ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
1991ರಲ್ಲಿ ಭಾರತದಲ್ಲಿ ಉಂಟಾಗಿದ್ದಂತಹ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಲಿ ಎದುರಿಸಲು ನೂತನ ಆರ್ಥಿಕ ನೀತಿಗಳನ್ನು ಜಾರಿಗೆ ತಂದದ್ದು ಅಂದಿನ ವಿತ್ತ ಸಚಿವ ಮನಮೋಹನ್ ಸಿಂಗ್ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ನೀತಿಗಳನ್ನು ಜಾರಿಗೆ ತರುವ ಮೂಲಕ ಭಾರತದ ಆರ್ಥಿಕತೆ ಯನ್ನು ಜಗತ್ತಿನ ಮುಂದೆ ತೆರೆದುಕೊಳ್ಳುವಂತೆ ಮಾಡಿದ್ದರು. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಯಿತು, ವಿದೇಶಿ ನೇರ ಬಂಡವಾಳ ಭಾರತಕ್ಕೆ ಹರಿದು ಬರಲು ಪ್ರಾರಂಭವಾಯಿತು.
ನಂತರ ಭಾರತ ಬೆಳೆದದ್ದು ಇತಿಹಾಸ, ಆದರೆ 1991 ರಲ್ಲಿ ದೇಶದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರು ಎಂಬ ಚರ್ಚೆ ಆಗುವುದೇ ಇಲ್ಲ, ಸ್ವಾತಂತ್ರ್ಯಾ ನಂತರ 40 ವರ್ಷಗಳ ಕಾಲ ಕೇಂದ್ರ ಮತ್ತು ದೇಶದ ಅನೇಕ ರಾಜ್ಯ ಗಳಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸಿತ್ತು. ಸುಮಾರು ನಾಲ್ಕು ದಶಕಗಳ ಕಾಲ ಆಡಳಿತ ನಡೆಸಿ 1991ರಲ್ಲಿ ದೇಶವನ್ನು ದಿವಾಳಿಯಾಗುವ ಪರಿಸ್ಥಿತಿಗೆ ತಂದಿದ್ದರು. ಸ್ವಾತಂತ್ರ ನಂತರದ ಸುವರ್ಣ ಯುಗದಲ್ಲಿ ದೂರದೃಷ್ಟಿಯ ಚಿಂತನೆಗಳಿಲ್ಲದ ಆಡಳಿತವನ್ನು ಕಾಂಗ್ರೆಸ್ ನಡೆಸುತ್ತಿತ್ತು. ದೇಶದ ಜೊತೆಗೆ ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳಿಗೂ ಸರಿಯಾದ ಸೂಚನೆಗಳಿಲ್ಲದೆ ಹಲವು ರಾಜ್ಯಗಳೂ ಸಹ ದೂರದೃಷ್ಟಿಯ ಅಭಿವೃದ್ಧಿ ಪೂರಕ ನೀತಿಗಳನ್ನು ರೂಪಿಸು ವಲ್ಲಿ ವಿಫಲವಾಗಿದ್ದವು. ಕಾಂಗ್ರೆಸ್ ಪಕ್ಷಕ್ಕೆ ತನ್ನ ರಾಜಕೀಯ ಎದುರಾಳಿಯನ್ನು ಅಭಿವೃದ್ಧಿಯ ವಿಷಯ ಗಳನ್ನು ಮುಂದಿಟ್ಟುಕೊಂಡು ಸೋಲಿಸಲು ಸಾಧ್ಯವಿಲ್ಲ.
ಸತತ ಸೋಲುಗಳಿಂದ ಕೆಂಗೆಟ್ಟಿದ್ದ ಪಕ್ಷಕ್ಕೆ ಮತ್ತದೇ ಇಂದಿರಾ ಗಾಂಧಿಯ 1971 ರ ’ಗರೀಬಿ ಹಠಾವೋ’ ತಂತ್ರವನ್ನು
ಮುಂದಿಟ್ಟುಕೊಂಡು ಜನರಿಗೆ ಉಚಿತ ಘೋಷಣೆಗಳ ಆಮಿಷಗಳನ್ನೊಡ್ಡಿ 2024 ರ ಚುನಾವಣೆಗೆ ಹೊರಟಿತ್ತು.
1947 ರಿಂದ 1991 ರ ನಡುವೆ ದೇಶದಲ್ಲಿ ಲೈಸನ್ಸ್ ರಾಜ ಜಾರಿಯಲ್ಲಿತ್ತು, ಒಂದು ಸಣ್ಣ ಕಾರ್ಖಾನೆ ಸ್ಥಾಪಿಸುವುದು
ಕಷ್ಟಕರವಾಗಿತ್ತು. ವಿದೇಶಿ ಬಂಡವಾಳ ಭಾರತಕ್ಕೆ ಹರಿದು ಬರಬೇಕಾದರೆ ನೂರಾರು ಷರತ್ತುಗಳಿದ್ದವು, ವಿದೇಶದಲ್ಲಿ
ಭಾರತೀಯರು ವಿಽವಶರಾದರೆ ಅಲ್ಲಿಂದ ಅವರ ಮೃತದೇಹವನ್ನು ಭಾರತಕ್ಕೆ ತರಲು ವಾರಗಟ್ಟಲೆ ಸಮಯ ಬೇಕಾಗುತ್ತಿತ್ತು. ಭಾರತದ ಅಭಿವೃದ್ಧಿಯ ನೀತಿಯನ್ನು ಪಂಜರದೊಳಗಿನ ಗಿಳಿಯಂತೆ ಕೂಡಿ ಹಾಕಲಾಗಿತ್ತು.
ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ಆಡಳಿತದಲ್ಲಿ ದೂರದೃಷ್ಟಿಯ ಯೋಜನೆಗಳೇ ಕಾಣಲಿಲ್ಲ. ಕೇವಲ ಮತ ಬ್ಯಾಂಕ್ ಓಲೈಕೆಯ ಯೋಜನೆಗಳನ್ನು ಮುನ್ನೆಲೆಗೆ ತಂದು ದೇಶವನ್ನು ಅಳುತ್ತಿದ್ದರು. 1991 ರಲ್ಲಿ ಮನಮೋಹನ್ ಸಿಂಗ್ ವಿತ್ತಸಚಿವರಾಗುವ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದಾಗ ನೀಡಿದ್ದ ಸಲಹೆಗಳನ್ನು ಇಂದಿರಾ ಗಾಂಧಿ ಪರಿಗಣಿಸಿರಲಿಲ್ಲ.
1986 ರಲ್ಲಿ ಮನ್ ಮೋಹನ್ ಸಿಂಗ್ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು, ಅವರು ಅಂದು ನೀಡಿದ್ದ ಸಲಹೆಗಳನ್ನು ರಾಜೀವ್ ಗಾಂಧಿ ಸ್ವೀಕರಿಸಿರಲಿಲ್ಲ. ಮನಮೋಹನ್ ಸಿಂಗ್ ವಿಧಿವಶರಾದ ನಂತರ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡುವ ಕಾಂಗ್ರೆಸ್ ಪಕ್ಷ, ಅವರಿಗೆ ಮಾಡಿದ್ದ ಅವಮಾನದ ದೊಡ್ಡ ಪಟ್ಟಿ ಇದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹರಿದುಹಾಕುವ ಮೂಲಕ ಅವರಿಗೆ ಅವಮಾನ ಮಾಡಿದ್ದರು. ನೆಹರು ಕುಟುಂಬ ಸುಮಾರು ನಾಲ್ಕು ದಶಕಗಳ ಕಾಲ ದೇಶದ ಆಡಳಿತ ನಡೆಸಿ, ಭಾರತವನ್ನು 1991 ರಲ್ಲಿ ದಿವಾಳಿ ಹಂತಕ್ಕೆ ಕೊಂಡೊಯ್ದಾಗ ಅವರ ಕುಟುಂಬದ ಹೊರಗಿನವರ ಸಾರಥ್ಯ ಕಾಂಗ್ರೆಸ್ಸಿಗೆ ಬೇಕಿತ್ತು. ಆಗ ಅವರ ಕಣ್ಣಿಗೆ ಬಿದ್ದಿದ್ದು ಪಿ.ವಿ.ನರಸಿಂಹ ರಾವ್, ಅವರನ್ನು ರಾತ್ರೋ ರಾತ್ರಿ ಪ್ರಧಾನಿಯನ್ನಾಗಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿತ್ತು.
ನರಸಿಂಹರಾವ್ ಪ್ರಧಾನಿಯಾದಾಗ ಅವರ ಮುಂದೆ ದಿವಾಳಿಯಾಗಿದ್ದ ಭಾರತದ ಆರ್ಥಿಕತೆ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ, ಆಗ ಅವರ ಕಣ್ಣಿಗೆ ಬಿದ್ದದ್ದು ಮನಮೋಹನ್ ಸಿಂಗ್. ತಮ್ಮ ಆಡಳಿತದಲ್ಲಿ ವಿತ್ತಸಚಿವರಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಪಿ.ವಿ.ನರಸಿಂಹ ರಾವ್. 1991 ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಯಾವ ಮಟ್ಟಕ್ಕೆ ಹದಗೆಟ್ಟಿತ್ತೆಂದರೆ, ದೇಶದ ವಿದೇಶಿ ವಿನಿಮಯ ಮೀಸಲು ಕೇವಲ ಎರಡು ವಾರಗಳಿಗೆ ಸಾಕಾಗುವಷ್ಟಿತ್ತು. ಪಂಜರದೊಳಗಿನ ಗಿಳಿಯಂತೆ ಭಾರತದ ಆರ್ಥಿಕತೆಯನ್ನು ಒಂದೆಡೆ ಬಂಧಿಸಿ ಹೊರ ಜಗತ್ತಿನ ಜೊತೆಗೆ ಅನಾಯಾಸವಾಗಿ ವ್ಯಾಪಾರ ವಿನಿಮಯ ಮಾಡುವ ನೀತಿಗಳ ಬಗ್ಗೆ ಚಿಂತಿಸದೇ, ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತ್ತು. 40 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿರಲಿಲ್ಲ, ನಗರ ಮತ್ತು ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಇರಲಿಲ್ಲ.
ಒಂದು ವರದಿಯ ಪ್ರಕಾರ 1997ರ ಹೊತ್ತಿಗೆ ಭಾರತದಲ್ಲಿ ಕೇವಲ 337 ಕಿಲೋಮೀಟರು ಚತುಷ್ಪಥ ಹೆದ್ದಾರಿ ಗಳಿದ್ದವಂತೆ. 1971 ರಲ್ಲಿ ಚುನಾವಣೆ ಎದುರಿಸಿದ ಇಂದಿರಾ ಗಾಂಧಿ ಗರೀಬಿ ಹಠಾವೋ ಎನ್ನುವ ಮೂಲಕ
ಜನರಿಂದ ಮತ ಕೇಳಿದ್ದರು. ಅಂದರೆ ತಮ್ಮ ತಂದೆ ನೆಹರು ಸುಮಾರು 20 ವರ್ಷಗಳ ಕಾಲ ಭಾರತದ ಪ್ರಧಾನಿ ಯಾಗಿದ್ದರೂ, ಬಡತನ ನಿರ್ಮೂಲನೆ ಮಾಡಲು ವಿಫಲರಾಗಿದ್ದರೆಂಬುದನ್ನು ಒಪ್ಪಿಕೊಂಡಂತಾಗಿತ್ತು. ತದನಂತರ ಸರ್ವಾಧಿಕಾರಿ ದೋರಣೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು,
ಜನರ ನೆನಪು ಕ್ಷಣಿಕವೆಂಬಂತೆ ಮತ್ತೊಮ್ಮೆ ಇಂದಿರಾ ಗಾಂಧಿ ಚುನಾಯಿತರಾಗಿ ದೇಶದ ಚುಕ್ಕಾಣಿ ಹಿಡಿದರು. ಮಿತಿಮೀರಿದ ಭ್ರಷ್ಟಾಚಾರ, ಅತಿಯಾದ ಮುಸಲ್ಮಾನರ ಓಲೈಕೆ, ಭಾರತದ ಭವಿಷ್ಯದ ಚಿಂತನೆಯಿಲ್ಲದ ನೀತಿಗಳು, ಬಡವರನ್ನು ಬಡವರನ್ನಾಗಿಸಿ ಆಳುವ ನೀತಿಗಳು, ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾದದ್ದು, ಭಾರತದ ಮೇಲಿನ ರಷ್ಯಾ ಅಮೆರಿಕ ನಡುವಣ ಶೀತಲ ಸಮರದ ಪರಿಣಾಮವನ್ನು ಎದುರಿಸು ವಲ್ಲಿ ವಿಫಲರಾದದ್ದು, ಜಾಗತಿಕ ಮಟ್ಟದಲ್ಲಿ ಭಾರತ ವ್ಯವಹರಿಸಲು ಇದ್ದಂತಹ ನಿರ್ಬಂಧಗಳು, ಮತಗಳಿಕೆ ಯನ್ನೇ ಗುರಿಯನ್ನಾಗಿಸಿ ಘೋಷಿಸಿದ್ದ ಯೋಜನೆಗಳು, ಹಲವು ತಪ್ಪುಗಳ ಪರಿಣಾಮ ಭಾರತದ ಆರ್ಥಿಕತೆಯನ್ನು 1991ರ ಹೊತ್ತಿಗೆ ಹದೆಗೆಡಿಸಿತ್ತು.
ಬಂಡವಾಳಶಾಹಿವಾದವಿಲ್ಲದೆ ಸಮಾಜವಾದವಿಲ್ಲವೆಂಬ ಸತ್ಯವನ್ನು ಅರಿಯಬೇಕು. ವೆನೆಜುಲಾ ದೇಶ ಜಗತ್ತಿನಲ್ಲಿ
ಅತೀ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿದ್ದ ಶ್ರೀಮಂತ ರಾಷ್ಟ್ರ. ತೈಲ ಮಾರಾಟದಿಂದ ಬರುತ್ತಿದ್ದಂತಹ ಹಣವನ್ನು ತನ್ನ ಪ್ರಜೆಗಳಿಗೆ ಬೇಕಾ ಬಿಟ್ಟಿ ಹಂಚಿ ಉಚಿತ ಘೋಷಣೆಗಳನ್ನು ಅನುಷ್ಠಾನ ಮಾಡಿ, ಕೊನೆಗೆ ದಿವಾಳಿ ಆಗಿದೆ. ಒಂದು ಕೆಜಿ ತರಕಾರಿ ತರಲು ಒಂದು ಮೂಟೆ ಹಣವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾ ದಂತಹ ಪರಿಸ್ಥಿತಿ ಅಲ್ಲಿನ ಜನರಿಗೆ ಎದುರಾಗಿತ್ತು. ಕೆಲಸವಿಲ್ಲದೆ ರಸ್ತೆಗಳಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗಿದೆ. ದರೋಡೆ, ಕಳ್ಳತನ ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
ಆಫ್ರಿಕಾದ ಜಿಂಬಾಬ್ವೆಯಲ್ಲಿ ಹಣದುಬ್ಬರ ದರ ಶೇ. 100000ರಷ್ಟು ದಾಟಿತ್ತು, ಇಂದಿಗೂ ಆ ದೇಶ ಚೇತರಿಸಿಕೊಳ್ಳ ಲಾಗಲಿಲ್ಲ. ಯೂರೋಪಿನ ಗ್ರೀಸ್ ದೇಶ ಹಲವು ಉಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರ ಪರಿಣಾಮ ಎರಡು ಬಾರಿ ದಿವಾಳಿ ಯಾಗಿತ್ತು. 35 ವರ್ಷದ ಯುವಕರು ಕೆಲಸಕ್ಕೆ ಹೋಗದೆ, ಸರಕಾರ ನೀಡುವ ಪಿಂಚಣಿಯನ್ನು ನಂಬಿಕೊಂಡು ಮನೆಯಲ್ಲಿ ಕುಳಿತಿದ್ದರು. ಐರೋಪ್ಯ ಒಕ್ಕೂಟದ ಇತರ ದೇಶಗಳು ಗ್ರೀಸ್ ದೇಶಕ್ಕೆ ಸಹಾಯ ಮಾಡಿದ್ದರ ಸಲುವಾಗಿ ಬಚಾವಾಗಿತ್ತು. ಇತ್ತೀಚಿನ ಶ್ರೀಲಂಕಾ ದೇಶದ ಪರಿಸ್ಥಿತಿ ಕಣ್ಣಮುಂದಿದೆ, ಜನರಿಗೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿರಲಿಲ್ಲ, ಶತ್ರು ದೇಶ ಪಾಕಿಸ್ತಾನದಲ್ಲಿ ಒಂದು ಕೆ.ಜಿ.ಅಕ್ಕಿ 160ರುಪಾಯಿಗೆ ತಲುಪಿದೆ.
1985 – 1991 ರ ಪಂಚವಾರ್ಷಿಕ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ರಾಜೀವ್
ಗಾಂೀ ಪ್ರಧಾನಮಂತ್ರಿಯಾಗಿದ್ದರು ಮತ್ತು ಮನಮೋಹನ್ ಸಿಂಗ್ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
ರಾಜೀವ್ ಗಾಂಧಿ ಯೋಜನಾ ಆಯೋಗದ ಸಭೆಯಲ್ಲಿ ಕೇವಲ ನಗರ ಪ್ರದೇಶಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ
ಮಾತ್ರ ಚರ್ಚಿಸುತ್ತಿದ್ದರು. ಸಭೆ ಮುಗಿದ ನಂತರ ಮನಮೋಹನ್ ಸಿಂಗ್ ಪ್ರಧಾನಿಗಳಿಗೆ ಭಾರತದ ಹಳ್ಳಿ ಪ್ರದೇಶ ಗಳನ್ನೂ ಸೇರಿಸಿಕೊಂಡು, ಎಲ್ಲ ಪ್ರದೇಶಗಳಿಗೂ ಸೀಮಿತವಾದ ಯೋಜನೆಗಳನ್ನು ರೂಪಿಸುವ ಅಗತ್ಯತೆ ಇದೆ ಯೆಂಬುದನ್ನು ಮನವರಿಕೆ ಮಾಡಿಕೊಟ್ಟರು. ಆದರೆ ಮುಂದೆ ನಡೆದ ಎರಡನೇ ಸಭೆಯಲ್ಲಿ ರಾಜೀವ್ ಗಾಂಧಿ ವರು
ಸಿಂಗ್ ಮಾತನ್ನು ಕೇಳಲಿಲ್ಲ, ಬದಲಿಗೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.
ನಂತರ ಪತ್ರಕರ್ತರ ಬಳಿ ಮಾತನಾಡುವಾಗ ರಾಜೀವ್ ಗಾಂಧಿಯವರು ಯೋಜನಾ ಆಯೋಗದ ಇಡೀ ತಂಡವನ್ನೇ ಬಂಚ್ ಆಫ್ ಜೋಕರ್ಸ್ ಎಂದು ಕರೆದಿದ್ದರು. ಮನಮೋಹನ್ ಸಿಂಗ್ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಆದಂತಹ ದೊಡ್ಡ ಅವಮಾನ ಇದಾಗಿತ್ತು, ತಮಗೆ ಅವಮಾನವಾದರೂ ಅದೇ ಕುಟುಂಬದ ಜೊತೆ ತಮ್ಮ ರಾಜಕೀಯ ಪಯಣವನ್ನು ಮುಂದುವರೆಸಿದ್ದರು.
ಇಂದಿರಾ ಗಾಂಧಿಯವರ ಆಡಳಿತದಲ್ಲಿ ಮನಮೋಹನ್ ಸಿಂಗ್ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು, ಇಂದಿರಾ
ಗಾಂಧಿಯವರಿಗೆ ತಮ್ಮ ಮಾತಿಗೆ ‘ಹೂಂ’ ಎನ್ನುವವರು ಮಾತ್ರ ಇಷ್ಟವಾಗುತ್ತಿದ್ದರು. ತಮ್ಮ ಸುತ್ತಮುತ್ತಲೂ ಹೊಗಳು ಭಟರನ್ನೇ ನೇಮಿಸಿಕೊಂಡಿದ್ದ ಇಂದಿರಾಗಾಂಧಿಯವರಿಗೆ ಮೂರನೆಯವರು ನೀಡುತ್ತಿದ್ದ ಸಲಹೆಗಳು ಇಷ್ಟವಾಗುತ್ತಿರಲಿಲ್ಲ.
ಅಧಿಕಾರದ ಹಪಹಪಿತನದಿಂದ ಸರ್ವಾಧಿಕಾರಿಯಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ಅವರ
ಮನಸ್ಥಿತಿಯ ಅನಾವರಣವಾಗಿತ್ತು. 1984 ರಲ್ಲಿ ಪಂಜಾಬಿನಲ್ಲಿ ನಡೆದಿದ್ದ ಸಿಖ್ಖರ ಮಾರಣಹೋಮದಲ್ಲಿ, ಸಿಖ್ಖರು
ಕಾಂಗ್ರೆಸ್ಸಿನ ವಿರುದ್ಧ ಆಕ್ರೋಶಗೊಂಡಿದ್ದರು. ಅವರ ಆಕ್ರೋಶವನ್ನು ತಣಿಸಲು ಮನಮೋಹನ್ ಸಿಂಗ್ ಅವರನ್ನು
ಕಾಂಗ್ರೆಸ್ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಿತ್ತು.
1991 ರಲ್ಲಿ ಉಂಟಾದಂತಹ ಆರ್ಥಿಕ ಕ್ರಾಂತಿಯ ಬಗ್ಗೆ ಮಾತ್ರ ಕಾಂಗ್ರೆಸ್ ತನ್ನ ಬೆನ್ನು ತಟ್ಟಿಕೊಳ್ಳುತ್ತದೆ, ಆದರೆ 1947 ರಿಂದ 1991 ರ ವರೆಗಿನ ನಾಲ್ಕು ದಶಕಗಳ ಕಾಲ ನೆಹರು ಕುಟುಂಬ ಭಾರತವನ್ನು ದಿವಾಳಿ ಮಾಡಿದ ಇತಿಹಾಸ ವನ್ನು ಮುಚ್ಚಿಡುತ್ತದೆ. ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ನೆಹರು ಕುಟುಂಬಸ್ಥರು ಕೇಳಿರಲಿಲ್ಲ, ಪಿ.ವಿ. ನರಸಿಂಹರಾವ್ ಪ್ರಧಾನಿಯಾದ ಬಳಿಕ ಮಾತ್ರ ಅವರ ಸಲಹೆಗಳನ್ನು ಕಾರ್ಯಗತ ಗೊಳಿಸಲಾಗಿತ್ತು.
ತಮ್ಮ ಆಡಳಿತಾವಧಿಯಲ್ಲಿ ಸತತವಾಗಿ ಮನಮೋಹನ್ ಸಿಂಗ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್, ಅವರ ಹೆಸರನ್ನು ತನ್ನ ಕುಟುಂಬ ಮಾಡಿದ ತಪ್ಪನ್ನು ಮರೆಮಾಚಲು ಬಳಸಿಕೊಂಡಿದೆ. 2004 ರಿಂದ 2014 ರ ನಡುವಿನ ಆಡಳಿತದಲ್ಲಿ ಹೆಸರಿಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು, ಆದರೆ ಸೋನಿಯಾ ಗಾಂಧಿಯವರ ಕೈಯಲ್ಲಿ ಸಂಪೂರ್ಣ ಆಡಳಿತವಿತ್ತು. ಆರ್ಥಿಕ ಉದಾರೀಕರಣದ ನೀತಿಗಳನ್ನು 1991 ರ ಮೊದಲೇ, ನೆಹರು ಕುಟುಂಬದವರು ಜಾರಿಗೆ ತಂದಿದ್ದರೆ, 1991 ರಲ್ಲಿ ಭಾರತ ದಿವಾಳಿಯಾಗುತ್ತಿರಲಿಲ್ಲ.
ಸಮಾಜವಾದದ ಹೆಸರಿನಲ್ಲಿ ಸಾವಿರಾರು ಕೋಟಿ ಆಸ್ತಿಯ ಒಡೆಯರಾದರೆ ಹೊರತು, ಬಡತನ ನಿರ್ಮೂಲನೆ
ಮಾಡಲಿಲ್ಲ.1991 ರ ಆರ್ಥಿಕ ಉದಾರೀಕರಣದ ನೀತಿಯ ಚರ್ಚೆಯ ಜೊತೆಗೆ, ಭಾರತ ದಿವಾಳಿಯಾಡಲು ಕಾರಣ ವಾದ ದೂರದೃಷ್ಟಿಯ ಆಡಳಿತದ ಕೊರತೆಯ ಚರ್ಚೆ ಕೂಡ ಆಗಬೇಕಿದೆ.
ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್ ಹಿಟ್ ಮ್ಯಾನ್ʼ