Monday, 25th November 2024

ನನ್ನ ಒಂದು ಟ್ವೀಟ್, ಅದರಿಂದಾದ ಪ್ರಮಾದ, ಅದಕ್ಕೊಂದು ಕ್ಷಮೆ, ಇತ್ಯಾದಿ

 ನೂರೆಂಟು ವಿಶ್ವ

ಎರಡು ತಿಂಗಳ ಹಿಂದೆ, ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಕೆಲವು ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳ ಹೆಸರುಗಳನ್ನು ಪಟ್ಟಿ ಮಾಡಬೇಕೆಂದು, ಬೆಂಗಳೂರಿನ ರಸ್ತೆೆಗಳ ಬಗ್ಗೆೆ ಸಾಕಷ್ಟು ಸಂಶೋಧನೆ ಮಾಡಿರುವ ಸ್ನೇಹಿತರಾದ ಸದಾಶಿವ ರಾವ್ ಅವರ ಜತೆ ಹೊರಟೆ. ಬೆಂಗಳೂರಿನ ರಸ್ತೆೆಗಳ ಬಗ್ಗೆೆ ಸಾಕಷ್ಟು ಮಂದಿ ಅಧ್ಯಯನ ಮಾಡಿದ್ದಾರೆ. ‘ಬೆಂಗಳೂರಿನ ರಸ್ತೆೆಗಳು ಹೇಳುವ ಕಥೆಗಳು’ ಎಂಬ ಸರಣಿ ‘ಉದಯವಾಣಿ’ ಪತ್ರಿಿಕೆಯಲ್ಲಿ ಹತ್ತಾಾರು ವರ್ಷಗಳ ಹಿಂದೆ ಪ್ರಕಟವಾದ ನೆನಪು. ಅಂದು ನಾವು ನೋಡಲು ಹೊರಟಿದ್ದು ಬರೀ ಇಂಗ್ಲಿಿಷ್ ಹೆಸರುಗಳನ್ನು ಮಾತ್ರ. ಎರಡು ಭಾನುವಾರ ಈ ಕೆಲಸದಲ್ಲಿ ನಿರತರಾದಾಗ, ನಮಗೆ ಗೋಚರವಾಗಿದ್ದು ಸುಮಾರು ಐವತ್ತಕ್ಕೂ ಹೆಚ್ಚು ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳು!

ಯಾವುದೇ ನಗರದ ರಸ್ತೆೆಗೆ ನಮಗೆ ಗೊತ್ತಿಿರುವವರ ಹೆಸರನ್ನು ಇಟ್ಟರೆ ಆಗುವ ಸಂತಸವೇ ಬೇರೆ. ನಾವು ತಕ್ಷಣ ಅಲ್ಲಿಗೆ ಕನ್ಟೆೃ್‌ ಆಗುತ್ತೇವೆ. ದಕ್ಷಿಣ ಆಫ್ರಿಿಕಾದ ಡರ್ಬನ್, ಜರ್ಮನಿಯ ಹ್ಯಾಾಮ್‌ಬರ್ಗ್ ನಗರ ಸೇರಿದಂತೆ ಜಗತ್ತಿಿನ ಅನೇಕ ನಗರಗಳಲ್ಲಿ ಮಹಾತ್ಮಾಾ ಗಾಂಧಿ ರಸ್ತೆೆ ಹೆಸರು ನೋಡಿ ನಾನು ಪುಳಕಗೊಂಡಿದ್ದೆ. ಉಜ್ಬೇಕಿಸ್ತಾಾನದ ರಾಜಧಾನಿ ತಾಷ್ಕೆೆಂಟ್ ನಗರದಲ್ಲಿ ಪ್ರಮುಖ ರಸ್ತೆೆಯೊಂದಕ್ಕೆೆ ಲಾಲ್ ಬಹದ್ದೂರ್ ಶಾಸ್ತ್ರಿಿ ಅವರ ಹೆಸರನ್ನು ನೋಡಿ ಸಂತಸಪಟ್ಟಿಿದ್ದೆ. ಅದೇ ರಸ್ತೆೆಯ ಆರಂಭದಲ್ಲಿ ಶಾಸ್ತ್ರಿಿ ಅವರ ಆಳೆತ್ತರದ ಪ್ರತಿಮೆ ಸ್ಥಾಾಪಿಸಿದ್ದನ್ನು ನೋಡಿ ಆಶ್ಚರ್ಯವಾಗಿತ್ತು. ಮಾಸ್ಕೋೋದಲ್ಲಂತೂ ಹಿಂದಿ ಚಿತ್ರ ನಟ, ನಿರ್ದೇಶಕ ರಾಜ್ ಕಪೂರ ಪ್ರತಿಮೆ ಕಂಡು ಅತೀವ ಖುಷಿಯಾಗಿತ್ತು. ರಸ್ತೆೆಗೆ ಯಾರದೇ ಹೆಸರಿಡಲಿ, ಮನಸ್ಸಿಿನ ಹಿಂಬದಿಯಲ್ಲಿ, ಅಲ್ಲಲ್ಲಿ ಅದು ಆ ವ್ಯಕ್ತಿಿಯ ನೆನಪನ್ನು ಮಾಡುತ್ತಾಾ ಹೋಗುತ್ತದೆ.

ನಮಗೆ ಆಪ್ತರಾದವರ ಹೆಸರಾದರೆ, ಆ ರಸ್ತೆೆಯೂ ವಿನಾಕಾರಣ ಆಪ್ತವಾಗುತ್ತಾಾ ಹೋಗುತ್ತದೆ. ಕೆಲ ವರ್ಷಗಳ ಹಿಂದೆ, ಲಂಡನ್ನಿಿನ ಗ್ರೀನ್ವಿಿಚ್ ಪ್ರದೇಶದಲ್ಲಿ ಹೋಗುವಾಗ ಅಲ್ಲಿನ ರಸ್ತೆೆಯೊಂದರ ಹೆಸರು ನನ್ನ ಮನಸ್ಸಿಿನಲ್ಲಿ ಇಂದಿಗೂ ಕುಳಿತುಬಿಟ್ಟಿಿದೆ. ಅಲ್ಲಿನ ಪ್ರಮುಖ ರಸ್ತೆೆಯೊಂದಕ್ಕೆೆ ‘ಹಾ ಹಾ *(ಏ ಏ ್ಕಟ) ರಸ್ತೆೆ’ ಎಂದು ಹೆಸರಿಟ್ಟಿಿದ್ದಾರೆ. ಅಮೆರಿಕದ ಕೊಲರಾಡೋ ರಾಜ್ಯದ ಫೌಂಟನ್‌ಚೀಟಿಯಲ್ಲಿ ಒಂದು ರಸ್ತೆೆಯಿದೆ. ಅದರ ಹೆಸರು ಹೆಸರೋ, ವಾಕ್ಯವೋ, ಗಾದೆಯೋ, ವಕ್ರತುಂಡೋಕ್ತಿಿಯೋ, ಒಟ್ಟಾಾರೆ ಏನು ಎಂಬುದು ಅರ್ಥವಾಗದೇ, ಕೆಲಕಾಲ ಬೋರ್ಡನ್ನು ನೋಡುತ್ತಾಾ ನಿಂತುಬಿಟ್ಟಿಿದ್ದೆ. ಅಂದ ಹಾಗೆ ಆ ರಸ್ತೆೆಯ ಹೆಸರು – * ಅ ಈಟಜ ಜ್ಝ್ಝಿಿ ಔಜ್ಚಿಿ ಏಜಿ ಆ್ಠಠಿಠಿ ಆ್ಠಠಿ ಟ್ಞಠಿ ಉಠಿ ಅ ಜ್ಚಿ್ಝಿಛಿ ್ಕಟ ಅಂತ!

ಅದಿರಲಿ. ಅಂದು ನಾವು ಬೆಂಗಳೂರಿನ ದಂಡು ಪ್ರದೇಶದಲ್ಲಿ ಹೋಗುವಾಗ ಗೋಚರಿಸಿದ ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳ ಹೆಸರುಗಳನ್ನು ನೋಡಿದಾಗ, ನಾನೇನಾದರೂ ಲಂಡನ್ನಿಿನಲ್ಲಿ ಇದ್ದೇನಾ ಎಂಬ ಅನುಮಾನ ಅರೆಕ್ಷಣ ನನ್ನಲ್ಲಿ ಹಾದುಹೋಗಿದ್ದು ಸುಳ್ಳಲ್ಲ. ಕೆಲವು ಬಡಾವಣೆಗಳೂ ಸಂಪೂರ್ಣ ಇಂಗ್ಲಿಿಷ್ ಮಯ. ಉದಾಹರಣೆಗೆ, ಫ್ರೇಜರ್ ಟೌನ್, ರಿಚ್ಸರ್ ಟೌನ್, ವಿಲ್ಲಿಯಮ್‌ಸ್‌ ಟೌನ್, ಕ್ಸಾೃ್‌ ಟೌನ್, ಕುಕ್ ಟೌನ್.. ಹಾಗೆಯೇ ರಸ್ತೆೆಗಳ ಹೆಸರುಗಳು ಸಹ. ಮೆಕ್ಗ್ರಾಾಥ್ ರೋಡ್, ಮಾರ್ಕಾಮ್ ರೋಡ್, ಆಲ್ಬರ್ಟ್ ರೋಡ್, ವಿಕ್ಟೋೋರಿಯಾ ರೋಡ್, ಕಾಸಲ್ ಸ್ಟ್ರೀಟ್, ಸ್ಟ್‌ೈ ಮಾರ್ಕ್‌ಸ್‌ ರೋಡ್, ವಿಂಡ್ಸರ್ ರೋಡ್, ಪ್ರಿಿಂರೋಸ್ ರೋಡ್, ಡಿಕೆನ್ ಸನ್ ರೋಡ್, ಕಾರ್ನ್‌ವೆಲ್ ರೋಡ್, ಕ್ಯಾಾಂಪ್ ಬೆಲ್ರೋೋಡ್, ಬೊವೀ ಲೇನ್ ರೋಡ್, ಲೇಡಿ ಕರ್ಜನ್ ರೋಡ್, ಹಯ್‌ಸ್‌ ರೋಡ್, ಲಾಂಗ್ ಫೋರ್ಡ್ ರೋಡ್… ಇತ್ಯಾಾದಿ.

ನಾನು ಬೆಂಗಳೂರಿನ ಲಾಂಗ್ ಫೋರ್ಡ್ ಗಾರ್ಡನ್ ಪ್ರದೇಶದಲ್ಲಿ ಓಡಾಡುವಾಗ ಒಂದು ವಿಲಕ್ಷಣವಾದ ರಸ್ತೆೆಯ ಹೆಸರು ನನ್ನ ಕಣ್ಣಿಿಗೆ ಬಿತ್ತು. ಕೆಲ ಕಾಲ ಆ ರಸ್ತೆೆಯ ಹೆಸರನ್ನು ಓದಲು ಪ್ರಯತ್ನಿಿಸಿದೆ. ಬಹಳ ತಿಣುಕಾಡಬೇಕಾಯಿತು. ಆದರೆ ನಾನು ಓದಿದ್ದು ಸರಿಯಾಗಿ ಇದೆಯಾ, ಇಲ್ಲವಾ ಎಂಬ ಅನುಮಾನ. ನನ್ನ ಜತೆಗಿದ್ದವರು ಒಂದು ರೀತಿಯಲ್ಲಿ ಉಚ್ಚರಿಸಿದರು. ದಾರಿಹೋಕರನ್ನು ಕೇಳಿದಾಗ, ಅವರು ಬೇರೆ ರೀತಿಯಲ್ಲಿ ಉಚ್ಚರಿಸಿದರು. ಆಗ ಅನುಮಾನ ಮತ್ತಷ್ಟು ಜಾಸ್ತಿಿಯಾಯಿತು. ಆಟೋ ಚಾಲಕನನ್ನು ಕೇಳಿದಾಗ ಆತ ಇನ್ನಷ್ಟು ವಿಚಿತ್ರವಾಗಿ, ತಮಾಷೆಯಾಗಿ ಉಚ್ಚರಿಸಿದ. ಯಾರೂ ಸಹ ಒಂದೇ ರೀತಿಯಾಗಿ ಆ ರಸ್ತೆೆಯ ಹೆಸರನ್ನು ಹೇಳಲಿಲ್ಲ. ಅಂದ ಹಾಗೆ ಆ ರಸ್ತೆೆಗೆ ಆ ವ್ಯಕ್ತಿಿಯ ಹೆಸರನ್ನು ಇಟ್ಟಿಿದ್ದಾರಲ್ಲ, ಆ ಮಹಾನುಭಾವ ಯಾರು ಎಂದು ಅಲ್ಲಿನ ಸ್ಥಳೀಯರನ್ನು ಕೇಳಿದೆ. ಒಬ್ಬರಿಗೂ ಗೊತ್ತಿಿಲ್ಲ.

ಆತ ಯಾರು ಎಂಬುದು ಗೊತ್ತಿಿಲ್ಲ, ಅದಕ್ಕಿಿಂತ ಹೆಚ್ಚಾಾಗಿ ಅವನ ಹೆಸರು ಜನಸಾಮಾನ್ಯನ ನಾಲಗೆ ಮೇಲೆ ಹೊರಳುವುದಿಲ್ಲ, ಹಾಗಿದ್ದರೂ ಆ ಹೆಸರನ್ನು ಇಟ್ಟು ಯಾಕೆ ಗೋಳು ಹುಯ್ದುಕೊಳ್ಳುತ್ತಾಾರೋ, ಅಷ್ಟಕ್ಕೂ ದಾಸ್ಯತ್ವದ ಸಂಕೇತವಾದ ಆ ಬ್ರಿಿಟಿಷ್ ಹೆಸರು ಏಕೆ, ಅದರ ಬದಲು ಸ್ಥಳೀಯ ಹೆಸರು ಇಡಬಹುದಿತ್ತಲ್ಲ ಎಂದು ಯೋಚಿಸುತ್ತಿಿದ್ದೆ.

ಅಂದ ಹಾಗೆ ಇಷ್ಟು ಹೊತ್ತು ಹೇಳಿದ, ಲಾಂಗ್ ಫೋರ್ಡ್ ಗಾರ್ಡನ್‌ನಲ್ಲಿರುವ ಆ ರಸ್ತೆೆಯ ಹೆಸರು -* ’ಖ್ಠಜ್ಞಛಿ ್ಕಟ! ಈ ರಸ್ತೆೆಯ ಸರಿಯಾದ ಉಚ್ಚಾಾರ – ಓ ಶಾಫ್ನೆೆಸ್ಸಿಿ ರಸ್ತೆೆ ಅಂತ. ಆಟೋದವರು ಇದನ್ನು ಶೌಘ ನೆಸ್ಸಿಿ ರೋಡ್‌ಎಂದು ಕರೆಯುತ್ತಾಾರೆ! ಇನ್ನು ಕೆಲವರು ಓಷೋ ಘನ್ಸಿಿರಸ್ತೆೆ ಎಂದು ಕರೆಯುತ್ತಾಾರೆ. ತಮಾಷೆ ಅಂದ್ರೆೆ, ಕರ್ಮ ಕರ್ಮ ಯಾರೂ ಸರಿಯಾಗಿ ಉಚ್ಚರಿಸುವುದಿಲ್ಲ . ನಾನು ತಡಮಾಡದೆ ಅಲ್ಲಿಯೇ ನಿಂತು ಒಂದು ಟ್ವೀಟ್ ಮಾಡಿದೆ – ‘ಬೆಂಗಳೂರಿನ ಲಾಂಗ್ ಫೋರ್ಡ್ ಗಾರ್ಡನ್ ಪ್ರದೇಶದಲ್ಲಿ ಒಂದು ರಸ್ತೆೆಯಿದೆ. ಅದರ ಹೆಸರನ್ನು ಯಾರಿಗೂ ಹೇಳಲು ಬರೊಲ್ಲ. ಒಬ್ಬೊೊಬ್ಬರು ಒಂದೊಂದು ಥರಾ ಹೇಳುತ್ತಾಾರೆ. ಬಹುತೇಕರಿಗೆ ಆ ಹೆಸರನ್ನು ಇಟ್ಟ ವ್ಯಕ್ತಿಿ ಯಾರೆಂಬುದೇ ಗೊತ್ತಿಿಲ್ಲ. ಇಂಥ ಹೆಸರು ಬೇಕಾ?’

ತಕ್ಷಣ ಈ ಟ್ವೀಟ್‌ಗೆ ಇನ್ನೂರಕ್ಕೂ ಹೆಚ್ಚು ಜನ ಪ್ರತಿಕ್ರಿಿಯಿಸಿದರು. ಕೆಲವರಂತೂ ಬೆಂಗಳೂರು ಇನ್ನೂ ಹೇಗೆ ಬ್ರಿಿಟಿಷರ ದಾಸ್ಯದ ಸಂಕೋಲೆಯಲ್ಲಿ ಸಿಕ್ಕಿಿ ನರಳುತ್ತಿಿದೆ ಅಥವಾ ಖುಷಿ ಅನುಭವಿಸುತ್ತಿಿದೆ ಎಂದು ಲೇವಡಿ ಮಾಡಿದರು. ಅನೇಕರು ಈ ರೀತಿಯ ಕಷ್ಟದ ಹೆಸರಿನ ಬದಲು ಅಪ್ಪಟ ಕನ್ನಡದ ಹೆಸರನ್ನು ಇಡಬಾರದೇ, ಇನ್ನೂ ಕಾಲ ಮಿಂಚಿಲ್ಲ, ಅಷ್ಟಕ್ಕೂ ಹೆಸರು ಬದಲಿಸಿದರೆ ಬ್ರಿಿಟಿಷರು ಇಲ್ಲಿ ಬಂದು ನಮ್ಮನ್ನು ಪ್ರಶ್ನಿಿಸೊಲ್ಲ, ಆದಷ್ಟು ಬೇಗ ಈ ಹೆಸರನ್ನು ಬದಲಿಸುವ ಕೆಲಸವಾಗಲಿ ಎಂದು ಪ್ರತಿಕ್ರಿಿಯಿಸಿದರು. ನಾನು ಕೂಡ ಓ ಶಾಫ್ನಿಿಸ್ಸಿಿ ಯಾರು ಎಂಬುದನ್ನು ಹುಡುಕಲು ಹೋಗಲಿಲ್ಲ. ಯಾಕೆ ಆ ರಸ್ತೆೆಗೆ ಆ ಹೆಸರು ಎಂದು ನನ್ನನ್ನು ಕೇಳಿಕೊಳ್ಳಲೂ ಇಲ್ಲ. ಒಂದು ಇಡೀ ದಿನ ಆ ಟ್ವೀಟ್ ಬಗ್ಗೆೆ ಚರ್ಚೆಯಾಯಿತು. ಆ ಚರ್ಚೆಯಲ್ಲಿ ಭಾಗವಹಿಸಿದ ಯಾರೂ ಆ ‘ಓ ಶಾಫ್ನೆೆಸ್ಸಿಿ’ ಬಗ್ಗೆೆ ಬೆಳಕು ಚೆಲ್ಲಲಿಲ್ಲ. ನಾನು ಸುಮ್ಮನಾದೆ. ಒಂದೆರಡು ದಿನಗಳ ನಂತರ ಆ ಟ್ವೀಟ್ ಪ್ರಹಸನವನ್ನು ಮರೆತುಬಿಟ್ಟೆೆ.

ಈ ಮಧ್ಯೆೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಾಗ, ಭಾಷಣಕಾರರೊಬ್ಬರು ಮೇಯರ್ ಸಮ್ಮುಖದಲ್ಲಿ ನನ್ನ ಟ್ವೀಟ್‌ನ್ನು ಪ್ರಸ್ತಾಾಪಿಸಿ, ಬೆಂಗಳೂರಿನಲ್ಲಿರುವ ಇಂಗ್ಲಿಿಷ್ ರಸ್ತೆೆಗಳ ಬಗ್ಗೆೆ ಹೇಳುತ್ತಾಾ, ಓ ಶಾಫ್ನೆೆಸ್ಸಿಿ ರಸ್ತೆೆಯ ಹೆಸರನ್ನುಹೇಳಲಾಗದೆ ತಡವರಿಸಿ, ‘ನೋಡಿ ನನಗೇ ಆ ರಸ್ತೆೆಯ ಹೆಸರನ್ನು ಹೇಳಲಾಗುತ್ತಿಿಲ್ಲ, ಆ ವ್ಯಕ್ತಿಿ ಯಾರೆಂಬುದು ಒಬ್ಬರಿಗೂ ಗೊತ್ತಿಿಲ್ಲ, ದಯವಿಟ್ಟು ಅದನ್ನು ಬದಲಿಸಿ’ಎಂದು ಒತ್ತಾಾಯಿಸಿದರು. ಅದಾದ ಬಳಿಕ ಪುನಃ ನಾನು ಓ ಶಾಫ್ನೆೆಸ್ಸಿಿಯನ್ನುಸಂಪೂರ್ಣ ಮರೆತುಬಿಟ್ಟಿಿದ್ದೆ. ಯಾವಾಗಲಾದರೊಮ್ಮೆೆ ಪತ್ರಿಿಕೆಯಲ್ಲಿ ಈ ವಿಷಯದ ಬಗ್ಗೆೆ ಬರೆಯಬೇಕು ಎಂದು ನೋಟ್‌ಸ್‌ ಮಾಡಿಕೊಂಡು ಸುಮ್ಮನಾಗಿಬಿಟ್ಟೆೆ.

ಆದರೆ ಮೊನ್ನೆೆ ಭಾನುವಾರ (13.10. 2019) ‘ಟೈಮ್‌ಸ್‌ ಆಫ್ ಇಂಡಿಯಾ’ ಪತ್ರಿಿಕೆಯನ್ನು ಓದುವಾಗ, ಒಳಪುಟಗಳಲ್ಲಿ ವಿಹರಿಸುವಾಗ, ನನಗೆ ಒಂದು ಅಚ್ಚರಿ ಕಾದಿತ್ತು. ಶಶಿ ಶಿವರಾಮಕೃಷ್ಣ ಎಂಬುವವರು ‘ಛ್ಝಿಿಛಿಜ್ಟ ್ಕಟ’ ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನ ಬರೆದಿದ್ದರು. ಅದರ ಜತೆಗೆ ಓ ಶಾಫ್ನೆೆಸ್ಸಿಿ ರೋಡ್ ಎಂದು ಬರೆದ ಫಲಕದ ಫೋಟೋಇತ್ತು. ಓ ಶಾಫ್ನೆೆಸ್ಸಿಿ ರೇಖಾಚಿತ್ರವಿತ್ತು. ಲೇಖನದ ಮೇಲೆ ದೊಡ್ಡಕ್ಷರಗಳಲ್ಲಿ ಬರೆದ ಇಂಟ್ರೋೋದಲ್ಲಿ ಹೀಗೆ ಬರೆಯಲಾಗಿತ್ತು -* ಛ್ಟಿಿಛಿ ್ಟಛಿ ್ಟಟ ಜ್ಞಿಿ ಆಛ್ಞಿಿಜ್ಝ್ಠ್ಟ್ಠ ಠಿಠಿ ಚಿಛ್ಟಿ ಠಿಛಿ ್ಞಞಛಿ ಟ್ಛ ಆ್ಟಜಿಠಿಜಿ ಡಿಟ ಜಿ ್ಞಟಠಿಜ್ಞಿಿಜ ಟ್ಛ ್ಞಟಠಿಛಿ – ಚ್ಠಿಿಠಿ ’ಖ್ಠಜ್ಞಛಿ ್ಕಟ ಜ್ಞಿಿ ಔಟ್ಞಜ್ಛಟ್ಟ ಎ್ಟಛ್ಞಿಿ ಜ್ಞಿ’ಠಿ ಟ್ಞಛಿ ಟ್ಛ ಠಿಛಿಞ.

ಇದನ್ನು ನೋಡಿ ನನಗೆ ಮಿಂಚು ಸರಿದು ಹೋದಂತಾಯಿತು. ನನ್ನ ಟ್ವೀಟ್‌ನ್ನು ಉದ್ದೇಶಿಸಿಯೇ ಯಾರೋ ಈ ಲೇಖನದ ಮೂಲಕ ನನಗೆ ತಕ್ಕ ಉತ್ತರ ನೀಡಿದ್ದಾರೆ ಎಂದೆನಿಸಿತು. ತಕ್ಷಣ ಕಣ್ಣನ್ನು ಅಗಲಿಸಿ ಒಂದೇ ಉಸುರಿಗೆ ಲೇಖನ ಓದಿ ಮುಗಿಸಿದೆ. ಫಟೀರನೆ ನನ್ನ ಕೆನ್ನೆೆಗೆ ಯಾರೋ ಹೊಡೆದ ಅನುಭವ!
ಹಿಂದೆ ಮುಂದೆ ಯೋಚಿಸದೇ, ಓ ಶಾಫ್ನಿಿಸ್ಸಿಿ ಪೂರ್ವಪರಗಳನ್ನು ತಿಳಿದುಕೊಳ್ಳದೇ, ನಾನು ಆ ಟ್ವೀಟ್ ಮಾಡಬಾರದಿತ್ತು ಎಂದೆನಿಸಿತು. ಕೆಲವೊಮ್ಮೆೆ ನಮ್ಮ ಅಜ್ಞಾನ, ಮುಂಗಾಲಪುಟಿಕಿ ಸ್ವಭಾವ ನಮ್ಮಿಿಂದ ಎಂತೆಂಥ ಪ್ರಮಾದಗಳನ್ನು ಮಾಡಿಸಿಬಿಡುತ್ತದಲ್ಲ? ನನ್ನೊೊಳಗೆ ವಿಷಣ್ಣ ಭಾವ ಆವರಿಸಿಕೊಂಡು ಮುಖ ಬಿಳುಚಿಕೊಂಡಿತು.

‘ಓ ಶಾಫ್ನೆೆಸ್ಸಿಿ, ನಿನ್ನ ಬಗ್ಗೆೆ ತಿಳಿದುಕೊಳದೇ ಏನೋ ಹೇಳಿಬಿಟ್ಟೆೆ, ಮನ್ನಿಿಸು, ತಪ್ಪಾಾಯ್ತು ತಿದ್ಕೋೋತೀನಿ’ ಎಂದು ಅವನಿಗೆ ಒಂದು ತಪ್ಪುು ದಂಡ ನಮಸ್ಕಾಾರ ಹೊಡೆದೆ.

ಶಶಿ ಶಿವರಾಮಕೃಷ್ಣ ಅವರು ಬರೆದ ಲೇಖನದ ಜತೆಗೆ ಓ ಶಾಫ್ನೆೆಸ್ಸಿಿ ಬಗ್ಗೆೆ ಮಾಹಿತಿಯನ್ನು ಕಲೆ ಹಾಕಲಾರಂಭಿಸಿದೆ. ನಮ್ಮ ಪುರಪಿತೃಗಳು ಓ ಶಾಫ್ನೆೆಸ್ಸಿಿ ಹೆಸರನ್ನು ಮರೆಯದೇ, ಒಂದು ರಸ್ತೆೆಗಿಟ್ಟಿಿದ್ದಾರಲ್ಲ, ಅದು ಎಂಥಾ ಸೂಕ್ತವಾದ ನಿರ್ಧಾರ ಎಂದೆನಿಸಿತು. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಓ ಶಾಫ್ನೆೆಸ್ಸಿಿ ಭಾರತದಲ್ಲಿ ಟೆಲಿಗ್ರಾಾಫ್‌ನ್ನು ಜಾರಿಗೊಳಿಸಿದ, ಜನಪ್ರಿಿಯಗೊಳಿಸಿದ ಆದ್ಯ ಪುರುಷ. ಟೆಲಿಗ್ರಾಾಫನ್ನು ಮೊಟ್ಟ ಮೊದಲು ಕಂಡುಹಿಡಿದಿದ್ದು ಸ್ಯಾಾಮ್ಯುಯೆಲ್ ಮೋರ್ಸ್ ಇರಬಹುದು, ಆದರೆ ಅದನ್ನು ನಮ್ಮ ದೇಶದಲ್ಲಿ ಜಾರಿಗೊಳಿಸಿದ ಅಗ್ಗಳಿಕೆ ಮಾತ್ರ ಓ ಶಾಫ್ನೆೆಸ್ಸಿಿಗೇ ಸಲ್ಲಬೇಕು. ಮುಂದೆ ಟೆಲಿಗ್ರಾಾಫ್ ದೂರಸಂಪರ್ಕ ಮಾಧ್ಯಮ ಬೆಳೆಯಲು ಮಹತ್ತರವಾದ ಪಾತ್ರವನ್ನು ವಹಿಸಿತು. ಒಂದು ವೇಳೆ ಓ ಶಾಫ್ನೆೆಸ್ಸಿಿ ಭಾರತದಲ್ಲಿ ಟೆಲಿಗ್ರಾಾಫನ್ನು ದೇಶದೆಲ್ಲೆಡೆ ವ್ಯಾಾಪಿಸಲು ಶ್ರಮಿಸದೇ ಹೋಗಿದ್ದರೆ, ದೇಶದ ಸ್ಥಿಿತಿ ಹೇಗಿರುತ್ತಿಿತ್ತು ಎಂದು ಊಹಿಸುವುದೂ ಕಷ್ಟ. ಹೀಗಾಗಿ ಆತನನ್ನು ಭಾರತದ ದೂರಸಂಪರ್ಕ ವ್ಯವಸ್ಥೆೆಯ ಅಧ್ವರ್ಯುಗಳಲ್ಲಿ ಒಬ್ಬ ಎಂದು ಪರಿಗಣಿಸುತ್ತಾಾರೆ. ಭಾರತದ ‘ಟೆಲಿಗ್ರಾಾಫ್ ರಸ್ತೆೆ’ ಆರಂಭವಾಗುವುದೇ ಓ ಶಾಫ್ನೆೆಸ್ಸಿಿಯಿಂದ.

ಹಾಗೆಂದು ಆತನೇನು ದೂರಸಂಪರ್ಕ ಪರಿಣತನಲ್ಲ. ಆತ ಮೂಲತಃ ಔಷಧಶಾಸ್ತ್ರದಲ್ಲಿ ಪಾಂಡಿತ್ಯ ಸಾಧಿಸಿದವ. ಹಾಗೆಯೇ ಆತ ಉತ್ತಮ ರಾಸಾಯನಿಕ ತಜ್ಞನೂ ಹೌದು. ಆತನ ವೈದ್ಯಕೀಯ ಸಂಶೋಧನೆಯಿಂದ ಇಂಟ್ರಾಾವೆನಸ್ ಥೆರಪಿ ಮೊದಲ ಬಾರಿಗೆ ಅಭಿವೃದ್ಧಿಿ ಹೊಂದಿದ್ದು ಬೇರೆ ಕತೆ. ಆತನಿಗೆ ಟೆಲಿಗ್ರಾಾಫ್ ಒಂದು ಹವ್ಯಾಾಸ. ಐರ್ಲೆಂಡ್‌ನಲ್ಲಿ ಜನಿಸಿದ ವಿಲಿಯಂ ಬ್ರೂಕ್ ಓ ಶಾಫ್ನೆೆಸ್ಸಿಿ, ಈ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಹುಡುಕಿಕೊಂಡು ಭಾರತಕ್ಕೆೆ ಬಂದವ. ಆತನ ಮನೆ ಮಂದಿಯೆಲ್ಲ ಪಾದ್ರಿಿಗಳು. ಒಂದು ವೇಳೆ ಆತ ತನ್ನ ದೇಶದಲ್ಲಿಯೇ ಇದ್ದಿದ್ದರೆ, ಚರ್ಚಿನ ಹಾದಿಯನ್ನೇ ಹಿಡಿಯುತ್ತಿಿದ್ದ. ಮೊದಲಿನಿಂದಲೂ ಆತನಿಗೆ ಸಂಶೋಧನೆಯಲ್ಲಿ ವಿಪರೀತ ಆಸಕ್ತಿಿ, ಅದು ಯಾವ ಕ್ಷೇತ್ರವೇಆಗಿರಬಹುದು. ಓ ಶಾಫ್ನೆೆಸ್ಸಿಿ ಭಾರತಕ್ಕೆೆ ಬಂದಾಗ ಅವನಿಗೆ ಇಪ್ಪತ್ನಾಾಲ್ಕು ವರ್ಷ. ಈ್ಟ್ ಇಂಡಿಯಾ ಕಂಪನಿಯ ಮಿಲಿಟರಿ ವಿಭಾಗದಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ, ಕೋಲ್ಕತ್ತಾಾದ ಮೆಡಿಕಲ್ ಕಾಲೇಜಿನಲ್ಲಿ ಕೆಮಿಸ್ಟ್ರಿಿ ಪ್ರೊೊಫೆಸರ್ ಆಗಿ ಕೆಲಸಕ್ಕೆೆ ಸೇರಿಕೊಂಡ. ಆತ ಕಲಿತಿದ್ದಕ್ಕೂ, ಕಲಿಸುತ್ತಿಿರುವುದಕ್ಕೂ ಮತ್ತು ಆಸಕ್ತಿಿಗೂ, ಒಂದಕ್ಕೊೊಂದು ಸಂಬಂಧವೇ ಇರಲಿಲ್ಲ. ಆತನಿಗೆ ರಾಸಾಯನಿಕ ಮತ್ತು ಔಷಧ ಶಾಸ್ತ್ರದ ಜತೆಗೆ ಎಲೆಕ್ಟ್ರಿಿಸಿಟಿ ಮತ್ತು ಟೆಲಿಗ್ರಾಾಫ್‌ನಲ್ಲಿ ಅತೀವ ಆಸಕ್ತಿಿಯಿತ್ತು.

1839 ರಲ್ಲಿ ಇಂಗ್ಲೆೆಂಡ್, ಅಮೆರಿಕ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ದೂರಸಂಪರ್ಕ ವ್ಯವಸ್ಥೆೆಯನ್ನು ಜಾರಿಗೊಳಿಸಿದಂತೆ, ಭಾರತದಲ್ಲೂ ಅದನ್ನು ಜಾರಿಗೊಳಿಸಲು ಈ್ಟ್ ಇಂಡಿಯಾ ಕಂಪನಿ ನಿರ್ಧರಿಸಿತು. ಈ ವಿಷಯ ಓ ಶಾಫ್ನೆೆಸ್ಸಿಿಗೆ ಗೊತ್ತಾಾಯಿತು. ಆತನೇ ತನ್ನ ಸೇವೆಯನ್ನು ನೀಡಲು ಮುಂದಾದ. ಆಗಿನ ಗವರ್ನರ್ – ಜನರಲ್ ಆಗಿದ್ದ ಲಾರ್ಡ್ ಆಕ್ಲಾಾ ್ಯಂಡ್ ಅವರಲ್ಲಿ ತನ್ನ ಆಸಕ್ತಿಿಯನ್ನು ತೋಡಿಕೊಂಡ. ಅವರು ಈತನ ಉತ್ಸಾಾಹಕ್ಕೆೆ ತಣ್ಣೀರು ಎರಚಲಿಲ್ಲ.

ರಾಸಾಯನಿಕ ಶಾಸ್ತ್ರದ ಪ್ರಾಾಧ್ಯಾಾಪಕನೊಬ್ಬನಿಗೆ ಟೆಲಿಗ್ರಾಾಫ್ ಜಾಲ ಸ್ಥಾಾಪಿಸುವ ಜವಾಬ್ದಾಾರಿ ವಹಿಸಿದರೆ ಮಾಡುತ್ತಾಾನಾ, ಇಲ್ಲವಾ ಎಂಬುದನ್ನು ಯೋಚಿಸದೇ, ಆ ಪ್ರಮುಖ ಹೊಣೆಗಾರಿಕೆಯನ್ನು ಅವನಿಗೆ ಒಪ್ಪಿಿಸಲಾಯಿತು. ಇದೇನು ಸಣ್ಣ ಜವಾಬ್ದಾಾರಿಯಾಗಿರಲಿಲ್ಲ. ಕೋಲ್ಕತ್ತಾಾದ ಬೊಟಾನಿಕಲ್ ಗಾರ್ಡನ್‌ನಲ್ಲಿ ಪ್ರಯೋಗಾರ್ಥ ಸಣ್ಣದಾಗಿ ಟೆಲಿಗ್ರಾಾಫ್ ಜಾಲ ಸ್ಥಾಾಪಿಸಿ, ಅದು ಯಶಸ್ವಿಿಯಾದರೆ, ಅದನ್ನು ಹಂತ ಹಂತವಾಗಿ ವಿಸ್ತರಿಸಲು, ಯೋಚಿಸಿದ. ಸುಮಾರು ಎರಡು ವರ್ಷಗಳ ಕಾಲ ಆಳವಾಗಿ ಅಧ್ಯಯನ ನಡೆಸಿದ ಓ ಶಾಫ್ನೆೆಸ್ಸಿಿ, ಟೆಲಿಗ್ರಾಾಫ್ ಮಹತ್ವ ಮತ್ತು ಪ್ರಯೋಜನವನ್ನು ಜನರಿಗೆ ತಿಳಿಸಲು ಬಹಳ ಶ್ರಮಪಟ್ಟ.

ಸುಮಾರು ನಾಲ್ಕು ವರ್ಷಗಳ ಸತತ ಸಂಶೋಧನೆ, ಪ್ರಯೋಗಗಳ ನಂತರ, ಸುಮಾರು ಇಪ್ಪತ್ತೊೊಂದು ಮೈಲಿ ದೂರದ ಕಬ್ಬಿಿಣದ ತಂತಿಗಳನ್ನು ಹದಿನೈದು ಅಡಿ ಎತ್ತರದ ಬಿದಿರಿನ ಕಂಬಕ್ಕೆೆ ಕಟ್ಟಿಿ, ಲೈನ್ ಎಳೆದು ಮೋರ್ಸ್ ಕೋಡ್‌ನ್ನುಆಧಾರವಾಗಿಟ್ಟುಕೊಂಡು ಮೊದಲ ಸಂದೇಶವನ್ನು ಯಶಸ್ವಿಿಯಾಗಿ ಕಳಿಸಿದ. ಇದರಿಂದ ಅವನಿಗೆ ಈ ಪ್ರಯೋಗವನ್ನು ದೇಶಾದ್ಯಂತ ಜಾರಿಗೊಳಿಸಬಹುದು ಎಂಬ ವಿಶ್ವಾಾಸ ಮೂಡಿತು. ಆನಂತರ ಆತ ಹಿಂತಿರುಗಿ ನೋಡಲೇ ಇಲ್ಲ. ಟೆಲಿಗ್ರಾಾಫ್ ವ್ಯವಸ್ಥೆೆಯನ್ನು ಮಾಡುತ್ತಿಿರುವಾಗಲೇ, ಜತೆಯಲ್ಲಿ ಸಂಸ್ಕೃತ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಸಹ ಕಲಿಯಲಾರಂಭಿಸಿದ್ದ. ಓ ಶಾಫ್ನಿಿಸ್‌ಸ್‌ ಮಾಡಿದ ಟೆಲಿಗ್ರಾಾಫ್ ಮಾದರಿಯನ್ನು ಯಾವ ನಗರದಲ್ಲಾದರೂ ಸ್ಥಾಾಪಿಸುವುದು ಕಷ್ಟವೇನೂ ಆಗಿರಲಿಲ್ಲ. ಆದರೆ ರಾಜಕೀಯ ಕಾರಣಗಳಿಗಾಗಿ, ಒಂದೇ ಸಲ ಟೆಲಿಗ್ರಾಾಫ್ ವ್ಯವಸ್ಥೆೆಯನ್ನು ವಿಸ್ತರಿಸಲು ಈ್ಟ್ ಇಂಡಿಯಾ ಕಂಪನಿ ಉತ್ಸಾಾಹ ತೋರಲಿಲ್ಲ.

ಇದರಿಂದ ತುಸು ನಿರಾಶನಾದ ಓ ಶಾಫ್ನೆೆಸ್ಸಿಿ, ಮರಳಿ ಐರ್ಲೆಂಡಿಗೆ ಹೋಗಲು ನಿರ್ಧರಿಸಿದ. ಆದರೆ ಆತನಿಗೆ ಹೆಚ್ಚು ದಿನ ಅಲ್ಲಿರಲು ಆಗಲಿಲ್ಲ. ಆತ 1841 ರಲ್ಲಿ ಇಂಗ್ಲೆೆಂಡಿಗೆ ಮರಳಿದ. ಮೂರು ವರ್ಷಗಳ ನಂತರ ಲಾರ್ಡ್ ಡಾಲ್ ಹೌಸಿ ಗವರ್ನರ್-ಜನರಲ್ ಆದಾಗ, ಭಾರತದ ಮೇಲೆ ಇನ್ನೂ ಹೆಚ್ಚಿಿನ ನಿಯಂತ್ರಣ ಹೊಂದಲು ಟೆಲಿಗ್ರಾಾಫ್ ವ್ಯವಸ್ಥೆೆಯನ್ನುಇನ್ನಿಿತರ ಪ್ರಮುಖ ನಗರಗಳಿಗೆ ವಿಸ್ತರಿಸಲು ತೀರ್ಮಾನಿಸಿದ. ಆಗ ಡಾಲ್ ಹೌಸಿಗೆ ಓ ಶಾಫ್ನೆೆಸ್ಸಿಿ ಮಾಡಿದ ಕೆಲಸಗಳ ಬಗ್ಗೆೆ ಅವನ ಸಹೋದ್ಯೋೋಗಿಗಳು ಗಮನ ಸೆಳೆದರು. ಹಾಗಾದರೆ ಆತನನ್ನು ಇಂಗ್ಲೆೆಂಡಿನಿಂದ ಕರೆಯಿಸಿ ಎಂದು ಗವರ್ನರ್-ಜನರಲ್ ಆದೇಶಿಸಿದರು. ಪರಿಣಾಮವಾಗಿ ಓ ಶಾಫ್ನೆೆಸ್ಸಿಿ ಪುನಃ ಭಾರತಕ್ಕೆೆ ಬಂದ . 1849 ರಲ್ಲಿ ಟೆಲಿಗ್ರಾಾಫ್ ವ್ಯವಸ್ಥೆೆಯನ್ನು ಇಡೀ ದೇಶಾದ್ಯಂತ ವಿಸ್ತರಿಸಲು ಈ್ಟ್ ಇಂಡಿಯಾ ಕಂಪನಿ ನಿರ್ಧರಿಸಿತಲ್ಲದೇ, ಇದರ ಸಂಪೂರ್ಣ ನೇತೃತ್ವವನ್ನು ಓ ಶಾಫ್ನೆೆಸ್ಸಿಿಗೆ ವಹಿಸಲು ಬ್ರಿಿಟಿಷ್ ಆಡಳಿತ ನಿರ್ಧರಿಸಿತು.

ಓ ಶಾಫ್ನೆೆಸ್ಸಿಿ ಹೊಸತಾಗಿ ಮಾಡುವುದೇನೂ ಇರಲಿಲ್ಲ. ಹಾಗೆಂದು ಅವನ ಕೆಲಸ ಸುಲಭವಾಗಿರಲಿಲ್ಲ. ತಾನು ಯಶಸ್ವಿಿಯಾಗಿ ಮಾಡಿದ ಪ್ರಯೋಗವನ್ನು ದೇಶಾದ್ಯಂತ ವಿಸ್ತರಿಸುವುದು ದೊಡ್ಡ ಸವಾಲೇ ಆಗಿತ್ತು. ಆದರೆ ಓ ಶಾಫ್ನೆೆಸ್ಸಿಿ ಮಹಾ ಹಠವಾದಿ. ಅಂದುಕೊಂಡಿದ್ದನ್ನು ಮಾಡಿಯೇ ತೀರುವ ಛಲಗಾರ. ಐದು ವರ್ಷಗಳ ಅವಧಿಯಲ್ಲಿ ಭಾರತದ ಎಲ್ಲ ನಗರ ಮತ್ತು ಪ್ರಮುಖ ಪಟ್ಟಣಗಳಲ್ಲಿ ಟೆಲಿಗ್ರಾಾಫ್ ವ್ಯವಸ್ಥೆೆಯನ್ನು ಅಚ್ಚುಕಟ್ಟಾಾಗಿ ಜಾರಿಗೊಳಿಸಿಬಿಟ್ಟ. ಅಷ್ಟೇ ಅಲ್ಲ, ದಾಖಲೆ ಸಮಯದಲ್ಲಿ ಭಾರತ ಮತ್ತು ಇಂಗ್ಲೆೆಂಡ್ ನಡುವೆಯೂ ಪರ್ಷಿಯನ್ ಗಲ್‌ಫ್‌ ಮೂಲಕ ಟೆಲಿಗ್ರಾಾಫ್ ತಂತಿ ಎಳೆದು ಸಂಪರ್ಕ ಕಲ್ಪಿಿಸಿಬಿಟ್ಟ. ಯಾವುದು ಸಾಧ್ಯವಿಲ್ಲವೆಂದು ಅಂದಿನ ದಿನಗಳಲ್ಲಿ ಭಾವಿಸಿದ್ದರೋ, ಓ ಶಾಫ್ನೆೆಸ್ಸಿಿ ಸಾಧ್ಯಮಾಡಿ ತೋರಿಸಿದ್ದ. ಆನಂತರ 1857 ರಲ್ಲಿ ನಡೆದ ಸಿಪಾಯಿ ದಂಗೆಯಲ್ಲಿ ಟೆಲಿಗ್ರಾಾಫ್ ಅದೆಂಥ ಅದ್ಭುತ ರೀತಿಯಲ್ಲಿ ನೆರವಿಗೆ ಬಂತೆಂಬುದು ಬೇರೆ ಕತೆ.

ತನಗೆ ವಹಿಸಿದ ಕಾರ್ಯವನ್ನು ಮುಗಿಸಿದ ಓ ಶಾಫ್ನೆೆಸ್ಸಿಿ, 1860 ರಲ್ಲಿ ಇಂಗ್ಲೆೆಂಡಿಗೆ ಮರಳಿದ. ಅದಕ್ಕೂ ಮುನ್ನ ಅವನ ಸೇವೆಯನ್ನು ಪರಿಗಣಿಸಿ ಬ್ರಿಿಟಿಷ್ ಆಡಳಿತ ವಿಶೇಷವಾಗಿ ಸತ್ಕರಿಸಿತು. ಪಾಠ ಮಾಡಲೆಂದು ಬಂದವ ಇಡೀ ದೇಶವಾಸಿಗಳ ಸಂದೇಶ ರವಾನೆ ರಂಗದಲ್ಲಿ ದೊಡ್ಡ ಕ್ರಾಾಂತಿಯನ್ನು ಮಾಡಿ ಹೋಗಿದ್ದ. ಇಂಗ್ಲೆೆಂಡಿಗೆ ಹೋದ ನಂತರ ಆತ ಏನಾದನು ಎಂಬುದು ಯಾರಿಗೂ ಗೊತ್ತೇ ಆಗಲಿಲ್ಲ. 1889 ರಲ್ಲಿ ಆತ ತೀರಿಕೊಂಡ ಎಂಬುದಷ್ಟೇ ಕಟ್ಟಕಡೆಗೆ ಗೊತ್ತಾಾದ ವಿಷಯ.

ಇಂದು ದೂರಸಂಪರ್ಕ ಕ್ಷೇತ್ರದಲ್ಲಿ ಜಗತ್ತಿಿನಲ್ಲಿ ಭಾರತ ಅಗಾಧ ಸಾಧನೆ ಮಾಡಿದ್ದರೆ, ಅದರ ತಾಯಿಬೇರು ಓ ಶಾಫ್ನೆೆಸ್ಸಿಿ ಪ್ರಯತ್ನದಲ್ಲೂ ಇದೆ ಎಂಬುದನ್ನು ಮರೆಯುವಂತಿಲ್ಲ. ಆತ ಇಂಗ್ಲೆೆಂಡಿಗೆ ಹೋಗಿ ಸತ್ತು ನೂರು ವರ್ಷಗಳ ನಂತರ ಬೆಂಗಳೂರಿನ ಜನ ಅವನನ್ನು ನೆನಪಿಸಿಕೊಂಡು, ಅವನ ಸ್ಮರಣೆಯನ್ನು ಶಾಶ್ವತವಾಗಿ ಇಡಲು ಒಂದು ಬೀದಿಗೆ ‘ಓ ಶಾಫ್ನೆೆಸ್ಸಿಿ ರಸ್ತೆೆ’ ಎಂದು ಹೆಸರಿಟ್ಟರು!
ನನ್ನಿಿಂದಾದ ಪ್ರಮಾದವನ್ನು ಸರಿಪಡಿಸುವುದಕ್ಕಾಾಗಿ ಇವೆಲ್ಲವನ್ನೂ ಹೇಳಬೇಕಾಯಿತು.