Saturday, 21st September 2024

‘ಭಾರತ ರತ್ನ’ ನೀಡಲು ಅರ್ಹತೆ ಏನಾದರೂ ಇದೆಯೇ?

ಕಬ್ಬನ್‌ಪೇಟೆ ದಕ್ಷಿಣಾಮೂರ್ತಿ, ಲೇಖಕರು

ಅಕ್ಟೋಬರ್ 24, ರಂದು ‘ವಿಶ್ವವಾಣಿ’ ಪತ್ರಿಿಕೆಯಲ್ಲಿ ವಿಜಯಕುಮಾರ ಎಸ್.ಅಂಟಿನ ಇವರು ‘ಭಾರತ ರತ್ನ, ನೊಬೆಲ್ ಪ್ರಶಸ್ತಿಿ ಇವರಿಗೇಕಿಲ್ಲ?’ ಎಂದು ಪ್ರಶ್ನೆೆ ಮಾಡಿದ್ದರು. ಬಹುಶಃ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾಹಸಗಾಥೆ ತಿಳಿದಿಲ್ಲವೆಂದು ಭಾವಿಸಿ, ಅವರ ವಿಚಾರ ಇಲ್ಲಿ ಪ್ರಸ್ತಾಾಪಿಸಲಾಗಿದೆ. ಇದನ್ನು ಓದಿದ ನಂತರ ಅವರ ಪ್ರತಿಕ್ರಿಿಯೆ ಬದಲಾಗಬಹುದೇನೋ!

ಗಾಂಧೀಜಿ ಇಂದಿಗೂ ಒಬ್ಬ ನೇತಾರನಾಗಿ ಪ್ರಸ್ತುತರು. ಅವರ ಆರಾಧನೆ ಸುಲಭ; ಆದರೆ, ಅದರ ಅನುಸರಣೆ ಕ್ಲಿಿಷ್ಟಕರ. ಇಂದಿನ ರಾಜಕಾರಣಿಗಳು ಏನಿಲ್ಲವೆಂದರೂ ಎರಡು ರೀತಿಗಳಲ್ಲಾಾದರೂ ಗಾಂಧಿ ತತ್ತ್ವಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

1939ರಲ್ಲಿ ಹಿಂದೆಯೇ ‘ಹರಿಜನ’ ಪತ್ರಿಿಕೆಯಲ್ಲಿ ಗಾಂಧೀಜಿ ‘ರಾಜಕೀಯ ರಂಗದಲ್ಲಿ ಓರ್ವ ವಾಸ್ತವವಾದಿ ಆಗಿದ್ದರು. ಕಾಂಗ್ರೆೆಸ್ ಸಂಘಟನೆಯ ಪದಾಧಿಕಾರಿಗಳಲ್ಲಿ ಭ್ರಷ್ಟಾಾಚಾರ ನಡೆಯುತ್ತಿಿದ್ದುದನ್ನು ಅರಿತವರು. ಮಂತ್ರಿಗಳು ಹಾಗೂ ಶಾಸಕರು ಎನಿಸಿಕೊಂಡವರು ತಮ್ಮ ವೈಯಕ್ತಿಿಕ ಹಾಗೂ ಸಾರ್ವಜನಿಕ ನಡೆವಳಿಕೆಯ ಮೇಲೆ ಸ್ವತಃ ಕಣ್ಣಿಿಡಬೇಕಾಗುತ್ತದೆ. ಅವರು ಸೀಸರ್‌ನ ಪತ್ನಿಿಯಂತೆ ಸಂಶಯಾತೀತರಾಗಿ ಇರಬೇಕಾಗುತ್ತದೆ. ಅವರು ಸ್ವಂತಕ್ಕಾಾಗಲಿ, ತಮ್ಮ ಬಂಧು-ಮಿತ್ರರಿಗಾಗಲಿ, ಯಾವುದೇ ಪ್ರಯೋಜನಗಳನ್ನು ಅಥವಾ ಲಾಭಗಳನ್ನು ಮಾಡಿಕೊಳ್ಳಕೂಡದು. ಅವರ ಬಂಧುಗಳೋ, ಮಿತ್ರರೋ ಯಾವುದಾದರೂ ಹುದ್ದೆೆಗೆ ಅಭ್ಯರ್ಥಿಯಾಗಿ ಬಂದು ಆ ಹುದ್ದೆೆಯನ್ನು ಪಡೆದರೆ, ಅದಕ್ಕೆೆ ಕಾರಣ ಅವರು ಇತರ ಅಭ್ಯರ್ಥಿಗಳಿಗಿಂತ ಉತ್ತಮ ಎಂಬ ಕಾರಣಕ್ಕಾಾಗಿ ಅಂಥ ಹುದ್ದೆೆ ಅವರಿಗೆ ಸಿಕ್ಕಿಿದೆ ಎನ್ನುವ ಹಾಗಾಗಬೇಕು’ ಎಂದು ಹೇಳಿದ್ದರು, ಹೇಳಿದಂತೆ ಬದುಕಿದರು. ಅವರ ಕುಟುಂಬವೇ ಇದಕ್ಕೆೆ ಸಾಕ್ಷಿ.

2014ರ ಮಾತು. ‘ನರೇಂದ್ರ ಮೋದಿ ಏನಾದರೂ ಪ್ರಧಾನಿಯಾದರೆ ನಾನು ದೇಶ ತ್ಯಾಾಗ ಮಾಡುತ್ತೇನೆ’ ಎಂದರು ಡಾ.ಯು.ಆರ್.ಅನಂತಮೂರ್ತಿ. ದುರಾದೃಷ್ಟವಶಾತ್ ತೀರಿ ಕೊಂಡರು. ಅವರೇನಾದರೂ ಜೀವಂತವಾಗಿದ್ದಿದ್ದರೆ ಮಾತು ಉಳಿಸಿಕೊಳ್ಳುತ್ತಿಿದ್ದರೋ? ಇದೇ ಕಾಲದಲ್ಲಿ, ನೊಬೆಲ್ ಪ್ರಶಸ್ತಿಿ ಖ್ಯಾಾತಿಯ ಅಮರ್ತ್ಯಸೇನ್. ‘ನರೆಂದ್ರ ಮೋದಿ ಉತ್ತಮ ಪ್ರಧಾನಿ ಆಗುವುದಿಲ್ಲ’ ಎಂದು ಹೇಳಿದ್ದಲ್ಲದೆ ಪ್ರಶಸ್ತಿಿ ವಾಪ್ಸಿಿ ಚಳವಳಿ ದಿನಗಳಲ್ಲಿ, ಇಲ್ಲಿ ಅಸಹನೆ, ಹಿಂದು ಮೂಲದ್ದು ಅತಿಯಾಯ್ತು ಎಂದೂ ಕೂಗಿದ್ದರು.

ಈ ನೊಬೆಲ್ ವಿಜೇತನ ಕಥೆ ಹೀಗಿದೆ; ಶಾಂತಿನಿಕೇತನದಲ್ಲಿ ಹುಟ್ಟಿಿ ಬೆಳೆದು ಬಂಗಾಳ ಪತ್ನಿಿಯನ್ನು ಹೊಂದಿದ್ದ ಇವರು, ಪತ್ನಿಿಯ ನಿಧನಾನಂತರ ಇಬ್ಬರು ಪರದೇಶಿ ಪತ್ನಿಿಯರನ್ನು ಹೊಂದಿದ್ದರು. ಪತ್ನಿಿ ಹೆಸರು ಎಮ್ಮಾಾ ಈ ರಾಥಚೈಲ್‌ಡ್‌ ಎಂದು. ಜೀನ್‌ಡ್ರೆೆಸ್ಸಿಿ ಎಂಬ ಅಮರ್ತ್ಯರ ಪುತ್ರ, ಸೋನಿಯಾರ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಿದ್ದರು. ಅಮರ್ತ್ಯಸೇನರಿಗೆ ಹೆಣ್ಣು ಕೊಟ್ಟ ಮಾವ, ನಾಥೇನಿಯಲ್ ನೋಯರ್ ವಿಕ್ಟರ್ ರಾಥಚೈಲ್‌ಡ್‌.

2007ರಿಂದ 2014ರ ವರೆಗೂ 6ನೇ ಶತಮಾನದಿಂದ 12ನೇ ಶತಮಾನದವರೆಗೆ ಮೆರೆದಿದ್ದ ನಳಂದ ಪ್ರಾಾಚೀನ ವಿಶ್ವವಿದ್ಯಾಾಲಯದ ಪುನರುತ್ಥಾಾನದ ಕಾರ್ಯ ಕೈಗೊಳ್ಳಲು ಅಮರ್ತ್ಯಸೇನ್‌ರನ್ನು ಕುಲಪತಿಯನ್ನಾಾಗಿ ಮಾಡಿದರು. ನೊಬೆಲ್ ಪ್ರಶಸ್ತಿಿ ವಿಜೇತ ಅಮರ್ತ್ಯಸೇನರು ವಿಶ್ವವಿದ್ಯಾಾಲಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ್ದರು. ಅದರ ಪರಿ ಹೀಗಿತ್ತು. ವಿಶ್ವ ವಿದ್ಯಾಾಲಯ ಫೈವ್‌ಸ್ಟಾಾರ್ ಹೋಟೆಲ್ ಆಗಿತ್ತು. ಅವರಿಗೆ ಮಾಸಿಕ ತೆರಿಗೆ ರಹಿತ 5 ಲಕ್ಷ ರು. ಸಂಬಳ ಬಯಸಿದಾಗ ವಿದೇಶಕ್ಕೆೆ ಹೋಗಿ ಬರಬಹುದು; ಯಾರನ್ನೂ ಬೇಕಾದರೂ ವಿಶ್ವವಿದ್ಯಾಾಲಯಕ್ಕೆೆ ನೇಮಿಸಿಕೊಳ್ಳಬಹುದಿತ್ತು. ಇಂಥ ಅದ್ಭುತ ಅವಕಾಶವನ್ನು ಅವರು ಪೊಗದಸ್ತಾಾಗಿಯೇ ಬಳಸಿಕೊಂಡರು.

ತಮ್ಮನ್ನು ನೇಮಿಸಿದ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರಿಗೆ ಅವರ ನಿರೀಕ್ಷೆಗೂ ಮೀರಿ ಸಹಾಯ ಮಾಡಿದ್ದರು. ತಮ್ಮ ಅಧಿಕಾರ ಬಳಸಿಕೊಂಡು ದೆಹಲಿ ವಿಶ್ವವಿದ್ಯಾಾಲಯದಲ್ಲಿದ್ದ ಪ್ರೊೊ.ಉಪಿಂದರ್‌ಸಿಂಗ್ ಅವರನ್ನು ನಳಂದಾಗೆ ಪ್ರಾಾಧ್ಯಾಾಪಕರನ್ನಾಾಗಿ ನೇಮಿಸಿಕೊಂಡರು. ಅವರ ಜತೆಯಲ್ಲಿ ಅವರ ಸ್ನೇಹಿತೆಯರಾದ ಇನ್ನು ಮೂವರು ನಳಂದಾಕ್ಕೆೆ ಬಂದರು. ಈ ಉಪಿಂದರ್ ಸಿಂಗ್ ಬೇರೆ ಯಾರೂ ಅಲ್ಲ. ಮನಮೋಹನ್ ಸಿಂಗ್ ಅವರ ಹಿರಿಯ ಮಗಳು. ವಿಶೇಷ ಅಂದರೆ, ಉಪಿಂದರ್ ಸಿಂಗ್ ದೆಹಲಿಯಲ್ಲಿದ್ದರು. ಅಮೆರಿಕದಲ್ಲಿದ್ದ ದಾಮನ್‌ಸಿಂಗ್ ಮತ್ತು ಅಮ್ರಿಿತ್‌ಸಿಂಗ್ ಅವರು ಅಮೆರಿಕದಿಂದಲೇ ನಳಂದ ವಿವಿಯ ಪ್ರಾಾಚಾರ್ಯರಾಗಿಬಿಟ್ಟಿಿದ್ದರು; ಸಂಬಳವು ಅಮೆರಿಕಕ್ಕೇ ಹೋಗುತ್ತಿಿತ್ತು. ಈ ಸಿಂಗ್‌ದ್ವಯರು ಯಾರು ಗೊತ್ತೇ? ಡಾ.ಮನಮೋಹನ್ ಸಿಂಗ್ ಅವರ ಮಧ್ಯಮ ಹಾಗೂ ಕೊನೆಯ ಹೆಣ್ಣುಮಕ್ಕಳು! ಹೀಗೆ ಆಡಳಿತ ನಿರ್ವಹಿಸಿ ಏಳು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ 2,729 ಕೋಟಿ ರುಪಾಯಿಗಳನ್ನು ಪಡೆದಿದ್ದರು.

ಇನ್ನು ಡಾ.ಮನಮೋಹನ್ ಸಿಂಗ್‌ರ ಕಥೆ ಕೇಳಿ. ಸೀಮೆಎಣ್ಣೆೆ ಬುಡ್ಡಿಿ ದೀಪದಲ್ಲೇ ಓದಿ, ಬೆಳೆದು ಇಂಗ್ಲೆೆಂಡಿಗೆ ಹೋಗಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಭಾರತಕ್ಕೆೆ ಬಂದವರೇ ದಿ.ಇಂದಿರಾಗಾಂಧಿ ಅವರ ಮನೆಯ ಊಳಿಗದವರಾಗಿಬಿಟ್ಟರು. 1969ರಿಂದ ದೆಹಲಿ ಗದ್ದುಗೆಗೆ ಹತ್ತಿಿರದವರಾಗಿದ್ದು, 1987ರಲ್ಲಿ ಪದ್ಮಭೂಷಣ ಗಿಟ್ಟಿಿಸಿದರು. ಇವರು 80ರ ದಶಕದಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದರೂ ಗದ್ದುಗೆಗೆ ಸಮೀಪದವರಾಗಿದ್ದರೂ ಆರ್ಥಿಕ ಅನಾಹುತ ಬೆಳೆದಿತ್ತು.

ಅಮರ್ತ್ಯಸೇನರ ಪತ್ನಿಿ ಹೆಸರು ಎಮ್ಮಾಾ ಈ ರಾಥಚೈಲ್‌ಡ್‌ ಎಂದು. ಈ ರಾಥಚೈಲ್‌ಡ್‌ (ಅಥವಾ ರಾಥ್‌ಷೀಲ್ಡ) ಕುಟುಂಬ ಹಣಗಳಿಕೆಗೆ ನಾನಾ ವಿಧಾನಗಳ ಆಕ್ಷೇಪಾರ್ಹ ಬಳಕೆಯ ದಾರಿಯದು ಎಂದು ವರದಿಗಳು ಹೇಳುತ್ತವೆ. ಈಕೆಯ ಐಶ್ವರ್ಯ ಕೋಟ್ಯಂತರ ಡಾಲರ್ ನಷ್ಟು.* ಎಜಿಜಜ್ಝಛಿ ಖಟ್ಚಜಿಛಿಠಿ ಸಂಸ್ಥೆೆ ಎಂಬುದು ಈ ಕುಟುಂಬದ ವಶದಲ್ಲಿದೆ. ‘ಭಾರತದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿಿವೆ’ ಎನ್ನುವ ಕೂಗುಮಾರಿ ಸಂಸ್ಥೆೆ ಇದು. ಅಮರ್ತ್ಯಸೇನರೇ ಇದರ ಸೇನಾನಿ, ಹೈಪರ್ ಆ್ಯಕ್ಟಿಿವ್ ಎಂಬ ಅತ್ಯುತ್ಸಾಾಹಿ ಕ್ರೈಸ್ತರು. ಭಾರತೀಯ ಅದರಲ್ಲೂ ಹಿಂದು ಹಿತಾಸಕ್ತಿಿಯ ಪರಮ ವಿರೋಧಿಗಳು. ಭಾರತದಿಂದ ಈ ಸಂಸ್ಥೆೆ ಬಹಳ ದೋಚಿದೆ. ಎಲ್ಲೆೆಲ್ಲಿ ಬಡತನ, ಅಜ್ಞಾಾನ ಇದೆಯೋ, ಆ ಸಮುದಾಯಗಳು ಇವರ ಅಸಲು ಬಂಡವಾಳ. ಸ್ಟಾಾಕ್ ಮಾರ್ಕೆಟ್‌ಗಳ ಮಾಹಿತಿ ಬದಲಿಸಿ, ದಿಕ್ಕು ತಪ್ಪಿಿಸಿ, ತಪ್ಪುು ಮಾಹಿತಿಯಾದರೂ ಇತ್ತು. ಯುದ್ಧಗಳು ಎಲ್ಲೆೆಲ್ಲಿ ನಡೆಯುವುವೋ ಅಲ್ಲೆೆಲ್ಲ ಹಣ ಒದಗಿಸುತ್ತ ಬ್ಯಾಾಂಕು, ಸಂಸ್ಥೆೆಗಳ ಹಿಡಿತದಲ್ಲಿಡುತ್ತ, ಇಲ್ಲಿ ಪತ್ರಿಿಕಾ, ವಿದ್ಯುನ್ಮಾಾನಗಳನ್ನೂ ಹಿಡಿದು, ಭಾರತ ವಿರೋಧಿಗಳ ಮುಖವಾಣಿಯಾಗಿರುತ್ತ ನಮ್ಮವರನ್ನು ದಾರಿ ತಪ್ಪಿಿಸುತ್ತಿಿದೆ.

ಈ ದಂಪತಿಯ ಪುತ್ರ ಯುಪಿಎ 1-2 ಆಡಳಿತ (2004-2014) ದಲ್ಲಿದ್ದಾಾಗ ಕಾಂಗ್ರೆೆಸ್ಸಿಿನ ಮೂಲದಿಂದ ತುಂಬ ಹಣ, ಆಸ್ತಿಿ, ಮಾಡಿಕೊಂಡರು. ಜೀನ್‌ಡ್ರೆೆಸ್ಸಿಿ ಎಂಬ ಅಮರ್ತ್ಯರ ಪುತ್ರ, ಸೋನಿಯಾರ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಮುಖ್ಯವಿಷಯಕ್ಕೆೆ ಬರುವುದಾದರೆ, 1933ರಲ್ಲಿ ಹುಟ್ಟಿಿದ್ದ ಈ ಅಮರ್ತ್ಯಸೇನರಿಗೆ ಆಸೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. 2014ರಲ್ಲಿ ಮೋದಿ ಗೆದ್ದ ಕೂಡಲೇ ಬಹು ಪರಾಕ್ ಹೇಳಿದರು. ಆದರೆ, ಅದು ಫಲ ನೀಡಲಿಲ್ಲ. ತಾನು, ಅರ್ಥಶಾಸ್ತ್ರ ಹಾಗೂ ತತ್ವಶಾಸ್ತ್ರದ ಸಮ್ಮಿಿಲನ ಎಂದು ಹೇಳಿಕೊಳ್ಳುವ ಇವರು, ನಮ್ಮ ಬುದ್ಧಿಿ ಜೀವಿಗಳಂತೆ ಸರಕಾರಿ ಜೀತದಾಳುಗಳಾಗಿದ್ದರು. ಈ ಮಹಾಶಯ 2014ರ ಮೇ ತಿಂಗಳಿನಲ್ಲಿ ಮೋದಿ ಪ್ರಧಾನಿಯಾದ ಕೂಡಲೇ ಅಮಾರ್ತ್ಯಸೇನರಿಗೆ ನೀಡಲಾಗಿದ್ದ ಸವಲತ್ತುಗಳೆಲ್ಲಾಾ ಬಂದ್ ಆಗಿಬಿಟ್ಟವು.

ಈ ಇಬ್ಬರು ಅರ್ಥಶಾಸ್ತ್ರಜ್ಞರ ಕಾಲದಲ್ಲಿ ದೇಶವು ಪಾತಾಳ ಕಂಡಿತು. 10 ವರ್ಷಗಳ ಅಡಳಿತದ ನಂತರ 2014ರ ಜನೆವರಿಯಲ್ಲಿ ಸಿಂಗ್ ಪತ್ರಿಿಕಾಗೋಷ್ಠಿಿ ಕರೆದು ‘ನಾವು ಸೋತೆವು. ಉದ್ಯೋೋಗ ಸೃಷ್ಟಿಿಯಲ್ಲಿ ಸೋತೆವು. ಆರ್ಥಿಕ ಅಭಿವೃದ್ಧಿಿ ದರ ಹತ್ತು ವರ್ಷಗಳಲ್ಲೇ ಕನಿಷ್ಠ ಮಟ್ಟದಲ್ಲಿದೆ. ವಿದೇಶಿ ವಿನಿಮಯ ದರ ಪಾತಾಳಕ್ಕೆೆ ಬಿದ್ದಿದೆ. ಭ್ರಷ್ಟಾಾಚಾರ ತಡೆಗಟ್ಟಲು ಆಗಲಿಲ್ಲ’ ಎಂದು ಹೇಳಿದ್ದರು. ‘ಸಾರ್ವಜನಿಕ ಹುದ್ದೆೆಯನ್ನು ಸ್ವಂತದ ಲಾಭ ಅಥವಾ ತೃಪ್ತಿಿಗಾಗಿ ಬಳಸುವುದು ಭ್ರಷ್ಟಾಾಚಾರ’ ಎಂದು ಕರೆಸಿಕೊಳ್ಳುತ್ತದೆ. ಇದು ಭ್ರಷ್ಟಾಾಚಾರದ ಬಗ್ಗೆೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕೃತವಾದ ಪರಿಭಾಷೆ. ಸಂಯುಕ್ತ ರಾಷ್ಟ್ರದ ಎಲ್ಲ ಸಂಸ್ಥೆೆಗಳು ಇದೇ ಪರಿಭಾಷೆಯನ್ನು ಒಪ್ಪಿಿ ವ್ಯವಹರಿಸುತ್ತವೆ. ಇದು ಸಾರ್ವಜನಿಕ ಹುದ್ದೆೆಗಳ ಕುರಿತಾದ ಪರಿಭಾಷೆ. ವಿಶ್ವ ಬ್ಯಾಾಂಕ್ ಇದನ್ನೇ ನಮ್ಮ ಸರಕಾರಗಳ ಮೇಲೂ ಅನ್ವಯಿಸುತ್ತದೆ.

ಇದರ ಪ್ರಕಾರ, ಭಾರತದ ಅರ್ಥಶಾಸ್ತ್ರಜ್ಞರುಗಳಾದ, ನೊಬೆಲ್ ಪ್ರಶಸ್ತಿಿ ವಿಜೇತ ಅಮರ್ತ್ಯಸೇನ್ ಮತ್ತು ಮಾಜಿ ಪ್ರಧಾನ ಮಂತ್ರಿಿ ಡಾ.ಮನಮೋಹನ್ ಸಿಂಗ್ ಇಬ್ಬರೂ ಭ್ರಷ್ಟಾಾಚಾರಿಗಳೇ ಎಂದಂತಾಯಿತು. ಒಬ್ಬರು ಸರಕಾರಿ ಹುದ್ದೆೆ, ಅಧಿಕಾರಗಳನ್ನು ದುರುಪ ಯೋಗಿಸಿಕೊಂಡು 2,729 ಕೋಟಿ ರು. ಗಳನ್ನು ನುಂಗಿ ಹಾಕಿದರೆ, ಇನ್ನೊೊಬ್ಬರು ಅಮರ್ತ್ಯಸೇನ್‌ರಂಥವರನ್ನು ನೇಮಕ ಮಾಡಿದ್ದು, ಪ್ರತಿಯಾಗಿ ತಮ್ಮ ಮಕ್ಕಳಿಗೆ ಹುದ್ದೆೆಗಳನ್ನು ಪಡೆದುಕೊಂಡದ್ದು ಇವರೆಡೂ ಭ್ರಷ್ಟಾಾಚಾರ ಎನಿಸಿಕೊಳ್ಳುತ್ತದೆ. ಈಗ ಇವರಲ್ಲಿ ಒಬ್ಬರಾದ ಮಾಜಿ ಪ್ರಧಾನ ಮಂತ್ರಿಿಗಳಿಗೆ ‘ಭಾರತರತ್ನ’ ಕೊಡಬೇಕೇ?