Saturday, 21st December 2024

’ರಾಷ್ಟ್ರ ಜ್ಯೋತಿ ಬೆಳಗಿಸಿದ ಪಂಡಿತ್ ದೀನದಯಾಳ್’

ತನ್ನಿಮಿತ್ತ

ಡಾ.ಜಗದೀಶ ಮಾನೆ

jspurti@gmail.com

ರಾಷ್ಟ್ರ ಜ್ಯೋತಿಯನ್ನು ಬೆಳಗಿಸುತ್ತಾ ಬಂದ ಮಹಾನ್ ಚೇತನಗಳಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರು ಮೊದಲ ಸಾಲಿನಲ್ಲಿ ನಿಲ್ಲುವವರು. ಈ ಹೆಸರೇ ಹೋರಾಟಕ್ಕೆ ಪರ್ಯಾಯ. ಅವರ ಆ ಬದುಕು ಸಹಸ್ರಾರು ರಾಷ್ಟ್ರ ರಥದ ಸಾರಥಿಗಳಿಗೆ ಆದರ್ಶವಾಗಿತ್ತು. ಬಾಲ್ಯದಲ್ಲಿ ಅತ್ಯಂತ ಬಡತನವಿದ್ದರೂ ಅದರಿಂದ ಧೃತಿಗೆಡದೆ ಎಲ್ಲಾ ಕಷ್ಟ, ನೋವುಗಳಿಗೆ ಎದೆಯೊಡ್ಡಿ, ಎದುರಾದ ಸಂಕಷ್ಟಗಳನ್ನೆಲ್ಲ ಸವಾಲಾಗಿ ಸ್ವೀಕರಿಸಿ ಸಾಧನೆಯ ಪಥದಲ್ಲಿ ಮುನ್ನಡೆದರು.

ಕಾಶ್ಮೀರ ಭಾರತದಲ್ಲಿ ಪೂರ್ತಿ ವಿಲೀನವಾಗಬೇಕೆಂಬ ಅವರ ಹಾಗೂ ಡಾ. ಶಾಮಪ್ರಸಾದ್ ಮುಖರ್ಜಿಯವರ ಸಂಕಲ್ಪ ಇಂದು ಈಡೇರಿದೆ. ಇವರ ಜಾತಕವನ್ನು ನೋಡಿದ ಜ್ಯೋತಿಷಿಯೊಬ್ಬರು ಅವರ ತಂದೆಗೆ ಹೇಳಿದ್ದರು. ಇವನೊಬ್ಬ ದೊಡ್ಡ ವಿದ್ವಾಂಸನಾಗುತ್ತಾನೆ, ಆದರೆ ಮದುವೆಯಾಗುವುದಿಲ್ಲ. ಅಂತೆಯೇ ದೀನದಯಾಳ ಉಪಾಧ್ಯಾಯರು ಶಾಲಾ ಕಾಲೇಜುಗಳಲ್ಲಿ ಅತ್ಯಂತ ಪ್ರತಿಭಾಶಾಲಿ ಆಗಿದ್ದರು. ಅಂತಿಮ ಪರೀಕ್ಷೆಗಳಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡರು. ಲಖನೌದಲ್ಲಿ ಬಿ.ಎ ಓದುತ್ತಿದ್ದ ಸಂದರ್ಭ ಸ್ನೇಹಿತ ಬಲವಂತರಾವ್ ಶಿಂಧೆ ಅವರಿಂದ ಆರ್.ಎಸ್.ಎಸ್ ಸಂಪರ್ಕಕ್ಕೆ ಬಂದರು.

1939 ರಲ್ಲಿ ಬಿ.ಎ ಮುಗಿಸಿ ಎಂ.ಎ ಪದವಿಯ ಅಧ್ಯಯನಕ್ಕಾಗಿ ಲಖನೌದಿಂದ ಆಗ್ರಾಕ್ಕೆ ಬಂದರು. ಆಗ ನಾನಾಜೀ ದೇಶಮುಖ್‌ರವರು ಸಂಘ ಕಾರ್ಯ ಚಟುವಟಿಕೆಗಳನ್ನು ಆರಂಭಿಸಲು ಅಲ್ಲಿಗೆ ಬಂದಿದ್ದರು. ನಾನಾ ಜೀಯವರ ಸಂಪರ್ಕಕ್ಕೆ ಬಂದ ಪಂ.ದೀನದಯಾಳ ಉಪಾಧ್ಯಾಯರು ಸಂಘ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ನಂತರ ನಾಗಪುರಕ್ಕೆ ತೆರಳಿ ಅಲ್ಲಿ ಡಾಕ್ಟರ್ ಹೆಡಗೇವಾರರನ್ನು ಭೇಟಿ ಮಾಡಿ ತಮ್ಮ ಇಡೀ ಜೀವನ ವನ್ನು ರಾಷ್ಟ್ರ ಕಾರ್ಯದ ಯಜ್ಞಕುಂಡದಲ್ಲಿ ಸಮರ್ಪಿಸಿಕೊಂಡರು.

ಪತ್ರಿಕೋದ್ಯಮದಲ್ಲಿ ಬಹಳ ಆಸಕ್ತಿ ಹೊಂದಿದ್ದ ದೀನ ದಯಾಳ್ ಉಪಾಧ್ಯಾಯರು ಲಖನೌದಲ್ಲಿ ರಾಷ್ಟ್ರಧರ್ಮ ಪ್ರಕಾಶನ ಎನ್ನುವ ಸಂಸ್ಥೆ ಆರಂಭಿಸಿ ರಾಷ್ಟ್ರಧರ್ಮ ಎನ್ನುವ ಮಾಸಿಕ ಪತ್ರಿಕೆ, ‘ಪಾಂಚಜನ್ಯ’ ಎನ್ನುವ ವಾರ ಪತ್ರಿಕೆ ಹಾಗೂ ಸ್ವದೇಶ ಎನ್ನುವ ದಿನ ಪತ್ರಿಕೆಯನ್ನು ಆರಂಭಿಸಿ ರಾಷ್ಟ್ರೀಯ ವಿಚಾರಗಳನ್ನು ಪ್ರಚುರ ಪಡಿಸಲಾರಂಭಿಸಿದರು. ಗಾಂಧಿ ಹತ್ಯೆಯ ನಂತರ ನೆಹರುರವರ ಸರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಬಂಧ ವಿಧಿಸಿತು.

ಆಗ ಉತ್ತರ ಪ್ರದೇಶದ ಸಹಪ್ರಾಂತ ಪ್ರಚಾರಕರಾಗಿದ್ದ ದೀನದಯಾಳ ಉಪಾಧ್ಯಾಯರ ನೇತೃತ್ವದಲ್ಲಿ ಸಂಘದ ಮೇಲಿನ ನಿರ್ಬಂಧದ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸಿದರು. ಪಾಂಚಜನ್ಯ ಪತ್ರಿಕೆಯ ಮೂಲಕ ಸರಕಾರದ ವಿರುದ್ಧ ಕ್ರಮಗಳನ್ನು ಖಂಡಿಸಿದರು. ಆಗ ಸರಕಾರ ಅವರ ಪತ್ರಿಕೆಯ ಮೇಲೆ ನಿಬಂಧ
ಹೇರಿತು. ನಂತರ ಇವರು ಹಿಮಾಲಯ, ರಾಷ್ಟ್ರಭಕ್ತ ಎಂಬ ಪತ್ರಿಕೆಗಳನ್ನು ಆರಂಭಿಸಿದರು. 1947 ರಲ್ಲಿ ಭಾರತದ ವಿಭಜನೆಯ ಪರಿಣಾಮವಾಗಿ ಲಕ್ಷಾಂತರ ಹಿಂದೂಗಳು ನಿರಾಶ್ರಿತರಾಗಿದ್ದರು. ಪಾಕಿಸ್ತಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ಅಲ್ಲಿನ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಎಂದು ನೆಹರು ಸರಕಾರದಲ್ಲಿ ಕೈಗಾರಿಕಾ ಮಂತ್ರಿ ಆಗಿದ್ದ ಡಾ.ಶಾಮಪ್ರಸಾದ್ ಮುಖರ್ಜಿಯವರು ಘಂಟಾಘೋಷವಾಗಿ ಸಂಸತ್ತಿನಲ್ಲಿ ಗುಡುಗಿದರು. ಇದಕ್ಕೆ ಸ್ಪಂದಿಸದ ನೆಹರುರವರ ಸರಕಾರದಿಂದ ಮುಖರ್ಜಿ ಹೊರಬಂದರು. ನಂತರ ಗುರೂಜಿ ಗೋಳವಲ್ಕರ ಹಾಗೂ ದೀನದಯಾಳ್ ಉಪಾಧ್ಯಾಯರನ್ನು ಭೇಟಿ
ಮಾಡಿ, ಸುದೀರ್ಘವಾಗಿ ಚರ್ಚಿಸಿದ ಬಳಿಕ, ರಾಷ್ಟ್ರೀಯ ಧ್ಯೇಯ ಧೋರಣೆಗಳ ಆಧಾರದ ಮೇಲೆ 1951 ಅಕ್ಟೋಬರ್ 21 ರಂದು ’ಭಾರತೀಯ ಜನಸಂಘ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.

1952 ರಲ್ಲಿ ನಡೆದ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಹಾಗೂ ಇನ್ನಿಬ್ಬರು ಆಯ್ಕೆಯಾಗುತ್ತಾರೆ. 1952 ರಲ್ಲಿ ಕಾನ್ಪುರದಲ್ಲಿ ನಡೆದ ಜನಸಂಘದ ಅಖಿಲ ಭಾರತೀಯ ಪ್ರಥಮ ಅಧಿವೇಶನದ ಸಭೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಅಂತಿಮವಾಗಿ ತೀರ್ಮಾನಿಸುವಂತೆ ಸರಕಾರಕ್ಕೆ ಒತ್ತಡ ಹೇರಲಾಯಿತು. ಪಕ್ಷದ ಅಧ್ಯಕ್ಷರಾಗಿದ್ದ ಡಾ.ಶ್ಯಾಮಪ್ರಸಾದ ಮುಖರ್ಜಿಯವರು ಆ ಸಭೆಯಲ್ಲಿ ದೀನದಯಾಳ್ ಉಪಾಧ್ಯಾಯರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಘೋಷಿಸಿ, ಹೀಗೆ ಹೇಳಿದರು, ‘ನನಗೆ ದೀನದಯಾಳರಂಥವರು ಇನ್ನಿಬ್ಬರು ಸಿಕ್ಕರೆ ನಾನು ಸಮಗ್ರ ರಾಜಕೀಯ
ಭೂಪಟವನ್ನೇ ಬದಲಿಸಬಲ್ಲೆ’.

ಅನಂತರ ಕಾಶ್ಮೀರದ ಚಳವಳಿಯ ನಾಯಕತ್ವ ಡೆದ ದೀನದಯಾಳರು ಲಖನೌದಿಂದ ದೆಹಲಿಗೆ ಹೊದರು. ಸತ್ಯಾಗ್ರಹದ ಕಾವು ಜೋರಾಯಿತು. ಮುಖರ್ಜಿ ಸತ್ಯಾಗ್ರಹಿಗಳ ತಂಡದೊಡನೆ ಕಾಶ್ಮೀರಕ್ಕೆ ನುಗ್ಗಿ ಬಂಽತರಾಗಿ ಶ್ರೀನಗರದ ಸೆರೆಮನೆಯಲ್ಲಿ ಅನುಮಾನಾಸ್ಪದವಾಗಿ ತೀರಿಕೊಂಡರು. ಅವರ ಸಾವು ಜನ ಸಂಘಕ್ಕೆ ಬಹಳದೊಡ್ಡ ಹೊಡೆತ ನೀಡಿತು. ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ದೀನ್ ದಯಾಳ್‌ರು ಹೊತ್ತರು. ಪ್ರಾಮಾಣಿಕ ಪ್ರಯತ್ನದಿಂದ ಕೆಲವೇ ವರ್ಷಗಳಲ್ಲಿ ನಸಂಘವನ್ನು ಕಾಂಗ್ರೆಸ್‌ಗೆ ಸಡ್ಡು ಹೊಡೆಯುವ ಬಲಿಷ್ಠ ಪಕ್ಷವಾಗಿ ಬೆಳೆಸಿದರು. ಉಪಾಧ್ಯಾಯರ ಈ ಸಂಘಟನಾ ಚಾತುರ್ಯ, ವಿಚಾರ ಶಕ್ತಿಗೆ ಸಂಘದ ಸರಸಂಘಚಾಲಕ ಗುರೂಜಿ ಗೋಳವಲ್ಕರರು ಕೂಡಾ ಮಾರು ಹೊಗಿದ್ದರು.

1967 ಡಿಸೆಂಬರ್ ತಿಂಗಳಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಜನಸಂಘದ ಅಧಿವೇಶನದಲ್ಲಿ ದೀನದಯಾಳರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಪಕ್ಷ ಸಂಘಟನೆಯ ಜತೆಗೆ ಉಪಾಧ್ಯಾಯರು ಪ್ರತಿ ನಿತ್ಯ ಹತ್ತು ಗಂಟೆಗಳ ಕಾಲ ಅಧ್ಯಯನದಲ್ಲಿ ತೊಡಗಿಸಿಕೊಂಡು ರಾಜಕೀಯ, ಆರ್ಥಿಕ, ಸಾಮಾಜಿಕ ಶಾಸ್ತ್ರಗಳ ಬಗ್ಗೆ ಅಧ್ಯಯನ
ಮಾಡಿ ಜನಸಂಘದ ಆರ್ಥಿಕ ನೀತಿಯನ್ನು ರೂಪಿಸಿದರು, ರಾಜಕೀಯ ಧರ್ಮವನ್ನು ಕಟ್ಟಿದರು. ಮನುಷ್ಯನ ಶರೀರಕ್ಕೆ ಪ್ರಾಣ ಎನ್ನುವುದು ಹೇಗೆ ಮುಖ್ಯವೋ, ರಾಷ್ಟ್ರಕ್ಕೂ ಸಂಸ್ಕೃತಿ ಹಾಗೆಯೇ.

ಭಾರತೀಯ ಸಂಸ್ಕೃತಿಯ ತಳಹದಿ ಏಕಾತ್ಮಕತೆ. ದೇಹ, ಮನಸ್ಸು, ಬುದ್ಧಿ, ಆತ್ಮ-ಇವೆಲ್ಲವುಗಳ ಮುನ್ನಡೆಯೇ ಭಾರತದ ಆದರ್ಶ. ಈ ಸಮಗ್ರ ಪ್ರಗತಿಗಾಗಿ ಯೋಜಿತವಾದದ್ದು ಭಾರತದ ಸಾಮಾಜಿಕ ವ್ಯವಸ್ಥೆ. ಆ ವ್ಯವಸ್ಥೆಯ ಜತೆಗೆ ಭವಿಷ್ಯತ್ತಿನ ಭಾರತದ ಜೀವನ ಹೇಗಿರಬೇಕೆಂಬ ಕನಸನ್ನು ಕಾಣುತ್ತ ‘ಏಕಾತ್ಮ ಮಾನವತಾವಾದ’ ಎಂಬ ಹೆಸರಿನಲ್ಲಿ ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯ ಸಿದ್ಧಾಂತಗಳನ್ನು ದೇಶದ ಮುಂದಿಟ್ಟರು.

ಕೆಲವರು ಚೀನಾವನ್ನು ಎದುರಿಸಬೇಕಾದರೆ ಪಾಕಿಸ್ತಾನದೊಂದಿಗೆ ಒಪ್ಪಂದ ಅಗತ್ಯವೆಂದು ಹೇಳುತ್ತಾರೆ. ನಾವು ಒಬ್ಬ ಆಕ್ರಮಣಕಾರಿಯ ಮುಂದೆ ತಲೆಬಾಗಿಸಿ ಇನ್ನೊಬ್ಬ ಆಕ್ರಮಣಕಾರಿಯನ್ನು ಎದುರಿಸಲು ಸಾಧ್ಯವಿಲ್ಲ. ಭಾರತ ಎರಡೂ ಆಕ್ರಮಣಗಳನ್ನು ಸವಾಲಾಗಿ ಸ್ವೀಕರಿಸಿ ದೃಢವಾಗಿ ಎದುರಿಸಬೇಕು. ವಾಸ್ತವದಲ್ಲಿ ಭಾರತದ ವಿರೋಧ ವನ್ನು ಆಧಾರವಾಗಿಟ್ಟುಕೊಂಡೇ ಪಾಕಿಸ್ತಾನದ ನಿರ್ಮಾಣವಾಗಿದೆ. ಅಲ್ಲಿ ಭಾರತದ ವಿರುದ್ಧ ನಿರಂತರವಾಗಿ ಘೋಷಣೆಗಳು ಮೊಳಗುತ್ತಲೇ ಇವೆ.

ಹಾಗಾಗಿ ಪಾಕಿಸ್ತಾನದೊಂದಿಗೆ ಒಪ್ಪಂದ ಸಾಧ್ಯವಿಲ್ಲ. ಚೀನಾವನ್ನು ಎದುರಿಸ ಬೇಕಾದರೆ ಸೈನಿಕ ಶಕ್ತಿ , ರಾಷ್ಟ್ರೀಯ ಐಕ್ಯತೆ ಮತ್ತು ದೃಢಸಂಕಲ್ಪಗಳು ಅತ್ಯವ ಶ್ಯಕ. ಇವುಗಳಲ್ಲಿ ಒಂದರ ಕೊರತೆ ಉಂಟಾದರೆ ಉಳಿದೆಲ್ಲವುಗಳು ವ್ಯರ್ಥ. ಯಾರೊಬ್ಬರೊಂದಿಗೆ ಒಪ್ಪಂದ ಮಾಡಿಕೊಂಡರು ರಾಷ್ಟ್ರೀಯತೆ ಮತ್ತು ಸಂಕಲ್ಪಗಳು ದುರ್ಬಲವಾಗು ತ್ತವೆ. ಹಾಗಾಗಿ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡು ಚೀನಾವನ್ನು ಎದುರಿಸುವುದು ಅಸಾಧ್ಯ ಎಂಬುದು ದೀನದಯಾಳ
ಉಪಾಧ್ಯಾ ಯರ ಅಭಿಪ್ರಾಯವಾಗಿತ್ತು.

ಸಾಮ್ಯವಾದವನ್ನು ವಿರೋಽಸುವ ಕಾರ್ಯದಲ್ಲಿ ಶಕ್ತಿಯ ಬಲವರ್ಧನೆಯಾಗಿರುವುದನ್ನು ನಾವು ನೋಡುತ್ತೇವೆ. ಆದರೆ ಎಲ್ಲಾ ವೈಚಾರಿಕ ಕ್ರಾಂತಿಗಳ ನಂತರವೂ ಕಮ್ಯುನಿಸ್ಟ್‌ರ ಸಂಘಟನೆಯು ದುರ್ಬಲವಾಗಿದೆ ಎಂದು ರಾಷ್ಟ್ರವಾದಿಗಳು ಅಂದುಕೊಳ್ಳಬಾರದೆಂಬ ಎಚ್ಚರಿಕೆಯನ್ನೂ ಅವರು ನೀಡಿದರು. ಮುಸ್ಲಿಮರು ಉರ್ದು ವನ್ನೇ ತಮ್ಮ ಮಾತೃ ಭಾಷೆಯೆಂದು ಘೋಷಿಸಬೇಕೆಂದು ಬಯಸುವ ಸಂಗತಿಯು, ಈ ವಿಚಾರವು ಭಾಷೆಗೆ ಸಂಬಂಧಿಸಿದು ದಲ್ಲ ಆದರೆ ರಾಜಕೀಯ ಹಾಗೂ ಕೋಮುವಾದಕ್ಕೆ ಸಂಬಂಧಿಸಿದುದು ಎನ್ನುವುದನ್ನು ತೋರಿಸುತ್ತದೆ ಎಂಬುದು ಉಪಾಧ್ಯಾಯರ ಅಭಿಪ್ರಾಯವಾಗಿತ್ತು. ರಾಷ್ಟ್ರದ ಸಮಗ್ರ ಏಕತೆಯ ಉದ್ದೇಶ ಇಟ್ಟುಕೊಂಡ ಜನಸಂಘದ ಆ ಮಹಾನ್ ಗುರಿಯ ಈಡೇರಿಕೆಗಾಗಿ ಅನೇಕರು ಬಲಿದಾನಗೈದರು. ಅಂಥ ಮಹಾನ್ ಸಂಕಲ್ಪ ಶಕ್ತಿಯ ತೇರನ್ನು ಇಲ್ಲಿಯವರೆಗೆ ಬಹಳಷ್ಟು ಮಹನೀಯರು ಎಳೆದು ತಂದಿದ್ದಾರೆ. ಈ ಸಂಕಲ್ಪ ಬೇರೆ ಪಕ್ಷಗಳಂತೆ ಕೇವಲ ಚುನಾವಣೆಗಳಿಗೆ ಮಾತ್ರ ಸೀಮಿತವಾಗದೆ, ಸಮಗ್ರ ಭಾರತ ನಿರ್ಮಾಣದ ಪ್ರಮಾಣವಾಗಿತ್ತು.

ಅಂದು ಡಾ.ಶಾಮಪ್ರಸಾದ್ ಮುಖರ್ಜಿಯವರ ಸಂಕಲ್ಪ, ‘ಒಂದು ದೇಶಕ್ಕೆ ಎರಡೆರಡು ಧ್ವಜ, ಎರಡೆರಡು ಸಂವಿಧಾನ ಯಾಕೆ? ಎಂದು ಅದರ ವಿರುದ್ಧ ಗುಡುಗಿ ದರು. ಆ ಸಂಕಲ್ಪವನ್ನು ದೀನದಯಾಳ್ ಉಪಾಧ್ಯಾಯರು ಮುಂದುವರಿಸಿಕೊಂಡು ಬಂದರು. ಅನಂತರ ಇದೇ ಸಂಕಲ್ಪದೊಂದಿಗೆ ರಾಮ ಮಂದಿರ ನಿರ್ಮಾಣ ದವರೆಗೂ ಸಾಗಿ ಬಂದಿದೆ. ಈ ಕಠಿಣ ಹಾದಿಯಲ್ಲಿ ಅಟಲ್ ಜೀ, ಮುರಳಿ ಮನೋಹರ ಜೋಶಿ, ಲಾಲಕೃಷ್ಣ ಆಡ್ವಾಣಿ ಅವರ ಸಂಕಲ್ಪ ಮಹತ್ವದ್ದು.

ಸಿದ್ಧಾಂತಗಳು ಬದಲಾಗಲಿಲ್ಲ, ಆ ಸಂಕಲ್ಪದ ಪ್ರಯತ್ನ ಮಾತ್ರ ಎಂದೆಂದಿಗೂ ನಿಲ್ಲಲಿಲ್ಲ. ಮೂರು ತಲೆಮಾರುಗಳಿಂದ, ಸತತ 70 ವರ್ಷಗಳಿಂದ ಮುಂದು ವರಿಸಿಕೊಂಡು ಬಂದ ಸದೃಢ ದೇಶ ಕಟ್ಟುವ ಆ ನಿಸ್ವಾರ್ಥ ಸಂಕಲ್ಪವನ್ನು ಇಂದು ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಈಡೇರಿದೆ. ಅಂದು ಕೇವಲ ಎರಡು ಮೂರು ಸಂಸದರಿಂದ ಆರಂಭವಾದ ಜನಸಂಘ ಇಂದು ಭಾರತೀಯ ಜನತಾ ಪಕ್ಷವಾಗಿ 303 ಸಂಸದರೊಂದಿಗೆ ವ್ಯಾಪಕವಾಗಿ ಬೆಳೆದು ನಿಂತಿದೆ. ಪಕ್ಷ ಸ್ಥಾಪನೆ ಆದಾಗಿನಿಂದ ಪಕ್ಷಕ್ಕೆ ಒಂದು ಹೊಸ ತಲೆಮಾರಿನ ನಾಯಕರುಗಳನ್ನ ಬೆಳೆಸುವ ಚಿಂತನೆ ಎಂದಿನಿಂದಲೂ ಇದ್ದೇ ಇದೆ.

ವಾಜಪೇಯಿ, ಅಡ್ವಾಣಿ ಮುಂದುವರಿದಂತೆ ಇಂದು ನರೇಂದ್ರ ಮೋದಿಯವರು ಸದೃಢ ದೇಶ ಕಟ್ಟಲು ಹೆಗಲು ಕೊಟ್ಟು ನಿಂತ ಉತ್ಸಾಹಿ ಯುವಕರನ್ನು ಬೆಳೆಸುತ್ತಿ
ದ್ದಾರೆ. ಒಂದು ವೈಚಾರಿಕ ನೆಲೆಗಟ್ಟಿನ ಆಧಾರಿತ ಪಕ್ಷದಲ್ಲಿ ಹೊಸದನ್ನು ಬಯಸುವುದು ಸಾಮಾನ್ಯ. 1916 ಸಪ್ಟೆಂಬರ್ 25 ರಂದು ಜನಿಸಿ ಕೇವಲ 52 ವರ್ಷಗಳ ಕಾಲ ಬದುಕಿದ್ದ ದೀನದಯಾಳ ಉಪಾಧ್ಯಾಯರು ಒಬ್ಬ ಉತ್ತಮ ಚಿಂತಕರಾಗಿ, ದಾರ್ಶನಿಕರಾಗಿ, ಒಳ್ಳೆಯ ಸಂಘಟಕರಾಗಿ ರಾಷ್ಟ್ರ ಜೀವನದಲ್ಲಿ ಹಾಗೂ  ಆಡಳಿತ ದಲ್ಲಿ ರಾಷ್ಟ್ರೀಯ ವಿಚಾರಗಳ ಅಳವಡಿಕೆಗೆ ಆಗ್ರಹಿಸುತ್ತ, ದೇಶದ ಅನೇಕ ರಾಜ್ಯಗಳಲ್ಲಿ ಕಾರ್ಯಕರ್ತರನ್ನು ಹೋರಾಟದ ಮಾರ್ಗಕ್ಕಿಳಿಸಿ ಜನಸಂಘವನ್ನು ಅತ್ಯಂತ ಬಲಿಷ್ಠ ಪಕ್ಷವನ್ನಾಗಿಸಿ 1967ರ ಡಿಸೆಂಬರ್ ತಿಂಗಳಲ್ಲಿ ಬಲಿದಾನಗೈದ ದೀನ್ ದಯಾಳ್ ಉಪಾಧ್ಯಾಯರು ರಾಷ್ಟ್ರ ಕಾರ್ಯಕ್ಕೆ ಕೊಟ್ಟ ಕೊಡುಗೆಗಳು ಚಿರಸ್ಮರಣೀಯವಾಗಿವೆ.