Friday, 20th September 2024

ರಕ್ತ ಬೀಜಾಸುರರನ್ನು ಮಟ್ಟಹಾಕಿ!

ಪಂಪಾಪತಿ ಹಿರೇಮಠ, ಧಾರವಾಡ

ಜಗತ್ತಿನ ಕುಖ್ಯಾಾತ ಬಯೋತ್ಪಾಾದಕ ಇಸ್ಲಾಮಿಕ್ ಸ್ಟೇಟ್ (ಐಸಿಎಸ್)ನ ಸ್ಥಾಾಪಕ ಅಬುಬಕರ್ ಅಲ್ ಬಾಗ್ದಾಾದಿ, ಅಮೆರಿಕ ಸೇನೆ ನಡೆಸಿದ ಅತ್ಯಂತ ಜಾಣ್ಮೆೆಯ ಹಾಗೂ ಯೋಜಿತ ದಾಳಿಯಲ್ಲಿ ಸಿರಿಯಾದ ಇಡ್ಲೆೆಬ್ ಪ್ರಾಾಂತದಲ್ಲಿ ಹತನಾಗಿದ್ದಾಾನೆ. ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಹೊಡೆದು ಹಾಕಿದ ರೀತಿಯಲ್ಲೆೆ, ಖಲೀಫಾ ಬಾಗ್ದಾಾದಿಯ ಅಡುಗುತಾಣವನ್ನು ಪತ್ತೆೆಹಚ್ಚಿಿ ಆತನನ್ನು ಕೊಂದು ಹಾಕಲಾಗಿದೆ.

ಬಾಗ್ದಾಾದಿ ತಾನು ಪ್ರೋೋಫೆಟ್ ಮಹಮ್ಮದನ ಅವತಾರವೆಂದು ಹೇಳಿಕೊಂಡಿದ್ದ. ಇರಾಕ್, ಸಿರಿಯಾ ಮಾತ್ರವಲ್ಲದೆ ಇಡೀ ಜಗತ್ತನ್ನು ಇಸ್ಲಾಾಮಿಕ್ ರಾಜ್ಯವನ್ನಾಾಗಿ ಪರಿವರ್ತಿಸಿ ಏಕಾಧಿಪತ್ಯ ಸ್ಥಾಾಪಿಸುವ ಕನಸು ಕಂಡಿದ್ದ. ಹಲವಾರು ವರ್ಷಗಳಿಂದ ಆತನ ಅಡಗುತಾಣವನ್ನು ಪತ್ತೆೆ ಮಾಡಲು ಯತ್ನಿಿಸುತ್ತಿಿದ್ದ ಅಮೆರಿಕ ಸೇನೆಗೆ ಬಾಗ್ದಾಾದಿಯ ಆಪ್ತ ಸ್ನೇಹಿತ ಇಸ್ಮಾಾಯಿಲ್-ಎಲ್-ಇದಾನಿ ಆತನ ಅಡಗುತಾಣ ಮತ್ತು ಉಗ್ರರ ಚಲನವಲನಗಳ ಬಗ್ಗೆೆ ಸುಳಿವು ನೀಡಿದ್ದ.

ಮೊದಲೇ ಘೋಷಣೆ ಮಾಡಿದಂತೆ ಅಮೆರಿಕ ಸರಕಾರ ಬಾಗ್ದಾಾದಿಯ ಸಹವರ್ತಿಗೆ 177 ಕೋಟಿ ಹಣ ಉಡುಗೋರೆ ನೀಡಲಿದೆ. ಅಮೆರಿಕದ 100 ಸೈನಿಕರು ಸಿಎಚ್-47 ಹೆಲಿಕಾಪ್ಟರ್‌ಗಳಲ್ಲಿ ಬಂದು ಕಾರಾರುವಕ್ಕಾಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಸುರಂಗ ಮಾರ್ಗದಲ್ಲಿ ಆತ ಅಳುತ್ತಾಾ ಚೀರುತ್ತಾಾ ತನ್ನ ಮೂವರು ಮಕ್ಕಳನ್ನು ಎತ್ತಿಕೊಂಡು ಓಡಿ ಹೋಗಲು ಯತ್ನಿಸಿದ್ದಾಾನೆ. ಸೇನೆಯ ನಾಯಿ ಕೂಡಾ ಬೆನ್ನಟ್ಟಿಿದೆ. ದಾಳಿ ಸನ್ನಿಿಹಿತವೆಂದು ಅರಿತಾಗ ಸೊಂಟದಲ್ಲಿ ಕಟ್ಟಿಕೊಂಡಿದ್ದ ಡೆಟೋನೇಟರ್ ಸ್ಪೋೋಟಿಸಿ ತನ್ನ ಮೂರು ಮಕ್ಕಳೊಂದಿಗೆ ಸಾವಿಗೆ ಶರಣಾಗಿದ್ದಾಾನೆ. ಸಾವಿರಾರು ಜನರನ್ನು ಕೊಂದು ವಿಕೃತ ಸಂತೋಷ ಪಡುತ್ತಿಿದ್ದ ಬಾಗ್ದಾಾದಿಗೆ ಪ್ರಾಾಣಸಂಕಟವೆಂದರೇನು ಎಂಬುದು ಆ ಕ್ಷಣದಲ್ಲಿ ಅರಿವಿಗೆ ಬಂದಿರಬೇಕು. ಆತನಂತ ಕ್ರೂರಿ ಜಗತ್ತಿಿನ ಇತಿಹಾಸದಲ್ಲಿ ಮತ್ತೋೋಬ್ಬನನ್ನು ಕಾಣಲು ಸಿಗುವುದಿಲ್ಲ. ಜನನಿಬಿಡ ರಸ್ತೆೆಯಲ್ಲಿ ಮನಬಂದಂತೆ ಕಾರು ಚಲಾಯಿಸಿ ಜನರನ್ನು ಸಾಯಿಸಲಾಗುತ್ತಿಿತ್ತು.

ಬಹಿರಂಗವಾಗಿ ಅಮಾಯಕರ ಶಿರಚ್ಛೇಧನ ಮಾಡಿದ್ದಾಾನೆ. ಆತನ ಅನುಯಾಯಿಗಳು ಕೊಲೆ, ದರೋಡೆ, ಅಪಹರಣ, ಅತ್ಯಾಾಚಾರಗಳಂತಹ ಹೀನ ಕೃತ್ಯಗಳಲ್ಲಿ ತೊಡಗಿದ್ದರು. ಅಷ್ಟೇನೂ ಸುಲಭವಲ್ಲದ ಈ ಕಾರ್ಯಾಚರಣೆ ನಡೆಸುವಲ್ಲಿ ಅಮೆರಿಕ ಸೇನೆಗೆ ರಷ್ಯಾಾ ಸೇರಿ ಇರಾಕ್, ಸಿರಿಯಾದ ಗುಪ್ತದಳದ ಇಲಾಖೆ ಅಲ್ಲದೇ ನಾಗರಿಕರು ಕೂಡಾ ಸಹಕರಿಸಿದ್ದರು. ಹಾಗೆಯೇ ಬಾಗ್ದಾಾದಿ ಅಪಹರಿಸಿ ಸತತ ಅತ್ಯಾಾಚಾರ ಎಸಗಿ ಸಾಯಿಸಿದ ಸಮಾಜ ಸೇವಕಿಯ ಹೆಸರನ್ನು ಈ ಕಾರ್ಯಾಚರಣೆಗೆ ಇರಿಸಲಾಗಿದೆ. ಉಗ್ರವಾದ ಒಂದು ಜಾಗತಿಕ ಪಿಡುಗು ಇದೆ.

ಶಾಂತಿ ನೆಮ್ಮದಿ ಬಯಸುವ ಜಗತ್ತಿಿನ ಎಲ್ಲಾಾ ದೇಶಗಳು ಒಟ್ಟಾಾಗಿ ಉಗ್ರ ಸಂಘಟನೆಗಳ ಸೈಂದ್ಧಾಾತಿಕ ನೆಲೆಗಟ್ಟನ್ನು ದ್ವಂಸ ಮಾಡಿದಾಗಲೇ ಉಗ್ರವಾದ ಅಂತ್ಯ ಕಾಣಬಹುದು. ಬಾಗ್ದಾಾದಿ ಹತನಾಗಿರಬಹುದು ಆದರೆ, ಆತನ ಇಸ್ಲಾಾಮಿಕ್ ಸ್ಟೇಟ್‌ನ ಸಿದ್ಧಾಾಂತ ಜೀವಂತವಾಗಿದೆ. ಐಸಿಎಸ್‌ಗೆ ಈಗ ಹಿನ್ನಡೆಯಾಗಿರಬಹುದು ಬಾಗ್ದಾಾದಿ ಸಾವಿನ ಸೇಡು ತೀರಿಸಿಕೊಳ್ಳಲು ಇಡೀ ಜಗತ್ತಿಿನಲ್ಲಿ ಇರುವ ಉಗ್ರರು ತಮ್ಮ ಸಿದ್ಧಾಾಂತ ಹರಡಲು ಮುಂಚೆಗಿಂತಲೂ ಹೆಚ್ಚಿಿನ ರೀತಿಯಲ್ಲಿ ರಕ್ತ ಬೀಜಾಸುರರು ಇನ್ನೊೊಂದು ರೂಪದಲ್ಲಿ ಪ್ರತ್ಯಕ್ಷರಾಗುತ್ತಾಾರೆ. ಮಾನವೀಯತೇಯೇ ಇಲ್ಲದ ಬಯೋತ್ಪಾಾದಕರಿಗೆ ಭಯವೇ ಬಂಡವಾಳ, ಭಾರತವು ಸೇರಿ ಜಗತ್ತಿಿನಲ್ಲಿ ಸುಮಾರು 3 ಲಕ್ಷ ಉಗ್ರರಿದ್ದಾಾರೆ. ಸುಮಾರು 18,000ಕ್ಕೂ ಹೆಚ್ಚು ಉಗ್ರರು ಸಕ್ರಿಿಯರಾಗಿದ್ದಾಾರೆ.

ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿಯೂ ಕೂಡಾ ಉಗ್ರರು ಅಡಗಿದ್ದಾಾರೆ. ಉಗ್ರರಿಗೆ ಕರ್ನಾಟಕ ಒಂದು ಸುರಕ್ಷಿತ ಸ್ಥಳ ಎಂಬ ಕಲ್ಪನೆ ಇದೆ. ಉಗ್ರರಿಗೆ ಸಹಾಯ ಮಾಡುವವರು ಹಾಗೂ ಅವರ ಬಗ್ಗೆೆ ಮೃದು ಧೋರಣೆ ಹೊಂದಿರುವ ದೇಶ ದ್ರೋಹಿಗಳು ಇದ್ದಾಾರೆ. ಬಹಳ ಎಚ್ಚರದಿಂದ ಇರಬೇಕು. ಹತ್ಯೆೆಯ ಬಳಿಕ ಬಾಗ್ದಾಾದಿಯ ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ, ಅಮೆರಿಕದಿಂದ 6,000 ಕಿ.ಮೀ. ದೂರವಿರುವ ಸ್ಥಳದಲ್ಲಿ ಕಾರ್ಯಾಚರಣೆ ವೀಕ್ಷಿಸುವ ವ್ಯವಸ್ಥೆೆ ಟ್ರಂಪ್ ಕಚೇರಿಯಲ್ಲಿ ಮಾಡಿದ್ದು ಇಡೀ ಜಗತ್ತಿಿನ ಇತಿಹಾಸದಲ್ಲೇ ಪ್ರಥಮವಾಗಿದೆ. ಕಾರ್ಯಚರಣೆ ವಿಡಿಯೋ ಚಿತ್ರೀಕರಣ ಮಾಡಿ ಭಿತ್ತರಿಸುವ ವ್ಯವಸ್ಥೆೆ ಕೂಡಾ ಮಾಡಲಾಗಿದೆ. ‘ಬಾಗ್ದಾಾದಿ ನಾಯಿಯಂತೆ ಸತ್ತ, ಒಬ್ಬ ಹೇಡಿಯಂತೆ ಸತ್ತ’ ಎಂದು ಅಮೆರಿಕದ ಅಧ್ಯಕ್ಷ ಡೋನಾಲ್‌ಡ್‌ ಟ್ರಂಪ್ ಮಾರ್ಮಿಕವಾಗಿ ಹೇಳಿದ್ದಾಾರೆ. ಉಗ್ರವಾದವನ್ನು ಉಗ್ರವಾಗಿ ಖಂಡಿಸಬೇಕು. ರಕ್ತ ಬೀಜಾಸುರರು ಹುಟ್ಟಿಿಕೊಳ್ಳದಂತೆ ಮಟ್ಟಹಾಕಬೇಕು.