Friday, 20th September 2024

ಮಿನೋಕಾ: ಹೃದಯಾಘಾತ ಹಿಂಬಾಗಿಲಿನಿಂದ ಬಂದಾಗ !

ವೈದ್ಯ ವೈವಿಧ್ಯ

drhsmohan@gmail.com

ಈಗ ಮಿನೋಕಾ ಎಂದು ಗುರುತಿಸಿರುವ ಈ ಹೃದಯಘಾತದ ಬಗ್ಗೆ ಕೆಲವು ದಶಕಗಳ ಮೊದಲೇ ವಿವರಿಸಲಾಗಿತ್ತು. ೧೯೩೯ ರ ಆರ್ಚೀವ್ಸ್ ಆಫ್  ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ನ್ಯೂಯಾರ್ಕ್ ನ ಎರಡು ವೈದ್ಯರು ಹೃದಯಾಘಾತದ ರೋಗಿಗಳ ಶವ ಪರೀಕ್ಷೆಯ ವಿವರಗಳನ್ನು ದಾಖಲಿಸಿದ್ದಾರೆ.

ಈಕೆ ೫೧ ವರ್ಷದ ಅಮೆರಿಕದ ಮಹಿಳೆ. ಮಿತ್ರರ ಜತೆ ರಾತ್ರಿ ಊಟ ಮಾಡಿ ಹೋಟೆಲ್‌ನಿಂದ ಹಿಂದಿರುಗಿ ಬರುವಾಗ ಒಮ್ಮೆಲೇ ಒಂದು ರೀತಿಯ ಸುಸ್ತು ಮತ್ತು ಅಸಹಜವಾದ ಅನುಭವವಾಗ ತೊಡಗಿತು. ರಾತ್ರಿ ೧೦ ಗಂಟೆಯ ಸಮಯವಾಗಿದ್ದರಿಂದ ತಡ ರಾತ್ರಿಯಲ್ಲಿ ಏನೋ ಸುಸ್ತಾಗಿರಬೇಕು ಎಂದುಕೊಂಡಳು. ಮನೆಗೆ ಬಂದ ನಂತರ ಬೆನ್ನಿನ ಭಾಗ, ಭುಜ ಮತ್ತು ಎದೆಯ ಭಾಗದಲ್ಲಿ ಅಸಹಜ ಅನುಭವ ಆಗುವುದು ಜಾಸ್ತಿಯಾಗುತ್ತ ಹೋಯಿತು. ಅದು ಒಂದು ರೀತಿಯ ಇರಿಯುವ ತರಹದ ನೋವಾಗಿರಲಿಲ್ಲ. ಎದೆಯ ಮತ್ತು ಇತರ ಭಾಗಗಳಲ್ಲಿ ಒಂದು ರೀತಿಯ ಹಿಂಡುವ ಅನುಭವವಾಗಿತ್ತು. ಈ ಹಿಂಡುವಿಕೆ ಜಾಸ್ತಿಯಾಗುತ್ತ ಹೋಯಿತು.

ಹಾಗೆಯೇ ಉಸಿರಾಟದಲ್ಲಿ ಏರುಪೇರಿನ ಅನುಭವವಾಗತೊಡಗಿತು. ಆಸ್ಪತ್ರೆಯ ಎಮರ್ಜೆನ್ಸಿ ಘಟಕಕ್ಕೆ ಕರೆದೊಯ್ಯಲು ಆಕೆಯ ಪತಿ ಅಣಿಯಾದರು. ಹಾಗೇನೂ ಗಂಭೀರವಾದ ಸಮಸ್ಯೆ ಇರಲಿಕ್ಕಿಲ್ಲ ಎಂದು ಆಸ್ಪಿರಿನ್ ಮಾತ್ರೆ ತೆಗೆದುಕೊಂಡು ಆಕೆ ಮಲಗಿದಳು. ಸ್ವಲ್ಪ ಹೊತ್ತಿನ ನಂತರ ಆಕೆಯ ಅಸಹಜ ಲಕ್ಷಣಗಳು ಕಡಿಮೆಯಾದವು. ಆಕೆ ಮಲಗಿ ನಿದ್ರಾವಶಳಾದಳು. ರೀಟಾ ಕೊನಾರ್ಡ್ ಎಂಬ ಈಕೆ ತುಂಬಾ ಆರೋಗ್ಯವಂತಳಾಗಿದ್ದಳು. ಆಗ ಆಕೆಗೆ ಆಗಿದ್ದು ಅಸಾಮಾನ್ಯ ರೀತಿಯ ಹೃದಯಾಘಾತ. ಮಿನೋಕಾ ಎಂದು ಕರೆಯುವ ಇದು ವೈದ್ಯರಿಗೂ ಒಂದು ರೀತಿಯ ಕಗ್ಗಂಟು. ಇದು ಮಹಿಳೆಯರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

ತೆರೆದ ಕರೋನರಿ: MINOCA ಎಂದರೆ Myocardial infarction with non & obstructive Coronory Arteries – ಅಂದರೆ ಹೃದಯದ ಮುಖ್ಯ ರಕ್ತನಾಳವಾದ ಕರೋನರಿ ಆರ್ಟರಿಯಲ್ಲಿ ಏನೂ ಅಡಚಣೆವಿಲ್ಲದಿದ್ದಾಗ್ಯೂ ಕಾಣಿಸಿಕೊಳ್ಳುವ ಹೃದಯಾಘಾತ. ಅದೇ ತರಹದ ಇನ್ನೊಂದು ಕಾಯಿಲೆ ಇದೆ. ಅದು INOCA (Ischemia with non & obstructed Coronory Arteries). ಇದರಲ್ಲಿಯೂ ಮೇಲಿನ ತರಹದ್ದೇ ರೋಗಲಕ್ಷಣಗಳಿರುತ್ತವೆ. ಆದರೆ ಇದು ಹೃದಯಾಘಾತವಲ್ಲ. ಹೃದಯಕ್ಕೆ ರಕ್ತದ ಕೊರತೆಯಿಂದ ಆಗುವ ಆಂಜೈನಾ ರೀತಿಯ
ತಾತ್ಕಾಲಿಕ ಒಂದು ಅವಘಡ.

ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಎಂದು ನಿರ್ಧರಿಸುವ ಸಂದರ್ಭದಲ್ಲಿ ಹೃದಯಕ್ಕೆ ರಕ್ತ ಪೂರೈಸುವ ಮುಖ್ಯ ಕರೋನರಿ ಆರ್ಟರಿಯಲ್ಲಿ ಅಡಚಣೆಯನ್ನು ವೈದ್ಯರು ನಿರೀಕ್ಷೆ ಮಾಡುತ್ತಾರೆ. ಹಾಗಿದ್ದಲ್ಲಿ ರಕ್ತವನ್ನು ಹೃದಯಕ್ಕೆ ಪೂರೈಸಲು ಬೈಪಾಸ್ ಶಸ್ತ್ರಕ್ರಿಯೆ, ಆಂಜಿಯೋಪ್ಲಾಸ್ಟಿ ಅಥವಾ
ಸ್ಟೆಂಟ್‌ಗಳ ಬಳಕೆ – ಈ ತರಹದ ಚಿಕಿತ್ಸೆಗಳನ್ನು ಕೈಗೊಳ್ಳುತ್ತಾರೆ. ನಂತರ ಹಲವು ಔಷಧಗಳು, ಆಹಾರದಲ್ಲಿ ಕೆಲವು ಬದಲಾವಣೆಗಳು ಹಾಗೂ
ದೈನಂದಿನ ಜೀವನ ಕ್ರಮದಲ್ಲಿ ಬದಲಾವಣೆಗಳನ್ನು ಸೂಚಿಸುತ್ತಾರೆ.

ರಕ್ತನಾಳಗಳಲ್ಲಿ ಪುನಃ ರಕ್ತದ ಪೂರೈಕೆಗೆ ತಡೆ ಉಂಟುಮಾಡುವ ಪ್ಲೇಕ್ ಗಳು ಹಾಗೂ ರಕ್ತದುಂಡೆಗಳು ನಿರ್ಮಾಣವಾಗದಿರಲಿ ಎಂಬುದು ಇವೆಲ್ಲವುದರ ಮುಖ್ಯ ಉದ್ದೇಶ. ಮೊದಲು ಪ್ರಸ್ತಾಪಿಸಿದ ಮಹಿಳೆ ರೀಟಾ ಕೊನಾರ್ಡ್ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಿದ್ದಾರೆ. ಸಸ್ಯಾಹಾರವನ್ನೇ ಸೇವಿಸುವ ಆಕೆಗೆ ರಕ್ತದೊತ್ತಡ ಮತ್ತು ಏರಿದ ಕೊಲೆಸ್ಟ್ರಾಲ್ ಮಟ್ಟ – ಈ ರೀತಿಯ ತೊಂದರೆಗಳಿಲ್ಲ. ಕುಟುಂಬದಲ್ಲಿ ಆಕೆಯ ಹಿಂದಿನವರಿಗೆ ಹೃದಯಾಘಾತವಾದ ಬಗ್ಗೆ ಮಾಹಿತಿ ಇಲ್ಲ. ರಾತ್ರಿಯ ಆ ಘಟನೆಯ ನಂತರ ಆಕೆಯ ಕುಟುಂಬ ವೈದ್ಯರು ಬಹುಶಃ ಇದು
ಹೃದಯಾಘಾತವೇ ಇರಬೇಕೆಂದು ಸಂದೇಹಿಸಿ ತುರ್ತು ಚಿಕಿತ್ಸಾ ಘಟಕಕ್ಕೆ ಬೇಟಿ ಕೊಟ್ಟು ಅಲ್ಲಿ ವಿವರವಾದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ
ನೀಡಿದರು.

ರಕ್ತ ಪರೀಕ್ಷೆಯಲ್ಲಿ ಟ್ರೊಪೋನಿನ್ ಎಂಬ ಪ್ರೋಟೀನ್‌ನ ಮಟ್ಟ ಹೆಚ್ಚಿರುವುದು ಕಂಡುಬಂದು ಹೃದಯಾಘಾತ ಆಗಿರುವುದನ್ನು ವೈದ್ಯರು ದೃಢೀಕರಿಸಿ ದರು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಆಂಜಿಯೋಗ್ರಾಮ್ ಪರೀಕ್ಷೆ ಕೈಗೊಂಡರು. ಇದು ಹೆಚ್ಚಿನವರಿಗೆ ಗೊತ್ತಿರುವಂತೆ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ಒಳಗಿನ ಚಿತ್ರಣ ಕೊಡುವ ಇಮೇಜಿಂಗ್ ಪರೀಕ್ಷೆ. ಆಕೆಯ ಮುಖ್ಯ ಕರೋನರಿ ಆರ್ಟರಿಯಲ್ಲಿ ಯಾವುದೇ ಪ್ಲೇಕ್ ಗಳು, ರಕ್ತ
ಹೆಪ್ಪುಗಟ್ಟುವಿಕೆಯ ತುಣುಕುಗಳು ಇರಲಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

ಮಹಿಳೆಯರಲ್ಲಿನ ಒಟ್ಟೂ ಹೃದಯಾಘಾತದ ಶೇ.25 – ೩೦ರಷ್ಟು ಈ ಮಿನೋಕಾ ರೀತಿಯದ್ದಾಗಿರುತ್ತದೆ. ಪುರುಷರಲ್ಲಿಯಾದರೆ ಈ ಸಂಖ್ಯೆ
ಶೇ.10 ಕ್ಕಿಂತ ಕಡಿಮೆ ಎಂದು ಅಮೆರಿಕದ ಲಾಸ್ ಎಂಜಲೀಸ್‌ನ ಮಹಿಳಾ ಹೃದಯ ಕೇಂದ್ರದ ನಿರ್ದೇಶಕ ಡಾ.ಸಿ.ನೋಯಲ್ ಬೈರಿ ಮೆರ್ಜ್
ಅಭಿಪ್ರಾಯ ಪಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹೃದಯಾಘಾತ ಮತ್ತು ಈ ರೀತಿಯ ಮಿನೋಕಾ –
ಇವೆರಡೂ ಒಂದೇ ರೀತಿಯ ರೋಗ ಲಕ್ಷಣ ಹೊಂದಿರುತ್ತವೆ. ಹೆಚ್ಚಿನ ತೊಂದರೆ ಇಲ್ಲದ್ದರಿಂದ ಈ ತರಹದ ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳಿ ಮುಂದಿನ ಅಟ್ಯಾಕ್ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದೆ ಆತಂಕಕ್ಕೆ ಒಳಗಾಗುತ್ತಾರೆ.

ಮೊದಲು ಉಲ್ಲೇಖಿಸಿದ ಮಹಿಳೆ
ಕೋನಾರ್ಡ್‌ರಿಗೆ ನಂತರದ ಮೂರು ವರ್ಷಗಳಲ್ಲಿ ೨೦ ಬಾರಿ ಈ ರೀತಿಯ ಅನುಭವವಾಯಿತು. ಆದರೆ ಯಾವುದೂ ಮೊದಲಿನ ಬಾರಿಯಷ್ಟು ತೀವ್ರ
ಪ್ರಮಾಣzಗಿರಲಿಲ್ಲ. ಅವೆಲ್ಲವೂ ಹೃದಯಾಘಾತವೇ ಎಂದು ಹೇಳಲು ಬರುವುದಿಲ್ಲ. ಆಕೆ ಹೃದಯ ತಜ್ಞರಲ್ಲಿ ಪರೀಕ್ಷಿಸಿಕೊಂಡು ಅವರ ಸಲಹೆ
ಪಡೆದಳು. ಕರೋನರಿ ರಕ್ತನಾಳದಲ್ಲಿ ಒಂದು ರೀತಿಯ ನಡುಕವಿರಬೇಕೆಂದು ಭಾವಿಸಿ ಅವರು ಆಂಜೈನಾ ರೀತಿಯ ಎದೆನೋವಿಗೆ ಕೊಡುವ ಔಷದ
ನೈಟ್ರೋಗ್ಲಿಸರೀನ್ ಅನ್ನು ಸೂಚಿಸಿದರು. ತನ್ನ ಈ ರೀತಿಯ ರೋಗ ಲಕ್ಷಣಕ್ಕೆ ತನಗೆ ಆಗುತ್ತಿರುವ ಒತ್ತಡದ ಸಮಸ್ಯೆ ಇರಬಹುದೆಂದು ಆಕೆ ಸ್ಥಳೀಯ
ಸರ್ಕಾರಿ ಸಂಸ್ಥೆಯಲ್ಲಿನ ಆರ್ಥಿಕ ನಿರ್ದೇಶಕರ ತನ್ನ ಕೆಲಸವನ್ನು ತ್ಯಜಿಸಿದಳು.

ಕಾರಣ ಏನು?

ಕೋನಾರ್ಡ್‌ರಿಗೆ ಆದಂತೆ ಮಿನೋಕಾ ಅಥವಾ ಇನೋಕಾ ಕಾಯಿಲೆಗಳು ಒಬ್ಬ ವ್ಯಕ್ತಿಯ ಜೀವನ ದಲ್ಲಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ೨೦೨೩ ರ ಜನವರಿಯಲ್ಲಿ ಈ ಬಗೆಗೆ ಒಂದು ಸಮೀಕ್ಷೆ ನಡೆಸಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಇನೋಕಾ ರೋಗಿಗಳ ಗುಂಪಿನ ೨೯೭ ಜನರಲ್ಲಿ ವಿವರ ಸಂಗ್ರಹಿಸಲಾಯಿತು. ಅವರಲ್ಲಿ ಶೇ.೩೪ ವ್ಯಕ್ತಿಗಳು ಎದೆನೋವು, ಎದೆಯ ಮೇಲೆ ಒತ್ತಡ ಅಥವಾ ಅಸಹಜ ಅನುಭವ – ಈ ರೀತಿಯ ಲಕ್ಷಣ, ತೊಂದರೆಗಳನ್ನು ಮೂರು ವರ್ಷಗಳಷ್ಟು ಅನುಭವಿಸಿದ ಮೇಲೆ ಅವರಲ್ಲಿ ಇನೋಕಾ ಕಾಯಿಲೆ ಎಂದು ರೋಗ ಪತ್ತೆ ಹಚ್ಚಲಾಯಿತು.

ಅವರ ರೋಗ ಲಕ್ಷಣ ಹೃದಯಕ್ಕೆ ಸಂಬಂಧಿಸಿದ್ದೇ ಅಲ್ಲ ಎಂದು ಶೇ. ೭೮ ರೋಗಿಗಳಿಗೆ ಒಂದಲ್ಲ ಒಂದು ಬಾರಿ ಹೇಳಲಾಗಿತ್ತು. ಅವರ ಈ ರೀತಿಯ ತೊಂದರೆಯಿಂದ ಶೇ.೭೫  ಜನರು ತಮ್ಮ ಕೆಲಸದ ಅವಽಯನ್ನು ಕಡಿಮೆ ಮಾಡಿದರು ಅಥವಾ ಕೆಲಸ ಮಾಡುವುದನ್ನೇ ನಿಲ್ಲಿಸಿದರು. ಅವರಲ್ಲಿನ ಶೇ.೭೦ ವ್ಯಕ್ತಿಗಳು ಈ ಕಾರಣದಿಂದ ತಮ್ಮ ಮಾನಸಿಕ ಆರೋಗ್ಯ ಮತ್ತು ಜೀವನದ ಬಗೆಗಿನ ಆಶಾಭಾವನೆ ಬಹಳಷ್ಟು ಕಡಿಮೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶೇಕಡಾ ೫೪ ವ್ಯಕ್ತಿಗಳು ಈ ರೀತಿಯ ಲಕ್ಷಣಗಳಿಂದ ತಮ್ಮ ಪತಿ ಅಥವಾ ಪತ್ನಿಯೊಂದಿಗಿನ ಸಂಬಂಧ ಬಹಳಷ್ಟು ಹಾಳಾಗಿದೆ ಎಂದು ಅಭಿಮತ ಪಟ್ಟರು.

ಹೃದಯದಲ್ಲಿ ಏನಾಗುತ್ತದೆ ?
ಅಮೆರಿಕದ ಹೃದಯ ತಜ್ಞ ಡಾ ಹಾರ್ಮನಿ ರೆನಾಲ್ಡ್ಸ್ ಮತ್ತು ಸಹೋದ್ಯೋಗಿಗಳು ಈ ರೀತಿಯ ಹೃದಯಾಘಾತಕ್ಕೆ ಒಳಪಟ್ಟ ೩೦೧ ಮಹಿಳೆಯರ ರಕ್ತನಾಳಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದರು. ೨೦೨೧ರಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಅವರು ಭಿನ್ನ ರೀತಿಯಲ್ಲಿ ಈ ಸಮಸ್ಯೆಯ ಮೂಲ ಕಂಡುಹಿಡಿಯಲು ಉದ್ಯುಕ್ತರಾದರು. ಸಾಮಾನ್ಯವಾಗಿ ಇಂತಹಾ ಸಂದರ್ಭಗಳಲ್ಲಿ ಉಪಯೋಗಿಸುವ ಆಂಜಿಯೋಗ್ರಾಮ್‌ಗಳ ಬದಲಾಗಿ ನಾನಾ ಆಧುನಿಕ ಇಮೇಜಿಂಗ್ ತಾಂತ್ರಿಕತೆ ಅದರಲ್ಲಿಯೂ ಹೈರ್ಯ ರೆಸಲ್ಯೂಶನ್‌ನ ತಾಂತ್ರಿಕತೆ ಉಪಯೋಗಿಸಿದರು.

ಆಗ ಅವರು ಮುಖ್ಯ ಕರೋನರಿ ರಕ್ತನಾಳವನ್ನು ಅಲ್ಲದೆ ಬೇರೆಡೆಗೆ ತೊಂದರೆಗೆ ಕಾರಣ ಹುಡುಕಲು ಸಾಧ್ಯವಾಯಿತು. ಈ ಅಧ್ಯಯನದ ಶೇ.೮೫
ರೋಗಿಗಳಲ್ಲಿ ಸಣ್ಣ ಸಣ್ಣ ರಕ್ತನಾಳಗಳಲ್ಲಿನ ಸಣ್ಣ ಸಣ್ಣ ಪ್ಲೇಕ್ಸ್‌ಗಳು ಮತ್ತು ಹೆಪ್ಪುಗಟ್ಟಿದ ರಕ್ತದ ಉಂಡೆಗಳನ್ನು ಹುಡುಕಿ ಅವೇ ಈ ಸಮಸ್ಯೆಗೆ ಕಾರಣ ಎಂದು ಹೇಳಲು ಸಾಧ್ಯವಾಯಿತು. ರಕ್ತನಾಳದ ವ್ಯವಸ್ಥೆಯನ್ನು ಒಂದು ಮರಕ್ಕೆ ಹೋಲಿಸಬಹುದು. ಅದರಲ್ಲಿ ದೊಡ್ಡ ದೊಡ್ಡ ಕಾಂಡಗಳಿವೆ, ನಂತರ ಸಣ್ಣ ಸಣ್ಣ ಟೊಂಗೆಗಳಿವೆ. ಹೆಪ್ಪುಗಟ್ಟಿದ ರಕ್ತದುಂಡೆ ಕಾಂಡದಲ್ಲಿ ಉತ್ಪನ್ನಗೊಂಡರೆ ಅದು ಸಣ್ಣ ಸಣ್ಣ ಟೊಂಗೆಗೆ ಚಲಿಸುತ್ತದೆ.

ರಕ್ತದುಂಡೆ ತುಂಬಾ ದೊಡ್ಡದಿದ್ದಾಗ ಇಡೀ ಒಂದು ದೊಡ್ಡ ಟೊಂಗೆಯನ್ನೇ ನಾಶಮಾಡಬಲ್ಲದು. ಪರಿಣಾಮ ಎಂದರೆ ಹೃದಯದ ಮಾಂಸಖಂಡದ
ಸ್ವಲ್ಪ ಭಾಗ ಜೀವ ಕಳೆದುಕೊಂಡು, ಮಾಂಸಖಂಡದ ಸ್ವಲ್ಪ ಭಾಗದ ನಷ್ಟವಾಗುತ್ತದೆ. ಈ ರೀತಿಯ ಮಿನೋಕಾ ರೋಗಿಗಳಲ್ಲಿ ಈ ತರಹದ ವಿದ್ಯ ಮಾನ ಸಂಭವಿಸುತ್ತದೆ ಎಂದು ಹೃದಯ ತಜ್ಞ ವೈದ್ಯ ಡಾ. ರೆನಾಲ್ಡ್ಸ್ ಅಭಿಪ್ರಾಯ ಪಡುತ್ತಾರೆ. ಎಷ್ಟೋ ಬಾರಿ ಈ ರೀತಿಯ ರೋಗಿಗಳ ಕಾಯಿಲೆ ಪತ್ತೆಯಾಗದೆ ಅವರಿಗೆ ಹೃದಯ ತೊಂದರೆಯೇ ಅಲ್ಲ ಎಂದು ತಪ್ಪಾಗಿ ಹೇಳಲ್ಪಡುತ್ತದೆ. ಕೆಲವೊಮ್ಮೆ ಇದು ಜೀವಕ್ಕೇ ಮಾರಕವಾಗಬಹುದು.

ಮಿನೋಕಾ ಅಟ್ಯಾಕ್ ಆಗಿ ನಾಲ್ಕು ವರ್ಷದ ನಂತರ ಅವರು ಮರಣ ಹೊಂದುವ ಸಾಧ್ಯತೆ ಶೇಕಡ ೧೩ ಆದರೆ ಶೇಕಡ ೭ ವ್ಯಕ್ತಿಗಳಲ್ಲಿ ಮತ್ತೊಮ್ಮೆ ಹೃದಯಾಘಾತ ಆಗುವ ಸಂಭವವಿರುತ್ತದೆ.

ಮಿನೋಕಾ ಹೆಚ್ಚುತ್ತಿದೆಯೇ?  
ಈಗ ಮಿನೋಕಾ ಎಂದು ಗುರುತಿಸಿರುವ ಈ ಹೃದಯಘಾತದ ಬಗ್ಗೆ ಕೆಲವು ದಶಕಗಳ ಮೊದಲೇ ವಿವರಿಸಲಾಗಿತ್ತು. ೧೯೩೯ ರ ಆರ್ಚೀವ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ನ್ಯೂಯಾರ್ಕ್ ನ ಎರಡು ವೈದ್ಯರು ಹೃದಯಾಘಾತದ ರೋಗಿಗಳ ಶವ ಪರೀಕ್ಷೆಯ ವಿವರಗಳನ್ನು
ದಾಖಲಿಸಿದ್ದಾರೆ.

ಅಂತಹ ಹಲವು ರೋಗಿಗಳಲ್ಲಿ ಕರೋನರಿ ರಕ್ತನಾಳದಲ್ಲಿ ತೊಂದರೆಯೇ ಇರಲಿಲ್ಲ. ಈಗ ಅದು ಮುನ್ನೆಲೆಗೆ ಬರಲು ಎರಡು ಮುಖ್ಯ ಕಾರಣಗಳಿವೆ. ಹೊಸ ರೀತಿಯ ತಾಂತ್ರಿಕತೆಯ ಈ ದಿನಗಳಲ್ಲಿ ಸಣ್ಣ ಸಣ್ಣ ರೀತಿಯ ಹೃದಯಾಘಾತಗಳನ್ನು ಪತ್ತೆ ಹಚ್ಚುವ ಹೈ ಸೆನ್ಸಿಟಿವಿಟಿ ಟ್ರೋಪೋನಿನ್
ಪರೀಕ್ಷೆಗಳು ಲಭ್ಯವಿವೆ. ಆದರೆ ಅದಕ್ಕೆ ಪೂರಕವಾದ ಇಮೇಜಿಂಗ್ ವ್ಯವಸ್ಥೆ ಇಲ್ಲದಿದ್ದಾಗ ಆಂಜಿಯೋಗ್ರಾಂನಲ್ಲಿ ಕರೋನರಿ ರಕ್ತನಾಳದಲ್ಲಿ ಏನೂ
ತೊಂದರೆ ಇಲ್ಲದಿzಗ ವೈದ್ಯರು ಸಂದಿಗ್ದತೆಗೆ ಒಳಗಾಗುತ್ತಾರೆ. ಹೃದಯದ ಕಾಯಿಲೆ ಇಂತಹವರಲ್ಲಿಯೇ ಕಾಣಿಸಿಕೊಳ್ಳುವುದು ಎಂಬ ಹಳೆಯ
ನಂಬಿಕೆ, ಅಭಿಪ್ರಾಯಗಳು ಈಗ ಬದಲಾಗಿವೆ.

ಪುರುಷ ಮತ್ತು ಮಹಿಳೆ – ಇಬ್ಬರಲ್ಲೂ ಇದು ಈಗ ಮರಣಕ್ಕೆ ಕಾರಣವಾಗುವ ಮುಖ್ಯ ಕಾಯಿಲೆ. ಇತ್ತೀಚಿನವರೆಗೂ ಪುರುಷರಲ್ಲಿ ಮಾತ್ರ ಹೃದಯಾ
ಘಾತವಾಗುತ್ತದೆ ಎಂಬ ನಂಬಿಕೆಯಲ್ಲಿ ಮಹಿಳೆಯರಲ್ಲಿ ಈ ಕಾಯಿಲೆಯ ಲಕ್ಷಣ ಕಂಡು ಬಂದರೆ ಅದನ್ನು ನಿರ್ಲಕ್ಷ್ಯ ಮಾಡುವ ಪ್ರವೃತ್ತಿ ಇತ್ತು.
ಮಿನೋಕಾ ಮತ್ತು ಇನೋಕಾ – ಮಹಿಳೆಯರಲ್ಲಿ ಏಕೆ ಜಾಸ್ತಿ ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಬಹುಶ: ಹಾರ್ಮೋನುಗಳು, ಹಾರ್ಮೋನುಗಳ ಚಿಕಿತ್ಸೆ ಅಥವಾ ಮಹಿಳೆಯರು ಪುರುಷರಿಗಿಂತ ಚಿಕ್ಕದಾದ ದೇಹ ಹೊಂದಿರುವುದರಿಂದ ಅವರ ಹೃದಯ ಮತ್ತು ರಕ್ತನಾಳಗಳು ಸ್ವಲ್ಪ ಸಣ್ಣ
ಗಾತ್ರದವು. ಹಾಗಿದ್ದಾಗ ಸಣ್ಣ ಸಣ್ಣ ಆಡತಡೆಗಳು, ಪ್ಲೇಕ್ ಗಳು ಜಾಸ್ತಿ ತೊಂದರೆ ಕೊಡುತ್ತವೆ. ಮಿನೋಕಾ ಮತ್ತು ಇನೋಕಾ ಕಾಯಿಲೆಗಳಿಗೆ ಸೂಕ್ತ
ಚಿಕಿತ್ಸೆಗಳಿವೆ.