Friday, 20th September 2024

ಶಾಲಾ ಮಕ್ಕಳಲ್ಲಿಯೂ ಡ್ರಗ್ಸ್ ಜಾಗೃತಿ ಅಗತ್ಯ 

ಅಭಿವ್ಯಕ್ತಿ

ದಿಲೀಪ್ ಕುಮಾರ್‌ ಸಂಪಡ್ಕ

ಸದ್ಯ ಚಾಲ್ತಿಯಲ್ಲಿರುವ ಸುದ್ದಿಯೆಂದರೆ ಅದು ಡ್ರಗ್ಸ್‌ ಮಾಫಿಯಾ. ಈಗ ಇದರ ಜಾಲವು ಶಿಕ್ಷಣ ರಂಗದಲ್ಲಿಯೂ ಬೇರೂರಿದೆ ಎಂಬ ವಿಚಾರವಂತೂ ಪೋಷಕರನ್ನು ಮತ್ತು ಸಮಾಜವನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಹೆಬ್ಬಯಕೆಯಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ದಾಖಲು ಮಾಡುತ್ತಾರೆ. ಇಲ್ಲಿ ಪೋಷಕರು ಶುಲ್ಕದ ಬಗ್ಗೆ ಯೋಚಿಸುವುದಿಲ್ಲ. ಆದರೆ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಶಾಲಾ – ಕಾಲೇಜು ವಿದ್ಯಾರ್ಥಿ ಗಳನ್ನು ಡ್ರಗ್ಸ್ ಬಲೆಯಲ್ಲಿ ಸಿಲುಕಿಸಿ ಹಣ ಮಾಡುವ ದೊಡ್ಡ ಗುಂಪೊಂದು ರಾಜ್ಯದಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾದ ವಿಚಾರವಾಗಿದೆ. ಈ ಜಾಲವು ಶ್ರೀಮಂತರ ಮಕ್ಕಳು ಓದುವ ಶಾಲೆಗಳ ಬಳಿ ಐಸ್ ಕ್ರೀಂ, ಇತರ ತಿಂಡಿ, ತಿನಿಸುಗಳಿಗೆ ಡ್ರಗ್ಸ್ ಸವರಿ ಕೊಡುತ್ತಿರುವ ಗುಮಾನಿ ಎಲ್ಲೆಡೆ ಕೇಳಿ ಬರುತ್ತಿದೆ. ಡ್ರಗ್ಸ್  ಮಾರಾಟಗಾರರು ವಿದ್ಯಾರ್ಥಿ ಗಳ ಸ್ನೇಹ ಸಂಪಾದಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಮೂಲಕವೇ ಮಾರಾಟಕ್ಕೆೆ ದಾರಿ ಕಂಡುಕೊಂಡಿದ್ದಾರೆ.
ಹೊರ ರಾಜ್ಯ, ದೇಶದ ವಿದ್ಯಾರ್ಥಿಗಳು ವಾಸವಿರುವ ಹಾಸ್ಟೆಲ್, ಪೇಯಿಂಗ್ ಗೆಸ್ಟ್‌, ಬಾಡಿಗೆ ಮನೆಗಳಲ್ಲಿ, ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನು ಡ್ರಗ್ಸ್ ಮಾರಾಟದ ಕೇಂದ್ರವನ್ನಾಗಿಸಿಕೊಂಡು ವಿದ್ಯಾರ್ಥಿಗಳನ್ನು ನಿಧಾನವಾಗಿ ಈ ಜಾಲದೊಳಗೆ ಬಂಧಿಯಾಗಿಸಿದ್ದಾರೆ.

ಕೊನೆಯ ಹಂತದಲ್ಲಿ ಮಕ್ಕಳು ಡ್ರಗ್ಸ್ ‌‌ಗಾಗಿ ಯಾವ ಕೃತ್ಯವನ್ನು ನಡೆಸಲು ಸಹ ಸಿದ್ಧರಾಗಿ ಬಿಡುತ್ತಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನೆ ಮತ್ತು ಸಮೀಕ್ಷೆಗಳ ಪ್ರಕಾರ ಈ ಪಿಡುಗು ಹತೋಟಿ ಮೀರಿ ಹೋಗಿ ಬಹುತೇಕ ದೇಶಗಳಿಗೂ ತನ್ನ ಕೆನ್ನಾಲಗೆಯನ್ನು ಚಾಚಿದೆ ಎನ್ನುತ್ತಿವೆ. ವಿಶ್ವಸಂಸ್ಥೆಯು 1990ನ್ನು ಮಾದಕ ದ್ರವ್ಯ ಸೇವನೆಯ ವಿರುದ್ಧದ
ವರ್ಷವನ್ನಾಗಿ ಘೋಷಿಸಿದೆ. ಭಾರತದಲ್ಲಿ ಮಣಿಪುರವು ಅತ್ಯಂತ ಭೀಕರವಾಗಿ ಡ್ರಗ್ಸ್ ಪಿಡುಗಿಗೆ ತುತ್ತಾಗಿರುವ ರಾಜ್ಯವಾಗಿದೆ.

ಇದನ್ನು ತಪ್ಪಿಸಲು ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಸೂಕ್ತವಾದ ಜಾಗೃತಿಯನ್ನು ಮೂಡಿಸಬೇಕು. ಇದಕ್ಕಾಗಿ ಶಾಲಾ ಪಠ್ಯಕ್ರಮದಲ್ಲಿ ಡ್ರಗ್ ಶಿಕ್ಷಣವನ್ನು ಜಾರಿಗೊಳಿಸುವ ಅನಿವಾರ್ಯತೆಯಿದೆ. ಹಾಗಾದರೆ ಡ್ರಗ್ ಶಿಕ್ಷಣ ಎಂದರೇನು? ಯಾರಾದರೂ ಮಾದಕ ವಸ್ತುಗಳ ವ್ಯಸನಿಯಾಗಿದ್ದರೆ, ಅವರ ಲಕ್ಷಣಗಳು, ಅದನ್ನು ಕಂಡುಡಿಯುವ ತಂತ್ರಗಳು, ಈ ವ್ಯಸನದಿಂದ ಅವರು
ಮತ್ತು ಅವರ ಸುತ್ತಮುತ್ತಲಿನ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದರ ಕುರಿತು ವಾಸ್ತವಿಕ ದತ್ತಾಂಶವನ್ನು ಪ್ರಸ್ತುತಪಡಿಸುತ್ತದೆ. ಇದರ ಜೊತೆ ನಾವು ಈ ವ್ಯಸನಿ ಮತ್ತು ಇವರ ಕುಟುಂಬದ ಸದಸ್ಯರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುವುದರ ಕುರಿತು ಸಲಹೆಯನ್ನು ಒಳಗೊಂಡಿರುತ್ತದೆ. ಜತೆಗೆ ಈ ಸಮಸ್ಯೆಯಿಂದ ವ್ಯಸನಿಯನ್ನು ಹೊರ ಬರುವಂತೆ ಮಾಡಿ
ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದರ ಜತೆ ಪ್ರತಿಯೊಬ್ಬರು ಈ ಜಾಲದಲ್ಲಿ ಸಿಲುಕದಂತೆ ಮಾಡಿ ಜಾಗೃತಿ ಮೂಡಿಸುವುದನ್ನು ಡ್ರಗ್ ಶಿಕ್ಷಣವು ಒಳಗೊಂಡಿರುತ್ತದೆ.

ಡ್ರಗ್ ಶಿಕ್ಷಣವನ್ನು ಶಾಲಾ ಪಠ್ಯಕ್ರಮದ ಒಂದು ಭಾಗವಾಗಿ ಮಾಡುವುದರಿಂದ ಇದು ಹದಿಹರೆಯದ ವರಲ್ಲಿ ಅಕ್ರಮ ಡ್ರಗ್ಸ್ ‌ಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪಾಯ ಗಳನ್ನು ಎತ್ತಿ ತೋರಿಸುತ್ತದೆ. ಡ್ರಗ್ ಶಿಕ್ಷಣದ ಮೂಲಕ ಮಕ್ಕಳು ಮತ್ತು ಯುವ ವಯಸ್ಕರಿಗೆ ಮಾದಕ ವಸ್ತುಗಳ ಸೇವನೆ ಹಾಗೂ
ವ್ಯಸನದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹರಿಹರೆಯದವರಿಗೆ ಡ್ರಗ್ಸ್ ಸೇವನೆಯ ಮೂಲಕ ನಕಾರಾತ್ಮಕ ಕಾರ್ಯ ವಿಧಾನಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಡ್ರಗ್ ಶಿಕ್ಷಣ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ಆಯ್ಕೆಗಳನ್ನು ಮಾಡಲು, ಅಪಾಯಕಾರಿ ಸಂದರ್ಭಗಳನ್ನು ಗುರುತಿಸಲು ಮತ್ತು ಸವಾಲಿನ ಸಂದರ್ಭಗಳಿಗೆ ಅವರನ್ನು ಸಿದ್ಧಪಡಿಸುವ ತಂತ್ರಗಳನ್ನು ಅಭಿವೃದ್ಧಿ ಪಡಿಸಲು ಅವರಿಗೆ ಸಹಾಯ ಮಾಡುತ್ತದೆ. ಈ ಪಾತ್ರದಲ್ಲಿ ಶಿಕ್ಷಕರಿಗೆ ಸಹಾಯ ಮಾಡಲು ಹಲವಾರು ಸಂಪನ್ಮೂಲಗಳು ಮತ್ತು ತಂತ್ರಗಳನ್ನು ಒದಗಿಸಿ ಕೊಡುತ್ತದೆ.

ಇನ್ನೊಂದೆಡೆ, ಈ ಡ್ರಗ್ ಶಿಕ್ಷಣವು ಶಾಲಾ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡುತ್ತದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಡ್ರಗ್ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಜ್ಞಾನ, ಸಾಮಾಜಿಕ ಮತ್ತು ಜೀವನ ಕೌಶಲ್ಯಗಳನ್ನು ಬೆಳೆಸಿ ಅಕ್ರಮ ಡ್ರಗ್ಸ್ ಕಡೆಗೆ ನಿರಾಕರಿಸುವ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಯುವ ಜನರನ್ನು ಅವರ ಆಸಕ್ತಿಗಳ ಕಡೆ ಸೆಳೆದು ಅವರ ಗುರಿ ಯನ್ನು ಗಟ್ಟಿಗೊಳಿಸುವಂತೆ ಮಾಡುತ್ತದೆ. ಸಮಸ್ಯೆಗಳನ್ನು ಪರಿಹರಿಸಿ, ವಿಮರ್ಶಾತ್ಮಕ ಚಿಂತನೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಲು ವೇದಿಕೆಯನ್ನು ರೂಪಿಸುತ್ತದೆ.

ವಿಶಾಲ ಆರೋಗ್ಯ, ಒತ್ತಡ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವ ತಂತ್ರ ವನ್ನು ಒಳಗೊಂಡಿರುತ್ತದೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರದ ಬಗ್ಗೆೆಯೂ ತಿಳಿ ಹೇಳುತ್ತದೆ. ಒಟ್ಟಿನಲ್ಲಿ ಮಗುವನ್ನು ಡ್ರಗ್ಸ್ ಜಾಲದಿಂದ ಹೊರಡುವುದು
ಡ್ರಗ್ ಶಿಕ್ಷಣದ ಮುಖ್ಯ ಉದ್ಧೇಶವಾಗಿದೆ. ಇದನ್ನು ಹೊರತುಪಡಿಸಿ, ಈ ಪಿಡುಗಿಗೆ ಶಿಕ್ಷಕರಿಂದ ಮಾತ್ರ ಸಂಭವನೀಯ ಪರಿಹಾರ ಕಂಡುಹಿಡಿಯಲು ಸಾಧ್ಯವಿದೆ. ಶಿಕ್ಷಕರು ಮಾದಕ ವ್ಯಸನಿಗಳಾಗಿರುವಂಥ ವಿದ್ಯಾರ್ಥಿಗಳೆಡೆ ತಮ್ಮ ಪ್ರೀತಿ, ಅಕ್ಕರೆಯನ್ನು ತೋರಿಸಬೇಕು. ಶಾಲೆಗಳೆಂದರೆ ನಾಲ್ಕು ಗೋಡೆಗಳಿರದ ಜೈಲು ಎಂಬ ಭಾವನೆ ಮಕ್ಕಳಲ್ಲಿ ಮೂಡದಂತೆ ನೋಡಿಕೊಳ್ಳಬೇಕು. ಶಾಲಾ ಪಠ್ಯಕ್ರಮದಲ್ಲಿ ಡ್ರಗ್ ಸಂಬಂಧಿ ಸಮಸ್ಯೆಗಳ ಕುರಿತ ವಿಷಯ ವಸ್ತುವನ್ನು ಸೇರಿಸಬೇಕು. ಹಿಂದೆಲ್ಲ ಶಾಲಾ ಆಡಳಿತ ವಿರೋಧ ಹಾಗೂ ಪೋಷಕರ ಬಿಗುಮಾನದಿಂದಾಗಿ ಶಾಲೆಗಳಲ್ಲಿ ಡ್ರಗ್ ವ್ಯಸನದಂಥ ಸೂಕ್ಷ್ಮ ಸಮಸ್ಯೆಯ ಕುರಿತು ಚರ್ಚಿಸಲು, ಹಿಂಜರಿಯುತ್ತಿದ್ದರು. ಆದರೆ ಈಗ ವಿದ್ಯಾರ್ಥಿಗಳ ಮನಸ್ಸಿನ ಮೇಲಾಗುತ್ತಿರುವ ಹಿಂಸೆ ಹಾಗೂ ಅಪರಾಧದ ಪ್ರಭಾವ
ವನ್ನು ಎದುರಿಸಲು ಅವರಿಗೆ ಡ್ರಗ್ ದುರ್ಬಳಕೆಯ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.

ಶಿಕ್ಷಕರು ಡ್ರಗ್ ಬಳಕೆ ಹಾಗೂ ಡ್ರಗ್ ದುರ್ಬಳಕೆ ವಿದ್ಯಾರ್ಥಿಗಳ ಭವಿಷ್ಯದ ಜೀವನ ಹಾಗೂ ವೃತ್ತಿಗಳಲ್ಲಿ ಒಡ್ಡುವ ಸಮಸ್ಯೆಗಳ
ತೀವ್ರತೆಯ ಬಗ್ಗೆ ತಿಳಿಸಿಕೊಡಬೇಕು. ವಿದ್ಯಾರ್ಥಿ ವ್ಯಸನಿಗಳಲ್ಲಿ ಸಕಾರಾತ್ಮಕವಾದ ಸ್ವರೂಪ ಭಾವನೆ ಮೂಡುವಂತೆ
ಮಾಡಲು ಶಾಲೆಗಳಲ್ಲಿನ ಬೋಧನೆ ಹಾಗೂ ಕಲಿಕೆಯ ವಾತಾವರಣವು ಶ್ರಮಿಸಬೇಕು. ಡ್ರಗ್ ಬಳಕೆಯನ್ನು ಉತ್ತೇಜಿಸುವ ಸಹಪಾಠಿಗಳ ಗುಂಪಿನ ಒತ್ತಡಕ್ಕೆ ಮಣಿಯದಿರಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು. ಚಾರಿತ್ರ್ಯ ವರ್ಧನೆ ಹಾಗೂ ಮೌಲ್ಯ
ಗಳನ್ನೂ ಪಠ್ಯಕ್ರಮದಲ್ಲಿ ಸೇರಿಸಬೇಕು. ಡ್ರಗ್ ವ್ಯಸನ ಹಾಗೂ ಅದನ್ನು ತಡೆಗಟ್ಟುವಿಕೆ ಕುರಿತು ವಿದ್ಯಾರ್ಥಿಗಳಲ್ಲಿ  ಜಾಗೃತಿ ಮೂಡಿಸಲು ಸಮಾಲೋಚಕರ ಸಹಾಯ ಪಡೆಯಬೇಕು.

ಪೋಷಕರು ಮಕ್ಕಳ ಮೇಲೆ ಭಾರೀ
ಕಾರ್ಯಭಾರ ಮತ್ತು ಕಾರ್ಯರೂಪಕ್ಕೆೆ ತರಲಾಗದಂಥ
ನಿರೀಕ್ಷೆಗಳನ್ನು ಹೇರುವುದನ್ನು ತಡೆಯಬೇಕು. ವಿದ್ಯಾಾರ್ಥಿ
ಗಳ ಆಸಕ್ತಿಿಯನ್ನು ಹಿಡಿದಿರುವ ರೀತಿಯಲ್ಲಿ ಡ್ರಗ್
ಸಂಬಂಧಿ ವಿಷಯಗಳ ಸಮಸ್ಯೆೆಗಳ ಕುರಿತು ಪಠ್ಯವಿಷಯ
ವನ್ನು ಪ್ರಸ್ತುತಪಡಿಸಬೇಕು. ಈ ಸಮಸ್ಯೆೆಗಳನ್ನು
ಪರಿಣಾಮ ಕಾರಿಯಾಗಿ ಬಗೆಹರಿಸಲು ಶಿಕ್ಷಕರಿಗೆ ಸೂಕ್ತ
ಬೋಧನೆ – ಕಲಿಕೆಯ ಕಾರ್ಯತಂತ್ರಗಳನ್ನು ಸೂಚಿಸುವ
ಶಿಕ್ಷಕರ ಕೈಪಿಡಿಯನ್ನು ಒದಗಿಸಬೇಕು. ಪಂಜಾಬ್‌ನ
ಹಲವಾರು ಶಾಲೆಗಳಲ್ಲಿ ಡ್ರಗ್ ವ್ಯಸನದ ಸಮಸ್ಯೆೆಯನ್ನು
ಜಾನಪದ ರಂಗಭೂಮಿ ಮತ್ತು ಶಾಲಾ ಸಭೆಗಳಲ್ಲಿ
ಹಾಡುಗಳ ಮೂಲಕ ಅರಿವು ಮೂಡಿಸಲಾಗುತ್ತಿಿದೆ.
ಶಾಲಾ ಪಠ್ಯಕ್ರಮದಲ್ಲಿ ಡ್ರಗ್ ಶಿಕ್ಷಣವನ್ನು ಅಳವಡಿಸು
ವುದರ ಬಗ್ಗೆೆ ಸ್ವಲ್ಪಮಟ್ಟದ ಪ್ರತಿರೋಧಗಳು ಎದುರಾಗ
ಬಹುದು.
ಶಾಲಾ ಶಿಕ್ಷಣದಲ್ಲಿ ಡ್ರಗ್ ಶಿಕ್ಷಣದ ಅವಶ್ಯಕತೆ
ಇದೆಯೇ? ಡ್ರಗ್ ಶಿಕ್ಷಣದಿಂದ ಅಷ್ಟೊೊಂದು ಪರಿಣಾಮ
ಬೀರಲು ಸಾಧ್ಯವೇ? ಇದರಿಂದ ಮಕ್ಕಳಲ್ಲಿ ಗೊಂದಲಗಳು
ಉಂಟಾಗುವು ದಿಲ್ಲವೇ? ಡ್ರಗ್ ಶಿಕ್ಷಣವನ್ನು ಶಾಲಾ
ವಾತಾವರಣ ದಲ್ಲಿ ನೀಡುವುದಾದರೂ ಹೇಗೆ? ಎನ್ನುವ
ಭಿನ್ನಾಾಭಿಪ್ರಾಾಯಗಳಿವೆ. ಆದರೂ ಡ್ರಗ್ ಮಾರಿಯ ಬಗ್ಗೆೆ
ಇಲ್ಲಿಯವರೆಗೆ ತೋರಿದ ಅಸಡ್ಡೆೆಯೇ ಇಂದಿನ ಈ
ಪರಿಸ್ಥಿಿತಿಗೆ ಕಾರಣವಾಗಿದೆ. ಡ್ರಗ್ ವಿರುದ್ಧದ ಕಾನೂನು
ಗಳು ಸಹ ಇನ್ನೂ ಬಿಗಿಯಾಗಬೇಕಿದೆ. ಆದುದರಿಂದ,
ಡ್ರಗ್ ಶಿಕ್ಷಣದ ಅಳವಡಿಕೆಯ ಬಗ್ಗೆೆ ಸೂಕ್ತವಾದ
ಅಧ್ಯಯನವನ್ನು ಆದ್ಯತೆಗನುಸಾರವಾಗಿ ನಡೆಸುವುದು
ಕಡ್ಡಾಾಯವಾಗಿದೆ.
ಅಂತಿಮವಾಗಿ, ಪೋಷಕರು, ಶಾಲಾ ಆಡಳಿತ
ಮಂಡಳಿ, ಸಾರ್ವಜನಿಕರು ಒಟ್ಟಾಾಗಿ ಈ ಪಿಡುಗಿನ ವಿರುದ್ಧ
ಹೋರಾಟ ಮಾಡಬೇಕಿದೆ. ಒಟ್ಟಿಿನಲ್ಲಿ ಉತ್ತಮ
ಪ್ರಜೆಗಳಾಗಿ ರೂಪುಗೊಳ್ಳಬೇಕಾದ ನಮ್ಮ ಮುಂದಿನ
ಮಕ್ಕಳು ಡ್ರಗ್‌ಸ್‌ ಮಾಫಿಯಾದಲ್ಲಿ ಸಿಲುಕಿ ತಮ್ಮ ಜೀವನ
ಮತ್ತು ಭವಿಷ್ಯಕ್ಕೆೆ ಆಪತ್ತು ತಂದುಕೊಳ್ಳುತ್ತಿಿರುವುದು
ನಿಜವಾಗಿಯೂ ದುರದೃಷ್ಟಕರ.
ಇದರ ವಿರುದ್ಧ ಹೋರಾಟ ಮಾಡುವುದು
ಭಾರತೀಯರಾಗಿ ನಮ್ಮ ಕರ್ತವ್ಯ ಕೂಡ. ಈ ಪಿಡುಗಿನ
ವಿರುದ್ಧ ನಾವು ಹೋರಾಟ ಮಾಡೋಣ. ಇಲ್ಲದಿದ್ದಲ್ಲಿ
ಮುಂದೊಂದಿನ ನಮ್ಮ ಮಕ್ಕಳು ಸಹ ಈ ಜಾಲದಲ್ಲಿ ಸಿಕ್ಕಿಿ
ಹಾಕಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ನಮಗೆ
ಒಂದು ಎಚ್ಚರಿಕೆ ಗಂಟೆ ಎಂದು ಭಾವಿಸೋಣ. ಡ್ರಗ್‌ಸ್‌
ವಿರುದ್ಧ ವಿದ್ಯಾಾರ್ಥಿಗಳಲ್ಲಿ ಅರಿವನ್ನು ಶಾಲೆಯಲ್ಲಿಯೇ
ಮೂಡಿಸುವ ವ್ಯವಸ್ಥೆೆ ಆದಷ್ಟು ಬೇಗನೆ ಜಾರಿಯಾಗಲಿ
ಎನ್ನುವುದು ನಮ್ಮೆೆಲ್ಲರ ಆಶಯ.