Friday, 20th September 2024

ಜನಾಂಗ ಹತ್ಯೆಯಂಥ ಘೋರ ಅಧ್ಯಾಯಗಳ ಸಹಿಸಿ ಉಳಿದವರು

ಸೌರಭ ರಾವ್,
ಕವಯಿತ್ರಿಿ, ಬರಹಗಾರ್ತಿ

ಬಾಳ್ವೆಗೊಂದು ಅರ್ಥದ ಅನ್ವೇಷಣೆಯೇ ಮನುಷ್ಯನನ್ನು ನಾಳೆಗಳಿಗಾಗಿ ಕಾಯುವಂತೆ ಮಾಡುವುದು ಎಂಬುದು ಫ್ರ್ಯಾಾ್ಂಲೃ್‌ ಅವರ ಪುಸ್ತಕದ ಸಾರ, ಅವರೇ ಹುಟ್ಟುಹಾಕಿದ ಚಿಕಿತ್ಸಕ ತತ್ವಸಿದ್ಧಾಾಂತ – ‘ಲೋಗೋಥೆರಪಿ’ಯ ಸಾರ.

ಪುಸ್ತಕದ ಕಪಾಟಿನಲ್ಲಿ ಒಂದಿಡೀ ಭಾಗ ಪದೇಪದೆ ಓದಿಸಿಕೊಳ್ಳುವ ಪುಸ್ತಕಗಳಿಗೇ ಮೀಸಲಿದ್ದು, ಅದರಲ್ಲಿ ಒಂದು ಈ ಬಾರಿ ಹಿಂದಿನ ಯಾವ ಓದುಗಳಿಗಿಂತಲೂ ತೀಕ್ಷ ್ಣವಾಗಿ ಕಾಡುತ್ತಿಿದೆ. ಅದೇ ವಿಕ್ಟರ್ ಫ್ರ್ಯಾಾ್ಂಲೃ್‌ ಅವರ ‘ಮ್ಯಾ್ಸ್‌ಾ ಸರ್ಚ್ ಫಾರ್ ಮೀನಿಂಗ್’

ಈ ಪುಟಗಳಲ್ಲಿ ಸಾವು ಸಹಜತೆ ಪರಿಧಿಯಲ್ಲೇ ಇಲ್ಲದೇ, ಇಡೀ ಮಾನವ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಧ್ಯಾಾಯಕ್ಕೆೆ ಹಿಡಿದ ಕನ್ನಡಿಯಾಗಿ, ಎಚ್ಚರಿಕೆಯ ಸಂಕೇತವಾಗಿ ನಿಂತಿದೆ. ಕೇವಲ ಒಂದು ಜನಾಂಗಕ್ಕೆೆ ಸೇರಿದ ಕಾರಣಕ್ಕೇ, ನಾಜಿ ‘ಕಾನ್ಸೆೆಂಟ್ರೇಶನ್ ಕ್ಯಾಾಂಪ್’ಗಳಲ್ಲಿ ಯಹೂದ್ಯರನ್ನು ಸೆರೆಹಿಡಿದು ಪೈಶಾಚಿಕವಾಗಿ ಹಿಂಸಿಸಿ, ಸಹಸ್ರ ಸಹಸ್ರ ಜನರ ಮಾರಣಹೋಮ ಮಾಡಲಾಗಿತ್ತು. ಆ ಕಾಲವನ್ನು ಪವಾಡ ಸದೃಶದಂತೆ ಸಹಿಸಿ ಕಡೆಗೆ ಬದುಕುಳಿದಿದ್ದೂ ಅಲ್ಲದೇ, ಅಂಥ ಘೋರ ದಿನಗಳ ಬಗ್ಗೆೆ ಬರೆಯುವಾಗ ಹಿನ್ನೋೋಟದಲ್ಲಿ ಸ್ವಲ್ಪವೂ ಕಹಿಯಾಗದೇ, ಅತಿಮಾನುಷ ತಾದಾತ್ಮ್ಯದಿಂದ ಇಡೀ ಜಗತ್ತಿಿನ ಎಲ್ಲ ಇಂದು ಮತ್ತು ನಾಳೆಗಳಿಗೆ ಬೆಳಕಾದ ಹಲವು ಜೀವಗಳಲ್ಲಿ ವಿಕ್ಟರ್ ಫ್ರ್ಯಾಾ್ಂಲೃ್‌ ಕೂಡ ಒಬ್ಬರು.

ಅನೇಕ ಕಾನ್ಸೆೆಂಟ್ರೇಶನ್ ಕ್ಯಾಾಂಪ್‌ಗಳಲ್ಲಿ ಅನುಕ್ಷಣವೂ ಜೀವ ಉಳಿಸಿಕೊಳುವುದರಲ್ಲೇ ಹೆಣಗುತ್ತಿಿದ್ದ ಲಕ್ಷಾಂತರ ಯಹೂದ್ಯರಂತೆ ಔಸ್ಚ್ವಿಿಟ್‌ಸ್‌ ಎಂಬ ಪರಮ ಕುಖ್ಯಾಾತ ಕ್ಯಾಾಂಪಿನಲ್ಲೂ ಫ್ರ್ಯಾಾ್ಂಲೃ್‌ ನಾಜಿ ಚಿತ್ರಹಿಂಸೆಯನ್ನು ಸಹಿಸಿ, ಎರಡನೇ ತಮ್ಮ ನರವಿಜ್ಞಾನ ಮತ್ತು ಮನೋವೈದ್ಯಶಾಸ್ತ್ರಗಳ ಅಧ್ಯಯನ-ಅನುಭವಗಳಿಂದ ಮಾಗಿದ್ದ ಮಾನಸಿಕ ಸ್ಥೈರ್ಯ, ಗಾಂಭೀರ್ಯವನ್ನು ಮೆರೆಯುತ್ತಾಾ ಅವೇ ಕ್ಯಾಾಂಪುಗಳಲ್ಲಿ ಆದಷ್ಟೂ ಯಹೂದ್ಯ ಪುರುಷರಿಗೆ ಮಾನಸಿಕ, ನೈತಿಕ ಬೆಂಬಲ ನೀಡುತ್ತಾಾರೆ.

ತಮ್ಮ ಹೆಂಡತಿ-ಮಕ್ಕಳಿಂದ ಬೇರೆಯಾಗಿ, ಅವರು ಬದುಕಿದ್ದಾರೋ ಇಲ್ಲವೋ ಎಂಬುದನ್ನೂ ತಿಳಿಯದೇ, ಕೊರೆಯುವ ಚಳಿಯ ಆ ಭೂಭಾಗದಲ್ಲಿ ಮೈಮೇಲೆ ಸರಿಯಾಗಿ ಬಟ್ಟೆೆಯ ಮಾತಿರಲಿ, ಒಂದು ರೋಮವೂ ಬಿಡದಂತೆ ಕ್ಷೌರ ಮಾಡಿಸಿಕೊಂಡು, ಹೊಟ್ಟೆೆಗೆ ಯೋಗ್ಯ ಆಹಾರವಿಲ್ಲದೇ ದೇಹದ ರಸ-ಸಾರವೆಲ್ಲಾ ಕರಗಿ ಎಲುಬುಗಳ ಮೇಲೆ ಪರದೆಯಂತಾದ ಹೊದ್ದು ನಡೆದಾಡುವ ಪ್ರೇತಗಳಂತಿದ್ದವರು ಅವರೆಲ್ಲ. ಬೇರೆ ಪ್ರಾಾಣಿಗಳಿಂದ ನಮ್ಮನ್ನು ಬೇರ್ಪಡಿಸುವ ಯಾವ ಬೌದ್ಧಿಿಕ ಘನತೆಯಾಗಲೀ, ವಿವೇಚನೆ-ಪ್ರಜ್ಞೆಗಳಾಗಲೀ ಕೆಲಸಕ್ಕೆೆ ಬಾರದ ಆ ಮಾನವನಿರ್ಮಿತ ನರಕಗಳಲ್ಲಿ ಮಾನವ ವಿವರಗಳೆಲ್ಲವ ಸುಲಿದುಹಾಕಿ ಅವರನ್ನು ಯಃಕಶ್ಚಿಿತ್ ಪಶುಗಳಂತೆ ನಡೆಸಿಕೊಳ್ಳುವಾಗಲೂ, ಆ ಮೂಳೆಯ ಪಂಜರದೊಳಗೆ ಹೇಗೆ ಕೆಲವರು ತಮ್ಮ ಮಾನವೀಯತೆ, ಸ್ವಗೌರವ, ಮತ್ತು ನಾಳೆಗಾಗಿ ಅದಮ್ಯ ನಂಬಿಕೆಯನ್ನು ಕಾಪಾಡಿಕೊಂಡಿದ್ದರು ಎಂಬುದನ್ನು ಮನಕಲಕುವಂತೆ ಕಟ್ಟಿಿಕೊಡುತ್ತದೆ ‘ಮ್ಯಾ್ಸ್‌ಾ ಸರ್ಚ್ ಫಾರ್ ಮೀನಿಂಗ್’.

ಹೀನಾತಿಹೀನ ಪರಿಸ್ಥಿಿತಿಗಳಲ್ಲಿ ಮನುಷ್ಯನನ್ನು ಆತ್ಮಹತ್ಯೆೆಯಿಂದ ಕಾಪಾಡಲು ಬೇಕಿರುವುದು ಅವನದ್ದೇ ಅರ್ಥ. ಈ ‘ಅರ್ಥ’ಕೇಂದ್ರಿಿತ ಸಿದ್ಧಾಾಂತಕ್ಕೆೆ ಕೆಲವು ವಿರೋಧಿ ಸಿದ್ಧಾಾಂತಗಳಿದ್ದರೂ, ಲೋಗೋಥೆರಪಿಯನ್ನು ವಿಯೆನ್ನೀಸ್ ಮಾನಸಿಕ ಚಿಕಿತ್ಸಾಾ ಪರಂಪರೆಯ ಮೂರನೇ ಕ್ರಮವಾಗಿ ಪರಿಗಣಿಸಲಾಗಿದೆ ಫ್ರಾಾಯ್ಡ್-ರ ಮನೋವಿಶ್ಲೇಷಣೆ (ಆನಂದ-ಕೇಂದ್ರಿಿತ ಸಂಕಲ್ಪಶಕ್ತಿಿ ಸಿದ್ಧಾಾಂತ) ಮತ್ತು ಆಡ್ಲರ್ ವಯಕ್ತಿಿಕ ಮನಃಶಾಸ್ತ್ರ (ಅಧಿಕಾರ ಅಥವಾ ಶಕ್ತಿಿ-ಕೇಂದ್ರಿಿತ ಸಂಕಲ್ಪಶಕ್ತಿಿ ಸಿಧ್ಧಾಾಂತ) ಮೊದಲೆರಡು ಪರಂಪರೆಗಳು)

ಲೋಗೋಥೆರಪಿಯ ಬಗ್ಗೆೆ ಆಳವಾದ ಅಧ್ಯಯನವನ್ನೇ ಮಾಡಬಹುದು, ಅದರ ಚಿಕ್ಕ ಸಾರಾಂಶ ಪುಸ್ತಕದ ಎರಡನೇ ಭಾಗವಾಗಿದೆ. ಆದರೆ ಫ್ರ್ಯಾಾ್ಂಲೃ್‌ ಅವರ ಮತ್ತು ಅವರಂತೆ ನಾಜಿ ಕಾನ್ಸೆೆಂಟ್ರೇಶನ್ ಕ್ಯಾಾಂಪುಗಳಲ್ಲಿ ನಂಬಲಾಗದಷ್ಟು ಹೀನಾಯವಾಗಿ ದಿನಗಳ ದೂಡುತಿದ್ದವರ ಹೋರಾಟದ ಸೂಕ್ಷ್ಮ ವಿವರಣೆಗಳು ಮೊದಲ ಭಾಗದಲ್ಲಿದೆ. ಕೇವಲ ನೂರು ಪುಟಗಳಲ್ಲಿ ಫ್ರ್ಯಾಾ್ಂಲೃ್‌ ಕಟ್ಟಿಿಕೊಡುವುದು ಮಾನವ ಪ್ರಪಂಚದ ವೈಪರೀತ್ಯಗಳ ವಸ್ತುನಿಷ್ಠ ಅವಲೋಕನ, ಗ್ರಹಿಕೆ.

ನಮ್ಮ ಸನ್ನಿಿವೇಶಗಳನ್ನು ನಾವು ಬದಲಿಸಲು ಸಾಧ್ಯವೇ ಇಲ್ಲ ಎಂದು ಖಚಿತವಾದರೆ ನಾವು ನಮ್ಮನ್ನೇ ಬದಲಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾಾರೆ ಫ್ರ್ಯಾಾ್ಂಲೃ್. ಹಾಗಂತ ಸ್ವಂತಿಕೆ ಬಿಟ್ಟುಕೊಡುವುದು ಎಂದಲ್ಲ. ನಮ್ಮಿಿಂದ ನಮ್ಮ ಎಲ್ಲವನ್ನೂ ಕಸಿದುಕೊಂಡರೆಂದು ನಾವಂದುಕೊಂಡರೂ, ಕಟ್ಟಕಡೆಯ ಸ್ವಾಾತಂತ್ರ್ಯವೊಂದನ್ನು ಯಾರೂ ನಮ್ಮಿಿಂದ ದೋಚಲು ಸಾಧ್ಯವಿಲ್ಲ – ಅದೆಂದರೆ ಒಂದು ಪರಿಸ್ಥಿಿತಿಗೆ ನಾವು ಪ್ರತಿಕ್ರಿಿಯಿಸುವ ರೀತಿ, ನಮ್ಮ ನಿಲುವು, ನಮ್ಮ ದಾರಿಯಲ್ಲೇ ನಾವು ನಡೆವ ಆಯ್ಕೆೆ ಅವರ ಈ ಮಾತು ಇಂದಿಗೂ ಜಗತ್ತಿಿನೆಲ್ಲೆಡೆ ಹಲವು ಜೀವಗಳನ್ನು ಬಾಳ್ವೆೆಯ ತಾಳಲು, ಅದನ್ನು ಮೀರಿ ಮುನ್ನಡೆಯಲು ಸ್ಫೂರ್ತಿಯಾಗಿದೆ.

ನಾವು ಜೀವನದಿಂದ ಏನನ್ನು ಅಪೇಕ್ಷಿಸುತ್ತೇವೆ ಎಂಬುದಕ್ಕಿಿಂತ, ಜೀವನ ನಮ್ಮಿಿಂದ ಏನನ್ನು ನಿರೀಕ್ಷಿಸುತ್ತದೆ, ಸಾಮೂಹಿಕವಾಗಿ ನಾವು ಜೀವಿಸುತ್ತಿಿರುವ ಬಾಳ್ವೆೆಗೆ ನಮ್ಮಿಿಂದ ಯಾವ ಕೊಡುಗೆ ಕೊಡಬಹುದು ಎನ್ನುವ ನಿಸ್ವಾಾರ್ಥ ಚಿಂತನೆಯಿಂದ ಮಾತ್ರ ಪ್ರತಿ ಘಂಟೆ, ಪ್ರತಿ ದಿನವನ್ನು ಕ್ಯಾಾಂಪಿನಲ್ಲಿ ಅವುಡುಗಚ್ಚಿಿ ಸಹಿಸಬಹುದಾಗಿತ್ತು. ನಮ್ಮ ಪುಟ್ಟ ಪುಟ್ಟ ಕ್ರಿಿಯೆಗಳು, ನಾವು ಒಂದು ಕ್ಷಣದಲ್ಲಿ ನಡೆದುಕೊಳ್ಳುವ ರೀತಿ ಒಮ್ಮೊೊಮ್ಮೆೆ ನಮ್ಮದಷ್ಟೇ ಅಲ್ಲದೇ ನಮ್ಮ ಸುತ್ತಲ ಜೀವಗಳ ಮೇಲೂ ಬೀರುತ್ತಿಿತ್ತು.

ನಮ್ಮಲ್ಲಿ ಕೆಲವರು ಸ್ವತಃ ಅಪಾರ ದೈಹಿಕ ಯಾತನೆ ಅನುಭವಿಸುತ್ತಿಿದ್ದರೂ, ಹೆಂಡತಿ-ಮಕ್ಕಳ ಅಗಲಿಕೆಯ ನೋವಿನಲ್ಲಿ ನರಳುತ್ತಿಿದ್ದರೂ, ಬೇರೆಯವರನ್ನು ಸಂತೈಸುವಷ್ಟು ಅತಿಮಾನುಷ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದನ್ನು ನಾನು ಕಂಡಿದ್ದೀನೆ. ಅವರ ಸಂಖ್ಯೆೆ ತೀರಾ ತೀರಾ ಕಡಿಮೆಯಿದ್ದರೂ, ಒಬ್ಬನೇ ಇದ್ದರೂ, ನಾವು ಏನೇ ಆದರೂ ಮನುಷ್ಯರಾಗಿಯೇ ಉಳಿಯಲು ಸಾಧ್ಯ ಎನ್ನುವುದಕ್ಕೆೆ ಸಿಗುತ್ತಿಿದ್ದ ಪುರಾವೆ ಅದು, ಎಂದು ನೆನೆಯುತ್ತಾಾ ಮನುಷ್ಯ ಪ್ರಪಂಚದ ದೋಷಗಳನ್ನಷ್ಟೇ ಎತ್ತಿಿಹಿಡಿಯದೇ, ನಂಬಿಕೆಯ ಜ್ಯೋೋತಿಯನ್ನು ನಕಾರಾತ್ಮಕತೆಯಿಂದ ಆರದಂತೆ ಕಾಪಾಡುತ್ತಾಾರೆ.

ಬೆಳಕು ನೀಡಬೇಕೆಂದು ಯಾವುದೇ ಜೀವಿ ಅಥವಾ ವಸ್ತು ಮೊದಲು ತಾನೇ ಹೊತ್ತಿಿ ಉರಿಯಬೇಕಾಗುತ್ತದೆ ಎಂಬಂತಹ ಆಲೋಚನೆಗಳಿಂದ ಫ್ರ್ಯಾಾ್ಂಲೃ್‌ ನಮ್ಮನ್ನು ಮಾನಸಿಕ, ಭಾವನಾತ್ಮಕ ಜಡದಿಂದ ಬಡಿದೆಬ್ಬಿಿಸುತ್ತಾಾರೆ. ನೋವಿನಿಂದ ನರಳುವಾಗ ಆ ನರಳಾಟಕ್ಕೂ ಒಂದು ಅರ್ಥ ಸಿಕ್ಕಿಿಬಿಟ್ಟರೆ, ಅದರ ಹಿಂದೊಂದು ಅರ್ಥವಿರುವುದೇ ಆದರೆ, ಆ ನೋವೂ ಸಹನೀಯವಾಗುತ್ತದೆ ಎಂಬ ಫ್ರ್ಯಾಾ್ಂಲೃ್‌ ಅವರ ನಂಬಿಕೆ ಸೆರೆಯಲ್ಲಿ ಅವರ ಜತೆಯಲ್ಲಿದ್ದ ಎಷ್ಟೋೋ ಜೀವಗಳಿಗೆ ಮಾತ್ರವಲ್ಲದೇ, ಮುಂದೆಯೂ ಎಷ್ಟೋೋ ಜನರಿಗೆ ಸಹಾಯವಾಗುತ್ತಾಾ, ಇನ್ನೂ ಎಷ್ಟೋೋ ಜನರಿಗೆ ಸಾಂತ್ವನ ನೀಡುತ್ತಿಿದೆ.

ಅವರ ಪುಸ್ತಕಗಳಾಗಲಿ, ಪ್ರೈಮೋ ಲೆವಿ ಅವರ ಪುಸ್ತಕಗಳಾಗಲಿ, ಎಲೀ ವೀಸಲ್ ಅವರ ಪುಸ್ತಕಗಳಾಗಲಿ ಅಥವಾ ಜಗತ್ತಿಿನಲ್ಲಿ ಎಲ್ಲೇ ನಡೆದ ಯಾವುದೇ ಜನಾಂಗಹತ್ಯೆೆಯ ಹೇಗೋ ಪಾರಾಗಿ ಉಳಿದು ಅದರ ದಾರುಣ ಕಥೆಗಳನ್ನು ಹಂಚುತ್ತಾಾ ಶಾಂತಿಯುತ ಪ್ರಪಂಚಕ್ಕೆೆ ಮತ್ತಷ್ಟು ನಂಬಿಕೆ ತುಂಬುವ ಯಾರದೇ ಪುಸ್ತಕಗಳಾಗಲಿ, ಅವು ಕೇವಲ ಪ್ರಸ್ತುತವಲ್ಲ, ಅವು ಕಾಲಾತೀತ. ಅತಿಶಯೋಕ್ತಿಿಯೆನಿಸಿದರೆ ನಮ್ಮ ಸುತ್ತಮುತ್ತಲೇ ನಡೆದ ಘಟನೆಗಳನ್ನು ನೆನೆಯಬಹುದು: ಕಾಂಬೋಡಿಯಾದ ನರಮೇಧ ನಡೆದದ್ದು ಕೇವಲ ಕೆಲವು ದಶಕಗಳ ಹಿಂದೆ. ಅರ್ಮೇನಿಯಾದ ಮರೆಯದಿರೋಣ. ಇನ್ನು ಈ ಕ್ಷಣಕ್ಕೂ, ಇದನ್ನೆೆಲ್ಲಾ ನಾವು ಓದಿ-ಬರೆಯುತ್ತಿಿರುವಾಗಲೇ, ಈಗ ಉಸಿರಾಡುತ್ತಿಿರುವಾಗಲೇ ನಮ್ಮ ದೇಶದ ಹತ್ತಿಿರದಲ್ಲೇ ನಡೆಯುತ್ತಿಿರುವ ರೋಹಿಂಗ್ಯಾಾ ಬಿಕ್ಕಟ್ಟಿಿನಲ್ಲಿ ಮಾನ-ಪ್ರಾಾಣಗಳನ್ನು ಕಳೆದುಕೊಳ್ಳುತ್ತಿಿರುವ ಜೀವಗಳೆಷ್ಟು.

ಫ್ರ್ಯಾಾ್ಂಲೃ್‌ ಅವರಂಥ ನೊಂದು ಪಕ್ವಗೊಂಡ ಎಷ್ಟೋೋ ಮನುಷ್ಯರ ವಿವೇಚನೆ, ಮಾನವತ್ವ ನಮಗೆಲ್ಲಾ ಎರವಲು ಪಡೆಯಲು ದೊರಕಿರುವುದೇ ನಮ್ಮ ಪುಣ್ಯ. ಮನುಷ್ಯ ಮನುಷ್ಯನಾಗಿದ್ದರೆ ಅಷ್ಟೇ ಸಾಕು ಎಂಬ ಸತ್ಯ ತೀರಾ ಸರಳ ಎಂಬುದೇ ನಮಗೆ ಕಷ್ಟವೇನೋ; ಅನಾವಶ್ಯಕ ಕ್ಲಿಿಷ್ಟತೆಗೆ, ಸಿದ್ಧಾಾಂತಗಳಿಗೆ ಹೆಣಗುತ್ತೇವೆ. ಆದರೆ ಈ ಈ ಆಲೋಚನೆಗಳು ನಮ್ಮನ್ನು ಶಾಂತಿ-ಸೌಹಾರ್ದತೆಗೆ ದುಡಿಯುವಂತೆ ಪ್ರೇರೇಪಿಸಲಿ. ಫ್ರ್ಯಾಾ್ಂಲೃ್‌ ಅವರೇ ಹೇಳುವಂತೆ, ಕಾನ್ಸೆೆಂಟ್ರೇಶನ್ ಕ್ಯಾಾಂಪುಗಳ ಸೃಷ್ಟಿಿಸಿದವನು ಮನುಷ್ಯನೇ, ನಿಜ. ಆದರೆ ಇನ್ನೊೊಬ್ಬ ನಿರ್ಣಯಿಸಿದ ಅಸಹಜ ಸಾವನ್ನು ವಿಚಲಿತನಾಗದೇ, ತಾನು ನಂಬಿದ ದೇವರ ಪ್ರಾಾರ್ಥನೆಯನ್ನು ಹೇಳುತ್ತಾಾ ತನ್ನದೇ ಕೊನೆಯನ್ನಪ್ಪಲು ದಿಟ್ಟವಾಗಿ ನಡೆದವನೂ ಮನುಷ್ಯನೇ. ಎಲ್ಲವೂ ಗದ್ದಲ-ಗೊಂದಲದ ರಾಜಕೀಯದಲ್ಲೇ ಮುಗಿಯುವ ದಿನಗಳಲ್ಲೂ ಅಧ್ಯಾಾತ್ಮದಂಥ ಅನುಭೂತಿ ನೀಡುವ ಇಂತಹ ಆಲೋಚನೆಗಳು ತಮ್ಮ ಪಾಡಿಗೆ ತಾವು ನಮ್ಮನ್ನು ಮೌನವಾಗಿ ಮತ್ತಷ್ಟು ಮಗದಷ್ಟು ಮಾನವೀಯಗೊಳಿಸುತ್ತಿಿರಲಿ.