಾಮಾನ್ಯವಾದ ಶೀತ ಜ್ವರ ಎಂದು ಇದನ್ನು ಉಪೇಕ್ಷೆ ಮಾಡುತ್ತಾರೆ.

ಹೆಚ್ಚಿನ ವ್ಯಕ್ತಿಗಳಲ್ಲಿ, ಇದು ಇಲ್ಲಿಗೆ ನಿಂತು ಎರಡನೇ ವಾರದ ಬಳಿಕ (14 ದಿನಗಳ ಬಳಿಕ) ವೈರಾಣುಗಳ ಸಂಖ್ಯೆ ಕ್ರಮೇಣ ಕಡಿಮೆ ಯಾಗುತ್ತಾ ಬರುತ್ತದೆ. ಅಂಥವರು, ಹೆಚ್ಚಿನ ಯಾವುದೇ ತೊದರೆಗಳಿಲ್ಲದೇ ಗುಣಮುಖರಾಗುತ್ತಾರೆ. ಆದರೆ ಕೆಲವು ವ್ಯಕ್ತಿಗಳಲ್ಲಿ ಎರಡನೇ ವಾರದಲ್ಲಿ ಕಾಯಿಲೆ ಉಲ್ಬಣಿಸತೊಡಗುತ್ತದೆ.

ಅದು ದೇಹದ ಯಾವುದೇ ಅಂಗಾಂಶಗಳಿಗೆ ವ್ಯಾಪಿಸಬಹುದಾದರೂ, ಶ್ವಾಸಕೋಶಗಳನ್ನೇ ಅದು ಬಾಧಿಸುವುದು ಹೆಚ್ಚಾಗಿ ಕಂಡು ಬರುತ್ತದೆ. ಸಾಧಾರಣ, ಮೊದಲ ವಾರದಲ್ಲಿಶ್ವಾಸಕೋಶದ ಎಕ್ಸ್-ರೇಯಲ್ಲಿ ಯಾವುದೇ ಬದಲಾವಣೆಯಿಲ್ಲದಿದ್ದರೂ ಸಾಧಾರಣ ೮ನೇ ದಿನದ ಬಳಿಕ, ನ್ಯುಮೋನಿಯಾದ ಚಿಹ್ನೆಗಳು ತೋರಿಬರಬಹುದು. ಹಾಗಾಗಿ ಎದೆಯ ಎಕ್ಸ್-ರೇ ಪರೀಕ್ಷೆಯನ್ನು ಕೆಲವೊಮ್ಮೆ ಮೊದಲೊಮ್ಮೆ ಮಾಡಿ ಪುನಃ 4-5 ದಿನಗಳ ನಂತರ ಪುನಃ ಮಾಡಿಸಬೇಕಾಗುವುದು. ಅದರೊಡನೆ, ಎದೆಯ ಸಿ.ಟಿ. ಸ್ಕ್ಯಾನಿಂಗ್ ಪರೀಕ್ಷೆಯನ್ನೂ ಮಾಡಿಸಬಹುದು.