ಸವಾಲು
ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಿಸಿಎಂ
ಕೋವಿಡ್-19ರ ನಿರ್ವಹಣೆಯು ಸವಾಲಿನ ಕೆಲಸ. ಸಮುದಾಯದಲ್ಲಿ ಜಾಗೃತಿ ಮೂಡಿಸುವುದು, ಸಮುದಾಯದಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸುವುದು ಹಾಗೂ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಏರ್ಪಡಿಸುವುದು, ಇವೆಲ್ಲದರ ಬಗೆಗೂ ಒಟ್ಟೊಟ್ಟಿಗೆ ಒತ್ತು ಕೊಡಬೇಕಾದ ಕೆಲಸ ಇದಾಗಿದೆ.
ರಾಜ್ಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥನಾಗಿ ನಾನು ನೇಮಕಗೊಂಡ 2 ವಾರಗಳ ಅವಧಿಯಲ್ಲಿನ ನಿರ್ವಹಣೆ ಅತ್ಯಂತ ಸವಾಲಿನಿಂದ ಕೂಡಿದ್ದರೂ ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಬಗ್ಗೆ ತುಸು ಸಮಾಧಾನವಿದ್ದರೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ನಿರಂತರ ಪರಿಶ್ರಮವನ್ನು ಬೇಡುತ್ತದೆ, ಆದ್ದರಿಂದ ಯಾವುದೇ ಕಾರಣಕ್ಕೂ ಮೈಮರೆಯು ವಂತಿಲ್ಲವಾಗಿದೆ.
ಕೋವಿಡ್ ಸೋಂಕು ಹತೋಟಿ ಮೀರಿ ಪ್ರಸರಣವಾಗುತ್ತಿದ್ದ ಸಂದರ್ಭದಲ್ಲಿ ನನಗೆ ಈ ಹೊಣೆಗಾರಿಕೆ ವಹಿಸಲಾಯಿತು. ಎಂಬಿಬಿಎಸ್ ವೈದ್ಯಕೀಯ ಪದವಿ ಹಾಗೂ ಕೋವಿಡ್ ಬಾಧೆಗೆ ಒಳಗಾದ ಅನುಭವ ಸೂಕ್ತ ಸಮಯಕ್ಕೆ ಪರಿಣಾಮಕಾರಿ ನಿರ್ಧಾರ ಗಳನ್ನು ತೆಗೆದುಕೊಳ್ಳಲು ನನಗೆ ನೆರವಾಯಿತು. ಅಧಿಕಾರಿಗಳೊಡನೆ ಸಭೆಗಳನ್ನು ನಡೆಸುವುದು, ವಾರ್ ರೂಮ, ಆಸ್ಪತ್ರೆಗಳಿಗೆ ಖುದ್ದು ಭೇಟಿ ಕೊಡುವ ಮೂಲಕ ಸುಧಾರಣೆಗಾಗಿ ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದೆ.
ಮೊದಲಿಗೆ, ಕೋವಿಡ್ ಪರೀಕ್ಷೆ ಹಾಗೂ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಜನರಿಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಲು ಹಾಗೂ ವ್ಯವಸ್ಥೆಯಲ್ಲಿನ ಗೊಂದಲವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಎಂಬುದನ್ನು ಮನಗಂಡೆ. ಇದಕ್ಕಾಗಿ, ಕೋವಿಡ್ ನಿರ್ವಹಣೆಯಲ್ಲಿ ತೊಡಗಿದ್ದ ವಿವಿಧ ಘಟಕಗಳಾದ ಕೋವಿಡ್ ವಾರ್ ರೂಂ, ಬಿಬಿಎಂಪಿ, ಆರೋಗ್ಯ ಮಿತ್ರ, ಆರೋಗ್ಯ ಇಲಾಖೆ, ಇವೆಲ್ಲದರ ಕಾರ್ಯಗಳ ಸಂಯೋಜನೆ ಅತ್ಯಗತ್ಯ ಎಂಬುದನ್ನು ಗುರುತಿಸಿ ಏಕೀಕೃತ ‘ಪ್ಲಾಟ್ ಫಾರ್ಮ್’ನಲ್ಲಿ ಮಾಹಿತಿ ಲಭ್ಯವಾಗಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ, 2 ದಿನಗಳ ಕಾಲಮಿತಿ ನಿಗದಿ ಪಡಿಸಿದೆ.
ಅದೇ ರೀತಿಯಾಗಿ ಕೋವಿಡ್ ಸಹಾಯವಾಣಿ 1912 ಅನ್ನು ಬಲವರ್ಧನೆಗೊಳಿಸಲು ನಿರ್ಧರಿಸಿದೆ. ಕೋವಿಡ್‌ಗೆ ಸಂಬಂಧಿಸಿದ ಮಾಹಿತಿಗಳು ವಿವಿಧ ಘಟಕಗಳ ನಡುವೆ ಚದುರಿ ಹೋಗುತ್ತಿವೆ. ಹೀಗಾಗಿ, ಈ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಹಲವೆಡೆ ಮಾಹಿತಿ ತುಣುಕುಗಳು ಸಿಗುತ್ತಿವೆಯೇ ಹೊರತು, ಒಂದೆಡೆ ಸಮಗ್ರ ಮಾಹಿತಿ ಲಭ್ಯವಾಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿತ್ತು. ಮಾಹಿತಿ ಒಂದೆಡೆ ಲಭ್ಯವಾಗದಿದ್ದರೆ ರೋಗ ನಿರ್ವಹಣೆ ಸಾಧ್ಯವಾಗುವುದಿಲ್ಲ. ಹೀಗಾಗಿ ಏಕೀಕೃತ ವೇದಿಕೆಯಲ್ಲಿ ಮಾಹಿತಿ ಲಭ್ಯವಾಗಲೇಬೇಕು ಎಂಬುದು ನನ್ನ ಉದ್ದೇಶವಾಗಿತ್ತು.
ಇದೇ ರೀತಿಯಾಗಿ, ಸೋಂಕು ಬಾಧಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಾಗಿಸುವ ವಿಧಾನದಲ್ಲಿಯೂ ಬದಲಾವಣೆ ಅತ್ಯಗತ್ಯ ಎಂಬುದನ್ನು ಅರಿತು ಬೆಡ್ ಬುಕಿಂಗ್ ವಿಧಾನವು ಸ್ವಯಂ ಚಾಲಿತವಾಗಿ ಆಗುವಂತೆ ಮಾಡಬೇಕೆಂಬ ಬಗ್ಗೆ ಗಮನ ಕೇಂದ್ರೀ ಕರಿಸಿದೆ. ಯಾವುದೇ ಒಂದು ಆಸ್ಪತ್ರೆಯಲ್ಲಿ, ಅದು ಸರಕಾರಿ ಆಸ್ಪತ್ರೆಯೇ ಆಗಿರಲಿ ಅಥವಾ ಸರಕಾರಿ ಕೋಟಾ ನಿಗದಿಯಾದ ಖಾಸಗಿ ಆಸ್ಪತ್ರೆಯೇ ಆಗಿರಲಿ, ಅಲ್ಲಿ ಯಾವುದೇ ಬೆಡ್ ಖಾಲಿಯಾದ ತಕ್ಷಣವೇ ನೈಜ ಕ್ಷಣದ ಅದು ಸಾಪೋಸ್ಟರ್ಲ್‌ನಲ್ಲಿ ಕಾಣಿಸುವಂತಾಗಬೇಕು. ಹೀಗಾದಾಗ ಮಾತ್ರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಉಂಟುಮಾಡಿಸಲು ಸಾಧ್ಯ ಎಂದು ಅಧಿಕಾರಿಗಳಿಗೆ ತಿಳಿಸಿದೆ.
ಸ್ಯಾಂಪಲ್ ಟೆಸ್ಟ್‌ಗಳ ಫಲಿತಾಂಶ ನೀಡುವುದರಲ್ಲಿ ವಿಳಂಬವಾದರೆ ಸಾವು ನೋವಿನ ಪ್ರಕರಣಗಳು ಅಧಿಕವಾಗುತ್ತವೆ. ಹೀಗಾಗಿ, ಟೆಸ್ಟ್ ಫಲಿತಾಂಶವನ್ನು ನೀಡಲು ಮುಂಚೆ ಹಿಡಿಯುತ್ತಿದ್ದ ಸರಾಸರಿ ನಾಲ್ಕೂವರೆ ದಿನಗಳ ಅವಧಿಯನ್ನು ೧ ದಿನದ ಅವಧಿಗೆ ಇಳಿಸಬೇಕೆಂಬ ಗುರಿಯೊಂದಿಗೆ ಮಾರ್ಗೋಪಾಯಗಳ ಬಗ್ಗೆ ಆಲೋಚಿಸಿ, ವಿಳಂಬವಾಗಿ ಫಲಿತಾಂಶ ನೀಡುವ ಲ್ಯಾಬ್ ಗಳಿಗೆ ಪ್ರತಿ ಪ್ರಕರಣಕ್ಕೆ 100 ರಿಂದ 150 ರು. ದಂಡ ವಿಧಿಸುವ ಕ್ರಮ ಜಾರಿಗೊಳಿಸಲು ನಿರ್ಧರಿಸಿದೆ.
ಅದೇ ರೀತಿಯಾಗಿ, ಸರಕಾರಿ ಕೋಟಾದ ಸೋಂಕಿತರಿಗೆ ನೀಡಲಾಗುವ ಚಿಕಿತ್ಸಾ ದರವನ್ನು ಪರಿಷ್ಕರಿಸಬೇಕೆಂಬ ಖಾಸಗಿ ಆಸ್ಪತ್ರೆ ಗಳ ಬೇಡಿಕೆಯ ಬಗ್ಗೆ ಗಮನ ಹರಿಸಿ ಆಕ್ಸಿಜನೇಟೆಡ್ ಬೆಡ್‌ಗೆ ಪ್ರತಿದಿನಕ್ಕೆ 1000 ರು., ವೆಂಟಿಲೇಟರ್ ರಹಿತ ಐಸಿಯು ಬೆಡ್‌ಗೆ ಪ್ರತಿದಿನಕ್ಕೆ 1250 ರು. ಹಾಗೂ ವೆಂಟಿಲೇಟರ್ ಇರುವ ಐಸಿಯು ಬೆಡ್‌ಗೆ ಪ್ರತಿ ದಿನಕ್ಕೆ 1500 ರು. ಹೆಚ್ಚಳ ಮಾಡಿ ಆದೇಶ ಹೊರಡಿ ಸಿದೆ.
ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಒತ್ತು ನೀಡುವುದು ಅತ್ಯಗತ್ಯವಾಗಿತ್ತು. ಆಸ್ಪತ್ರೆಗಳಿಗೆ ಆಕ್ಸಿಜನ್ ಸರಬರಾಜು, ಔಷಧಗಳ ಪೂರೈಕೆ, ವೈದ್ಯಕೀಯ ಸಾಮಗ್ರಿಗಳ ಪೂರೈಕೆ ಇವೆಲ್ಲವೂ ಸರಿಯಾದ ಸಮಯ ದಲ್ಲಿ ಆಗಬೇಕು ಎಂದು ಆ ನಿಟ್ಟಿನಲ್ಲಿ ಕ್ರಮ ವಹಿಸಿದೆ. ಮೆಡಿಕಲ್ ಕಿಟ್‌ಗಳ ಖರೀದಿ, ವೈರಾಣು ನಿರೋಧಕ ಔಷಧಿ ರೆಮಿಡಿಸಿವಿರ್ ಸೇರಿದಂತೆ ಅಗತ್ಯ ಸಾಮಗ್ರಿಗಳ ಖರೀದಿಗೆ ಕ್ರಮ ತೆಗೆದುಕೊಂಡೆ. ಹಾಗೆಯೇ ಆಕ್ಸಿಜನ್ ಕೊರತೆ ನೀಗಿಸುವ ಸಲುವಾಗಿ ತಾಲೂಕು
ಆಸ್ಪತ್ರೆಗಳು ಸೇರಿದಂತೆ ಹಲವಾರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್‌ಗಳ ಸ್ಥಾಪನೆಗೆ ನಿರ್ಧಾರ ತೆಗೆದುಕೊಂಡೆ.
ಕೋವಿಡ್ ನಿರ್ವಹಣೆಯ ಕೊಂಡಿಯಲ್ಲಿ ಬಲು ಮುಖ್ಯವಾದ ಗುಂಪಿಗೆ ಸೇರಿದವರು ಹೋಮ್ ಐಸೋಲೇಷನ್‌ಗೆ ಒಳಪಟ್ಟವರು. ಶೇ.90ರಷ್ಟು ಸೋಂಕಿತರು ತಂತಮ್ಮ ಮನೆಯಲ್ಲಿಯೇ ಐಸೋಲೇಷನ್ ಆಗುತ್ತಿರುವುದರಿಂದ ಇವರ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಹೋಮ್ ಐಸೋಲೇಷನ್‌ಗೆ ಒಳಪಡುವವರ ಮನೆ ಬಾಗಿಲಿಗೆ ಅಗತ್ಯ ಔಷಧಗಳಿರುವ ಮೆಡಿಕಲ್ ಕಿಟ್ ತಲುಪಿಸುವುದು, ಅವರಿಗೆ ಟೆಲಿ ಕನ್ಸಲ್ಟಿಂಗ್ ನೀಡುವುದು ಹಾಗೂ ಅವರ ಪ್ರಾಥಮಿಕ ಸಂಪರ್ಕದಲ್ಲಿರುವವರ ಟ್ರಯಾ ಜಿಂಗ್‌ಗೆ ಆದ್ಯತೆ ನೀಡುವ ದಿಶೆಯಲ್ಲಿ ಕ್ರಮಕೈಗೊಂಡೆ. ಇದಕ್ಕಾಗಿ ಬೇಕಾಗುವ ಮಾನವ ಸಿಬ್ಬಂದಿಯನ್ನು ನಿಯೋಜಿಸುವ ಸಲು ವಾಗಿ ವೈದ್ಯಕೀಯ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ನಿರ್ಧಾರವನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲಾಯಿತು.
ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗೆ ಆಮ್ಲಜನಕದ ಕೊರತೆಯಾದರೆ, ಅದನ್ನು ಮನೆ ಬಾಗಿಲಿಗೇ ತಲುಪಿಸುವುದಕ್ಕಾಗಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಖರೀದಿಸಲು ನಿರ್ಧರಿಸಿದೆ. ಇದರ ಜತೆಗೆ ಖಾಸಗಿ ಕಂಪನಿಗಳ ಸಿ.ಎಸ್.ಆರ್. ನಿಧಿಯ ನೆರವಿನಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದೆ. ಇದಕ್ಕೂ ಮುನ್ನ ನಾನು ಪ್ರತಿನಿಧಿಸುವ ಮಶ್ವರಂ ಕ್ಷೇತ್ರ ದಲ್ಲಿ ಸ್ವಯಂ ಸೇವಕರ ತಂಡ ರಚಿಸಿ, ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಸೋಂಕಿತರ ಮನೆ ಬಾಗಿಲಿಗೆ ತಲುಪಿಸುವ
ಅಭಿಯಾನ ಆರಂಭಿಸಿದೆ.
ಆತಂಕದಿಂದಾಗಿ ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯನ್ನು ಕಡಿಮೆಗೊಳಿಸಬೇಕೆಂದರೆ ಮನೆಯ ಪ್ರತ್ಯೇಕ ವಾಸವಿದ್ದು, ಚಿಕಿತ್ಸೆ ತೆಗೆದುಕೊಳ್ಳುವವರಿಗೆ ಸೂಕ್ತ ಸೇವೆ ನೀಡುವುದು ಅತ್ಯಗತ್ಯ ಎಂದು ಭಾವಿಸಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾದೆ. ಇದೇ ಸಂದರ್ಭದಲ್ಲಿ ಚಿತಾಗಾರದಲ್ಲಿ ವ್ಯವಸ್ಥಿತ ಶವಸಂಸ್ಕಾರ, ಕೋವಿಡ್ ತ್ಯಾಜ್ಯ ವಿಲೇವಾರಿ ಸೇರಿದಂತೆ
ಹಲವಾರು ವಿಷಯಗಳ ಬಗ್ಗೆ ಗಮನ ಹರಿಸುವ ಅನಿವಾರ್ಯತೆಯೂ ಎದುರಾಗಿತ್ತು.
ವೈದ್ಯಕೀಯ ಸಾಮಗ್ರಿ, ಔಷಧ ಇತ್ಯಾದಿಗಳು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗಿ ಸೋಂಕಿತರಿಗೆ ಆಗುವ ಸುಲಿಗೆ ಯನ್ನು ತಡೆಗಟ್ಟುವ ಕಾರ್ಯವನ್ನು ಸಹಾಯವಾಣಿ 112ರ ಮೂಲಕ ಜಾರಿಗೊಳಿಸಿದೆ. ಇದರ ಮೇಲ್ವಿಚಾರಣೆಗಾಗಿ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸುವ ಜತೆಗೆ, ಸುಲಿಗೆ ಪ್ರಕರಣ ಕಂಡುಬಂದರೆ 112ಕ್ಕೆ ಕರೆ ಮಾಡಿ ದೂರು ದಾಖಲಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನನ್ನದಾಗಿತ್ತು.
ಗಂಭೀರವಲ್ಲದ ಸೋಂಕಿತರನ್ನು ಸ್ಟೆಪ್‌ಡೌನ್ ಆಸ್ಪತ್ರೆಗೆ ವರ್ಗಾಯಿಸುವುದು, ರಾಜ್ಯದಲ್ಲಿ ಆಮ್ಲಜನಕ ಸೌಲಭ್ಯ ಇರುವ ಹಾಸಿಗೆ ಗಳನ್ನು ಇನ್ನೂ 20000 ದಷ್ಟು ಹೆಚ್ಚಿಸುವುದು, 15000 ಆಮ್ಲಜನಕ ಸಾಂದ್ರಕಗಳ ಖರೀದಿ, 2 ಕೋಟಿ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್, ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗಾಗಿ 5 ಲಕ್ಷ ಮೆಡಿಕಲ್ ಕಿಟ್‌ಗಳ ಖರೀದಿ, 1 ಲಕ್ಷ ಪಲ್ಸ್ ಆಕ್ಸಿಮೀಟರ್ ಖರೀದಿ, ರೆಮ್‌ಡಿಸಿವಿರ್ ಅನ್ನು ಆಯಾ ದಿನದ ಕೋಟಾಕ್ಕೆ ಅನುಗುಣವಾಗಿ ಪೂರೈಸದ ಕಂಪನಿಗಳ ವಿರುದ್ಧ ಕ್ರಮ, ಹೀಗೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡೆ.
ಜತೆಗೆ, ಖಾಸಗಿ ವಲಯದ ಸಹಾಯ ಪಡೆಯುವ ದಿಸೆಯಲ್ಲಿ, ಗಿವ್ ಇಂಡಿಯಾ ಫೌಂಡೇಷನ್ ವತಿಯಿಂದ 2000 ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಸಂಬಂಧವಾಗಿ ಸಮಾಲೋಚನೆ ನಡೆಸಿದೆ. ಗಿವ್ ಇಂಡಿಯಾ ಹಾಗೂ ಓಲಾ ಸಹಯೋಗದಲ್ಲಿ ಅಗತ್ಯವಿರುವ ಸೋಂಕಿತರ ಮನೆ ಬಾಗಿಲಿಗೆ 30 ನಿಮಿಷಗಳೊಳಗೆ ಆಕ್ಸಿಜನ್ ಕಾನ್ಸಂಟ್ರೇಟರ್ ತಲುಪಿಸುವ ಅಭಿಯಾನಕ್ಕೂ ಚಾಲನೆ ನೀಡಿದೆ.
ಕೊನೆಯದಾಗಿ, ಮಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾಗಬಹುದಾಗಿದ್ದ ವಿಪತ್ತನ್ನು ತಪ್ಪಿಸಿ ನಿಟ್ಟುಸಿರು ಬಿಟ್ಟ ಘಟನೆ ಇನ್ನೂ ಕಣ್ಣೆದುರಿಗೇ ಬಂದಂತಿದೆ. ಬಳ್ಳಾರಿಯಿಂದ ಹೊರಟು ಬರಬೇಕಾಗಿದ್ದ ಆಕ್ಸಿಜನ್ ಟ್ಯಾಂಕರ್ ಸಕಾಲಕ್ಕೆ ಬಾರದೇ ಇದ್ದಾಗ, ತಕ್ಷಣ ತರಿಸುವ ವ್ಯವಸ್ಥೆ ಮಾಡಿದೆ. ಇದು, ತಡವಿಲ್ಲದೇ ತಕ್ಷಣವೇ ಆಸ್ಪತ್ರೆಯನ್ನು ತಲುಪುವುದನ್ನು
ಖಾತರಿಗೊಳಿಸಲು ಪೊಲೀಸರ ನೆರವಿನಿಂದ ನಿಗದಿತ ಸ್ಥಳಗಳ ನಡುವಿನ ರಸ್ತೆಯನ್ನು ಶೂನ್ಯ ಸಂಚಾರ ಪಥವನ್ನಾಗಿಸಲು ಸಾಧ್ಯ ವಾಯಿತು.
ಇದರಿಂದಾಗಿ ಆಮ್ಲಜನಕದ ನೆರವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 200 ಜನರು ಅಪಾಯದಿಂದ ಪಾರಾದರು. ಈ ಇಡೀ ಕಾರ್ಯಾಚರಣೆಯ ಸಂದರ್ಭದಲ್ಲಿ ಇಡೀ ರಾತ್ರಿ ಮಲಗದೇ, ಬೆಳಗಿನ ಜಾವ 4.45ರವರೆಗೂ ಎಚ್ಚರ ವಾಗಿಯೇ ಇದ್ದಿದ್ದುದರ ಫಲಿತಾಂಶ ಮತ್ತು ಜನತೆಯಿಂದ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆ ನನಗೆ ಎಂತಹ ಸವಾಲನ್ನೂ ಮೆಟ್ಟಿ ನಿಲ್ಲನೆಂಬ ಮನೋಬಲವನ್ನು ತುಂಬಿತು.