ತನ್ನಿಮಿತ್ತ
ಡಾ.ಮಹೇಶ್ ಗೋಪಾಲಶೆಟ್ಟಿ
ಹೆಪಟೋ-ಪ್ಯಾಂಕ್ರಿಯಾಟೋ ಹಿರಿಯ ಸಲಹೆಗಾರರು
ಇಂದು ವಿಶ್ವ ಹೆಪಟೈಟಿಸ್ ದಿನಾಚರಣೆ. ಯಕೃತ್‌ನಲ್ಲಿ (ಲಿವರ್) ಉರಿಯೂತವನ್ನುಂಟು ಮಾಡುವ ಲಕ್ಷಣಗಳನ್ನೊಳಗೊಂಡ ಈ ರೋಗವನ್ನು ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಹೆಪಟೈಟಿಸ್‌ನಲ್ಲಿ ಹೆಪಟೈಟಿಸ್ ಎ, ಬಿ, ಸಿ ಮತ್ತು ಇ ಎಂದು ಗುರುತಿಸುವ ವೈರಸ್‌ನಿಂದ ಹರಡಲಿದೆ.
2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನವನ್ನು ಆಚರಣೆ ಮಾಡುತ್ತಾ ಬರಲಾಗಿದೆ. ನಮ್ಮ ದೇಶದಲ್ಲಿ ಶೇ.4ರಷ್ಟು ಜನ ಈ ಹೆಪಟೈಟಿಸ್ ರೋಗದಿಂದ ಬಳಲುತ್ತಿದ್ದಾರೆ. ಪಿತ್ತಜನಕಾಂಗವು ಮನುಷ್ಯನ ದೇಹದ ಮುಖ್ಯ ಅಂಗವಾಗಿದ್ದು, ಕಾರ್ಬೋಹೈಡ್ರೆಟ್ಸ ಪ್ರೊಟಿನ್ ಗಳನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತದೆ. ಹೆಪಟೈಟಿಸ್ ಎ ಮತ್ತು ಇ ವೈರಸ್‌ಗಳು ಕಲುಶಿತ ನೀರು ಕುಡಿಯುವುದು, ಸ್ವಚ್ಛವಿರದ ತರಕಾರಿ, ಹಣ್ಣುಗಳನ್ನು ಸೇವಿಸುವುದರಿಂದ ಬರಲಿದೆ.
ಈ ವೈರಸ್ ಹೆಚ್ಚಾಗಿ ಹಿಂದುಳಿದ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಹೆಪೆಟೈಟಿಸ್ ಬಿ ಮತ್ತು ಸಿ ವೈರಸ್‌ಗಳು ಸೋಂಕು ಈಗಾಗಲೇ ತಗುಲಿರುವ ವ್ಯಕ್ತಿಯ ರಕ್ತದ ಮೂಲಕ ಬರುವ ಸಾಧ್ಯತೆ ಹೆಚ್ಚು. ಬಳಸಿದ ಇಂಜಕ್ಷನ್, ರಕ್ತ ದಾನದ ವೇಳೆ ಎಚ್ಚರಿಕೆ ವಹಿಸದೇ ಇದ್ದರೆ ಹೆಪಟೈಟಿಸ್ ಬಿ ಬರುವ ಸಾಧ್ಯತೆ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ರಕ್ತ ದಾನದ ವೇಳೆ ಹೆಚ್ಚು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರಿಂದ ಈ ವೈರಸ್ ಹರಡುವಿಗೆ ನಿಯಂತ್ರಣದಲ್ಲಿ. ಇನ್ನೂ ಹೆಪಟೈಟಿಸ್ ಸಿ ಹೆಚ್ಚು ಕುಡಿತ ಹಾಗೂ ಡ್ರಗ್ ಸೇವನೆಯಿಂದ ಬರಲಿದೆ. ಹೀಗಾಗಿ ಈ ವೈರಸ್ ಮುಂದು ವರೆದ ದೇಶಗಳಲ್ಲಿ ಕಂಡು ಬರುತ್ತವೆ.
ಹೆಪಟೈಟಿಸ್ ಎ ಮತ್ತು ಇ ವೈರಸ್‌ನಿಂದ ಸಾವು: ಈ ಎರಡು ವೈರಸ್‌ಗಳು ಹೆಚ್ಚು ಡೇಂಜರ್. ಏಕೆಂದರೆ, ಈ ವೈರಸ್ ತಗುಲಿದ ವ್ಯಕ್ತಿಯ ಲಿವರ್ ಒಂದೆರಡು ವಾರದ ಫೈಲ್ಯೂರ್ ಆಗುವ ಸಾಧ್ಯತೆ ಇರುವುದರಿಂದ ಸಾವು ಸಂಭವಿಸಬಹುದು. ಹೀಗಾಗಿ ಸ್ವಚ್ಛತೆಗೆ ಹಾಗೂ ಶುದ್ಧ ಕುಡಿಯುವ ನೀರನ್ನು ಸೇವಿಸಬೇಕು. ಇನ್ನು ಹೆಪಟೈಟಿಸ್ ಬಿ ಮತ್ತು ಸಿ ವೈರಸ್‌ಗಳಿಂದ ಶೀಘ್ರವೇ ಸಾವು ಬಾರದಿದ್ದರೂ, ಈ ರೋಗದ ಪತ್ತೆತಾದ ಪ್ರಾರಂಭದ ಚಿಕಿತ್ಸೆ ಪಡೆಯಬೇಕು, ಇಲ್ಲವಾದರೆ ಲಿವರ್ ಫೈಲ್ಯೂರ್ ಆಗುವ ಸಾಧ್ಯತೆ ಹೆಚ್ಚು.
ರೋಗ ಲಕ್ಷಣಗಳೇನು: ಈ ವೈರಸ್ ತಗುಲಿದ ವ್ಯಕ್ತಿಯಲ್ಲಿ , ಆಯಾಸ, ಕೀಲು ನೋವು, ಸಣ್ಣಗೆ ಜ್ವರ, ತಲೆ ಸುತ್ತುವಿಕೆ, ಆಂತಿ, ಹಸಿವಾಗದೇ ಇರುವುದು, ಹೊಟ್ಟೆ ನೋವು ಹಾಗೂ ಚರ್ಮ ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುತ್ತದೆ.
ಚಿಕಿತ್ಸೆ ಏನು?: ಹೆಪಟೈಟಿಸ್ ಬಿ ಮತ್ತು ಎಗೆ ಲಸಿಕೆ ಲಭ್ಯವಿದೆ. ಪ್ರಾರಂಭದ ಲಸಿಕೆ ಹಾಕಿಸಿಕೊಳ್ಳುವುದರಿಂದ ಈ ವೈರಸ್‌ನಿಂದ ರಕ್ಷಣೆ ಪಡೆಯಬಹುದು. ಇನ್ನು ಹೆಪಟೈಟಿಸ್ ಸಿ ಮತ್ತು ಇ ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ಸಾಗುತ್ತಿದ್ದು, ಚಿಕಿತ್ಸೆ ಮಾತ್ರ ಲಭ್ಯವಿದೆ. ಈ ಚಿಕಿತ್ಸೆ ದುಬಾರಿ.
ಹೀಗಾಗಿ ರೋಗ ತಗುಲುವುದಕ್ಕೂ ಮುನ್ನವೇ ಹೆಪಟೈಟಿಸ್ ಬಗ್ಗೆ ಜಾಗೃತಿ ಹೊಂದಬೇಕು. ಈಗಾಗಲೇ ವಿಶ್ವಾದ್ಯಂತ ಈ ಬಗ್ಗೆ ಪ್ರತಿ ವರ್ಷ ಜುಲೈ 28ರಂದು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬರು ಹೆಪಟೈಟಿಸ್ ವೈರಸ್ಗಳ ಬಗ್ಗೆ ತಿಳಿದುಕೊಂಡು ಮುನ್ನೆಚ್ಚರಿಕೆ ಹೊಂದಿರಬೇಕು.