Monday, 25th November 2024

ಸಮಯ ಮತ್ತು ಶಿಸ್ತಿಗಿಲ್ಲಿ ಚಿನ್ನದ ಬೆಲೆ

ಅಲೆಮಾರಿಯ ಡೈರಿ

mehandale100@gmail.com

ಲಂಡನ್ ಎಂದರೆ ಇಂಗ್ಲೆಂಡ್ ಅಲ್ಲ. ಗ್ರೇಟ್ ಬ್ರಿಟನ್ ಎಂದರೆ ಲಂಡನ್ ಅಲ್ಲ. ಮತ್ತು ಕೊನೆಯದಾಗಿ ಇಂಗ್ಲೆಂಡ್ ಎಂದರೆ ಕೇವಲ
ಹಿತ್ರೂ ವಿಮಾನ ನಿಲ್ದಾಣವಲ್ಲ. ಕಾರಣ ಇವೆಲ್ಲವೂ ನಾವು ತಿಳಿದುಕೊಂಡಿರುವುದಕ್ಕಿಂತ ಭಿನ್ನ ಹಾಗೂ ಬೇರೆಯದೇ ಮಾಪಕ ಸೂಚಿಯಡಿಗೆ ಇದ್ದು, ಲಂಡನ್ ಅಂದರೆ ಅದೇ ಬೇರೆ ರಾಜ್ಯ, ಇಂಗ್ಲೆಂಡ್ ರಾಣಿ ರಾಜ ಇತ್ಯಾದಿ ಕತೆಗಳು ಬಂದರೆ ಅವರೆಲ್ಲ ಬ್ರಿಟನ್ ಆವರದೊಳಗೆ ಸೇರಿಕೊಂಡಿದ್ದು, ಅರಮನೆಯ ಹೊರತಾದ ಭಾಗದಲ್ಲಿ ಇಂಗ್ಲೆಂಡ್ ಆಚೆಗೆ ಇರುವುದೇ ಇಲ್ಲ.

ಇನ್ನು ಇವ ನಮ್ಮವ ಇವ ನಮ್ಮವ ಎಂದು ಭಾರತದಾದ್ಯಂತ ಎಳೆದಾಡಿದ, ಈಗ ಪ್ರಧಾನಿ ಪಟ್ಟ ಅಲಂಕರಿಸಿರುವ, ಮುಳುಗುವ ಗ್ರೇಟ್ ಬ್ರಿಟನ್ ಹಿಡಿದೆತ್ತುವ ಹಠಕ್ಕೆ ಬಿದ್ದಿರುವ ರಿಷಿ ಸುನಕ್ ಇರುವ ಲಂಡನ್ನೇ ಬೇರೆ. ಅದಕ್ಕೂ ಮೊದಲು ಇದು ಗೊತ್ತಿರಲಿ. ಈ ಮೊದಲು ನಾನು ಹೇಳಿದ ಭಾರತದ ಅಲೆಮಾರಿ ತನಕ್ಕೂ ವಿದೇಶದ ಅಲೆಮಾರಿತನಕ್ಕೂ ಭಯಾನಕ ವ್ಯತ್ಯಾಸ ಗಳಿವೆ ಎನ್ನುವ ಅನುಭವ ಪದೇಪದೆ ಸಾಬೀತಾಗುತ್ತಿರೋದು ಈ ಇಂಗ್ಲೆಂಡ್ ಎಂಬ ಬ್ರಿಟೀಷ್ ನಾಡಿನಲ್ಲಿ ಕಾಲಿಟ್ಟಂದಿ ನಿಂದಲೂ, ಕಾರಣ ಇಲ್ಲಿ ಸಮಯಕ್ಕೂ ಶಿಸ್ತಿಗೂ ಮತ್ತು ತಮ್ಮ ತಮ್ಮತನವನ್ನು ಕಾಪಿಟ್ಟುಕೊಂಡು ಪರಿಚಯಿಸುವ ಇದ್ದ ನಾಲ್ಕು ಕಲ್ಲು ಹಾಸಿನ ತುಂಡನ್ನು ಜಾಗತಿಕ ಪ್ರಸಿದ್ಧಿ ಮಾಡುವಲ್ಲಿ ಶ್ರಮಿಸುವ ನಿಯತ್ತಿದೆಯಲ್ಲ ಬಹುಶಃ ನಮ್ಮಲ್ಲಿ ನಿಷ್ಠೆ ಮತ್ತು ಆಸ್ಥೆ ಎರಡೂ ಸಾಧ್ಯವಿಲ್ಲ. ಆದರೆ ಇವರ ಶಿಸ್ತು – ಸಮಯ ಪಾಲನೆ ಅತಿ ವಿನಯತೆ ಅದೇ ಗಂಭೀರ ನಡವಳಿಕೆ ಮತ್ತು ನಿರೀಕ್ಷೆ ಇವೆಲ್ಲ ಸಾಯಲಿ ಅತ್ಲಾಗೆ.

ಅದರೆ ಮೂಲತಃ ಇಲ್ಲಿನ ನೆಲಕ್ಕೆ ಕಾಲಿಟ್ಟೊಡನೆ ಇಮಿಗ್ರೆಶನ್‌ಗೆಂದು ನಿಂತಾಗ ನಿಮ್ಮ ಜೀವ ತಿನ್ನುತ್ತಾರಲ್ಲ ಅದನ್ನು  ರೆಯಲೂ
ಅಗದ ಅದರ ಕಾರಣಕ್ಕೆ ಅರ್ಧ ಈ ಕೆಂಪು ಮೂತಿಯವರ ನಗರಿ ಬ್ಯಾಡದೆ ಆಗಿತ್ತು ಮಾರಾಯ ಅನ್ನಿಸೋದಿದೆಯಲ್ಲ ಅದನ್ನು ನೀವು ಅನುಭವಿಸಲೇಬೇಕಾಗುತ್ತದೆ. ನಾನು ಕಳೆದ ವಾರ ಬರೆದಂತೆ ಇಮಿಗ್ರೇಶನ್ನು ಎಂಬ ಹಿಂಸೆ ಇದೆಯಲ್ಲ – ಬಹುಶಃ ಹಲವು ದೇಶದ ಇಮಿಗ್ರೆಶನ್ ಫಿಡ್‌ಬ್ಯಾಕ್ ಓದಿದಾಗ ಎಲ್ಲೂ ಇಂಥಾ ಖರಾಬು ವ್ಯವಸ್ಥೆ ಕಂಡು ಬಂದಿಲ್ಲ. ಬೇರಾವ ದೇಶದ  ಇಮಿಗ್ರೇಶನ್ನು ಈ ರೇಂಜಿನಲ್ಲಿ ಜೀವ ತಿಂದ, ತಿನ್ನುವ ಉದಾಹರಣೆ ನನಗೆ ಸಿಕ್ಕಿಲ್ಲ.

ಕಾರಣ ಏನೆ ಅವಕಾಶ ಮತ್ತು ಸೌಲಭ್ಯ ಪೂರೈಸುವ ಸಾಧ್ಯತೆ ಧನಾತ್ಮಕವಾಗೇ ಇzಗಲೂ, ಜನ ಧನ ಇತ್ಯಾದಿ ಏನೂ ಕಮ್ಮಿ ಇಲ್ಲದಿದ್ದಾಗಲೂ ಲಂಡನ್ ಇಮ್ಮಿಗ್ರೇಶನ್‌ಗೆ ಕೌಂಟರು ಎರಡು ಮೂರಕ್ಕಿಂತ ಹೆಚ್ಚಿಗೆ ಇಡದಿರುವ ಬಗ್ಗೆ ನನಗೆ ಸೋಜಿಗೆ.
ನಾನು ಟರ್ಮಿನಲ್ ಎರಡರಲ್ಲಿ ಇಳಿದು ಮೊದಲೇ ನನಗೆ ಮಾಹಿತಿ ಇದ್ದ ಕಾರಣ ಅಕ್ಷರಶಃ ಓಟ ಕಿತ್ತಿದ್ದೆ. ಎದುರಿಗೇ ಇತರೆ ದೇಶದ ಪಾಸ್‌ಪೋರ್ಟ್‌ಗಳವರಿಗೆ ಇಮಿಗ್ರೇಶನ್ನು ಎಂದು ಇದ್ದ -ಲಕ ಅತ್ತ ದಾರಿ ತೋರಿತ್ತಲ್ಲ. ತಡ ಏಕೆ ಎಂದು ಕೌಂಟರ್‌ಗೆ ಬೇಗ ಹೋದರೆ ಬೇಗ ಸರದಿ ಮುಗಿಯುತ್ತದೆ ಎಂದು ನುಗ್ಗಿದರೆ ಅದು ಅಪ್ಪಟ ದೇವಸ್ಥಾನದ ಪ್ರಸಾದದ ಕ್ಯೂ ನಿಂತಂತೆ.

ಬಹುಶಃ ತಿರುಪತಿ ನಂತರ ದೊಡ್ಡ ಕ್ಯೂ ಯಾವುದೆಂದರೆ ಅದು ಲಂಡನ್ ಇಮಿಗ್ರೇಶನ್ನು ಎನ್ನುವಷ್ಟರ ಮಟ್ಟಿಗೆ ಸುತ್ತು ಹೊಡೆದು ನಿಂತಿತ್ತು. ಸುರುಳಿ ಸುತ್ತಿ ಹೆಬ್ಬಾವಿನಂತೆ – ತಲೆ ಯಾವುದೋ ಬಾಲ ಯಾವುದೋ. ನನಗಿಂತ ಮುಂದಿರುವವನು ನುಡಿಯುವ, ಮಾತು, ಏನಾದರೂ ಮಾಹಿತಿ ಕೊಟ್ಟರೆ ಅದೇ ವೇದ ವಾಕ್ಯ. ಅವನ ಹಿಂದೆ ನಿಲ್ಲುತ್ತಾ ಮುಖ ದಪ್ಪ ಮಾಡುತ್ತ ಸಮಯ ಸರಿಸಬೇಕಲ್ಲ.

ಕಾರಣ ಇದು ಅರ್ಧ ಮುಕ್ಕಾಲು ಗಂಟೆಯ ಪ್ರೊಸೆಸ್ಸ್ ಅಲ್ಲವೇ ಅಲ್ಲ. ಒಂದು ತಾಸಲ್ಲ ಅಪೂಟು ಮೂರು ತಾಸು ನಿಮ್ಮನ್ನು ಸರದಿಯಲ್ಲಿ ನಿಲ್ಲಿಸಿ ನಿಮ್ಮ ಸಹನೆ ಪರೀಕ್ಷಿಸಿ, ಅದಾದ ಮೇಲೆ ಕೌಂಟರ್ ಹತ್ತಿರ ಯಾಕೆ ಬಂದರಿ, ಎಲ್ಲಿಂದ ಬಂದ್ರಿ, ಏನೆಲ್ಲ ಮಾಡೋ ಪ್ಲಾನ್ ಇದೆ.. (ಇದೆಲ್ಲ ಕೇಳಿಯೇ ವೀಸಾ ಪರ್ಮಿಷನ್ ಕೊಟ್ಟಿರ್ತೀರಿ ಅಲ್ವಾ ಮತ್ತೇನು ಕ್ಯಾತೆ ಎಂದು ಕೇಳೋಣ ಎನ್ನಿಸಿದರೂ ನನಗೆ, ಹಾಗೆಲ್ಲ ಮಾಡದೆ, ಕೇಳಿದ್ದಕ್ಕೆ ಮಾತ್ರ ಉತ್ತರಿಸಿ ಹಲ್ಕಿರಿದು ಹೊರಕ್ಕೆ ಬರಬೇಕು ಇಲ್ಲದಿದ್ದರೆ ಮತ್ತೆ ಹತ್ತಾರು ಪ್ರಶ್ನೆ ಹಾಕಿ ಜೀವ ತಿಂತಾರೆ ಎಂದು ಮೊದಲೇ ಸೂಚನೆ ಇದ್ದುದರಿಂದ ತೆಪ್ಪಗೆ ಹಲ್ಕಿರಿಯುತ್ತ ನಿಂತಿದ್ದೆ) ಅದೇ ಕೇಳಿ ಕೇಳಿ ಮಾತಿಗೆ ಮೊದಲು ಮಾತಿಗೆ ಕೊನೆಯಲ್ಲಿ ಮತ್ತು ಸಾಲುಗಳ ಮಧ್ಯೆ ಗುರಾಯಿಸಿ ಮುಖವನ್ನೇ ಪರೀಕ್ಷಿಸಿ ನೋಡಿ ಮುಂದಕ್ಕೆ ಸರಿಸುವುದರ ಹಿಂದೆ ಕಣ್ಣ ಪರೀಕ್ಷಿಸುವ ಸ್ಟ್ರಾಟಜಿ ಅವರ ಸುರಕ್ಷತೆಯ ದೃಷ್ಠಿಯಿಂದ ಸರಿಯೇ.

ಆದರೆ ಸರಿ ಸುಮಾರು ಇಪ್ಪತ್ತು ಕೌಂಟರ್‌ಗಳ ವ್ಯವಸ್ಥೆ ಇರುವಲ್ಲಿ ಕೇವಲ ಎರಡು ಮೂರು ಮಾತ್ರ ತೆರೆದಿಟ್ಟು ಜನರನ್ನು ನಿಲ್ಲಿಸಿಬಿಡುತ್ತಾರೆ. ಅದು ಬೇಕಿದ್ದರೆ ತೊಂಬತ್ತರ ಅಜ್ಜಿಯೇ ಇರಲಿ, ನಿಲ್ಲಲೇಬೇಕು. ಅಕಸ್ಮಾತ್ ಗಾಲಿ ಕುರ್ಚಿ ಸಹಾಯವೇನಾ ದರೂ ಬೇಕಿದ್ದರೆ,  ಅದಕ್ಕೆ ಸಪೋರ್ಟಿಂಗ್ ಮೆಡಿಕಲ್ ಡಾಕ್ಯೂಮೆಂಟ್ಸ್‌ಗಳು ಎಲ್ಲ ನಿಖರವಾಗಿದ್ದರೆ ನಿಮ್ಮನ್ನು ಬೇರೆ ಕ್ಯೂನಲ್ಲಿ ಸಾಗಿಸಿ ಕರೆದೊಯ್ದು ಹೊರಕ್ಕೆ ದಬ್ಬುತ್ತಾರೆ.

ಆದರೆ ಆ ಸಿಕ್ನೆಸ್ಸ್ ಡಾP -ರ್ಮಾಲಿಟೀಸ್ ಮುಗಿಸುವುದಕ್ಕಿಂತ ಮೂರು ತಾಸು ನಿಂತು ಸಾಯುವುದೇ ವಾಸಿ ಎನ್ನುವ ಮಟ್ಟಿಗೆ ಹೈರಾಣಾಗುತ್ತೀರಿ. ಇತ್ತ ಅಂತೂ ಇಂತೂ ಮೂರು ತಾಸು ಕಳೆದು, ಅವರ ಗುರಾಯಿಸುವಿಕೆ ಪದೇಪದೆ ಮುಖವೊಡ್ಡಿ ಹೊರ ಬಂದರೆ ಅದಕ್ಕೆ ಸರಿಯಾಗಿ ನಿಮ್ಮ ಲಗೇಜು ಬಂದು ಕೂತಿರುತ್ತೆ. ಅಷ್ಟರಗಲೇ ಬೆನ್ನು ಮೂಳೆಗೆ ತಗುಲುವ ಚಳಿಗೆ ನೀವು ಉಲನ್ ಥರ್ಮೋ ವೇರ್ ಮೊರೆ ಹೋಗಲೇ ಬೇಕಾಗುತ್ತದೆ. ಕಾರಣ ಹೊರಗೆ ರೋರ್ ಎನ್ನುವ ಗಾಳಿಯ ಜೊತೆಗೆ ಉಷ್ಣಾಂಶ ಒಂದು ಡಿಗ್ರಿಗೆ ಕುಸಿದಿದ್ದು ಲಂಡನ್ನು ಅಪ್ಪಟ ಮಲೆನಾಡಿನ ವಾತಾವರಣಕ್ಕೆ ತೆರೆದುಕೊಳ್ಳುತ್ತಿತ್ತು. ಇನ್ನೇನು ಚಿಗುರು ಆ ಬಣ್ಣದ ಎಲೆ ಉದುರುವ, ಆಗೀಗ ಮಂಜು ಹಿಮ ಉದುರುವ ಮತ್ತು ಮಳೆಗೂ ಪಕ್ಕಾಗುವುದು ಇನ್ನಷ್ಟೇ ಬಾಕಿ ಇತ್ತು.

ಇದನ್ನು ಅಂದಾಜು ಮಾಡಿ ಮತ್ತು ಡಿಸೆಂಬರ್ ಚಳಿಯ ಪ್ರಮಾಣ ಏನಿರುತ್ತೆ ಎಂಬ ಆವರೇಜು ರಿಪೊರ್ಟ್ ಪಡೆದುಕೊಂಡಿದ್ದೇ
ನಲ್ಲ. ಅದಕ್ಕಾಗಿ ಮಧ್ಯ ವಿಮಾನ ಬದಲಾಯಿಸಲು ಪೋಲೆಂಡ್‌ನಲ್ಲಿ ಇಳಿದಾಗಲೇ ಥರ್ಮೋವೇರ್ ಮತ್ತು ನನ್ನ ಯಾವ ಐಟಮ್ಮೂ ಚಳಿಗೆ ಸಿಕ್ಕು ಸುಕ್ಕಾಗಿ ಮುದರದಿರಲಿ ಎಂದು ಪೂರ್ತಿ ಪ್ಯಾಕ್‌ಅಪ್ ಆಗಿಯೇ ಅಲ್ಲಿಂದ ಮರು ವಿಮಾನ ಏರಿದ್ದೆ.

ಹಾಗಾಗಿ ಹಿತ್ರೂವಿನಲ್ಲಿ ಇದ್ದ ಎರ್ಡ್ಮೂರು ಡಿಗ್ರಿ ನನಗೆ ಯಾವ ರೀತಿಯಲ್ಲಿ ವ್ಯತ್ಯಾಸ ಇರಲಿಲ್ಲವಾದರೂ  ಸುಂಯ್ಯನೆ ಬರುವ ಕುಳಿರ್‌ಗಾಳಿಗೆ ಬರಲಿರುವ ಒಂದು ತಿಂಗಳು ಕಾಯ್ದುಕೊಳ್ಳುವ ಅಗತ್ಯತೆ ತುಂಬ ಇದ್ದಿದ್ದು ಹೌದು. ಹಾಗಾಗಿ ಇಲ್ಲ ಮೂರು ಪದರದ ಜಾಕೆಟ್ ಕಾಮನ್ನು. ಇನ್ನು ಲೋಕಲ್ ಓಡಾಟಕ್ಕೆ ಮೊದಲೇ ಮಾಡಿಸಿಕೊಂಡಿದ್ದ ಕಾರ್ಡ್ ಉಜ್ಜುತ್ತಾ ಎದೆಯುಬ್ಬಿಸಿ ಕೊಂಡು ಉಮೇದಿ ಯಿಂದ ಟ್ರೇನು ನುಗ್ಗಿದ್ದೇನೊ ಸರಿನೇ, ಆದರೆ ಯಾವುದೇ ಭಾಗದಿಂದ ಆಚೀಚೆ ಹೋಗಲೂ ಬಳಸಬೇಕಾಗುವ ಸೆಂಟ್ರಲ್ ಲಂಡನ್ ಇದೆಯಲ್ಲ ಅದರಷ್ಟು ಅನುಕೂಲಕಾರಿ ಅದರಷ್ಟು ಕನ್ ಫ್ಯೂಸ್ ಅದರಷ್ಟು ಗಿಜಿ ಗಿಜಿ ಮತ್ತು ಅದರಷ್ಟು ಕೇಂದ್ರೀಕೃತ ಮಾರುಕಟ್ಟೆ, ಪ್ರವಾಸೋದ್ಯಮ, ದೇಶದ ಪ್ರಮುಖ ಆಗು ಹೋಗುಗಳ ತಾಣ ಹೀಗೆ ಎಲ್ಲವನ್ನು ಒಂದೇಟಿಗೆ ಕೇಂದ್ರಿಕರೀಸಿಕೊಂಡಿರುವ ನಗರಿಯ ಕೇಂದ್ರ ಬೇರೆಲ್ಲೂ ಇಲ್ಲ.

ಎಲ್ಲ ಕಿರಿಕ್ ಎನ್ನಿಸುವ ಆದರೆ ಒಮ್ಮೆ ಅರಿವಾದರೆ ಅದ್ಭುತವಾದ ಚಿತ್ರಣ ಕೊಡುವ ನಗರಿ ಅದು ಲಂಡನ್ ಸೆಂಟ್ರಲ. ಇಲ್ಲಿ ಸಂಪೂರ್ಣ ಲಂಡನ್ ಆಗಸದಿಂದ ಇಣುಕಬೇಕೆ ಅದಕ್ಕೂ ಸಮಯವಿದ್ದರೆ ಅನುಕೂಲ ಖಂಡಿತಾ ಇದೆ. ದೊಡ್ಡದಾದ ಜೆಂಟ್ ವೀಲ್ ತರಹದ ಸುತ್ತುವ ಯಂತ್ರ ಏರುವ ಉಮೇದಿ, ಸಹನೆ ಇದ್ದರೆ ಅದರ ಮುಖೇನ ಪಕ್ಷಿ ವಿಕ್ಷಣೆ ಎಂಬಂತೆ ಲಂಡನ್ ತಲೆ ಮೇಲಿಂದ ಇಣುಕಬಹುದು. ನಾವು ಲಂಡನ್ ಬ್ರಿಜ್ಡ್ ಇಸ್ -ಲಿಂಗ್ ಡೌನ್ ಎಂದು ಅದ್ಭುತ ಇಂಗ್ಲೀಷ್ ಕವನ ಎಂದು ಹಾಡುತ್ತಿದ್ದ ಅದೇ ಹಳೆಯ ಶತಮಾನಗಳ ಕಾಲದಿಂದ ಕಾಪಿಟ್ಟುಕೊಂಡಿರುವ ಸೇತುವೇ ಇರೋದು ಇ. ದೇಶದ ಶ್ರೇಷ್ಠ ನ್ಯಾಯ ವ್ಯವಸ್ಥೆ ಯನ್ನು ಯಾರು ಬೇಕಾದರೂ ನೋಡಲು ಅನುಕೂಲವಾಗಬಹುದಾದ ಸುಪ್ರಿಂ ಕೋರ್ಟ್ ಕಲಾಪಕ್ಕೆ ಭಾಗಿಯಾಗಲು ಅವಕಾಶ ಕಲ್ಪಿಸುವ ಅಪರೂಪದ ವ್ಯವಸ್ಥೆ ಇರುವುದೂ ಇದೇ ಸೆಂಟ್ರಲ್ ಲಂಡನ್‌ನಲ್ಲಿ.

ಈ ತುದಿಯ ಅಗಾಧ ಅಗಲದ ಟೈಲ್ಸು ಜೋಡಿಸಿದ ರಸ್ತೆಗೆ ಇಳಿದರೆ ಆಚೆ ಬದಿಗೆ ಸೇರುವುದರಲ್ಲಿ ಎರಡು ಜಾಗ ನೋಡಿದ ಅನುಭವಕ್ಕೆ ಬರುತ್ತೀರಿ ಮಾತ್ರವಲ್ಲ ಇತ್ತಲಿಂದ ಅತ್ತಲಿನ ಮತ್ತೊಂದು ಗಲ್ಲಿಗೆ ಇಳಿದರೆ ಲಂಡನ್‌ನ ಪ್ರಮುಖ ಕೇಂದ್ರವನ್ನು ನೋಡಿರುತ್ತೀರಿ. ಹೀಗೆ ಹಲವು ಮುಖಗಳ ಲಂಡನ್ ಮೊನ್ನೆ ಮೊನ್ನೆ ಓದಿದ ಸುದ್ದಿಗೆ ತತ್ತರಿಸುವುದನ್ನೂ ಗಮನಿಸಿದ್ದೆ ಹೆಜ್ಜೆ ಹೆಜ್ಜೆಗೆ. ಕಾರಣ ಇಂಗ್ಲೆಂಡಿನ ಪ್ರತಿ ಬಿಜಿನೆಸ್ಸು, ವ್ಯವಹಾರ ಜಾಗ ಕೊನೆಗೆ ಪ್ರತಿ ಮನೆಯ ಆಚೀಚೆ ಹೆಚ್ಚಾಗಿ ಇತರೆ ಧರ್ಮೀಯರೇ ಆವರಿಸಿಕೊಂಡು ಅಲ್ಲಿನ ಮೂಲ ಚಹರೆಯನ್ನೇ ಬದಲಾಯಿಸಿದಂತಹ ಮತ್ತು ನಗರವೊಂದರ ವಿಶಿಷ್ಟ ಚಿತ್ರಣದ ಚಹರೆಯನ್ನೆ ತೇಪೆ ಹಾಕಿದಂತೆ ಬದಲಿಸುವ ಯತ್ನ ಅಥವಾ ತಾವಿದ್ದಲ್ಲಿ ನೆಲದ ಬದಲಾವಣೆ ಮಾಡುವುದೇ ಧರ್ಮ ಎಂದು ಕೊಂಡರೋ
ಏನು ಕತೆಯೋ.. ನಾನು ಓದಿಕೊಂಡಿದ್ದ ಮತ್ತು ಇತ್ತಿಚಿನ ದಶಕದಲ್ಲಿ ನೋಡಿದ್ದ ಸ್ಥಳೀಯ ಚಿತ್ರಣ ಅನಾಮತ್ತಾಗಿ ಕಲಸು ಮೇಲೋಗರವಾದಂತೆ ಕಂಡಿದ್ದು ಹೌದು.

ಕಾರಣ ಇಂಗ್ಲೆಂಡಿನ ಮೂಲ ಜನಸಂಖ್ಯೆ ಅತ್ಯಂತ ವೇಗವಾಗಿ ಕುಸಿತಕ್ಕೆ ಈಡಾಗುತ್ತಿದೆ. ಅದಕ್ಕೆ ಕಾರಾಣವೂ ಜಾಗತಿಕವಾಗಿ
ಗೊತ್ತಿರುವಂಥz. ಜತೆಗೆ ಎ ಲಭ್ಯವಾಗುತ್ತಿದ್ದ ಪಂಜಾಬಿಗಳು ಅಲ್ಲಲ್ಲಿ ನನ್ನ ಪ್ರವಾಸ ಸುಗಮನ ಗೊಳಿಸಿದ್ದೂ ಹೌದು. ಹಾಗಾಗಿ ಸುಲಭಕ್ಕೆ ಈ ಬರಹ ಲಂಡನ್ ಡೈರೀಸ್.. ನಿಮ್ಮ ಕೈಗೆ..