ಅಲೆಮಾರಿಯ ಡೈರಿ
mehandale100@gmail.com
ಅವತ್ತು ಲಂಡನ್ ಪ್ರವೇಶ ಮುಗಿದು ಹಾನ್ ಸ್ಲೋದಲ್ಲಿ ಸೆಟ್ಲಾಗಿದ್ದೇನೊ ಸರಿ. ಆದರೆ ಪ್ರತಿಯೊಂದಕ್ಕೂ ನಮಗೆ ಬೇಕೆಂದಾಗೆಲ್ಲ ಆಟೊ, ಟ್ಯಾಕ್ಸಿ ಎಂದರಲ್ಲಿ ಅಂಗಡಿಗಳಿದ್ದ ಊರಲ್ಲಿ ಬದುಕಿದ್ದ ಜೀವಕ್ಕೆ, ಇಲ್ಲಿ ಹುಡುಕಾಡಿದರೂ ಸಿಗುವುದು ತಂಗಳು ತಿನ್ನುವ ರೀತಿಯಲ್ಲಿ ಬರೀ ತಣ್ಣಗಿನ ಬ್ರೆಡ್ಡು ಮತ್ತು ಅದಕ್ಕೂ ಇಷ್ಟು ಚೀಸು ಹಾಗೂ ಬೆಣ್ಣೆ. ದನ್ನೇ ಸವರಿ ತಿನ್ನುವದಷ್ಟೇ ಅಲ್ಲ ಚಹ ಕೊಡ್ರೊ ಎಂದರೆ ಬಿಸಿ ನೀರು ಸುರಿದು ಅದಕ್ಕಿಷ್ಟು ಕಡು ಚಹ ಸುರಿದು ತಗೊ ಎಂದು ಇರಿಸಿ ಬಿಡುವವರ ಎದುರಿಗೆ ನಮ್ಮ ಹಾಲಿನ ಚಹದ ರುಚಿ ಮತ್ತು ಟೇಸ್ಟೇ ಬೇರೆ.
ಅದರಲ್ಲೂ ಕೈ ಕಾಲಿಗೊಂದು ಟೀ ಶಾಪ್ ಇರಿಸಿಕೊಂಡವರು ನಾವು. ಆದರೂ ಚೂರೇ ಚೂರು ನಿಂಬೆ ರಸದ ಜತೆಗಿನ ಕಾಲು ಲೀಟರ್ ಗಟ್ಟಲೇ ಕೊಡುವ, ಹೆಚ್ಚಿನ ಹೋಟೆಲು ಗಳಲ್ಲಿ ಅದೊಂದು ರೀತಿಯಲ್ಲಿ ಕೊಡುವ ಕಡುಕಪ್ಪು ಟರ್ಕೀಸ್ ಚಾಯ್ ರುಚಿನೇ ಬೇರೆ. ಹಾಗಾಗಿ ಹತ್ತಿಳಿದಲ್ಲ ಎಲ್ಲಿ ಎಂಥ ಚಹ ಸಿಗುತ್ತೆ ಎಂದು ಹುಡುಕಾಡುತ್ತಿದ್ದ ನನಗೆ ಆವತ್ತು ಲಂಡನ್ ಬ್ರಿಡ್ಜ್ ಮೂಲೆಯೊಂದರ ಶಾಪ್ನಲ್ಲಿ ಟಿಕೇಟ್ ಪಡೆದು ಗ್ರೀನ್ ವೀಚ್ ಹತ್ತುವ ಮೊದಲು ಎರಡು ಬಸ್ಸು ಮತ್ತು ಎರಡು ಟ್ರೆನ್ ಬದಲಿ ಸುವ ಸರ್ಕಿಸ್ಸಿಗೆ ಪಕ್ಕಾದದ್ದೇ ಒಂದು ಸಣ್ಣ ಕತೆಯಾಗುತ್ತದೆ.
ಕಾರಣ ಹಣ ಕೊಡುತ್ತೇನೆಂದರೂ ಬಸ್ ಹತ್ತಿಸಿಕೊಳ್ಳದ ದೇಶ ಇದು ಎಂದು ಬಂದ ಮೇಲೆಯೇ ನನಗೆ ಗೊತ್ತಾಗಿದ್ದು. ಹಾಗಾಗಿ ಓಡಾಟಕ್ಕೆಂದು ಒಂದು ಪೇಡ್ ಕಾರ್ಡ್ ಮಾಡಿಸಿಕೊಟ್ಟಿದ್ದ ಕಾರಣ, ಮೊದಲ ದಿನವೇ ಮಾಡಿದ ಕೆಲಸ ಎಂದರೆ ಆಪ್ ಒಂದನ್ನು ಹಾಕಿಕೊಂಡಿದ್ದು.
ಅದೇ ಸಿಟಿ ಮ್ಯಾಪರ್.. ಗೂಗಲ್ಗಿಂತಲೂ ನಿಖರವಾಗಿ ಈ ಆಪ್ ಕೆಲಸ ಮಾಡುವ ಮತ್ತು ಟೈಮಿಂಗ್ ಎಷ್ಟು ಪರ್ಫೆಕ್ಟ್ ಎಂದರೆ ಅದರ ಕತೇನೆ ಬೇರೆ. ಒಂದು ನಿಮಿಷ ಆಚೀಚೆ ಆಗದಂತೆ ಲಂಡನ್ನ ಸಂಪೂರ್ಣ ಓಡಾಟಕ್ಕೆ ಮಾರ್ಗದರ್ಶಿ ಇದು. ಹಾಗಾಗಿ ಎಲ್ಲಿ
ಬಸ್ ಬರುತ್ತೆ, ಅಲ್ಲಿಂದ ಎಲ್ಲಿಗೆ ಹೋಗಬೇಕು..? ಎಷ್ಟೊತ್ತಿಗೆ ಬಸ್ ಬರುತ್ತೆ ಹೀಗೆ.. ಜತೆಗೆ ಆ ಬಸ್ಸ್ಟಾಪ್ನಿಂದ ಕಾಲ್ನಡಿಗೆ
ಮೂಲಕ ರೇಲ್ವೇ ನಿಲ್ದಾಣಕ್ಕೆ ಎಷ್ಟು ನಿಮಿಷ, ಅಲ್ಲಿ ಎಷ್ಟಕ್ಕೆ ರೈಲು..? ಅದು ತಪ್ಪಿದರೆ ಮುಂದಿನದ್ದು ಹೀಗೆ ಲೆಕ್ಕ ತಪ್ಪದ
ನಾಜೂಕಾದ ಪಕ್ಕಾ ಲೆಕ್ಕಾಚಾರದ ಆಪ್ ಅದು.
ಗೂಗಲ್ಗಿಂತ ನಿಖರ ಮತ್ತು ಇನಾರ್ಮೇಟಿವ್. ಎಲ್ಲಿ ಎಷ್ಟು ನಡೆಯಬೇಕೆನ್ನುವುದೂ ಕೂಡ ಅತ್ಯಂತ ಸ್ಪಷ್ಟ ಮತ್ತು ಅಲ್ಲಿಂದಾ ಚೆಗಿನ ದಾರಿ, ವಾಹನ ಇತ್ಯಾದಿ. ಹಾಗೆ ಇದ್ದಿದುರಿಂದಲೇ, ಲೂಟನ್ ಏರ್ಪೋರ್ಟ್ಗೆ ಹೊರಡುವಾಗ ನಮ್ಮಂತೆ ಟ್ಯಾಕ್ಸಿ ಮಾಡುವ ಪ್ರಮೇಯವೇ ಇಲ್ಲ. ಕಾರಣ ಪ್ರತಿ ಏರ್ಪೋರ್ಟ್ಗೂ ನೇರವಾದ ಬಸ್ ಮತ್ತು ರೈಲು ಸೌಕರ್ಯದ ಯೋಜನೆ ಅದ್ಭುತ. ಈ ಎಲ್ಲ ಕಡೆಯಲ್ಲೂ ಸೆಕ್ಯೂರಿಟಿ ಮಾತ್ರ ಯೆಸ್ ಎನ್ನುವ ಮಟ್ಟಿಗಿದೆ.
ಹಾಗೆ ಮೊದಲು ಬಸ್ ಹಿಡಿದು ಆಸ್ಟಲೀರ್ ಸ್ಟೆಷನ್ನಿಂದ ಪಿಕಿಡ್ಲೀ ಲೈನ್ ಹಿಡಿದು, ಅದಾದ ನಾಲ್ಕನೇಯ ಸ್ಟಾಪ್ ಗ್ರೀಪ್
ಪಾರ್ಕ್ಗೆ ಇಳಿದು, ಅಲ್ಲಿಂದ ನಾಲ್ಕಾರು ಸ್ಟೆಷನ್ ಆದ ಮೇಲೆ ವಿಕ್ಟೋರಿಯಾ ಲೈನ್ ಮೇಲೆ ಮತ್ತೆ ರೈಲು ಹತ್ತುವಾಗ ಪ್ರತಿ
ಹಂತದಲ್ಲೂ ಅಲ್ಲ ಬದಲಾಯಿಸಿಕೊಳ್ಳಲು, ಒಂದಿಷ್ಟೂ ಕನ್ಯೂಸ್ ಆಗದ ಮ್ಯಾಪ್ ಪ್ರಕಾರ ನೋಡುತ್ತಲೇ ಹೊರಟರೆ, ಆಯಾ ಟ್ರೇನ್ ಕರೆಕ್ಟ್ ಆಗಿ ಬರುವ ಸಮಯದ ಮಾರ್ಜಿನ್ ಎರಡರಿಂದ ಮೂರು ನಿಮಿಷದಲ್ಲಿರುತ್ತದೆ.
ಎಲ್ಲೂ ಯಾವತ್ತೂ ಐದು ನಿಮಿಷಕ್ಕಿಂತ ಹೆಚ್ಚಿಗೆ ನಿಲ್ಲುವ ಪ್ರಮೇಯವೇ ಬರಲಿಲ್ಲ. ಬಸ್ಸುಗಳೂ ಅಷ್ಟೆ. ಒಂದು ಸ್ಟಾಪ್ಗೆ
ಹೆಚ್ಚೆಂದರೆ ಆರರಿಂದ ಎಂಟು ನಿಮಿಷಗಿಂತ ಹೆಚ್ಚಿಗೆ ಬರುವುದಿಲ್ಲ. ಅಷ್ಟರ ನಮ್ಮ ಎಲ್ಲ ಕನೆಕ್ಟಿಂಗ್ ಅಂತರಕ್ಕೆ ಬೇಕಾಗುವ ನಿಲ್ದಾಣಕ್ಕೆ ಅವು ತಲುಪುತ್ತವೆ. ಆದರೆ ಆವತ್ತು ವಿಕ್ಟೋರಿಯಾ ಲೈನ್ ನಂತರ ಅಂತಾರಾಷ್ಟ್ರೀಯ ಮಾರ್ಗ ತಲುಪುವವರೆಗೂ ಎಲ್ಲ ಸರಿ ಇತ್ತು. ನನಗೆ ಹೋಗಬೇಕಿದ್ದ ಸೆಂಟ್ ಪಾನ್ಕ್ರಾಸ್ ಇಂಟರ್ ನ್ಯಾಶನಲ್ ಸ್ಟೇಷನ್ ತಲುಪಿ, ಅಲ್ಲಿಂದ ಅಚ್ಚರಿ ಎನ್ನಿಸುವ
ರೀತಿಯ ಟಾಪ್ ಎಂಡ್ ಎನ್ನಿಸುವ ವ್ಯವಸ್ಥೆಯ ರೈಲಿಗೆ ಕಾಯುತ್ತಿದ್ದ ಕೊನೆಯ ಕ್ಷಣದಲ್ಲಿ ಅದೂ ೨೦ ಪೌಂಡ್ ಟಿಕೆಟ್ ಟ್ರೇನ್ ಕ್ಯಾನ್ಸಲ್ ಎಂದು ಅನೌನ್ಸ್ ಆಗಿ ಬಿಡಬೇಕೆ..? ಅರೆ ಮೊದಲೇ ಇಂಗ್ಲೆಂಡೇ ಆದರೂ ಭಾಷೆ ದೇವರಿಗೇ ಪ್ರೀತಿ.
ಆ ಆಸೆಂಟ್ ಅರ್ಥೈಸಿಕೊಂಡು ಬೇಕಾದುದನ್ನು ವಿಚಾರಿಸಿ ಕೇಳಿ ಹೊರಟು ತಲುಪೋದೆಲ್ಲಿಂದ..? ಕಾರಣ ಆಗಲೇ 12 ಹತ್ತಿರ.
1240 ಕ್ಕೆ ಚೆಕ್ ಇನ್ ಕ್ಲೋಸ್ ಬೇರೆ. ಲಗೇಜ್ ಡ್ರಾಪ್ ಇರಲಿಲ್ಲ. ಅದರೆ ಸಮಯ..? ತಕ್ಷಣ ನನ್ನ ಕಟಿಪಿಟಿ ನೋಡುತ್ತಿದ್ದ ಸೆಕ್ಯೂರಿಟಿ ಆಫೀಸರ್ ಒಬ್ಬಾತ ಒಂದು ಸಜೇಶನ್ ಕೊಟ್ಟ. ಇದೇ ಟಿಕೇಟ್ ಮೇಲೆ ಅಂಡರ್ ಗ್ರೌಂಡ್ ನಲ್ಲಿ ಬೇರೊಂದು ಅದೇ ಕಡೆಗೆ ಹೋಗುವ ಟ್ರೆನ್ ಬರುತ್ತೆ.
ಅದರಲ್ಲಿ ಹೋದರೆ ನೇರ ಸ್ಟೇಶನ್ ಹೋಗಲ್ಲ. ಹತ್ತಿರದ ಮತ್ತೊಂದು ನಿಲ್ದಾಣ, ಆದರೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗಾಗಿ ಅಲ್ಲಿ ಬಸ್ ರೆಡಿ ಇರುತ್ತೆ. ಹೊರಕ್ಕೆ ಹೋಗುತ್ತಿದ್ದಂತೆ ಕರೆದೊಯ್ದು ಡಿಪಾರ್ಚರ್ ಕಡೇನೆ ಇಳಿಸುತ್ತಾರೆ ಎನ್ನುತ್ತಿದ್ದರೆ, ದಭ ದಭನೆ ಬ್ಯಾಕ್ಪ್ಯಾಕ್ ಏರಿಸಿ ಕೆಳಗೆ ಬಂದರೆ ಮೂರೇ ನಿಮಿಷ ಬಾಕಿ. ಅಂದ ಹಾಗೆ ಇಲ್ಲಿ ಮೆಟ್ಟಿಲು ಹೆಚ್ಚೆಂದರೆ ಹತ್ತರಿಂದ ಹದಿನೈದು ಅದಕಿಂತ ಹೆಚ್ಚಿದ್ದಲ್ಲ ಎಸ್ಕಲೇಟರ್ಗಳೇ. ಕೆಲವೆಡೆ ಅನಾಮತ್ತು ಹತ್ತಾರು ಎಸ್ಕಲೇಟರ್ಗಳು ಏರಿಳಿಯುತ್ತಲೇ ಇರುತ್ತವೆ.
ಹಾಗಾಗಿ ಏರಿಳಿಯುವ ಪ್ರಯಾಸವಿಲ್ಲ ಆದರೆ ಎಸ್ಕಲೇಟರ್ ನಲ್ಲೂ ಬಲಕ್ಕೆ ಸರಿದು ಎಡಕ್ಕೆ ಜಾಗ ಬಿಟ್ಟು ನಿಲ್ಲುವ ಶಿಸ್ತು ಕಾಯ್ದು ಕೊಳ್ಳಲೇಬೇಕು. ಹಾಗೊಂದು ಅವಸರದ ಪ್ರಯಾಣ ಮುಗಿಸಿ ಲೂಟನ್ ತಲುಪುವ ಹೊತ್ತಿಗೆ ಬ್ರಿಟನ್ ಟ್ರೆನ್ ಮತ್ತು ಬಸ್ಸುಗಳ ನಿಖರತೆ ಆಗಲೇ ನಾನು ಪಕ್ಕಾಗಿದ್ದೆ.
ವಿದೇಶ ಸುತ್ತುವ ಖಯಾಲಿಯಗಿವ ವಿಚಿತ್ರ ಮತ್ತು ಎದುರಾಗಬಹುದಾದ ಸಡನ್ ಚೆಂಜಸ್ಗೆ ಹೊಂದಿಕೊಂಡು ಅಲ್ಲ ಟಕ್ ಅಂತಾ ನಮ್ಮ ಲಗ್ಗೇಜು, ದಿನಾಂಕ ಹೊಂದಿಸಿಕೊಂಡು ಹರಗಾಡುವುದಾದರೆ ಅದರ ಮಜವೇ ಬೇರೆ. ಲಂಡನ್ ಅಥವಾ ಗ್ರೇಟ್ ಬ್ರಿಟನ್ನಿನ ಎಲ್ಲ ಮೂಲೆ ಮೂಲೆಯ ಸಂದುಗಳನ್ನು ಸವರಲಾಗದಿದ್ದರೂ ಕನಿಷ್ಠ ಲಿಸ್ಟೆಡ್ ಎನ್ನುವಂತಹ ಆಲ್ ಇಂಗ್ಲೆಂಡ್ ಪ್ರವಾಸಕ್ಕಾಗಿ ಒಂದಷ್ಟು ಗುರುತು ಹಾಕಿಕೊಂಡಿದ್ದಾಗಲೇ ಸ್ನೇಹಿತರೊಬ್ಬರು ಕ್ರಿಸ್ಮಸ್ ಕಾಲಾವಧಿಯಾದ್ದರಿಂದ ಸಿಗಬಹು ದಾದ ವಿಮಾನದ ಸುಲಭ ಬೆಲೆಗಳ ಬಗ್ಗೆ ಹುಳ ಬಿಟ್ಟರು ನೋಡಿ.
ಅದರಲ್ಲೂ ಯುನೈಟೆಡ್ ಕಿಂಗಡಮ್ ಎಂಬ ಜಾಗತಿಕ ರಾಜಧಾನಿಯ ಸೀಲು ಬಿದ್ದಿರೋ ಪಾಸ್ ಪೋರ್ಟ್ ಮತ್ತು ವಿಸಾ ನಂಬರು ನೋಡಿಕೊಂಡು ನಮ್ಮನ್ನು ಒಳಕ್ಕೆ ಬಿಟ್ಟುಕೊಳ್ಳುವ ಒಂದಷ್ಟು ದೇಶಗಳಿzವೆ. ನಮ್ಮ ಬಳಿ ಶಾಂಗೈ ವಿಸಾ ಅಥವಾ ಯುಕೆ ಅಥಾವ ಅಮೆರಿಕ ಈ ಮೂರರ ವಿಸಾ ಒಮ್ಮೆ ಸಿಕ್ಕಿದ್ದರೆ ನಿಮ್ಮ ಪಾಸ್ಪೋರ್ಟಿನ ಖದರ್ರೇ ಬೇರೆ ಆಗುತ್ತದೆ. ಈ ದೇಶಗಳ ವೀಸಾ ಸೀಲು ಬಿದ್ದರೆ ಸಾಕು ಆಚೀಚೆ ನೋಡದೆ ನಿಮ್ಮನ್ನು ಮುಲಾಜೇ ಇಲ್ಲದೆ, ಬರೀ ನೀವು ಆನ್ ಲೈನ್ನಲ್ಲಿ ಪೂರೈಸುವ ಡಾಟಾ ನಂಬಿಯೇ, ಹತ್ತು ಹಲವು ದೇಶಗಳು ಸುಖಾಸುಮ್ಮನೆ ಐದೇ ಸೆಕೆಂಡಿನಲ್ಲಿ ನಿಮ್ಮನ್ನು ಒಳಕ್ಕೆ ಬಿಟ್ಟು ಕೊಳ್ಳಲು ರೆಡಿ ಆಗುತ್ತವೆ. ಕಾರಣ ಈ ತರಹದ ವಿಸಾಗಳ ಮೇಲೆ ಆ ರೇಂಜಿನ ನಂಬುಗೆ ಅವಕ್ಕೆ.
ಹಾಗಾಗಿ ಕೂತ ಯುಕೆ ವೀಸಾ ನಮೂದಿಸಿ ಟರ್ಕಿಯ ವೀಸಾ ವೆಬ್ಸೈಟ್ನಲ್ಲಿ ತಡಕಾಡಿ ಅಪ್ಲಿಕೇಶನ್ ತುಂಬಿಸುತ್ತಿದ್ದರೆ, ಹಣ ವರ್ಗಾವಣೆ ಆದ ನ್ಯಾನೋ ಸೆಕೆಂಡಿನಲ್ಲಿ ಡೌನ್ ಲೋಡ್ ಆಗಿದ್ದು ಟರ್ಕಿ ವೀಸಾ. ಅದ್ಯಾಕೋ ಮೊದಲಿನಿಂದಲೂ ಇಸ್ತಾಂಬುಲ್ ಎಂಬ ಮಾಯಾನಗರಿಯ ಹುಚ್ಚು ಹತ್ತಿಸಿದ್ದು ನನಗೆ ನನ್ನ ಫೇವರಿಟ್ ಹಿರೋ ಮತ್ತು ಮಾಸ್ ಯಾವ ಕಾಲಕ್ಕೂ ಸಲ್ಲುವ ನಾಯಕ ಅಮಿತಾಭ್ ಬಚ್ಚನ್ ಜೀ. ಅವರ ಹಲವು ಚಿತ್ರದಲ್ಲಿ ಇಸ್ತಾಂಬುಲ್ ನಗರಿಯ ಚೆಂದದ ಚಿತ್ರಣವಿದೆ.
ಅದೆ ಮೂಲೆಯಲ್ಲಿ ಚಿತ್ರವಾಗಿ ಮನದಲ್ಲಿ ಹಚ್ಚೆಯಾಗಿತ್ತಲ್ಲ. ಹೀಗೊಂದು ಸುಲಭದ ದಾರಿಯಿಂದ ಮತ್ತು ಗ್ರೇಟ್ ಬ್ರಿಟನ್
ನಿಂದ ಹಾರುವುದೇ ಆದರೆ ಯಾಕಾಗಬಾರದು ಎಂದು ಅದಕ್ಕೂ ಎಂಟರ್ ಒತ್ತಿದ್ದೆ. ಇ-ವೀಸಾ ಪೂರೈಸಿದ ಟರ್ಕಿಯದ್ದು ಒಂದೇ ಕಂಡಿಷನ್ನು ನಿನಗೇ ಏನಾದರೂ ಆದರೆ, ರೋಗಕ್ಕೆ ಲಕ್ಷಾಂತರ ಬಿಲ್ ಆದರೆ, ಕೊನೆಗೆ ತಪ್ಪಿ ಇಲ್ಲೇ ನಮ್ಮ ನೆಲದಲ್ಲಿ ನೆಗೆದೂ ಬಿದ್ದರೆ, ಭೂಮಿಯ ಮೇಲೆ ಹುಟ್ಟಿರುವ ನಿಮ್ಮ ಅಪರೂಪದ ಸ್ಯಾಂಪಲ್ ತರಹದ ಬಾಡಿಯನ್ನು ವಾಸು ಕಳಿಸಬೇಕಲ್ಲ ಇದಕ್ಕೆಲ ಬರುವ ಮೊದಲು ಇನ್ಶ್ಯೂರೆನ್ಸು ಮಾಡಿಸಿಕೊಂಡು ಬಾ ಎನ್ನುವುದರ ಹೊರತಾಗಿ ಅದು ಈ ಮೇಲಿನ ಮೂರರಲ್ಲಿ ಯಾರ ಒಂದು ವೀಸಾ ಇದ್ದರೂ ಸುಮ್ಮನೆ ಒಳಕ್ಕೆ ಬಿಟ್ಟು ಕೊಳ್ಳುತ್ತದೆ.
ಅಲ್ಲಲ್ಲಿ ಅಗತ್ಯ ಇದ್ದಷ್ಟು ಅಂಗ್ರೇಜಿ ಬಳಸುವ ಟರ್ಕಿಗಳು ಬೀಡು ಬೀಸಾಗಿ ತಮ್ಮದೇ ರೀತಿಯಲ್ಲಿ ನಗರ ಕಟ್ಟಿಕೊಂಡಿದ್ದು
ಹೌದಾದರೂ, ಜಗತ್ತಿನ ಪ್ರಮುಖ ಮುಸ್ಲಿಂ ರಾಷಗಳಲ್ಲಿ ಒಂದಾದರೂ, ಅದರ ಪರಿಣಾಮ ಅಲ್ಲಲ್ಲಿ ಗೋಚರಿಸುತ್ತದಾದರೂ ಪ್ರವಾಸೋದ್ಯಮವನ್ನು ಆದಾಯವಾಗಿಸುವ ನಿಟ್ಟಿನಲ್ಲಿ ನಮ್ಮನ್ನು ಆದರಿಸುವ ರೀತಿಯೇ ಬೇರೆ, ಸೇವೆಯೇ ಬೇರೆ. ಅರೆ ಬರೆ ಇಂಗ್ಲಿಷು ಬರುವವನಿಗೂ ಭಾರೀ ಡಿಮ್ಯಾಂಡು ಇಲ್ಲಿ. ಕಾರಣ ಸಂವಹನ. ಅವನ ಭಾಷೆ ಹರಕು ಮುರುಕಾದರೂ ನಮ್ಮನ್ನು
ತಲುಪಿಸುವಲ್ಲಿಗೆ ಮತ್ತು ಹೇಳಬೇಕಾದುದನ್ನು ಹೇಳಲು, ತೋರಿಸಲು ಬೇಕಷ್ಟಾಯಿತು.
ತೀರ ಪ್ರೊಫೆಷನಲ್ ಆಗಿ ಟೂರಿಸಂ ನಿಭಾಯಿಸುತ್ತಿzರೆ ಇಲ್ಲಿ. ಹಾಗಾಗಿ ಟರ್ಕಿಯ ಅಂಟಾಲ್ಯಾ, ಇಸ್ತಾಂಬುಲ, ಕಪಡೊಷಿಯಾ, ಅಂಕಾರಾ ಮತ್ತು ಅನಲ್ಯಾ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ವಿಶೇಷ ಸ್ಥಳಗಳ ಹಲವು ಜಾಗಗಳು, ಡೌಟೇ ಬೇಡ, ಜಗತ್ತಿನ
ಯಾವ ಭಾಗದಲ್ಲೂ ಕಾಣದ ಲ್ಯಾಂಡ್ ಸ್ಕೇಪಿನಾದಿಯ ವಿಭಿನ ಗೆಟಪ್ ಹೊದ್ದಿರುವ ಸ್ಥಳಗಳಿವು.
Read E-Paper click here