ವೈದ್ಯ ವೈವಿಧ್ಯ
drhsmohan@gmail.com
ಹೆಚ್ಚಾಗಿ ಇದು ಮಧ್ಯ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡರೂ ಭಾರತ ಮತ್ತು ಇನ್ನೂ ಹಲವಾರು ಐರೋಪ್ಯ ದೇಶಗಳಲ್ಲಿ ಅಲ್ಲಲ್ಲಿ ಆಗಾಗ ಕಾಣಿಸಿಕೊಂಡಿದೆ. ಕಾಂಗೋ ನದಿಯ ಪಾತ್ರದ ಪ್ರದೇಶಗಳ ಶೇಕಡ ೯೦ ಹಳ್ಳಿಗಳ ಜನರಲ್ಲಿ ಈ ಜಂತು ಇದೆ.
ಕೆಲವು ವರ್ಷಗಳ ಮೊದಲು ಆಫ್ರಿಕಾದ ಒಬ್ಬ ವ್ಯಕ್ತಿಯ ಕಣ್ಣಿನಿಂದ ತುಂಬಾ ಉದ್ದದ ಲೋವಾ ಲೋವಾ ಜಂತು ತೆಗೆದಿದ್ದು ಅದು ಜಗತ್ತಿನಾದ್ಯಂತ ಸುದ್ದಿ ಮಾಡಿತು. ೩೦ ವರ್ಷದ ಘಾನಾದ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ತನ್ನ ಬಲಗಣ್ಣಿನಲ್ಲಿ ಕಸ ಬಿದ್ದ ಅಥವಾ ಕಸ ಕಣ್ಣಿನಲ್ಲಿ ಓಡಾಡಿದ ಅನುಭವವಾಗಿ ನೇತ್ರ ವೈದ್ಯರಲ್ಲಿ ಪರೀಕ್ಷಿಸಿಕೊಂಡ. ವೈದ್ಯರು ಪರೀಕ್ಷಿಸಿದಾಗ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ (ಕಪ್ಪುಗುಡ್ಡೆ )ದ ಪಕ್ಕ ಬಿಳಿಯ ಭಾಗದ ಪದರದೊಳಗೆ ಪಾರದರ್ಶಕ ಜಂತು ಗೋಚರಿಸಿತು.
ಶಸಕ್ರಿಯೆ ಮಾಡಿ ಮೂರುವರೆ ಸೆಂ.ಮೀ ಉದ್ದದ ಜಂತುವನ್ನು ಹೊರ ತೆಗೆಯಲಾಯಿತು. ಪ್ರಯೋಗಾಲಯದ ಪರೀಕ್ಷೆಯ ನಂತರ ಆ ಜಂತು ಲೋವಾ ಲೋವಾ ಎಂದು ದೃಢ ಪಟ್ಟಿತು. ಈತ ಕೆಲವು ವರ್ಷಗಳ ಮೊದಲು ನೈಜೀರಿಯಾ ಮತ್ತು ಐವರಿ ಕೋಸ್ಟ್ ದೇಶಗಳಿಗೆ ಭೇಟಿ ಇತ್ತಿದ್ದ ಎಂಬ ಅಂಶ ವೈದ್ಯರಿಗೆ ನಂತರ ತಿಳಿಯಿತು. ಈ ದೇಶಗಳಲ್ಲಿ ಲೋವಾ ಲೋವಾ ಜಂತುಗಳ ಉಪಟಳ ಅಧಿಕವಾಗಿದೆ. ಕೆಲವು ವರ್ಷಗಳ ಮೊದಲು ಅಸ್ಸಾಂನ ಗುವಾಹಟಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ೪೮ ವರ್ಷದ ವ್ಯಕ್ತಿ ಕಣ್ಣು ಪರೀಕ್ಷೆಗೆ ಬಂದಿದ್ದ. ಆತನಿಗೆ ೩ ತಿಂಗಳಿನಿಂದ ಕಣ್ಣಿನಲ್ಲಿ ಕಸ ಬಿದ್ದ ಅನುಭವ, ವಿಪರೀತ ಕಡಿತ, ಕಣ್ಣು ಕೆಂಪಾಗುವುದು, ನೋವು, ವಿಪರೀತ ಕಣ್ಣೀರು ಬರುವುದು, ಹಾಗೆಯೇ ಆ ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾದ ಲಕ್ಷಣಗಳು ಆರಂಭವಾಗಿದ್ದವು.
ವೈದ್ಯರು ಕಣ್ಣನ್ನು ಪರೀಕ್ಷಿಸಿದಾಗ ಕಪ್ಪುಗುಡ್ಡೆಯ ಬದಿಯಲ್ಲಿ ಚಲಿಸುವ ಆಕೃತಿ ಕಂಡು ಅದನ್ನು ಸಣ್ಣ ಶಸಕ್ರಿಯೆ ಮಾಡಿ ತೆಗೆದರು. ಅದು ೨೫ ಮಿ ಮೀ.
ಉದ್ದವಿತ್ತು. ಇದೂ ಕೂಡ ಲೋವಾ ಲೋವಾ ಜಂತು ಎಂದು ದೃಢವಾಯಿತು. ಇದು ಈ ಜಂತು ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ರೀತಿ.
ಲೋವಾ ಲೋವಾ ಅಥವಾ ಆಫ್ರಿಕಾದ ಕಣ್ಣಿನ ಜಂತು -ಲೇರಿಯ ಜಾತಿಗೆ ಸೇರಿದ ಜಂತು. ಇದಕ್ಕೆ ಸಣ್ಣ ತಲೆ, ಎಂಟು ಆಚೀಚೆ ಕೊಂಬಿನ ರೀತಿಯ
ಆಕೃತಿಗಳು, ಉದ್ದನೆಯ ದೇಹ ಮತ್ತು ಮೊಂಡು ಬಾಲವಿದೆ.
ಗಂಡು ಜಂತುಗಳು ೩೦ -೩೪ ಮಿ ಮೀ ಉದ್ದ ೦.೪೨ ಮಿ ಮೀ ಅಗಲ, ಹೆಣ್ಣು ಜಂತುಗಳು ೪೦- ೭೦ ಮಿ ಮೀ ಉದ್ದ ೦.೫ ಅಗಲ ಇರುತ್ತವೆ.
ಇತಿಹಾಸ: ೧೭೭೦ ರಲ್ಲಿ ಮೊಂಗಿನ್ ಎಂಬ ಫ್ರೆಂಚ್ ಸರ್ಜನ್ ಕಣ್ಣಿನಿಂದ ಜಂತುವನ್ನು ಹೊರ ತೆಗೆಯಲು ಪ್ರಯತ್ನಿಸಿ ವಿಫಲರಾದರು. ನಂತರ
ಫ್ರಾಂಕೋಯಿಸ್ ಗಯಾಟ್ ಎಂಬ ಫ್ರೆಂಚ್ ಹಡಗಿನ ಸರ್ಜನ್ ೧೭೭೮ ರಲ್ಲಿ ಆಫ್ರಿಕಾದಿಂದ ವೆಸ್ಟ್ ಇಂಡೀಸಿಗೆ ಸಾಗಿಸಲ್ಪಡುತ್ತಿದ್ದ ಗುಲಾಮರ
ಕಣ್ಣುಗಳಲ್ಲಿ ಈ ಜಂತುವನ್ನು ಗುರುತಿಸಿದ. ನಂತರ ಪ್ಯಾಟ್ರಿಕ್ ಮಾನ್ಸನ್ ಎಂಬ ವೈದ್ಯ ಇದು ಲೋವಾ ಲೋವಾ ಜಂತುವೇ ಹೌದು ಎಂದು ನಿಖರವಾಗಿ ಮೊದಲ ಬಾರಿಗೆ ಗುರುತಿಸಿದರು.
ಡಾ ಸ್ಟೀಫನ್ ಮೆಕೆಂಜಿ ಎಂಬ ಕಣ್ಣಿನ ವೈದ್ಯರು ೧೮೯೦ರಲ್ಲಿ ಇಂತಹ ರೋಗಿಗಳ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಜಂತುವಿನ ಇರುವಿಕೆಯನ್ನು ನಿಖರವಾಗಿ ಗುರುತಿಸುವ ಪರಿಪಾಠವನ್ನು ಆರಂಭಿಸಿದರು. ನಂತರ ೧೮೯೫ ರಲ್ಲಿ ಆರ್ಗೈಲ್ ರಾಬರ್ಟ್‌ಸನ್ ಎಂಬ ಪ್ರಸಿದ್ಧ ನೇತ್ರ ವೈದ್ಯರುವ ಒಂದು ಅಪರೂಪದ ಸಂಗತಿಯನ್ನು ದಾಖಲಿಸಿದರು. ಕೆಲವು ರೋಗಿಗಳ ಮೊಳಕೈಗಿಂತ ಸ್ವಲ್ಪ ಮೇಲ್ಭಾಗದಲ್ಲಿ ವಿಚಿತ್ರ ರೀತಿಯ ಗಂಟು ಇರುತ್ತಿತ್ತು. ಈ ತರಹದ ಗಂಟಿಗೂ ಲೋವಾ ಲೋವಾ ಜಂತುವಿಗೂ ಸಂಬಂಧವಿರಬಹುದೆಂಬ ಅನುಮಾನ ಬಂದು ಕಣ್ಣಿನ ಪರೀಕ್ಷೆ ಮತ್ತು ರಕ್ತ ಪರೀಕ್ಷೆ ಮಾಡಿ, ಈ ವರ್ಗದ ಹಲವಾರು ಜಂತುಗಳು ಅಲ್ಲಿ ಸೇರಿ ಗಂಟು ಉಂಟಾಗಿದೆ ಎಂದು ದೃಢೀಕರಿಸಿದರು.
ಲೀಪಿಯರ್ ಎಂಬ ಜಂತು ಹುಳುವಿನ ತಜ್ಞರು ಈ ಲೋವಾ ಲೋವಾ ಜಂತುವನ್ನು ವೃದ್ಧಿಸುವಲ್ಲಿ ಸಹಾಯ ಮಾಡುವುದು ವಿವಿಧ ರೀತಿಯ ನೊಣಗಳು ಎಂಬ ವಿಷಯವನ್ನು ಅಧ್ಯಯನ ಮಾಡಿ ಮೊದಲ ಬಾರಿಗೆ ಹೊರಗೆಡವಿದರು. ಹೆಚ್ಚಾಗಿ ಇದು ಮಧ್ಯ ಮತ್ತು ಪಶ್ಚಿಮ ಆಫ್ರಿಕಾ
ದೇಶಗಳಲ್ಲಿ ಕಾಣಿಸಿಕೊಂಡರೂ ಭಾರತ ಮತ್ತು ಇನ್ನೂ ಹಲವಾರು ಐರೋಪ್ಯ ದೇಶಗಳಲ್ಲಿ ಅಲ್ಲಲ್ಲಿ ಆಗಾಗ ಕಾಣಿಸಿಕೊಂಡಿದೆ. ಕಾಂಗೋ ನದಿಯ
ಪಾತ್ರದ ಪ್ರದೇಶಗಳ ಶೇಕಡ ೯೦ ಹಳ್ಳಿಗಳ ಜನರಲ್ಲಿ ಈ ಜಂತು ಇದೆ. ಸಬ್ ಸಹಾರದ ಆಫ್ರಿಕಾದ ದೇಶಗಳಲ್ಲಿ ಇದು ಎಂಡೆಮಿಕ್ ರೀತಿಯಲ್ಲಿದೆ. ಆ
ದೇಶಗಳೆಂದರೆ- ಅಂಗೋಲಾ, ಕ್ಯಾಮರೂನ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚಾಡ್, ಕಾಂಗೋ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ,
ಈಕ್ವಟೋರಿಯಲ್ ಗಿನಿ, ಇಥಿಯೋಪಿಯಾ, ಗಾಬನ್, ನೈಜೀರಿಯಾ ಮತ್ತು ಸೂಡಾನ್.
ಈ ದೇಶಗಳಲ್ಲಿ ತುಂಬಾ ಜಾಸ್ತಿ ಪ್ರಮಾಣದ ಈ ಜಂತುವಿನ ಸೋಂಕು ಇದೆ. ಈ ಭಾಗದ ಜನಸಂಖ್ಯೆಯ ಶೇಕಡ ೪೦ ಜನರಲ್ಲಿ ಒಂದಲ್ಲ ಒಂದು ಬಾರಿ ಅವರ ಕಣ್ಣಿನಲ್ಲಿ ಈ ಜಂತು ಇತ್ತು. ೧೪.೪ ಮಿಲಿಯನ್ ಜನರು ಈ ರೀತಿಯ ಜಾಸ್ತಿ ಸೋಂಕು ಇರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ
ಎಂಬುದೊಂದು ಅಂದಾಜು. ಭಾರತದಲ್ಲಿ ಕಳೆದ ೧೦೦ ವರ್ಷಗಳಲ್ಲಿ ೫ ರೋಗಿಗಳಲ್ಲಿ ಮಾತ್ರ ಕಣ್ಣಿನಲ್ಲಿ ಈ ಜಂತುವಿನ ಇರುವಿಕೆ ಗುರುತಿಸಲಾಗಿದೆ.
ಜಗತ್ತಿನಾದ್ಯಂತ ೨೦ ರಿಂದ ೪೦ ಮಿಲಿಯನ್ ಜನರ ದೇಹದಲ್ಲಿ ಈ ಜಂತು ಇದೆ ಎಂದು ಹೇಳಲಾಗಿದೆ.
ಆದರೆ ಕಣ್ಣಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಕಣ್ಣಿನಲ್ಲಿ ಅತಿ ಉದ್ದವಾದ ಜಂತು ಎಂದರೆ ೮ ರಿಂದ ೨೦ ಸೆಂಟಿಮೀಟರ್ ಉದ್ದದ ಜಂತು ಕಾಣಿಸಿಕೊಂಡ ಬಗೆಗೆ ಆಫ್ರಿಕಾದಿಂದ ವರದಿಯಾಗಿದೆ. ನಾಲ್ಕೈದು ವರ್ಷಗಳ ಮೊದಲು ಕ್ಯಾಮರೂನ್ ದೇಶದಲ್ಲಿ ೮ ತಿಂಗಳ ಮಗುವಿನ ಕಣ್ಣಿನಿಂದ ಈ ಜಂತುವನ್ನು ಹೊರ ತೆಗೆದ ಬಗ್ಗೆ ವರದಿಯಾಗಿದೆ.
ಬೇರೆ ಬೇರೆ ರೀತಿಯ ನೊಣಗಳು ಮನುಷ್ಯರನ್ನು ಕಚ್ಚಿದಾಗ ಲೋವಾ ಲೋವಾ ಸೋಂಕು ಕಾಣಿಸಿಕೊಳ್ಳುತ್ತದೆ. ಜಿಂಕೆ ನೊಣ, ಕುದುರೆ ನೊಣ
ಮತ್ತು ಇತರ ಎರಡು ಅಪರೂಪದ ನೊಣಗಳು -ಇವು ಮುಖ್ಯ ಅಪಾಯಕಾರಿ ನೊಣಗಳು. ಆಗ ಅದು ಚರ್ಮದ ಪದರಗಳ ಒಳಗಡೆ ನಿಧಾನವಾಗಿ
ಚಲಿಸುತ್ತಿರುತ್ತದೆ. ದೊಡ್ಡದಾದ ಜಂತುಗಳು ಮನುಷ್ಯನ ಚರ್ಮದ ಒಳಗಡೆಯೇ ಸಂಯೋಗ ಹೊಂದಿ ಸಂತಾನ ವೃದ್ಧಿಸುತ್ತಾ ಮರಿಜಂತುವನ್ನು
ಹುಟ್ಟು ಹಾಕುತ್ತವೆ. ಈ ಮರಿ ಜಂತುಗಳನ್ನು ಹೆಚ್ಚಾಗಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆ – ಈ ಸಮಯದಲ್ಲಿ ರಕ್ತ ಪರೀಕ್ಷಿಸಿದಾಗ ಪತ್ತೆ
ಹಚ್ಚಬಹುದು. ಈ ಸಂದರ್ಭದಲ್ಲಿ ನೊಣಗಳು ಮನುಷ್ಯನನ್ನು ಕಚ್ಚಿ ಈ ಮೈಕ್ರೋ -ಲೇರಿಯಾ ಒಳಗೊಂಡ ರಕ್ತವನ್ನು ಹೀರುತ್ತವೆ.
ಅದೇ ನೊಣಗಳು ಬೇರೆ ಮನುಷ್ಯರನ್ನು ಕಚ್ಚಿದಾಗ ಸೋಂಕು ಹರಡುತ್ತದೆ. ಕೆಲವೊಮ್ಮೆ ನೊಣ ಕಡಿದು ಸೋಂಕು ನಿರ್ದಿಷ್ಟ ವ್ಯಕ್ತಿಗೆ ಬಂದಾಗಲೂ ಎಷ್ಟೋ ವರ್ಷ ಲೋವಾ ಲೋವಾ ಜಂತುವಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಸೋಂಕು ಬಂದು ೫-೬ ತಿಂಗಳುಗಳ ನಂತರ ೧೭ ವರ್ಷಗಳವರೆಗೆ ಯಾವಾಗ ಬೇಕಾದರೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು.
ಈ ಜಂತು ದೇಹದಲ್ಲಿದ್ದಾಗಲೂ ಎಷ್ಟೋ ವ್ಯಕ್ತಿಗಳಲ್ಲಿ ಯಾವುದೇ ಅಸಹಜತೆ ಕಾಣಿಸಿಕೊಳ್ಳು‘ವುದಿಲ್ಲ. ಜಂತು ಜಾಗ ಬದಲಿಸಿ ಚಲಿಸುವಾಗ
ಕೆಲವೊಮ್ಮೆ ಕಣ್ಣಿನ ಹೊರ ಬಿಳಿ ಪದರದಲ್ಲಿ ಕಾಣಿಸಿಕೊಳ್ಳಬಹುದು. ಆಗ ದೇಹದ ವಿವಿಧ ಸಂದುಗಳಲ್ಲಿ ನೋವು, ಅಲ್ಲಿ ಉಬ್ಬಿದ ರೀತಿಯ
ಗಂಟು, ಸಂದಿನ ಚಲನೆ ಕುಂಠಿತಗೊಳ್ಳುವುದು- ಈ ರೀತಿಯ ಲಕ್ಷಣಗಳು ಗೋಚರಿಸಬಹುದು. ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾದ ಹಿಂಭಾಗದ ಭಾಗದಲ್ಲಿ ಅಥವಾ ಕೆಲವೊಮ್ಮೆ ಕಣ್ಣಿನ ಅಕ್ಷಿಪಟಲ ಬೇರ್ಪಡುವಂತೆಯೂ ಮಾಡಿ ಅಂಧತ್ವ ತರಬಲ್ಲದು. ಕೆಲವೊಮ್ಮೆ ವ್ಯಕ್ತಿಯ ಅಲರ್ಜಿ
ಲಕ್ಷಣಗಳಿಗೆ ಕಾರಣವಾಗಿ ಅಂತಹ ವ್ಯಕ್ತಿಯಮ ಮೈಮೇಲೆಲ್ಲ ದೊಡ್ಡ ದೊಡ್ಡ ಗುಳ್ಳೆಗಳು ಎದ್ದು ಆತನಿಗೆ ಅಸಹನೀಯ ಅನುಭವ ಆಗಬಹುದು.
ವಿಪರೀತ ಜ್ವರ, ಹೃದಯ, ಮೆದುಳು ಮತ್ತು ಮೂತ್ರಪಿಂಡದ ತೊಂದರೆಗಳು ಕಾಣಿಸಿಕೊಳ್ಳಬಹುದು.
ಚಿಕಿತ್ಸೆ: ಶಸಕ್ರಿಯೆ ಮಾಡಿ ಇಡೀ ಜಂತುವನ್ನು ಹೊರತೆಗೆಯುವುದು ಸರಿಯಾದ ಚಿಕಿತ್ಸೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ೪೦- ೪೫ ವರ್ಷಗಳಿಂದ ಡೈ ಈಥೈಲ್ ಕಾರ್ಬಮಜೀನ್ ಔಷಧ (ಹೆಟ್ರಾಜಾನ್, ಬೆನೋಸಿಡ್) ತುಂಬಾ ಪರಿಣಾಮಕಾರಿ ಔಷಧವಾಗಿ ಕೆಲಸ ಮಾಡುತ್ತಿದೆ. ಉದ್ದ ಪೈಜಾಮಾ, ಪ್ಯಾಂಟ್ ಧರಿಸುವುದು, ಪರದೆಯ ಒಳಗಡೆಯೇ ಮಲಗುವುದು – ಇವು ಪರಿಣಾಮಕಾರಿ ಮುನ್ನೆಚ್ಚರಿಕಾ ಕ್ರಮಗಳು. ಡೈ ಮಿಥೈಲ್ ಥಾಲೇಟ್ ಎಂಬ ಔಷಧ ಮೈಮೇಲೆ ಹಚ್ಚುವುದರಿಂದ ಅಪಾಯಕಾರಿ ನೊಣಗಳಿಂದ ದೂರವಿರಬಹುದು.
ಜಗತ್ತಿನ ಹಲವು ಜನರಲ್ಲಿ ಕಾಣಿಸಿಕೊಳ್ಳುವ ಈ ಲೋವಾ ಲೋವಾ ಸೋಂಕು ಬಹಳ ಅಪಾಯಕಾರಿಯಾದ ಜಂತುವಲ್ಲ ಎಂದು ಒಂದು
ಸಾಮಾನ್ಯ ತಿಳುವಳಿಕೆ ಇದೆ. ಸಾರ್ವಜನಿಕ ಆರೋಗ್ಯ ಅಽಕಾರಿಗಳಿಂದ ಇದು ಮುಖ್ಯ ಸೋಂಕು ಎಂದು ಪರಿಗಣಿಸಲ್ಪಡದೆ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿದೆ. ಬೇರೆಯ ಕೆಲವು ರೋಗಗಳನ್ನು ನಿಯಂತ್ರಿಸಲು ಇದು ಒಂದು ರೀತಿಯ ಅಡತಡೆಯಾಗಿದೆ ಎಂದು ಭಾವಿಸಲಾಗಿದೆ. ಒಬ್ಬ ವ್ಯಕ್ತಿಯ ದೇಹದಲ್ಲಿ ವಿಪರೀತ ಪ್ರಮಾಣದ ಲೋವಾ ಲೋವಾ ಲಾರ್ವ ರಕ್ತ ದಲ್ಲಿದ್ದರೆ ಅಂತಹವರು ಆಂಕೋಸರ್ಸಿಯಾಸ್ ಮತ್ತು ಎಲಿ-ಂಟಿಯಾಸಿಸ್ ಕಾಯಿಲೆಗಳಿಗೆ ಔಷಧವಾದ ಐವೆರ್ ಮೆಕ್ಟೀನ್ ಸೇವಿಸಿದರೆ ಮರಣಾಂತಿಕ ತೊಡಕು ಬರುತ್ತದೆ.
ಈ ಲೋವಾ ಲೋವಾ ಸೋಂಕು ಅಪಾಯಕಾರಿಯೇ ಅಲ್ಲವೇ ಎಂದು ತಿಳಿಯಲು ಫ್ರಾನ್ಸ್ ನ ಯಾವುಂಡ್ ವಿಶ್ವವಿದ್ಯಾಲಯ ಮತ್ತು ಕ್ಯಾಮರೂನ್ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿ ಈ ಮೇಲಿನ ತಿಳುವಳಿಕೆಗಳು ಪೂರ್ಣ ತಪ್ಪು ಎಂದು ಸಾಬೀತುಪಡಿಸಿವೆ. ಕ್ಯಾಮರೂನ್ ದೇಶದ ಪೂರ್ವ ಭಾಗದ ಹೆಚ್ಚು ಸೋಂಕು ಕಾಣಿಸಿಕೊಳ್ಳುವ ಪ್ರದೇಶದಲ್ಲಿ ಮಾಡಲಾದ ೨೦೦೧ರ ಒಂದು ಅಧ್ಯಯನವನ್ನು ಈಗಿನ ಸಂಶೋಧಕರು ಪುನರ್ ನವೀಕರಿಸಿದರು. ಅದರಲ್ಲಿ ೩,೬೦೦ ಜನರಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು.
೨೦೧೬ ರಲ್ಲಿ ಅದರಲ್ಲಿನ ವ್ಯಕ್ತಿಗಳಿಗೆ ಏನಾಯಿತು? ಎಂಬ ಬಗ್ಗೆ ಸಮೀಕ್ಷೆ ನಡೆಸಲಾಯಿತು. ೨೦೦೧ರಲ್ಲಿ ಯಾರ ರಕ್ತದಲ್ಲಿ ತುಂಬಾ ಅಧಿಕ ಪ್ರಮಾಣದ ಲೋವ ಲೋವ (೩೦,೦೦೦/ಎಂಎಲ್) ಇತ್ತೋ ಅಂತಹವರು ಗಮನಾರ್ಹ ರೀತಿಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದಿದ್ದರು. ಯಾವ ಪ್ರದೇಶದ ವ್ಯಕ್ತಿಗಳಲ್ಲಿ ಅಽಕ ಪ್ರಮಾಣದ ಲೋವಾ ಲೋವಾ ಜಂತು ಇದೆಯೋ ಅವರು ಶೇ. ೧ರಷ್ಟು ಜಾಸ್ತಿಯಾದರೆ ಸಾವಿನ ಪ್ರಮಾಣ ಶೇ. ನಾಲ್ಕರಷ್ಟು ಜಾಸ್ತಿ ಆಗುತ್ತದೆ ಎಂದು ಗಮನಕ್ಕೆ ಬಂತು.
ಒಟ್ಟಿನಲ್ಲಿ ಈ ಗುಂಪಿನ ಸಾವಿನ ಪ್ರಮಾಣ ಶೇಕಡ ೧೪.೫ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಸೋಂಕನ್ನು ನಿರ್ಲಕ್ಷ ಮಾಡದೆ ಬಹಳ ಗಮನ ನೀಡಿ ಸೋಂಕು ತಡೆಗಟ್ಟುವ ಹಲವು ವಿಧಾನಗಳನ್ನು ಅನುಸರಿಸಬೇಕು. ಹೆಚ್ಚಿನ ಪ್ರಮಾಣದ ಲೋವಾ ಲೋವಾ ಸೋಂಕು ಇರುವ ಕೆಲವು ವ್ಯಕ್ತಿಗಳಲ್ಲಿ ತೀವ್ರ ಪ್ರಮಾಣದ ತೊಡಕು (ಟಞmಜ್ಚಿZಠಿಜಿಟ್ಞo) ತೊಡಗಿ ಅಂತಹವರಲ್ಲಿ ಕೆಲವು ಜನರು ಲೋವಾ ಲೋವಾ ಎನ್ಸೆ-ಲೋಪತಿ ಎಂಬ
ಮೆದುಳಿನ ಸೋಂಕಿಗೆ ಈಡಾಗಿ ಇಂತಹವರಲ್ಲಿ ಹಲವರು ಮರಣ ಹೊಂದಬಹುದು.
ಕಣ್ಣಿನಲ್ಲಿ ಪ್ರಭಾವ ಬೀರುವ ಇನ್ನೊಂದು ಪರಾವಲಂಬಿ ಎಂದರೆ ಟಾಕ್ಸೋಪ್ಲಾಸ್ಮ ಗೊಂಡೈ. ಒಂದೇ ಒಂದು ಜೀವಕೋಶ ಹೊಂದಿರುವ ಈ
-ಟೋಜೋವಾ ತೋರುವ ಲಕ್ಷಣಗಳೆಂದರೆ – ಕಾಯಿಲೆಯ ರೀತಿಯ ಲಕ್ಷಣಗಳು. ತೀವ್ರ ರೀತಿಯ ಜ್ವರ, ಕೈಕಾಲುಗಳಲ್ಲಿ ವಿಪರೀತ ನೋವು,
ಬಹಳ ಸುಸ್ತು, ಗಂಟಲು ನೋವು ಇತ್ಯಾದಿ.
ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಜನ್ಮತ: ಊನಗಳಲ್ಲಿ ಮಗುವಿನ ತಲೆ ಬುರುಡೆ ದೊಡ್ಡದಾಗುತ್ತದೆ. ಅಪಸ್ಮಾರ ಅಥವಾ ಫಿಟ್ಸ್ ನ ಲಕ್ಷಣ, ಕಾಮಾಲೆ,
ಕಿವುಡುತನ, ಕಣ್ಣಿನ ಅಕ್ಷಿ ಪಟಲದ ಮಧ್ಯಭಾಗದಲ್ಲಿ ಲಕ್ಷಣ ಕಾಣಿಸಿಕೊಂಡರೆ ದೃಷ್ಟಿ ಸಂಪೂರ್ಣ ಮಂಜಾಗುತ್ತದೆ.