ಇತಿಹಾಸ
ಶಶಿಕುಮಾರ್ ಕೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ನಳಂದಾ ವಿಶ್ವವಿದ್ಯಾಲಯವನ್ನು ಪುನರಾರಂಭಿಸಿದರು. ಕ್ರೂರ ಹತ್ಯಾಕಾಂಡ ಮತ್ತು ವಿಧ್ವಂಸಕ ಕೃತ್ಯದ ಕಹಿನೆನಪು, ಅವಮಾನಗಳನ್ನು ೮೦೦ ವರ್ಷಗಳ ಕಾಲ ತನ್ನ ಭುಜದ ಮೇಲೆ ಹೊತ್ತಿದ್ದ ನಳಂದಾ ವಿಶ್ವವಿದ್ಯಾಲಯದ ಭಗ್ನಾವಶೇಷಗಳು, ಮಣ್ಣಿನ ಗೋಡೆಗಳು ನಮ್ಮಲ್ಲಿ ವಿಷಾದ ಭಾವವನ್ನು ತುಂಬಿದ್ದುಂಟು. ಆ ಪ್ರಾಂತ್ಯದಲ್ಲಿ ಪುನಃ ಪ್ರಾಣವಾಯು ಹರಿಯುವಂತೆ ಮಾಡಿ, ಹೊಸದಾಗಿ ನಳಂದಾ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ಈ ವಿಶ್ವವಿದ್ಯಾಲಯವು ನಾಶಗೊಂಡಿದ್ದು ಭಾರತದ ಅತ್ಯಂತ ಕರಾಳ ಅಧ್ಯಾಯಗಳಲ್ಲೊಂದು.
ಚರಿತ್ರೆಕಾರರ ಪ್ರಕಾರ, ಬರೋಬ್ಬರಿ ೯೦ ಲಕ್ಷ ಪುಸ್ತಕಗಳು ಅಥವಾ ತಾಳಪತ್ರ ಗ್ರಂಥಗಳಿಗೆ ಭಕ್ತಿಯಾರ್ ಖಿಲ್ಜಿಯ ಸೈನ್ಯವು ಬೆಂಕಿಯಿಟ್ಟಾಗ, ಆ ಗ್ರಂಥಾಲ ಯವು ಮೂರು ತಿಂಗಳವರೆಗೆ ಹೊತ್ತಿ ಉರಿದಿತ್ತಂತೆ. ದುರದೃಷ್ಟಕರ ಸಂಗತಿಯೆಂದರೆ ನಮ್ಮ ದೇಶದಲ್ಲಿ ಕೆಲವರಿಗೆ ಗುಲಾಮಿ ಮನಸ್ಥಿತಿ ಇನ್ನೂ ಇದೆ, ನಳಂದಾದಿಂದ ಸ್ವಲ್ಪ ದೂರದಲ್ಲಿರುವ ರೈಲು ನಿಲ್ದಾಣಕ್ಕೆ ‘ಭಕ್ತಿಯಾರ್ ಗಂಜ್’ ಎಂಬ ಹೆಸರಿಟ್ಟಿರುವುದೇ ಈ ಮಾತಿಗೆ ಸಾಕ್ಷಿ!
ಚರಿತ್ರೆಯಲ್ಲಿ ನಮಗೆ ತಿಳಿಯದ ಕೆಲವು ವಿಚಾರಗಳಿವೆ. ಭಕ್ತಿಯಾರ್ ಖಿಲ್ಜಿಯು ನಳಂದಾ ವಿಶ್ವವಿದ್ಯಾಲಯವನ್ನು ನಾಶಗೊಳಿಸಿ ಅಲ್ಲಿ ಹತ್ಯಾಕಾಂಡ ನಡೆಸಿದ ನಂತರ ೧೨೦೪ರಲ್ಲಿ ನದಿಯಾ ಪ್ರದೇಶವನ್ನು ನಾಶಗೊಳಿಸಿದನು (ಇದು ನಂತರದ ಕಾಲದಲ್ಲಿ ಚೈತನ್ಯ ಮಹಾಪ್ರಭುಗಳಿಗೆ ಜನ್ಮನೀಡಿದ
ಸ್ಥಳವಾಗಿದೆ). ನಂತರ ಅಲ್ಲಿನ ಮೇಚ್ ವಂಶಕ್ಕೆ ಸೇರಿದ ರಾಜನನ್ನು ಇಸ್ಲಾಂಗೆ ಮತಾಂತರಗೊಳಿಸಿ, ಆತನ ಹೆಸರನ್ನು ‘ಅಲಿ’ ಎಂದು ಬದಲಾಯಿಸಿದನು. ಈತನ ನೆರವಿನೊಂದಿಗೆ ಭಕ್ತಿಯಾರ್ ಖಿಲ್ಜಿ ಅಸ್ಸಾಂ ಅನ್ನು ಪ್ರವೇಶಿಸಿದನು. ಇವನು ಅಲಿಯ ಸೈನ್ಯವನ್ನು ಸೇರಿಸಿಕೊಂಡು ಅಸ್ಸಾಂಗೆ ಪ್ರವೇಶಿಸಿದ ನಂತರ ಅಲ್ಲಿ ಊಹಿಸದ ಪರಿಣಾಮ ಎದುರಾಯಿತು.
ಅಸ್ಸಾಂನಲ್ಲಿ ಬೋಡೋ, ದಿಮಾಸ್, ಕೋಚ್, ರಾಜಭಂಕ್ಷಿ ಮೊದಲಾದ ಬುಡಕಟ್ಟು ಜನರು ಹಾಗೂ ಸ್ಥಳೀಯವಾಗಿ ಇದ್ದಂಥ ರಾಜರೆಲ್ಲರೂ
ಸೇರಿ, ಮತ್ತೊಬ್ಬ ಪರಾಕ್ರಮಿ ರಾಜನ ನಾಯಕತ್ವದಲ್ಲಿ ಯುದ್ಧಕ್ಕೆ ಸನ್ನದ್ಧರಾದರು. ಅಲ್ಲದೆ, ರಾಣಾ ಪ್ರತಾಪ್ ಸಿಂಹನಿಗಿಂತಲೂ ಮುಂಚೆ ಈ ದೇಶದಲ್ಲಿ ’ಖ್ಚಟ್ಟ್ಚeಛಿb ಉZಠಿe Pಟ್ಝಜ್ಚಿqs’ಯನ್ನು ಪ್ರಯೋಗಿಸಿದರು (ಇದಕ್ಕೆ ‘ಭೂದಹನದ ನೀತಿ/ತಂತ್ರ’ ಎನ್ನಲಾಗುತ್ತದೆ. ಅಂದರೆ, ಆಕ್ರಮಣ ಮಾಡುತ್ತಿರುವ ಶತ್ರುಸೈನ್ಯಕ್ಕೆ ಯಾವ ಉಪಯುಕ್ತ ವಸ್ತುವೂ ಸಿಕ್ಕದಂತೆ ಎಲ್ಲವನ್ನೂ ಸುಟ್ಟುಬಿಟ್ಟುಹೋಗುವ ಯುದ್ಧನೀತಿ). ಅಂದರೆ, ಬುಡಕಟ್ಟು ಸೈನ್ಯವು ಭಕ್ತಿಯಾರ್ ಖಿಲ್ಜಿ ಬರುವ ಮಾರ್ಗದಲ್ಲಿ ಆತನ ಸೈನ್ಯಕ್ಕೆ ಕುಡಿಯಲು ನೀರು ಮತ್ತು ತಿನ್ನಲು ಆಹಾರ ಸಿಗದ ಹಾಗೆ ಗ್ರಾಮಗಳಿಗೆ ಬೆಂಕಿ ಹಚ್ಚುತ್ತಾ ಉತ್ತರ ಗುವಾಹಟಿ ಯವರೆಗೂ ಬಂತು.
ಅಲ್ಲಿ ಬಹುದೊಡ್ಡ ಯುದ್ಧ ನಡೆದು ಬುಡಕಟ್ಟು ಸೈನಿಕರು ಭಕ್ತಿಯಾರ್ ಖಿಲ್ಜಿಯನ್ನು ಕೊಂದುಹಾಕಿದರು. ನಂತರ ಅವನ ಸೈನ್ಯದ ಒಬ್ಬ ಸೈನಿಕನನ್ನೂ ಉಳಿಸದೆ, ಅಲಿಯನ್ನೂ ಒಳಗೊಂಡಂತೆ ಎಲ್ಲರನ್ನೂ ಯಮಪುರಿಗೆ ಅಟ್ಟಿದರು. ಸೋತ ವಿಷಯವನ್ನು ಹೇಳಲು ಸಹ ಒಬ್ಬನೇ ಒಬ್ಬ ಸೈನಿಕನೂ ಭಕ್ತಿಯಾರ್ ಖಿಲ್ಜಿಯ ಸೈನ್ಯದಲ್ಲಿ ಉಳಿಯಲಿಲ್ಲ. ಅಂದರೆ, ನಳಂದಾ ವಿಶ್ವವಿದ್ಯಾಲಯವು ಧ್ವಂಸವಾದ ೧೦ ವರ್ಷದ ಬಳಿಕ ಭಕ್ತಿಯಾರ್ ಖಿಲ್ಜಿಯ ಅಂತ್ಯವಾಯಿತು. ಈ ಹೋರಾಟಕ್ಕೆ ಕಾರಣನಾದ ಪರಾಕ್ರಮಿ ರಾಜನ ಹೆಸರು ಮಹಾರಾಜ ಪೃಥು. ಈತನಿಗೆ ‘ವಿಶ್ವಸುಂದರ ದೇವ’ ಎಂಬ ಹೆಸರೂ ಇತ್ತು.
ಇವನ ನಾಯಕತ್ವದಲ್ಲಿ ಮಿಕ್ಕ ರಾಜರು, ಸಾಮಂತರು, ಗಿರಿಜನರು ಎಲ್ಲರೂ ಸೇರಿ ಭಕ್ತಿಯಾರ್ ಖಿಲ್ಜಿಯ ಸೈನ್ಯವನ್ನು ಹೊಸಕಿಹಾಕಿದರು. ಈ ಮಹತ್ವದ ಘಟನಾವಳಿಯ ಕುರಿತಂತೆ ಚರಿತ್ರೆಯಲ್ಲಿ ಉಲ್ಲೇಖವಿರುವುದು ವಿರಳ. ಉತ್ತರ ಗುವಾಹಟಿಯಲ್ಲಿ ಲಭ್ಯವಿರುವ ಎರಡು ಸಾಲುಗಳ ಶಿಲಾಶಾಸನದಿಂದ ಮಾತ್ರ ಈ ವಿವರ ತಿಳಿಯುತ್ತದೆ. ಇದು ಸಂಸ್ಕೃತದಲ್ಲಿದ್ದು, ‘ಕಾಮರೂಪ ದೇಶದೊಳಗೆ ಬಂದಂಥ ತುರುಷ್ಕ ಸೈನ್ಯವನ್ನು ಪೂರ್ತಿಯಾಗಿ ಸರ್ವನಾಶ ಮಾಡಲಾಯಿತು’ ಎಂಬ ಅರ್ಥದ ಉಲ್ಲೇಖವನ್ನು ಅದು ಒಳಗೊಂಡಿದೆ. ಇಂಥ ಅದ್ಭುತವಾದ ಚರಿತ್ರೆ ಕೇವಲ ಎರಡು ಸಾಲುಗಳಿಗೆ ಸೀಮಿತ ಗೊಂಡಿರುವುದು ನಿಜಕ್ಕೂ ದುರದೃಷ್ಟಕರ.
ನಳಂದಾ ವಿಶ್ವವಿದ್ಯಾಲಯದ ಜ್ಞಾನಭಂಡಾರವು ದುರುಳರಿಂದ ನಾಶವಾಗಿದ್ದು ಎಲ್ಲರಿಗೂ ತಿಳಿದಿದೆ; ಆದರೆ ಅದಕ್ಕೆ ಕಾರಣನಾದ ದಾಳಿಕೋರ ಭಕ್ತಿಯಾರ್ ಖಿಲ್ಜಿಯನ್ನು ಕೊಂದುಹಾಕಿದ ನಮ್ಮ ವೀರಯೋಧರ ವಿಚಾರವು ದೇಶದ ಬಹುತೇಕರಿಗೆ ಗೊತ್ತಿಲ್ಲ ಎನ್ನಬೇಕು. ಅಸ್ಸಾಂನಲ್ಲಿ ಚರಿತ್ರೆ
ಓದುವವರಿಗೆ ಸ್ವಲ್ಪ ಮಟ್ಟಿಗೆ ಈ ಕುರಿತು ಅರಿವಿರಬಹುದು. ಆದರೆ ಈ ಸಂಗತಿಯು ಮಿಕ್ಕೆಡೆಯ ಪಠ್ಯಪುಸ್ತಕಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳದಂತೆ, ಜನರಿಗೆ ತಿಳಿಯದಂತೆ ಹಾಗೂ ಭಕ್ತಿಯಾರ್ ಖಿಲ್ಜಿ ಏನಾದ ಎಂಬ ಪ್ರಶ್ನೆಯೇ ಬಾರದಂತೆ ಮಾಡಲಾಗಿದೆ. ಆದರೆ ಮನೋಷಿ ಸಿನ್ಹಾ ರಾವಲ್ ಎಂಬ ಯುವತಿಯು ಖZಟ್ಞ ಖಡಿಟ್ಟbo ಎಂಬ ಸರಣಿ ಪುಸ್ತಕವನ್ನು ಬರೆದಿದ್ದು, ವಾಡಿಕೆಯ ಚರಿತ್ರೆಯ ಪುಸ್ತಕಗಳಲ್ಲಿ ಉಲ್ಲೇಖಿಸಲ್ಪಡದ, ‘ಎಲೆಮರೆಯ ಕಾಯಿ
ಯಂತೆ’ ಸೆಣಸಿದ ವೀರಯೋಧರ ಮತ್ತು ಮಹಾವೀರರ ಗಾಥೆಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿನ ಎರಡನೆಯ ಗಾಥೆಯೇ ಮಹಾರಾಜ ಪೃಥುವಿಗೆ ಸಂಬಂಧಿಸಿದ್ದಾಗಿದೆ. ಇದೇ ರೀತಿಯಲ್ಲಿ, ರಕ್ತಿಮ್ ಪಾರ್ಥೋ ಎಂಬ ಇತಿಹಾಸದ ಪ್ರಾಧ್ಯಾಪಕರೊಬ್ಬರು ‘ಮಹಾರಾಜ ಪೃಥು’ ಎಂಬ ಪುಸ್ತಕವನ್ನು ಬರೆದಿದ್ದಾರೆ.
೨೦೧೬ರಲ್ಲಿ, ಸರ್ಬಾನಂದ ಸೋನೊವಾಲ್ ಅವರು ಅಸ್ಸಾಂನ ಮುಖ್ಯಮಂತ್ರಿ ಆದ ನಂತರ, ಸರಕಾರದ ಆದೇಶದಂತೆ ಅವರು ಮಹಾರಾಜ ಪೃಥುವಿನ ಜೀವನಚರಿತ್ರೆಯನ್ನು ಹೀಗೆ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಎರಡು ಪುಸ್ತಕಗಳಲ್ಲಿ ಅಸ್ಸಾಂನ ವೀರಯೋಧರು ಭಕ್ತಿಯಾರ್ ಖಿಲ್ಜಿಯನ್ನು
ಕೊಂದ ಘಟನೆ ಹಾಗೂ ಸೈನ್ಯದ ಘನವಿಜಯದ ಗಾಥೆ ಯನ್ನು ಯಥೋಚಿತವಾಗಿ ಉಲ್ಲೇಖಿಸಲಾಗಿದೆ ಎಂಬುದು ಗಮನಾರ್ಹ.
ಒಟ್ಟಾರೆ ಹೇಳುವುದಾದರೆ, ಭಕ್ತಿಯಾರ್ ಖಿಲ್ಜಿಯು ನಳಂದಾ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸಿದ ಸಾಕಷ್ಟು ಕಾಲದ ನಂತರ, ಅಸ್ಸಾಂನ ಸೈನಿಕರು ಈ ದುರ್ಘಟನೆಗೆ ಪ್ರತೀಕಾರವನ್ನು ತೀರಿಸಿಕೊಂಡರು. ಈ ಘಟನೆಯನ್ನು ಎರಡೇ ಸಾಲಲ್ಲಿ ಅರುಹುವ ಶಿಲಾಶಾ ಸನವೊಂದಿದೆ ಎಂದು ಮೇಲೆ ಉಲ್ಲೇಖಿಸಿದೆಯಷ್ಟೇ. ಈ ಶಿಲಾಶಾಸನವನ್ನು ಕುರಿತು ಅಸ್ಸಾಂ ಜನರು ಬಹಳ ದಿನಗಳ ಕಾಲ ‘ಕಾನಾಹಿ ಬರೋಹಿ ಭುವಾ ಶಿಲಾ ಲೇಕ್’ ಎಂದು ಅಸ್ಸಾಮಿ ಭಾಷೆಯಲ್ಲಿ ಹೇಳುತ್ತಿದ್ದರು. ಅಂದರೆ ಶ್ರೀಕೃಷ್ಣನು ಆ ಬಂಡೆಯ ಮೇಲೆ ಕೂತು ಮೀನುಗಳನ್ನು ಹಿಡಿಯುತ್ತಿದ್ದನು ಎಂದು ಸ್ಥಳೀಯ ಜನರು ನಂಬುತ್ತಾರೆ.
ಅಸ್ಸಾಂನಲ್ಲಿ ಊಟಕ್ಕೆ ಮೀನನ್ನು ಪ್ರಧಾನವಾಗಿ ಅಲ್ಲಿಯ ಜನರು ಬಳಸುವುದರಿಂದ, ಅಸ್ಸಾಮಿಗರು ಕೃಷ್ಣನ ಕೈಯಲ್ಲಿ ಮೀನು ಹಿಡಿಸಿದ್ದಾರೆ. ಈ ಶಿಲಾಶಾಸನವನ್ನು ಮುಂಬರುವ ಪೀಳಿಗೆಯು ಮರೆಯಬಾರದೆಂಬ ಉದ್ದೇಶದೊಂದಿಗೆ ಇಲ್ಲಿನ ಸ್ಥಳೀಯ ಜನರು ಅದನ್ನು ಕೃಷ್ಣನ ಕಥೆಯೊಂದಿಗೆ
ಜೋಡಿಸಿ, ಕೃಷ್ಣನು ಇಲ್ಲಿ ಕೂತು ಮೀನು ಹಿಡಿದಿದ್ದರಿಂದ ಈ ಬಂಡೆ ಪೂಜನೀಯವಾದದ್ದು ಎಂದು ಹೇಳಿದರು. ಜಾಗರೂಕವಾಗಿ ಪರಿಶೀಲಿಸಿದಾಗ ಮಾತ್ರವೇ ಆ ಶಿಲಾಶಾಸನದಲ್ಲಿ ಈ ಸಾಲುಗಳು ಕಾಣಿಸುತ್ತವೆ. ನಳಂದಾ ವಿಶ್ವವಿದ್ಯಾಲಯವು ದುರುಳರಿಂದ ಧ್ವಂಸವಾಗಿದ್ದನ್ನು ನಾವು ನೆನಪಿಸಿ ಕೊಂಡಾಗಲೆಲ್ಲಾ, ಆ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಮಹಾರಾಜ ಪೃಥುವನ್ನೂ ನಾವು ನೆನೆಯಬೇಕು.
(ಲೇಖಕರು ಹವ್ಯಾಸಿ ಬರಹಗಾರರು)