Friday, 20th September 2024

ಸಂಘ ಪರಿವಾರದ ಶಿಸ್ತಿನ ಸಿಪಾಯಿ

ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಮತ್ತು ಆರ್‌ಎಸ್‌ಎಸ್ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ
ಮಾಡಿಕೊಳ್ಳುತ್ತದೆ, ಆದರೆ ಸರಕಾರದ ನೀತಿ ನಿರೂಪಣೆ ವಿಷಯ ಬಂದಾಗ ಸಂಘ ಹಿಂದೆ ಸರಿಯುತ್ತದೆ. ಸಂಘವು ತನ್ನ ಸಹಯೋಗಿ ಸಂಘಟನೆಗಳಿಗೆ ನೈತಿಕ ಮತ್ತು ಸೈದ್ದಾಂತಿಕ ವಿಷಯದಲ್ಲಿ ಬೋಧಿಸುತ್ತದೆಯೇ ಹೊರತೂ, ಅವುಗಳ ನಿತ್ಯದ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ.

ಕೆಲವೊಂದು ಪ್ರಶ್ನೆಗಳಿಗೆ, ಎಲ್ಲರಿಗೂ ತೃಪ್ತಿದಾಯಕವಾಗುವಂತೆ ಉತ್ತರಿಸುವುದು ಎಂದಿಗೂ ಸಾಧ್ಯವಿಲ್ಲ. ಆರ್‌ಎಸ್‌ಎಸ್-ಬಿಜೆಪಿ ನಡುವಿನ ನಂಟು ಅಂಥ ಪ್ರಶ್ನೆಗಳಲ್ಲಿ ಒಂದು.

ಇಂಥ ಪ್ರಶ್ನೆಗಳು ಭಾರತೀಯ ಜನ ಸಂಘ ಅಸ್ತಿತ್ವದಲ್ಲಿ ಇದ್ದಾಗಲೂ ಅದನ್ನು ಕಾಡಿತ್ತು. ಈ ವಿಷಯವೇ 1979ರಲ್ಲಿ ಜನತಾ ಪಕ್ಷದ ವಿಭಜನೆಗೂ ಕಾರಣವಾಗಿತ್ತು ಮತ್ತು ಈಗಲೂ ಅದೇ ವಿಷಯವನ್ನು ಚರ್ಚಿಸಲಾಗುತ್ತಿದೆ. ಅದೂ ನರೇಂದ್ರ ಮೋದಿ ನೇತೃತ್ವ ದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿ ಇರುವಾಗ.

ಹಾಗಿದ್ದರೆ ಆರ್‌ಎಸ್‌ಎಸ್, ನರೇಂದ್ರ ಮೋದಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆಯೇ? ಘರ್ ವಾಪಸೀ, ಲವ್ ಜಿಹಾದ್ ಮೊದಲಾದ ವಿವಾದಗಳನ್ನು ಮೋದಿಗೆ ಮುಜುಗರ ಉಂಟು ಮಾಡಲೆಂದೇ ಸೃಷ್ಟಿಸಲಾಯಿತೇ? ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಸ್ವದೇಶಿ ಜಾಗರಣ್ ಮಂಜ್
ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಸರಕಾರದ ಕಾರ್ಯಸೂಚಿಗಳ ಜತೆ ಭಿನ್ನಾಭಿಪ್ರಾಯ ಹೊಂದಿವೆಯೇ?

ಆರ್‌ಎಸ್‌ಎಸ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆನ್ನೆಲುಬಾಗಿ ನಿಂತಿದೆಯೇ? ಇಲ್ಲವೇ? ಇವೇ ಪ್ರಶ್ನೆಗಳನ್ನು ಪದೇ ಪದೆ ಕೇಳಲಾಗುತ್ತಿದೆ. ಇದಕ್ಕೆ ಸರಳ ಉತ್ತರವೆಂದರೆ ಪರಸ್ಪರರನ್ನು ಗೌರವಿಸುವ ಮತ್ತು ವಿಶಾಲ ಸೈದ್ದಾಂತಿಕ ಸಮಾನತೆ ಗಳೇ ಸಂಘ ಪರಿವಾರದ ವಿವಿಧ ಸಂಘಟನೆಗಳನ್ನು ಒಂದುಗೂಡಿಸಿಟ್ಟಿರುವ ಮೂಲ ಅಂಶಗಳು.

ಸಂಘ ಪರಿವಾರ ಮತ್ತು ಬಿಜೆಪಿ ನಡುವಿನ ಸಂಬಂಧದ ಕುರಿತ ಪ್ರಶ್ನೆಗಳ ಮೂಲ ಕಾರಣವೆಂದರೆ, ಸಂಘ ಪರಿವಾರವನ್ನು ವಿರೋಧಿಸುವವರು, ತಾವು ಕೇಳುವ ಪ್ರಶ್ನೆಗಳಿಗೆ ನೇರಾನೇರ ಉತ್ತರವನ್ನು ಪಡೆಯುವುದರಲ್ಲಿ ಆಸಕ್ತಿ ಹೊಂದಿರದೇ ಇರುವುದು.
ಇನ್ನು ಸಂಘದ ಸಿದ್ದಾಂತ ಮತ್ತು ಸಂಘಟನೆಯ ಸಾಮರ್ಥ್ಯದ ವಿಷಯವು ಅವರಿಗೆ ಆಸಕ್ತಿಕರ ವಿಷಯ ಅಲ್ಲವೇ ಅಲ್ಲ. ಕೇಂದ್ರ ದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿ ಇದ್ದರೂ, ಈ ವರ್ಗದ ಜನತೆ ಮೋದಿ ಆಡಳಿತ ಕೇವಲ ಹಂಗಾಮಿ ಅವಧಿಯ ಆಡಳಿತ ಎಂಬ ನಂಬಿಕೆಯಲ್ಲಿ ಇರಲು ಬಯಸುತ್ತಿದೆ.

ಮೋದಿ ಮತ್ತು ಅವರ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಾಡುತ್ತಿರುವ ಇಲ್ಲಸಲ್ಲದ ದೋಷಾರೋಪಗಳಿಗೆ ಅವುಗಳು ಮೊಂಡುತನದ ಹಿಂದೆ ಅಡಗಿಕೊಂಡಿರುವುದೇ ದೊಡ್ಡ ಕಾರಣ ಎಂಬುದೇ ಅಸಲಿ ವಿಷಯ. ಉದಾಹರಣೆಗೆ, ಭಾರತ
ದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ ಎಂಬ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆರೋಪ ಮತ್ತು ಹಿಂದೂ ಮಹಾಸಾಗರದಲ್ಲಿ ಪಾಕಿಸ್ತಾನದ ಬೋಟ್‌ಗೆ ಬೆಂಕಿ ಹಚ್ಚಿದಾಗ ಈ ಎರಡೂ ಪಕ್ಷಗಳು ನೀಡಿದ ಪ್ರತಿಕ್ರಿಯೆಯೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ.

2014ರ ಚುನಾವಣೆ ವೇಳೆ ಆರ್‌ಎಸ್‌ಎಸ್ ಅವಿರತವಾಗಿ ಶ್ರಮಿಸಿ ಬಿಜೆಪಿಯ ಗೆಲುವಿಗೆ ದೊಡ್ಡ ಪ್ರಮಾಣದಲ್ಲಿ ಕಾರಣವಾಗಿತ್ತು. ಅದರರ್ಥ ಬಿಜೆಪಿಗೆ ಸಿಕ್ಕ ಭಾರಿ ಜನಮತದ ಹಿಂದೆ ಸಂಘ ಪರಿವಾರದ ಬಹುದೊಡ್ಡ ಕಾಣಿಕೆ ಇದೆ ಎಂದರ್ಥ. ಇದರ ಸಾರಾಂಶ ವೆಂದರೆ ಬಿಜೆಪಿಯೆಂಬ ಬೋಟ್ ಮುಳುಗಿಸುವ ಯಾವುದೇ ಯತ್ನವನ್ನು ಸಂಘ ಮಾಡದು ಎಂಬುದು. ಸರಕಾರದ ಯಶಸ್ಸಿನಲ್ಲಿ ಸಂಘ ಮತ್ತು ಅದರ ಇತರ ಸಂಘಟನೆಗಳದ್ದೂ ಪಾಲಿದೆ. ಎಲ್ಲ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಮತ್ತು ಆರ್‌ಎಸ್‌ಎಸ್ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿತ್ತು, ಆದರೆ ಸರಕಾರದ ನೀತಿ ನಿರೂಪಣೆ ವಿಷಯ ಬಂದಾಗ ಸಂಘ ಹಿಂದೆ ಸರಿಯುತ್ತದೆ. ಸಂಘವು ತನ್ನ ಸಹಯೋಗಿ ಸಂಘಟನೆಗಳಿಗೆ ನೈತಿಕ ಮತ್ತು ಸೈದ್ದಾಂತಿಕ ವಿಷಯದಲ್ಲಿ ಬೋಧಿಸುತ್ತದೆಯೇ ಹೊರತೂ, ಅವುಗಳ ನಿತ್ಯದ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ. ಅದು ಘರ್ ವಾಪಸಿಯೇ ಇರಬಹುದು, ಲವ್ ಜಿಹಾದ್ ಅಥವಾ ಆರ್ಥಿಕ ನೀತಿಗಳೇ ಇರಬಹುದು, ಸಂಘದ ಯಾವುದೇ ಹಿರಿಯ ನಾಯಕರು ಯಾವುದೇ ಸಂದರ್ಭದಲ್ಲೂ ವಿವಾದಿತ ಹೇಳಿಕೆ ನೀಡಿಲ್ಲ. ಮಾಧ್ಯಮಗಳಲ್ಲಿ ಏನು ವರದಿಯಾಗಿದೆಯೋ ಅದು ಮುಖ್ಯವಾಹಿನಿಯನ್ನು ಪ್ರತಿನಿಧಿಸದ ಕೆಲ ವ್ಯಕ್ತಿಗಳ ಅಭಿಪ್ರಾಯವಷ್ಟೇ. ಸಂಘವು ಸಲಹೆ ಮತ್ತು ಸಮ್ಮತದ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತದೆ.

ಹಲವು ಬಾರಿ ಮಾಧ್ಯಮಗಳು ಬೆಟ್ಟ ಅಗೆದು ಇಲಿ ಹುಡುುವ ಯತ್ನ ಮಾಡುತ್ತವೆ. ಸಣ್ಣಪುಟ್ಟ ಘಟನೆಗಳನ್ನು ದೊಡ್ಡದಾಗಿ ಬಿಂಬಿಸುತ್ತವೆ. ಅವುಗಳ ಇಂಥ ಯತ್ನವು ಸಹಜವಾಗಿಯೇ ಇಡೀ ವಾತಾವರಣವನ್ನು ಕಲುಷಿತಗೊಳಿಸುವ ಜತೆಗೆ ತಪ್ಪು ತಿಳಿವಳಿಕೆಯನ್ನು ಸೃಷ್ಟಿಸುತ್ತದೆ ಮತ್ತು ಘನತೆಗೆ ಧಕ್ಕೆ ತರುತ್ತವೆ. ಸಂಘ ಪರಿಹಾರದ ಸರ್ವಾನುಮತದ ಶಕ್ತಿಯನ್ನು ಅರ್ಥ
ಮಾಡಿಕೊಳ್ಳಬೇಕಾದದಲ್ಲಿ ಸೂಕ್ಷ್ಮ ಬುದ್ಧಿಯುಳ್ಳವರಾಗಿರಬೇಕು ಮತ್ತು ಸಹಾನುಭೂತಿಯಿಂದ ವೀಕ್ಷಿಸುವ ಗುಣ ಹೊಂದಿರ ಬೇಕು. ಅದಿಲ್ಲದೇ ಹೋದಾಗ ಇಂಥ ಸಂಗತಿಗಳು ಘಟಿಸುತ್ತವೆ.

2015ರಲ್ಲಿ ದೆಹಲಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ದೊಡ್ಡ ಕೋಲಾಹಲವನ್ನು ಸೃಷ್ಟಿಸಲಾಯಿತು. ಬಿಜೆಪಿ ತನ್ನ ತೆಕ್ಕೆಗೆ ತನ್ನ ಪಾಲಿನ ಬಹುಪಾಲು ಮತವನ್ನು ಪಡೆದುಕೊಂಡಿದ್ದರೂ, ಪಕ್ಷವು ಸಂಘ ಪರಿವಾರದ ಸಂಪೂರ್ಣ ಬೆಂಬಲವನ್ನು ಪಡೆದು ಕೊಳ್ಳುವಲ್ಲಿ ವಿಫಲವಾಯಿತು ಎಂಬೆಲ್ಲಾಾ ಆರೋಪಗಳನ್ನು ಮಾಡಲಾಯಿತು. ಆದರೆ ಕೇವಲ 8 ತಿಂಗಳ ಇದೇ ನಗರದಲ್ಲಿ ಬಿಜೆಪಿ ಎಲ್ಲ 7 ಲೋಕಸಭಾ ಸ್ಥಾನಗಳನ್ನು ಭಾರಿ ಬಹುಮತದಿಂದ ಗೆದ್ದುಕೊಂಡಿತು ಎಂಬುದನ್ನು ಟೀಕಾಕಾರರು ಮರೆತು ಬಿಟ್ಟಿದ್ದರು. ಇಲ್ಲಿ ಬಿಜೆಪಿಯ ಗೆಲುವನ್ನು ಕಡೆಗಣಿಸಿ, ಕೇವಲ ಸೋಲನ್ನು ವೈಭವೀಕರಿಸುವ ಕೆಲಸ ಮಾಡಲಾಯಿತು. ಹಣೆಬರಹವನ್ನು ಪ್ರಶ್ನಿಸಲಾಗುತ್ತಿದ್ದ ನರೇಂದ್ರ ಮೋದಿ ಇಲ್ಲಿ ಅಭ್ಯರ್ಥಿಯಾಗಿರಲಿಲ್ಲ.

ಕಳೆದೊಂದು ಶತಮಾನದ ಅವಧಿಯಲ್ಲಿ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್‌ನ ಸಿದ್ದಾಂತವನ್ನು ವಿರೋಧಿಸುವ ಅಭಿಪ್ರಾಯ ಗಳು ಪ್ರಮುಖವಾಗಿ ಸ್ಥಾನ ಪಡೆದುಕೊಂಡಿದ್ದರೆ, ಆ ಸ್ಥಾನವನ್ನು ಇದೀಗ ಬಿಜೆಪಿಯನ್ನು ವಿರೋಧಿಸುವ ಅಭಿಪ್ರಾಯಗಳು ಆಕ್ರಮಿಸಿಕೊಂಡಿವೆ. ಇನ್ನು 1977ರಲ್ಲಿ ಕಾಂಗ್ರೆಸ್ ವಿರುದ್ಧ ಒಬ್ಬ ಅಭ್ಯರ್ಥಿಯ ಪರವಾಗಿ ವಿಪಕ್ಷಗಳ ಎಲ್ಲ ಮತಗಳು ಒಗ್ಗೂಡಿತ್ತು. ಅದಾದ ಬಳಿಕ ಮೊದಲ ಬಾರಿ ಎಂಬಂತೆ ಮೋದಿ ವಿರೋಧಿ ಮತಗಳೆಲ್ಲಾ ಅವರ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕಲು ಒಂದಾದವು. ಇದರ ಜತೆಗೆ ಆಮ್ ಆದ್ಮಿ ಪಕ್ಷದ ಉಚಿತ ನೀರು, ವಿದ್ಯುತ್, ವೈಫೈ ನೀಡುವ ಆಫರ್‌ಗಳು ಆ ಪಕ್ಷದ ಗೆಲುವಿಗೆ ಕಾರ ಣವಾಯಿತು. ಜತೆಗೆ ಮೋದಿಗೆ ಮತ ಹಾಕುವ ಒಂದು ವರ್ಗ ಕೂಡ ಆಪ್‌ಗೆ ತನ್ನ ಮತ ಚಲಾಯಿಸಿತು.

ವಿಧಾನಸಭಾ ಚುನಾವಣೆಗಳಲ್ಲಿನ ಗೆಲುವು: ಅಧಿಕಾರಕ್ಕೆ ಬಂದ ಮೊದಲ 9 ತಿಂಗಳಲ್ಲಿ 4 ರಾಜ್ಯಗಳ ವಿಧಾನಸಭಾ ಚುನಾವಣೆ ಯನ್ನು ಬಿಜೆಪಿ ಗೆದ್ದುಕೊಂಡಿತು. ಅವುಗಳೆಂದರೆ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರ. ಇನ್ನು ಸೋತಿದ್ದು ಒಂದೇ ರಾಜ್ಯ, ಅದು ದೆಹಲಿ. ಹೀಗಿರುವಾಗ ರಾಷ್ಟ್ರೀಯ ರಾಜಕೀಯ ಪರಿಸ್ಥಿತಿ ಅವಲೋಕಿಸಲು ಕೇವಲ ದೆಹಲಿಯೊಂದರ ಫಲಿತಾಂಶ ಆಧಾರವಾಗಿಟ್ಟುಕೊಂಡರೆ ಸರಿಯಾಗದು.

ಇಲ್ಲಿ ಪ್ರಶ್ನೆಯೆಂದರೆ: ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಸರಕಾರದ ಕಾರ್ಯಸೂಚಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತೇ ಮತ್ತು ಆರ್‌ಎಸ್ ಎಸ್ ಮತ್ತು ಅದರ ಸಹಯೋಗಿ ಸಂಘಟನೆಗಳು ಸರಕಾರದ ಜತೆ ಹೊಂದಿವೆಯೆಂದು ಆರೋಪಿಸಲಾಗುತ್ತಿರುವ ಭಿನ್ನಾಭಿಪ್ರಾಯಗಳು, ಮೋದಿ ಸರಕಾರದ ಉತ್ತಮ ಆಡಳಿತದ ಕನಸಿಗೆ ಅಡ್ಡಿಯಾಗಿದೆಯೇ
ಎಂಬುದು.

ಈ ರೀತಿಯ ತಪ್ಪು ತಿಳಿವಳಿಕೆಗಳೇ, ಬಿಜೆಪಿಯ ರಾಜಕೀಯದಲ್ಲಿ ಆರ್‌ಎಸ್‌ಎಸ್‌ನ ಮಧ್ಯಪ್ರವೇಶ ಮತ್ತು ಬಿಜೆಪಿ ಸರಕಾರದ ನಿತ್ಯದ ಕೆಲಸಗಳಲ್ಲಿ ಪಾಲುಗಾರಿಕೆಯ ಕುರಿತು ತಪ್ಪು ಅಭಿಪ್ರಾಯವನ್ನು ರೂಪಿಸುತ್ತಿದೆ. ಆರ್‌ಎಸ್‌ಎಸ್ ಬಿಜೆಪಿಯನ್ನು ಎಂದಿಗೂ ನಿಯಂತ್ರಿಸುವುದಿಲ್ಲ. ಜತೆಗೆ ತನ್ನ ಸಹ ಸಂಘಟನೆಗಳ ಸಣ್ಣಪುಟ್ಟ ವ್ಯವಹಾರದಲ್ಲೂ ತಲೆಹಾಕುವುದಿಲ್ಲ. ಪ್ರತಿಯೊಂದು ಸಂಘಟನೆ ಕೂಡ ತನ್ನದೇ ಆದ ಸ್ವಾಯತ್ತ ಮತ್ತು ಸೈದ್ದಾಂತಿಕವಾಗಿ ಒಂದೇ ನಿಲುವುಗಳನ್ನು ಹೊಂದಿರುವ
ಇಷ್ಟು ದೊಡ್ಡ ಸಂಘಟನೆಗಳ ಕಾರ್ಯಶೈಲಿಯನ್ನು ಅರ್ಥ ಮಾಡಿಕೊಳ್ಳುವುದು ಹೊರಗಿನ ವ್ಯಕ್ತಿಗಳಿಗೆ ಅಷ್ಟು ಸುಲಭವಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೂ ಸೇರಿದಂತೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಕುರಿತು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯ ಹಿಂದಿನ ಚೈತನ್ಯವೆಂದರೆ ಪರಮ ವೈಭವದ ಭಾರತದ ನಿರ್ಮಾಣ.
ಇಂಥದ್ದೊಂದು ಧ್ಯೇಯೋದ್ದೇಶವನ್ನು ಸಾಕಾರಗೊಳಿಸಲು ಆರ್‌ಎಸ್‌ಎಸ್ ಕೂಡ ಕಟಿಬದ್ಧವಾಗಿದೆ ಎಂಬುದನ್ನು ಯಾರೂ ಮರೆಯಬಾರದು.

ಮೋದಿ ಅವರ 2014ರ ಚುನಾವಣಾ ಪ್ರಚಾರವು ಸಮಕಾಲೀನ ರಾಜಕೀಯ ಚರ್ಚೆಯ ರೂಪುರೇಷೆಯನ್ನು ಬದಲಿಸಿತು, ಇದು ಕೂಡ ಇದೇ ಆಲೋಚನೆಗಳಿಂದ ಹೊರಹೊಮ್ಮಿದ್ದು, ಮೋದಿ ಅವರ ಚುನಾವಣಾ ಭಾಷಣಗಳು  ಅವರ ಟೀಕಾಕಾರನ್ನು ಬಹುವಾಗಿ ನಿರಾಸೆಗೊಳಿದ್ದವು. ಕಾರಣ ಟೀಕಾಕಾರಿಗೆ ಬೇಕಾದ  ವಸ್ತು ವಿಷಯವನ್ನು ಮೋದಿ ಅವರು ನೀಡಲಿಲ್ಲ.
ರಾಮಜನ್ಮಭೂಮಿ, ಸಂವಿಧಾನದ 370ನೇ ವಿಧಿ, ಏಕರೂಪ ನಾಗರಿಕ ಸಂಹಿತೆ ಮತ್ತಿತರ ವಿಷಯಗಳ ಬಗ್ಗೆ ಮೋದಿ ಅವರು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯಿಂದ ಚಾಲನೆ ಪಡೆದುಕೊಳ್ಳುವ, ಅಭಿವೃದ್ಧಿ ಪಥದ 21ನೇ ಶತಮಾನದ ಆಧುನಿಕ ಭಾರತದ ಮುನ್ನೋಟವನ್ನು ದೇಶದ ಜನರ ಮುಂದೆ ಹರವಿದರು. ಇದೇ ದೇಶಾದ್ಯಂತ ಮೋದಿ ಮೇನಿಯಾ ಹರಡಲು ಕಾರಣವಾದ ಪ್ರಮುಖ ಅಂಶ. ಮೋದಿ ಅವರ ಈ ಯೋಜನೆಗಳಿಗೆ ಸಂಘ ಪರಿವಾರ ತನ್ನ ಪುರ್ಣ ಬೆಂಬಲ ನೀಡಿತ್ತು.

ಆದರೆ ಕಾರ್ಮಿಕ, ಶೈಕ್ಷಣಿಕ ಮತ್ತು ರೈತರ ಜತೆ ಇರುವ ಸಂಘಟನೆಗಳು ತಮ್ಮದೇ ಆದ ಪ್ರತ್ಯೇಕ ವಲಯವಾರು ಆದ್ಯತೆಗಳನ್ನು ಹೊಂದಿದ್ದವು. ಇಂಥ ಸಂಘಟನೆಗಳು ತಾವು ಪ್ರತಿನಿಧಿಸುವ ವಲಯಗಳುಎದುರಿಸುವ ಸಮಸ್ಯೆೆಯನ್ನು ಆಡಳಿತ ವ್ಯವಸ್ಥೆೆ
ಮುಂದೆ ಮಂಡಿಸಿ ಅದಕ್ಕೆೆ ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದು ಸಹಜ ಪ್ರಕ್ರಿಯೆಯೇ ಸರಿ. ಆದರೆ ಒಟ್ಟಾರೆ ಮೂಲ ಗುರಿಯನ್ನು ಯಾರೂ ಬದಿಗೊತ್ತಲಿಲ್ಲ ಎಂದು ಎಲ್ಲರೂ ಗಮನಿಸಬೇಕು. ಬಿಜೆಪಿ ತನ್ನ ಜಾಲವನ್ನು
ವಿಸ್ತರಿಸುವ ಮೂಲಕ ಇನ್ನಷ್ಟು ಪ್ರದೇಶಗಳನ್ನು ತಲುಪುವ ಯತ್ನ ಮಾಡುತ್ತಿದೆ. ಮತ್ತು ಹೆಚ್ಚಿನ ಸಂಖ್ಯೆೆಯ ಜನರನ್ನು ಸಂತುಷ್ಟವಾಗಿಸಲು ಯತ್ನಿಸುತ್ತಿದೆ.

ಈ ಯತ್ನದಲ್ಲಿ ಅದು ಸಂಘ ಪರಿವಾರದ ಪೂರ್ಣ ಬೆಂಬಲವನ್ನು ಹೊಂದಿದೆ.