Monday, 25th November 2024

ಸುಖೀ ಹಿಂದೂಸ್ಥಾನಕ್ಕೆ ಹಲವು ಸೂತ್ರಗಳು

ರಾವ್ – ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ನಮ್ಮದು ಸಂಪ್ರದಾಯಸ್ಥ ಕುಟುಂಬ. ತಾಯಿತಂದೆಯರದ್ದು ಉದಾರ ಮನಸ್ಥಿತಿ. ನನಗೆ ಬಹಳ ತಡವಾಗಿ ಮನದೊಳಗೆ ಇಳಿದ ವಿಷಯವೇನೆಂದರೆ ಉದಾರ ಧೋರಣೆ ಸಂಪ್ರದಾಯಸ್ಥರ ಹೆಚ್ಚು. ವೃತ್ತಿ ಜೀವನದಲ್ಲಂತೂ ಸೆಕ್ಯುಲರ್ ವಾತಾವರಣ ಢಾಳಾಗೇ ಇತ್ತು. ನಾನೂ ಸೆಕ್ಯುಲರೇ. ಲಂಕೇಶ್ ಪತ್ರಿಕೆಯನ್ನು ಬೇರೆ ಓದುತ್ತಿದ್ದೆ.

ಹಾಗಾಗಿ, ಭ್ರಷ್ಟಾಚಾರಕ್ಕಿಂತ ಕೋಮುವಾದವೇ ದೇಶದ ಮೊದಲ ಶತ್ರು ಎಂದು ಲಂಕೇಶ್ ಊದುತ್ತಿದ್ದ ತುತ್ತೂರಿ ನನ್ನ ಮೇಲೂ ಪರಿಣಾಮ ಬೀರಿತ್ತು. ವಾಸ್ತವದ ಪರಿಚಯ ವಾಗುವ ಹೊತ್ತಿಗೆ ತಡವಾಗಿತ್ತು. ತಡವಾದರೂ, ಲಂಕೇಶರ ನಿಲುವು ಪೊಳ್ಳೆಂದು ಅರಿವಾದದ್ದೇ ಲಾಭ ಎಂದುಕೊಂಡೆ. ಅರಾಜಕತೆಗೆ ಮತ್ತೊಂದು ಹೆಸರಾದ ಬಿಹಾರಕ್ಕೂ, ಸುಸಂಸ್ಕೃತ ಕರ್ನಾಟಕಕ್ಕೂ ಇದ್ದ ಅಪಾರ ವ್ಯತ್ಯಾಸ ಕಾಣೆಯಾಗಿ ನಮ್ಮ ರಾಜ್ಯದಲ್ಲೂ ಬಿಹಾರವನ್ನು ಮೀರಿಸುವಷ್ಟು ಬಿಳೀಖಾದಿ ಖದೀಮರು ಜನುಮ ತಾಳಿದ್ದು ಭ್ರಷ್ಟಾಚಾರಕ್ಕೆ ಪರವಾನಗಿ ದೊರೆತ ಈ ಪರಿಸರದಲ್ಲೇ.

ಲಂಕೇಶರ ದನಿಯೇ ಕೆಲವು ಇತರೇ ಪತ್ರಿಕೆಗಳಲ್ಲೂ ಪ್ರತಿಧ್ವನಿಸಿ, ಎದೆ ಸೀಳಿದರೆ ಎರಡಕ್ಷರ ಕಾಣದ ಪುಡಾರಿಗಳೂ ಮಾತೆತ್ತಿದರೆ ಕೋಮುವಾದದ ಬೆದರುಗೊಂಬೆಯತ್ತ ಬೆಟ್ಟು ಮಾಡುತ್ತ ರಾಜ್ಯವನ್ನು ಲೂಟಿಮಾಡುತ್ತಲೇ ಬಂದರು. ಅತ್ತ ಅಲ್ಪಸಂಖ್ಯಾತರ
ತುಷ್ಟೀ ಕರಣವೂ ಎಗ್ಗಿಲ್ಲದೇ ಸಾಗಿ ಮುಸ್ಲಿಮರ ಆರ್ಭಟಕ್ಕೆ ವಿದ್ಯುಕ್ತ ರಕ್ಷಣೆ ಸಿಕ್ಕಿತು; ಭ್ರಷ್ಟಾಚಾರವೂ ಅಪೇಕ್ಷಣೀಯ ಮೌಲ್ಯ ವೆಂಬಂತೆ ಫಳಫಳನೆ ಮಿಂಚಿತು. ಈ ಎರಡು ಪೋಷಕಾಂಶಗಳನ್ನು ಉಂಡು ಬೆಳೆದವರೇ ಇಂದು ಮುಂಚೂಣಿಯಲ್ಲಿರುವ ಎಲ್ಲ ಪಕ್ಷಗಳ ನಾಯಕರೆಂಬ ಇಂದಿನ ಕಳೆಗಳು.

ಕೋಮುವಾದವೆಂಬ ಹೆಮ್ಮಾರಿಯ ಮುಂದೆ ಭ್ರಷ್ಟಾಚಾರವೆಂಬ ಪಿಡುಗು ನೆಗಡಿ-ಕೆಮ್ಮಿನಂತೆ ಎಂದು ಸಮಾಜದ ಕಣ್ಣಿಗೆ ಮಂಕುಬೂದಿ ಎರಚಿದ ಮಾಧ್ಯಮವೂ ಭ್ರಷ್ಟಾಚಾರದ ಫಲಾನುಭವ ಪಡೆಯುತ್ತಿರುವುದು ಸುಳ್ಳಲ್ಲ. ನೈತಿಕತೆಯನ್ನು ಅಡವಿಟ್ಟ ಮಾಧ್ಯಮ ಅಸಲೀ ಕೋಮುವಾದಿ ಪಕ್ಷಳಾದ ಕಾಂಗ್ರೆಸ್ ಮತ್ತು ಜನತಾ ದಳದ ಜಾತಿರಾಜಕಾರಣಕ್ಕೆ ಸೆಕ್ಯುಲರ್ ಲೆಪ್ಪ ತಟ್ಟಿದ್ದ ರಿಂದಲೇ ಅವುಗಳ ಭ್ರಷಾಚಾರ ಎ ಮೀರಿದ್ದು. (ರಾಜ್ಯ ಬಿಜೆಪಿ ಸರಕಾರದಲ್ಲಿರುವವರೆಲ್ಲರೂ ಉತ್ತಮರು ಎಂದರ್ಥವಲ್ಲ.) ರಾಷ್ಟ್ರದ ರಾಜಧಾನಿಯ ಲಟ್ಯನ್ (ಔಠಿqsಛ್ಞಿo) ಮಾಧ್ಯಮದ ರಕ್ತಸಂಬಂಽಗಳು ಕರ್ನಾಟಕದನು ಕಡಿಮೆ ಇಲ್ಲ.

ರಾಡಿಯಾ ಟೇಪ್ ಹಗರಣ ಬಯಲಿಗೆ ಬರುವುದಕ್ಕೆ ಮುಂಚಿನಿಂದಲೇ ಮಾಧ್ಯಮದ ಮಂದಿ ರಾಜಕಾರಣಿಗಳಿಗೆ ಧೂರ್ತ ಆಲೋಚನೆ ಗಳೊಂದಿಗೆ ಕಿವಿಕಚ್ಚುವ ವ್ಯವಸ್ಥೆ ಇತ್ತು, ಇದೆ. ಸಿದ್ಧರಾಮಯ್ಯ ತನ್ನ ಬೇಳೆ ಬೇಯಿಸಿಕೊಳ್ಳಲು ಲಿಂಗಾಯತ ಸಮಾಜವನ್ನು ಒಡೆದದ್ದು  ತಾಜಾ ಉದಾಹರಣೆಯಷ್ಟೆ. ಮಾಧ್ಯಮದ ಅಧೋಗತಿಯನ್ನು ಅರಿಯಲು ಮತ್ತೊಂದು ಪ್ರಸಂಗ ವನ್ನು ಓದಿ. ಹಿಂದೊಮ್ಮೆ ಬೆಂಗಳೂರಿನ ಪತ್ರಕರ್ತರ ಕ್ರಿಕೆಟ್ ತಂಡ ಕೋಲ್ಕತಾ ಪ್ರವಾಸದಲ್ಲಿತ್ತು. ತಂಡದ ಕ್ರಿಶ್ಚಿಯನ್ ಆಟಗಾರನೊಬ್ಬ ಮುಸ್ಲಿಂ ಆಟಗಾರ ನನ್ನು ಕಿಚಾಯಿಸುತ್ತಿದ್ದ. ತಮಾಷೆಯನ್ನು ತಮಾಷೆಯಾಗಿ ತೆಗೆದುಕೊಳ್ಳಲಾಗದ ಮುಸ್ಲಿಂ ಆಟಗಾರ ಕ್ರುದ್ಧನಾಗಿ ನನ್ನ ಮುಂದೆ ಹೇಳಿದ್ದು ತಾನು ಮನಸ್ಸು ಮಾಡಿದರೆ ಆ ಕ್ಷಣದಲ್ಲಿ ಕೋಮು ಗಲಭೆ ಎಬ್ಬಿಸಬ ಎಂದು.

ದೂರದ ಕಲ್ಕತ್ತಾದಲ್ಲೂ ತನ್ನ ಶನಿ ಪ್ರಭಾವ ಅಷ್ಟಿದೆ ಎಂದು ಅವನು ಕೊಚ್ಚಿಕೊಂಡ ಪರಿ ಅದು. ‘ದ ಕಾಶ್ಮೀರ್ ಫೈಲ್ಸ್’ ಸೃಷ್ಟಿಸಿದ ಅಲೆ ವಿಸ್ತರಿಸುತ್ತಿದೆ. ಕಾಶ್ಮೀರದಲ್ಲಿ ಮುಸ್ಲಿಮರು ನಡೆಸಿದ ಹತ್ಯಾಕಾಂಡವನ್ನು ಹೋಲುವ ಮತ್ತೊಂದು ಹತ್ಯಾಕಾಂಡದಲ್ಲಿ ಹತರಾಗಿದ್ದು ಸ್ವಯಂ ಮುಸ್ಲಿಮರೇ! ಅರೆ, ಹಂತಕರಿಗೇ ಸ್ಕೆಚ್ಚಾ ಎಂದು ಹುಬ್ಬೇರಿಸಬೇಡಿ. ಹೌದು, ಜಿಹಾದಿಗಳು ಕಾಶ್ಮೀರದಲ್ಲಿ ನಡೆಸಿದ ನರಮೇಧವನ್ನು ಹೋಲುವಂಥ ಮುಸ್ಲಿಮರ ಸಾಮೂಹಿಕ ಬಲಿಯನ್ನು ಸ್ಪೇನಿನ ಕಿರಿಸ್ತಾನರು ತೆಗೆದುಕೊಂಡರು.

ಹದಿನೈದನೇ ಶತಮಾನದ ಕೊನೆಯ ವರ್ಷಗಳಲ್ಲಿ ಆರಂಭವಾದ ಮುಸ್ಲಿಮರ ಬೇಟೆ ಸುಮಾರು ನೂರು ವರ್ಷಗಳಲ್ಲಿ ಅಂತ್ಯಗೊಂಡಿತು. ಅಷ್ಟು ಹೊತ್ತಿಗೆ ಸ್ಪೇನ್ನಲ್ಲಿ ಒಬ್ಬ ಮುಸ್ಲಿಂ ನರಪಿಳ್ಳೆಯೂ ಇರಲಿಲ್ಲ. ಐಬೀರಿಯಾ ಪರ್ಯಾಯ ದ್ವೀಪದಲ್ಲಿ ೫೦ ಲಕ್ಷದಷ್ಟಿದ್ದ ಮುಸ್ಲಿಮರನ್ನು ಒಂದು ಶತಮಾನದುದ್ದಕ್ಕೂ ನಡೆದ ನರಬಲಿಯ ಮೂಲಕ ಕಿರಿಸ್ತಾನರು ನಿರ್ನಾಮ ಮಾಡಿದರು. ಮತಾಂತರಗೊಳ್ಳು, ಇಲ್ಲವೇ ಕಾಲ್ಕೀಳು, ಅಥವಾ ಸಾಯಿ ಎಂಬ ತ್ರಿವಳಿ ಸೂತ್ರ ಅದಾಗಲೇ ಚಾಲ್ತಿಯಲ್ಲಿತ್ತು. ಐರೋಪ್ಯ ಮತ್ತು ಆಫ್ರಿಕಾ ಸಂಸ್ಕೃತಿಗಳು ಒಟ್ಟಾಗಿದ್ದು, ಕಿರಿಸ್ತಾನರು, ಮುಸ್ಲಿಮರು, ಮತ್ತು ಯಹೂದಿಗಳು ಸಾಮರಸ್ಯದಿಂದ ಬದುಕುತ್ತಿದ್ದ ಸಮಾಜವನ್ನು ಮುಸ್ಲಿಂ-ಮುಕ್ತರನ್ನಾಗಿಸಿದ್ದು ಅಲ್ಲಿಯ ಚರ್ಚ್.

ಕಾಶ್ಮೀರದ ಹತ್ಯಾಕಾಂಡವನ್ನು ಗಂಭೀರವಾಗಿ ಪರಿಗಣಿಸದ ಹಿಂದೂಗಳಂತೆ ಗ್ರಾನಡಾ ಪತನವನ್ನು ಲಘುವಾಗಿ ಪರಿಗಣಿಸ ಲಾಯಿತು. ಆಫ್ರಿಕಾದಿಂದ ಮುಸ್ಲಿಂ ಸೈನ್ಯ ತಮ್ಮ ರಕ್ಷಣೆಗೆ ಬರುತ್ತದೆಂಬ ಮುಸ್ಲಿಮರ ಲೆಕ್ಕಾಚಾರ ತಲೆಕೆಳಗಾಯಿತು. ಕಿರಿಸ್ತಾನ್ ಚಕ್ರಾಧಿಪತಿಗಳಾದ ಫರ್ಡಿನಾಂಡ್ ಮತ್ತು ಇಸಾಬೆ ಶಪಥ ಮಾಡಿ ಯಹೂದಿಗಳು -ರಿ ಕಿತ್ತುವಂತೆ ಮಾಡಿದರು. ನಿರಾರ್ಶರೀತ ಜ್ಯೂಗಳಿಗೆ ಅಟ್ಟೊಮಾನ್ ಸಾಮ್ರಾಜ್ಯ ಆಸರೆ ಒದಗಿಸಿತು.

ಮುಸ್ಲಿಮರ ಪಾಡಂತೂ ಕೇಳಲೇಬೇಡಿ. ಮೊದಲಿಗೆ, ಚರ್ಚಿನ ಮೊದಲ ಅಸವಾದ ಆಮಿಷಗಳ ಮೂಲಕ ಮುಸ್ಲಿಮರನ್ನು ಮತಾಂತರ  ಗೊಳಿಸಲಾಯಿತು. ಅನೇಕರು ಲಂಚವನ್ನು ತಿಂದೂ, ಇಸ್ಲಾಮಿಕ್ ಆಚರಣೆಗಳನ್ನೇ ಮುಂದುವರಿಸಿದರು. ನಿರೀಕ್ಷಿತ ಗುರಿಯನ್ನು ಆಮಿಷಗಳ ಮೂಲಕ ಸಾಽಸಲಿಕ್ಕಾಗದ ಪಾದ್ರಿಗಳು ಮುಸ್ಲಿಮರ ಶಿಕಾರಿಗೆ ಇಳಿದರು. ಗೋಪ್ಯವಾಗಿ ಇಸ್ಲಾಮಿಗೇ ಜೋತುಬಿದ್ದವರ ಮೇಲೆ ಕಣ್ಣಿಟ್ಟರು. ವಾರಕ್ಕೊಮ್ಮೆ ಸ್ನಾನಮಾಡುವರ ಮೇಲೆ ನಿಗಾ ಇಟ್ಟರು.

ಶುಕ್ರವಾರ ಮುಂಬಾಗಿಲ ಅಗುಳಿ ಹಾಕುವುದನ್ನು ತಡೆದರು. ಮತ್ತೆ ಎಂದಿನಂತೆ, ಮೈಗೂಡಿಸಿಕೊಂಡ ಪಾಶವೀ ಪ್ರವೃತ್ತಿಯ ಮೂಲಕ ಕೊಲೆ, ಸುಲಿಗೆ, ಮಹಿಳೆಯರ ಮಾನಭಂಗದಲ್ಲಿ ನಿರತರಾದರು. ಶಾಂತಿಮತದ ಮುಸ್ಲಿಮರನ್ನು ನಾಮಾವಶೇಷ ಗೊಳಿಸಿದ್ದು ಶಾಂತಿದೂತ ಜೀಸಸ್‌ನ ಅನುಯಾಯಿಗಳು. ಹದಿನಾಲ್ಕು ಶತಮಾನಗಳಿಂದ ನಡೆಯುತ್ತಲೇ ಬಂದಿರುವ ಅಬ್ರಹಾಮಿಕ್ ಮತಗಳ ಸಂಘರ್ಷದ ಬಗ್ಗೆ ಅಮೆರಿಕ ವಾಸಿ ರೇಮಾಂಡ್ ಇಬ್ರಾಹಿಂ ಸವಿಸ್ತಾರವಾಗಿ ಬರೆದಿದ್ದಾರೆ.

ಈಜಿಪ್ಟ್ ಮೂಲದ ತಂದೆತಾಯಂದಿರ ಮಗನಾದ ರೇಮಾಂಡ್ ದ ಆಲ್ ಖೈದಾ ರೀಡರ್ ಎಂಬ ದಾಖಲೆಯನ್ನು ಅರೇಬಿಕ್‌ನಿಂದ
ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅದರ ಸಾರವೇನೆಂದರೆ, ಇಸ್ಲಾಮ್ ಪಾಶ್ಚಿಮಾತ್ಯರನ್ನು ವಿರೋಧಿಸುವುದಕ್ಕೆ ತಾತ್ವಿಕ ನೆಲೆ ಗಟ್ಟಿಲ್ಲ. ಆ ವಿರೋಧ ಕೇವಲ ಅಂಧ ಶ್ರದ್ಧೆಯನ್ನಾಧರಿಸಿದ್ದು. ಆ ವಿರೋಧ ಪಶ್ಚಿಮ ರಾಷ್ಟ್ರಗಳ ಅಸ್ತಿತ್ವವನ್ನು ಬೇರುಸಮೇತ ಕಿತ್ತೊಗೆಯುವ ರಣಾನೋನ್ಮಾದದಲ್ಲಿ ಉಗಮಿಸಿದ್ದು. ಮತೀಯ ಪ್ರಾಬಲ್ಯವನ್ನುಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಈ ಎರಡು ದೈತ್ಯ ಮತಗಳು ಇನ್ನಿಲ್ಲದ ಕಸರತ್ತು, ಕುಟಿಲತೆ, ಕಲಹಗಳಲ್ಲಿ ತೊಡಗಿರುವುದು ಹೊಸತೇನಲ್ಲ.

ಇವುಗಳ ರಕ್ತದಾಹಕ್ಕೆ ಇತಿಹಾಸದ ಪುಟಪುಟವೂ ಸಾಕ್ಷಿಯಾಗಿದೆ. ಇವೆರಡು ಮತಗಳು ನಡೆಸುತ್ತಲೇ ಬಂದಿರುವ ರಕ್ತ ದೋಕುಳಿಯಲ್ಲಿ ಪವಿತ್ರ ಭರತಭೂಮಿಯೂ ತೋಯ್ದಿದೆ. ಇವೆರಡು ಮತೀಯರ ಕದನಗಳಲ್ಲಿ ಬಡವಾದದ್ದು ಹಿಂದೂಗಳು. ರಾಚುವಂತೆ ಕಣ್ಣೆದುರಿಗಿರುವ ಈ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳದವರು ಒಂದೋ ನಮ್ಮ ಡೋಂಗಿ ಜಾತ್ಯತೀತರಂತೆ ಮತಿಗೆಟ್ಟಿರಬೇಕು ಅಥವಾ ನಮ್ಮ ಸ್ವಾರ್ಥ ಸೂಡೊ ಸೆಕ್ಯುಲರ್ ರಾಜಕಾರಣಿಗಳಂತೆ ಮಾನಗೆಟ್ಟಿರಬೇಕು.

ಇವರಿಬ್ಬರ ಕಪಿಮುಷ್ಟಿಯಿಂದ ಬಹುಸಂಖ್ಯಾತ ಹಿಂದೂಗಳು ತಮ್ಮನ್ನು ತಾವು ಬಿಡಿಸಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ತುರ್ತಾಗಿ ಅನುಸರಿಸಬೇಕಾದ ಕೆಲವು ಕ್ರಮಗಳು ಹೀಗಿವೆ. ಹುಸಿ ಜಾತ್ಯತೀತರನ್ನು ಕಸದ ತೊಟ್ಟಿಯಲ್ಲಿ ಎಸೆಯಿರಿ. ಅವರು ರಾಜಕಾರಣಿ ಗಳಿರಬಹುದು, ಪತ್ರಿಕೋದ್ಯಮಿಗಳಿರಬಹುದು, ಲೇಖಕರಿರಬಹುದು, ಬಾಲಿವುಡ್‌ನ ನಿಜಜೀವನದ ಖಳರಿರಬಹುದು, ಸ್ವಯಂ ಘೋಷಿತ ವಿಚಾರವಾದಿಯಿರಬಹುದು ಅವರನ್ನು ತಿರಸ್ಕರಿಸಿ, ಅವರು ನಡೆಸುವ ಮಾಧ್ಯಮ ಸಂಸ್ಥೆಗಳನ್ನು ಬಹಿಷ್ಕರಿಸಿ, ಅವರ ಪುಸ್ತಕ-ಸಿನೆಮಾಗಳನ್ನು ಉತ್ತೇಜಿಸಬೇಡಿ, ಅವರು ಪಾಲ್ಗೊಳ್ಳುವ ಸಮಾರಂಭಗಳಿಂದ ದೂರವಿರಿ.

ಹಿಂದೂವಿರೋಧಿ ನಿಲುವು ತಳೆಯುವ ಎಲ್ಲರನ್ನೂ ಮೂಲೆಗುಂಪಾಗಿಸಿ. ದ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ವಿಮರ್ಶಿಸಿದ Seಛಿ Uಜ್ಟಿಛಿo ಎಂಬ ಹಿಂದೂ ವಿರೋಧಿ ವೆಬ್ ಸೈಟ್‌ನ ವಿಮರ್ಶಕನಿಗೆ ಚಿತ್ರವನ್ನು ನೋಡಿ ನಗು ಬಂತಂತೆ! ಅಭಿನವ ಜಿಹಾದಿಗಳು ಮಾಧ್ಯಮದಲ್ಲೂ ಇದ್ದಾರೆ. ನೆನಪಿರಲಿ, ಕಾಶ್ಮೀರದಂಥ ಹತ್ಯಾಕಾಂಡ ದೇಶದ ಯಾವುದೇ ಭಾಗದದರೂ ಸಂಭವಿಸಿದರೆ ಹಿಂದೂ ಸಂತ್ರಸ್ತರನ್ನು ನೋಡಿ ಯಾರೂ ಅಳುವುದಿಲ್ಲ. ಪಂಡಿತರ ಹತ್ಯೆ ನಗುತರಿಸುತ್ತದೆ!

ತೃತೀಯ ರಂಗವೆಂಬುದು ಪರಾವಲಂಬಿ ಬುದ್ಧಿಜೀವಿಗಳ ಸ್ವಾರ್ಥಚಿತ್ತದಲ್ಲಿ ಜನಿಸಿದ ಕೂಸು. ಸ್ವಸಾಮರ್ಥ್ಯದ ಮೇಲೆ ಬಹುಮತ ಗಳಿಸಲಾಗದ ಹತ್ತಾರು ದುರ್ಬಲರು ಸ್ವಾರ್ಥವೆಂಬ ಅಡಿಪಾಯದ ಮೇಲೆ ಕಟ್ಟುವ ಹಗಲುಗನಸಿನ ಮಹಲಿಗೆ ತೃತೀಯ ಶಕ್ತಿ ಎಂಬ ವೈಭವೀಕೃತ ಹೆಸರು. ಅದರ ವಿವಿಧ ಅಂಗ ಪಕ್ಷಗಳು ಜೋಡಣೆಗೆ ಬಳಸುವುದು ಹಿಂದೂ- ವಿರೋಧಿ ನೆಲೆಯೆಂಬ ಎಂ ಸ್ಯಾಂಡ್. ಜಾತಿ-ಉಪಜಾತಿಗಳ ಗೀಳನ್ನು ಬಿಟ್ಟು ಹಿಂದೂವಾಗಿ ಚಿಂತಿಸಿ. ನಿಮ್ಮ ಅಳಿವು- ಉಳಿವು ನಿಮ್ಮ ಮತದಲ್ಲಿದೆ.

ನನ್ನ ವೃತ್ತಿಬದುಕಿನ ಅಷ್ಟೂ ವರ್ಷಗಳಲ್ಲಿ ತಟಸ್ಥ ನಿಲುವನ್ನು ತಳೆದುಕೊಂಡೇ ಬಂದಿರುವ ನಾನು ವ್ಯಕ್ತಿವಿಚಾರಗಳನ್ನು ನಿಷ್ಪಕ್ಷಪಾತವಾದ ಕಣ್ಮನಗಳಿಂದ ನೋಡಿ ವ್ಯಾಖ್ಯಾನಿಸಿದ್ದೇನೆ. ಒಂದು ಸಮುದಾಯದ ಹಿತವನ್ನು ಸಂರಕ್ಷಿಸುವಲ್ಲಿ ನನ್ನ ವೃತ್ತೀಯ ತಟಸ್ಥತೆ ಗೌಣವಾದರೆ ಆಗಲಿ. ಇದರಲ್ಲಿ ನನ್ನ ಸ್ವಾರ್ಥವೇನಿಲ್ಲ. ದೇಶದ ಹಿತ ಮುಖ್ಯ. ದೇಶದ ಹಿತವೆಂದರೆ ಬಹು ಸಂಖ್ಯಾತ ಹಿಂದೂಗಳ ಹಿತ. ಪ್ರಜಾಪ್ರಭುತ್ವದ ಆಶಯವೇ ಅತಿ ಹೆಚ್ಚಿನ ಪಾಲು ಜನರಿಗೆ ಅತಿ ಹೆಚ್ಚು ಒಳಿತನ್ನು ವಿತರಿಸುವುದು. ದೇಶದ ಸುದೀರ್ಘ ಇತಿಹಾಸದ ಉದ್ದಕ್ಕೂ ಹಿಂದೂಗಳಿಗೆ ಒಳಿತಿನ ಮಾತು ಬಿಡಿ, ನ್ಯಾಯದ ವಿತರಣೆಯೇ ಆಗಿಲ್ಲ.

ಅದನ್ನು ಆಗ್ರಹಪೂರ್ವಕವಾಗಿ ಬೇಡಿ ಪಡೆಯುವ ಕೊನೆಯ ಅವಕಾಶ ನಮ್ಮದಾಗಿದೆ. ಪೊಲೀಸ್ ಇಲಾಖೆಯನ್ನು ನಾನು ಆಗಾಗ್ಗೆ ಟೀಕಿಸು ತ್ತಿರುತ್ತೀನಿ. ಅಪರಾಧೀಕರಣಗೊಂಡಿರುವ ನಮ್ಮ ವ್ಯವಸ್ಥೆಯನ್ನು ಗಣನೀಯವಾಗಿ ಹಾದಿಗೆ ತರಲು ಇದೊಂದು ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಸಾಕು. ಠಾಣೆಯ ಮಟ್ಟದ ಅನೇಕ ಸುಧಾರಣೆಗಳನ್ನು ತರಬಹುದು. ನೇಮಕಾತಿಗೆ ಯಾವತ್ತು ಅಭ್ಯರ್ಥಿಯ ಜಾತಿ ಪ್ರಧಾನವಾಯಿತೋ ಅಂದೇ ನಮ್ಮ ಸಮಾಜ ಅವನತಿಯ ಹಾದಿ ಹಿಡಿಯಿತು. ಯಾವಾಗ ತನ್ನ ಬಡ್ತಿಗೆ, ವರ್ಗಾವಣೆಗೆ ತನ್ನ ಜಾತಿಯ ಗಾಡ್ ಫಾದರ್‌ನನ್ನು ಅವಲಂಬಿಸುತ್ತಾನೋ ಅಲ್ಲಿಗೆ ಅವನ ನ್ಯಾಯತತ್ಪರತೆ ನೆಗೆದುಬಿತ್ತು.

ಉಳಿದೆಲ್ಲ ಅಪರಾಧ ಪ್ರಕರಣಗಳನ್ನು ಬಿಡಿ, ಕೋಮುಗಲಭೆಯನ್ನು ಪ್ರಚೋದಿಸುವವರ, ಗಲಭೆಯಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತಾದರೆ ಹಿಂದೂಗಳು ಆ ಮಟ್ಟಿಗೆ ಸುರಕ್ಷಿತ. ಮೇಲಿಂದ ಕೆಳಗಿನವರೆಗೆ ಇಲಾಖೆಯ ಅಧಿಕಾರಿಗಳು ಆಡಳಿತ ಹಿಡಿದವರ ಕೈಗೊಂಬೆಗಳಾಗಿದ್ದಾರೆ. ಆಡಳಿತ ಹಿಡಿದವರಿಗೆ ಅಲ್ಪಸಂಖ್ಯಾತ ವಶೀಕರಣದ ಗೀಳು. ಭಾರತೀಯ ಜನತಾ ಪಕ್ಷವೂ ಇದಕ್ಕೆ ಭಿನ್ನವಲ್ಲ. ಹಳೆಯ ಪ್ರಕರಣಗಳನ್ನು ಬಿಟ್ಟು ಬಿಡಿ, ಪ್ರತಿ ಪಕ್ಷದಲ್ಲಿದ್ದಾಗ ಖಈPಐನ ರದ್ದತಿಗೆ ಒತ್ತಾಯಿಸುತ್ತಿದ್ದ ಅರಗ ಜಾನೇಂದ್ರ ಅಧಿಕಾರ ಕೈಗೆ ಸಿಕ್ಕಾಗ ಮೆದುವಾಗಿಬಿಡುತ್ತಾರೆ.

ನಾನು ವಾಸಿಸುವ ಮೈಸೂರಿನಲ್ಲಿ, ನಗರದ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆಯ ಬಗ್ಗೆ ನಂಬಲರ್ಹ ಮೂಲದಿಂದ ಮಾಹಿತಿ ಸಿಕ್ಕಿತ್ತು. ಮಾಹಿತಿದಾರರ ಪರವಾಗಿ ನಾನೇ ಅಂದಿನ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ನನ್ನ ಆತಂಕವನ್ನು ವ್ಯಕ್ತಪಡಿಸಿದೆ. ನೀವು ಭಾರತೀಯ ಜನತಾ ಪಕ್ಷದವರೇ? ಎಂದು ಪ್ರಶ್ನಿಸಿದರು. ಅಲ್ಲವೆಂದು ಉದ್ವೇಗದಿಂದಲೇ ಹೇಳಿದೆ. ನಗರದ ಸುರಕ್ಷತೆಯ ಬಗ್ಗೆ ತಲೆಕೆಡಿಸಿಕೊಂಡು ಆತಂಕಕಾರೀ ಬೆಳವಣಿಗೆಯೊಂದನ್ನು ಗಮನಕ್ಕೆ ತಂದ ನನ್ನ ಹಿನ್ನೆಲೆಯನ್ನು ಗುಮಾನಿಯಿಂದ ನೋಡುವ  ಪೊಲೀಸ್ ಅಧಿಕಾರಿಗೆ ನಾನು ಪ್ರಸ್ತಾಪಿಸಿದ ವಿಷಯಕ್ಕಿಂತ ನನ್ನ ಜಾತಿಸೂಚಕ ಸರ್‌ನೇಮ್ ಮುಖ್ಯವಾಯಿತೇ? ಆತ ದಲಿತ ಸಮುದಾಯಕ್ಕೆ ಸೇರಿದವರು.

ದಲಿತ-ಬ್ರಾಹ್ಮಣರ ನಡುವೆ ಸಮಾಜಘಾತಕ ಮನಸ್ಸುಗಳು ಮೂಡಿಸುತ್ತಿರುವ ಬಿರುಕುಗಳು ಈ ರೀತಿಯ ಅನಪೇಕ್ಷಣೀಯ ತಿರುವನ್ನು ಪಡೆದರೆ ಭಗವಂತನೇ ಗತಿ. ಮೇಲಿನ ಅಧಿಕಾರಿಗಳು ನೆಟ್ಟಗಾದರೆ, ಅಧೀನ ಸಿಬ್ಬಂದಿಯೂ ದಾರಿಗೆ ಬರುತ್ತಾರೆ. ಅವರು ನೆಟ್ಟಗಾಗ ಬೇಕಾದರೆ ಅದಕ್ಕೂ ಪರಿಹಾರ ಮತದಾರರ ಕೈಯ ಇದೆ – ಅಯೋಗ್ಯ ಅಭ್ಯರ್ಥಿಗಳನ್ನು ತಿರಸ್ಕರಿಸುವುದು. ಕೋಮು ಸೌಹಾರ್ದವನ್ನು ಶಾಶ್ವತವಾಗಿ ಸ್ಥಾಪಿಸಲು ಜಾರಿಗೊಳಿಸಬೇಕಾದ ಕ್ರಮಗಳ ಬಗ್ಗೆ ಇನ್ನಷ್ಟು ಹೇಳುವುದಿದೆ.

ಹಾಂ! ಅಂದ ಹಾಗೆ, ನನ್ನದೇ ದಿಕ್ಕಿನಲ್ಲಿ ನಡೆಯುತ್ತಿzರೆ. ಹಲಾಲ್ ಕ್ರೌರ್ಯಕ್ಕೆ ಒಳಗಾಗಿ ಮಾಂಸದ ಮುದ್ದೆಯಾದ ಶಿವಮೊಗ್ಗದ ಯುವಕ ಹರ್ಷನ ಪರಿವಾರಕ್ಕೆ ಸಾಂತ್ವನ ಹೇಳಲು ಹೋಗದ ದೇವನೂರು ಮಹಾದೇವ ಹತ್ತಿರವೆಂಬ ಕಾರಣಕ್ಕೆ ಮುಸ್ಲಿಂ ಅಂಗಡಿಯಲ್ಲಿ ಮಾಂಸ ಖರೀದಿಸಿ ಕೋಮು ಸೌಹಾರ್ದತೆಗೆ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಿದ್ದಾರೆ. ಶಾಂತಿಪ್ರಿಯ ಮತದವರೇ ಹೆಚ್ಚಾಗಿ ವಾಸಿಸುವ ಮೈಸೂರಿನ ಶಾಂತಿನಗರದಲ್ಲಿದ್ದುದರಿಂದ ಅಂಗಡಿಯ ಆಯ್ಕೆ ಅನಾಯಾಸವಾಗಿ ಆಗಿರಬೇಕು.