Saturday, 23rd November 2024

ಗಂಡಸರಿಗೆ ಎಣ್ಣೆ ಜೊತೆ ಕಾಂಗ್ರೆಸ್ ಕಡ್ಲೆಬೀಜ ಫ್ರೀ

ತುಂಟರಗಾಳಿ

ಸಿನಿಗನ್ನಡ

ಯಾವುದೇ ರಂಗದಲ್ಲಿ ಸಾಧನೆ ಅನ್ನೋದು ತುಂಬಾ ಮುಖ್ಯ ಆಗುತ್ತೆ ನಿಜ. ಸಿನಿಮಾ ರಂಗದಲ್ಲಂತೂ ಅದರ ಪ್ರಮಾಣ ಎಷ್ಟು ಅನ್ನೋದ್ರ ವಿಷ್ಯ ಬಂದ್ರೆ ಸ್ವತಃ ಸಾಧಕರಿಗೇ ಎಷ್ಟು ಮಾಡಿದ್ರೂ ಕೊರಗು ಬಾಧಿಸುತ್ತಲೇ ಇರುತ್ತೆ. ಅದರಲ್ಲೂ ಅವರ ಪ್ರತಿಭೆಗೆ ತಕ್ಕಂಥ ಬೆಲೆ ಸಿಗದೇ ಇದ್ರೆ ಅಂಥ ಕಲಾವಿದರಿಗೆ
ಇಂಥ ‘ಸಾಧಕ ಬಾಧಕ’ಗಳು ಹೆಚ್ಚು. ನಟ ನವೀನ್ ಕೃಷ್ಣ ಅವರದ್ದೂ ಹೆಚ್ಚು ಕಮ್ಮಿ ಇಂಥದ್ದೇ ಪರಿಸ್ಥಿತಿ. ಅವರು ಚಿತ್ರ ರಂಗದಲ್ಲಿ ಸಾಕಷ್ಟು ಹೆಸರು
ಮಾಡಿದ್ದಾರೆ.

ಅಷ್ಟೇ ಅಲ್ಲದೆ ಕಿರುತೆರೆಯಲ್ಲೂ ಜನಪ್ರಿಯ ನಟ, ನಿರ್ದೇಶಕ, ಬರಹಗಾರ ಹೀಗೆ ಹಲವು ವಿಭಾಗಗಳಲ್ಲಿ ಅವರ ಗತ್ತು ಕನ್ನಡ ಕಲಾರಸಿಕರಿಗೆ ಗೊತ್ತು. ಅವರನ್ನು ಈಗ ನಟ ಶ್ರೀನಿವಾಸ ಮೂರ್ತಿ ಅವರ ಮಗ ಅಂತ ಕರೆಯೋ ಅಗತ್ಯ ಖಂಡಿತಾ ಇಲ್ಲ. ಇದು ಅವರು ತಾವೇ ಮಾಡಿಕೊಂಡಿರುವ ಹೆಸರು. ಆದರೂ ಅವರಿಗೆ ತಾನು ತನ್ನ ತಂದೆಯಷ್ಟು ಹೆಸರು ಮಾಡಲಿಲ್ಲ ಅನ್ನೋ ಕೊರಗು ಇದೆ. ಅದನ್ನು ಅವರು ಆಗಾಗ ತೋರಿಸಿಕೊಳ್ಳುತ್ತಾರೆ ಕೂಡಾ. ಇದು ಮಹತ್ವಾಕಾಂಕ್ಷೆ ಇರೋ ಎಲ್ಲ ಪ್ರತಿಭೆಗಳಿಗೂ ಸಾಮಾನ್ಯವಾಗಿ ಇರೋ ಬೇಸರ. ಯಾವಾಗ ಹೋಲಿಕೆ ಅಂತ ಬರುತ್ತೋ ಆಗ ಬೇಸರ, ಅಸಮಾಧಾನಗಳು ಹುಟ್ಟಿಕೊಳ್ಳುತ್ತೆ.

ಒಂದು ಕ್ಷಣ ನವೀನ್ ಕೃಷ್ಣ ಅವರು, ನಾನು ಶ್ರೀನಿವಾಸ ಮೂರ್ತಿ ಮಗ ಅನ್ನೋದನ್ನು ಮರೆತು ತಮ್ಮ ಇದು ವರೆಗಿನ ಸಾಧನೆಯನ್ನು ನೋಡಿಕೊಂಡರೆ, ಖಂಡಿತಾ ಅವರಿಗೆ ಅವರ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಆದರೆ ಅವರು ನನ್ನ ತಂದೆಯಷ್ಟು ಹೆಸರು ಮಾಡಿದ್ದೀನಾ ಅಂತ ಕಂಪೇರ್ ಮಾಡಿಕೊಳ್ಳಲು ಹೋಗುವುದು ಅನಗತ್ಯ ಯೋಚನೆ. ಆದರೆ ಒಂದು ಮಾತಂತೂ ಸತ್ಯ. ಶ್ರೀನಿವಾಸಮೂರ್ತಿ ಅವರೇನೂ ಚಿತ್ರರಂಗದಲ್ಲಿ ತಮ್ಮ ಮಗನಿಗೆ ಅವಕಾಶ ಕೊಡಿಸುವಷ್ಟು ದೊಡ್ಡ ಪ್ರಭಾವಿ ಮನುಷ್ಯ ಅಲ್ಲ, ಒಂದು ವೇಳೆ ಆರಂಭದಲ್ಲಿ ಒಂದೆರಡು ಅವಕಾಶ ಕೊಡಿಸಿ ದ್ದರೂ ಪ್ರತಿದಿನ ಕೊಡಿಸೋದು ಸಾಧ್ಯ
ಇಲ್ಲ.

ಹಾಗಾಗಿ, ಇದುವರೆಗೂ ನವೀನ್ ಕೃಷ್ಣ ಅವರಿಗೆ ಸಿಕ್ಕಿರುವ ಅವಕಾಶಗಳಾಗಲೀ, ಅವರು ಅದನ್ನು ಬಳಸಿಕೊಂಡು ಮಾಡಿರುವ ಸಾಧನೆ ಆಗಲಿ, ಕನ್ನಡಿ ಗರು ತಮ್ಮ ಹೃದಯದಲ್ಲಿ ನವೀನ್ ಅವರಿಗೆ ಕೊಟ್ಟಿರುವ ಜಾಗ ಆಗಲೀ, ಅವರ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದ ಮಾತ್ರ ಆಗಿದೆಯೇ ಹೊರತು ಇನ್ನೇನೂ ಅಲ್ಲ. ಇದು ನವೀನ್ ಅವರಿಗೆ ಮನವರಿಕೆ ಆದರೆ ಅವರ ಮನಸ್ಸಿನ ಗೊಂದಲಗಳಿಗೆ ತೆರೆಬೀಳಬಹುದು. ತಮ್ಮ ಬಗ್ಗೆ ತಮಗೆ ಹೆಮ್ಮೆ ಅನಿಸ ಬಹುದು.

ಲೂಸ್ ಟಾಕ್
ಸಿದ್ದರಾಮಯ್ಯ (ಕಾಲ್ಪನಿಕ ಸಂದರ್ಶನ)
ಏನ್ ಮುಖ್ಯಮಂತ್ರಿಗಳೇ, ಕರೆಂಟ್ ಬಿಲ್ ಕಟ್ಟಂಗಿಲ್ಲ ಅಂತ ಜನರಿಗೆ ಬಂಪರ್ ಆಫರ್ ಕೊಟ್ಟಿದ್ದೀರಾ?
-ಹೌದು, ಹಾಗಂತ ನಾನು ಚೀ- ಮಿನಿಸ್ಟರ್ ಅನ್ನೋದನ್ನ ಮರೆತು ಕರೆಂಟ್ ಅಫರ್ಸ್ ಮಿನಿಸ್ಟರ್ ಅಂದ್ಕೊಬೇಡ್ರಪ್ಪಾ..

ಆದ್ರೂ ಇಷ್ಟೊಂದು ಉಚಿತ ಭಾಗ್ಯಗಳು ಬೇಕಾಗಿತ್ತಾ?
-ನೋಡಿ, ಕಷ್ಟ ಪಟ್ಟವನಿಗೆ ಮಾತ್ರ ಅದರ ಬೆಲೆ ಗೊತ್ತು. ಈ ಬಿಜೆಪಿಯವ್ರು ಬಡವರಿಗೆ ಕಡ್ಲೇಬೀಜ ತಿನ್ನಿಸ್ತಾ ಇದ್ರು. ನಾನು ನಾನು ಬಾದಾಮಿಯಲ್ಲಿ ಸೋತು ಕಷ್ಟ ಅನುಭವಿಸಿದವನು.. ಹಂಗಾಗಿ ಜನರಿಗೆ ‘ಬಾದಾಮಿ’ ತಿನ್ನಿಸ್ತಾ ಇದ್ದೀನಿ…

ಅದ್ಸರಿ, ಹೆಂಗಸರಿಗೆ ಬಸ್ ಪ್ರಯಾಣ ಉಚಿತ ಅನ್ನೋ ಯೋಜನೆ ಹಿಂದಿನ ಮರ್ಮ ಏನು?
-ಗಂಡಸು ಮನೆಯಲ್ಲಿ ಕೂತು ಕೆಟ್ಟ, ಹೆಂಗಸು ತಿರುಗಾಡಿ ಕೆಟ್ಳು ಅನ್ನೋ ಮಾತನ್ನ ಸುಳ್ಳು ಮಾಡ್ಬೇಕು ಅಂತ

ಆದ್ರೂ ಎಲ್ಲಾ ಭಾಗ್ಯಗಳೂ ಬರೀ ಹೆಂಗಸರಿಗೇ ಆದ್ವು. ಗಂಡಸರಿಗೇನೂ ಇಲ್ವಾ?
-ಅಯ್ಯೋ, ಮನೆಯ ಗೃಹಲಕ್ಷ್ಮಿ ನಗ್ತಾ ಇದ್ರೆ, ಗಂಡಸರಿಗೆ ಅದೇ ದೊಡ್ಡ ಭಾಗ್ಯ ಅಲ್ವಾ?

ಈ ಥರ ಮೂಗಿಗೆ ತುಪ್ಪ ಸವರೋ ಕೆಲಸ ಎಲ್ಲ ಬ್ಯಾಡ, ಗಂಡ್ಮಕ್ಳಿಗೆ ತುಪ್ಪ ಹೋಗ್ಲಿ, ಅಟ್ ಲೀ ಎಣ್ಣೆನಾದ್ರೂ ಫ್ರೀ ಕೊಡ್ತೀರಾ ಹೇಳಿ.
-ಅಯ್ಯೋ, ಹಂಗೆ ಎಣ್ಣೆ ಫ್ರೀ ಕೊಡೋಕಾಗಲ್ಲ, ಬೇಕಿದ್ರೆ ಎಣ್ಣೆ ಜತೆ ಸೈಡ್ಸ್ ಗೆ ಕಾಂಗ್ರೆಸ್ ಕಡ್ಲೇಬೀಜ ಫ್ರೀ ಕೊಡ್ತೀವಿ..

ನೆಟ್ ಪಿಕ್ಸ್
ಖೇಮು ಮತ್ತೆ ಖೇಮುಶ್ರೀ ಒಂದು ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋದ್ರು. ಅಲ್ಲಿ ಒಂದು ಜಯಂಟ್ ವೀಲ್ ನೋಡಿ ಖೇಮುಗೆ ಅದರಲ್ಲಿ
ಕೂರಬೇಕು ಅಂತ ಆಸೆ ಆಯ್ತು. ಹಾಗಂತ ಖೇಮುಶ್ರೀಗೆ ಹೇಳಿದ. ಅದಕ್ಕೆ ಖೇಮುಶ್ರೀ, ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ ೫೦೦
ರುಪಾಯಿ. ೫೦೦ ರುಪಾಯಿ ಏನು ಸುಮ್ನೆ ಬರುತ್ತಾ? ಅಂದ್ಳು. ಸರಿ ಅಂತ ಖೇಮು ಸುಮ್ಮನೆ ಆದ. ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಖೇಮುಗೆ ಮತ್ತೆ ಜಯಂಟ್ ವೀಲ್‌ನಲ್ಲಿ ಕೂತ್ಕೊಳ್ಳೋ ಆಸೆ ಆಯ್ತು. ಹೆಂಡತಿಗೆ ಹೇಳಿದ.

ಖೇಮುಶ್ರೀಯಿಂದ ಅದೇ ಉತ್ತರ ಬಂತು, ೫೦೦ ರುಪಾಯಿ ಏನು ಸುಮ್ನೆ ಬರುತ್ತಾ ಅಂತ. ಸರಿ ಹೀಗೇ ವರುಷಗಳು ಕಳೆದು ಖೇಮು ಮುದುಕ ಆದ. ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. ನಂಗೆ ವಯಸ್ಸು ೭೦ ಆಯ್ತು, ಈ ಸಲನಾದ್ರೂ ಅದರಲ್ಲಿ ಕೂತ್ಕೊತೀನಿ ಕಣೇ. ಇಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ ಅಂದ ಖೇಮು.  ಅದಕ್ಕೆ ಖೇಮುಶ್ರೀ ಮತ್ತೆ ಅದೇ ಮಾತು ಹೇಳಿದ್ಳು, ೫೦೦ ರುಪಾಯಿ ಏನು ಸುಮ್ನೆ ಬರುತ್ತಾ. ಆಗ ಇದನ್ನ ಆ ಜಯಂಟ್ ವೀಲ್ ರೈಡರ್ ಕೇಳಿಸಿಕೊಂಡ. ನೋಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರೋ ಖುಷಿಗೆ, ಅವರ ಸ್ಕೀಮ್ ಥರನೇ ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವೀಲ್‌ನಲ್ಲಿ ಕರ್ಕೊಂಡ್ ಹೋಗ್ತೀನಿ. ಆದ್ರೆ, ಒಂದ್ ಕಂಡೀಷನ್. ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮ್ಗೆ ೫೦೦ ರುಪಾಯಿ ಫೋನ್ ಆಗುತ್ತೆ ಅಂತ ಖೇಮು ದಂಪತಿಗಳಿಗೆ ಹೇಳಿದ.

ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್ ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ಈ ವಯಸ್ಸಲ್ಲೂ ನೀವು ಹೆದರಿಕೊಳ್ಳಲೇ ಇಲ್ಲ. ಗುಡ್ ಜಾಬ. ಅದಕ್ಕೆ ಹಿಂದೆ ಕೂತಿದ್ದ ಖೇಮು ಮೆಲ್ಲಗೆ ಹೇಳಿದ ಅಯ್ಯೋ ಹೆದರಿಕೊಳ್ಳೋದ್ ಏನ್ ಬಂತು., ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದುಹೋದಳು. ಆದ್ರೂ ಸುಮ್ಮನೆ ಕೂತಿದ್ದೆ, ಯಾಕಂದ್ರೆ ೫೦೦ ರುಪಾಯಿ ಏನು ಸುಮ್ನೆ ಬರುತ್ತಾ?

ಲೈನ್ ಮ್ಯಾನ್
ಬೇಸಿಗೆ ಮುಗಿದು ಮಳೆಗಾಲ ಶುರುವಾಗೋ ಟೈಮಲ್ಲಿ ಆಗೋ ಬದಲಾವಣೆಗಳು
-ತಮಿಳುನಾಡಿನವರು ನೀರು ಬಿಡಿ ಅಂತ ನಮ್ಮನ್ನ ಕೇಳಲ್ಲ.
-ಮರಗಳನ್ನು ಬೆಳೆಸಿದ ಸಾಲು ಮರದ ತಿಮ್ಮಕ್ಕನನ್ನು ಜನ ಮರೆತೇ ಹೋಗ್ತಾರೆ.
– ಇನ್ಮೇಲೆ ಎಸಿ ಅಂದ್ರೆ ಏರ್ ಕಂಡೀಷನರ್ ಅಲ್ಲ, ಬರೀ ಅಸಿಸ್ಟೆಂಟ್ ಕಮಿಷನರ್
-ಹುಡುಗಿಯರು ಮನೆಯಿದ ಹೊರಗೆ ಬರೋದು ಜಾಸ್ತಿ ಆಗುತ್ತೆ. ಸೋ ಅವರನ್ನ ನೋಡುತ್ತಾ ರಸ್ತೆಯಲ್ಲಿ ಅಪಘಾತ ಮಾಡುವ ಹುಡುಗರ ಸಂಖ್ಯೆ ಜಾಸ್ತಿ ಆಗುತ್ತೆ.
-ತಪ್ಪು ಮಾಡಿದವರು ಮಾತ್ರ ಬೆವರುವುದರಿಂದ, ಪೊಲೀಸರಿಗೆ ಅಪರಾಧಿಗಳನ್ನು ಕಂಡು ಹಿಡಿಯೋದು ಸುಲಭ ಆಗುತ್ತೆ.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಏನು ಹೇಳ್ತಾ ಇದೆ?

-ಏನನ್ನೇ ಆಗಲಿ, ಉಚಿತವಾಗಿ ಕೊಡೋದು ಉಚಿತವಲ್ಲ

USಇ ವರ್ಲ್ಡ್ ಟೆ ಚಾಂಪಿಯನ್ ಶಿಪ್ ನಡೀತಾ ಇದೆ.

-ಟ್ವಿನ್ ಟೀಮ್ಸನಲ್ಲಿ ಕೊಲ್ಯಾ ಆಗೋದು ಯಾರು?

ವರ್ಲ್ಡ್ ಟೆ ಚಾಂಪಿಯನ್ ಶಿಪ್ ಗೆಕೆ ನ್ಯೂಜಿಲ್ಯಾಂಡ್‌ನ ವಿಲಿಯಮ್ಸನ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಏನು ಹೇಳಿದ್ರು?
-ಕಿವಿ ಮಾತು

ಟೆನಲ್ಲಿ, ಗೆ ಅಥವಾ ಸೋಲೋ ಮ್ಯಾಚ್ ಡ್ರಾ ಆದ್ರೆ ಅದು
-ಡ್ರಾ-ಮ್ಯಾಟಿಕ್ ರಿಸಲ್ಟ್

ತಮಿಳು ನಾಡಿನಲ್ಲಿರುವ ಪರಿಸರ ಪ್ರೇಮಿ
-ಸಸಿ ಕುಮಾರ

ಬೇಬಿ ಸಿಟ್ಟರ್‌ನ ಕನ್ನಡದಲ್ಲಿ ಏನಂತಾರೆ?
-ಶಿಶು-ಪಾಲ

ರಾಜಕೀಯ ಸಮಾವೇಶಗಳಲ್ಲಿ ಜೈಕಾರ ಹಾಕೋಕೆ ಬರೋ ಜನಗಳಿಗೆ ಕೊಡುವ ಬಿರಿಯಾನಿ
-ಜೈವಿಕ ಆಹಾರ