Wednesday, 25th December 2024

Mallikarjuna Heggalagi Column: ಬಿಹಾರ ರಿಗಾ ಕಾರ್ಖಾನೆಯಲ್ಲಿ ನಗೆ ಹರಡಿದ ಮುರುಗೇಶ ನಿರಾಣಿ

ಪ್ರಸ್ತುತ

ಮಲ್ಲಿಕಾರ್ಜುನ ಹೆಗ್ಗಳಗಿ

ಬಿಹಾರ ಸಿತಾಮರಿ ಜಿಯ ರಿಗಾ ನಗರದ ರಿಗಾ ಸಕ್ಕರೆ ಕಾರ್ಖಾನೆಯನ್ನು ಮುಧೋಳದ ನಿರಾಣಿ ಉದ್ಯಮ ಸಮೂಹ ೩ ತಿಂಗಳ ಹಿಂದೆ ಖರೀದಿಸಿದೆ. ಈ ಕಾರ್ಖಾನೆಯ ನವೀಕರಣ ಮತ್ತು ವಿಸ್ತರಣೆಯ ಕಾರ್ಯಕ್ಕೆ ಬಿಹಾರದ ಮುಖ್ಯ
ಮಂತ್ರಿ ನಿತೀಶ ಕುಮಾರ್ ಇದೇ 26ರಂದು ಚಾಲನೆ ನೀಡಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಹಾರದ ಮಂತ್ರಿ ಮಂಡಲದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತ ರಿರುವರು. ಅಲ್ಪಾವಧಿಯಲ್ಲಿ ಅಪರೂಪದ ಬೆಳವಣಿಗೆ ಸಾಧಿಸಿದ ಡಾ.ಮುರು ಗೇಶ ನಿರಾಣಿ ಅವರನ್ನು ನಿತೀಶ್ ಕುಮಾರ್ ಅಭಿನಂದಿಸಿ ಇದು ನಿರಾಣಿ ಮಾಡಿದ ಮ್ಯಾಜಿಕ್ ಎಂದು ಕೊಂಡಾಡಿದ್ದಾರೆ.

ಕೇಂದ್ರ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ ಅವರು ನಿರಾಣಿ ಕಾರ್ಖಾನೆಗೆ ಹಿಂದೆ ಭೇಟಿ ನೀಡಿದ ಸಂದರ್ಭದಲ್ಲಿ ಮುರುಗೇಶ ನಿರಾಣಿ ಚುನಾವಣೆಯಲ್ಲಿ ಗೆದ್ದರೆ ಕೈಗಾರಿಕಾ ಮಂತ್ರಿಯಾಗುತ್ತಾರೆ, ಸೋತರೆ ಕಾರ್ಖಾನೆಗಳನ್ನು ಕಟ್ಟುತ್ತಾರೆ. ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದು ಅಲ್ಲ ಎಂದು ಹೇಳಿದ ಮಾತು ಮತ್ತೆ ಮತ್ತೆ
ನೆನಪಾಗುತ್ತಿದೆ.

ರಿಗಾ ಕಾರ್ಖಾನೆಯ ಕಬ್ಬು ಅರಿಯುವ ಸಾಮರ್ಥ್ಯವನ್ನು 10 ಸಾವಿರ ಟನ್ನಿಗೆ, ವಿದ್ಯುತ್ ಸಾಮರ್ಥ್ಯವನ್ನು 50 ಮೆಗಾ ವ್ಯಾಟಿಗೆ, ಡಿಸ್ಟಲರಿ ಸಾಮರ್ಥ್ಯವನ್ನು 585 ಕೆ.ಎಲ್.ಪಿ.ಡಿ. ಗೆ ವಿಸ್ತರಿಸುವ ಕಾರ್ಯವನ್ನು ಹಮ್ಮಿಕೊಳ್ಳ ಲಾಗಿದೆ. ಇದರೊಂದಿಗೆ 20 ಟಿ. ಪಿ.ಡಿ. ಸಾಮರ್ಥ್ಯದ ಕಾಂಪ್ರೆ ಬಯೋ ಗ್ಯಾಸ್ ಹೊಸ ಘಟಕ ನಿರ್ಮಾಣಕ್ಕೆ ನಿತೀಶ್ ಕುಮಾರ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪುನಃ ಬಾಗಿಲು ತೆರೆದ ರಿಗಾ ಸಕ್ಕರೆ ಕಾರ್ಖಾನೆಯಲ್ಲಿ ನಗೆ ಹರಡಿದೆ. ರೈತರು ಸಂಭ್ರಮದಲ್ಲಿದ್ದಾರೆ. ಹಣಕಾಸು ಮುಗ್ಗಟ್ಟಿನಿಂದ ಮುಚ್ಚಿದ ಹಲವು ಕಾರ್ಖಾನೆಗಳನ್ನು ನಿರಾಣಿ ಅವರು ಖರೀದಿಸಿ ಅವುಗಳಿಗೆ ಪುನಶ್ಚೇತನ ನೀಡಿ ಚೆನ್ನಾಗಿ ನಡೆಸುತ್ತಿದ್ದಾರೆ. ಇದು ನಿಜಕ್ಕೂ ಅಪರೂಪದ ಸಾಧನೆ ಮತ್ತು ಮಾದರಿ. ಸುಧಾ ಮೂರ್ತಿಯವರು ನಿರಾಣಿ ಅವರನ್ನು ‘ಕರ್ನಾಟಕದ ಸಾಹಸೋದ್ಯಮಿ’ ಎಂದು ಕರೆಯುತ್ತಾರೆ. ಈ ಮಾತಿಗೆ ಪೂರ್ಣ ಮೌಲ್ಯ ಕೊಡುವಂತೆ ಡಾ. ನಿರಾಣಿ ಅವರುಉದ್ದಿಮೆ ರಂಗವನ್ನು ಬೆಳೆಸುತ್ತಿದ್ದಾರೆ.

ಬರುವ ಮಾರ್ಚ್ 25ರಂದು ದಿನಕ್ಕೆ 35 ಸಾವಿರ ಕ್ವಿಂಟಲ್ ಅಕ್ಕಿ ಮತ್ತು ಗೋವಿನ ಜೋಳ ಬಳಸಿ ಎಥನಾಲ್
ಉತ್ಪಾದಿಸುವ ಭವ್ಯ ಘಟಕ ಕರ್ನಾಟಕದಲ್ಲಿ ಆರಂಭ ಮಾಡಲಿದ್ದಾರೆ. ಎಥನಾಲ್ ಉತ್ಪಾದನೆಯಲ್ಲಿ ರಾಜ್ಯದಲ್ಲಿ ಇದೊಂದು ಹೊಸ ಮೈಲುಗಲ್ಲು ಆಗಲಿದೆ.

ನಿರಾಣಿ ಸಮೂಹ ಎಥನಾಲ್ ಉತ್ಪಾದನೆಯಲ್ಲಿ ಏಷ್ಯಾದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಸಮೂಹ ದಿನಕ್ಕೆ ಒಟ್ಟು 1 ಲಕ್ಷ ಟನ್ ಕಬ್ಬು ಅರೆದು ಸಕ್ಕರೆ ಉತ್ಪಾದಿಸುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿಯೂ ಮುಂಚೂಣಿಯಲ್ಲಿ ಇದೆ. ಸಮೂಹ 75000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಜೊತೆಯಲ್ಲಿ ಸಾಕಷ್ಟು ಅವಲಂಬಿತ ಉದ್ಯೋಗಗಳು ಬೆಳದಿವೆ. ಡಾ. ಮುರುಗೇಶ ನಿರಾಣಿ ಅವರು ಕೃಷ್ಣಾ ತೀರದ ಹಂಚಿನಾಳ ಗ್ರಾಮದಲ್ಲಿ ಬೆಳೆದವರು. ಹೀಗಾಗಿ ಅವರ
ಬದುಕಿಗೆ ನದಿಯ ಚಲನೆ ಮತ್ತು ವಿಶಾಲತೆ ಸಹಜವಾಗಿ ಬಂದಿದೆ. ಈ ಸಣ್ಣ ಬದುಕಿಗೆ ಒಂದು ಗತಿ ಇದೆ ಅನಿಸುತ್ತದೆ. ಬಿ.ಇ. ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದದ್ದು ಒಳ್ಳೆಯದಾಯಿತು. ನೌಕರಿ ಆಸೆ ಬಿಟ್ಟು ಕಬ್ಬು ಬೆಳೆಯ ತೊಡಗಿದೆ. ಅವು ಸಂತೋಷದ ದಿನಗಳಾಗಿದ್ದವು. ಸಕ್ಕರೆ ಕಾರ್ಖಾನೆ ಕಟ್ಟುವ ಅನಿವಾರ್ಯತೆ ಬಂದಿತು. ಮಿನಿ ಕಾರ್ಖಾನೆ ಕಟ್ಟಿದೆ.ಅದು ಈಗ ಇಷ್ಟು ದೂರಕ್ಕೆ ತಂದು ನಿಲ್ಲಿಸಿದೆ ಎಂದು ನಡೆದು ಬಂದ ದಾರಿ ಯನ್ನು ಡಾ ನಿರಾಣಿ ಆಗಾಗ ಸ್ಮರಿಸುತ್ತಾರೆ.

ಮಂಡ್ಯ ಜಿಲ್ಲೆಯ ಪಾಂಡುಪುರ ಸಹಕಾರಿ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿತ್ತು. ಇಲ್ಲಿ ದುಡಿಯುತ್ತಿದ್ದ ಕಾರ್ಮಿಕರು, ಕಬ್ಬು ಬೆಳೆಯುವ ರೈತರು ತೊಂದರೆ ಅನುಭವಿಸಿ ತೊಡಗಿದ್ದರು. ನಿರಾಣಿ ಅವರು ಲೀಜ ಪಡೆದು ಅವಶ್ಯ ಸುಧಾರಣೆಗಳನ್ನು ತ್ವರಿತವಾಗಿ ಮಾಡಿ ಕಾರ್ಖಾನೆಯನ್ನು ಪುನಃ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಭೀಮಾ
ಪಾಟಸ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿತ್ತು. ಈ ಕಾರ್ಖಾನೆ ಖರೀದಿಸಿ, ಸೂಕ್ತ ವ್ಯವಸ್ಥೆ ಮಾಡಿ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದ ರತ್ನ ಸಿಮೆಂಟ್ ಕಾರ್ಖಾನೆ ಹೊಸ ರೂಪ ಪಡೆದು ಭವ್ಯವಾಗಿ ಬೆಳೆದು ನಿಂತಿದೆ. ಎಲ್ಲ ಕೈಗಾರಿಕೆಗಳಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಿರುವುದು ಮಹತ್ವದ ಸಂಗತಿಯಾಗಿದೆ.

ವಿಜಯ ಸೌಹಾರ್ದ ಸಹಕಾರಿ ಬ್ಯಾಂಕ್, ವಿಶಾಲ ಸೌಹಾರ್ದ ಸಹಕಾರಿ ಬ್ಯಾಂಕ್, ಮುಧೋಳ ಮತ್ತು ಬಾಗಲಕೋಟೆ
ಯಲ್ಲಿ ಮಾದರಿ ಶಾಲೆ, ಕಾಲೇಜು ಆರಂಭಿಸಿ ದೊಡ್ಡಮಟ್ಟದಲ್ಲಿ ಬೆಳೆಸಿದ್ದಾರೆ. ಸಾರ್ವಜನಿಕ ಸೇವಾ ವಲಯ ದಲ್ಲಿಯೂ ನಿರಾಣಿ ಸಮೂಹ ತನು, ಮನ, ಧನ ಅರ್ಪಿಸಿ ಸಮಾಜ ಮುಖ್ಯವಾಗಿ ಕೆಲಸ ಮಾಡುತ್ತಿದೆ. ಎಂಆರ್‌ಎನ್ ಫೌಂಡೇಶನ್ ಮೂಲಕ ಉಚಿತ ಆರೋಗ್ಯ ಶಿಬಿರ, ಕೃಷಿ ವಿಚಾರ ಸಂಕಿರಣ, ರೈತರ ಅಧ್ಯಯನ ಪ್ರವಾಸ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಕೃಷಿ ಸಂಶೋಧನೆಗಳಿಗೆ ಪ್ರೋತ್ಸಾಹಿಸುವ ಮಹತ್ವದ ಕೆಲಸವನ್ನು ಫೌಂಡೇಶನ್ ನಿರ್ವ ಹಿಸುತ್ತಿದೆ. ಉಚಿತ ಕಣ್ಣಿನ ತಪಾಸಣೆ ಮತ್ತು ಶಸಚಿಕಿತ್ಸೆ ಕಾರ್ಯದಲ್ಲಿ ಫೌಂಡೇಶನ್ ಬಹಳ ಹೆಸರುಗಳಿಸಿದೆ. ಕೈಗಾರಿಕೆಗಳನ್ನು ನಡೆಸುವುದು ಒಂದು ಕಲೆ. ಕೈಗಾರಿಕೆಗಳಲ್ಲಿ ಹಣದ ಝೆಂಕಾರ ಇರುತ್ತದೆ, ಒಮ್ಮೊಮ್ಮೆ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ. ದಕ್ಷತೆಯಿಂದ ಎಲ್ಲವನ್ನೂ ನಿಭಾಯಿಸಬೇಕು.

ಕಾರ್ಮಿಕರ ಬಗ್ಗೆ ಕಾಳಜಿ,ಸುತ್ತಮುತ್ತಲಿನ ಸಮಾಜದ ಬಗ್ಗೆ ಪ್ರೀತಿ ಇರಬೇಕು. ದೇಶದಲ್ಲಿ ಬಹಳಷ್ಟು ಕೈಗಾರಿಕೆಗಳು ಬೇರೆ ಬೇರೆ ಕಾರಣಗಳಿಗಾಗಿ ಬಾಗಿಲು ಮುಚ್ಚಿವೆ. ಅವುಗಳನ್ನು ಪುನಃ ಆರಂಭಿಸುವ ಕೆಲಸ ನಡೆಯಬೇಕು. ಇದು ಅಭಿಯಾನವಾಗಿ ರೂಪಕೊಳ್ಳಬೇಕು ಎಂದು ಮುರುಗೇಶ ನಿರಾಣಿ ಹೇಳುತ್ತಾರೆ. ಉದ್ಯಮಿಯಾಗು ಉದ್ಯೋಗ ನೀಡು, ನೀನೂ ಉದ್ಯಮೆಯಾಗು ನಿರಾಣಿ ಅವರು ಕೈಗಾರಿಕಾ ಸಚಿವರಾಗಿ ಯುವಕರಿಗೆ ನೀಡಿದ ಘೋಷವಾಕ್ಯಗಳು. ನೂರಾರು ಯುವಕರಿಗೆ ಕೈಗಾರಿಕೋದ್ಯಮಿಗಳಾಗಿ ಬೆಳೆಯಲು ನೆರವಾಗಿದ್ದಾರೆ.

ಕೈಗಾರಿಕಾ ಸಚಿವರಾಗಿ 3 ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿzರೆ. ಜಗತ್ತಿನ ಉದ್ಯಮಿ ದಾರರನ್ನು ಕರ್ನಾಟಕ ಕರೆತಂದು ನಾಡನ್ನು ಬೆಳೆಸಿದ್ದಾರೆ.

ಸಮೃದ್ಧವಾಗಿ ನಾಡು ಕಟ್ಟಿದ ಕೃಷ್ಣರಾಜ ಒಡೆಯರ್ ಡಾ.ಮುರುಗೇಶ ನಿರಾಣಿ ಅವರಿಗೆ ಒಂದು ಆದರ್ಶ, ಒಂದು ಸ್ಪೂರ್ತಿ. ನಾಡಿನ ಸಮಗ್ರ ಉನ್ನತಿ ಅವರ ಧ್ಯೇಯ. ಆತ್ಮ ನಿರ್ಭರ ಬೆಳಕಿನೆಡೆಗೆ ಅವರು ನಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಬಲ ಅವರಿಗೆ ಸದಾ ಇದೆ. ನಿರಾಣಿ ಅವರ ಅಮೋಘ ಸೇವೆಯನ್ನು ಗುರುತಿಸಿ ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿಶ್ವ ವಿದ್ಯಾಲಯ ಮತ್ತು ಮಹಾರಾಷ್ಟ್ರದ ಕೃಷ್ಣ ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈ ಗೌರವ ಡಾಕ್ಟರೇಟ್ ಗೌರವಿಸಿವೆ. ‌

ನಿರಾಣಿ ಅವರೇ ಪಿಎಚ್‌ಡಿ ಅಧ್ಯಯನ ವಿಷಯವಾಗಿ ಬೆಳೆದಿದ್ದಾರೆ. ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪಿಎಚ್‌ಡಿ ಅಧ್ಯಯನಕ್ಕೆ ಅವರ ಸಾಧನೆಗೆ ಗುರುತಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಒಂದೇ ಕೈಯಿಂದ ಚಪ್ಪಾಳೆ ಆಗೋದಿಲ್ಲ. ಈ ಎಲ್ಲ ಸಾಧನೆಗಳಿಗೆ ಹಿರಿಯರ ಮಾರ್ಗದರ್ಶನ, ಕಾರ್ಮಿಕರ ಸಿಬ್ಬಂದಿ ವರ್ಗದವರ ಹಗಲು ಇರುಳು ದುಡಿಮೆ, ರೈತರ ಸಹಕಾರ, ಜನತೆಯ ಆಶೀರ್ವಾದ ಕಾರಣವಾಗಿವೆ ಎಂದು ನಿರಾಣಿ ಯವರು ಸ್ಮರಿಸುತ್ತಾರೆ. ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ ಎಂದು ಬಸವಣ್ಣನವರು ಹೇಳಿದ ವಿನಯದ ಮಾತು ನೆನಪಾಗುತ್ತಿದೆ.

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ