Friday, 27th December 2024

ಅಭಿದಾಬಿಯಲ್ಲಿ ಐಐಟಿ: ಗಡಿ ಮೀರಿದ ದೇಶದ ಶ್ರೇಷ್ಠತೆ

ವಿಶ್ವಗುರು

ಧರ್ಮೇಂದ್ರ ಪ್ರಧಾನ್

ಮಾಸ್ಟರ್ ಆಫ್ ಟೆಕ್ನಾಲಜಿ ಇನ್ ಎನರ್ಜಿ ಟ್ರಾನ್ಸಿಶನ್ ಅಂಡ್ ಸಸ್ಟೈನೆಬಿಲಿಟಿ ಕುರಿತ ಆರಂಭಿಕ ಕಾರ್ಯಕ್ರಮ ಸಂಸ್ಥೆಯ ಮುಂದಾಲೋಚನೆಯ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಶುದ್ಧ ಇಂಧನ ಪರಿವರ್ತನೆ ಮೂಲಕ ಹವಾಮಾನ ಬದಲಾವಣೆ ಮತ್ತು ಇತರ ಸುಸ್ಥಿರ ಸವಾಲುಗಳನ್ನು ಎದುರಿಸಲು ಇದು ನಿರ್ಣಾಯಕ ಪಾತ್ರ ವಹಿಸಲಿದ್ದು, ಪರಿಣಾಮಕಾರಿ ನಾಯಕತ್ವವನ್ನು ರೂಪಿಸಲು ಸಹಕಾರಿಯಾಗಲಿದೆ.

ಭಾರತ ಮತ್ತು ಯುಎಇ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ, ದ್ವಿಪಕ್ಷೀಯ ಬಾಂಧವ್ಯ ಉನ್ನತ ಸ್ತರದಲ್ಲಿದೆ. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಒಕ್ಕೂಟ ಯುಎಇಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರಾದ ಗೌರವಾನ್ವಿತ ಶೇಖ್ ಮೊಹಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ತಮ್ಮ ಕಾರ್ಯತಂತ್ರದ ಭಾಗವಾಗಿ ಅಬುಧಾಬಿಯಲ್ಲಿ ದೆಹಲಿ ಐಐಟಿ ಸ್ಥಾಪಿಸಲು ನಿರ್ಧರಿಸಿದರು. ದಾಖಲೆ ಸಮಯದಲ್ಲಿ ಇದು ಸಾಕಾರಗೊಂಡಿದ್ದು, ಉಭಯ ದೇಶಗಳ ನಾಯಕತ್ವದ ಸಾಮಾನ್ಯ ದೃಷ್ಟಿಕೋನ ಮತ್ತು ಆದ್ಯತೆಗಳನ್ನು ಇದು ದೃಢೀರಿಸುತ್ತದೆ.

ನವ ಭಾರತದ ನಾವೀನ್ಯ ಮತ್ತು ಪರಿಣತಿಗೆ ಇದು ನಿದರ್ಶನ. ಯುಎಇನಲ್ಲಿರುವ ದೆಹಲಿ ಐಐಟಿ ಕ್ಯಾಂಪಸ್, ಶೈಕ್ಷಣಿಕ ವಲಯದಲ್ಲಿ ಭಾರತ – ಯುಎಇ ಸ್ನೇಹದ
ಸೌಧವಾಗಿ ಕಾರ್ಯನಿರ್ವಹಿಸಲು ಸನ್ನದ್ಧವಾಗಿದೆ. ಶಿಕ್ಷಣದಲ್ಲಿ ಉತ್ಕೃಷ್ಟತೆ, ನಾವೀನ್ಯ, ಜ್ಞಾನದ ವಿನಿಮಯ ಮತ್ತು ಮಾನವ ಬಂಡವಾಳದ ಮೇಲೆ ಹೂಡಿಕೆ ಕುರಿತಂತೆ ಎರಡೂ ದೇಶಗಳ ಪರಸ್ಪರ ಹಂಚಿಕೆಯ ದೃಷ್ಟಿಕೋನವನ್ನು ಇದು ಕೇಂದ್ರೀಕರಿಸುತ್ತದೆ. ಇದು ನಿಸ್ಸಂದೇಹವಾಗಿ ಪರಸ್ಪರ ಸಮೃದ್ಧಿ ಹಾಗೂ ಜಾಗತಿಕ ಒಳಿತಿಗಾಗಿ ಜ್ಞಾನದ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ಹೊಸ ಪ್ರಾಮಾಣೀಕೃತ ಹೆಜ್ಜೆಯನ್ನು ಅನಾವರಣಗೊಳಿಸುತ್ತದೆ.

ದೆಹಲಿಯ ಐಐಟಿ ಕ್ಯಾಂಪಸ್ ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ವಿಕಾಸದ ಮಾದರಿಯನ್ನು ಸೂಚಿಸುತ್ತದೆ. ಐಐಟಿಗಳ ಜಾಗತಿಕ ಕ್ಯಾಂಪಸ್ ಗಳ ಪರಿಕಲ್ಪನೆಗಾಗಿ ರಚಿಸಲಾದ ರಾಧಾಕೃಷ್ಣನ್ ಸಮಿತಿ ಶಿಫಾರಸುಗಳು ಐಐಟಿ ದೆಹಲಿ ಮತ್ತು ಐಐಟಿ ಮದ್ರಾಸ್ ನಂತಹ ಸಂಸ್ಥೆಗಳಿಗೆ ಜಾಂಜಿಬಾರ್‌ನ ಕ್ಯಾಂಪಸ್ ನೊಂದಿಗೆ ವಿಶಾಲವಾದ ಅಂತರರಾಷ್ಟ್ರೀಯ ಹೆಜ್ಜೆಗುರುತುಗಳನ್ನು ರೂಪಿಸಲು ಪ್ರಮುಖ
ಪಾತ್ರ ವಹಿಸುತ್ತದೆ. ಇದು ಜಾಗತಿಕವಾಗಿ ಮಾತ್ರವಲ್ಲ, ತನ್ನ ನೆಲೆಯಲ್ಲಿ ಮತ್ತು ಖ್ಯಾತಿಯಲ್ಲೂ ಕೂಡ ವಿಶೇಷವಾಗಿದೆ.

ದ್ವಿಪಕ್ಷೀಯ ಬದ್ಧತೆ ಮತ್ತು ಅದನ್ನು ಸಾಕರೊಗಳಿಸುವ ವಿಶ್ವಾಸಾರ್ಹ ಹಾಗೂ ಸಮಯೋಚಿತ ಕ್ರಮ ಸ್ನೇಹಪರ ದೇಶಗಳೊಂದಿಗೆ ಭಾರತ ತೊಡಗಿಕೊಳ್ಳುವ ವಿಶಿಷ್ಟ ಲಕ್ಷಣದ ಪ್ರತೀಕವಾಗಿದೆ. ಐಐಟಿ ದೆಹಲಿ ಮತ್ತು ಅಬುಧಾಬಿ ಕ್ಯಾಂಪಸ್ ಪೂರ್ಣಗೊಳಿಸಲು ತೆಗೆದುಕೊಂಡ ಅತ್ಯಂತ ಕಡಿಮೆ ದಾಖಲೆಯ ಅವಧಿ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ ಮತ್ತು ಅಬುಧಾಬಿ ಶಿಕ್ಷಣ ಮತ್ತು ಜ್ಞಾನ ಇಲಾಖೆ ನಡುವಿನ ಪ್ರಯತ್ನಗಳ ಆಕರ್ಷಕ ಸಂಯೋಜನೆಯನ್ನು ನಿರೂಪಿಸುತ್ತವೆ. ಉಭಯ ನಾಯಕರು ೨೦೨೨ ರ ಆರಂಭದಲ್ಲಿ ಒಪ್ಪಂದಕ್ಕೆ ಬಂದಿದ್ದು, ೨೦೨೩ ರ ಜುಲೈ ೧೫ ರಂದು ಕ್ಯಾಂಪಸ್ ಪೂರ್ಣಗೊಳಿಸಲು ತಿಳಿವಳಿಕೆ ಪತ್ರಕ್ಕೆ
ಸಹಿಹಾಕಲಾಯಿತು. ೨೦೨೪ ರ ಜನವರಿ ೨೯ ರಂದು ಮೊದಲ ಬ್ಯಾಚ್ ನ ತರಗತಿಗಳು ಪ್ರಾರಂಭವಾದವು.

ಐಐಟಿ ದೆಹಲಿ – ಅಬುಧಾಬಿಯು ಭಾರತ ಯುಎಇ ದ್ವಿಪಕ್ಷೀಯ ಸಂಬಂಧಗಳಲ್ಲಿ ಗಮನಾರ್ಹ ನಂಟನ್ನು ಉದಾಹರಿಸುವ ಮೂಲಕ ಕಡಿಮೆ ಸಮಯದಲ್ಲಿ ಸಾಕಷ್ಟು ದೂರ ಕ್ರಮಿಸಿದೆ. ಹಲವು ಮಾರ್ಗಗಳಲ್ಲಿ ಇದು ಸಂಪೂರ್ಣ ವೃತ್ತವಾಗಿದೆ. ಐತಿಹಾಸಿಕವಾಗಿ ನಳಂದ ವಿಶ್ವವಿದ್ಯಾಲಯದ ಮೂಲಕ ಶಿಕ್ಷಣವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿದ ಪ್ರವರ್ತಕ ಸ್ಥಾನದಲ್ಲಿದೆ ಭಾರತ. ಇದು ಜಗತ್ತಿನ ಮೊದಲ ವಸತಿ ಸಹಿತ ವಿಶ್ವವಿದ್ಯಾಲಯ. ಆಗ ಭಾರತಕ್ಕೆ ಜಾಗತಿಕ
ಮಟ್ಟದ ಖ್ಯಾತ ವಿದ್ವಾಂಸರು ಆಗಮಿಸುತ್ತಿದ್ದರು ಮತ್ತು ಇಲ್ಲಿ ಅಧ್ಯಯನ ಮಾಡುತ್ತಿದ್ದರು. ಆದರೆ ಐಐಟಿಗಳು ಇಂದು ತಮ್ಮ ಶ್ರೇಷ್ಠತೆಯನ್ನು ಗಡಿಯಾಚೆಗೆ ಕೊಂಡೋಯ್ದು ದೇಶ ಹೆಮ್ಮೆಪಡುವಂತೆ ಮಾಡುತ್ತಿವೆ.

ಅಬುಧಾಬಿ ಕ್ಯಾಂಪಸ್‌ನ ಹೃದಯ ಭಾಗದಲ್ಲಿ ಐಐಟಿ ದೆಹಲಿಯ ಶೈಕ್ಷಣಿಕ ಉತ್ಕೃಷ್ಟತೆಯ ಬದ್ಧತೆ ಇದೆ. ಸಂಸ್ಥೆಯ ಪಠ್ಯಕ್ರಮಗಳನ್ನು ದೇಶದ ಅನನ್ಯ ಅಗತ್ಯತೆಗಳು ಮತ್ತು ಆಕಾಂಕ್ಷೆಗಳೊಂದಿಗೆ ಹೊಂದಿಕೊಳ್ಳಲು ನಿಖರವಾಗಿ ಅಳವಡಿಸಿಕೊಳ್ಳಲಾಗಿದೆ. ಐಐಟಿ ದೆಹಲಿಯ ಪದವಿಪೂರ್ವ ಮತ್ತು ಪದವಿ ಹಂತದ ಬೋಧನೆ ಮತ್ತು ಸಂಶೋಧನೆಯಲ್ಲಿ ಅಪ್ರತಿಮ ಅನುಭವ ಬಳಸಿಕೊಂಡು ಅಬುಧಾಬಿ ಕ್ಯಾಂಪಸ್ ವಿಶ್ವದರ್ಜೆಯ ಶೈಕ್ಷಣಿಕ ಕೊಡುಗೆಗಳನ್ನು ನೀಡಲು ಮಾತ್ರವಲ್ಲದೇ ಅದನ್ನು ವೈವಿಧ್ಯಮಯಗೊಳಿಸಲು, ಹೊಸತನದ ಮತ್ತು ನಿರ್ದಿಷ್ಟ ಪ್ರದೇಶದ ಕಾರ್ಯಕ್ರಮಗಳ ಕೇಂದ್ರವಾಗಿದೆ ಹೊರ ಹೊಮ್ಮಿದೆ.

ಮಾಸ್ಟರ್ ಆಫ್ ಟೆಕ್ನಾಲಜಿ ಇನ್ ಎನರ್ಜಿ ಟ್ರಾನ್ಸಿಶನ್ ಅಂಡ್ ಸಸ್ಟೈನೆಬಿಲಿಟಿ ಕುರಿತ ಆರಂಭಿಕ ಕಾರ್ಯಕ್ರಮ ಸಂಸ್ಥೆಯ ಮುಂದಾಲೋಚನೆಯ ವಿಧಾನವನ್ನು
ಪ್ರತಿಬಿಂಬಿಸುತ್ತದೆ. ಶುದ್ಧ ಇಂಧನ ಪರಿವರ್ತನೆ ಮೂಲಕ ಹವಾಮಾನ ಬದಲಾವಣೆ ಮತ್ತು ಇತರ ಸುಸ್ಥಿರ ಸವಾಲುಗಳನ್ನು ಎದುರಿಸಲು ಇದು ನಿರ್ಣಾಯಕ ಪಾತ್ರ ವಹಿಸಲಿದ್ದು, ಈ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಪರಿವರ್ತನೆಯಲ್ಲಿ ಪರಿಣಾಮಕಾರಿ ನಾಯಕತ್ವವನ್ನು ರೂಪಿಸಲು ಸಹಕಾರಿಯಾಗಲಿದೆ. ಬಹುಶಿಸ್ತೀಯ ಧೋರಣೆಯನ್ನು ಪಠ್ಯಕ್ರಮ ಒತ್ತಿ ಹೇಳುತ್ತಿದ್ದು, ಪರಿವರ್ತನೆಯ ಕಾರ್ಯಕ್ರಮಗಳನ್ನು ಅರ್ಥಮಾಡಿಕೊಳ್ಳಲು, ತಾಂತ್ರಿಕ ಜ್ಞಾನ ಪಡೆಯುವ ಸಲುವಾಗಿ ಸಂವಾದ ನಡೆಸುವ, ನಾವೀನ್ಯತೆ ಪ್ರಕ್ರಿಯೆ ಮತ್ತು ಇಂಧನ – ಸುಸ್ಥಿರತೆ, ಅಂರ್ತ ಸಂಪರ್ಕ ಪಡೆಯಲು ನೆರವಾಗುತ್ತದೆ.

ದುಬೈನಲ್ಲಿ ಕಾಪ್-೨೮ ಮೈಲುಗಲ್ಲಿನ ಕಾರ್ಯಕ್ರಮ ಆಯೋಜನೆ ಮಾಡಿದ ಮತ್ತು ಯುಎಇ ೨೦೨೩ ಅನ್ನು ಸುಸ್ಥಿರತೆಯ ವರ್ಷವನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಅಬುಧಾಬಿಯ ಪ್ರಮುಖ ತೈಲ ಮತ್ತು ಅನಿಲ ಕಂಪೆನಿಯಾದ ‘ಅಂಡೋಕ್’ ನಿಂದ ಬಹುತೇಕ ವಿದ್ಯಾರ್ಥಿಗಳು ಪ್ರಾಯೋಜಕತ್ವ ಪಡೆದಿದ್ದು, ಇದು ನವೀಕರಿಸಬಹುದಾದ ಮತ್ತು ಇಂಧನ ಪರಿವರ್ತನೆಯ ಕಡೆಗೆ ತನ್ನನ್ನು ತಾನೇ ಮರು ಹೊಂದಿಸಲು ಸಹಕಾರಿಯಾಗಿದೆ. ಶಿಕ್ಷಣ ದೊಂದಿಗೆ ಈ ಸಂಸ್ಥೆಯ ಸಂಬಂಧ ಈ ಹೊಸ ಸಂಸ್ಥೆಯ ಭವಿಷ್ಯಕ್ಕಾಗಿ ಉತ್ತಮವಾಗಿದೆ. ಐಐಟಿ ದೆಹಲಿ – ಅಬುಧಾಬಿ ತರಗತಿಯ
ಕೊಠಡಿಗೆ ಕಾಲಿಡುವ ಮುನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಅತ್ಯಾಧುನಿಕ ಜ್ಞಾನ ಪಡೆದುಕೊಳ್ಳುತ್ತಾರೆ. ಐಐಟಿ ದೆಹಲಿ – ಅಬುಧಾಬಿ ಕ್ಯಾಂಪಸ್ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಇಂಧನ ಮತ್ತು ಸುಸ್ಥಿರತೆ, ಆರೋಗ್ಯ ಆರೈಕೆ ವಲಯಗಳನ್ನು ಕೇಂದ್ರೀಕರಿಸುತ್ತದೆ. ವೇಗವಾಗಿ ಹೊರ ಹೊಮ್ಮುತ್ತಿರುವ ಜಾಗತಿಕ ಸವಾಲುಗಳ ಸಂದರ್ಭದಲ್ಲಿ ಆತಿಥೇಯ ದೇಶದ ಅಗತ್ಯತೆಗಳೊಂದಿಗೆ ಸಂಶೋಧನಾ ಕಾರ್ಯಸೂಚಿಯನ್ನು ಜೋಡಿಸಲಾಗಿದೆ.

ರಾಧಾಕೃಷ್ಣನ್ ಸಮಿತಿಯು ಗುಣಮಟ್ಟದ ಖಾತರಿಯನ್ನು ಮತ್ತೊಂದು ಮೂಲಾಧಾರ ಎಂದು ಒತ್ತಿ ಹೇಳಿದ್ದು, ಐಐಟಿ ದೆಹಲಿ – ಅಬುಧಾಬಿಯ ತತ್ವಗಳಲ್ಲಿ
ಇದು ಹುದುಗಿದೆ. ಮಾನ್ಯತೆ, ನಿಗದಿತ ಅವಧಿಯಲ್ಲಿ ಪಠ್ಯಕ್ರಮದ ಪ್ರಗತಿಪರಿಶೀಲನೆ ಮತ್ತು ಸಾಂಸ್ಥಿಕ ಮೌಲ್ಯ ಮಾಪನವನ್ನು ವಾಡಿಕೆಯ ಅಧಿಕೃತ ಕಾರ್ಯಕ್ರಮಗಳಾಗಿ ಪರಿಗಣಿಸಿಲ್ಲ, ಆದರೆ ಶಿಕ್ಷಣದ ಗುಣಮಟ್ಟ ಅತ್ಯುನ್ನತ ಜಾಗತಿಕ ಗುಣಮಟ್ಟದೊಂದಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಕಾರ್ಯವಿಧಾನಗಳನ್ನು ಅನುಸರಣೆ ಮಾಡಲಾಗುತ್ತಿದೆ.

ಪ್ರಾಮಾಣೀಕೃತ ಪರೀಕ್ಷೆಗಳು, ಶೈಕ್ಷಣಿಕ ಪ್ರಗತಿ, ಶಿಷ್ಯ ತರಬೇತಿಗಳು ಮತ್ತು ಉದ್ಯೋಗ ನಿಯೋಜನೆ ಮೂಲಕ ವಿದ್ಯಾರ್ಥಿಗಳ ಗುಣಮಟ್ಟವನ್ನು ನಿಗಽಪಡಿಸುವ ಹಾಗೂ ಕೇವಲ ಉತ್ಕೃಷ್ಟತೆಯ ನಿರೀಕ್ಷೆಗಳನ್ನು ಪೂರೈಸದೇಇವುಗಳನ್ನು ಮೀರಿದ ಪದವೀಧರರನ್ನು ರೂಪಿಸುವ ಸಾಂಸ್ಥಿಕ ಬದ್ಧತೆಯನ್ನು ಇದು ಹೊಂದಿದೆ.
ಯುಎಇಯ ಉಜ್ವಲ ರಾಜಧಾನಿ ಅಬುಧಾಬಿ ಎಂಬುದಕ್ಕಿಂತ ಕ್ಯಾಂಪಸ್ ಗೆ ಇದು ಕೇವಲ ಒಂದು ಸ್ಥಳ. ಶಿಕ್ಷಣ ಮತ್ತು ನಾವೀನ್ಯತೆಗಳ ಈ ದಿಟ್ಟ ಸಾಹಸದಲ್ಲಿ ಇದು ಸಂಪೂರ್ಣ ಸಹಯೋಗಿ ಮತ್ತು ಪಾಲುದಾರಿಕೆ ಹೊಂದಿರುವುದು ವಿಶೇಷ. ಇಂತಹ ಅವಿರತ ಮತ್ತು ಫಲಪ್ರದ ಜಂಟಿ ಪ್ರಯತ್ನ ಭಾರತ – ಯುಎಇ ನಡುವಿನ
ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಉದ್ದೇಶ ಮತ್ತು ವಿಧಾನಕ್ಕೆ ಅನುಗುಣವಾಗಿದೆ, ಈ ಕ್ಯಾಂಪಸ್ ನಲ್ಲಿ ನಿರೀಕ್ಷಿತ ಸಂಸ್ಕೃತಿಗಳು, ಕಲ್ಪನೆಗಳು ಮತ್ತು ದೃಷ್ಟಿಕೋನದ ಮಿಲನ ನಮ್ಮ ಎರಡೂ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ನಿರ್ಣಾಯಕವಾಗಿದೆ.

ಉದಾಹರಣೆಗೆ ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಎಮಿರೇಟ್ಸ ವಿದ್ಯಾರ್ಥಿಗಳು ಮತ್ತು ಇತರೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಜೊತೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಇರಲಿದ್ದಾರೆ. ಇದೇ ರೀತಿಯಲ್ಲಿ ಐಐಟಿ ದೆಹಲಿಯಿಂದ ಯುಎಇ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೋಧಕ ವರ್ಗ ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ. ಇವರೆಲ್ಲರೂ ದೆಹಲಿ ಕ್ಯಾಂಪಸ್ ನ ಅಧ್ಯಾಪಕರೊಂದಿಗೆ ಕೆಲಸ ಮಾಡುತ್ತಾರೆ. ಅಬುಧಾಬಿಯಲ್ಲಿ ಐಐಟಿ ದೆಹಲಿ ಕ್ಯಾಂಪಸ್ ಹೊಂದಿರುವ ಭಾರತ ಮತ್ತು ಯುಎಇ ನಡುವಿನ ಪಾಲುದಾರಿಕೆ ಭರವಸೆ ಮತ್ತು ಸಾಮರ್ಥ್ಯದಿಂದ ಕೂಡಿದೆ.

ಇದು ಖಂಡಿತವಾಗಿಯೂ ಎರಡೂ ದೇಶಗಳು ಮತ್ತು ಎರಡೂ ಜನರ ನಡುವಿನ ದೊಡ್ಡ ಪಾಲುದಾರಿಕೆಯ ಭದ್ರಕೋಟೆಯಾಗಿದೆ. ಇದು ಪ್ರಪಂಚದ ಉತ್ತಮ ಗುರಿ
ಹೊಂದಿರುವ ಜಾಗತಿಕವಾಗಿ ಮತ್ತು ಶೈಕ್ಷಣಿಕ ಜಂಟಿ ವಿದ್ಯಾರ್ಥಿಗಳು, ಉದ್ಯಮಗಳಿಗೆ ಮತ್ತು ಸಂಶೋಧಕರಿಗೆ ತರಬೇತಿ ನೀಡುವ ಮೂಲಕ ಉಭಯ ದೇಶಗಳ
ಮೌಲ್ಯವನ್ನು ಸಮ್ಮಿಳಿತಗೊಳಿಸುತ್ತದೆ. ಐಐಟಿ ದೆಹಲಿ ತನ್ನ ಜಾಗತಿಕ ಹೆಜ್ಜೆಗುರುತುಗಳನ್ನು ಹೆಚ್ಚಿಸುವುದನ್ನು ಮುಂದುವರೆಸಿದ್ದು, ಅದರ ಗಮ್ಯ ಸ್ಥಾನ ಕೇವಲ ಒಂದು  ನಕ್ಷೆಯ ಒಂದು ಬಿಂದುವಲ್ಲ, ಜಾಗತಿಕ ಸಮೃದ್ಧಿಗಾಗಿ ಜ್ಞಾನದ ಹಂಚಿಕೆಯ ಬೃಹತ್ ದೃಷ್ಟಿಕೋನ ಹೊಂದಿದೆ.

ಪ್ರಮುಖ ಭಾರತೀಯ ಸಂಸ್ಥೆಗಳು ಈ ಯುಗದಲ್ಲಿ ಬಂದಿದ್ದು, ಈಗ ಭಾರತದ ವಸುಧೈವ ಕುಟುಂಬಕಂ ತತ್ವಕ್ಕೆ ಅನುಗುಣವಾಗಿ ವಿಶ್ವದ ಮಿತ್ರ ಎಂಬ ಭಾರತದ
ಚಿತ್ರಣವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಮ್ಮ ಜಾಗತಿಕ ಪ್ರಭಾವವನ್ನು ಹೆಚ್ಚಿಸುವತ್ತ ಇದು ಗಮನಹರಿಸಿದೆ.

(ಲೇಖಕರು ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು
ಉದ್ಯಮಶೀಲತೆ ಸಚಿವರು)