Saturday, 21st September 2024

ಮನುಕುಲಕ್ಕೆ ವರ, ಮನುಕುಲಕ್ಕೆ ಶಾಪ ! ಗಸಗಸೆ ಗಿಡ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ನಮ್ಮ ಭಾರತೀಯ ಸಿಹಿ ತಿನಿಸುಗಳಲ್ಲಿ ಪಾಯಸವು ಮುಖ್ಯವಾದದ್ದು. ಅದರಲ್ಲೂ ಗಸಗಸೆಯ ಪಾಯಸದ ರುಚಿಯನ್ನು ವರ್ಣಿಸುವುದು ಕಷ್ಟ. ಹೊಟ್ಟೆ ತುಂಬ ಗಸಗಸೆ ಪಾಯಸವನ್ನು ಕುಡಿದು ಬಿಟ್ಟರೆ ಆಹಾ! ಎಂತಹ ಸುಖನಿದ್ದೆ! ಸಂಜೆಯವರೆಗೂ ಎಚ್ಚರವೇ ಆಗುವುದಿಲ್ಲ! ಎದ್ದ ಮೇಲೆ ಒಂದು ರೀತಿಯ ಸುಖವು
ಮೈಯನ್ನೆಲ್ಲ ತುಂಬಿರುತ್ತದೆ. ತೃಪ್ತಿಯು ಮೈದುಂಬಿರುತ್ತದೆ.

ಈ ಎಲ್ಲ ಅನುಭವಗಳಿಗೆ ಕಾರಣ, ಒಂದು ಗ್ರಾಂ ಗಸಗಸೆಯಲ್ಲಿರುವ 33 ಮೈಕ್ರೋಗ್ರಾಂ ಮಾರ್ಫಿನ್ ಮತ್ತು 14 ಮೈಕ್ರೋಗ್ರಾಂ ಕೋಡಿನ್! ನಮ್ಮ ಭೂಮಿಯ ಮೇಲೆ ಇರುವ ಅಸಂಖ್ಯ ಗಿಡ-ಮರಗಳಲ್ಲಿ ಮನುಕುಲಕ್ಕೆ ವರವೂ ಆಗಿರುವ ಶಾಪವೂ ಆಗಿರುವ ಸಸ್ಯ ಎಂದರೆ, ಅದು ಗಸಗಸೆ ಗಿಡ. ಗಸಗಸೆ ಗಿಡದಿಂದ ತಯಾ ರಿಸುವ ಮಾರ್ಫಿನ್, ಅಂಗ ಬದಲಿ ಜೋಡಣೆಯಂತಹ ಕ್ಲಿಷ್ಟ ಶಸಚಿಕಿತ್ಸೆಗಳ ಕನಸನ್ನು ನನಸು ಮಾಡಿದ್ದರೆ, ಇದೇ ಗಸಗಸೆಯ ಗಿಡದಿಂದ ತಯಾರಿಸುವ ಅಫೀಮು ಮತ್ತು ಅದರ ಸಂಯುಕ್ತಗಳು ಯುವ ಜನತೆಯನ್ನು ದಾಸ್ಯಕ್ಕೆ ದೂಡಿರುವುದಲ್ಲದೆ, ಭಯೋತ್ಪಾದನೆಗೆ ಅಗತ್ಯವಾದ ಹಣವನ್ನು ಒದಗಿಸುತ್ತಿದೆ.

ಪೆಪಾವರ್ ಸಾಮ್ನಿಫೆರಮ್ ಎಂಬ ವೈಜ್ಞಾನಿಕ ನಾಮಧೇಯವನ್ನುಳ್ಳ ಗಸಗಸೆಯ ಗಿಡವು ನವಶಿಲಾ ಯುಗದ ನಮ್ಮ ಪೂರ್ವಜನಿಗೆ ಪರಿಚಯವಿತ್ತು. ಸ್ಪೇನ್ ದೇಶದ ಬ್ಯಾಟ್‌ಕೇವ್ ಎಂಬ ಗುಹೆಯಲ್ಲಿ ಗಸಗಸೆ ಗಿಡದ ಅಸಂಖ್ಯ ಕಾಯಿಗಳು ದೊರೆತಿವೆ. ಇವನ್ನು ಕಾರ್ಬನ್ ಡೇಟಿಂಗ್-14 ಪರೀಕ್ಷೆಗೆ ಒಳಪಡಿಸಿದಾಗ, ಇವು ಕನಿಷ್ಠ ಕ್ರಿ.ಪೂ. 4200 ವರ್ಷಗಳಷ್ಟು ಹಳೆಯದ್ದು ಎಂದು ಗೊತ್ತಾಗಿದೆ. ಸ್ಪೇನ್ ಮಾತ್ರವಲ್ಲದೆ ಸ್ವಿಜರ್ಲ್ಯಾಂಡ್ ಮತ್ತು ಜರ್ಮನಿ ಯಲ್ಲಿ ದೊರೆತ ಪೂರ್ವಜರ ಸಮಾಧಿಗಳ ಜತೆಯಲ್ಲಿ ಗಸಗಸೆಯ ಕಾಯಿಗಳು ದೊರೆತಿವೆ.

ಕಂಚುಯುಗ ಮತ್ತು ಕಬ್ಬಿಣ ಯುಗದ ಪೂರ್ವಜರಿಗೆ ಈ ಗಿಡದ ಪರಿಚಯವಿತ್ತು. ಮೆಸೊಪೊಟೋಮಿಯ ಸಂಸ್ಕ ತಿಗೆ ಸುಮೇರಿಯನ್ನರು ಕ್ರಿ.ಪೂ.3400 ವರ್ಷ ಗಳಷ್ಟು ಹಿಂದೆ ಗಸಗಸೆಯ ಗಿಡವನ್ನು ಹುಲ್-ಜಿಲ್ ಎಂದು ಕರೆಯುತ್ತಿದ್ದರು. ಆನಂದವನ್ನು ಕೊಡುವ ಗಿಡ ಎಂದು ಇದರ ಅರ್ಥ. ಸುಮೇರಿಯನ್ ಸಂಸ್ಕೃತಿಗೆ ನಿಪ್ಪೂರ್ ಪ್ರದೇಶದಲ್ಲಿ ದೊರೆತ ಜೇಡಿಮಣ್ಣಿನ ಹಲಗೆಯ ಮೇಲೆ ಬೆಳಗಿನ ಹೊತ್ತು ಗಸಗಸೆಯ ಕಾಯಿಯ ಹಾಲನ್ನು ಸಂಗ್ರಹಿಸಿ, ಸಂಜೆ ಅಫೀಮನ್ನು ಸಿದ್ಧ ಪಡಿಸುತ್ತಿದ್ದ ಬಗ್ಗೆ ವಿವರಣೆಯಿದೆ. ಅಸ್ಸೀರಿಯನ್ನರು, ಬ್ಯಾಬಿಲೋನಿಯನ್ನರು ಮತ್ತು ಈಜಿಪ್ಷಿಯನ್ನರು ಗಸಗಸೆ ಗಿಡವನ್ನು ಬೆಳೆಸುತ್ತಿದ್ದರು ಹಾಗೂ ಅದನ್ನು ಉಪಯೋಗಿಸುತ್ತಿದ್ದರು.

ಗ್ರೀಕರು ತಮ್ಮ ಬಂಧಿಗಳನ್ನು ಕೊಲ್ಲಲು ಹೆಮ್ಲಾಕ್ ವಿಷವನ್ನು ಅಪೀಮಿನ ರಸದಲ್ಲಿ ಬೆರೆಸಿ ಕೊಡುತ್ತಿದ್ದರು. ಅದನ್ನು ಕುಡಿದ ವ್ಯಕ್ತಿಯು ನಿದ್ರೆಯಲ್ಲಿಯೇ ಸಾವನ್ನಪ್ಪು ತ್ತಿದ್ದ. ಈಜಿಪ್ಷಿಯನ್ ವೈದ್ಯರು ಸ್ಪಾಂಜಿಯ ಸಾಮ್ನಿಫೆರವನ್ನು ಗಂಭೀರ ಶಸ್ತ್ರಚಿಕಿತ್ಸೆಗಳಲ್ಲಿ ಬಳಸುತ್ತಿದ್ದರು. ಅಂದರೆ ಅಫೀಮನ್ನು ಆಲ್ಕೋಹಾಲಿನಲ್ಲಿ ಬೆರೆಸಿ ಅದರಲ್ಲಿ ಸ್ಪಂಜನ್ನು ಮುಳುಗಿಸುತ್ತಿದ್ದರು. ಈ ಸ್ಪಂಜನ್ನು ರೋಗಿಯ ಮೂಗಿನ ಬಳಿ ಇಡುತ್ತಿದ್ದರು. ಹೀಗೆ ಅಫೀಮನ್ನು ಉಸಿರಿನ ಮೂಲಕ ಒಳಗೆಳೆದು ಕೊಂಡಾಗ ಆ ವ್ಯಕ್ತಿಗೆ ನಿದ್ರೆ ಬರುತ್ತಿತ್ತು. ಆಗ ಶಸ್ತ್ರಚಿಕಿತ್ಸೆಯ ನೋವು ಆತನಿಗೆ ತಿಳಿಯುತ್ತಿರಲಿಲ್ಲ. ಶಸ್ತ್ರಚಿಕಿತ್ಸೆಯು ಮುಗಿಯುವವರಿಗೂ ಸ್ಪಂಜನ್ನು ಮತ್ತೆ ಮತ್ತೆ ಬದಲಿಸು ತ್ತಿದ್ದರು.

ಈಜಿಪ್ಷಿಯನ್ನರು ಬೆಳೆಯುತ್ತಿದ್ದ ಅಫೀಮನ್ನು -ನೀಶಿಯನ್ ಮತ್ತು ಮಿನೋವನ್ ವರ್ತಕರು ಕೊಂಡುಕೊಂಡು ಅದನ್ನು ಗ್ರೀಸ್, ಕಾರ್ಥೇಜ್ ಮತ್ತು ಯೂರೋಪಿನ ಇತರ ದೇಶಗಳಿಗೆ ಮಾರುತ್ತಿದ್ದರು. ಅಸ್ಸೀರಿಯನ್ ಮತ್ತು ಬ್ಯಾಬಿಲೋನಿಯನ್ ಪ್ರದೇಶವನ್ನು ಪರ್ಷಿಯನ್ನರು ಗೆದ್ದುಕೊಂಡಾಗ, ಅವರಿಗೂ ಅಪೀಮಿನ
ಪರಿಚಯವಾಯಿತು. ಈಜಿಪ್ಟ್‌ನಲ್ಲಿ ಅಫೀಮನ್ನು ಪುರೋಹಿತ ವರ್ಗದವರು, ಮಂತ್ರ-ತಂತ್ರವಾದಿಗಳು ಹಾಗೂ ಸೈನಿಕರು ಮಾತ್ರ ಬಳಸುತ್ತಿದ್ದರು. ಈಜಿಪ್ಷಿ ಯನ್ನರ ನಂಬಿಕೆಯ ಅನ್ವಯ ಅಪೀಮಿನ್ನು ಕಂಡು ಹಿಡಿದದ್ದು ಥೊತ್ ಎಂಬ ದೇವತೆ. ರಾ ದೇವತೆಯ ತಲೆನೋವನ್ನು ಕಡಿಮೆ ಮಾಡಲು, ಇಸಿಸ್ ದೈವವು ಅಪೀಮಿನ್ನು ನೀಡಿತು ಎಂಬ ಕಥೆಯೂ ಪ್ರಚಲಿತದಲ್ಲಿತ್ತು.

ಗ್ರೀಕ್ ದೇವತೆಗಳಾದ ಹಿಪ್ರೋಸ್ (ನಿದ್ರಾದೇವತೆ) ನಿಕ್ಸ್ (ಇರುಳಿನ ದೇವತೆ) ಥನಾಟಸ್ (ಮೃತ್ಯುದೇವತೆ) ಮುಂತಾದ ದೇವತೆಗಳ ಶಿಲ್ಪಗಳಲ್ಲಿ ಗಸಗಸೆ ಗಿಡವಿರುತ್ತಿತ್ತು. ಹಾಗೆಯೇ ಅಪೋಲೊ, ಆಸ್ಕ್ಲೆಪಿಯಸ್, ಪ್ಲೂಟೊ, ಡಿಮೀಟರ್, ಅಫ್ರೋದಿತೆ, ಇಸಿಸ್ ಮುಂತಾದವರ ಬಳಿಯೂ ಗಸಗಸೆ ಗಿಡವು ಇರುವಂತೆ ಚಿತ್ರಿಸುತ್ತಿದ್ದರು. ಪೆಡಾನಿಯಸ್ ಡಯಾ ಸ್ಕೋರಿಡೆಸ್ ಎನ್ನುವ ಗ್ರೀಕ್ ವೈದ್ಯನು ಡಿ ಮೆಟೀರಿಯ ಮೆಡಿಕ ಎಂಬ ಐದು ವೈದ್ಯಕೀಯ ಸಂಪುಟಗಳನ್ನು ಬರೆದ.
ಇದು ಕ್ರಿ.ಶ. 116ನೆಯ ಶತಮಾನದವರೆಗೆ ವೈದ್ಯರ ಪ್ರಾಮಾಣಿಕ ಔಷಧಗಳ ಗ್ರಂಥವಾಗಿತ್ತು. ಇದರಲ್ಲಿ ಅಪೀಮಿನ ವೈವಿಧ್ಯಮಯ ವೈದ್ಯಕೀಯ ಉಪಯೋಗ ಗಳ ಬಗ್ಗೆ ವಿವರಗಳಿವೆ.

ಕ್ರಿ.ಶ.400-ಕ್ರಿ.ಶ.1200ರ ನಡುವೆ ಅರಬ್ಬರು ಚೀನಿಯರಿಗೆ ಅಫೀಮನ್ನು ಪರಿಚಯ ಮಾಡುವುದರ ಜತೆಯಲ್ಲಿ, ಅದನ್ನು ರಫ್ತು ಮಾಡಲಾರಂಭಿಸಿದರು. ಕ್ರಿ.ಶ.600ರ ಹೊತ್ತಿಗೆ ಅರಬ್ಬರು ಅಫೀಮನ್ನು ಭಾರತೀಯರಿಗೂ ಪರಿಚಯಿಸಿದರು. ಕಾಶ್ಮೀರದ ಪಂಡಿತನ ನರಸಿಂಹನ ರಾಜ ನಿಘಂಟುವಿನಲ್ಲಿ ಅಪೀಮಿನ ಮೊದಲ ಪ್ರಸ್ತಾಪ ಬರುತ್ತದೆ. ನಂತರ ಮದನಪಾಲ, ಭಾವಮಿಶ್ರ ಮುಂತಾದವರು ಅಪೀಮಿನ ವೈದ್ಯಕೀಯ ಉಪಯೋಗಗಳ ಬಗ್ಗೆ ದಾಖಲಿಸಿದ್ದಾರೆ. ಇವರಿಗೆ ಮೊದಲು ವೇದಗಳಲ್ಲಾಗಲಿ, ಚರಕ / ಸುಶ್ರುತ ಸಂಹಿತೆಗಳಲ್ಲಾಗಲಿ ಗಸಗಸೆ ಗಿಡದ

ಪ್ರಸ್ತಾಪವಿಲ್ಲ ಎನ್ನಲಾಗಿದೆ. ಪರ್ಷಿಯದ ಮುಹಮ್ಮದ್ ಇಬ್ನ್ ಜ಼ಕಾರಿಯ ಅಲ್-ರಾಜೆ (ರಾಜೆಸ್: 845-930) ಶಸಚಿಕಿತ್ಸೆಯಲ್ಲಿ ಅರಿವಳಿಕೆಯಾಗಿ ಅಫೀಮನ್ನು
ಬಳಸಬಹುದು ಎಂದ. ಜತೆಗೆ ವೈದ್ಯರಿಲ್ಲದ ಕಡೆಗೆ ಜನ ಸಾಮಾನ್ಯರಿಗೆ ಉಪಯುಕ್ತ ವಾಗಬಲ್ಲ ಫಿ ಮ ಲ-ಯಹ್ದಾರ ಅಲ್-ತಬೀಬ್ (ವೈದ್ಯರ ಅನುಪಸ್ಥಿತಿಯಲ್ಲಿ) ಎನ್ನುವ ಗ್ರಂಥದಲ್ಲಿ ಕೆಲವು ಮನೋವೈದ್ಯಕೀಯ ಸಮಸ್ಯೆ ಗಳಲ್ಲಿ ಅಫೀಮನ್ನು ಬಳಸಿ ಎಂದು ಸಲಹೆಯನ್ನು ನೀಡಿದ. ಪರ್ಷಿಯನ್ ವೈದ್ಯ ಅಬು ಅಲಿ ಅಲ್-ಹುಸ್ಯಾನ್ ಇಬ್ನ್ ಸಿನಾ (ಅವಿಸೆನ್ನ: 936-1013) ದಿ ಕ್ಯಾನಸ್ ಆಫ್ ಮೆಡಿಸಿನ್ ಎಂಬ ಗ್ರಂಥವನ್ನು ಬರೆದ. ಇದರಲ್ಲಿ ಆತನು ಪೀಮಿನ ಉಪಯುಕ್ತ -ಮಾರಕ ಲಕ್ಷಣಗಳನ್ನು ದಾಖಲಿಸಿದ.

ನೋವನ್ನು ನಿವಾರಿಸುತ್ತದೆ, ನಿದ್ರೆಯನ್ನು ತರುತ್ತದೆ, ಕೆಮ್ಮನ್ನು ನಿಗ್ರಹಿಸುತ್ತದೆ, ಬೇಧಿಯನ್ನು ತಡೆಗಟ್ಟುತ್ತದೆ, ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಉಸಿರಾಟ ವನ್ನು ಕಡಿಮೆ ಮಾಡುತ್ತದೆ, ನರ-ಸ್ನಾಯುಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಹಾಗೂ ಲೈಂಗಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎಂದು ಹೇಳುವುದರ ಜೊತೆಯಲ್ಲಿ ಇದು ವಿಷಕಾರಿ ಎಂದೂ ದಾಖಲಿಸಿದೆ. ವಿವಿಧ ವೈದ್ಯಕೀಯ ಪ್ರಕರಣಗಳಲ್ಲಿ ಅಪೀಮಿನ್ನು ಹೇಗೆ ಬಳಸಬೇಕು ಎನ್ನುವುದರ ಬಗ್ಗೆ ಮಾರ್ಗ ದರ್ಶನ ವನ್ನು ನೀಡಿದ.

ಫಿಲಿಪಸ್ ಔರಿಲಸ್ ಥಿಯೋ-ಸ್ಟೇಟಸ್ ಬೊಂಬಾಸ್ಟಸ್ ವಾನ್ ಹಾನಿಮನ್ (ಪ್ಯಾರಾಸೆಲ್ಸಸ್: 1493-1541) ಓರ್ವ ಸ್ವಿಸ್ ವೈದ್ಯ. ಪುನರುತ್ಥಾನದ (ರಿನೇ ಸಾನ್ಸ್) ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ತಂದವ. ಇವನು 1527ರಲ್ಲಿ ಲಾಡನಮ್ ಎಂಬ ಹೆಸರಿನ ಔಷಧವನ್ನು ಪಾಶ್ಚಾತ್ಯ ವೈದ್ಯಕೀಯಕ್ಕೆ ಪರಿಚಯ ಮಾಡಿದ. ಮದ್ಯಸಾರದಲ್ಲಿ ಅಪೀಮಿನ ಸಾರವನ್ನು ಭಟ್ಟಿಯಿಳಿಸಿದ. ಇದರಲ್ಲಿ 10%ರಷ್ಟು ಅಪೀಮಿ ರಾಸಾಯನಿಕಗಳಿದ್ದವು. ಅವುಗಳಲ್ಲಿ ಮಾರ್ಫಿನ್ ಪ್ರಮಾಣವು ಶೇ.೧ರಷ್ಟಿತ್ತು.

ವೈದ್ಯರು ಇದನ್ನು ಪ್ರಧಾನವಾಗಿ ನೋವು ನಿವಾರಕವಾಗಿ ಹಾಗೂ ಕೆಮ್ಮು ನಿಗ್ರಾಹಕವಾಗಿ ಬಳಸತೊಡಗಿದರು. 20ನೆಯ ಶತಮಾನದ ಆರಂಭದವರೆಗೂ ಯಾರು ಬೇಕಾದರೂ, ವೈದ್ಯರ ಸಲಹಾ ಚೀಟಿಯಿಲ್ಲದೆ ಲಾಡನಮ್ ಕೊಳ್ಳಬಹುದಾಗಿತ್ತು ಹಾಗೂ ಸ್ವೇಚ್ಛೆಯಾಗಿ ಬಳಸಬಹುದಾಗಿತ್ತು. ಗಸಗಸೆ ಗಿಡವು ಬಹುಶಃ ಮೆಡಿಟೆರೇನಿಯನ್ ಸಮುದ್ರದ ತೀರದಲ್ಲಿರುವ ಪ್ರದೇಶದಲ್ಲಿ ಹುಟ್ಟಿರಬಹುದು. ಸುಮಾರು 100 ಸೆಂ.ಮೀ. ಎತ್ತರ ಬೆಳೆಯುವ ಗಿಡವು, ನಾಲ್ಕು ಅಥವಾ
ಐದು ದಳಗಳ ಬಿಳಿ ಅಥವಾ ಕೆಂಪು ಬಣ್ಣದ ಹೂಗಳನ್ನು ಬಿಡುತ್ತದೆ. ಕಾಯಿಗಳು ಹಸಿರು ಬಣ್ಣಕ್ಕಿರುತ್ತವೆ. ಇದನ್ನು ಕೆರೆದಾಗ ಇದರಿಂದ ಬಿಳಿಯ ಬಣ್ಣದ ಹಾಲು ಸೋರುತ್ತದೆ.

ಈ ಹಾಲು ಗಾಳಿಯ ಸಂಪರ್ಕಕ್ಕೆ ಬರುತ್ತಿದ್ದ ಹಾಗೆ ಕಂದುಬಣ್ಣವನ್ನು ತಳೆದು ಗೋಂದಿನ ಹಾಗೆ ಒಣಗಿ ಗಟ್ಟಿಯಾಗುತ್ತದೆ. ಇದುವೇ ಅಪೀಮಿ. 2009ರಲ್ಲಿ ಜಾಗತಿಕ ಅಪೀಮಿನ ಉತ್ಪಾದನೆಯು 9000 ಟನ್ ಆಗಿತ್ತು. ಇದರಲ್ಲಿ ಶೇ.85ರಷ್ಟು ಅಪೀಮಿನ್ನು ಕೇವಲ ಅಫ್ಘಾನಿಸ್ತಾನವು ಉತ್ಪಾದಿಸಿತು. ಅಫ್ಘಾನಿಸ್ತಾನ್, ಇರಾನ್ ಮತ್ತು ಪಾಕಿಸ್ತಾನಗಳು ಗೋಲ್ಡನ್ ಕ್ರೆಸೆಂಟ್ ಎಂದು ಹಾಗೆಯೇ ಥೈಲ್ಯಾಂಡ್, ಲಾವೋಸ್ ಮತ್ತು ಮೈನಮಾರ್ ದೇಶಗಳು ಗೋಲ್ಡನ್ ಟ್ರೈಯಾಂಗಲ್ ಎಂದು ಅಪೀಮಿ ಉತ್ಪಾದನೆಗೆ ಕುಖ್ಯಾತವಾಗಿವೆ.

2018ರಲ್ಲಿ 76,240 ಟನ್ ಗಸಗಸೆಯನ್ನು ಉತ್ಪಾದಿಸಲಾಯಿತು. ಇದರಲ್ಲಿ ಟರ್ಕಿ 27000 ಟನ್, ಜ಼ೆಕ್ 13000 ಟನ್, ಸ್ಪೇನ್ 12000 ಟನ್ ಉತ್ಪಾದಿಸಿ ದವು. ಗಸಗಸೆಯನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವು ಮುಖ್ಯವಾದದ್ದು. ಇದು 16000 ಟನ್ ಆಮದು ಮಾಡಿಕೊಂಡಿತು. ರಷ್ಯಾ, ಪೋಲಂಡ್ ಮತ್ತು ಜರ್ಮನಿ ಇತರ ಪ್ರಮುಖ ದೇಶಗಳು. ಅಪೀಮಿನಲ್ಲಿರುವ ರಾಸಾಯನಿಕಗಳನ್ನು ಆಲ್ಕಲಾಯ್ಡ್ ಎನ್ನುವರು. ಇವನ್ನು ಎರಡು ಗುಂಪುಗಳಲ್ಲಿ ವಿಭಜಿಸ ಬಹುದು. ಮಿದುಳಿನ ಮೇಲೆ ಪರಿಣಾಮವನ್ನು ಬೀರುವ ಮಾರ್ಫಿನ್, ಕೋಡಿನ್ ಮತ್ತು ಥೆಬಾಯಿನ್.

ಇವು ನೋವನ್ನು ನಿವಾರಿಸಬಲ್ಲವು. ಮನವನ್ನು ಉತ್ತೇಜಿಸಬಲ್ಲವು. ಹಾಗಾಗಿ ಪ್ರಧಾನವಾಗಿ ಯುವ ಜನತೆಯು ಇವುಗಳಿಗೆ ದಾಸರಾಗಿರುವರು. ಕರುಳಿನ ಮೇಲೆ
ಪ್ರಭಾವವನ್ನು ಬೀರುವ ಎರಡನೆಯ ಗುಂಪಿನಲ್ಲಿ ಪೆಪಾವರಿನ್ ಮತ್ತು ನೋಸ್ಕ್ಯಾಪಿನ್ ಪ್ರಧಾನವಾಗಿದ್ದು ಇವು ವೈದ್ಯಕೀಯ ಗುಣಗಳನ್ನು ಪಡೆದಿವೆ. ಕಾಯಿ ಗಳನ್ನು ಕೆರೆದಾಗ ಬರುವ ಹಾಲು ಒಣಗಿದ ಮೇಲೆ ಅಪೀಮಿ ಎನ್ನುವ ಹೆಸರನ್ನು ಪಡೆಯುತ್ತದೆಯಲ್ಲವೆ! ಇದನ್ನು ಶುದ್ಧೀಕರಿಸಿ ಹೆರಾಯಿನ್ ಉತ್ಪಾದಿಸುವರು. ಇದು ಮಾರ್ಫಿನ್‌ಗಿಂತಲೂ 2.2 ಪಟ್ಟು ಹೆಚ್ಚು ಪ್ರಭಾವಶಾಲಿ.

ಇಂದು ಜಗತ್ತಿನಲ್ಲಿ ಅಧಿಕೃತವಾಗಿ ಗಸಗಸೆಯನ್ನು ಬೆಳೆಯುತ್ತಿರುವವರಿಗಿಂತ ಅನಽಕೃತವಾಗಿ ಬೆಳೆಯುತ್ತಿರುವವರ ಪ್ರಮಾಣವೇ ಅಧಿಕ! ಆಧುನಿಕ ವಿಜ್ಞಾನವು ಹೆಚ್ಚು ಹೆಚ್ಚು ಅಪೀಮಿನ್ನು ಉತ್ಪಾದಿಸುವ ತಳಿಗಳನ್ನು ಅಭಿವೃದ್ಧಿಪಡಿಸುತ್ತಿರುವು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ.