Thursday, 28th November 2024

ತಲೆತಲಾಂತರದಿಂದ ತಿನ್ನುತ್ತಿದ್ದ ತುಪ್ಪವನ್ನು ಈಗ ತಿಂದರೆ ತಪ್ಪಾ ?

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ತುಪ್ಪವು ನಮ್ಮ ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪವಿಲ್ಲದೆ ಹೇಗೆ ದೀಪ ಉರಿಯುವುದಿಲ್ಲವೋ ಹಾಗೆಯೇ ನಮ್ಮ ಜಾಠರಾಗ್ನಿಯ ಕಾರ್ಯಕ್ಷಮತೆಗೆ ತುಪ್ಪ ಅತ್ಯವಶ್ಯಕ. ತುಪ್ಪವು ವಾತ-ಪಿತ್ತಗಳನ್ನು ಶಮನ ಮಾಡಿ ದೇಹಕ್ಕೆ ತಂಪನ್ನೆರೆಯುತ್ತದೆ. ಸ್ವರವನ್ನು, ಕಾಂತಿಯನ್ನು ಹೆಚ್ಚಿಸುತ್ತದೆ. ತುಪ್ಪವು ಬುದ್ಧಿಶಕ್ತಿಯನ್ನು, ಸ್ಮರಣಶಕ್ತಿಯನ್ನು ಅಽಕ ಮಾಡುತ್ತದೆ. ತುಪ್ಪವು ನೇರವಾಗಿ ಮಿದುಳನ್ನು ಪ್ರವೇಶಿಸಿ ಇಡೀ ನರಮಂಡಲವನ್ನು ಪೋಷಿಸುತ್ತದೆ.

ಒಂದು ಸಂಶೋಧನೆಯ ಪ್ರಕಾರ ತುಪ್ಪದ ಬಳಕೆಯಿಂದ obesity, cholesterol, heart blocks, heart attacks, hypertension, PCOD, Jaundice ಮುಂತಾದ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಮತ್ತೊಂದು ಸಂಶೋಧನೆಯು ತುಪ್ಪವನ್ನು ಶ್ಲಾಘಿಸುತ್ತಾ ಹೇಳುತ್ತದೆ- ‘ತುಪ್ಪದ ಸೇವನೆಯಿಂದ Lifespan ಹೆಚ್ಚುತ್ತದೆ, cancer ಬರಲ್ಲ, heart muscles ಬಲಿಷ್ಠವಾಗುತ್ತದೆ, ಐಕಿ ಹೆಚ್ಚುತ್ತದೆ, Anxiety & depression ದೂರವಾಗುತ್ತದೆ, Hormonal issues/infertility ನಿವಾರಣೆಯಾಗುತ್ತದೆ ಎಂದು. ಈ ಎರಡೂ ಸಂಶೋಧನೆಗಳು ಮಾತನಾಡುತ್ತಿರುವುದು ಅದೇ ತುಪ್ಪದ ಬಗ್ಗೆ. ಹಾಗಾದರೆ ವ್ಯತ್ಯಾಸ ಎಯಿತು? ಮೇಲೆ ಹೇಳಿದ ಎರಡು ಸಂಶೋಧನೆಗಳಲ್ಲಿ ವ್ಯತ್ಯಾಸವಾಗಿದ್ದು, ಉಪಯೋಗದಲ್ಲಿ ಇರಬೇಕಾದ ವಿವೇಚನೆ ಇಲ್ಲದಿರುವುದರಿಂದ. ಹೌದು ಸ್ನೇಹಿತರೆ, ಇಷ್ಟೆಲ್ಲ ಆರೋಗ್ಯದ ಸಮಸ್ಯೆಗಳಿಗೆ ಕಾರಣ ತುಪ್ಪ ಎನ್ನುವ ಬದಲು ಅದರ ಉಪಯೋಗದಲ್ಲಿರಬೇಕಾದ ಹಿತ-ಮಿತ, ಸರಿ-ತಪ್ಪು ವಿಧಾನಗಳ ವಿವೇಚನೆಯ ಅಭಾವವೆನ್ನಬಹುದು.

ಹರಿತವಾದ ಕತ್ತಿಯೊಂದು ತರಕಾರಿ ಕತ್ತರಿಸಲು ಉಪಯೋಗವಾಗುವ ಹಾಗೆ ಬೇರೆಯವರನ್ನು ಕೊಲ್ಲುವುದಕ್ಕೂ ಉಪಯೋಗವಾಗಬಹುದು. ಇಲ್ಲಿ ಇರಿತಕ್ಕೆ ಸಾಧನ ಕತ್ತಿಯಾದರೂ
ವಾಸ್ತವವಾಗಿ ಕತ್ತಿ ಕಾರಣವಲ್ಲ. ಅದನ್ನು ಅಲ್ಲಿ ತಪ್ಪಾಗಿ ಬಳಸಿದ ಮಾನವನ ಅವಿವೇಕವೇ ಕಾರಣ. ಇದೇ ರೀತಿ ದೇಹದ ಸ್ವಾಸ್ಥ್ಯಕ್ಕಾಗಿ, ಶಾರೀರಿಕ ವರ್ಧನೆಗಾಗಿ, ಮನೋ ವಿಕಾಸಕ್ಕಾಗಿ, ಬುದ್ಧಿಯ ಬೆಳವಣಿಗೆಗಾಗಿ ತುಪ್ಪದ ಉಪಯೋಗ ಅತ್ಯಂತ ಅವಶ್ಯಕವೆಂದಂತೆ, ಎಷ್ಟೋ ಬಾರಿ ತುಪ್ಪದ ತಪ್ಪು ಉಪಯೋಗದಿಂದ ಆರೋಗ್ಯದ ಸಮಸ್ಯೆ ಕಂಡು ಬರುವುದು ನಿಜ.
ಹಾಗಾದರೆ ಏನು ಮಾಡಬೇಕು? ತುಪ್ಪ ತಿನ್ನುವುದನ್ನು ನಿಲ್ಲಿಸಿಬಿಡಬೇಕಾ ಅನ್ನುವ ಸಂದಿಗ್ಧತೆ ಎಲ್ಲರನ್ನೂ ಕಾಡುತ್ತಾ ಇರಬಹುದು. ಇಂತಹ ಸಂದಿಗ್ಧ ಪರಿಸ್ಥಿತಿ ಯಿಂದ ಬಹಳ ಪ್ರೀತಿಯಿಂದ, ಸ್ನೇಹದಿಂದ ಆಯುರ್ವೇದವು ನಮ್ಮನ್ನೆಲ್ಲ ಪಾರು ಮಾಡುತ್ತದೆ. ಅಪಾಯವಾಗದಂತೆ ಯಾವ ಉಪಾಯದಿಂದ ತುಪ್ಪವನ್ನು ಬಳಸಬೇಕು ಎಂಬ ವಿವೇಚನೆಯನ್ನು ನಮ್ಮೆಲ್ಲರಿಗೂ ಧಾರೆಯೆರೆಯುತ್ತದೆ.

ಬನ್ನಿ, ತುಪ್ಪವನ್ನು ತಪ್ಪಾಗದಂತೆ ಹೇಗೆ ಬಳಸಬೇಕು ಅಂತ ಆಯುರ್ವೇದದ ಮೂಲಕ ತಿಳಿದುಕೊಳ್ಳುವ ಪುಟ್ಟ ಪ್ರಯತ್ನ ಮಾಡೋಣ. ಆಹಾರವು ಸುಖಕರ, ಆರೋಗ್ಯಕರ ಬದುಕಿಗೆ
ಬೇಕಾದ ಅವಿಭಾಜ್ಯ ಅಂಗ ಎಂಬುದು ನಿರ್ವಿವಾದ. ನಮ್ಮ ರೋಗ ಮತ್ತು ಆರೋಗ್ಯ- ಎರಡಕ್ಕೂ ನಾವು ಸೇವಿಸುವ ಆಹಾರವೇ ಕಾರಣ. ಆದ್ದರಿಂದ, ಸ್ವಾಸ್ಥ್ಯ ರಕ್ಷಣೆಯಲ್ಲಿ ಆಹಾರದ ಬಗ್ಗೆ ತಿಳುವಳಿಕೆ ಬಹಳ ಪ್ರಮುಖವಾದದ್ದು. ಯಾವ ಆಹಾರವನ್ನು ಸೇವಿಸ ಬೇಕು? ಹೇಗೆ? ಎಷ್ಟು? ಯಾವಾಗ? ಎನ್ನುವ ವಿಚಾರಗಳನ್ನು ಆಯುರ್ವೇದ ಸವಿವರವಾಗಿ ತಿಳಿಸಿಕೊಟ್ಟಿದೆ. ಈ ಆಹಾರ ವಿಜ್ಞಾನದ ತಿಳುವಳಿಕೆ ಇಲ್ಲದೆ ಆರೋಗ್ಯದ ರಕ್ಷಣೆ ಮತ್ತು ವರ್ಧನೆ ಅಸಾಧ್ಯ. ಆಹಾರ ಸೇವನಾ ನಿಯಮದಲ್ಲಿ ಬರುವ ಬಹಳ ಮುಖ್ಯವಾದ ನಿಯಮವೆಂದರೆ ‘ಸ್ನಿಗ್ಧಂ ಅಶ್ನೀಯಾತ್’ – ಅಂದರೆ ನಾವು ಸದಾ ಜಿಡ್ಡಿನಿಂದ ಕೂಡಿರುವ/ತಯಾರಿಸಿರುವ ಆಹಾರವನ್ನು ಮಾತ್ರ ಸೇವಿಸಬೇಕು ಎಂದರ್ಥ.

ಹಾಗಾದರೆ, ಆಯುರ್ವೇದದಲ್ಲಿ ಈ ಜಿಡ್ಡಿನ ಪದಾರ್ಥಗಳಿಗೆ ಯಾಕೆ ಅಷ್ಟೊಂದು ಮಹತ್ತ್ವವಿದೆ ಎಂಬ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆಯುರ್ವೇದದಲ್ಲಿ
ಹೆಚ್ಚಾಗಿ ಎ ಜಿಡ್ಡಿನ ಪದಾರ್ಥಗಳನ್ನು ‘ಸ್ನೇಹ’ ಎಂದು ಕರೆದಿದ್ದಾರೆ. ಅರೇ, ಸಂಸ್ಕೃತದಲ್ಲಿ ‘ಸ್ನೇಹ’ ಅಂದರೆ ‘ಬಂಧನ’ ಅಂತ ಅರ್ಥ ಬರುತ್ತದೆ ಅಲ್ಲವೇ. ಆದರೆ ಜಿಡ್ಡಿನ ಪದಾರ್ಥಗಳಿಗೆ ಸ್ನೇಹ
ಅಂತ ಯಾಕೆ ಕರೆದಿzರೆ? ಅದರ ಇರುವುದು ಬಹಳ ಸ್ವಾರಸ್ಯಕರವಾದ ವಿಷಯ. ಸಂಸ್ಕೃತದಲ್ಲಿ ಸ್ನೇಹ ಎಂದರೆ ಪರಸ್ಪರ ಒಪ್ಪಿಗೆಯ ಬಂಧನ ಎಂದರ್ಥ. ಯಾವ ಪದಾರ್ಥವು ಎರಡು ಅಥವ
ಅನೇಕ ವಸ್ತುಗಳಲ್ಲಿ ಪರಸ್ಪರ ಒಪ್ಪಿಗೆಯ ಒಕ್ಕೂಟವನ್ನು ಹಿಡಿದಿಡುತ್ತದೆಯೋ ಅದುವೇ ಸ್ನೇಹ. ನಮ್ಮ ಜೀವವೂ ಸಹ ಒಂದು ಸುಂದರವಾದ ಒಕ್ಕೂಟ. ಶರೀರ-ಇಂದ್ರಿಯ-ಮನಸ್ಸು-ಆತ್ಮ, ಈ
ನಾಲ್ಕರ ಒಕ್ಕೂಟ. ಈ ಒಕ್ಕೂಟದಲ್ಲಿ ಬಿರುಕುಂಟಾದರೆ ಅದುವೇ ರೋಗ. ಈ ಬಿರುಕು ಬೆಳೆದು ಒಕ್ಕೂಟ ನಾಶವಾದರೆ ಅದುವೇ ಮರಣ. ಹಾಗಾದರೆ, ಈ ನಾಲ್ಕು ಪದಾರ್ಥಗಳ ಒಕ್ಕೂಟವನ್ನು ಒಟ್ಟಿಗೆ ಸೇರಿಸಿ ಬಂಽಸಿ, ಭದ್ರವಾಗಿ, ಗಟ್ಟಿಯಾಗಿ ಇರುವ ಹಾಗೆ ಮಾಡುವುದು ಯಾರು? ಅದೇ ಸ್ನೇಹ ದ್ರವ್ಯಗಳ ಕೆಲಸ.

ಹೌದು! ಚಿಕ್ಕ ಚಿಕ್ಕ ಅಣುಗಳಿಂದ ಹಿಡಿದು ದೊಡ್ಡ ದೊಡ್ಡ ಅವಯವಗಳವರೆಗೂ ಎಲ್ಲವನ್ನೂ ಒಂದು ವ್ಯವಸ್ಥಿತ ರೀತಿಯಲ್ಲಿ ಒಗ್ಗೂಡಿಸುವ ವಸ್ತುವೆ ಸ್ನೇಹ/ ಜಿಡ್ಡಿನ ಪದಾರ್ಥ. ಜಿಡ್ಡಿನ ಪದಾರ್ಥ ಗಳಿಲ್ಲದೆ ನಮ್ಮ ಉಳಿವು ಅಸಾಧ್ಯ. ಸ್ನೇಹ ಪದಾರ್ಥಗಳಿಂದಲೇ ನಮ್ಮ ಆಯುವಿನ ಒಕ್ಕೂಟದಲ್ಲಿ ಬಂಧನ ಸಾಧ್ಯ. ಸ್ನೇಹ ಪದಾರ್ಥಗಳಿಂದಲೇ ನಮ್ಮ ಆಯಸ್ಸು. ಈ ಕಾರಣದಿಂದಲೇ ಆಯುರ್ವೇದವು ಜಿಡ್ಡಿನ ಪದಾರ್ಥಗಳಿಗೆ ಅತ್ಯಂತ ಮಹತ್ವ ನೀಡಿದೆ. ಆಯುರ್ವೇದವು ಕೇವಲ ನಾಲ್ಕು ಪದಾರ್ಥಗಳನ್ನು ಮಾತ್ರ ಸ್ನೇಹ ದ್ರವ್ಯಗಳೆಂದು ಗುರುತಿಸಿದೆ – ತುಪ್ಪ, ತೈಲ (ಎಣ್ಣೆ), ವಸಾ(ಚರ್ಬಿ) ಮತ್ತು ಮಜ್ಜಾ (ಮೂಳೆಗಳಲ್ಲಿರುವ ಸ್ನೇಹ). ನಮ್ಮ ಆಯಸ್ಸನ್ನು ಗಟ್ಟಿ ಮಾಡುವ ಈ ಪ್ರಮುಖ ನಾಲ್ಕು ಸ್ನೇಹಗಳಲ್ಲಿ ತುಪ್ಪವು ಅತ್ಯಂತ ಪ್ರಶಸ್ತವಾದದ್ದು ಎಂಬುದು ಎಲ್ಲ ಆಯುರ್ವೇದ ಶಾಸ್ತ್ರಜ್ಞರ ಅಭಿಮತ.

ತುಪ್ಪವು ಆಬಾಲವೃದ್ಧರಲ್ಲೂ ಉಪಯುಕ್ತ. ಆರೋಗ್ಯವಂತರ ಆರೋಗ್ಯ ರಕ್ಷಣೆಯಲ್ಲಿ ಹಾಗೂ ರೋಗಿಗಳ ರೋಗ ನಿವಾರಣೆಯಲ್ಲೂ ಇದರ ಪಾತ್ರ ಗಣನೀಯವಾದದ್ದು. ಹಾಗಾಗಿಯೇ ಈ ಅಮೃತ ಪ್ರಾಯವಾದ ತುಪ್ಪದ ಬಗ್ಗೆ ಸರಿಯಾಗಿ ತಿಳಿಯುವುದು, ತಿಳಿದುಕೊಂಡು ಉಪಯೋಗಿಸುವುದು ಅತ್ಯವಶ್ಯಕ. ತುಪ್ಪದ ಬಗ್ಗೆ ಶಾಸ್ತ್ರದಲ್ಲಿ ‘ದೇವಾನಾಂ ಆಜ್ಯಮಾಹಾರಮ’ ಅಂತ ಹೇಳಿದ್ದಾರೆ. ಅಂದರೆ ತುಪ್ಪವು ದೇವತೆಗಳ ಆಹಾರವು ಎಂದರ್ಥ. ಇದು ಮಾನವನಿಗೆ ಮಾತ್ರವಲ್ಲದೆ ದೇವತೆಗಳ ಬದುಕಿಗೂ ಅತ್ಯಗತ್ಯ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ತುಪ್ಪಕ್ಕೆ ಅಮೃತಾ ಎಂಬ ಹೆಸರು ಅನ್ವರ್ಥವಾಗಿದೆ. ತುಪ್ಪವು ಜೀವನದ ಘಟಕಗಳಾದ ಶರೀರದ ಪೋಷಣೆಗೂ, ಇಂದ್ರಿಯಗಳ ಬಲಕ್ಕೂ, ಅಷ್ಟೇ ಅಲ್ಲದೆ ಮನಸ್ಸಿನ ಸ್ವಾಸ್ಥ್ಯ ಹಾಗೂ ಪ್ರಸನ್ನತೆಗೂ ಬೇಕಾದ ಅತಿ ಮುಖ್ಯವಾದ ಪದಾರ್ಥ.

ಮಾನಸಿಕ ಖಾಯಿಲೆಗಳಿರುವ ಹಲವಾರು ರೋಗಿಗಳ history ಕೇಳಿದಾಗ ಅವರಿಗೆ ತುಪ್ಪ ತಿನ್ನುವ ಅಭ್ಯಾಸವೇ ಇಲ್ಲದಾಗಿರುತ್ತದೆ. ಹೀಗಾಗಿ, ಮನಸ್ಸಿಗೆ ಪೋಷಣೆ ಸಿಗದೆ ಅದು ಬಹಳ
ಬೇಗ ಖಿನ್ನತೆಗೆ/ ಮಾನಸಿಕ ವ್ಯಾಧಿಗಳಿಗೆ ತುತ್ತಾಗುತ್ತದೆ. ಇಂತಹ ಸ್ಥಿತಿಯಲ್ಲಿ ತುಪ್ಪದಿಂದ ತಯಾರಿಸಿದ ಔಷಧಿಗಳನ್ನು ಕೊಟ್ಟಾಗ ಬಹಳ ಬೇಗ ಗುಣಮುಖರಾಗುವುದನ್ನು ನಾವು ಕಂಡಿದ್ದೇವೆ.
ಬೇರೆ ಆಹಾರ ದ್ರವ್ಯಗಳು ಜೀವ ಘಟಕಗಳ ಪ್ರತ್ಯೇಕ ಪೋಷಣೆಗೆ ಮಾತ್ರ ಕಾರಣವಾದರೆ, ತುಪ್ಪವು ನಮ್ಮ ಜೀವದ ಎಲ್ಲಾ ಘಟಕಗಳ ಪರಿಪೂರ್ಣ ಪೋಷಣೆ ಯನ್ನು ಮಾಡುತ್ತದೆ. ಹಾಗಾಗಿ ತುಪ್ಪವು ನಮ್ಮ superhero. ಈ superheroನಲ್ಲಿ ಇರುವ ಔಷಽಯ ಗುಣಗಳ ಬಗ್ಗೆ ಸ್ವಲ್ಪ ಗಮನಹರಿಸೋಣ. ಸಂಸ್ಕೃತದಲ್ಲಿ ತುಪ್ಪಕ್ಕೆ ಬೇರೆ ಬೇರೆ ಹೆಸರುಗಳಿವೆ.

ಒಂದೊಂದು ಹೆಸರು ತುಪ್ಪದ ಒಂದೊಂದು ಗುಣ ವನ್ನು/ ಕಾರ್ಯವನ್ನು ಸೂಚಿಸುತ್ತದೆ. ತುಪ್ಪಕ್ಕೆ ಘೃತ ಎಂದು ಹೇಳುತ್ತಾರೆ- ಅಂದರೆ ಜೀವಕೋಶಗಳಿಗೆ ಜೀವ ತುಂಬುವಂಥದ್ದು (fuel) ಅಥವಾ ಜೀವ ಕೋಶಗಳಿಗೆ ಅಂಟಿದ ಕೊಳೆಯನ್ನು ತೆಗೆದು (detoxity)ಅವುಗಳನ್ನು ಪ್ರಜ್ವಲಿಸುವಂತೆ ಮಾಡುವಂಥದ್ದು ಎಂದರ್ಥ. ತುಪ್ಪಕ್ಕಿರುವ ಮತ್ತೊಂದು ಹೆಸರು ಆಜ್ಯ- ಜೀವಕೋಶಗಳ ಕಾರ್ಯಗಳನ್ನು ಸರಿಯಾಗಿ ವ್ಯಕ್ತಪಡಿಸುವಂಥದ್ದು. ಉದಾಹರಣೆಗೆ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿಸುವುದು. ತುಪ್ಪಕ್ಕಿರುವ ಇನ್ನೊಂದು ನಾಮ – ಸರ್ಪಿ – ದೇಹದಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸುವಂಥದ್ದು. Ghee acts as a catalyst for many chemical processes in the body. ಅಮೃತಾ ತುಪ್ಪದ ಅನ್ವರ್ಥ -ಜೀವಕೋಶಗಳ ನಾಶವನ್ನು ತಡೆಯು ವಂಥದ್ದು ಎಂದರ್ಥ. It arrests ageing to become the best anti ageing agent.. ಮುಪ್ಪನ್ನು ತಡೆಯುತ್ತದೆ. ಈ ಹೆಸರುಗಳಲ್ಲದೆ ತುಪ್ಪದ ಇನ್ನಿತರ ಗುಣ
ಧರ್ಮಗಳ ಬಗ್ಗೆ ತಿಳಿಯೋಣ. ತುಪ್ಪವು ನಮ್ಮ ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪವಿಲ್ಲದೆ ಹೇಗೆ ದೀಪ ಉರಿಯುವುದಿಲ್ಲವೋ ಹಾಗೆಯೇ ನಮ್ಮ ಜಾಠರಾಗ್ನಿಯ ಕಾರ್ಯಕ್ಷಮತೆಗೆ ತುಪ್ಪ ಅತ್ಯವಶ್ಯಕ. ತುಪ್ಪವು ವಾತ-ಪಿತ್ತಗಳನ್ನು ಶಮನ ಮಾಡಿ ದೇಹಕ್ಕೆ ತಂಪನ್ನೆರೆಯುತ್ತದೆ. ಸ್ವರವನ್ನು, ಕಾಂತಿಯನ್ನು ಹೆಚ್ಚಿಸುತ್ತದೆ.

ತುಪ್ಪವು ಬುದ್ಧಿಶಕ್ತಿಯನ್ನು, ಸ್ಮರಣಶಕ್ತಿಯನ್ನು ಅಽಕ ಮಾಡುತ್ತದೆ. ತುಪ್ಪವು ನೇರವಾಗಿ ಮಿದುಳನ್ನು ಪ್ರವೇಶಿಸಿ ಇಡೀ ನರಮಂಡಲವನ್ನು ಪೋಷಿಸುತ್ತದೆ. ತುಪ್ಪದ ವಿನಃ ಬೇರೆ ಯಾವ ದ್ರವ್ಯಕ್ಕೂ ಈ ಸಾಮರ್ಥ್ಯವಿಲ್ಲ. ತುಪ್ಪವು ಮನಸ್ಸನ್ನು ಪೋಷಿಸಿ ಸತ್ತ್ವಗುಣವನ್ನು ವೃದ್ಧಿ ಮಾಡುತ್ತದೆ. ಉನ್ಮಾದ – ಅಪಸ್ಮಾರಗಳನ್ನು ಪ್ರಶಮನ ಮಾಡಲು ಲಾಭಕಾರಿ. ಎಲ್ಲ ಇಂದ್ರಿಯಗಳಿಗೆ ಪುಷ್ಟಿ ನೀಡಿ ವಿಶೇಷವಾಗಿ ದೃಷ್ಟಿಶಕ್ತಿಯನ್ನು ಚುರುಕುಗೊಳಿಸುತ್ತದೆ. ತುಪ್ಪವು ಉತ್ತಮ ರಸಾಯನವೂ ಹೌದು. ಮುಪ್ಪಿನ ಲಕ್ಷಣಗಳನ್ನು ನಿಧಾನ ಗೊಳಿಸುತ್ತದೆ. ತುಪ್ಪವು ದೇಹದಲ್ಲಿನ ರಸಧಾತುವನ್ನು ಹೆಚ್ಚಿಸಿ, ದೇಹಕ್ಕೆ ಪುಷ್ಟಿಯನ್ನು ನೀಡಿ ಚರ್ಮಕ್ಕೆ ಹಾಗೂ ಕೂದಲಿಗೆ ಕಾಂತಿಯನ್ನು ನೀಡುತ್ತದೆ.

ಅಂತೆಯೇ, ಶುಕ್ರಧಾತುವನ್ನು ವೃದ್ಧಿಸಿ ಉತ್ತಮ ಪ್ರಜೆಯನ್ನು ನೀಡುತ್ತದೆ. It boosts fertility and reproductive health. ತುಪ್ಪವು ಓಜಸ್ಸನ್ನು ಅಽಕ ಮಾಡಿ ದೇಹದ ಬಲ, ವ್ಯಾಽಕಮತ್ವ ಹಾಗೂ ಆಯಸ್ಸನ್ನು ಹೆಚ್ಚಳ ಮಾಡುತ್ತದೆ. Best for immunity building! ಮೂಳೆ-ಸಂಧಿಗಳನ್ನು ಗಟ್ಟಿ ಮಾಡಿ ಕೇಶರಾಶಿಯನ್ನು ಹೇರಳಗೊಳಿಸುತ್ತದೆ. ಶಸಾಘಾತ ಅಥವ ಶಸಕರ್ಮಗಳ ಚಿಕಿತ್ಸೆಯಲ್ಲಿ ಹಾಗೂ ನಂತರ ಇದರ ಪ್ರಯೋಗ ಮತ್ತು ಪರಿಣಾಮ ಗಮನಾರ್ಹ. ಬಾಣಂತನದಲ್ಲಂತೂ ತುಪ್ಪದ ಮಹತ್ವವನ್ನು ವಿವರಿಸುವ ಅಗತ್ಯವೇ ಇಲ್ಲ.
ತುಪ್ಪವು ರಕ್ತನಾಳಗಳನ್ನು ಸ್ವಚ್ಛವಾಗಿರಿಸಿ ಹೃದಯವನ್ನು ಆರೋಗ್ಯಕರವಾಗಿ ಇಡುತ್ತದೆ. ಇದು ನಾಲಿಗೆಗೂ ಸಿಹಿ ಹಾಗೂ ಜೀರ್ಣದ ನಂತರದ ಪರಿಣಾಮವೂ ಸಿಹಿಯಾಗಿರುವುದರಿಂದ ಧಾತುಗಳ ಉತ್ಪತ್ತಿ, ಏರುಪೇರುಗಳ ಸರಿಪಡಿಕೆ ಹಾಗೂ ವಿಕೃತಿಗಳ ಪ್ರಶಮನಕ್ಕೆ ಸಹಾಯಕಾರಿ.

It helps in tissue building and repair. ತುಪ್ಪವು ಶೀತ ವೀರ್ಯವಾದ್ದರಿಂದ ವ್ಯಾಧಿಯಿಂದ ಆಗುವ ಉದ್ರೇಕತೆಯನ್ನು ನಿಯಂತ್ರಿಸುತ್ತದೆ, ಅಂತೆಯೇ ಮಾನಸಿಕ ಉದ್ರೇಕತೆ
ಯನ್ನು ಸಹ ಕಡಿಮೆ ಮಾಡುತ್ತದೆ. ತುಪ್ಪದ ಮತ್ತೊಂದು ಅಂಶವೆಂದರೆ ಇದು ಒಂದು ವಿಷಹರ ದ್ರವ್ಯ. ನಾವು ಪ್ರತಿನಿತ್ಯ ಬಳಸುವ ಆಹಾರ ಎಷ್ಟೋ ಬಾರಿ ವಿರುದ್ಧ ಗುಣವುಳ್ಳ ವಸ್ತುಗಳಿಂದ ಕೂಡಿದ್ದು ವಿಷವಾಗಿ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಇಂದಿನ ಕೆಮಿಕಲ್ ಕಾಲದಲ್ಲಿ ವಿಷಮಯ ಪದಾರ್ಥಗಳು ನಮಗೆ ತಿಳಿದೋ ತಿಳಿಯದೆಯೋ ಎಷ್ಟೋ ಬಾರಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ. ಉದಾಹರಣೆಗೆ pesticides, chemical fertilizers ಇತ್ಯಾದಿ.

ತುಪ್ಪವು ವಿಷಹ ದ್ರವ್ಯವಾಗಿರುವುದರಿಂದ ಈ ಎಲ್ಲ ವಿಷಗಳ ಪರಿಣಾಮವನ್ನು ನಿವಾರಿಸಿ ಪ್ರಾಣರಕ್ಷಣೆ ಮಾಡುತ್ತದೆ. It acts as an antidote to toxins. ಒಟ್ಟಾರೆ ಸ್ವಾಸ್ಥ್ಯಮಯವಾದ, ನೂರು ವರುಷದ ತುಂಬು ಜೀವನವನ್ನು ನಡೆಸುವುದಕ್ಕೆ ನಮಗೆ ಅಗತ್ಯವಿರುವ ಅತಿ ಮುಖ್ಯವಾದ ವಸ್ತುವೆಂದರೆ ತುಪ್ಪ. ಹಾಗಾಗಿ, ಇದನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಅಳವಡಿಸಿ ಕೊಳ್ಳುವುದು ಅತ್ಯಾವಶ್ಯಕ. ಸ್ನೇಹಿತರೆ, ನೆನಪಿಟ್ಟುಕೊಳ್ಳಿ ಬೇರೆ ಬೇರೆ ಪ್ರಾಣಿಗಳ ಹಾಲಿನಂತೆ ಬೇರೆ ಬೇರೆ ಪ್ರಾಣಿಗಳ ತುಪ್ಪವೂ ಬೇರೆ ಬೇರೆ ಗುಣವುಳ್ಳzಗಿರುತ್ತದೆ. ವಸ್ತುತಃ, ಈ ಮೇಲೆ ನಾನು ಹೇಳಿದ ತುಪ್ಪದ ಗುಣಗಳು ವಿಶೇಷವಾಗಿ ಅನ್ವಯವಾಗುವುದು ಹಸುವಿನ ತುಪ್ಪಕ್ಕೆ ಮಾತ್ರ.

ಹಾಗಾಗಿ ದಿನ ನಿತ್ಯದ ಬಳಕೆಗೆ ಹಸುವಿನ ತುಪ್ಪ ಬಹಳ ಉತ್ತಮವಾದದ್ದು. ಹಾಗಾದರೆ, ಸ್ವಾಸ್ಥ್ಯ ಸಾಧನೆಗೆ ಈ ತುಪ್ಪವನ್ನು ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳುವುದು
ಮುಖ್ಯವಾಗುತ್ತದೆ. ೧.ತುಪ್ಪವನ್ನು ನಮಗೆ ಹಸಿವೆ ಇದ್ದಾಗ ಮಾತ್ರ ಆಹಾರದಲ್ಲಿ ಬಳಸಬೇಕು. ೨. ನಮ್ಮ ಜೀರ್ಣಶಕ್ತಿಗೆ ಅನುಗುಣವಾಗಿ ತುಪ್ಪದ ಬಳಕೆಯ ಪ್ರಮಾಣವನ್ನು ನಾವೇ ನಿರ್ಧರಿಸಿಕೊಂಡು ಬಳಸಬೇಕು. ಅಂದರೆ ನಾವು ಬೆಳಗ್ಗಿನ ಉಪಹಾರದಲ್ಲಿ ತೆಗೆದುಕೊಂಡ ತುಪ್ಪವು ಯಾವುದೇ ಸಮಸ್ಯೆ ಇಲ್ಲದೆ ನಮ್ಮ ಮಧ್ಯಾಹ್ನದ ಆಹಾರಕಾಲದ ಒಳಗೆ ಸಂಪೂರ್ಣವಾಗಿ ಜೀರ್ಣವಾಗಿ ಮತ್ತೆ ಚೆನ್ನಾಗಿ ಹಸಿವೆಯಾಗಬೇಕು. ಇದು ನಮಗೆ ಸರಿಯಾದ ತುಪ್ಪದ ಪ್ರಮಾಣವಾಗುತ್ತದೆ. ೩.ತುಪ್ಪವನ್ನು ಸದಾ ಕರಗಿಸಿಯೇ ಬಳಸಬೇಕು.

ಫ್ರಿqನಲ್ಲಿ ಇಟ್ಟು ಗಟ್ಟಿಯಾದ ತುಪ್ಪದ ಬಳಕೆ ನಿಷಿದ್ಧ. ೪.ಯಾವಾಗಲೂ ಬಿಸಿಯಾದ ಆಹಾರದ ಜೊತೆ ಮಾತ್ರ ತುಪ್ಪವನ್ನು ಬಳಸಬೇಕು. ೫.ತುಪ್ಪದ ಆಹಾರದ ಸೇವನೆಯ ಜೊತೆ ಸದಾ ಬಿಸಿ ನೀರನ್ನು ಸೇವಿಸಬೇಕು. ತುಪ್ಪದಿಂದ ತಯಾರಿಸಿದ ಆಹಾರವನ್ನು ಸೇವಿಸಿ ತಣ್ಣೀರು/ಜ್ಯೂಸ್/ಕೋಲ್ಡ ಡ್ರಿಂಕ್ಸ್/ಐಸ್ ಕ್ರೀಮ್ ಬಳಕೆಯಿಂದ ತೊಂದರೆ ತಪ್ಪಿದ್ದಲ್ಲ. ೬.ತುಪ್ಪದ ಸೇವನೆ ಯಲ್ಲಿದ್ದಾಗ ವ್ಯಾಯಾಮವನ್ನು ಮಾಡಲೇಬೇಕು. ಹೀಗೆ, ನಾನು ಹೇಳಿದ ರೀತಿಯಲ್ಲಿ ತುಪ್ಪವನ್ನು ಸೇವಿಸಿದಾಗ, ತುಪ್ಪ ಅಮೃತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾದರೆ, ತುಪ್ಪ ತಿಂದರೆ ದಪ್ಪ ಆಗೋದಿಲ್ಲವಾ ಅನ್ನುವ ಪ್ರಶ್ನೆಗೆ ನಾನು ಕೊಡುವ ಉತ್ತರವೇನೆಂದರೆ – ವ್ಯಾಯಾಮ, ದೇಹದ ಶ್ರಮ, ಜೀರ್ಣಶಕ್ತಿ ಮುಂತಾದವುಗಳನ್ನು ಗಮನಿಸದೇ ಸೇವಿಸಿದ ತುಪ್ಪವು ಅಥವಾ ವ್ಯಾಯಾಮಾದಿಗಳನ್ನು ಮಾಡದಿzಗ ಸೇವಿಸುದ ತುಪ್ಪವು ಸಂಪೂರ್ಣವಾಗಿ ಜೀರ್ಣಗೊಂಡು ಮಾರ್ಪಾಡಾಗದೆ ಸ್ಥೌಲ್ಯ ರೋಗವನ್ನು ಹಾಗೂ ದೇಹದಲ್ಲಿ ಹೆಚ್ಚಿನ ಮೇದಸ್ಸನ್ನು ಉಂಟುಮಾಡುವ ಸಂಭವ ಹೆಚ್ಚು. ಇದಕ್ಕೆ ತುಪ್ಪ ಕಾರಣವಲ್ಲ, ನಮ್ಮ ಕ್ರಮ ರಹಿತ ಉಪಯೋಗವೇ ಕಾರಣ.

ಸ್ನೇಹಿತರೆ, ಆಯುರ್ವೇದ ಗ್ರಂಥಗಳು ಉಖಿಸುವ ಮತ್ತು ನಮ್ಮ ಹಿಂದಿನ ತಲೆಮಾರಿನ ಹಿರಿಯರು ಜೀವನದಲ್ಲಿ ಎಂದಿಗೂ ಉನ್ನತವಾದ, ಅಮೃತದಂತಹ ಸ್ಥಾನದಲ್ಲಿ ಇರಿಸಲ್ಪಟ್ಟು, ಸೇವಿಸಲ್ಪಟ್ಟ ತುಪ್ಪವು ಮತ್ತೆ ನಮ್ಮ ಬದುಕಿನಲ್ಲಿ ವಿವೇಚನಾಪೂರ್ವಕವಾಗಿ ಬಳಕೆಯಾಗಿ ನಮಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಆಶಿಸುತ್ತಾ, ತುಪ್ಪ ಬಳಸುವುದಕ್ಕೆ ಭಯ ಬೇಡ ಎಂದು ಪ್ರೇರೇಪಿಸುತ್ತಾ ಈ ಲೇಖನವನ್ನು ಇಲ್ಲಿಗೆ ಸಂಪನ್ನಗೊಳಿಸುತ್ತೇ