ಸಿಂಹಗರ್ಜನೆ
ಡಾ.ಸಿ.ಜೆ.ರಾಘವೇಂದ್ರ ವೈಲಾಯ
ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹಚಿತ್ತಮೇಷಾಂ ಸಮಾನಂ ಮಂತ್ರಮಭಿ ಮಂತ್ರಯೇವಃ ಸಮಾನೇನ ವೋ ಹವಿಷಾ ಜುಹೋಮಿ”- ಅಂದರೆ, ನಮ್ಮ ಉದ್ದೇಶ ಒಂದೇ ಆಗಿರಲಿ. ನಾವೆಲ್ಲರೂ ಒಂದೇ ಮನಸ್ಸಿನವರಾಗೋಣ. ಅಂಥ ಏಕತೆಯನ್ನು ರೂಪಿಸಲು ನಾನು ಪ್ರಾರ್ಥಿಸುತ್ತೇನೆ ಎಂದರ್ಥ. ಇದು ಜಗತ್ತಿಗೆ ವೈದಿಕ ಋಷಿಗಳು ನೀಡಿದ ಒಗ್ಗಟ್ಟಿನ ವಿಶ್ವಮಾನವ ಕರೆ.
ಹಿಂದುವೊಬ್ಬ ಸ್ವಂತ ಖರ್ಚಿನಲ್ಲಿ ಮಾಡಿಸಿದ ಪೂಜೆ, ಹೋಮ-ಹವನಗಳ ಕೊನೆಗೆ ದೇವರಲ್ಲಿ ಬೇಡುವುದು ಪರಾರ್ಥದ ಪರಾಕಾಷ್ಠೆಯ ದ್ಯೋತಕ ವಾದ ‘ಸರ್ವೇ ಜನಾಃ ಸುಖಿನೋ ಭವಂತು’ ಎಂದೇ ಹೊರತು ಐಹಿಕ ಸ್ವಾರ್ಥದ ಸಂಕುಚಿತವಾದ ಬೇಡಿಕೆಗಳನ್ನಲ್ಲ. ಇಂತಿಪ್ಪ ನಿಸ್ವಾರ್ಥಿಗಳಾದ, ವಿಶ್ವಶಾಂತಿಯ ಪ್ರತಿಪಾದಕರಾದ ಹಿಂದೂಗಳನ್ನು ಮತಾಂಧರೆಂದು ಜರಿಯುವ ಈ ದೇಶದ ಎಡಪಂಥೀಯ ಬೌದ್ಧಿಕ ವರ್ಗಕ್ಕೆ ಎಳ್ಳಷ್ಟೂ ನಾಚಿಕೆ ಯಿಲ್ಲವೇ? ಜಾಗತಿಕ ಪಿಡುಗಾದ ಹಿಂದೂ-ಪೋಬಿಯಾದ ಕುರಿತು, ಮಾನವ ಹಕ್ಕುಗಳ ಕುರಿತು ಸದಾ ತುತ್ತೂರಿ ಊದುವ ಯಾವುದೇ ಜಾಗತಿಕ ಮಾಧ್ಯಮಗಳೂ ಸೊಪ್ಫು ಎತ್ತುತ್ತಿಲ್ಲ. ಪಾಶ್ಚಾತ್ಯರ ಈ ಇಬ್ಬಗೆಯ ನೀತಿಯನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ಕೂಡಾ ಖಂಡಿಸಿದ್ದಾರೆ.
ಈ ಜಗತ್ತಿನಲ್ಲಿ ಶೇ.31.5ರಷ್ಟು ಕ್ರೈಸ್ತರು, ಶೇ.23.2ರಷ್ಟು ಮುಸ್ಲಿಮರು, ಶೇ.15ರಷ್ಟು ಹಿಂದೂಗಳು ಮತ್ತು ಶೇ.7.1ರಷ್ಟು ಬೌದ್ಧರಿದ್ದಾರೆ. 2011ರ ಜನಗಣತಿಯ ಆಧಾರದಲ್ಲಿ ಭಾರತದಲ್ಲಿ ಶೇ.78.9ರಷ್ಟು ಹಿಂದೂಗಳು, ಶೇ.14.2ರಷ್ಟು ಮುಸ್ಲಿಮರು, ಶೇ.2.3ರಷ್ಟು ಕ್ರೈಸ್ತರು ಮತ್ತು ಶೇ.1.7 ರಷ್ಟು ಸಿಖ್ಖರಿದ್ದಾರೆ. ಜಗತ್ತಿನ ಶೇ.95ರಷ್ಟು ಹಿಂದೂಗಳಿರೋದು ಭಾರತದ. ಹಾಗಾಗಿ ಭಾರತ ಎಂದಿಗೂ ಹಿಂದೂರಾಷ್ಟ್ರವೇ. ಅಖಂಡವಾಗಿದ್ದ ಭಾರತವು ಹಿಂದೆ ವಿಭಜನೆಯಾಗಿದ್ದು ಕೂಡಾ, ‘ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ’ ಎಂಬ ದ್ವಿರಾಷ್ಟ್ರ ಸಿದ್ಧಾಂತದ ಆಧಾರದ ತಾನೇ? ಮುಂದೆ ಪಾಕಿಸ್ತಾನ ಇಸ್ಲಾಮಿಕ್ ದೇಶವಾದರೂ, ಕಾಂಗ್ರೆಸ್ ನಾಯಕರ ದೂರ ದೃಷ್ಟಿಯಿಲ್ಲದ, ಅಲ್ಪಸಂಖ್ಯಾತರ ತುಷ್ಟೀ ಕರಣದ, ಸ್ವಾರ್ಥ ಭರಿತ ರಾಜನೀತಿಯಿಂದಾಗಿ ಮತ್ತು ಪರಮ ಸಹಿಷ್ಣುಗಳಾದ ಹಿಂದೂಗಳ ಅಮಾಯಕತೆಯಿಂದಾಗಿ ಭಾರತವು ಧರ್ಮ ನಿರಪೇಕ್ಷ ರಾಷ್ಟ್ರವಾಯಿತು.
ಇಲ್ಲವಾದರೆ ಹಿಂದೂಗಳೇ ಬಹುಸಂಖ್ಯಾತರಿರುವ ಈ ದೇಶದಲ್ಲಿ ನಾವು ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುವ ಅಗತ್ಯವಿತ್ತೇ? ಜಗತ್ತಿನ ಇನ್ಯಾವುದೇ ಜನಾಂಗವೂ ಇಷ್ಟು ಮೂರ್ಖತನದ ಆತ್ಮಘಾತಕ ನಿರ್ಣಯವನ್ನು ಮಾಡಲಾರದು. ನಮ್ಮ ಸಂವಿಧಾನದಲ್ಲಿನ ಹಲವು ಅನುಚ್ಛೇದ ಗಳು ಈ ತಾರತಮ್ಯಕ್ಕೆ ಬುನಾದಿ ಹಾಕಿಕೊಟ್ಟಿವೆ. ಹಿಂದೂ ಐಕ್ಯತೆಯಿಂದ ಇತರರು ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಹಿಂದೂ ಎನ್ನುವ ಪದವೇ ಈ ದೇಶದ ಎಲ್ಲರನ್ನೂ ಒಗ್ಗೂಡಿಸುವ ವಿಶಾಲಾರ್ಥವನ್ನು ಹೊಂದಿದೆಯೆಂದು ನಮ್ಮ ಸರ್ವೋಚ್ಚ ನ್ಯಾಯಾಲಯವೇ ಒಪ್ಪಿದೆ. ಹಾಗೇನಾದರೂ ಹಿಂದೂಗಳು ಆಕ್ರಮಣಕಾರಿಗಳಾಗಿದ್ದರೆ ಇಂದು ಜಗತ್ತಿನಲ್ಲಿ ಒಬ್ಬನೇ ಒಬ್ಬ ಅನ್ಯಮತೀಯನಿರುತ್ತಿರಲಿಲ್ಲ. ಭಾರತದಲ್ಲಿ ಹಿಂದೂ ಒಗ್ಗಟ್ಟಿನಿಂದ ತೊಂದರೆಯಾಗುವುದು ಕೇವಲ ನಮ್ಮನ್ನು ವಿಭಜಿಸುವ ಹುನ್ನಾರ ಹೊಂದಿರುವ ದೇಶವಿರೋಧಿ ಶಕ್ತಿಗಳಿಗೆ ಮಾತ್ರವೇ. ಭಾರತವನ್ನು ಮಾತೃಭೂಮಿಯೆಂದು ಪೂಜ್ಯಭಾವದಿಂದ ಕಾಣುವ ಯಾರೂ ಹಿಂದೂ ವಿರೋಧಿಯಾಗುವುದು ಅಸಾಧ್ಯ. ಹಿಂದೂ ವಿರೋಧಿ ಗಳೆಂದರೆ ಅವರು ದೇಶವಿರೋಧಿಗಳೇ.
ಹಿಂದೂಗಳನ್ನು ಭಾಷೆ, ಜಾತಿ, ಪಂಥಗಳ ಆಧಾರದಲ್ಲಿ ಒಡೆದು ರಾಜಕೀಯವಾಗಿ ದುರ್ಬಲಗೊಳಿಸಿ, ಹಿಂದೂಗಳ ಬಗ್ಗೆ ಭಯ ಹುಟ್ಟಿಸುವ ಮೂಲಕ ಮತೀಯ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ವಾಮಮಾರ್ಗದಲ್ಲಿ ದೇಶದ ಚುಕ್ಕಾಣಿ ಹಿಡಿಯುವುದೇ ಈ ಪಟ್ಟಭದ್ರ ಶಕ್ತಿಗಳ ಗುರಿ.
ಹಿಂದೂ ಮತಗಳನ್ನು ವಿಭಜಿಸಿ ವರ್ಗವಿಶೇಷದ ಮತಗಳನ್ನು ಕ್ರೋಡೀಕರಿಸುವುದೇ ಈ ಸಮೀಕರಣದ ಉದ್ದೇಶ. ಹಿಂದೊಮ್ಮೆ ಭಾರತವನ್ನು ಒಡೆದು ಆಳಿದ ಆಂಗ್ಲರ ದುರ್ನೀತಿಯನ್ನು ನಮ್ಮ ಸೆಕ್ಯುಲರ್ ರಾಜಕಾರಣಿಗಳು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಆದರೀಗ ಕಾಲ
ಬದಲಾಗಿದೆ. ಹಿಂದೂಗಳು ಜಾಗೃತರಾಗಿದ್ದಾರೆ. ಕೆನಡಾ, ಬಾಂಗ್ಲಾ, ಆಸ್ಟ್ರೇಲಿಯಾ, ಯುರೋಪ್, ಪಾಕಿಸ್ತಾನ ಮುಂತಾದೆಡೆ ನಡೆಯುತ್ತಿರುವ ಹಿಂದೂ ಉತ್ಪೀಡನ ಮತ್ತು ಭಾರತದಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆ, ವಕ್ಫ್ ಬೋರ್ಡಿನ ಭೂ ಅತಿಕ್ರಮಣಗಳೆ ಹಿಂದೂಗಳ
ಆತ್ಮವನ್ನು ಎಚ್ಚರಿಸಿವೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಹಿಂದೂಗಳು ‘ಮಾಡು ಇಲ್ಲವೇ ಮಡಿ’ ಎಂಬಂತೆ ಒಗ್ಗೂಡಲೇಬೇಕಾದ ಅಗತ್ಯವಿದೆ.
ಮಿಜೋರಂನ ಮುಖ್ಯಮಂತ್ರಿ ಇತ್ತೀಚೆಗೆ ಪ್ರತ್ಯೇಕ ಕ್ರೈಸ್ತ ದೇಶದ ಬೇಡಿಕೆ ಇಟ್ಟಿದ್ದು, ಕಾಶ್ಮೀರದ ಮುಖ್ಯಮಂತ್ರಿ 370ನೇ ವಿಧಿಯ ಪುನಃ ಸ್ಥಾಪನೆಯ ಮಾತನ್ನಾಡುತ್ತಿರುವುದು ಎಲ್ಲವೂ ಧರ್ಮದ ಆಧಾರದ ತಾನೇ? ಎಲ್ಲಿಯವರೆಗೆ ಭಾರತವು ಹಿಂದೂ ಬಹುಸಂಖ್ಯಾತ ವಾಗಿರು ವುದೋ, ಹಿಂದೂಗಳು ಒಗ್ಗಟ್ಟಿನಿಂದಿರುವರೋ ಅಲ್ಲಿಯವರೆಗಷ್ಟೇ ನಮ್ಮಲ್ಲಿ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ಉಳಿಯಲಿವೆ. ಹಿಂದೂಗಳು ಒಗ್ಗೂಡದಿದ್ದರೆ ದೇಶ ಇನ್ನೊಂದು ವಿಭಜನೆಯತ್ತ ಸಾಗುವುದಂತೂ ಸ್ಪಷ್ಟ. ಹಿಂದೂ ಧರ್ಮವನ್ನು, ದೇವಾನು ದೇವತೆಗಳನ್ನು, ಆಚರಣೆಗಳನ್ನು ಯಾರು ಹೇಗೆ ಬೇಕಾದರೂ ನಿಂದಿಸಬಹುದು, ವೈಚಾರಿಕ/ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಣಕಿಸಬಹುದು. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಸೆಕ್ಯುಲರಿಸಂನ ವ್ಯಾಪ್ತಿಗೆ ಬರುತ್ತದೆ. ಆದರೆ ಹಿಂದೂಗಳು ಇತರೆ ಮತಗಳ ಬಗ್ಗೆ ಮಾತನಾಡಿದರೆ ಅದು ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗಾದ ಧಕ್ಕೆ ಎನಿಸಿಕೊಳ್ಳುತ್ತದೆ.
ಅದಕ್ಕೆ ಅವರ ಉತ್ತರ- ‘ಸರ್ ತನ್ ಸೇ ಜುದಾ’. ಇವೆಲ್ಲವೂ ಸಂವಿಧಾನ-ಸೆಕ್ಯುಲರಿಸಂನ ಹೆಸರಿನಲ್ಲಿ ಹಿಂದೂಗಳಿಗೆ ಆಗುತ್ತಿರುವ ಮೋಸ. ಸೆಕ್ಯುಲರಿಸಂ ಹೆಸರಿನಲ್ಲಿ ನಿತ್ಯವೂ ‘ಹಿಂದೂ ಭರ್ತ್ಸ್ಯನೆ’ ನಡೆಯುತ್ತಿದ್ದರೂ ಅದನ್ನು ಹಿಂದೂ ಮೌನವಾಗಿ ನೋಡುವಂತಾಗಿದೆ. ತನ್ನ ಭವಿಷ್ಯದ
ಬಗ್ಗೆ ಆತನಲ್ಲಿ ಆತಂಕ-ಅನಿಶ್ಚಿತತೆಯಿದೆ. ಹಿಂದೂ ಜಗತ್ತಿನಲ್ಲಿ ಎಲ್ಲೇ ಇದ್ದರೂ ವಿಶ್ವಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗೆ ತನ್ನ ಕೊಡುಗೆ ನೀಡುತ್ತಿರುತ್ತಾನೆ. ತಾನು ನೆಲೆನಿಂತ ಭೂಮಿಯ ಅನ್ನದ ಋಣವನ್ನು ದುಡಿದು ತೀರಿಸುತ್ತಾನೆ. ಉಂಡ ಮನೆಗೆ ಆತ ಎಂದೂ ಎರಡು
ಬಗೆಯಲಾರ. ಇದು ಆರ್ಷ ಪರಂಪರೆಯ ಹಿರಿಮೆ ಮತ್ತು ಹೆಮ್ಮೆ. ಹಾಗಾಗಿ ಹಿಂದೂಗಳು ಇಂದು ವಿಶ್ವದಾದ್ಯಂತ ಗೌರವ-ಹೊಗಳಿಕೆಗೆ ಪಾತ್ರರಾಗಿದ್ದಾರೆ. ಜಗತ್ತಿನಲ್ಲಿ ಭಯೋತ್ಪಾದನೆಗೆ ಎಂದೂ ಕುಮ್ಮಕ್ಕು ನೀಡದಿರುವ ಏಕೈಕ ಧರ್ಮವೇ ಹಿಂದೂಧರ್ಮ. ಇದು ಆತ್ಮರಕ್ಷಣೆಗೆ
ಹೊರತುಪಡಿಸಿ ಅಕಾರಣ ಹಿಂಸೆಯನ್ನು ಎಂದಿಗೂ ಪ್ರತಿಪಾದಿಸುವುದಿಲ್ಲ.
ವಿಜ್ಞಾನದ ಹೆಸರಿನಲ್ಲಿ ಮಧ್ಯ ಏಷ್ಯಾದ ಪರಕೀಯ ಆರ್ಯರ ಆಕ್ರಮಣವೆಂಬ ಸುಳ್ಳು ಕಥೆಕಟ್ಟಿ, ನಮ್ಮ ಜನರನ್ನು ಆರ್ಯ-ದ್ರಾವಿಡರೆಂಬ ಹೆಸರಿನಲ್ಲಿ ಒಡೆದು ವೈಷಮ್ಯ ಬಿತ್ತುವುದನ್ನು ಪಾಶ್ಚಾತ್ಯರು ನಾಜೂಕಾಗಿ ಮಾಡಿದರು. ಈ ಮಣ್ಣಿನ ಮಕ್ಕಳನ್ನು (ಮೂಲನಿವಾಸಿಗಳನ್ನು) ದಾಳಿಕೋರ ಆರ್ಯರೆಂದು ಬಿಂಬಿಸಿ ನಮ್ಮೊಳಗೇ ಅಪನಂಬಿಕೆ-ದ್ವೇಷ ಬೆಳೆಸಲಾಯಿತು. ಲಾರ್ಡ್ ಕರ್ಜನ್ನನ ಬಂಗಾಳ ವಿಭಜನೆಯಿಂದ ಆರಂಭವಾದ ಒಡೆದಾಳುವ ನೀತಿಯು ಭಾರತದ ಅಂತಃಶಕ್ತಿಯನ್ನು ಬಹಳ ಕುಗ್ಗಿಸಿದೆ. ಭಾರತೀಯರು ತಮ್ಮ ಜಾತಿ-ಪಂಥ, ಬಣ್ಣ-ಭಾಷೆಗಳ ನಡುವಿನ ಕಿತ್ತಾಟಗಳ ಮಗ್ನರಾಗಿದ್ದು ಜಾಗತಿಕವಾಗಿ ಮುನ್ನೆಲೆಗೆ ಬರಲು ಸಾಧ್ಯವಾಗಬಾರದೆಂಬುದೇ ಆಂಗ್ಲರ ಹುನ್ನಾರವಾಗಿತ್ತು.
ಅದಕ್ಕೆ ಪೂರಕವಾಗಿರುವ ಬೌದ್ಧಿಕ, ಶೈಕ್ಷಣಿಕ ಸಾಮಗ್ರಿಗಳನ್ನೂ, ಅದರ ಪ್ರಚಾರಕ್ಕೆ ಬೇಕಾದ ಗುಲಾಮಿ ಮಾನಸಿಕತೆಯ ವಕ್ತಾರರನ್ನೂ ಅವರು ಮೆಕಾಲೆ ಶಿಕ್ಷಣದ ಮೂಲಕ ಯಥೇಚ್ಛವಾಗಿ ಹುಟ್ಟುಹಾಕಿದ್ದರು. ಹೀಗೆ ಧಾರ್ಮಿಕ ಸ್ವಾಭಿಮಾನ ಮತ್ತು ದೇಶಪ್ರೇಮ ಹೊಂದಿರದ ನಿಸ್ತೇಜರನ್ನು
ಮತಾಂತರಿಸುವುದು ಅವರಿಗೆ ಸುಲಭವಾಗಿತ್ತು. ಹಿಂದೂಗಳ ಸಂಖ್ಯಾಬಲ ತಗ್ಗಿದರೆ ಭಾರತವನ್ನು ಪರೋಕ್ಷವಾಗಿ ಆಳುವುದು ಸುಲಭವೆಂಬ ಪೂರ್ವಪಕ್ಷವೂ ಈ ನೀತಿಗೆ ಮೂಲ ಪ್ರೇರಣೆ. ಭಾರತದ ಹಿಂದೂಗಳು ಒಂದಾದರೆ ಜಗತ್ತನ್ನು ಮತ್ತೊಮ್ಮೆ ಆಳಬಲ್ಲರು ಎಂಬ ಸತ್ಯ ಅವರಿಗೆ ತಿಳಿದಿತ್ತು. ಭಾರತವು ಶೇ.80ಕ್ಕೂ ಅಧಿಕ ಹಿಂದೂಗಳಿರುವ ದೇಶವೆಂದುಕೊಂಡರೆ ಅದು ಶುದ್ಧ ತಪ್ಪು.
ಪಾಶ್ಚಾತ್ಯ ಸಂಸ್ಕೃತಿಗೆ ಮೊರೆಹೋಗಿರುವ ಬಹುತೇಕ ಹಿಂದೂ ಯುವಜನರು ಹುಟ್ಟಿನಿಂದಷ್ಟೇ ಹಿಂದೂಗಳು. ನಮ್ಮಲ್ಲಿ ಶೇ.೫೦ಕ್ಕೂ ಹೆಚ್ಚಿನವರು ಆಚರಣೆಯಿಂದ ಹಿಂದೂಗಳಲ್ಲ. ಲಿಬರಲಿಸಂ ಮತ್ತು ವೋಕಿಸಂ ನಮ್ಮ ಅಸ್ತಿತ್ವಕ್ಕೆ ತಂದೊಡ್ಡಬಲ್ಲ ಅಪಾಯದ ಅರಿವು ನಮ್ಮಲ್ಲಿ ಬಹುತೇಕರಿಗೆ ಇದ್ದಂತಿಲ್ಲ. ದೇಶದ ಬಹುತೇಕ ಗಡಿನಾಡ ಪ್ರದೇಶಗಳಲ್ಲಿ (ಈಶಾನ್ಯ ರಾಜ್ಯಗಳು, ಕಾಶ್ಮೀರ, ಪಂಜಾಬ್) ಹಿಂದೂಗಳು ಈಗ ಅಲ್ಪಸಂಖ್ಯಾತರು. ಕೇರಳ, ಪ.ಬಂಗಾಳ, ಅಸ್ಸಾಂ, ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಬಾಂಗ್ಲಾ ಮತ್ತು ಮ್ಯಾನ್ಮಾರಿನ ರೋಹಿಂಗ್ಯಾ ಮೊದಲಾದ ಅಕ್ರಮ
ನುಸುಳುಕೋರರು ನೆಲೆಸುತ್ತಿರುವುದು, ವ್ಯಾಪಕ ಮತಾಂತರ ನಡೆಯುತ್ತಿರುವುದು ಭಾರತದ ಆಂತರಿಕ ಭದ್ರತೆಗೆ ಅಪಾಯ.
Demography is destiny ಎಂಬ ಮಾತಿದೆ. ಇದನ್ನರಿಯುವಲ್ಲಿ ನಾವು ವಿಫಲರಾದರೆ ಮುಂದೊಂದು ದಿನ ಬಾಂಗ್ಲಾದ ಹಿಂದೂ ಗಳಂತೆ ಪರಿತಪಿಸಬೇಕಾದೀತು. ಯಾರಾದರೂ ಜಾಗತಿಕ ಇಸ್ಲಾಮಿಕ್ ಹಾಗೂ ಕ್ರಿಶ್ಚಿಯನ್ ಬ್ರದರ್ಹುಡ್ ಬಗ್ಗೆ ಕರೆಕೊಟ್ಟರೆ ಅದನ್ನು ‘ಸೂಡೋ-ಸೆಕ್ಯುಲರ್’ಗಳು ವಿರೋಽಸುವುದಿಲ್ಲ. ಆದರೆ ಅನಾದಿ ಕಾಲದಿಂದಲೂ ‘ವಸುಧೈವ ಕುಟುಂಬಕಂ’ ಎಂಬ ವೈಶ್ವಿಕ ಭ್ರಾತೃತ್ವದ ಕರೆಕೊಟ್ಟ ಹಿಂದೂಗಳು ಜಾಗತಿಕ ಹಿಂದೂ ಭ್ರಾತೃತ್ವದ ಮಾತನ್ನಾಡಿದರೆ ಎಡಚರು, ವೋಕಿಸಂನ ಪ್ರತಿಪಾದಕರು, ಕಾಂಗಿಗಳು ಮತ್ತು ಇಸ್ಲಾಮಿಸ್ಟರಿಗೆ ಅದನ್ನು ಸಹಿಸಲಾಗುತ್ತಿಲ್ಲ. United we stand, divided we fall ಎಂಬ ಬೈಬಲ್ ಮೂಲದ ಮತ್ತು ಈಸೋಪನ ಕಥೆಗಳಲ್ಲಿ ಬಳಸಲ್ಪಟ್ಟ ಆಂಗ್ಲಗಾದೆ ಅಬ್ರಹಾಂ ಲಿಂಕನ್ನರ ಚಾರಿತ್ರಿಕ ಭಾಷಣದಿಂದ ಜನಜನಿತವಾಯಿತು. ಅದನ್ನು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಭಾಷಣ, ಪ್ರಬಂಧಗಳಲ್ಲಿ ಹಲವು ಬಾರಿ ಬಳಸಿದ್ದೇವೆ. ಈ ಕುರಿತು ಯಾರಿಗೂ ಯಾವುದೇ ಆಕ್ಷೇಪವಿದ್ದಿಲ್ಲ.
ಆದರೆ ಅದರ ಯಥಾವತ್ ಹಿಂದಿ ಅನುವಾದದಂತಿರುವ ಬಟೇಂಗೇ ತೋ ಕಟೇಂಗೇ, ಏಕ್ ರಹೇಂಗೇ ತೋ ನೇಕ್ ರಹೇಂಗೇ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರು, ಬಾಂಗ್ಲಾದ ಪರಿಸ್ಥಿತಿಯ ಉದಾಹರಣೆಯೊಂದಿಗೆ ಮಾಡಿದ ಘೋಷಣೆ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಿಂದೂಗಳು ಕೂಡಾ ಎಡೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇದು ಹುಸಿ ಜಾತ್ಯತೀತರ ನಿದ್ದೆಗೆಡಿಸಿ ಕಣ್ಣು ಕೆಂಪಾಗಿಸಿದೆ, ಪಾಪ. ಹಿಂದೂಗಳು ಮತ ಚಲಾವಣೆಯಲ್ಲಿ ಒಂದಾದರೆ ಎಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಕೊನೆಯಾಗುವುದೋ ಎಂಬ ಭೀತಿ ಇವರನ್ನು ಕಾಡುತ್ತಿದೆ. ಹಾಗಾಗಿ ತೀವ್ರ ಹತಾಶೆಯಿಂದ, ಹಿಂದೂಗಳನ್ನು ಭೀತಿಗೊಳಪಡಿಸುವ ಹೇಳಿಕೆಗಳನ್ನು ನೀಡುತ್ತಿzರೆ. ಆದರೆ ಇದು ಈ ‘ಇಂಡಿಯ’ ಒಕ್ಕೂಟದ ನಾಯಕರಿಗೆ ತಿರುಗುಬಾಣವಾಗಲಿದೆ.
ಎಂದರಲ್ಲಿ ಜಾತಿ ಸಮಾವೇಶಗಳ ಹೆಸರಿನಲ್ಲಿ ಒಗ್ಗೂಡುವ ನಾವು ಹಿಂದೂ ಸಮಾವೇಶಗಳಲ್ಲಿ ಅದೇಕೆ ಒಗ್ಗೂಡಲಾರೆವು? ಈಗಲೂ ನಾವು ಒಂದಾಗದೆ ಹೋದರೆ ನಮ್ಮನ್ನು ದೇವರೂ ಕ್ಷಮಿಸಲಾರ. ಹಿಂದೂಗಳು ಒಂದಾಗಿ ಹೋರಾಡಿದ್ದರೆ ಅಯೋಧ್ಯೆ, ಕಾಶಿ, ಮಥುರಾಗಳ ದೇಗುಲ ಗಳು, ದ್ವಾರ ಸಮುದ್ರ, ವಿಜಯನಗರಗಳ ಪಟ್ಟಣಗಳು ನಾಶವಾಗುತ್ತಿರಲಿಲ್ಲ. ಹಿಂದೂಗಳ ಈ ಏಕತೆ ಇತ್ತೀಚಿನ ಹರಿಯಾಣದ ಚುನಾವಣೆಯಲ್ಲಿ ಪ್ರಭಾವ ಬೀರಿತ್ತು. ಈ ಐಕ್ಯತಾ ಘೋಷಣೆಯಿಂದ ದೇಶ ಮತ್ತು ಹಿಂದೂ ವಿರೋಧಿಗಳಿಗೆ ಕಿವಿಯಲ್ಲಿ ಕಾದ ಸೀಸವನ್ನು ಸುರಿದಂತಾಗಿದೆ. ಹಿಂದೂ ಏಕತೆಯು ಇವರಿಗೆ ಸುತರಾಂ ಜೀರ್ಣಿಸಿಕೊಳ್ಳಲಾಗದ ತುತ್ತಾಗಿದೆ. ಹಿಂದೂಗಳನ್ನು ಒಡೆದಾಳುವ ಇವರ ರಾಜಕೀಯಕ್ಕೆ ಅದು ಅಂತಿಮ ಷರಾ ಬರೆದಂತೆ ಕಾಣುತ್ತಿದೆ. ಹಾಗಾಗಿ ಈ ಒಗ್ಗಟ್ಟಿನ ಕರೆ ಇವರ ಜಂಘಾಬಲವನ್ನೇ ಉಡುಗಿಸಿದೆ.
ಯಾವತ್ತು ಹಿಂದೂಗಳು ಒಂದಾಗುವರೋ ಅಂದೇ ಭಾರತವು ವಿಶ್ವಗುರುವಾಗಿ ರಾರಾಜಿಸುತ್ತದೆ. ಈ ಶತಮಾನ ನಮ್ಮದು. ಸ್ವಾರ್ಥ, ಶೋಷಣೆ, ಯುದ್ಧ, ವೈಷಮ್ಯ, ಅಸೂಯೆ, ಪ್ರಕೃತಿನಾಶ, ಮತಾಂಧತೆಗಳಿಂದ ನಲುಗಿರುವ ವಿಶ್ವದಲ್ಲಿ ಚಿರಶಾಂತಿಯನ್ನು ತರಬಲ್ಲ ಭಾರತವೇ ಎಲ್ಲರಿಗೂ
ಏಕೈಕ ಭರವಸೆಯಾಗಿದೆ. ನಮ್ಮೆ ವೈರುಧ್ಯಗಳನ್ನು ಬದಿಗಿಟ್ಟು ಒಂದಾಗೋಣ. ವಿಶ್ವದ ಒಳಿತಿಗಾಗಿ ಟೊಂಕಕಟ್ಟಿ ನಿಣ.
(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)
ಇದನ್ನೂ ಓದಿ: #BYRaghavendra