Friday, 20th September 2024

ಲವ್ ಜಿಹಾದ್: ಅನುಭವಿಸಿದವರಿಗಲ್ಲದೆ ಅನ್ಯರಿಗೇನು ಗೊತ್ತು

ಹಂಪಿ ಎಕ್ಸ್’ಪ್ರೆಸ್ 

ದೇವಿ ಮಹೇಶ್ವರ ಹಂಪಿನಾಯ್ಡು

ಹೋಗಿ ಬಂದು ಮೂಗಿಯನ್ನು ಕಾಡಿದ’ ಎಂಬಂತೆ ಅರ್ಥ ಕಳೆದುಕೊಂಡ ಜಾತ್ಯಾತೀತ ಪ್ರಜಾಪ್ರಭುತ್ವದಲ್ಲಿ ದುಷ್ಟರಾಜ ಕಾರಣದ ದುಷ್ಪರಿಣಾಮಗಳು, ಅನುಕೂಲಸಿಂಧು ಆಕ್ರಮಣಗಳೆಲ್ಲಾ ಬಹುಸಂಖ್ಯಾತ ಹಿಂದೂ ಧರ್ಮದ ಮೇಲೆಯೇ ನಡೆಯು ತ್ತಿರುವುದು ದುರ್ದೈವ.

ಅವುಗಳೆಲ್ಲವೂ ಮತಿ ಇಲ್ಲದ ಕೆಲವು ಹಿಂದೂಗಳಿಂದಲೇ ಪ್ರಚೋದನೆ ಪಡೆಯುತ್ತಿರುವುದು ದುರಂತ. ಇದಕ್ಕೆ ಮತ್ತೊಂದು ಉದಾಹರಣೆಯೇ ಈಗ ಬಹುಚರ್ಚೆಯಲ್ಲಿರುವ ‘ಲವ್‌ಜಿಹಾದ್’ ಎಂಬ ಧರ್ಮ ಮತ್ತು ಧರ್ಮದ ಪೂಜ್ಯನೀಯ ಹೆಣ್ಣಿನ ಮೇಲಾಗುತ್ತಿರುವ ಪ್ರಾಯೋಗಿಕ ದೌರ್ಜನ್ಯ ಪರೋಕ್ಷ ಅಟ್ಟಹಾಸ ಮತ್ತು ದಾಳಿ. ಸಮಾಜದಲ್ಲಿ ಯಾವುದೇ ಒಂದು ವಿಚಾರವು ವಿರೋಧಕ್ಕೆ ಒಳಗಾಗುತ್ತದೆ ಎಂದರೆ ಅದರಲ್ಲಿನ ಕೆಡಕುಗಳು, ಅದರಿಂದಾಗುವ ಮಾನವ ವಿರೋಧಿ ಕೃತ್ಯಗಳು, ಅದರಲ್ಲೂ
ಒಂದು ಹೆಣ್ಣಿನ ಬದುಕಿನ ಮೇಲಿನ ಅಪಾಯಗಳ ವಿಚಾರವಂತೂ ನಿರ್ಲಕ್ಷಿಸುವಂಥದಲ್ಲ. ಈ ಲವ್‌ಜಿಹಾದ್ ನ್ನು ಸುಂದರವಾಗಿ ‘ಧರ್ಮಾಂತರ ಪ್ರೇಮ’ ಎಂದೇ ಕರೆಯೋಣ. ಇಲ್ಲಿಯವರೆಗೆ ಹೆಣ್ಣು ಹಿಂದೂ ಆಗಿ ಗಂಡು ಮುಸಲ್ಮಾನಾಗಿ ನಡೆದ ಅದೆಷ್ಟು ವಿವಾಹಗಳು ಆದರ್ಶ ದಂಪತಿಗಳಾಗಿ ಸಮಾಜಕ್ಕೆ ಮಾದರಿ ಎನಿಸಿವೆ?.

ಬಹುತೇಕ ಪ್ರಕರಣಗಳಲ್ಲಿ ಹೆಣ್ಣು ಶೋಷಣೆಗೊಳಗಾಗುವುದು ನ್ಯಾಯಾಲಯದ ಮೆಟ್ಟಿಲೇರುವುದು, ಹಿಂಸೆಗೊಳಗಾಗುವುದು, ಕೊನೆಗೆ ಕೊಲೆ, ಆತ್ಮಹತ್ಯೆಗೊಳಗಾಗುವುದು. ಇಂಥ ಪ್ರಕರಣ ಗಳಲ್ಲಿ ಕಂಡುಬರುವ ಸಾಮಾನ್ಯ ಮತ್ತು ಚಿಂತೆಗೊಳಪಡಿಸು ತ್ತಿರುವ ವಿಚಾರವೆಂದರೆ ಆ ಹೆಣ್ಣು ಹಿಂದೂ ಧರ್ಮದವಳಾಗಿರುವುದು ಮತ್ತು ಆಕೆಯನ್ನು ದಾರಿತಪ್ಪಿಸಿ ಕುತಂತ್ರದ ಪ್ರೇಮದಲ್ಲಿ ಸಿಲುಕಿಸಿ ವಿವಾಹವಾಗಿ ಆಕೆಯನ್ನು ಮತಾಂತರಿಸಿ ದೈಹಿಕವಾಗಿ ಬಳಸಿಕೊಂಡು ಮುಖ ಮತ್ತು ಉದರವನ್ನು ಊದಿಸಿ ಬೀದಿಗೆ ತಳ್ಳುವುದು.

ಇತ್ತೀಚೆಗೆ ಇಂಥ ಪ್ರಕರಣಗಳು ಕೇರಳ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಹೆಚ್ಚಾಗುತ್ತಿದ್ದು ಹಿಂದೂ ಹೆಣ್ಣುಮಕ್ಕಳು ನರಕ ಸದೃಶ ಅನುಭವಿಸುತ್ತಿರುವುದು ವರದಿ ಯಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಪ್ರೀತಿಸುವಾತ ಹಿಂದೂ ಯುವಕನಂತೆ ನಟಿಸಿ ಮೋಸ ಮಾಡಿರುವುದೂ ಇದೆ. ಇದರ ಹಿಂದಿರುವ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಕಟ್ಟರ್ ಮೂಲಭೂತವಾದಿಗಳಿಗೆ ಹಿಂದೂ ಹೆಣ್ಣು ಮಕ್ಕಳೆಂದರೆ ಅವರನ್ನು ಅನುಭವಿಸಿ ವೇಶ್ಯೆಯನ್ನಾಗಿ ಮಾಡಿಬಿಡಬೇಕೆಂಬ ಹಪಾಹಪಿ ಗೋಚರಿಸುತ್ತದೆ. ಇದು
ಕಾನೂನು ನ್ಯಾಯಾಲಯದ ಅನುಭವಕ್ಕೆ ಬಾರದ ಸಂಗತಿ.

ಇದು ಧರ್ಮಾಂಧತೆಯ ದುರುದ್ದೇಶಪೂರ್ವಕ ಸಂಚು ಮತ್ತು ಅಮಾನುಷ ದೌರ್ಜನ್ಯವೆಂದು ಮನವರಿಕೆಯಾದ ಮೇಲೆಯೇ ‘ಧರ್ಮಾಂತರ ಪ್ರೇಮ’ ಮನೆಹಾಳು ‘ಲವ್ ಜಿಹಾದ್’ ಎಂಬ ಭಯೋತ್ಪಾದಕ ಸೂಚಕ ಪದಗಳಾಗಿ ಬದಲಾಗಿದೆ. ಇದು ಈಗ ಗಂಭೀರ ಸ್ವರೂಪ ಪಡೆದುಕೊಂಡು ಇದನ್ನು ನಿಯಂತ್ರಿಸಲು ಸುಗ್ರೀ ವಾಜ್ಞೆ, ಕಾಯ್ದೆಗಳನ್ನು ರೂಪಿಸುವಷ್ಟು ಅನಿವಾರ್ಯ ವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪ್ರಾಪ್ತ ವಯಸ್ಸಿನವರ ಹಕ್ಕು ಎಂದು ಹೇಳಿಬಿಡಬಹುದು. ಆದರೆ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಒಂದು ಸಮಿತಿಯನ್ನು ರಚಿಸಿ ಈ ಲವ್‌ಜಿಹಾದ್ ಪ್ರಕರಣಗಳನ್ನು ಕೂಲಂಕಷವಾಗಿ ಪರಾಮರ್ಶಿಸಿದರೆ ಅದರ
ಹಿಂದಿನ ಉದ್ದೇಶಗಳನ್ನು ತಿಳಿಯಬಹುದು.

ಮಾನವತವಾದಿ ಸಂವಿಧಾನ ಆಧರಿತ ನಮ್ಮ ದೇಶದಲ್ಲಿ ಪ್ರತಿಯೊಂದು ಧರ್ಮದ ಜಾತಿಯ ನಾಗರಿಕನ ನೆಮ್ಮದಿಯ ಬದುಕಿಗೆ ಪ್ರಥಮ ಪ್ರಾಶಸ್ತ್ಯ. ಇದಕ್ಕೂ ಮಿಗಿಲಾಗಿ ನಮ್ಮಲ್ಲಿ ಹೆಣ್ಣಿಗೆ ಪೂಜ್ಯಸ್ಥಾನವಿದೆ. ಯಾವುದೇ ಹೆಣ್ಣಿನ ನೋವು ಸಂಕಟ, ಅವಮಾನ ವನ್ನು ನಮ್ಮ ಸಮಾಜ ಸಹಿಸಿಕೊಳ್ಳುವುದಿಲ್ಲ. ಇದನ್ನು ನಮ್ಮ ರಾಮಾಯಣ ಮಹಾಭಾರತದ ಯುಗಗಳಲ್ಲೇ ಸ್ಪಷ್ಟವಾಗಿದೆ. ದೇಶದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಕಂಟಕವಾಗಿದ್ದ ‘ತಲಾಖ್’ ಕಟ್ಟಳೆ ಯನ್ನು ಹೊಸ ಕಾನೂನು ತಂದು ನಿಷೇಧಿಸುವ ಮೂಲಕ ಶತಮಾನಗಳಿಂದ ನಡೆಯುತ್ತಿದ್ದ ಹೆಣ್ಣಿನ ಶೋಷಣೆಗೆ ಅಂತ್ಯ ಹಾಡಲಾಯಿತು.

ಇದಕ್ಕಾಗಿ ದೇಶದ ಮುಸಲ್ಮಾನ ಹೆಣ್ಣುಮಕ್ಕಳು ಒಕ್ಕೊರಲಿನಿಂದ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು. ತಲಾಖ್ ಪದ್ಧತಿ ಇಸ್ಲಾಂ ವೈಯಕ್ತಿಕ ವಿಚಾರ ವಾಗಿದ್ದರೂ ಹೆಣ್ಣಿನ ಬದುಕಿನ ಮೇಲಾಗುತ್ತಿದ್ದ ನಕಾರಾತ್ಮಕ ಪರಿಣಾಮವನ್ನು ಗಮನಿಸಿ ತಲಾಖ್ ನಿಷೇಽಸಿದಾಗ ವಿರೋಧ ಪಕ್ಷಗಳು ಮುಸ್ಲಿಂ ಹೆಣ್ಣುಮಕ್ಕಳ ಮೇಲಿನ ಮಮಕಾರದಲ್ಲಿ ಭಾಗಿಯಾಗಿದ್ದರು. ಹೀಗೆ ಕಾಲಕ್ಕೆ ತಕ್ಕಂತೆ, ಬದಲಾಗುವ ಬದುಕಿನ ರೀತಿನೀತಿ ಶೈಲಿಗಳಂತೆ ಕಾನೂನು ಕಾಯ್ದೆಗಳು ಬದಲಾಗಬೇಕಿರುವುದು ಅನಿವಾರ್ಯ.

ಅಪ್ಪ ಹಾಕಿದ ಆಲದ ಮರವನ್ನೇ ನಂಬಬೇಡ ಎನ್ನುವುದು, ಬದಲಾವಣೆ ಸೃಷ್ಟಿಯ ನಿಯಮ ಎನ್ನುವುದಾದರೂ ಸಂವಿಧಾನ ಮತ್ತು ಕಾನೂನು ನಿಯಮಗಳು ಬದಲಾಗಬೇಕೆಂದಾಗ ಮಾತ್ರ ದೇಶದ್ರೋಹವೆಂಬಂತೆ ಬಿಂಬಿಸುತ್ತಿರುವುದು ದುರಾದೃಷ್ಟಕರ.
ಈಗ ನೋಡಿ ಹಿಂದೂ ಹೆಣ್ಣು ಮಕ್ಕಳನ್ನು ಧರ್ಮಾಂಧತೆಯ ಕುತಂತ್ರದಿಂದ ವಿವಾಹವಾಗಿ ಆಕೆಯ ಬಾಳನ್ನು ಮೂರಾಬಟ್ಟೆ ಯಾಗಿಸುವ ಸಮಾಜ ವಿರೋಧಿ ಲವ್ ಜಿಹಾದನ್ನು ನಿಷೇಧಿಸಲು ಹೊರಟಾಗ ಅದನ್ನು ಸಿದ್ದರಾಮಯ್ಯನಂಥವರು ವಿರೋಽಸಿ ಲವ್ ಜಿಹಾದನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಾದೃಷ್ಟಕರ.

ತಲಾಖ್‌ನ ಇನ್ನೊಂದು ಪೈಶಾಚಿಕ ರೂಪವೇ ಲವ್‌ಜಿಹಾದ್ ಎನ್ನುವುದನ್ನು ಕನಿಷ್ಠ ಸಾಮಾಜಿಕ ಜ್ಞಾನ ಇರುವವರು ಒಪ್ಪಿ ಕೊಳ್ಳುತ್ತಾರೆ. ಹಿಂದೆಲ್ಲಾ ವರದಕ್ಷಿಣೆ ಎಂಬ ಪಿಡುಗೇ ಹೆಣ್ಣಿಗೆ ಅತಿದೊಡ್ಡ ಶೋಷಣೆಯಾಗಿತ್ತು. ಆದರೆ ಇಂದು ಬದಲಾದ ಕಾಲಘಟ್ಟದಲ್ಲಿ ವರನೊಬ್ಬ ಕೇಳುವ ಮೊದಲೇ ಅವನ ನಿರೀಕ್ಷೆಗಿಂತಲೂ ಮಿಗಿಲಾಗಿ ವರದಕ್ಷಿಣೆ ಕೊಟ್ಟು ಮದುವೆ ಮಾಡು ವಷ್ಟು ವಧುವಿನ ತಂದೆಯೇ ತಯಾರಾಗಿರುತ್ತಾನೆ. ಹಿಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಾದರೆ ಆಕೆ ಮದುವೆ ಮಾಡುವುದು ಸಭ್ಯ ಗಂಡು ಸಿಕ್ಕುವುದಷ್ಟೇ ಹೆತ್ತವರ ಚಿಂತೆಯಾಗಿತ್ತು. ಅದರೆ ಇಂದು ಮೊಬೈಲು ಇಂಟರ್ನೆಟ್ ಸಾಮಾಜಿಕ ತಾಣಗಳ ಅತಿಯಾದ ಆಕರ್ಷಣೆಗಳಿಂದಾಗಿ ಮಗನಾಗಲಿ, ಮಗಳಾಗಲಿ ಅತಿಬೇಗ ದಾರಿತಪ್ಪಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಜಾರಿಯಲ್ಲಿವೆ. ಅದರಲ್ಲೂ ಹೆಣ್ಣು ಮಕ್ಕಳು ಸರೆಗಿನಲ್ಲಿರುವ ಕೆಂಡದಂತೆ ಎಂಬ ಮಾತು ಪ್ರತಿಕ್ಷಣದಲ್ಲೂ ಹೆತ್ತವ ರನ್ನು ಕಾಡುತ್ತಲೇ ಇರುತ್ತದೆ.

ಒಂದು ಸಂಸಾರದಲ್ಲಿ ತಂದೆತಾಯಿ ಮಕ್ಕಳ ನಡುವಿನ ಭಾವನಾತ್ಮಕ ಸಂಬಂಧ ಎಲ್ಲಕ್ಕೂ ಮಿಗಿಲಾದದ್ದು. ಇದು ಮಕ್ಕಳು ಮೊಮ್ಮಕ್ಕಳಾದರೂ ಗಟ್ಟಿಗೊಳ್ಳುತ್ತಲೇ ಹೋಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ 18 ರ ಹರೆಯದೊಳಗೇ ಒಂದು ಗಂಡು ಆಕೃತಿಯ ಆಕಸ್ಮಿಕ ದಿಢೀರ್ ಆಕರ್ಷಣೆಗೆ ಮರುಳಾಗಿ ಆಜನ್ಮದ ಗಂಡ ಎಂಬಂತೆ ಒಪ್ಪಿಕೊಂಡು ಹೆತ್ತವರು ತನ್ನತನ ಮನೆತನ ಆಚಾರ ವಿಚಾರ ಸಂಪ್ರದಾಯ ಇವುಗಳಿಗೆ ಕುರುಡಾಗಿ, ಆತ ನಿಜಕ್ಕೂ ನನಗೆ ಸರಿಯಾದ ಗಂಡನಾಗಲು ಯೋಗ್ಯನೇ, ಬದುಕಿನ ಕೊನೆಯವರೆಗೂ ಸಂಸಾರ ನಡೆಸಲು ಅರ್ಹನೇ ಎಂಬುದೆಲ್ಲಾ ಯೋಚಿಸದೆ ಕೇವಲ ಯಶಸ್ಸಿನ ಕುದುರೆಯನ್ನೇರಿ ಹದಿನೆಂಟು ಇಪ್ಪತ್ತು ವರ್ಷಗಳ ಬೇರನ್ನು ಏಕಾಏಕಿ ತುಂಡರಿಸಿ ಮನೆಬಿಟ್ಟು ಓಡಿಹೋಗಿ ಮದುವೆಯಾಗುವುದಿದೆಯಲ್ಲ ಅದರಲ್ಲೂ ಒಬ್ಬ ಅನ್ಯ ಧರ್ಮದವನೊಂದಿಗೆ ಮದುವೆಯಾದರೆ ಅದನ್ನು ಹೆತ್ತವರು ಸಂಭ್ರಮಿಸಿ ಸಿಹಿ ಹಂಚುವ ಮನಸ್ಥಿತಿ ನಮ್ಮ ದೇಶದ ಯಾವ ಸಂಭಾವಿತ ಕುಟುಂಬ ದಲ್ಲೂ ಇಲ್ಲ.

ಅಂಥ ಮಾನಗೇಡಿ ಸಂಸ್ಕೃತಿ ದೇಶ ನಮ್ಮದಲ್ಲ. ಸಾಮಾಜಿಕವಾಗಿ ರಾಮರಹೀಮ ಒಂದೇ ಧರ್ಮ ಒಂದೇ ರಕ್ತ ಎಂದು ಬಾಯಿ ಬಡಿದುಕೊಂಡರೂ ಕುಟುಂಬದೊಳಗಿನ ವಿಚಾರಕ್ಕೆ ಬಂದಾಗ ಬ್ರಾಹ್ಮಣರಿಂದ ದಲಿತರವರೆಗೂ ಪ್ರತಿಯೊಂದು ಜಾತಿಗೂ ಅವರದೇ ಆದ ಸಂಪ್ರದಾಯಿಕ ಚೌಕಟ್ಟು ಕನಸು ನೀತಿ ಪದ್ಧತಿಗಳು ಇದ್ದೇ ಇರುತ್ತದೆ. ಮಕ್ಕಳ ಭವಿಷ್ಯ ರೂಪಿಸುವುದೇ ಒಂದು
ವ್ರತವ್ನಾಗಿಸಿ ಬದುಕುವ ಪೋಷಕರು ಮನೆಯ ಮಕ್ಕಳು ಅನ್ಯಧರ್ಮಿಯೊಂದಿಗೆ ಇಡೀ ಧರ್ಮವನ್ನೇ ಬಿಟ್ಟು ಹೋದಾಗ ಆಗುವ ಆಘಾತ ನೋವು ಬಾಧೆ ಸಂಕಟ ಅವಮಾನ ನಿಂದನೆಗಳನ್ನು ಅನುಭವಿಸಿದವರಿಗೇ ಗೊತ್ತು.

ಅದರಲ್ಲೂ ಜೀವಂತ ನರಕ ಸೃಷ್ಟಿಸುವ ‘ಲವ್‌ಜಿಹಾದ್’ನಂಥ ಪ್ರಕರಣಗಳಲ್ಲಿ ಮುದ್ದಾಗಿ ಸಾಕಿದ ಹೆಣ್ಣುಮಗಳನ್ನು ಗಿಡುಗನ ಬಾಯಿಗೆ ಕೊಟ್ಟಂತಾಗಿ ಪೋಷಕರು ಜೀವನ ಪೂರ್ತಿ ಮಕ್ಕಳು ಬದುಕಿದ್ದೂ ಸತ್ತವರೆಂದು ಭಾವಿಸಿ ಬದುಕುವುದಿದೆಯಲ್ಲ ಅದು ಆತ್ಮಹತ್ಯೆ ಮಾಡಿಕೊಂಡು ಬದುಕಿದಂತೆ ಜೀವನ ಕಳೆಯುತ್ತಿರುತ್ತಾರೆ. ಅಂಥ ಮನೆಗಳಲ್ಲಿನ ದುಸ್ಥಿತಿ ಯನ್ನು ಸಾಕ್ಷಾತ್ ಕಣ್ಣಿಂದ ನೋಡಿಬಂದರೆ ಅರಿವಾಗು ತ್ತದೆ. ಉಚಿತ ಪಡಿತರ ಪಡೆಯಬೇಕಾದರೆ ಬೆರಳಚ್ಚು ಬೇಕು. ಪಾಸ್‌ಪೋರ್ಟ್ ಪಡೆಯಬೇಕಾದರೆ
ಸ್ಥಳೀಯ ಪೊಲೀಸರಿಂದ ಸಭ್ಯನೆಂಬ ದೃಢೀಕರಣ ಪತ್ರಬೇಕು. ಅರ್ಜಿ ನಮೂನೆಯಲ್ಲಿ ಒಂದಕ್ಷರದ ದೋಷ ಕಂಡರೂ ಆತನ ಅರ್ಜಿ ತಿರಸ್ಕೃತವಾಗುತ್ತದೆ. ಆದರೆ ಬದುಕು ಭವಿಷ್ಯವನ್ನು ರೂಪಿಸುವ ವಿವಾಹಕ್ಕೆ ಕಾನೂನಿನಂತೆ ಗಂಡಿಗೆ 21, ಹೆಣ್ಣಿಗೆ 18 ವಯಸ್ಸಾದರೆ ಸಾಕೇ? ಅಪ್ಪ ಅಮ್ಮನ ಅನುಮತಿಯೂ ಬೇಕಿಲ್ಲವೇ? ಹೆತ್ತವರು ಪೊಲೀಸ್ ಠಾಣೆಗೆ ಹೋಗಿ ಅಯ್ಯೋ ನನ್ನ ಮಗ, ಮಗಳೋ ನಮಗೆ ಹೇಳದೆ ಮದುವೆ ಯಾಗಿದ್ದಾರೆ ಎಂದು ದೂರು ನೀಡಿದಾಗ ಇಬ್ಬರೂ ವಯೋಮಿತಿ ದಾಟಿದ್ದರೆ ಸಾಕು ಎಂದಾದರೆ ಇದರ ಋಣಾತ್ಮಕ ಫಲಿತಾಂಶ ಅನುಭವಿಸುವ ಹೆತ್ತವರ ಕುಟುಂಬದ ನೋವು – ವೇದನೆ ಲೆಕ್ಕಕ್ಕಿಲ್ಲವೇ?.

ಹದಿನೆಂಟು ವರ್ಷದ ಹಕ್ಕು ಪಡೆಯುವಷ್ಟು ದಿನಗಳು ತಮ್ಮ ಬದುಕನ್ನೇ ಸವೆಸಿ ಬೆಳೆಸಿದ ಹೆತ್ತವರ ಆಘಾತ ನಿರಾಸೆ ನೋವು ಸೋಲು ಮಾನಸಿಕ ಹಿಂಸೆ ಸಾಮಾಜಿಕ ನಿಂದನೆ ಇವುಗಳೆಲ್ಲವನ್ನು ಅನುಭವಿಸುವ ದೌರ್ಭಾಗ್ಯಕ್ಕೆ ಯಾವ ಕಾನೂನು ಪರಿಹಾರ
ನೀಡುತ್ತದೆ?. ಸಮಾಜದಲ್ಲಿ ಅಧಿಕಾರ, ವ್ಯಾಪಾರದ ಲಾಭ ನಷ್ಟ, ಅಪಘಾತ, ವಂಚನೆ, ಇವೆಲ್ಲಕ್ಕೂ ಕಾನೂನಿನ ನೆರಳಿರುತ್ತದೆ. ಲಕ್ಷಾಂತರ ರುಪಾಯಿಗಳ ಪರಿಹಾರ ವಿಮೆ, ಅನುಕಂಪವಾದರೂ ಇರುತ್ತದೆ. ಆದರೆ ಏಕಾಏಕಿ ತಾನು ಸಾಕಿದ ಮುದ್ದಿನ ಮಕ್ಕಳು ಮನೆಬಿಟ್ಟು ಸಂಬಂಧ ಕಡಿದುಕೊಂಡು ಹಾಳಾದಾಗ ಆ ಕುಟುಂಬದ ಮಾನಸಿಕ ನೋವು, ಸಂಕಟ, ವೇದನೆ ಇವುಗಳಿಗೆ ಪರಿಹಾರ
ತುಂಬಿಕೊಡಲು ಯಾರಿಂದ ಸಾಧ್ಯ?.

ಕಾನೂನೆಂದರೆ ತಪ್ಪು ಮಾಡಿದವರಿಗೆ ಶಿಕ್ಷಿಸುವುದು, ತಪ್ಪಾಗದಂತೆ ಪಾಲಿಸುವುದು ಮತ್ತು ಮತ್ತೊಬ್ಬರಿಗೆ ನೋವಾಗದಂತೆ ಪೋಷಿಸುವುದೂ ಆಗಿರಬೇಕಲ್ಲವೇ. ನಮ್ಮ ಸಮಾಜ ಸಂವಿಧಾನಾತ್ಮಕವಾದರೂ ಭಾವನಾತ್ಮಕ ಸೆಲೆ ಹೃದಯಾತ್ಮಕ ನೆಲೆ ಹೊಂದಿದೆ. ಪ್ರತಿಯೊಂದು ಕುಟುಂಬಕ್ಕೂ ಅದರದೇ ಆದ ಗೌರವ ಘನತೆ ಮಾನ ಮರ್ಯಾದೆಗಳಿರುತ್ತದೆ. ಮಾನವೀಯ ಸಂಬಂಧಗಳು, ಮೌಲ್ಯಗಳು, ಕಾನೂನು ನಿಯಮಗಳನ್ನು ಮೀರಿದ್ದಾಗಿರುತ್ತದೆ. ಆದರೆ ಎಲ್ಲವನ್ನೂ ಸಂವಿಧಾನ ಕಾನೂನು ಗಳಿಂದಲೇ ಅಳೆಯುವುದು ಸಮಂಜಸವಲ್ಲ.

ಪುಡಾರಿಗಳಿಗೆ ಸಂವಿಧಾನ ಸಮಾನತೆ ಜಾತ್ಯಾತೀತ ಪದಗಳನ್ನು ಉದುರಿಸುವುದಕ್ಕೆ ತರಕರಾಗಿರುತ್ತಷ್ಟೆ. ತಮಾಷೆ ಏನೆಂದರೆ, ವಿವಾಹವಾಗಿ ಹಲವಾರು ವರ್ಷ ಗಳು ಕೂಡಿಬಾಳಿ, ಮಕ್ಕಳನ್ನು ಪಡೆದು ವಿಚ್ಛೇದನ ಪಡೆಯಲಿಚ್ಚಿಸುವ ದಂಪತಿಗಳಿಗೂ ನ್ಯಾಯಾಲಯ ಇಂತಿಷ್ಟು ದಿನಗಳು ನೀಡಿ ಸರಿತಪ್ಪು ತಿದ್ದಿಕೊಂಡು ಜೀವನ ನಡೆಸುವ ಅವಕಾಶವನ್ನಾದರೂ ನೀಡುತ್ತದೆ. ಆದರೆ
ಯಾವುದೋ ಆಕರ್ಷಣೆಗೊಳಗಾಗಿ ಪ್ರೇಮದಲ್ಲಿ ಬಿದ್ದು ಭವಿಷ್ಯವನ್ನು ಹಾಳು ಮಾಡಿಕೊಳ್ಳಬಹುದಾದ ಅಸಂಬದ್ಧ
ಅವೈಜ್ಞಾನಿಕವಾದ ಸಂದರ್ಭಕ್ಕೆ ಸಂಬಂಧಕ್ಕೆ ವಿವೇಕ ಕಳೆದುಕೊಂಡು ಜೀವನಪೂರ್ತಿ ತಾನು ಮತ್ತು ತನ್ನ ಕುಟುಂಬದವರ ಸೋಲಿಗೆ ಕಾರಣವಾಗುವ ‘ಮಹಾ ಕಾರ್ಯಕ್ಕೆ’ ವಯೋಮಿತಿಯ ಅರ್ಹತೆಯೊಂದೇ ಸಾಕೇ?.

ಇಲ್ಲಿ ವಿವಾಹಕ್ಕಿಂತ ವಿಚ್ಛೇದನವೇ ಹೆಚ್ಚು ಸ್ನೇಹಮಹಿಯಾಗಿರುತ್ತದೆ. ಹೇಗೆಂದರೆ ಮದುವೆಯಾಗಿ ತಪ್ಪಾಗಿದೆ ಎನಿಸಿದ ಮೇಲೂ ಅರಿತು ಬಾಳುವ ಅವಕಾಶವಿರಬೇಕಾದರೆ. ತಪ್ಪುಗಳಾಗಬಹುದಾದ ವಿವಾಹಗಳನ್ನೇ ತಪ್ಪಾಗದಂತೆ ಮೊದಲೇ ತಡೆಯ ಬಹುದಲ್ಲವೇ? ಅದಕ್ಕಾಗಿ ಒಂದು ಕಾನೂನಿನ ಅಗತ್ಯವಿದೆಯಲ್ಲವೇ?. ಬೇರೆಯವರ ಸ್ವತ್ತನ್ನು ಅತಿಕ್ರಮಣ ಮಾಡುವುದು ಹೇಗೆ ಅಪರಾಧವಾಗುತ್ತದೆಯೋ ಹಾಗೆಯೇ ಪೋಷಕರನ್ನು ಕಡೆಗಣಿಸಿ ಅವರ ಸಮ್ಮತಿ ಇಲ್ಲದೆ ವಿವಾಹವಾಗುವುದು ಅಂಥ ಪ್ರೇಮಿ ಗಳನ್ನು ಪ್ರಚೋದಿಸುವುದು, ನೆರವು ನೀಡುವುದು ನೋಂದಣಿ ಅಧಿಕಾರಿಗಳು ಪುರೋಹಿತರು ಇನ್ನಿತರರು ವಿವಾಹ ನೆರವೇರಿಸು ವುದು, ಅಪರಾಧವೆಂದು ಘೋಷಿಸುವುದು ಮತ್ತು ವಿವಾಹವಾಗಲು ಹೆತ್ತವರಿಂದ ಒಂದು ನಿರಾಕ್ಷೇಪಣಾ ಪತ್ರವನ್ನು ಹಾಜರು ಪಡಿಸುವುದು ಕಡ್ಡಾಯವೆಂಬ ಕಾನೂನು ತಂದರೆ ಕನಿಷ್ಠ ಹೆತ್ತವರು ತಮ್ಮ ಮಕ್ಕಳೊಂದಿಗೆ ಸರಿತಪ್ಪುಗಳನ್ನು ಚರ್ಚಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತಗಳನ್ನು ತಡೆಯುವ ಒಂದು ನಿರ್ಣಾಯಕ ಅವಕಾಶ ನೀಡಿದಂತಾಗುತ್ತದೆ. ಏಕೆಂದರೆ ಮದುವೆ
ಎಂಬುದು ಬದುಕಿನ ದೊಡ್ಡ ತಿರುವು.

ಅಲ್ಲಿ ಎಡವಿ ಬಿದ್ದರೆ ಜೀವನಪೂರ್ತಿ ಕೊರಗಬೇಕಾಗುತ್ತದೆ. ಆದ್ದರಿಂದ ಸರಕಾರಗಳು ನ್ಯಾಯಾಲಯಗಳು ಕಾಲಕ್ಕೆ ತಕ್ಕಂತೆ ಕಾನೂನುಗಳಲ್ಲಿ ತಿದ್ದುಪಡಿ ತಂದು ಮಾನವೀಯ ಸಂಬಂಧಗಳನ್ನು, ಅದರ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ. 21,18 ಎಂಬುದು ಕೇವಲ ದೈಹಿಕ ಮತ್ತು ವೈದ್ಯಕೀಯ ವಯೋಮಿತಿಯಷ್ಟೆ. ಈ ವಯಸ್ಸಿನಲ್ಲಿ ಹೆಚ್ಚಾಗಿ ಕೇವಲ ದೈಹಿಕ ಆಕರ್ಷಣೆ ಹೊರತು ಮಾನಸಿಕವಾದ ಪ್ರಬುದ್ಧತೆ ಜೀವನಾನುಭವ, ಸಂಸಾರ, ಭವಿಷ್ಯದ ಕಲ್ಪನೆಯೇ ಇರುವುದಿಲ್ಲ.

ಇದ್ದರೂ ಅಂಥ ಮಕ್ಕಳು ಆ ವಯಸ್ಸಿನಲ್ಲಿ ಮದುವೆಯಾಗುವ ನಿರ್ಧಾರವೇ ಮಾಡುವು ದಿಲ್ಲ. ನಮ್ಮ ದೇಶದ ಪರಂಪರೆಯಲ್ಲಿ
ರೋಮಿಯೋ ಜೂಲಿಯಟ್, ಲೈಲಾ ಮಜ್ನು, ಸಲೀಂ ಅನಾರ್ಕಲಿಗಳಂಥ ಪ್ರೇಮಿಗಳಿಲ್ಲ. ನಮ್ಮಲ್ಲಿದ್ದದ್ದು ಸ್ವಯಂವರ. ಅದನ್ನು ಏರ್ಪಡಿಸುವುದು ಸಾಕ್ಷಾತ್ ವಧುವಿನ ತಂದೆಯೇ ಆಗಿರುತ್ತಾನೆ. ‘ಕೊಟ್ಟ ಹೆಣ್ಣು ಕುಲದ ಹೊರಗೆ’ ಕಳಿಸಿದರೂ ಸರಿಯಾದ ವನೊಂದಿಗೆ ಕಳಿಸಬೇಕೆಂಬ ಹೊಣೆಗಾರಿಕೆ ಇರುತ್ತದೆ. ಮಕ್ಕಳ ವಿವಾಹದ ವಿಚಾರದಲ್ಲಿ ತಂದೆತಾಯಿಗಳು ಎಂದೂ ಮೋಸ ಮಾಡುವುದಿಲ್ಲ.

ಹೆತ್ತವರ ಸಮ್ಮತಿಯಲ್ಲಿ ನಡೆಯುವ ವಿವಾಹೋತ್ತರ ಬದುಕಿನಲ್ಲಿ ಸಮಸ್ಯೆಯಾದರೆ ಅದನ್ನು ತಿದ್ದುವ ಬದ್ಧತೆ ಅವರಿಗಿರುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಮಾತೃ ದೇವೋಭವ ಪಿತೃದೇವೋಭವ ಎಂಬ ಮಂತ್ರವಿದೆ. ಒಂದು ಗಂಡಿಗೆ ಒಂದು ಹೆಣ್ಣು ಇದ್ದೇ ಇರುತ್ತಾರೆ. ಅಷ್ಟನ್ನು ಅರಿತು ವಯೋಮಿತಿದಾರರು ತಾಳ್ಮೆ, ವಿವೇಕ, ಸಂಯಮ ಬೆಳೆಸಿಕೊಳ್ಳಬೇಕಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಿತ ವಾದರೂ ನರಕವನ್ನು ಇಲ್ಲೇ ಸೃಷ್ಟಿಸಿಕೊಳ್ಳುವಂಥ ದುಡುಕಿಗೆ ಬಲಿಯಾಗದೆ ಪ್ರಜ್ಞಾವಂತರಾದರೆ ತಮ್ಮ ಬದುಕೇ ಹಸನಾಗುತ್ತದೆ. ಇಷ್ಟಕ್ಕೂ ಮೀರಿ ಲವ್‌ಜಿಹಾದ್‌ನಂಥ ಅಮಾನವೀಯ ಕೃತ್ಯಗಳನ್ನು ಸಮರ್ಥಿಸುವ ದರ್ದು ಬುದ್ಧಿಗೇಡಿ ಜೀವಿಗಳಿಗೆ, ದುರುಳ ರಾಜಕಾರಣಿಗಳಿಗಿದ್ದರೆ ಕೂಡಲೇ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಪಾದರಾಯನಪುರ, ಡಿಜೆಹಳ್ಳಿ ಯಲ್ಲಿನ ಶಾಂತಿಧೂತ ಮತದಾರನಿಗೆ ಧಾರೆ ಎರೆದು ಭಾವೈಕತೆ, ಸೌಹಾರ್ದತೆ ಮೆರೆದು ತೋರಿಸಲಿ. ಕಂಡವರ ಮನೆಯವರ
ನೋವು ಇವರಿಗೇನು ಗೊತ್ತು.