Thursday, 26th December 2024

Laxmi Hebbalkar Column: ದೇಶಕ್ಕೆ ಹೊಸಬೆಳಕು ನೀಡಲಿ ಈ ʼಗಾಂಧೀ ಭಾರತʼ

ಮಹಾಪರ್ವ

ಲಕ್ಷ್ಮೀ ಹೆಬ್ಬಾಳ್ಕರ್

1924 ಇದು ಅಂದು ಬದುಕಿದ್ದ ಬೆಳಗಾವಿಗರ ಪಾಲಿಗೆ ಪುಣ್ಯಕಾಲವಾಗಿತ್ತು. ಕಾರಣ ಈ ದೇಶದ ‘ಮಹಾತ್ಮ’ ಎಂದು ಕರೆಸಿಕೊಂಡವರ ಜತೆಗೆ ಎಂತೆಂಥ ಮಹಾನ್ ನಾಯಕರ ಪಾದಸ್ಪರ್ಶದಿಂದಾಗಿ ಬೆಳಗಾವಿಯ ನೆಲವು ಪವಿತ್ರವಾದ ಕಾಲಘಟ್ಟವದು. ಹೌದು, 1924ರ ಡಿಸೆಂಬರ್ 26 ಮತ್ತು 27ರಂದು ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ 39ನೇ ಅಽವೇಶನವು ಬೆಳಗಾವಿಯಲ್ಲಿ ನಡೆದಿತ್ತು. ಇದರ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದರು.

ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಬೆಳಗಾವಿಯಲ್ಲಿನದು ಎಂಬುದೇ ನಮಗೆಲ್ಲ ದೊಡ್ಡ ಹೆಮ್ಮೆ. ಆ ಸಮಯದಲ್ಲಿ ನಾವಿನ್ನೂ ಈ ಪ್ರಪಂಚಕ್ಕೆ ಬಂದಿರಲಿಲ್ಲ; ಆದರೆ, ಆ ಪರ್ವಕಾಲದ ಶತಮಾನೋತ್ಸವ ಕಾರ್ಯ ಕ್ರಮದ ಈ ಸಂದರ್ಭದಲ್ಲಿ ನಾವಿರುವುದು ನಮ್ಮ ಪಾಲಿಗೆ ಬಹುದೊಡ್ಡ ಭಾಗ್ಯ ಎಂದೇ ಭಾವಿಸುತ್ತೇನೆ. ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಕಥೆಯನ್ನು ಕೇಳಿದರೆ ನಮ್ಮ ಮೈಯೆಲ್ಲ ರೋಮಾಂಚನ ಗೊಳ್ಳುತ್ತದೆ. ಒಬ್ಬೊಬ್ಬ ಹೋರಾಟಗಾರರೂ ಸೆಣಸಿದ ರೀತಿ, ಮಾಡಿದ ತ್ಯಾಗವನ್ನು ಸ್ಮರಿಸಿಕೊಂಡರೆ ನಮ್ಮಲ್ಲಿ ಸೂರ್ತಿ ಉಕ್ಕಿ ಹರಿಯುತ್ತದೆ.

ಅಂಥ ಮಹಾನ್ ಹೋರಾಟಗಾರರು, ತ್ಯಾಗಿಗಳು ಬೆಳಗಾವಿ ನೆಲಕ್ಕೆ ಕಾಲಿಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಪ್ರಮುಖ ತೀರ್ಮಾ ನಗಳನ್ನು ಇಲ್ಲಿ ಯೇ ತೆಗೆದುಕೊಂಡ ಅವರು, ತನ್ಮೂಲಕ ಹಲವಾರು ಆದರ್ಶಗಳನ್ನು ಇಲ್ಲಿ ಉಳಿಸಿಹೋದರು. ಅದಾಗಿ 100 ವರ್ಷ ಸಂದಿರುವ ಈ ಸಂದರ್ಭದಲ್ಲಿ ಅದೇ ನೆಲದಲ್ಲಿ ನಾವೆಲ್ಲ ಬದುಕಿದ್ದೇವೆ, ಆ ಮಹಾನ್ ಗಳಿಗೆಯ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರೆ ಇದು ನಮ್ಮ ಪುಣ್ಯವಲ್ಲದೆ ಮತ್ತೇನು?

ಬೆಳಗಾವಿಗೆ ಬಂದಿದ್ದು ಹೇಗೆ?

ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕೆಂಬ ತೀರ್ಮಾನದಿಂದ ಶುರುವಾಗಿ, ಅದನ್ನು ಸಂಘಟಿಸಿದ ರೀತಿ ಮತ್ತು ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮಹನೀಯರು- ಮಹಿಳೆಯರೆಲ್ಲ ನಡೆದುಕೊಂಡ ಪರಿ, ಅಧಿವೇಶನದಲ್ಲಿನ ಆರ್ಥಿಕ ಶಿಸ್ತು ಎಲ್ಲವೂ ನಮಗೆ ಆದರ್ಶಪ್ರಾಯವೇ. 39ನೇ ಅಧಿವೇಶನವನ್ನು ಕರ್ನಾಟಕದಲ್ಲೇ ನಡೆಸಬೇಕೆನ್ನುವ ತೀರ್ಮಾನ 38ನೇ ಅಧಿವೇಶನದಲ್ಲೇ ಆಯಿತಾ ದರೂ, ರಾಜ್ಯದ ಯಾವ ಭಾಗ ದಲ್ಲಿ ನಡೆಯಬೇಕು ಎಂಬುದರ ನಿರ್ಣಯವಾಗಿರಲಿಲ್ಲ. ಮಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗದ ಜನರು ತಮ್ಮಲ್ಲೇ ಅಧಿವೇಶನ ನಡೆಯ ಬೇಕು ಎಂದು ಪಟ್ಟುಹಿಡಿದರು.

ಆದರೆ ಬೆಳಗಾವಿಯ ಗಂಗಾಧರ ರಾವ್ ದೇಶಪಾಂಡೆ ಅವರ ವ್ಯಕ್ತಿತ್ವ, ಶಿಸ್ತು, ಪ್ರಾಮಾಣಿಕತೆ, ಮಹಾತ್ಮ ಗಾಂಧಿಯವ ರೊಂದಿಗಿನ ಒಡನಾಟ ಇವೆಲ್ಲವೂ ಅಧಿವೇಶನವನ್ನು ಬೆಳಗಾವಿಗೆ ಹೊತ್ತು ತಂದವು. ಗಂಗಾಧರ ರಾವ್ ಅವರು ಕೂಡ ತಮ್ಮ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸದೆ ಅಚ್ಚುಕಟ್ಟಾಗಿ ಅಧಿವೇಶನವನ್ನು ಸಂಘಟಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾದರು, ಬೆಳಗಾವಿಗೊಂದು ಹೆಸರು ತಂದುಕೊಟ್ಟರು.

ವಿವಿಧ ಸಮಿತಿಗಳನ್ನು ರಚಿಸಿ, ಸ್ವತಃ ಕುದುರೆಯ ಮೇಲೆ ಓಡಾಡಿ ಅಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಿದ್ದಲ್ಲದೆ ಒಂದೊಂದು ಪೈಸೆ ಲೆಕ್ಕವನ್ನೂ ಒಪ್ಪಿಸುವ ಮೂಲಕ ಪ್ರಾಮಾಣಿಕತೆಗೆ, ಆರ್ಥಿಕ ಶಿಸ್ತಿಗೆ ಸಾಕ್ಷಿಯಾದರು (ಇಡೀ ಸಮ್ಮೆಳನಕ್ಕೆ 220820 ರು., 5 ಆಣೆ, 6 ಪೈಸೆ ಸಂಗ್ರಹವಾಗಿತ್ತು; ಅದರಲ್ಲಿ 772 ರು., ಒಂದು ಆಣೆ, 6 ಪೈಸೆ ಉಳಿಯಿತು!).

ಅಧಿವೇಶನದ ಆಶಯಗಳು
ಎರಡು ದಿನ ನಡೆದ ಬೆಳಗಾವಿ ಅಧಿವೇಶನದ ಆಶಯವು ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಿಕ್ಕನ್ನು ತೋರಿಸಿ ಕೊಟ್ಟಿತು. ಸ್ವಾತಂತ್ರ್ಯ ಚಳವಳಿಯು ಹಿಂಸಾಮಾರ್ಗದಲ್ಲಿ ಇರಬೇಕೆಂದು ಕೆಲವರು ಪ್ರತಿಪಾದಿಸುತ್ತಿದ್ದ ಕಾಲಘಟ್ಟ ದಲ್ಲಿ ನಡೆದದ್ದು ಬೆಳಗಾವಿ ಅಧಿವೇಶನ; ಆದರೆ, ಯಾವುದೇ ಕಾರಣದಿಂದ ಅಹಿಂಸಾ ಮಾರ್ಗವನ್ನು ಬಿಟ್ಟು ಹೋಗ ಬಾರದೆನ್ನುವ ಗಟ್ಟಿನಿರ್ಣಯ ಈ ಅಧಿವೇಶನದಲ್ಲಿ ಹೊಮ್ಮಿತೆಂಬುದು ಗಮನಾರ್ಹ ಸಂಗತಿ. ಅಸ್ಪೃಶ್ಯತಾ ನಿವಾ ರಣೆಗೆ ಬಲವಾದ ತಳಹದಿ ಹಾಕಿಕೊಟ್ಟಿದ್ದು ಬೆಳಗಾವಿ ಅಧಿವೇಶನ. ಜಾತಿ, ಧರ್ಮ, ಭಾಷೆ ಹೀಗೆ ಎಲ್ಲ ಭೇದ ಗಳನ್ನೂ ದೂರಮಾಡಿ, ಭಾರತೀಯರೆಲ್ಲರೂ ಒಂದಾಗಿ ಹೋರಾಡಬೇಕೆನ್ನುವ ಸಂದೇಶವನ್ನು ಹಾಗೂ ಮಹಿಳೆ ಯರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಯವರು ಪತ್ರ ಬರೆದು ತಿಳಿಸಿದ್ದರು; ಆದರೆ 350 ರುಪಾಯಿ ಖರ್ಚುಮಾಡಿ ಕುಟೀರ ಕಟ್ಟಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದು ಅವರ ಸರಳತೆಗೆ ಸಾಕ್ಷಿಯಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ಬೆಳಗಾವಿ ಅಧಿವೇಶನವು ಸ್ವಾತಂತ್ರ್ಯ ಹೋರಾಟಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿತು. ಕಾಂಗ್ರೆಸ್ ಸೇವಾದಳದ ಬೀಜಾಂಕುರವಾಗಿದ್ದೇ ಬೆಳಗಾವಿ ಅಧಿವೇಶನದಲ್ಲಿ. ಹರ್ಡಿಕರ್ ಮಂಜಪ್ಪನವರ ನೇತೃತ್ವದಲ್ಲಿ ಈ ಸೇವಾದಳವು ಸ್ವಚ್ಛತಾ ಕಾರ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿತು. ಅಧಿವೇಶನವನ್ನು ಸಂಘಟಿಸಿದ ರೀತಿ, ಪ್ರತಿಯೊಬ್ಬರ ತೊಡಗಿಸಿಕೊಳ್ಳುವಿಕೆ, ಆರ್ಥಿಕ ಶಿಸ್ತು, ನಾಯಕರ ತ್ಯಾಗ ಇವೆಲ್ಲವೂ ಇಂದಿಗೂ ನಮಗೆ ಆದರ್ಶವಾಗಿ ನಿಲ್ಲುತ್ತವೆ. ನಮ್ಮ ಕಾಂಗ್ರೆಸ್ ಪಕ್ಷವು ಅಂದಿನ ಆಶಯಗಳನ್ನೇ ಮುಂದುವರಿಸಿಕೊಂಡು, ಅದೇ ಮಾರ್ಗದಲ್ಲಿ ಇಂದಿಗೂ ನಡೆಯುತ್ತಿದೆ. ಜಾತಿ-ಮತ ಭೇದವಿಲ್ಲದೆ, ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ತತ್ವವನ್ನು ಅಳವಡಿಸಿಕೊಂಡು, ಎಲ್ಲರನ್ನೂ ಜತೆ ಯಾಗಿಸಿಕೊಂಡು ಸಾಗುತ್ತಿದೆ.

ಕಾರ್ಯಕ್ರಮ ಆಯೋಜನೆ

ಪ್ರಸ್ತುತ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸರಕಾರ ಜಂಟಿಯಾಗಿ, ಕಾಂಗ್ರೆಸ್ ಅಧಿವೇಶನದ ಈ ಶತ ಮಾನೋತ್ಸವವನ್ನು ‘ಗಾಂಧಿ ಭಾರತ’ ಹೆಸರಿನಲ್ಲಿ 2 ದಿನಗಳ ಕಾಲ ಅದ್ದೂರಿಯಾಗಿ ಸಂಘಟಿಸುತ್ತಿವೆ. ಎಲ್ಲರಿಗೂ ಸಂದೇಶವನ್ನು ತಲುಪಿಸಬೇಕು, ಎಲ್ಲರನ್ನೂ ಒಳಗೊಳಿಸಿಕೊಳ್ಳಬೇಕು ಎನ್ನುವ ಆಶಯದೊಂದಿಗೆ ಈ ಅಧಿವೇಶನವು ಅರ್ಥಪೂರ್ಣವಾಗಿ, ಪಕ್ಷಾತೀತವಾಗಿ ನಡೆಯುತ್ತಿದೆ. ನೂರಾರು ರಾಷ್ಟ್ರೀಯ ನಾಯಕರು ಬೆಳಗಾವಿಗೆ ಆಗಮಿಸು ತ್ತಿದ್ದಾರೆ, ಎರಡು ದಿನ ಬೆಳಗಾವಿಯಲ್ಲೇ ಇರಲಿದ್ದಾರೆ.

ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಸಾರಥ್ಯದಲ್ಲಿ ಈ ಅಧಿವೇಶನ, ಸುವರ್ಣ ವಿಧಾನ ಸೌಧದ ಬಳಿ ಮಹಾತ್ಮ ಗಾಂಽಯವರ ಪುತ್ಥಳಿ ಸ್ಥಾಪನೆ, ಸಾರ್ವಜನಿಕ ಸಮಾವೇಶಗಳು ಜರುಗಲಿವೆ. ತನ್ನಿಮಿತ್ತ, ಇಡೀ ನಗರವು ಜಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಕಳೆದ ಒಂದು ವಾರದಿಂದ ಬೆಳಗಾವಿಯ ಜನರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿರುವುದು ನಮ್ಮ ನಿಮ್ಮೆಲ್ಲರ ಸುದೈವವೇ ಸರಿ. ಈ ಸಮಾವೇಶದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊ ಳ್ಳೋಣ. ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಈ ಅಧಿವೇಶನವು ಹೊಸ ಬೆಳಕನ್ನು ಪಸರಿಸಲಿ, ಜನರಿಗೆ ಹೊಸ ಸಂದೇಶಗಳನ್ನು ನೀಡಲಿ ಎಂದು ಆಶಿಸೋಣ.

(ಲೇಖಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು)

ಇದನ್ನೂ ಒದಿ: #laxmiHebbalkar