ಪ್ರಸ್ತುತ
ಪಾಂಚಜನ್ಯ ಪ್ರದೀಪ್
ಹಿಂದಿ ಭಾರತ ದೇಶದ ಆಡಳಿತ ಭಾಷೆ ಇದನ್ನು ರಾಜಕೀಯ ಆಟದ ದಾಳದ ಭಾಷೆಯನ್ನಾಗಿ ಬಳಸಿಕೊಳ್ಳಲಾಗು ತ್ತಿದೆ. ಇಂದು ಇಂಗ್ಲೀಷಿನಷ್ಟೇ ಹಿಂದಿ ಕೂಡ ಅನಿವಾರ್ಯ ಭಾಷೆಯಾಗಿದೆ. ಪ್ರೊಫೆಸರ್ ದೊಡ್ಡರಂಗೇಗೌಡರವರು ಹಾವೇರಿಯಲ್ಲಿ ನೆಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ‘ಹಿಂದಿಗಿಂತ ಇಂಗ್ಲೀಷ್ ಅಪಾಯಕಾರಿ’ ಎಂದಿದ್ದರು. ಈ ಮಾತು ಅಕ್ಷರಶಃ ಸತ್ಯ.
ವಿದೇಶಿ ಭಾಷೆಯನ್ನು ತಲೆಮೇಲೆ ಕೂರಿಸಿಕೊಂಡು ಭಾರತದ ಭಾಷೆಗಳನ್ನು ಭಾರತೀಯರೆ ಟೀಕಿಸುವ ದುಸ್ಥಿತಿಗೆ ತಲುಪಿದ್ದೇವೆ. ವಿದೇಶಿ ಭಾಷೆಯನ್ನು ಅತಿಯಾಗಿ ಬಳಸಿ ಮತ್ತೆ ವಿದೇಶಿ ಭಾಷೆಯ ಗುಲಾಮಿತನಕ್ಕೆ ಹೋಗುತಿದ್ದೇವೆ. ಈ ಗುಲಾಮಿತನ ಬೇಡವೆಂದೇ ಗಾಂಧೀಜಿಯವರು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡಹೊರಟಿದ್ದರು.
ಯಾವ ದೇಶಕ್ಕೆ ರಾಷ್ಟ್ರ ಭಾಷೆ ಇರುವುದಿಲ್ಲವೊ ಆ ದೇಶ ಮೂಕವಾಗಿರುತ್ತದೆ ಎಂಬ ಅವರ ಹೇಳಿಕೆ ನಿಜವಾಗುತ್ತಿದೆ.
ರಾಷ್ಟ್ರೀಯ ಹೆದಾಧಿರಿಗಳಲ್ಲಿ ಹಿಂದಿಯ ನಾಮಫಲಕಕ್ಕೆ ಕೆಲ ಸಂಘ ಟನೆಗಳು ಮಸಿ ಬಳಿಯುವುದು ಹಾಗಾಗ ಕಂಡು ಬರುತ್ತಿದೆ. ಹಿಂದಿ ರಾಜ್ಯದವರು ಕನ್ನಡವನ್ನು ಅವರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಮಫಲಕ ಹಾಕಿದ್ದಾರಾ? ಎಂಬ ವಿತ್ತಂಡವಾದವನ್ನು ಮಾಡುತ್ತಾರೆ ಹಾಗಾದಾರೆ ಯಾವ ಲಂಡನ್, ಇಂಗ್ಲೆಂಡ್, ಅಮೆರಿಕದ ಹೆದ್ದಾರಿಗಳಲ್ಲಿ ಕನ್ನಡ ನಾಮಫಲಕವನ್ನು ಹಾಕಿದ್ದಾರೆ? ಭಾರತದಾದ್ಯಂತ ಹಿಂದಿ ದಿನಾಚರಣೆಯನ್ನು ಸೆಪ್ಟೆಂಬರ್ ೧೪ ರಂದು
ಆಚರಿಸ ಲಾಗುತ್ತಿದೆ.
ಕೆಲ ಸಂಘಟನೆಗಳು ಈ ದಿನವನ್ನು ವಿರೋಧಿಸುತ್ತಾರೆ ಇದಕ್ಕೆ ರಾಜಕೀಯ ಪ್ರೇರಿತವೂ ಇದೆ. ಕಳೆದ ವರ್ಷ ಸಿದ್ದ ರಾಮಯ್ಯನವರು ‘ಉರ್ದು ದಿನಾಚರಣೆ’ಯನ್ನು ಮುಸ್ಲಿಂ ಸಮುದಾಯದಲ್ಲಿ ಆಚರಿಸಿ ಸಾಮಾಜಿಕ ಜಾಲತಾಣ ದಲ್ಲಿ ಭಾರಿ ಟೀಕೆಗೆ ಒಳಗಾಗಿದ್ದರು. ಈ ರಾಜ್ಯದಲ್ಲಿ ಉರ್ದು ದಿನಾಚರಣೆ ಆಚರಿಸಬಹುದು ಆದರೆ ಹಿಂದಿ
ದಿನಾಚರಣೆ ಆಚರಿಸುವಂತಿಲ್ಲ ಎನ್ನುವುದಾದರೆ ಇದೆಂತಹ ಎಂತಹ ವಿಪರ್ಯಾಸ? ಮೂರ್ನಾಲ್ಕು ವರ್ಷಗಳ ಹಿಂದೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ರವರು ಅಮಿತಾಬ್ ಬಚ್ಚನ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದಾಗ ಹಿಂದಿ ಮತ್ತು ಕನ್ನಡದಲ್ಲಿ ಬೇಗ ಗುಣಮುಖವಾಗಿ ಬರಲಿ ಎಂದು ಫೇಸ್ಬುಕ್‌ನಲ್ಲಿ ಶುಭಕೋರಿದ್ದರು ಹಿಂದಿಯಲ್ಲಿ ಬರೆದಿzರೆ ಎಂದು ಕೆಲ ಅವಿವೇಕಿಗಳು ಟೀಕಿಸಿದರು.
ಇಂಗ್ಲೀಷ್ ಲ್ಲಿ ಬರೆದರೆ ಟೀಕೆ ಇಲ್ಲ ಹಿಂದಿಯಲ್ಲಿ ಬರೆದರೆ ಟೀಕೆ ಎಂದೆರೆ ಎಷ್ಟು ಹಾಸ್ಯಾಸ್ಪದ.
‘ಯಾವನಿಗ್ ಅರ್ಥ ಆಗುತ್ತೆ? ಹಿಂದಿವಾಲಾಗಳು ಕನ್ನಡದಲ್ಲಿ ಅವ್ರು ಹಿಂಗೆ ಹಾಕ್ಕೋತರಾ?’ ಎನ್ನುವ ಮಾತು ಸಾಮಾನ್ಯ ಯಾವ ಇಂಗ್ಲೀಷಿಯನ್ ಕನ್ನಡದಲ್ಲಿ ಒಂದು ಪದ ಹಾಕಿದ್ದಾನೆ ಹಾಕಿಕೊಂಡಿದ್ದಾನೆ ಹೇಳಿ. ಆರರಿಂದ ಹತ್ತನೇ ತರಗತಿವರೆಗೆ ಹಿಂದಿ ಕಲಿಸಲಾಗುತ್ತಿದೆ, ಈ ಟೀಕೆ ಮಾಡುವವರು ಹಿಂದಿ ಕಲಿತು ಪಾಸ್ ಆಗಿ ಬಂದಿದ್ದಾರೆ ಎಂದರೆ ಹಿಂದಿ ನಾಮ-ಲಕ ಓದಲಾಗದ ಮಟ್ಟಕ್ಕೆ ಹಿಂದಿಯಲ್ಲಿ ಪಾಸ್ ಆಗಿ ಬಂದರೆ? ಹಿಂದಿಯನ್ನು ಶತೃಭಾಷೆ ಯಂತೆ ಟೀಕಿಸುವ ಈ ಆಸಾಮಿಗಳು ಹಿಂದಿಯನ್ನು ತಮ್ಮ ಮಕ್ಕಳಿಗೆ ಎಲ್ ಕೆ ಜಿ-ಯುಕೆಜಿಯಿಂದಲೇ ಏಕೆ ಹಿಂದಿ ಕಲಿಸುತಿದ್ದಾರೆ? ಈ ವಿದೇಶಿ ಗುಲಾಮಿತನವನ್ನೇ ಬೇಡ ಎಂದು ಗಾಂಧೀಜಿಯವರು ಗುಜರಾತಿ ಆಗಿದ್ದರೂ ಹಿಂದಿಯನ್ನು ಬಳಸಿ ಎಂದು ಹೇಳಿದ್ದು.
ಅಷ್ಟಕ್ಕೂ ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಏಕೆ ಹಿಂದಿಯನ್ನು ವಿರೋಧಿಸುತ್ತಾರೆ? ಕನ್ನಡಿಗ ನೊಬ್ಬ ‘ಹಿಂದಿ’ ಎಂಬ ಪದ ಆಡಿದರೂ ಸಾಕು ‘ದ್ರೋಹಿ’ ಎಂಬ ಪಟ್ಟವೇಕೆ ಕಟ್ಟುತ್ತಿದ್ದಾರೆ ಅರ್ಥವಾಗದು. ಭಾರತದ ಆಡಳಿತ ಭಾಷೆ ಹಿಂದಿಗೆ ಅದರದೇ ಗೌರವ ಕೊಡಲೇ ಬೇಕು. ಸಂಘಟನೆ ಕಟ್ಟಿಕೊಂಡು ತಾನು ಕನ್ನಡದ ಹೆಸರಿನಲ್ಲಿ ಪ್ರಸಿದ್ಧಿಯಾಗುವ ಹುಚ್ಚಾಟಕ್ಕೆ ಕೆಲವರು ಇಳಿದಿದ್ದಾರೆ.
ಹಿಂದಿ ಕಲಿಕೆಗೆ ಮತ್ತೊಂಸದು ದುರಂತವೆಂದೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ ಶಿಕ್ಷಕರನ್ನು ನೇಮಕ ಮಾಡದೇ ಇರುವುದು. ಮೂಲ ಶಿಕ್ಷಣವನ್ನು ಆ ಮಕ್ಕಳಿಗೆ ಸರಿಯಾಗಿ ನೀಡದಿದ್ದಲ್ಲಿ ಮುಂದೆ ಆ ಮಕ್ಕಳೇ ಆ ಭಾಷೆಯನ್ನು ಟೀಕಿಸುತ್ತಾರೆ ಹಾಗಾಗಿ ಹಿಂದಿ ಬಗ್ಗೆ ತಿರಸ್ಕೃತ ಮತ್ತು ಟೀಕಾ ಭಾವನೆ ಇದೆ ಎಂದೆರೆ ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೂಡ ಕಾರಣವಾಗಿವೆ. ಇನ್ನಾದರೂ ಹಿಂದಿ ಶಿಕ್ಷಣಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಗಳು ಸರಿಯಾದ ಸವಲತ್ತುಗಳನ್ನು ನೀಡಲಿ.