ಕೆಲದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಿಕೆ ಸಿಕ್ಕಿಿತು. ಪತ್ರಿಿಕೆ ಧೂಳು ತಿಂದು ಮಣ್ಣು ಬಣ್ಣಕ್ಕೆೆ ತಿರುಗಿತ್ತು. ಯಾವನೋ ಪುಣ್ಯಾಾತ್ಮ ಇಷ್ಟು ವರ್ಷಗಳ ಕಾಲ ಆ ಪತ್ರಿಿಕೆಯ ಸಂಚಿಕೆಗಳನ್ನು ಜತನದಿಂದ ಕಾಪಾಡಿಕೊಂಡು, ಇನ್ನು ಪ್ರಯೋಜನ ಇಲ್ಲವೆಂದು ರದ್ದಿ ಅಂಗಡಿಗೆ ತಂದು ತೂಕಕ್ಕೆೆ ಹಾಕಿದ್ದಿರಬೇಕು. ಇನ್ನೇನು ಕೆಲ ದಿನಗಳಲ್ಲಿ ಆ ರದ್ದಿ ಅಂಗಡಿಯಲ್ಲಿದ್ದ ‘ಕರ್ನಾಟಕ ವೈಭವ’ ಪತ್ರಿಿಕೆಯ ಸಂಚಿಕೆಗಳೆಲ್ಲ ಶಿವಕಾಶಿಗೆ ಹೋಗಿ ಪಟಾಕಿಯೊಳಗೆ ಸೇರಿ, ‘ಢಮ್’ ಎಂದು ಸ್ಫೋೋಟಿಸಿ ಬೂದಿಯಾಗುತ್ತದೆ.
‘ಕರ್ನಾಟಕ ವೈಭವ’ಕ್ಕೆೆ ಭವ್ಯ ಇತಿಹಾಸವಿದೆ. ಆ ಪತ್ರಿಿಕೆಯನ್ನು 1892ರಲ್ಲಿ ಎಸ್.ಎನ್. ಪಾಟೀಲ ಎಂಬುವವರು ವಿಜಯಪುರದಲ್ಲಿ ಆರಂಭಿಸಿದರು. ಅವರೇ ಅದರ ಮೊದಲ ಸಂಪಾದಕರು. ಆಗ ಅದು ವಾರಪತ್ರಿಿಕೆಯಾಗಿತ್ತು. ಪತ್ರಿಿಕೆಯ ಬೆಲೆ ಎರಡು ಪೈಸೆ. ಆನಂತರ ಈ ಪತ್ರಿಿಕೆಯನ್ನು ವೆಂಕಟೇಶ ಬಿ. ನಾಯಕ ಮತ್ತು ಮೊಹರೆ ಹಣಮಂತರಾಯರು ಖರೀದಿಸಿದರು. ಮೊಹರೆಯವರು ಸಂಪಾದಕರಾದರು. ಮೊಹರೆಯವರು ಸುಮಾರು ಎರಡೂವರೆ ದಶಕಗಳ ಕಾಲ ಈ ಪತ್ರಿಿಕೆಯನ್ನು ಯಶಸ್ವಿಿಯಾಗಿ ನಡೆಸಿದರು.
‘ಕರ್ನಾಟಕ ವೈಭವ’ದ ಅನುಭವವೇ ಅವರಿಗೆ ಮುಂದೆ ‘ಸಂಯುಕ್ತ ಕರ್ನಾಟಕ’ ದೈನಿಕ, ‘ಕರ್ಮವೀರ’ ವಾರಪತ್ರಿಿಕೆ ಮತ್ತು ‘ಕಸ್ತೂರಿ’ ಮಾಸಪತ್ರಿಿಕೆ ಆರಂಭಿಸಲು ಪ್ರೇರಣೆ ನೀಡಿತು ಎಂಬುದು ದೊಡ್ಡ ಕತೆ.
ನನಗೆ ಸಿಕ್ಕ ‘ಕರ್ನಾಟಕ ವೈಭವ’ ಪತ್ರಿಿಕೆಯ ಮುಖಪುಟದಲ್ಲಿ ತಟ್ಟನೆ ಕಣ್ಣಿಿಗೆ ಬಿದ್ದಿದ್ದು ‘ಅಪ್ಪಾಾಭಟ್ಟನ ಹೊತ್ತಿಿಗೆ’ ಎಂಬ ಅಂಕಣ. ಇದನ್ನು ಬರೆಯುತ್ತಿಿದ್ದವರು ಮೊಹರೆ ಹಣಮಂತರಾಯರು. ಒಂದು ಕಾಲಕ್ಕೆೆ ಇದು ಅತ್ಯಂತ ಜನಪ್ರಿಿಯ ಅಂಕಣವಾಗಿತ್ತು ಎಂದು ಖ್ಯಾಾತ ಪತ್ರಕರ್ತರಾಗಿದ್ದ ದಿವಂಗತ ಕೆ. ಶಾಮರಾಯರು ಹೇಳುತ್ತಿಿದ್ದರು. ‘ಅಪ್ಪಾಾಭಟ್ಟನ ಹೊತ್ತಿಿಗೆ’ ಅಂಕಣದ ಬಗ್ಗೆೆ ಕನ್ನಡದ ಖ್ಯಾಾತ ಅಂಕಣಕಾರರಾಗಿದ್ದ ಹಾ.ಮಾ. ನಾಯಕ ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ಬರೆದಿದ್ದನ್ನು ಓದಿದ ನೆನಪು.
ಈ ಅಂಕಣದಲ್ಲಿನ ‘ಅಪ್ಪಾಾಭಟ್ಟ’ ಒಬ್ಬ ಕಾಲ್ಪನಿಕ ವ್ಯಕ್ತಿಿ. ಆತ ಒಬ್ಬ ಜ್ಯೋೋತಿಷಿ ಅರ್ಥಾತ್ ಭವಿಷ್ಯ ಹೇಳುವವ. ಅವನಲ್ಲಿ ಭವಿಷ್ಯ ಕೇಳಲು ದಿನವೂ ನೂರಾರು ಜನ ಬರುತ್ತಿಿದ್ದರು. ಅವರು ವೈಯಕ್ತಿಿಕ ಪ್ರಶ್ನೆೆಗಳಲ್ಲದೇ, ಸಾಮಾಜಿಕ , ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೆೆಗಳನ್ನು ಕೇಳುತ್ತಿಿದ್ದರು. ಅದಕ್ಕೆೆ ಅಪ್ಪಾಾ ಭಟ್ಟ ವಿಡಂಬನಾತ್ಮಕವಾಗಿ, ನವಿರಾದ ಹಾಸ್ಯದ ಮೂಲಕ ಉತ್ತರ ಹೇಳುತ್ತಿಿದ್ದ. ಅಪ್ಪಾಾ ಭಟ್ಟ ಯಾರು ಎಂಬ ಬಗ್ಗೆೆ ಓದುಗರಲ್ಲಿ ತೀವ್ರ ಜಿಜ್ಞಾಸೆ ಇತ್ತು. ತಮಗೆ ಹೇಳಲು ಸಾಧ್ಯವಾಗದ್ದನ್ನು ಮೊಹರೆಯವರು ಅಪ್ಪಾಾ ಭಟ್ಟನ ಮೂಲಕ ಹೇಳಿಸುತ್ತಿಿದ್ದರು. ಈ ಅಂಕಣದ ಮೂಲಕ ಅವರು ಎಲ್ಲರನ್ನೂ ಟೀಕಿಸುತ್ತಿಿದ್ದರು.
ಮೊಹರೆಯವರು ಒಂದು ಅಂಕಣದಲ್ಲಿ ನಾಲ್ಕು ವಿಷಯಗಳನ್ನು ಬರೆಯುತ್ತಿಿದ್ದರು. ‘ಕರ್ನಾಟಕ ವೈಭವ’ದ (ಫೆಬ್ರವರಿ 12, 1920) ಸಂಚಿಕೆಯಲ್ಲಿ ಅಪ್ಪಾಾ ಭಟ್ಟ ಹೀಗೆ ಬರೆಯುತ್ತಾಾನೆ – ಗಾಂಧಿಯನ್ನು ನಾವು ಹಿಡಿಯಲಿಲ್ಲವೆಂದು ಸರಕಾರದವರು ಜಂಭ ಬಡಿಯುತ್ತಾಾರೆ. ಅವನು ಕಾಯಿದೆಯನ್ನು ಮುರಿಯುತ್ತಾಾನೆ; ಸರಕಾರಕ್ಕೆೆ ಬೈಯುತ್ತಾಾನೆ. ಹೀಗಿದ್ದೂ ದಂಡ ಕಟ್ಟಿಿಕೊಂಡು ಕುಳಿತ ಸರಕಾರವು ಸುಮ್ಮನೆ ಕುಳಿತಿದೆ. ಮೂಗಿಲ್ಲದ ಚಂದಗೇಡಿ ಎರಡನೆಯವರೆದುರಿಗೆ ಹೋಗಿ, ಅವರಿಗೆ ಅಪಶಕುನ ಮಾಡಿದೆನೆಂದು ಡೌಲು ಬಡಿಯುತ್ತಿಿತ್ತಂತೆ. ಆದರೆ ತನಗೆ ಮೂಗಿಲ್ಲದ್ದು ಮರೆತಿತ್ತು. ಅದರಂತೆ ಸರಕಾರದ ಸ್ಥಿಿತಿಯಾಗಿದೆ. ಗಾಂಧಿಯನ್ನು ಹಿಡಿಯುವ ಧೈರ್ಯವಿಲ್ಲ. ಮೇಲೆ ಗಾಂಧಿಯು ಸೋತನೆಂದು ಹೇಳುತ್ತದೆ. ಭಟ್ಟರ ಪಂಚಾಂಗದಲ್ಲಿ ಸರಕಾರಕ್ಕೆೆ ಹತ್ತಿಿದ ಈ ಗ್ರಹಕ್ಕೆೆ ಹೆಸರಿಲ್ಲ.
ಈ ಅಂಕಣದ ಇನ್ನೊೊಂದು ವಿಷಯ – ಕಾಂಗ್ರೆೆಸ್ಸಿಿಗೆ ಸೇರಿ ದೊಡ್ಡ ಮನುಷ್ಯರಾಗಬೇಕಾದರೆ ಬಹಳ ಕಠಿಣವಿಲ್ಲ. ಮುಸಲ್ಮಾಾನನಾಗಬೇಕು ಅಥವಾ ಬ್ರಾಾಹ್ಮಣೇತರ ಆಗಬೇಕು. ಲಿಂಗಾಯತರಿದ್ದಾರೆ ನೆಟ್ಟಗೆ. ಮೊದಲು ಕಾಂಗೆಸ್ಸನ್ನು ಬೈದು, ಹಿಂದಗಡೆ ಕಾಂಗ್ರೆೆಸ್ಸನ್ನು ಸೇರಬೇಕು. ಇಲ್ಲದಿದ್ದರೆ ಕನಿಷ್ಠ ಪಕ್ಷಕ್ಕೆೆ ವಕೀಲನಾಗಲಿ ಅಥವಾ ಶ್ರೀಮಂತರ ಮಗನಾಗಲಿ ಇರಬೇಕು. ಆಗ ತಕ್ಷಣ ಕಾಂಗ್ರೆೆಸ್ ಮುಖಂಡನಾಗುತ್ತಾಾನೆ. 20-25 ವರುಷ ಏಕನಿಷ್ಠೆೆಯಿಂದ ಕಾಂಗ್ರೆೆಸ್ ಪಕ್ಷದ ಕೆಲಸ ಮಾಡುವವನನ್ನು ದುಡ್ಡಿಿಲ್ಲದಿದ್ದರೆ ಯಾರು ಕೇಳುವರು? ಕಾಂಗ್ರೆೆಸ್ ಪಕ್ಷದಲ್ಲಿ ದುಡ್ಡೇ ದೊಡ್ಡಪ್ಪ ಎಂದು ಭಟ್ಟರಿಗೆ ತಿಳಿಯಿತು.’
ನೂರು ವರ್ಷಗಳ ಹಿಂದೆ ಅಪ್ಪಾಾ ಭಟ್ಟ ಬರೆದಿದ್ದು ಇಂದಿಗೂ ಸತ್ಯ !
‘ಕರ್ನಾಟಕ ವೈಭವ’ದ ಹಳೆ ಸಂಚಿಕೆಗಳನ್ನು ಜಯವೀರ ಗೌಡನಿಗೆ ಕಳುಹಿಸಿಕೊಟ್ಟೆೆ.
ಅಪ್ಪಾಾ ಭಟ್ಟ ಕಾಂಗ್ರೆೆಸ್ಸಿಿನ ಸ್ಥಿಿತಿ – ಗತಿ ಬಗ್ಗೆೆ ಹೀಗೆ ಹೇಳುತ್ತಾಾನೆ – ’ಈ ಕಾಂಗ್ರೆೆಸ್ ನಾಯಕರು ದೇಶವನ್ನು ಬ್ರಿಿಟಿಷರಿಂದ ಬಿಡುಗಡೆ ಮಾಡುತ್ತೇವೆಂದು ಹೇಳುತ್ತಾಾರೆ. ಆದರೆ ಈ ನಾಯಕರಿಂದ ಬಿಡುಗಡೆ ಆದರೆ ಸಾಕು ಎಂದು ಅನಿಸಲಾರಂಭಿಸಿದೆ. ಗಾಂಧಿಯವರು ಈ ಎಲ್ಲಾ ನಾಯಕರನ್ನು ತಮ್ಮ ಸಂಗಡ ಹೇಗೆ ಕರೆದೊಯ್ಯುತ್ತಾಾರೆ ಎಂಬುದೇ ನನಗೆ ಜಿಜ್ಞಾಸೆ. ಗಾಂಧಿಯವರು ಮುಂದೆ ಮುಂದೆ ನಡೆಯುತ್ತಿಿದ್ದರೆ ಕಾಂಗ್ರೆೆಸ್ ನಾಯಕರು ಅವರನ್ನು ತಳ್ಳಿಿ ಬಿಡಬಹುದು ಎಂದು ಅನಿಸುತ್ತಿಿದೆ. ಗಾಂಧಿಯವರನ್ನು ಅವರ ಬೆನ್ನ ಹಿಂದೆ ಟೀಕಿಸುವವರು ಅವರನ್ನು ಬೆನ್ನ ಹಿಂದಿನಿಂದ ತಳ್ಳಲಾರರು ಎಂದು ಹೇಗೆ ಹೇಳುವುದು ? ಗಾಂಧಿಯವರನ್ನು ನೋಡಿದರೆ ನನಗೆ ಮರುಕವಾಗುತ್ತದೆ. ಅವರು ತಾವೊಬ್ಬರೇ ದೇಶ ಉದ್ಧಾಾರ ಮಾಡುತ್ತೇನೆ ಎಂದು ಹೋಗುತ್ತಿಿದ್ದಾರೆ. ಆದರೆ ಅವರ ಸುತ್ತ ತಮ್ಮನ್ನು ಉದ್ಧಾಾರ ಮಾಡಿಕೊಳ್ಳುವವರೇ ಸೇರಿದ್ದಾರೆ. ಈ ಗಾಂಧಿಯವರನ್ನು ಕನಿಷ್ಠ ಪಕ್ಷ ಅವರ ಪಾಡಿಗೆ ಅವರ ಆಶ್ರಮದಲ್ಲಿ ಬದುಕಲು ಬಿಡುತ್ತಾಾರಾ ಎಂಬ ಸಂಶಯ ಕಾಡುತ್ತಿಿದೆ. ಕಾಂಗ್ರೆೆಸ್ ಪಕ್ಷ ಕಟ್ಟಿಿ ತಾನು ತಪ್ಪುು ಮಾಡಿದೆ ಎಂದು ಗಾಂಧಿಗೆ ಅನಿಸಿದರೆ, ಆಗ ಸಮಯ ಮೀರಿರುತ್ತದೆ. ಗಾಂಧಿಯವರು ಎಲ್ಲವನ್ನೂ ಸುಮ್ಮನೆ ನೋಡುತ್ತಿಿರಬೇಕು. ಅವರ ಸುತ್ತಮುತ್ತ ಇರುವ ಜನರನ್ನು ನೋಡಿದರೆ ಗಾಂಧೀ ಅವರ ಬಗ್ಗೆೆ ಕನಿಕರ ಆಗುತ್ತದೆ. ಆದರೂ ಅವರ ಆತ್ಮವಿಶ್ವಾಾಸವನ್ನು ಮೆಚ್ಚಲೇಬೇಕು.
ಆ ಆರೂ ಮಹಿಳೆಯರು ಒಂದೇ ಊರಿನವರು, ಆತ್ಮೀಯ ಗೆಳತಿಯರು. ಆರೂ ಜನರಿಗೆ ಎಂಟು ವರ್ಷ ಜೈಲು ಶಿಕ್ಷೆಯಾಯಿತು. ಜೈಲಿನಲ್ಲಿ ಅಷ್ಟು ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಬಿಡುಗಡೆಯಾದರು. ಇವರೆಲ್ಲರನ್ನೂ ಒಂದೇ ಕೋಣೆಯಲ್ಲಿ ಇರಿಸಲಾಗಿತ್ತು. ಜೈಲಿನಿಂದ ಹೊರಬರುತ್ತಿಿದ್ದಂತೆ ಅವರ ಸ್ವಾಾಗತಕ್ಕೆೆ ಅವರ ಸಂಬಂಧಿಕರು ಕಾಯುತ್ತಿಿದ್ದರು. ಅವರೆಲ್ಲರೂ ಪರಸ್ಪರ ಬೀಳ್ಕೊೊಂಡು ತಮ್ಮತಮ್ಮ ಮನೆಗೆ ಹೋಗುವ ಮುನ್ನ ಮಾತಾಡಿಕೊಂಡರು – ‘ನಾನು ಹೇಳ್ತಾಾ ಇದ್ನಲ್ಲಾ, ಆ ಕತೆ ಮುಗಿದಿಲ್ಲ, ಮುಂದೇನಾಯಿತುಎಂಬುದನ್ನು ಫೋನಿನಲ್ಲಿ ಮಾತಾಡಿಕೊಳ್ಳೋೋಣ’
ಈ ಮಾತನ್ನು ಕೇಳಿದ ಒಬ್ಬಳ ಪತಿ ಮೆಲ್ಲಗೆ ಹೇಳಿದ – ‘ಇಷ್ಟು ವರ್ಷ ಒಂದೇ ಕೋಣೆಯಲ್ಲಿದ್ದೂ, ನಿಮ್ಮ ಮಾತು ಮುಗಿದಿಲ್ಲ ಅಂದ್ರೆೆಇನ್ನೂ ಐದಾರು ವರ್ಷನಾದ್ರೂ ಇದ್ದು ಬರಬೇಕಿತ್ತು, ಪಾಪ!’