Monday, 25th November 2024

Girish Bhat, Kovettanda Column: ದ್ಯೂತ ಪ್ರಸಂಗವೆಂಬ ಅಧಿಕ ಪ್ರಸಂಗ

ಸ್ವಾರಸ್ಯ
ಗಿರೀಶ್‌ ಭಟ್‌, ಕೂವೆತ್ತಂಡ

ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು. ಭಾರತ ಕಣ್ಣಲ್ಲಿ ಕುಣಿಯುವುದು. ಎಂದು ರಾಷ್ಟ್ರಕವಿ ಕುವೆಂಪುರವರು ಕುಮಾರವ್ಯಾಸನನ್ನು ಹಾಡಿ ಹೂಗಳಿದ್ದು ಜನಜನಿತ. ವಿದ್ಯಾರ್ಥಿಗಳಿಗೆ ಗದುಗಿನ ಭಾರತ ಕಾವ್ಯವನ್ನು ತರಗತಿಯಲ್ಲಿ ಮಾಡುವಾಗ ಎಂತಹ ಕನ್ನಡ ಉಪನ್ಯಾಸಕನ ಕಣ್ಣಲ್ಲಿಯೂ ಒಂದು ಹನಿ ನೀರು ಜಾರದೇ ಬಿಡುವುದಿಲ್ಲ. ಅಂತಹ ಕಾವ್ಯ ಶೈಲಿ.

ಮಹಾಭಾರತದ ಇಡೀ ಕಥಾನಕವನ್ನು ಕಣ್ಣಿಗೆ ಕಟ್ಟುವಂತೆ ಬರೆದು ಸಾಹಿತ್ಯ ಲೋಕವನ್ನು ಶ್ರೀಮಂತಗೂಳಿಸಿದ ಪುಣ್ಯಾತ್ಮ. ಪಂಪ ಒಂದು ಹೆಜ್ಜೆ ಮುಂದೆ ಹೋಗಿ ಮಹಾಭಾರತವನ್ನು ಕರ್ಣರಸಾಯನಂಲ್ತೇ ಎಂದು ಬಿಟ್ಟಿದ್ದ. ಕರ್ಣನಿಲ್ಲದ ಮಹಾಭಾರತವನ್ನೂ ಊಹಿಸಲೂ ಸಾದ್ಯವಿಲ್ಲ ಎಂದು ಬಿಟ್ಟಿದ್ದ.

ಅವನ ನಂತರದ ಕಾಲಘಟ್ಟದಲ್ಲಿ ಬಂದ ಪ್ರತಿಭೆ ಕುಮಾರವ್ಯಾಸನದ್ದು ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು
ಕರೆಸಿಕೊಂಡು ಹಲಗೆ ಬಳಪವ ಹಿಡಿಯದ ಪದವಿಟ್ಟು ಅಳಿಸಿದ ಕಾವ್ಯ ಪ್ರತಿಭೆ ಎಂದು ಹೇಳಿರುವುದು ಅತಿ ಶಯೋಕ್ತಿಯೇನಲ್ಲ. 14ನೇ ಶತಮಾನದಲ್ಲಿ ಕನ್ನಡ ಸಾಹಿತ್ಯಕ್ಕೆ ಸಿಕ್ಕ ಈ ರತ್ನ ಸಮುದ್ರದ ಚಿಪ್ಪಿನಂತೆ ಕಾವ್ಯ ರಸವನ್ನೇ ಸ್ಪುರಿಸಿ ಕಣ್ಮೆರೆಯಾದರೂ ಅಲೆಗಳು ದಡಕ್ಕೆ ಅಪ್ಪಳಿಸಿ ಹೂತ್ತು ತರುವ ಚಿಪ್ಪಿನಂತೆ ಆಗೂಮ್ಮೆ ಈಗೂಮ್ಮೆ ಕುಮಾರವ್ಯಾಸನ ಪಠ್ಯಗಳು ಹೂಳೆಯುತ್ತದೆ. ಪ್ರತಿಬಾರಿಯೊ ಹಳಗನ್ನಡ ಪಾಠ ಮಾಡುವಾಗ ಮೂಗು ಮುರಿಯದೇ ಗದುಗಿನ ಭಾರತವನ್ನು ಯುವ ಭಾರತದ ಕನ್ನಡ ಶಿಶುಗಳಿಗೆ ಕಟ್ಟಿ ಕೂಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ‘ಕೇಳು ಜನಮೇಜಯ ಧರಿತ್ರಿಪಾಲ ಪಾಂಡವ ನೃಪರನರಮನೆ ಬೀಳುಗೂಂಡುದು ವಿಳಸದಿಂದಪ್ರಸ್ಥಪುರ ಸಹಿತ ಮೇಲೆ ನೆಗಳುವ ದುರ್ನಿಮಿತ್ತವನಾಲಿಸಿದರೇದೈವದೋಷ ನಿಮಾಲಿತಾಂತಃ
ಕರಣ ಹತರೈತಂದರಿಭಪುರಿಗೆ’ ಎಂಬ ಭಾಗದಿಂದ ಆರಂಭವಾಗುವ ಸಾಲಿನಲ್ಲಿ ಕುರುವಂಶದ ರಾಜ ಪರೀಕ್ಷಿತ ರಾಜನ ಮಗನೇ ಈ ಜನಮೇಜಯ.

ಅಂದಹಾಗೆ ಈ ಪರೀಕ್ಷಿತ ಅಭಿಮನ್ಯವಿನ ಮಗ. ಹೀಗೆ ವಂಶಭೇರು ಹಿಂದೆ ಸಾಗುತ್ತದೆ. ಹುಟ್ಟಿನಿಂದಲೇ ಜಯಶಾಲಿ ಎಂಬ ಅರ್ಥವೂ ಈ ಹೆಸರಿಗೆ ಇರುವಾಗ ಧರ್ಮರಾಯನೂ ಧರ್ಮನಿಷ್ಟೆಯಲ್ಲಿ ಜೀವನೂದ್ದಕ್ಕೂ ಜಯಶಾಲಿಯೇ.
ಧೃತರಾಷ್ಟ್ರನ ಸಂದೇಶವನ್ನು ಹಿಡಿದಿಕೊಂಡು ಬಂದ ವಿದುರನು ಹಸ್ತಿನಾಪುರಕ್ಕೆ ಬರುವಂತೆ ಆಹ್ವಾನವನ್ನು ತಂದಿದ್ದ. ಈ ಮೂಲಕ ಇಂದ್ರಪ್ರಸ್ಥವನ್ನು ಆಳುತ್ತಿದ್ದ ಧರ್ಮರಾಯನಲ್ಲಿಗೆ ಅದನ್ನು ಅರುಹಿಸಿ ಅದಕ್ಕೆ ಒಪ್ಪಿಗೆ ಯನ್ನು ಸೂಚಿಸಿದ.

ಧರ್ಮರಾಯನ ಪರಿವಾರದ ಜನರ ಎಚ್ಚರಿಕೆ, ಸಲಹೆಯನ್ನು ನಿರ್ಲಕ್ಷಿಸಿ ಸಹೋದರರನ್ನು ಕೂಡಿಕೂಂಡು ಹೂರಟು ನಿಂತ. ಪಾಂಡವರಲ್ಲಿ ಸಹದೇವನಿಗೆ ಕಾಲಜ್ಞಾನ ತಿಳಿದಿದ್ದರೂ ಮುಂದಾಗಬಹುದಾದ ಅಪಾಯದ ಮುನ್ಸೂಚನೆ ಅವನಿಗೆ ಗೊತ್ತಿದ್ದರೂ ಹೇಳಲಾಗದ ಸ್ಥಿತಿ. ಅಗ್ರಜನ ವಾಕ್ಯ ಪಿತೃವಾಕ್ಯಕ್ಕೆ ಸಮ ಎಂಬಂತೆ ನಡೆಯವ ಸಹೋದರರು ಎಂತಹ ಭಾಂದವ್ಯ ಏನಿಸಿ ಬಿಡುತ್ತದೆ. ವಿಶ್ವಕರ್ಮನಿಂದ ನಿರ್ಮಿತ ಇಂದ್ರ ಪ್ರಸ್ಥದಿಂದ ಬಾರೀ ಕಾಣಿಕೆಯನ್ನು ತೆಗದುಕೂಂಡು ದಿಬ್ಬಣ ಹೂರಡುವಂತೆ ಉಲ್ಲಾಸದ ಮನಸ್ಸಿನಿಂದ ಹೂರಟು ನಿಂತರು. ಕವಿ ಹೇಳುವಂತೆ ದೈವದೋಷ ನಿಮೀಲಿತ ಅಂತಃಕರಣಹತರು ಸಾಲಿನಲ್ಲಿ ದಾರಿಯುದ್ದಕ್ಕೂ ನಡೆದ ಅಪಶಕು ನಗಳಾದರೂ ಪೂರ್ವಯೋಜಿತ ದೈವ ದೋಷದಿಂದಲೇ ವಿನಃ ನಾವು ಹೂರಟ ಕಾರಣದಿಂದ ಅಲ್ಲ ಎಂದು ನಿರ್ಲಕ್ಷಿಸಿದರು. ಅಷ್ಟಕ್ಕೂ ಹೂರಟು ನಿಂತ ಪಾಂಡವರ ಮನಸ್ಥಿತಿ ಪ್ರಶ್ನಾತೀತ? ಬಾಲ್ಯದಿಂದಲೂ ದಾಯಾದಿ ಕಲಹಗಳಿಂದ ಸಾಕಷ್ಟು ಕಷ್ಟ ಅನುಭವಿಸಿದ್ದವರಿಗೆ ಈಗ ಹುಟ್ಟಿದ ಪ್ರೀತಿ ಕುರುವಂಶದ ಘನತೆಯನ್ನು ಉಳಿಸಿಸು ವುದಕ್ಕಾಗಿ ಎಂಬುದರಲ್ಲಿ ಸಂಶಯವೇ ಇಲ್ಲ.

ಹಸ್ತನಾಪುರದ ಧೃತರಾಷ್ಟ್ರನ ಓಲೆಯನ್ನು ತಿರಸ್ಕರಿಸಿದರೆ ಇಡೀ ಭರತವಂಶದ ಉಳಿದ ರಾಜರಿಗೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಬಣ ರಾಜಕೀಯ ಉಂಟಾಗಿ ದುರ್ಯೋಧನನಂತಹ ಹಿತ್ತಾಳೆ ಕಿವಿಯವನಿಗೆ ಶಕುನಿ ಕೂಡುತ್ತಿದ್ದ ಮಾರ್ಗದರ್ಶನ ಕೂಡ ಯುದ್ದ ನೀತಿಯ ದಾರಿಯನ್ನು ತೋರಿಸುತ್ತಿತ್ತೋ ಏನು. ಈಗಾಗಲೇ ಕುರುವಂಶ ಇಬ್ಬಾಗವಾದರೂ ಧರ್ಮರಾಯನ ಧರ್ಮ ಅಳಿಯಲಿಲ್ಲ.

ಆಹ್ವಾನ ತಂದ ವಿದುರನನ್ನು ಅರಮನೆಯ ಮುಖ್ಯ ಧ್ವಾರದಲ್ಲಿಯೇ ತಡೆಯಬಹುದಿತ್ತು. ಶತ್ರುವಿನ ಆಹ್ವಾನ ವಿದ್ದರೂ ಮನ್ನಿಸಿ ಅತಿಥ್ಯವನ್ನು ಸ್ವೀಕರಿಸುವುದೂ ಧರ್ಮವೇ ಅಲ್ಲವೇ. ಹೀಗಲ್ಲದೆ ಕೌರವರು ಇಂದ್ರಪ್ರಸ್ಥಕ್ಕೆ ಬಂದು ಹೋದಾಗಿನಿಂದ ಪಾಂಡವರ ಸಂತೋಷವನ್ನು ಹೇಗಾದರೂ ಮಾಡಿ ಕಸಿದು ಮೂರಾಬಟ್ಟೆ ಮಾಡಲು ಸಂಚು ರೂಪಿಸಿ ಅದರ ದ್ಯೋತಕವಾಗಿ ಈ ಪಗಡೆಯಾಟದ ನೆಪ. ಪಾಂಡವರ ಕೈಯಲ್ಲಿರುವ ಆ ಭೂಮಿಯನ್ನು ಕಸಿದುಕೊಂಡು ಜೂಜಿನಲ್ಲಿ ಅವಮಾನಿಸಿ 14 ವರ್ಷ ವನವಾಸ 1 ವರ್ಷ ಆಜ್ಞಾತವಾಸ ಇದು ನಂತರದ ಸಂಗತಿ. ತನ್ನ ಹಿರಿಯರ ಎಲುಬುಗಳಿಂದ ಮಾಡಿದ ದಾಳಗಳನ್ನು ದ್ಯೂತ ಸಭೆಯಲ್ಲಿ ಅದಾಗಲೇ ಇಡಲಾಗಿತ್ತು.

ಇಂದ್ರಪ್ರಸ್ಥದಿಂದ ಬೀಳ್ಕೊಂಡ ಇವರಿಗೆ ದಾರಿಯಲ್ಲಿ ಸಿಕ್ಕಿದ ವಿಘ್ನಗಳು ಅಷ್ಟಿಷ್ಟಲ್ಲ. ರಾಜನಾದವನಿಗೆ ಧರ್ಮ ಪ್ರಜ್ಞೆ ಎಷ್ಟೋ ಮುಖ್ಯವೋ ಕಾಲ ಪ್ರಜ್ಞೆಯೂ ಬೇಕಲ್ಲವೇ. ದ್ರೋಣನ ಶಿಷ್ಯನಿಗೆ ಇದು ಗೂತ್ತಾಗದೆ ಹೋಯಿತು ಎಂದರೆ ಯಾರು ನಂಬಲಿಕ್ಕಿಲ್ಲ. ಸಂಬಂಧದಲ್ಲಿ ಹೇಳುವುದಿದ್ದರೆ ದೂಡ್ಡಪ್ಪನ ಅಹ್ವಾನದ ಪ್ರೀತಿ ರಕ್ತದಲ್ಲಿ ಅಂಟಿದ್ದಿಬಹುದು. ವಿದುರನ ಮೇಲಿನ ಕಾಳಜಿಯೇ ಅಥವಾ ಹಸ್ತಿನಾಪುರದ ಮೋಹವೇ. ಇಲ್ಲವೇ ತಾಯಿ ಕುಂತಿ ಯನ್ನು ನೋಡುವುದಾಕ್ಕಾಗಿಯೇ. ಒಟ್ಟಾರೆ ವಿಧಿಲಿಖಿತ ಅಂತೂ ನಿಜ.

ಹಸ್ತಿನಾಪುರವನ್ನು ಪ್ರವೇಶಿಸಿ ಧರ್ಮರಾಯನ ಪರಿವಾರ ಸಹಿತ ಧೃತರಾಷ್ಷ್ರನ ಮುಂದೆ ನಿಂತು ಬಿಟ್ಟರು.
ಆನೆಯಿಂದ ಇಳಿದು ತಾವು ತಂದಿದ್ದ ಕಾಣಿಕೆಗಳನ್ನು ಸಲ್ಲಿಸಿ ಕಿರೀಟ ಸಹಿತವಾಗಿ ಪ್ರಣಾಮವನ್ನುಗೈದರು.ಕೌರವರು
ಒಳಗೊಳಗೆ ನಗುತ್ತಿದ್ದರೆ, ಪಾಂಡವರಿಗೆ ಧೃತರಾಷ್ಟ್ರನ ಅಪ್ಪುಗೆಯಿಂದ ಅಲದ ಮರವೊಂದರಲಿದ್ದ ಗುಪ್ಪಚ್ಚಿ ಗೂಡಿನ ಮರಿಯೊಂದು ತಪ್ಪಿ ಮತ್ತೆ ಮರಳಿ ಸೇರಿದಾಗ ಎಷ್ಟು ಖುಷಿಯಾಗುತ್ತದೆಯೋ ಅಷ್ಟೇ ಖುಷಿಯನ್ನು ಈರ್ವರೂ ಹರ್ಷಿತರಾದದ್ದು ಅಷ್ಟೇ ಸತ್ಯ. ಕುಲತಿಲಕ ಬಾ ಕಂದ ಭರತಾವಳಿ ವನದ ಮಾಕಂದಧರ್ಮ ಸ್ಥಳ ಲತಾವಳಿ ಕಂದ ಬಾ ಎಂದು ಅಪ್ಪಿದನು ನೃಪನ.

ಧರ್ಮ ಎಂಬ ಬಳ್ಳಿಗೆ ಲತೆಯಂತೆ ಇರುವ ಭರತವಂಶದ ಮಾವಿನ ಮರದಂತೆ ತಾನು ನೆರಳಾಗಿ ಸಿಹಿಫಲ ಕೂಡುವ
ಹಣ್ಣಾಗಿ ಶೋಭಿಸುವ ಇವನನ್ನು ಅಪ್ಪಿ ಮೈತ್ರಿ ಗಟ್ಟಿಗೊಳಿಸಿದನು. ಶುಭ ದಿನದಂದು ಭರತ ವಂಶದ ರಾಜರು
ಮಹಾರಾಜರು ಸೇರಿರುವ ಒಡ್ಡೋಗಲಕ್ಕೆ ಜೊತೆಯಾದರು. ಶಕುನಿಯ ಸಂಚಿನ ಮಾತಿನೊಂದಿಗೆ ಆರಂಭದ ಈ ಸಾಲಿನಲ್ಲಿ ನಂಜಿನ ಮಾತು ಎದ್ದು ಕಾಣುತ್ತಿತ್ತು. ಆಡಲರಿವನು ಗಡ ಯುದಿಷ್ಟಿರನಾಡುವವರೆ ಬರಹೇಳು ಮೇಣ್ತಾ ಧರ್ಮರಾಯನಿಗೆ ಪಗಡೆ ಚೆನ್ನಾಗಿ ಬರುತ್ತದೆ. ಇಷ್ಟವಿದ್ದರೆ ಆಡಲು ಕರೆಯಿರಿ ನಾವು ನಿಂತು ನೋಡುತ್ತೇವೆ. ಎಂದು ಅವನ ಸ್ವಾಭಿಮಾನದ, ಪ್ರತಿಷ್ಠೆಯನ್ನು ಕೆದಕುವಂತೆ ಮಾಡುವಲ್ಲಿ ಸಫಲನಾದನು.

ಖೋಡಿಯಿಲ್ಲದ ಸರಸ ನೆತ್ತವ ನಾಡಲರಿಯದ ನೃಪತಿ ಮೃಗವೆಂದಾಡುತಿಹರರಿವವರು ತಾವಲ್ಲೆಂದನಾ ಶಕುನಿ. ಗಾದೆ ಮಾತಿನಂತೆ ಸರಸ ಜೂಜನ್ನು ಆಡಲು ಬಾರದ ರಾಜ ಒಂದು ಮೃಗ ಎಂದು ಜನ ಹೇಳುತ್ತಾರೆ ಎಂದದ್ದು ಮಾತ್ರ ಧರ್ಮರಾಯನ ಮತಿಯನ್ನು ಬಿಟ್ಟಿತು.ಈ ವಾಕ್ ಕೌಶಲ್ಯವನ್ನು ಈ ಧರ್ಮರಾಯನಿಗೇ ಹೇಳಿಕೊಡಬೇಕೇ.

ಅತನೂ ಸರಿಯಾಗಿ ತಿರುಗಿಸಿ ಹೇಳಿದ. ಹೀಗೆ ಸಾಗುತ್ತಾ ಹೋದಂತೆ ದ್ಯೂತ ಮಿತಿ ಮೀರಿ ಎಲ್ಲೆಯನ್ನು ಕೊಡ
ದಾಟುತ್ತದೆ. ಜೂಜಿಗೆ ಸಿದ್ದನಾದದ್ದನ್ನು ಕೇಳಿ ಇಂದು ವದನೆಯಾದ ದೌಪ್ರದಿಗೆ ಬಲಗಣ್ಣು ಹೂಡೆದುಕೊಳ್ಳಲು
ಆರಂಭವಾಯಿತು. ಆರಂಭದಿಂದಲೂ ಧರ್ಮ ಸಮ್ಮತವಾದ ಜೂಜಿಗೆ ಸಿದ್ದನೆಂದು ಹೇಳಿ ಅಂತಹ ಸಮ್ಮತಿಗೆ
ಬಾರದಿದ್ದರೆ, ಜನಾರ್ಧನ ಅಣೆ ಎಂದು ಬಿಟ್ಟನು. ಪಕ್ಕದಲ್ಲಿದ್ದ ಬೀಮಾರ್ಜುನರನ್ನು ಸ್ವಾರಸ್ಯವಾಗಿ ಹೇಳಿದ ಕುಮಾರವ್ಯಾಸ ಈರ್ವರಿಗೂ ಎಡಕಣ್ಣುಗಳು ಮತ್ತು ಎಡಭುಜಗಳು ಅದರುವಂತೆ ಮಾಡಿದವಂತೆ.

ಭೀಷ್ಮ ದ್ರೋಣಾದಿಗಳ ಮೋರೆಗಳು ಕಂದಿ ಹೋಗಿ ಶಕುನಿ ಸುಯೋಧನರ ಮುಸುಡುಗಳು ಅಂದವೇರುತ್ತಾ ಹೋಯಿತು. ಧರ್ಮರಾಯ ತಾನೋಡ್ಡಿದ ಪಣಗಳನ್ನು ಕಳೆದುಕೂಳ್ಳುತ್ತಾ ಹೋದಂತೆ ಶಕುನಿ ತೊಡೆ ತಟ್ಟಲು ಆರಂಭಿಸಿದ. ಧರ್ಮರಾಯನನ್ನು ದ್ಯೂತದಿಂದ ಹಿಂದೆ ಸರಿಯುವಂತಡ ಹಂಗಿಸುತ್ತಾ ಹೋದಂತೆ ಅತ ಪಣವನ್ನು ಇಡುವ ಸಾಹಸವನ್ನೂ ಹೋದ ಹೀಗೆ ಕೌರವನ ಅಧಿಕ ಪ್ರಸಂಗ ಹೆಚ್ಚಾಗಿ ಪಾಂಡವರ ರಾಜಪದವಿಯನ್ನೇ ಕಳಚುವಂತೆ ಮಾಡಿ ದುರ್ಯೋದನನಾದಿಗಳ ದಾಯದಿ ಮತ್ಸರಕ್ಕೆ ಬಲಿಯಾಗಿ 14 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸದ ದಾರಿ ತೋರಿಸಿಬಿಟ್ಟ. ನಂತರದ ಪಾಂಡವರ ಬದುಕು ಕಾಡಿನಲ್ಲಿ ಕಳೆಯುವಂತಾಯಿತು.

(ಲೇಖಕರು: ಕನ್ನಡ ಉಪನ್ಯಾಸಕರು)