ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
ಅಮೆರಿವನ್ನು ಕಟ್ಟಿದ ಬಹುತೇಕರು ಹೊರಗಿನಿಂದ ಬಂದವರು, ಮುನ್ನೂರು ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸ ವಿರುವ ಅಮೆರಿಕ ಸತತವಾಗಿ ಐದು ದಶಕಗಳಿಂದ ವಿಶ್ವದ ದೊಡ್ಡಣ್ಣನ ಸ್ಥಾನವನ್ನು ಉಳಿಸಿಕೊಂಡಿದೆ. ಅಮೆರಿಕದ ಅಭಿವೃದ್ಧಿಯ ವೇಗಕ್ಕೆ ಇಂಧನ ಸುರಿದವರು ಜಗತ್ತಿನ ಅನೇಕ ದೇಶಗಳಿಂದ ಬಂದು ಅಲ್ಲಿ ನೆಲೆಸಿರುವ ವಲಸಿಗ ರೆಂದರೆ ತಪ್ಪಿಲ್ಲ. ಅಮೆರಿಕದ ಆಯಕಟ್ಟಿನ ಸ್ಥಳಗಳಲ್ಲಿ ತಳವೂರಿ ದೊಡ್ಡ ದೊಡ್ಡ ನಿರ್ಧಾರ ತೆಗೆದು ಕೊಳ್ಳುವವರು ಯಹೂದಿಗಳು ಅಥವಾ ಭಾರತೀಯರು. ಅಮೆರಿಕದ ಪ್ರಮುಖ ವಿಜ್ಞಾನಿಗಳು, ವಿಶ್ವವಿದ್ಯಾಲಯದ ಕುಲಪತಿಗಳು, ಪ್ರಾದ್ಯಾಪಕರು, ವೈದ್ಯರು, ಕ್ಯಾಬಿನೆಟ್ ಸದಸ್ಯರು ಯಹೂದಿಗಳು ಅಥವಾ ಭಾರತೀಯರು.
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಂತೂ ಭಾರತೀಯರದ್ದೇ ದರ್ಬಾರು. ಇತ್ತೀಚಿಗೆ ನಡೆದ ಅಮೆರಿಕದ
ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ ಟ್ರಂಪ್ ಅಭೂತಪೂರ್ವ ಗೆಲುವಿನೊಂದಿಗೆ ಎರಡನೇ ಬಾರಿಗೆ
ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಗೆಲುವಿನ ಹಿಂದೆ ಅನಿವಾಸಿ ಭಾರತೀಯರ ಕೊಡುಗೆ ಬಹಳಷ್ಟಿದೆ. ಹಲವು ದಶಕಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿ ನೆಲೆ ಕಂಡುಕೊಂಡಿರುವ ಭಾರತೀಯರ ಬಹುದೊಡ್ಡ ಮತಬ್ಯಾಂಕ್ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಕೈ ಹಿಡಿದಿದೆ. ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರೀಯತೆ ಪ್ರಮುಖ ವಿಷಯವಾಗಿತ್ತು, ಇದರ ಜೊತೆಗೆ ಅನಧಿಕೃತವಾಗಿ ಅಮೆರಿಕದಲ್ಲಿ ನೆಲೆಸಿರುವ ವಲಸಿಗರನ್ನು ಮುಲಾಜಿಲ್ಲದೆ ದೇಶದಿಂದ ಓಡಿಸಿ ಸ್ಥಳೀಯರಿಗೆ ಕೆಲಸದ ವಿಷಯದಲ್ಲಿ ಆದ್ಯತೆ ನೀಡುವುದಾಗಿತ್ತು. ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯದೊಂದಿಗೆ ಟ್ರಂಪ್ ಚುನಾವಣೆಯನ್ನು ಎದುರಿಸಿದ್ದರು.
ಮೂಲತಃ ಬಂಡವಾಳಶಾಹಿ ವಾದವನ್ನು ಬೆಂಬಲಿಸುವ ಡೊನಾಲ್ಡ್ ಟ್ರಂಪ್ ಬಂಡವಾಳ ಶಾಹಿವಾದವಿಲ್ಲದೆ ಸಮಾಜವಾದವಿಲ್ಲವೆಂಬ ತರ್ಕವನ್ನು ನಂಬಿರುವವರು. ಆಸ್ತಿಯನ್ನು ಹಂಚಿಕೆ ಮಾಡುವದರ ಜೊತೆಗೆ ಆಸ್ತಿಯ ಉತ್ಪಾದನೆಯೂ ಆಗಬೇಕಲ್ಲ? ಡೊನಾಲ್ಡ್ ಟ್ರಂಪ್ ಗೆದ್ದ ನಂತರ ತಮ್ಮ ಸಂಪುಟದಲ್ಲಿ ಭಾರತೀಯರಿಗೆ ಹೆಚ್ಚಿನ ಜವಾಬ್ದಾರಿ ನೀಡುತ್ತಿದ್ದಾರೆ.
ತಮಿಳುನಾಡು ಮೂಲದ ವಿವೇಕ್ ರಾಮಸ್ವಾಮಿಯನ್ನು ಸರಕಾರದ ಆಡಳಿತ ದಕ್ಷತೆಯ ಪರಿವೀಕ್ಷಣೆಗೆ ನೇಮಿಸಿದ್ದಾರೆ. ಶ್ರೀರಾಮ್ ಕೃಷ್ಣನ್ ಅವರನ್ನು ಕೃತಕ ಬುದ್ಧಿಮತ್ತೆಯ ನೀತಿಗಳನ್ನು ರೂಪಿಸುವ ಹಿರಿಯ ಸಲಹೆಗಾರರನ್ನಾಗಿ ನೇಮಿಸಿದ್ದಾರೆ.
ಹರ್ಮೀತ್ ಧಿಲ್ಲನ್ ಅವರನ್ನು ನಾಗರೀಕ ಹಕ್ಕುಗಳ ವಿಭಾಗಕ್ಕೆ ನೇಮಿಸಿದ್ದಾರೆ. ಜೇ ಭಟ್ಟಾಚಾಯರ್ ಅವರನ್ನು ರಾಷ್ಟ್ರೀಯ ಅರೋಗ್ಯ ಸಂಸ್ಥೆಯ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ. ಕಾಶ್ ಪಟೇಲ್ ಅವರನ್ನು ಅಮೆರಿಕದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆಯಾದ ’ಊಆಐ’ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಹೆಚ್ಚು ಚರ್ಚೆಯಲ್ಲಿದ್ದ ‘ತುಳಸಿ ಗಬ್ಬಾರ್ಡ್’ ಅವರನ್ನು ಮತ್ತೊಂದು ಪ್ರಮುಖ ಸಂಸ್ಥೆಯಾದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ತುಳಸಿ ಹುಟ್ಟಿನಿಂದ ಭಾರತೀಯರಲ್ಲ, ಆದರೆ ಅವರ ತಾಯಿಯ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿ
ಹಿಂದೂ ಧರ್ಮವನ್ನು ಪಾಲಿಸುವ ಕುಟುಂಬಕ್ಕೆ ಸೇರಿದವರು. ಇಸ್ಕಾನ್ ಸಂಸ್ಥೆಯನ್ನು ಸಂಪೂರ್ಣ ಅನುಯಾಯಿ
ಯಾಗಿರುವ ತುಳಸಿಯವರಿಗೆ ಭಗವದ್ಗೀತೆಯ ಮೇಲೆ ಅಪಾರ ಪ್ರೀತಿ, ತಮ್ಮ ಜೀವನದಲ್ಲಿ ಶ್ರೀಕೃಷ್ಣ ಮತ್ತು
ಭಗವದ್ಗೀತೆ ದೊಡ್ಡ ಪರಿಣಾಮ ಬೀರಿದೆಯೆಂದು ಹೇಳಿಕೊಂಡಿದ್ದಾರೆ. ಬಾಂಗ್ಲಾ ದೇಶದಲ್ಲಿ ಇಸ್ಕಾನ್ ಸಂಸ್ಥೆಯ
ಮೇಲೆ ಜಿಹಾದಿಗಳು ನಡೆಸಿದ್ದ ದಾಳಿಯನ್ನು ಖಂಡಿಸಿದ್ದರು.
ಇವರನ್ನು ಗುಪ್ತಚರ ಇಲಾ ಖೆಯ ನಿರ್ದೇಶಕರನ್ನಾಗಿ ಟ್ರಂಪ್ ನೇಮಿಸಿರುವುದು ಬಾಂಗ್ಲಾದೇಶಕ್ಕೆ ಪ್ರಚೋದನೆ
ನೀಡುತ್ತಿರುವವರಿಗೆ ಉರಿ ಬಿದ್ದಂತಾಗಿದೆ. ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿ ದಾಕ್ಷಣ, ಬಾಂಗ್ಲಾದಲ್ಲಿ ಇಸ್ಕಾನ್ ಮತ್ತು ಹಿಂದೂಗಳ ಮೇಲೆ ನಡೆಯುತ್ತಿವ ದಾಳಿಯನ್ನು ಮತ್ತಷ್ಟು ಗಂಭೀರವಾಗಿ ಅಮೆರಿಕ ತೆಗೆದುಕೊಳ್ಳುವುದು ಶತಸಿದ್ಧವೆಂದು ಹೇಳಲಾಗುತ್ತಿದೆ.
ತುಳಸಿ ಗಬ್ಬಾರ್ಡ್ ಅಮೆರಿಕ ಕಾಂಗ್ರೆಸ್ಸಿನ ಮೊದಲ ಹಿಂದೂ ಸದಸ್ಯರೆಂಬುದು ಗಮನಿಸಬೇಕಾದ ಅಂಶ.
ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಜೀವನದ ಗುಣಮಟ್ಟದಲ್ಲಿ ಬಹಳಷ್ಟು ಚೇತರಿಕೆ ಕಂಡಿದೆ.
2019 ರ ಅಂಕಿ ಅಂಶಗಳ ಪ್ರಕಾರ ಅಮೆರಿಕದಲ್ಲಿ ನೆಲೆಸಿರುವ ವಲಸಿಗರ ಪೈಕಿ ಅತಿ ಹೆಚ್ಚಿನ ವಿದ್ಯಾವಂತರ ಪೈಕಿಯಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. 25 ವರ್ಷ ಮೇಲ್ಪಟ್ಟವರಲ್ಲಿನ ವಿದ್ಯಾವಂತರ ಪಟ್ಟಿಯಲ್ಲಿ ಶೇ.75 ರಷ್ಟು ಭಾರತೀಯರಿದ್ದಾರೆ. ಚೀನಾ, ಕೋರಿಯಾ ಮತ್ತು ಪಾಕಿಸ್ತಾನ ಮೂರೂ ದೇಶಗಳ ಸರಾಸರಿ ಕೇವಲ ಶೇ.57 ಮಾತ್ರ. ಇನ್ನು ಅಮೆರಿಕದಲ್ಲಿ ನೆಲೆಸಿರುವ ವಲಸಿಗರ ಸರಾಸರಿ ಆದಾಯವನ್ನು ನೋಡುವುದಾದರೆ, 2022 ರ ಅಂಕಿ ಅಂಶಗಳ ಪ್ರಕಾರ ಭಾರತೀಯರು 145000 ಅಮೆರಿಕನ್ ಡಾಲರ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿzರೆ. ಚೀನಾ ದೇಶದವರ ಸರಾಸರಿ ಆದಾಯ 82000 ಅಮೆರಿಕನ್ ಡಾಲರ್, ಸ್ಥಳೀಯಯಾಗಿ ಬಿಳಿಯರೆಂದು ಕರೆಯ ಲ್ಪಡುವವರ ಸರಾಸರಿ ಆದಾಯ 84280 ಅಮೆರಿಕನ್ ಡಾಲರ್. 2021-22 ರ ಅಂಕಿ ಅಂಶಗಳ ಪ್ರಕಾರ ಅಮೆರಿಕ ದಿಂದ ಭಾರತಕ್ಕೆ ಜಮೆಯಾಗುವ ಹಣದಲ್ಲಿ ಭಾರತೀಯರ ಪಾಲು ಶೇ.23 ರಷ್ಟಿದ್ದು, ಪ್ರಥಮ ಸ್ಥಾನದಲ್ಲಿದೆ.
ಅಮೆರಿಕದ ಆರ್ಥಿಕ ಪ್ರಗತಿಯ ಹಿಂದೆ ಭಾರತೀಯ ಕೊಡುಗೆ ಡೊನಾಲ್ಡ್ ಟ್ರಂಪ್ ಅವರಿಗೆ ಗೊತ್ತಿದೆ. ಹೆಚ್ಚಿನ ಭಾರತೀಯರು ಅಮೆರಿಕದಲ್ಲಿ ನೆಲೆಸಿ ಆ ದೇಶವನ್ನು ಉದ್ಧಾರ ಮಾಡುವ ಬದಲು ಭಾರತದಲ್ಲಿದ್ದಿದ್ದರೆ, ಭಾರತದ ಅಭಿವೃದ್ಧಿಗೆ ಸಹಕಾರಿ ಯಾಗುತ್ತಿತ್ತು. ಆದರೆ ಹಿಂದಿನ ಸರಕಾರಗಳ ಅವಧಿಯಲ್ಲಿ ಭಾರತದಲ್ಲಿ ಅವಕಾಶಗಳು
ಹೆಚ್ಚಿರಲಿಲ್ಲವೆಂಬುದು ಮತ್ತೊಂದು ಚರ್ಚೆಯ ವಿಷಯ.
ಅಮೆರಿಕದಲ್ಲಿನ ಬಡತನದಲ್ಲಿರುವ ವಲಸಿಗರ ಶೇಕಡಾ ವಾರಿನ ಅಂಕಿಅಂಶವನ್ನು ಗಮನಿಸುವುದಾದರೆ, ಭಾರತೀ
ಯರ ಪಾಲು ಶೇಕಡಾ 6 ರಷ್ಟಿದೆ. ಉಳಿದಂತೆ ಫಿಲಿ- ಶೇ.7, ಜಪಾನ್ ಶೇ.8, ಚೀನಾ ಶೇ.13, ಪಾಕಿಸ್ತಾನಿ ಶೇ.15
ಮತ್ತು ಬಾಂಗ್ಲಾದೇಶಿಗಳು ಶೇ.19% ರಷ್ಟಿದ್ದಾರೆ. ಕೆಲವೊಮ್ಮೆ ಏಜೆಂಟ್ ಮೂಲಕ ಲಕ್ಷಾಂತರ ರುಪಾಯಿ ಹಣ ನೀಡಿ
ಅಕ್ರಮವಾಗಿ ಅಮೆರಿಕ ದೇಶ ಪ್ರವೇಶಿಸಲು ಹೋಗಿ ಮೃತ ಪಟ್ಟಿರುವ ಘಟನೆಗಳೂ ನಡೆದಿವೆ, ಆದರೆ ಇತರ ದೇಶಗಳಿಗೆ ತಾಳೆ ಮಾಡಿ ನೋಡಿದರೆ ಭಾರತೀಯರು ಅಮೆರಿಕದಲ್ಲಿ ಉತ್ತಮ ಜೀವನ ನಡೆಸುತ್ತಿದ್ದಾರೆ.
ಅಮೆರಿಕದಲ್ಲಿ ಪ್ರಾರಂಭವಾಗಿರುವ ಅನೇಕ ‘ಸ್ಟಾರ್ಟ್ ಅಪ್’ಗಳ ಜನಕರು ಭಾರತೀಯರು, ಭಾರತೀಯರು 90
ಸ್ಟಾರ್ಟ್ ಅಪ್‌ಗಳ ಜನಕರಾಗಿದ್ದಾರೆ. ಇಸ್ರೇಲಿಗರು 52 ಸ್ಟಾರ್ಟ್ ಅಪ್‌ಗಳ ಜನಕರಾಗಿದ್ದರೆ. ಕೆನಡಾದವರು 42
ಸ್ಟಾರ್ಟ್ ಅಪ್ ಗಳ ಜನಕರಾಗಿದ್ದಾರೆ. ಜಗತ್ತಿನ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಭಾರತೀಯರ ಕೊಡುಗೆ
ಅಪಾರ. ಅಮೆರಿಕದ ದೊಡ್ಡ ದೊಡ್ಡ ಕಂಪನಿಗಳನ್ನು ಮುನ್ನಡೆಸುತ್ತಿರುವವರು ಭಾರತೀಯರು. ಸುಂದರ್ ಪಿಚೈ –
ಗೂಗಲ್ (ಆಲಬೆಟ), ಸತ್ಯ ನಡೆಲ್ಲ (ಮೈಕ್ರೋಸಾಫ್ಟ್), ಶಂತನು ನಾರಾಯಣ್ (ಆಡೋಬ), ಅರವಿಂದ್ ಕೃಷ್ಣ
(ಐಬಿಎಂ), ನೀಲ್ ಮೋಹನ್ (ಯೂಟ್ಯೂಬ್), ಥಾಮಸ್ ಕುರಿಯನ್ (ಗೂಗಲ್ ಕ್ಲೌಡ್).
ಜಗತ್ತಿನ ಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯದ ಮುಖ್ಯಸ್ಥ ಶ್ರೀಕಾಂತ್ ದಾರ್ತಾ ಭಾರತೀಯರು, ಅವರ ಹಿಂದಿದ್ದ ನಿತಿನ್ ನೋರಿ ಯಾ ಭಾರತೀಯ. ಅಮೆರಿಕಾದ ವೈದ್ಯಕೀಯ ವಲಯದಲ್ಲೂ ಅನಿವಾಸಿ ಭಾರತೀಯರ ಕೊಡುಗೆ ಬಹಳಷ್ಟಿದೆ, ವಿವೇಕ್ ಮೂರ್ತಿ 2021 ರಿಂದ ಅಮೆರಿಕದ ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿzರೆ. ಜೋ ಬೈಡೆನ್ ರಾಹುಲ್ ಗುಪ್ತಾ ಅವರನ್ನು ಅಮೆರಿಕದ ‘ರಾಷ್ಟ್ರೀಯ ಔಷದ ನಿಯಂತ್ರಣ ಮಂಡಳಿಯ’ ನಿರ್ದೇಶಕ ರನ್ನಾಗಿ ಮಾಡಿದ್ದಾರೆ. ಈ ಹಿಂದೆ ಅಮೆರಿಕದ ಅನೇಕ ಆಯಕಟ್ಟಿನ ಸ್ಥಳಗಳಲ್ಲಿ ಯಹೂದಿಗಳ ಸಂಖ್ಯೆ ಬಹಳಷ್ಟಿತ್ತು. ಅಮೆರಿಕ ಇಸ್ರೇಲ್ ಪರವಾಗಿ ಸದಾ ನಿಲ್ಲಲು ಮುಖ್ಯ ಕಾರಣ ಅಮೆರಿಕದ ಪ್ರಗತಿಗೆ ಅವರ ಕೊಡುಗೆ. ಯಹೂದಿಗಳು ಬುದ್ಧಿವಂತರು, ಸಾವಿರಾರು ವರ್ಷಗಳ ಇತಿಹಾಸವಿರುವ ಯಹೂದಿ ಧರ್ಮದ ಉಳಿವಿಗಾಗಿ ಇಸ್ಲಾಂ ದೇಶಗಳ ಮಧ್ಯದಲ್ಲಿ ಇಸ್ರೇಲ್ ದೇಶವನ್ನು ಕಟ್ಟಿ, ತಮ್ಮ ಉಳಿವಿಗಾಗಿ ಹಗಲಿರುಳು ಶ್ರಮಿಸಿ ಸೊನ್ನೆಯಿಂದ ದೇಶ ಕಟ್ಟಿದವರು.
ದಾಳಿಕೋರರಿಂದ ರಕ್ಷಣೆ ಪಡೆಯಲು ಅಮೆರಿಕದಲ್ಲಿ ನೆಲೆಸಿದ ಯಹೂದಿಗಳು, ಅಮೆರಿಕದ ಪ್ರಮುಖ ಆವಿಷ್ಕಾರ ಗಳಿಗೆ ಕಾರಣರಾದರು. ಕಂಪ್ಯೂಟರ್‌ಗಳಲ್ಲಿ ಬಳಸುವ ಚಿಪ್‌ಗಳನ್ನು ಮೊದಲು ಕಂಡು ಹಿಡಿದಿದ್ದು ಯಹೂದಿಗಳು, ವಿದ್ಯುತ್ ಚಾಲಿತ ವಾಹನಗಳನ್ನು ಮೊದಲು ಕಂಡು ಹಿಡಿದದ್ದು ಯಹೂದಿಗಳು. ಅಮೆರಿಕ ಯಹೂದಿಗಳ ಬುದ್ಧಿವಂತಿಕೆಯನ್ನು ಅಚ್ಚುಕಟ್ಟಾಗಿ ಬಳಸಿಕೊಂಡು, ಅವರ ಜನಾಂಗವನ್ನು ಕಾಪಾಡುವತ್ತ ಸದಾ ಕೆಲಸ ಮಾಡುತ್ತದೆ. ಅಮೆರಿಕದ ಪ್ರಮುಖ ನಿರ್ಧಾರಗಳ ಹಿಂದೆ ಯಹೂದಿಗಳ ಪಾತ್ರವಿದೆ.
ಯಹೂದಿಗಳ ಜಾಗವನ್ನು ಭಾರತೀಯರು ತುಂಬುತ್ತಿರುವ ವಿಷಯ ಅಮೆರಿಕದಲ್ಲಿ ಸದ್ಯದಲ್ಲಿ ಚರ್ಚೆಯಲ್ಲಿರುವ
ವಿಷಯ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ತಮ್ಮ ಸಂಪುಟದಲ್ಲಿನ ಆಯಕಟ್ಟಿನ ಜಾಗಗಳಿಗೆ ಅನಿವಾಸಿ ಭಾರತೀಯರನ್ನು ನೇಮಕ ಮಾಡಿದ್ದಾರೆ. ಅಮೆರಿಕದ ಅನೇಕ ಆಯಕಟ್ಟಿನ ಜಾಗಗಳಲ್ಲಿ ಅನಿವಾಸಿ ಭಾರತೀಯರು ಅಮೆರಿಕದ ಪರವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಕುಳಿತಿದ್ದಾರೆ. ಡೊನಾಲ್ಡ್ ಟ್ರಂಪ್ ಒಂದೆಡೆ ‘ಮೇಕ್ ಅಮೇರಿಕಾ ಗ್ರೇಟ್ ಅಗೈನ್’ ಎಂದು ಹೇಳಿ, ಮತ್ತೊಂದೆಡೆ ಅನಿವಾಸಿ ಭಾರತೀಯರನ್ನು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಜಾಗಗಳಿಗೆ ನೇಮಕ ಮಾಡುತ್ತಿರುವುದು ಕೆಲವರಿಗೆ ಇಷ್ಟ ಆಗುತ್ತಿಲ್ಲ.
ಡೊನಾಲ್ಡ್ ಟ್ರಂಪ್ ಮುಂದಿನ ಐದು ವರ್ಷಗಳಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿ – ಸ್ಯಾನ್ ಫ್ರಾನ್ಸಿಸ್ಕೋಗೆ ಸಾವಿರಾರು ಬಿಳಿ ಕಾಲರ್ ವಲಸಿಗ ತಂತ್ರಜ್ಞಾನ ಪಂಡಿತರನ್ನು ಕರೆತಂದು, ಅಮೆರಿಕದ ಮೂಲ ಮಧ್ಯಮ
ವರ್ಗದವರ ಕೆಲಸ ಕಿತ್ತುಕೊಳ್ಳುತ್ತಾರೆಂಬುದು ಕೆಲವರ ಆರೋಪ. ಈ ಹಿಂದೆ ಮೆಕ್ಸಿಕೋದಿಂದ ಬಂದವರು ಅಮೆರಿಕದ ಕೆಳ ವರ್ಗದ ಕೆಲಸ ಕಿತ್ತುಕೊಂಡ ಹಾಗೆ, ಭಾರತೀಯರು ಮೂಲ ಅಮೆರಿಕದ ಮಧ್ಯಮವರ್ಗದ ಕೆಲಸಕ್ಕೆ ಕುತ್ತು ತರುತ್ತಾರೆಂದು ಕೆಲವರು ಹೇಳುತ್ತಿzರೆ. ಮತ್ತೆ ಕೆಲವರು ಮುಂದಿನ ಐದು ವರ್ಷ ‘ಭಾರತೀಯರು ನಡೆಸುವ ಅಮೆರಿಕವಾಗಲಿದೆ’ಎಂದು ಹೇಳಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ‘ಸೌತ್ ಆಫ್ರಿಕಾದ ಎಲಾನ್ ಮ, ತೈವಾನಿನ ಜೆನ್ಸೆನ್, ಭಾರತದ ಸತ್ಯ ನಡೆಲ್ಲಾ ಎಂದು ಯೋಚಿಸುವುದರ ಬದಲು ಇವರೆಲ್ಲರೂ ಚೀನಾ ಬದಲು ಅಮೆರಿಕಕ್ಕೆ ಬಂದು, ಅಮೆರಿಕದ ಪ್ರಗತಿಯ ಪಾಲುದಾರ ರಾಗಿದ್ದಾರೆ ಎಂದು ತಿರುಗೇಟು ನೀಡುತ್ತಿದ್ದಾರೆ. ಮತ್ತೆ ಕೆಲವರು ಅಮೆರಿಕವನ್ನು ಬಿಳಿ ಯೂರೋಪಿಯನ್ನರು ಕಟ್ಟಿದರು. ಭಾರತೀಯರು ಕಟ್ಟಿದ್ದಲ್ಲವೆಂದು ಹೇಳುತ್ತಿದ್ದಾರೆ. ಆದರೆ ಅಮೇರಿಕಾದಲ್ಲಿ ನೆಲೆಸಿರುವ ಅನೇಕ ಭಾರತೀಯರು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಮೇಲ್ಪಂತಿಯಲ್ಲಿ ಕೆಲಸ ಮಾಡುತ್ತಿರುವುದು ಗಮನಿಸ ಬೇಕಾದಂತಹ ಸಂಗತಿ.
ನೂತನವಾಗಿ ಟ್ರಂಪ್ ತಂಡದಲ್ಲಿ ಸ್ಥಾನ ಪಡೆದಿರುವ ‘ಶ್ರೀರಾಂ ಕೃಷ್ಣನ್’ ಬಗ್ಗೆಯಂತೂ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ. ಅವರ ಆಯ್ಕೆ ಅನೇಕ ಸ್ಥಳೀಯ ಅಮೆರಿಕನ್ನರ ಟೀಕೆಗೆ ಗುರಿಯಾಗಿದೆ, ಆದರೆ ಅವರ
ಪರವಾಗಿ ನಿಲ್ಲುವ ದೊಡ್ಡದೊಂದು ತಂಡವೂ ಅಲ್ಲಿದೆ. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿನ ಪ್ರತಿಭಾವಂತ
ವಿದ್ಯಾರ್ಥಿಗಳ ಸಂಖ್ಯೆಗಳನ್ನು ಗಮನಿಸಿದರೆ ಭಾರತೀಯರು ಮುಂದಿದ್ದಾರೆ.
ಸ್ಥಳೀಯ ಅಮೆರಿಕನ್ನರ ಸಂಖ್ಯೆ ಬಹಳ ಕಡಿಮೆ. ‘ಎಲಾನ್ ಮ’ ಸ್ವತಃ ಹೇಳಿರುವ ಪ್ರಕಾರ, ತಾನು ಬಾಹ್ಯಕಾಶ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಸಂದರ್ಭದಲ್ಲಿ ‘ಫ್ಲೋರಿಡಾ ವಿಶ್ವವಿದ್ಯಾಲಯ’ದಲ್ಲಿ 600 ಜನ
ಭಾರತೀಯ ಮೂಲದ ವಿದ್ಯಾರ್ಥಿಗಳಿದ್ದರೆಂತೆ. ಆದರೆ ಕೇವಲ 10 ಜನ ಅಮೆರಿಕನ್ನರಿದ್ದರಂತೆ’. ಒಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಚುನಾವಣೆ ಗೆದ್ದ ನಂತರ ಅಮೆರಿಕದ ಅಭಿವೃದ್ಧಿಯಲ್ಲಿ ಭಾರತೀಯರ ಕೊಡುಗೆ ಮತ್ತು ಅವರಿಗೆ ಸಿಗುತ್ತಿರುವ ಉನ್ನತ ಸ್ಥಾನಮಾನದ ಬಗ್ಗೆ ಪರ ಮತ್ತು ವಿರೋಧದ ಚರ್ಚೆಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಮತ್ತೊಂದೆಡೆ ಭಾರತೀಯರು ಯಹೂದಿಗಳ ಜಾಗಕ್ಕೆ ಬರುತ್ತಿರುವ ವಿಷಯವೂ ಚರ್ಚೆಯಲ್ಲಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡದಲ್ಲಿ ಸ್ಥಾನ ಪಡೆದಿರುವ ಅನಿವಾಸಿ ಭಾರತೀಯರಿಗೆ ಶುಭವಾಗಲಿ.
ಇದನ್ನೂ ಓದಿ: Mohan Vishwa Column: ಅಮೆರಿಕದ ʼಇಕಾನಾಮಿಕ್ ಹಿಟ್ ಮ್ಯಾನ್ʼ