ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಜಗತ್ತಿನಲ್ಲಿ ತಮ್ಮ ಧರ್ಮವನ್ನು ಬಹುಸಂಖ್ಯಾತ ಧರ್ಮವನ್ನಾಗಿಸಲು ಮುಸಲ್ಮಾನರು ಮಾಡುತ್ತಿರುವ ಕೆಲಸಗಳು ಒಂದೊಂದ ಲ್ಲ, ಅವರ ಉದ್ದೇಶ ಒಂದೇ ತಾವು ಹೇಗಾದರೂ ಮಾಡಿ ಜಗತ್ತಿನಲ್ಲಿ ಬಹುಸಂಖ್ಯಾತರಾಗಬೇಕು.
ಜಗತ್ತಿನಲ್ಲಿನ ಸಂಪನ್ಮೂಲಗಳೆಷ್ಟೇ ಕೊರತೆಯಾದರೂ ಸರಿ, ತಾವು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದೊಡ್ಡವ ರಾಗಬೇಕು. ಇಡೀ ಜಗತ್ತು ಮುಂದುವರಿಯುತ್ತಿದ್ದರೆ ಇವರು ಮಾತ್ರ ಹಲವು ವಿಷಯಗಳಲ್ಲಿ ಹಿಂದೆ ಹೋಗುತ್ತಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಬೆಳಗ್ಗೆೆ ಏಳಲು ಮೊಬೈಲ್‌ನಲ್ಲಿ ಅಲಾರಾಂ ಇಟ್ಟುಕೊಳ್ಳುವುದರ ಬದಲು ಮಸೀದಿಯಲ್ಲಿ ಆಜಾನ್ ಕೂಗಿ ದರಷ್ಟೇ ಎದ್ದು ನಮಾಜ್ ಮಾಡಲು ತೆರಳುತ್ತಾರೆ.
ಬಹುಸಂಖ್ಯಾತ ಇಸ್ಲಾಮಿಕ್ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಸಿರಿಯಾ, ಸೌದಿ ಅರೇಬಿಯಾ, ಇರಾಕ್, ಇರಾನ್ ಈಗಾಗಲೇ ತಮ್ಮನ್ನು ಮುಸಲ್ಮಾನ್ ರಾಷ್ಟ್ರವೆಂದು ಘೋಷಿಸಿಕೊಂಡಿವೆ. ಇದೇ ರೀತಿ ಇತರ ದೊಡ್ಡ ದೇಶಗಳಲ್ಲೂ ಸಹ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ತಮ್ಮ ಕುಟುಂಬದಲ್ಲಿ ಹೆಚ್ಚು ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಅವರಿಗೆ ಚಿಂತೆಯಿರುವುದಿಲ್ಲ, ತಮ್ಮ ಧರ್ಮದವನೊಬ್ಬ ಬಹುಸಂಖ್ಯಾತ ಯೋಚನೆಗೆ ಸೇರಿದನೆಂಬ ಖುಷಿಯವರಿಗೆ. ತಮ್ಮ ಧರ್ಮದಲ್ಲಿ ಇದಕ್ಕಾಗಿಯೇ ಷರಿಯಾ ಕಾನೂನಿನನ್ವಯ ತಾವು ಮಾಡಿಕೊಳ್ಳುವ ಮದುವೆಗಳ ಮೇಲೆ ನಿರ್ಬಂಧವಿರಲಿಲ್ಲ, ಅವರ ಸತತ ಪ್ರಯತ್ನದ ಫಲವಾಗಿ ಭಾರತದಲ್ಲಿ ಮುಸಲ್ಮಾನರ ಸಂಖ್ಯೆಯು ಇಪ್ಪತ್ತು ಕೋಟಿಯನ್ನು ದಾಟಿದೆ.
ಹುಟ್ಟುತ್ತಲೇ ಮುಸಲ್ಮಾನರಾಗಿ ಹುಟ್ಟುವವರ ಮೇಲೆ ಇವರಿಗೆ ನಿಯಂತ್ರಣವಿರುತ್ತದೆ. ಆದರೆ ಈಗಾಗಲೇ ಸಮಾಜದಲ್ಲಿರುವ ಇತರ ಧರ್ಮದವರನ್ನು ಮುಸಲ್ಮಾನರನ್ನಾಗಿಸಲು ಇವರಿಗೆ ಯಾವುದಾದರೊಂದು ಅಸ್ತ್ರ ಬೇಕಿತ್ತು. ಕ್ರಿಶ್ಚಿಯನ್ನರ ರೀತಿಯಲ್ಲಿ ಯಾರಿಗೂ ತಿಳಿಯದ ಹಾಗೆ ತಲೆಯ ಮೇಲೆ ಕೈ ಇಟ್ಟು ಕ್ರೈಸ್ತನ ಕಥೆಯನ್ನು ಹೇಳಿ ಮತಾಂತರ ಮಾಡಲು ಇವರಿಗೆ ಹೆಚ್ಚಿನ ಧನ ಸಹಾಯ ಮಾಡುವವರಿಲ್ಲ ಹಾಗಾಗಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಇವರು ಆಯ್ಕೆ ಮಾಡಿಕೊಂಡಂಥ
ಮತ್ತೊಂದು ದಾರಿಯೇ ಲವ್ ಜಿಹಾದ್.
ಸಾಮಾನ್ಯವಾಗಿ ಮುಸಲ್ಮಾನ್ ಯುವಕರು ಜಿಮ್ಗಳಿಗೆ ಹೋಗಿ ಅಥವಾ ತಮ್ಮ ವಿಶಿಷ್ಟ ಆಹಾರ ಪದ್ಧತಿಯ ಮೂಲಕ ಕಟ್ಟು ಮಸ್ತಾಗಿನ ದೇಹವನ್ನು ಹೊಂದಿರುತ್ತಾರೆ. ಇಂದಿನ ಹುಡುಗಿಯರಿಗೆ ಈ ರೀತಿಯ ಕಟ್ಟು ಮಸ್ತಿನ ಹುಡುಗರೆಂದರೆ ಸಾಕು ಒಂದು ರೀತಿಯ ಆಕರ್ಷಣೆ. ತಮ್ಮ ಧರ್ಮದಲ್ಲಿನ ಯುವಕರ ಆಕರ್ಷಣೆಯನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಹಲವು ಮುಸ್ಲಿಂ ನಾಯಕರು, ತಮ್ಮ ಯುವಕರ ಮೂಲಕ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಯುವತಿಯರನ್ನೇ ಗುರಿಯನ್ನಾಗಿಸಿಕೊಂಡು ಲವ್ ಜಿಹಾದ್ ಮೂಲಕ ತಮ್ಮ ಧರ್ಮದ ಯುವಕನ ಜತೆ ಮದುವೆ ಮಾಡಿಸಿ ಮತಾಂತರ ಮಾಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಾಯದ ಹೆಣ್ಣುಮಕ್ಕಳ ತಲೆ ಹಾಳುಮಾಡಿ ತಮ್ಮ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ನಂತರ ಅವರನ್ನು ಬಲವಂತವಾಗಿ ಮತಾಂತರ ಮಾಡಿರುವ ಹಲವು ಪ್ರಕರಣಗಳು ನಮ್ಮ ಮುಂದಿವೆ. ಪ್ರೀತಿ ಮಾಡುವ ಸಮಯದಲ್ಲಿ ತಾವೊಂದು ಮುಸ್ಲಿಂ ಆಚರಣೆಯಿರುವ ಮನೆಗೆ ಸೊಸೆಯಾಗಿ ಹೋದರೆ ಏನಾಗುತ್ತದೆಯೆಂಬ ಅರಿವಿಲ್ಲದ ಹಿಂದೂ ಹೆಣ್ಣು ಮಕ್ಕಳಿಗೆ, ಮದುವೆಯ ನಂತರ ಪ್ರಿಯಕರನು ಆಕೆಯನ್ನು ಮತಾಂತರ ಮಾಡುವುದಿಲ್ಲವೆಂದು ನಂಬಿಸಿರುತ್ತಾನೆ.
ಆದರೆ ಆತನು ಹೇಳಿದ ಹಾಗೆ ನಡೆದುಕೊಳ್ಳುವುದಿಲ್ಲ, ಮದುವೆಯ ನಂತರ ಆಕೆಯನ್ನು ಬಲವಂತವಾಗಿ ಮತಾಂತರಿಸುತ್ತಾನೆ ಅಥವಾ ತಾನು ಕೆಲಸದ ನಿಮಿತ್ತ ಹೊರ ದೇಶಕ್ಕೆ ಹೋಗುತ್ತೇನೆಂದು ಹೇಳಿ ಅವನ ಅಪ್ಪ ಅಮ್ಮನ ಜೊತೆ ಬಿಟ್ಟು ಹೋಗುತ್ತಾನೆ, ಇಲ್ಲಿ ಆತನ ಮನೆಯವರು ಹಿಂದೂ ಹೆಣ್ಣು ಮಗಳಿಗೆ ಮತಾಂತರವಾಗಲು ನೀಡುವ ಹಿಂಸೆಯನ್ನು ತಾಳಲಾರದೆ ಆತ್ಮಹತ್ಯೆೆ ಮಾಡಿಕೊಂಡಿರುವ ಹಲವು ಪ್ರಕರಣಗಳಿವೆ. ಇತ್ತೀಚಿಗೆ ಲಕ್ನೋನಲ್ಲಿ ಸರಕಾರಿ ಕಚೇರಿಯ ಮುಂದೆಯೇ ಹಿಂದೂ ಹೆಣ್ಣು ಮಗ ಳೊಬ್ಬಳು ಮುಸಲ್ಮಾನ್ ಯುವಕನ ಮನೆಯವರ ಕಾಟವನ್ನು ತಾಳಲಾರದೆ ಬೆಂಕಿ ಹಚ್ಚಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
ಆಕೆಯನ್ನು ಮದುವೆಯಾದ ಮುಸ್ಲಿಂ ಯುವಕ ಮದುವೆಯ ನಂತರ ಆಕೆಯನ್ನು ತನ್ನ ಅಪ್ಪ ಅಮ್ಮಂದಿರ ಜೊತೆ ಬಿಟ್ಟು ಕೊಲ್ಲಿ ರಾಷ್ಟ್ರಕ್ಕೆ ಹೊರಟು ಹೋಗಿದ್ದ. 2009ರಿಂದಲೂ ಲವ್ ಜಿಹಾದ್ ವಿಷಯ ಭಾರತದಲ್ಲಿ ಕೇಳಿ ಬರುತ್ತಿದೆ. ಕೇರಳ ರಾಜ್ಯದ ಕ್ರಿಶ್ಚಿ ಯನ್ ಸಂಸ್ಥೆಯೊಂದು ನೀಡಿರುವ ಹೇಳಿಕೆಯ ಪ್ರಕಾರ 2005 ರಿಂದ 2012ರ ನಡುವೆ ಸುಮಾರು 4000 ಲವ್ ಜಿಹಾದ್ ಪ್ರಕರಣ ಗಳು ಜರುಗಿವೆಯಂತೆ. 2017ರಲ್ಲಿ ಕೇರಳ ಉಚ್ಚ ನ್ಯಾಯಾಲಯವು ಹದಿಯ (ಹಿಂದೂ ಮೂಲ ಹೆಸರು ಅಖಿಲ) ಎಂಬ ಹಿಂದೂ ಹೆಣ್ಣು ಮಗಳು ಮುಸಲ್ಮಾನ್ ಯುವಕ ಶಫೀನ್ ಜಹಾಂ ಮದುವೆಯಾಗಿದ್ದ ಪ್ರಕರಣದಲ್ಲಿ, ಆಕೆಯ ಪೋಷಕರ ಒಪ್ಪಿಗೆಯನ್ನು ಪಡೆಯದೇ, ಮಾನಸಿಕವಾಗಿ ಆಕೆಯನ್ನು ಮದುವೆಯಾಗಿದ್ದರೆಂದು ಹೇಳುವ ಮೂಲಕ ಅವರ ಮದುವೆಯನ್ನು ಅಸಿಂಧು ಮಾಡಿತ್ತು. ಇದೇ ಸಮಯದಲ್ಲಿ ಕೇರಳ ರಾಜ್ಯದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಸೇರುವವರ ಸಂಖ್ಯೆಯು ಹೆಚ್ಚಾಗಿತ್ತು, ಒಂದೆಡೆ ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನೂ ಸಹ ಐಸಿಸ್ ಸಂಘಟನೆಗೆ ಸೇರಿಸ ಲಾಗುತ್ತಿದೆಯೆಂಬ ಮಾತುಗಳು ಕೇಳಿಬಂದಿದ್ದವು.
ತನ್ನ ಮಗಳನ್ನೂ ಸಹ ಮಾನಸಿಕವಾಗಿ ಹಿಂಸಿಸಿ, ತಲೆಯನ್ನು ಹಾಳುಮಾಡಿ ಮುಸಲ್ಮಾನ್ ಧರ್ಮಕ್ಕೆ ಮತಾಂತರ ಮಾಡುವ ಸಲುವಾಗಿ ಮದುವೆಯಾಗಿದ್ದನೆಂದು ಆಕೆಯ ತಂದೆ ಆರೋಪಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕೇರಳ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಆಕೆಯ ಗಂಡ ಶಫೀನ್ ಜಹೀನ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ, ಆತನ ಮನವಿಯನ್ನು ಸ್ವೀಕರಿಸಿದ್ದ ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳವನ್ನು ಕೇರಳ ಸರಕಾರದ ಸಹಯೋಗದೊಂದಿಗೆ ತನಿಖೆಯನ್ನು ಮಾಡಲು ಹೇಳಿತು.
ತನಿಖೆಯ ವರದಿಯನ್ನು ನೀಡಿದ ಸಂಸ್ಥೆಯು ಶಫೀನ್ ಜಹೀನ್ ಐಸಿಸ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂಥ ಮತ್ತಿಬ್ಬರು ಯುವಕರ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿರುವ ಅಂಶವನ್ನು ಬಯಲು ಮಾಡಿತ್ತು. ಆದರೆ ಕೊನೆಯಲ್ಲಿ ಯಾವ ಪ್ರಮುಖ ಸಾಕ್ಷಿಯಿಲ್ಲ ವೆಂದು ಹೇಳಿದ ನ್ಯಾಯಾಲಯವು ಆಕೆಯು ತನ್ನ ಸ್ವಂತ ಸಮ್ಮತಿಯಿಂದ ಮದುವೆಯಾಗಿದ್ದಾಳೆಂದು ಹೇಳಿ ತೀರ್ಪು ನೀಡಿತು. ಆದರೆ ಕೇರಳ ರಾಜ್ಯದಲ್ಲಿ ಇದೇ ಮಾದರಿಯ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ರಾಷ್ಟ್ರೀಯ ತನಿಖಾ ದಳವು ತನ್ನ ತನಿಖೆಯನ್ನು ಮುಂದುವರಿಸಬೇಕೆಂಬ ಅಂಶವನ್ನೂ ಸಹ ತೀರ್ಪಿನಲ್ಲಿ ಹೇಳಿತ್ತು.
ಎಂತಹ ವಿಪರ್ಯಾಸ ನೋಡಿ, ಅಖಿಲ ಪ್ರಕರಣದಲ್ಲಿ ಸರಿಯಾದ ಸಾಕ್ಷಿಯಿಲ್ಲದ ಕಾರಣ ಆಕೆಯ ಮದುವೆಯನ್ನು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಆದರೆ ಆಕೆಯನ್ನು ಮಾನಸಿಕವಾಗಿ ಸಿದ್ದಗೊಳಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸುವು ದರಲ್ಲಿ ಶಫೀನ್ ಜಹೀನ್ ಹಾಗೂ ಅವನ ತಂಡ ಯಶಸ್ವಿಯಾಗಿದ್ದಂತೂ ಸುಳ್ಳಲ್ಲ. ಆಕೆಯ ಪೋಷಕರು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸಹ ಅಖಿಲ ಅವರ ಮಾತನ್ನು ಕೇಳಲಿಲ್ಲ. ಹಣೆಯಲ್ಲಿ ಕುಂಕುಮ, ಕೈಗಳಲ್ಲಿ ಬಳೆ, ಹಬ್ಬ ಬಂತೆಂದರೆ ಬಾಗಿನ ಅರ್ಪಿಸುತ್ತಿದ್ದ ಅಖಿಲಗೆ, ಈಗ ತನ್ನ ಮುಖವನ್ನು ಶಾಶ್ವತವಾಗಿ ಸಮಾಜದ ಮುಂದೆ ಬುರ್ಖಾ ಮೂಲಕ ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ.
ಕೇರಳ ರಾಜ್ಯದಲ್ಲಿ ಹಲವಾರು ಹೆಣ್ಣು ಮಕ್ಕಳನ್ನು ಮತಾಂಧತೆಯ ಅಮಲಿನಿಂದ ಮದುವೆಯಾಗಿ ಕೊಲ್ಲಿ ರಾಷ್ಟ್ರಗಳ
ಮೂಲಕ ಐಸಿಸ್ ಸಂಘಟನೆ ಸೇರಿಸಿರುವ ಆರೋಪಗಳು ಕೇಳಿಬಂದಿವೆ. ಆರಂಭದಲ್ಲಿ ಐಸಿಸ್‌ನಲ್ಲಿ ಹೆಣ್ಣು ಮಕ್ಕಳನ್ನು ಕೇವಲ
ಲೈಂಗಿಕ ತೃಷೆಯ ಸಲುವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಅವರನ್ನೂ ಸಹ ಭಯೋತ್ಪಾದಕ ಚಟು ವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಹರ್ಯಾಣದ ಗುರು ಗ್ರಾಮದಿಂದ ಸುಮಾರು 60 ಕಿಲೋಮೀಟರು ದೂರದಲ್ಲಿರುವ ಮೇವಾತ್‌ನಲ್ಲಿ ಇತ್ತೀಚಿಗೆ ನಿಕಿತಾ ತೋಮರ್ ಎಂಬ ಹಿಂದೂ ಹೆಣ್ಣು ಮಗಳ ಮೇಲೆ ಮುಸ್ಲಿಂ ಯುವಕನೊಬ್ಬನಿಂದ ಹಾಡು ಹಗಲೇ ಫೈರಿಂಗ್ ಆಯಿತು. ತೌಸೀಫ್ ಎಂಬ ಹುಡುಗ ತನಗೆ ನಿರಂತರವಾಗಿ ತೊಂದರೆ ನೀಡುತ್ತಿದ್ದನೆಂದು ನಿಕಿತಾ ಠಾಣೆಯಲ್ಲಿ ತನ್ನ ಮೇಲೆ ದಾಳಿಯಾಗುವ ಒಂದು ತಿಂಗಳ ಹಿಂದಷ್ಟೇ ದೂರು ನೀಡಿದ್ದಳು. ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗೆಂದು ತೌಸೀಫ್ ತೊಂದರೆ ನೀಡುತ್ತಿದ್ದ
ನೆಂದು ಸಹ ಆಕೆಯು ದೂರಿನಲ್ಲಿ ಉಲ್ಲೇಖಿಸಿದ್ದಳು.
ಮೇವಾತ್ ಹರ್ಯಾಣದಲ್ಲಿರುವ ಮಿನಿ ಪಾಕಿಸ್ತಾನ, ಅಲ್ಲಿನ ಜನಸಂಖ್ಯೆಯಲ್ಲಿ ಸುಮಾರು ಶೇ 80% ಮುಸಲ್ಮಾನರು, ಸ್ವಾತಂತ್ರ್ಯ ಬಂದಾಗಿನಿಂದಲೂ ಮೇವಾತ್‌ನಲ್ಲಿನ ಮುಸಲ್ಮಾನರಿಗೆ ಭಾರತದೊಂದಿಗೆ ಇರಲು ಇಷ್ಟವಿಲ್ಲ, ಸದಾ ಪಾಕಿಸ್ತಾನವನ್ನೇ ಹೊಗಳಿ ಕೊಂಡು ಭಾರತ ಮಾತೆಯ ಬೆನ್ನಿಗೆ ಚೂರಿ ಹಾಕುತ್ತ ಬಂದಿದ್ದಾರೆ. ಹರ್ಯಾಣದಲ್ಲಿ ಅತೀ ಹೆಚ್ಚು ಕ್ರೈಂ ನಡೆಯುವ ಸ್ಥಳ ಮೇವಾತ್, ಪ್ರತಿನಿತ್ಯವೂ ಹೆಣ್ಣು ಮಕ್ಕಳ ಮೇಲೆ ಏನಾದರೊಂದು ದೌರ್ಜನ್ಯವು ನಡೆಯುತ್ತಲೇ ಇರುತ್ತದೆ. ಮೇವಾತ್‌ನಲ್ಲಿ ಅತೀ ಹೆಚ್ಚಿನ ಗೋವುಗಳ ಕಳ್ಳ ಸಾಗಣೆಯಾಗುತ್ತದೆ, ಇಲ್ಲಿನ ಯುವಕರು ಅದೆಷ್ಟು ಹದೆಗೆಟ್ಟಿದ್ದರೆಂದರೆ ಕುರಿ, ಮೇಕೆಗಳನ್ನೂ ಸಹ ಬಲವಂತವಾಗಿ ತಮ್ಮ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಾರೆ.
ಇವರು ನಡೆಸುವ ಹೀನ ಲೈಂಗಿಕ ದೌರ್ಜನ್ಯದ ಬಗ್ಗೆೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇಂತಹ ರಾಕ್ಷಸರ ನಡುವೆ ಪ್ರತಿನಿತ್ಯವೂ ಸಹ ಹಿಂದೂ ಹೆಣ್ಣು ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕಬೇಕಿದೆ. ನಿಕಿತಾ ಪ್ರಕರಣದಲ್ಲಿ ಆಕೆಯನ್ನು ಬಲವಂತವಾಗಿ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಲಾಗು ತ್ತಿತ್ತು. ಆರೋಪಿ ತೌಸೀಫ್ ಈ ಹಿಂದೆಯೂ ಸಹ 2018ರಲ್ಲಿ 18 ವರ್ಷದ ಬಾಲಕಿಯೊಬ್ಬಳ ಅಪಹರಣ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.
ಇಡೀ ಮೇವಾತ್‌ನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಒಂದು ಟ್ರೆಂಡ್ ಶುರುವಾಗಿದೆ. ದಲಿತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿರುವ ಮುಸ್ಲಿಂ ಯುವಕರು, ಪ್ರೀತಿ ಮಾಡಿ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಾರೆ, ಇಲ್ಲವಾದಲ್ಲಿ ಅವರ ಮೇಲೆ ಲೈಗಿಕ ದೌರ್ಜನ್ಯ ಎಸಗುವ ಕೃತ್ಯ ಮಾಡುತ್ತಾರೆ. ನಂತರ ನಿಕಿತಾಳನ್ನು ಕೊಂದ ರೀತಿಯಲ್ಲಿ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ.
ಒಂದೆಡೆ ಬಲವಂತವಾಗಿ ಮತಾಂತರ ಮಾಡಲು ಒಪ್ಪದ ಹೆಣ್ಣು ಮಕ್ಕಳ ಮೇಲೆ ಕೊಲೆ ಪ್ರಯತ್ನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರೀತಿಯ ನಾಟಕವಾಡಿ ಮದುವೆಯಾದ ಮೇಲೆ ಮತಾಂತರ ಮಾಡಲು ಬಿಡುವುದಿಲ್ಲವೆಂದು ಸುಳ್ಳು ಭರವಸೆ ಯನ್ನು ನೀಡಿ, ಮದುವೆಯ ನಂತರ ಹಿಂದೂ ಹೆಣ್ಣು ಮಕ್ಕಳಿಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಪ್ರೀತಿಸುವಾಗ ಇಲ್ಲದ ಮತಾಂತರ ಮದುವೆಯಾದ ಮೇಲೆ ಯಾಕೆ ಬೇಕು? ಇಸ್ಲಾಂ ಧರ್ಮದ ಪ್ರಕಾರ ಅನ್ಯ ಧರ್ಮದ ಹೆಣ್ಣು ಮಗಳು ಮದುವೆ ಯಾದ ಮೇಲೆ ಮತಾಂತರ ಹೊಂದದೇ ಇದ್ದರೆ ಆಕೆಗೆ ತನ್ನ ಗಂಡನ ಆಸ್ತಿಯಲ್ಲಿ ಯಾವ ಹಕ್ಕು ಇರುವುದಿಲ್ಲ. ತನ್ನ ಗಂಡನ ಮನೆಯವರ ಮೇಲೂ ಅಷ್ಟೇ ಯಾವ ರೀತಿಯ ಹಕ್ಕೂ ಇರುವುದಿಲ್ಲ,ತಮ್ಮ ಹಕ್ಕುಗಳ ಸ್ಥಾಪನೆಗಾಗಿ ಮದುವೆಯಾದ ನಂತರ ಮುಸ್ಲಿಂ ಯುವಕರು ಬಲವಂತವಾಗಿ ಮತಾಂತರವಾಗುವಂತೆ ಒತ್ತಡ ಹೇರುತ್ತಾರೆ. ಅವರ ಅಪ್ಪ ಅಮ್ಮಂದಿರೂ ಅಷ್ಟೇ ತಮ್ಮ ಸೊಸೆಯು ಮುಸಲ್ಮಾನ್ ಧರ್ಮಕ್ಕೆ ಮತಾಂತರ ಹೊಂದಿಲ್ಲವೆಂದರೆ ತಮ್ಮ ಮನೆಯಲ್ಲಿ ನೀಡುವ ಗೌರವಗಳನ್ನು ನೀಡುವುದಿಲ್ಲ, ಗೌರವವೇಕೆ ಸೊಸೆಯೆಂದೇ ಒಪ್ಪಿಕೊಳ್ಳುವುದಿಲ್ಲ.
ತಾವು ಹೇಳಿದ ಹಾಗೆ ತಮ್ಮ ಸೊಸೆಯು ಕೇಳದೆ ಹೋದಲ್ಲಿ ಕೊಡಬಾರದ ಚಿತ್ರ ಹಿಂಸೆ ನೀಡಿರುವ ಉದಾಹರಣೆಗಳಿವೆ, ಈ ಹಿಂಸೆ ಯನ್ನು ತಾಳಲಾರದೆ ಹೆಣ್ಣು ಮಕ್ಕಳು ಆತ್ಮಹತ್ಯೆೆ ಪ್ರಯತ್ನ ಮಾಡಿಕೊಂಡಿರುವ ಹಲವು ಉದಾಹರಣೆಗಳಿವೆ. ಮೊನ್ನೆ ಒಂದು ಟಿ.ವಿ.ಚರ್ಚೆಯಲ್ಲಿ ವೀಕ್ಷಿಸುತ್ತಿದ್ದೆ, ರಜಾಕ್ ಎಂಬ ಒಬ್ಬ ಮುಸ್ಲಿಂ ನಾಯಕ ಬಾಲಿವುಡ್ ನಾಯಕ ಶಾರುಖ್ ಖಾನ್‌ನ ಉದಾ ಹರಣೆಯನ್ನು ನೀಡಿ, ಶಾರುಖ್ ಹೆಂಡತಿ ಗೌರಿ ಖಾನ್ ಕೂಡ ಹಿಂದೂ ಧರ್ಮದವರು. ಮದುವೆಯ ನಂತರ ಅವರಿಬ್ಬರೂ ಸಹ ಅನ್ಯೋನ್ಯವಾಗಿದ್ದಾರೆ, ಹಾಗಾದರೆ ಎಲ್ಲಿದೆ ಲವ್ ಜಿಹಾದ್ ಎಂದು ಹೇಳುತ್ತಿದ್ದ.
ಹಾಗಾದರೆ ಗೌರಿ ಖಾನ್ ಮತಾಂತರವಾಗಿಲ್ಲವೆಂದರೆ ಶಾರುಖ್ ಖಾನ್ ಮಾಡಿರುವ ನೂರಾರು ಕೋಟಿಗಳ ಆಸ್ತಿಯ ಉತ್ತರಾಧಿಕಾರಿ ಯಾರು? ಇಸ್ಲಾಂ ಧರ್ಮದ ಪ್ರಕಾರ ಮತಾಂತರವಾಗಿಲ್ಲವೆಂದರೆ ಆಸ್ತಿಯಲ್ಲಿ ಹಕ್ಕಿಲ್ಲವಲ್ಲ, ಶಾರುಖ್ ಖಾನ್ ಏನು ತನ್ನ ಆಸ್ತಿ ಯನ್ನು ದಾನ ಮಾಡುವನೇ? ಶಾರುಖ್ ಖಾನ್ ಒಬ್ಬ ಹೆಸರಾಂತ ಬಾಲಿವುಡ್ ನಟ, ಆತ ಊಟ ಮಾಡಿದರೂ ಸುದ್ದಿಯಾಗು ತ್ತದೆ, ಕೈ ತೊಳೆದರೂ ಸುದ್ದಿಯಾಗುತ್ತದೆ. ಹಾಗಾಗಿ ಆತನ ಮದುವೆಯನ್ನು ಸಮಾಜದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಕೆಳಸ್ತರದ ಕುಟುಂಬಗಳ ಮದುವೆಗಳಿಗೆ ಹೋಲಿಸಲು ಸಾಧ್ಯವೇ? ಅದನ್ನೇ ಸ್ವಲ್ಪ ಬೇರೆಯ ರೀತಿಯಲ್ಲಿ ನೋಡಿ, ಶಾರುಖ್ ಖಾನ್ ತಾನು ಹಿಂದೂ ಧರ್ಮದ ಹೆಣ್ಣು ಮಗಳನ್ನು ಮದುವೆಯಾಗುವ ಮೂಲಕ ತನ್ನ ಕೋಟ್ಯಂತರ ಅಭಿಮಾನಿಗಳಿಗೆ ಬಹಿರಂಗವಾಗಿ
ಅಂತರ್ ಧರ್ಮ ವಿವಾಹವನ್ನು ಪ್ರೋತ್ಸಾಹಿಸಿದ ಹಾಗೆ ಆಗಲಿಲ್ಲವೇ? ಕೆಳಸ್ತರದ ಮುಸ್ಲಿಂ ಕುಟುಂಬದವರ್ಯಾಾರೂ ಸಹ
ಶಾರುಖ್ ಖಾನ್ ರೀತಿಯಲ್ಲಿ ಹಣ ಮಾಡಿ ತಮ್ಮ ಧರ್ಮದ ಆಚರಣೆಗಳನ್ನು ಬಿಟ್ಟು ಜೀವನ ನಡೆಸುವುದಿಲ್ಲ. ಅವರಿಗೆ ತಮ್ಮ
ಧರ್ಮವೇ ಮುಖ್ಯ, ಅದರ ಶಿಷ್ಟಾಚಾರದ ಪಾಲನೆಯೇ ಅವರ ನಿತ್ಯ ಜೀವನ.
ಕರೀನಾ ಕಪೂರ್ ಕೂಡ ಸೈಫ್ ಅಲಿ ಖಾನ್‌ನನ್ನು ಮದುವೆಯಾಗುವ ಮೂಲಕ, ಹಿಂದೂ ಹೆಣ್ಣು ಮಕ್ಕಳಿಗೆ ಕೊಟ್ಟ ಸಂದೇಶ
ವಾದರೂ ಏನು? ದಶಕಗಳಿಂದ ಮುಂಬೈ ಅಂಡರ್ ವಲ್ಡರ್ ಹಿಡಿತದಲ್ಲಿರುವ ಬಾಲಿವುಡ್ ಹಿಂದಿ ಸಿನಿಮಾಗಳ ಮೂಲಕ ಹಿಂದೂ ಧರ್ಮದ ಆಚರಣೆಗಳನ್ನುಅತ್ಯಂತ ಕೆಟ್ಟದಾಗಿ ತೋರಿಸಿದೆ. ಅದೇ ಬಾಲಿವುಡ್‌ನ ಸ್ಟಾರ್ ನಟರು ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ಮದುವೆಯಾಗುವ ಮೂಲಕ ಪರೋಕ್ಷವಾಗಿ ಲವ್ ಜಿಹಾದ್‌ನಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಪ್ರೀತಿಯ ಬಗ್ಗೆ ಅವರೆಷ್ಟೇ ಹೇಳಿದರೂ ನೂರರಲ್ಲಿ ಹತ್ತು ನಿಜವಾದ ಪ್ರೀತಿಯಾಗಿರಬಹುದು, ಉಳಿದದ್ದೆಲ್ಲೆವೂ ಸಹ ಕೆಟ್ಟ ಉದ್ದೇಶದಿಂದಲೇ ಆಗಿರುವ ಮದುವೆಗಳಾಗಿರುತ್ತವೆ.
ನಿಜವಾದ ಪ್ರೀತಿ ಇದ್ದಲ್ಲಿ ಮತಾಂತರವಾಗಬೇಕೆಂಬ ಪ್ರಶ್ನೆಯೇ ಬರುವುದಿಲ್ಲ, ಪ್ರೀತಿ ಮಾಡುವಾಗ ಇಲ್ಲದ ಮತಾಂತರ ಮದುವೆ ಯಾದ ಮೇಲೆ ಯಾಕೆ ಬೇಕು ? ಕರ್ನಾಟಕದ ಕರಾವಳಿ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಹಲವಾರು ಲವ್ ಜಿಹಾದ್ ಪ್ರಕರಣಗಳು ಕೇಳಿ ಬರುತ್ತಿವೆ. ಭಜರಂಗದಳ ಹಾಗೂ ಶ್ರೀರಾಮ ಸೇನೆಯ ನಾಯಕರು ಇದರ ಬಗ್ಗೆ ಹಲವಾರು ಬಾರಿ ಧ್ವನಿಯೆತ್ತಿ ದ್ದಾರೆ. ಕರಾವಳಿ ಭಾಗದ ಹಲವು ಭಾರತೀಯ ಜನತಾ ಪಕ್ಷದ ಸಂಸದರು ಹಾಗೂ ಶಾಸಕರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರು ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನನ್ನು ಜಾರಿಗೆ ತರಲು ಚಿಂತಿಸುತ್ತಿರುವುದಾಗಿ ಹೇಳಿದ್ದಾರೆ.
ಭಾರತದಲ್ಲಿ ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿ ಉತ್ತರ ಪ್ರದೇಶದಲ್ಲಿ ಕಂಡುಬರುತ್ತಿರುವ ಕಾರಣ ಬಲವಂತವಾಗಿ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರಿಸುವ ಸಲುವಾಗಿ ಮದುವೆಯಾದರೆ ಅಥವಾ ಹಿಂಸಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕಾನೂನಿದಾಗಿದೆ. ಇದೇ ರೀತಿಯ ಕಾನೂನನ್ನು ಕರ್ನಾಟಕ ದಲ್ಲಿಯೂ ಸಹ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತದೆಯೆಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಭಾರತದ ಸಂವಿಧಾನವು ಅವರಿಗಿಷ್ಟ ಬಂದಂತಹ ಧರ್ಮವನ್ನು ಆಚರಿಸುವುದು ಅವರವರ ಮೂಲಭೂತ ಹಕ್ಕೆಂದು ಪರಿಚ್ಛಯ 25ರಲ್ಲಿ ಹೇಳಿದ್ದರೂ ಸಹ, ಇತರ ಧರ್ಮಕ್ಕೆ ಧಕ್ಕೆ ಬಾರದಂತೆ ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತಮ್ಮ ಧರ್ಮದ ಆಚರಣೆಗಳ ಸಂದರ್ಭದಲ್ಲಿ ಇತರ ಧರ್ಮದವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಸಹ ಸರಕಾರದ ಕರ್ತವ್ಯ ವಾಗಿದೆ.
ಲವ್ ಜಿಹಾದ್ ವಿಷಯದಲ್ಲಿ ಬಲವಂತದ ಮತಾಂತರದ ಯತ್ನಗಳು ಸಾಬೀತಾದಲ್ಲಿ ಇತರ ಧರ್ಮದ (ಹಿಂದೂ, ಕ್ರಿಶ್ಚಿಯನ್, ಸಿಖ್ಖ್, ಜೈನರು) ಮೇಲೆ ನೀಡುವ ಭಾರಿ ಪೆಟ್ಟಾಗಿರುತ್ತದೆ. ಹಾಗಾಗಿ ಸಂವಿಧಾನಾತ್ಮಕವಾಗಿ ಲವ್ ಜಿಹಾದ್ ತಡೆಗಟ್ಟುವ ಕಾನೂನನ್ನು ಜಾರಿಗೆ ತಂದರೆ, ಕಾನೂನಾತ್ಮಕವಾಗಿ ಯಾವ ತೊಂದರೆಯೂ ಇಲ್ಲ. 2005ರಿಂದಲೂ ದೇಶದ ಹಲವೆಡೆ ನಡೆದಿರುವ ಸಾವಿರಾರು ಪ್ರಕರಣಗಳನ್ನು ಗಮನಿಸಿದರೆ ಒಂದು ಮಾದರಿಯ ಉದ್ದೇಶ ಪೂರ್ವಕವಾದಂಥ ಆಲೋಚನೆ ಇರುವುದು ಕಂಡುಬರುತ್ತದೆ. ಇತ್ತೀಚಿಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿರುವುದರಿಂದ ಕಠಿಣ ಕಾನೂನಿನ ಅವಶ್ಯಕತೆ ಇದೆ.
ಸಮಾಜದ ಕೆಳ ಸ್ತರದಲ್ಲಿರುವ ಹಿಂದೂ ಹೆಣ್ಣು ಮಕ್ಕಳಿಗೆ, ಸಮಾಜದ ಕೆಳ ಸ್ತರದಲ್ಲಿರುವ ಮುಸ್ಲಿಂ ಕುಟುಂಬದೊಂದಿಗೆ
ಹೊಂದಾಣಿಕೆ ಎಂದೂ ಸಹ ಸಾಧ್ಯವಿಲ್ಲ. ಪ್ರೀತಿ ಮಾಡುವಾಗ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ, ಆದರೆ ಮದುವೆಯಾದ
ನಂತರ ನಿಜವಾದ ಜೀವನದ ಅರ್ಥವಾಗುತ್ತದೆ. ಪ್ರೀತಿಸುವಾಗ ಹುಡುಗನು ನೀಡುವ ಭರವಸೆಗಳು, ಮದುವೆಯಾದ ನಂತರ
ಈಡೇರುವುದಿಲ್ಲ. ಕಾರಣ ಆತನ ಮುಸ್ಲಿಂ ಕುಟುಂಬವು ಆತನು ನೀಡಿದ ಭರವಸೆಗಳನ್ನು ಒಪ್ಪುವುದಿಲ್ಲ. ತನ್ನ ಕುಟುಂಬದ ಕಡೆ
ಬೆರಳು ತೋರಿಸಿ ಆತನು ತನ್ನ ಕೈ ತೊಳೆದುಕೊಂಡು ಬಿಡುತ್ತಾನೆ.
ಕೊನೆಗೆ ಲವ್ ಜಿಹಾದ್‌ಗೆ ಬಿದ್ದಂತಹ ಹೆಣ್ಣು ಮಗಳಿಗೆ ಸಾವೊಂದೇ ಕಣ್ಣಿಗೆ ಕಾಣುತ್ತದೆ. ಆಕೆಯ ಸಾವಿನ ನಂತರ ಲವ್ ಜಿಹಾದ್‌ನ ಉದ್ದೇಶ ಈಡೇರುತ್ತದೆ, ಭಯೋತ್ಪಾದಕರು ತಾವು ಅಂದುಕೊಂಡಿದ್ದನ್ನು ಮಾಡಿದಂತಾಗುತ್ತದೆ.