ಶಶಿಧರ ಹಾಲಾಡಿ, ಪತ್ರಕರ್ತರು
ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ.
ಅಯೋಧ್ಯೆೆಯಲ್ಲಿರುವ ರಾಮ ಜನ್ಮಭೂಮಿಯನ್ನು ನೋಡಲು ನಾವು ಸರದಿ ಸಾಲಿನಲ್ಲಿ ನಿಂತಿದ್ದಾಾಗ (2017), ಒಂದು ತಮಾಷೆಯ ಘಟನೆ ನಡೆಯಿತು. ಒಂದು ಸೊಳ್ಳೆೆ ಒಳಗೆ ಹೋಗಬೇಕಾದರೂ ಪೊಲೀಸರ ಬಿಗಿ ತಪಾಸಣೆಯನ್ನು ದಾಟಿಯೇ ಮುಂದುವರಿಯಬೇಕಾದ, ಕಬ್ಬಿಿಣದ ಸರಳುಗಳ ಮಧ್ಯೆೆ ಇರುವ ‘ಪವಿತ್ರ’ ಜಾಗ ಅದು. ಪೊಲೀಸರಿಗೆ ನಮ್ಮ ಮೈಯನ್ನು ಒಪ್ಪಿಿಸಿ, ಅವರು ನಮ್ಮ ದೇಹದ ಎಲ್ಲಾಾ ಭಾಗಗಳ್ನು ಮುಟ್ಟಿಿ ತಪಾಸಣೆ ಮಾಡಿದ ನಂತರ ಮುಂದೆ ಸಾಗಿದೆವು. ನಮ್ಮ ಜತೆಯಲ್ಲಿ ಬಂದಿದ್ದ ಸುಶೀಲಮ್ಮ ಮಾತ್ರ, ಪೊಲೀಸರ ತಪಾಸಣಾ ಸ್ಥಳದಿಂದ ಕೆಲವು ನಿಮಿಷಗಳಾದರೂ ಹೊರಗೆ ಬರಲೇ ಇಲ್ಲ! ನಮಗೆ ಆತಂಕ. ಮಹಿಳಾ ಪೊಲೀಸರು, ಮಹಿಳೆಯರನ್ನು ತಪಾಸಣೆ ಮಾಡುವ, ಬಟ್ಟೆೆಯಿಂದ ಮರೆ ಮಾಡಿದ್ದ ಜಾಗದಿಂದ ಅವರು ಹೊರಗೆ ಬರುವುದನ್ನೇ ಕಾಯುತ್ತಾಾ, ಕಬ್ಬಿಿಣದ ಸರಳುಗಳಿಂದ ಸುತ್ತುವರೆದಿದ್ದ ಮೂರಡಿ ಅಗಲದ ದಾರಿಯಲ್ಲಿ
ಆದದ್ದಿಷ್ಟೇ; ಹಳೆಯ ಕಾಲದವರು ಉಡುವಂತೆ ಸೀರೆ ಉಟ್ಟಿಿದ್ದ ಸುಶೀಲಮ್ಮ, ಹೊಟ್ಟೆೆಯ ಬಳಿ ಸೀರೆಯ ಬಹುಭಾಗವನ್ನು ಗಂಟು ಮಾಡಿ ಸಿಕ್ಕಿಿಸಿಕೊಂಡಿದ್ದರು. ಅದನ್ನು ಮುಟ್ಟಿಿನೋಡಿದ ಮಹಿಳಾ ಪೊಲೀಸ್, ‘ಅದೇನು? ನನಗೆ ಬಿಡಿಸಿ ತೋರಿಸಿ’ ಎಂದು ವರಾತ ಮಾಡಿದರು! ಬಟ್ಟೆೆಯ ಉಂಡೆಯಂತಿದ್ದ ಆ ಭಾಗವು, ಆಕೆಯ ಪೊಲೀಸ್ ಕಣ್ಣಿಿಗೆ ಬಾಂಬನ್ನು ಕಾಣಿಸಿತ್ತೇನೋ! ಅದು ಕೇವಲ ಸೀರೆಯ ಗಂಟು ಎಂದು ಅವರಿಗೆ ಮನವರಿಕೆ ಆದ ನಂತರವಷ್ಟೇ, ಮುಂದೆ ಸಾಗಲು ಅವಕಾಶಮಾಡಿಕೊಟ್ಟರು. ಅಯೋಧ್ಯೆೆಯ ಅ ವಿವಾದಿತ ಒಂದಲ್ಲ, ಎರಡಲ್ಲ, ಮೂರು ಬಾರಿ ನಖಶಿಖಾಂತ ತಪಾಸಣೆ ನಡೆಸಿದ ನಂತರ, ಒಳಗೆ ಹೋಗಲು ಬಿಡುತ್ತಾಾರೆ. ರಾಮ ಹುಟ್ಟಿಿದ ಜಾಗ ನೋಡಲು. ಹಣ್ಣು ಕತ್ತರಿಸುವ ಚೂರಿ, ಪಿನ್ನು, ಪೆನ್ನು, ತಲೆ ಬಾಚುವ ಹಣಿಗೆ, ವಾಚು, ಮೊಬೈಲ್, ಕ್ಯಾಾಮೆರಾ-ಯಾವುದನ್ನೂ ಒಳಗೆ ಕೊಂಡೊಯ್ಯುವಂತಿಲ್ಲ. ಅವೆಲ್ಲವನ್ನೂ ಪೊಲೀಸರ ಸುಪರ್ದಿಗೆ ಒಪ್ಪಿಿಸಿದ ನಂತರವಷ್ಟೇ ಒಳಗೆ ಹೋಗುವ ಅವಕಾಶ.
‘ಒಳಗೆ’ ಎಂದರೆ ಏನು? ಒಳಗೆ ಹೊದರೆ ಕಾಣಿಸುವುದು ಬಹುಪಾಲು ಬಯಲು, ದಿಬ್ಬ, ಗಿಡಮರಗಳು, ಅಲ್ಲಲ್ಲಿ ಮಂಗಗಳು, ಎಲ್ಲೆೆಲ್ಲೂ ಸರಳಿನ ಬೇಲಿ. ಒಂದು ಮೂಲೆಯಲ್ಲಿ ಟೆಂಟ್ ರೂಪದ ಆಶ್ರಯದಲ್ಲಿರುವ ರಾಮಲಲ್ಲಾಾ. ಶನಿವಾರ ಹೊರಬಿದ್ದ ಸರ್ವೋಚ್ಚ ನ್ಯಾಾಯಾಲಯದ ತೀರ್ಪಿನಂತೆ, ರಾಮ ಮಂದಿರ ನಿರ್ಮಾಣ ಮಾಡಬಹುದಾದ 2.57 ಎಕರೆ ಜಾಗದಲ್ಲಿ, ರಾಮಲಲ್ಲಾಾ ವಿಗ್ರಹವಿರುವ ಪುಟ್ಟ ಟೆಂಟ್‌ನಂತಹ ರಚನೆ ಬಿಟ್ಟರೆ, ನಾವು ಭೇಟಿ ನೀಡಿದಾಗ ಅದು ಪಾಳುಭೂಮಿಯ ಸ್ವರೂಪ ಹೊಂದಿತ್ತು. ಡಿ.6, 1992ರಂದು ‘ಜನ್ಮಸ್ಥಾಾನ ಮಸೀದಿ’ ಅಥವಾ ‘ಬಾಬರಿ ಮಸೀದಿ’ಯನ್ನು ಸಾವಿರಾರು ಕರಸೇವಕರು ಬೀಳಿಸಿ, ಕುಟ್ಟಿಿ ಪುಡಿಮಾಡಿದ ನಂತರ, ಯಥಾಸ್ಥಿಿತಿ ಕಾಪಾಡಿದ್ದರಿಂದ, ಅಲ್ಲೆೆಲ್ಲಾಾ ಜಾಗ. ಚುರು ಚುರು ಸುಡುವ ನಡುಹಗಲಿನ ಬಿಸಿಲಿನಲ್ಲಿ, ಭದ್ರವಾದ ಕಬ್ಬಿಿಣದ ಸರಳುಗಳ ನಡುವೆ ರಾಮಲಲ್ಲಾಾ ಮತ್ತು ಅದರ ಬಳಿ ಓರ್ವ ಅರ್ಚಕರು-ಇವಿಷ್ಟನ್ನು ಮಾತ್ರ ನೋಡಲು ನಾವು ಅಷ್ಟೊೊಂದು ಕಠಿಣ ಭದ್ರತಾ ತಪಾಸಣೆಯನ್ನು ಹಾದು ಬರಬೇಕಾಯಿತು.
ನಾವು ಅಯೋಧ್ಯೆೆಗೆ ಭೇಟಿ ನೀಡಿದ ದಿನ ಜನಜಂಗುಳಿ ಕಡಿಮೆ-ಆದರೂ, ರಾಮಲಲ್ಲಾಾ ಮೂರ್ತಿ ಇರುವ ಜಾಗದಲ್ಲಿ ಹೆಚ್ಚು ಹೊತ್ತು ನಿಲ್ಲಲು ಸೈನಿಕರು ಬಿಡುತ್ತಿಿರಲಿಲ್ಲ. ಹೆಜ್ಜೆೆ ಹೆಜ್ಜೆೆಗೂ ಪೊಲೀಸರು, ಶಸ್ತ್ರ ಸಜ್ಜಿಿತ ಸೈನಿಕರು, ಆಯಕಟ್ಟಿಿನ ಎತ್ತರದ ಕುಳಿತು, ಪ್ರವಾಸಿಗರನ್ನು ಗಮನಿಸುತ್ತಿಿರುವ ಸಿಬ್ಬಂದಿ. ಉದ್ದಕ್ಕೂ ಕಬ್ಬಿಿಣದ ತಂತಿಗಳ ನಡುವಿನ, ಅಗಲ ಕಿರಿದಾದ ದಾರಿ. ಅಂತಹ ಭದ್ರತೆಯ ನಡುವೆಯೂ ಮಂಗಗಳು ಮಾತ್ರ ಅತ್ತಿಿಂದಿತ್ತ ಕುಪ್ಪಳಿಸುವುದನ್ನು ಕಂಡು ಮೋಜು ಎನಿಸಿತು.
ರಾಮ ಮಂದಿರ ನಿರ್ಮಾಣ ಮಾಡಲು, ಸರ್ವೋಚ್ಚ ನ್ಯಾಾಯಾಲಯದಿಂದ ಅನುಮತಿ ದೊರೆತಿದೆ; ಜನ್ಮಸ್ಥಾಾನ ಮಸೀದಿ ಅಥವಾ ಬಾಬರಿ ಮಸೀದಿ ಇದ್ದ 2.77 ವಿಸ್ತೀರ್ಣದ ಜಾಗದಲ್ಲಿ ಭವ್ಯವಾದ ದೇಗುಲ ನಿರ್ಮಾಣಗೊಳ್ಳಬಹುದು. ಈಗ ಅಲ್ಲಿ ಕಂಡುಬರುತ್ತಿಿರುವಂತೆಯೇ, ನೂರಾರು ರಕ್ಷಣಾ ಸಿಬ್ಬಂದಿಯ ಹದ್ದಿನ ಕಣ್ಣಿಿನ ಭಕ್ತರು, ಆ ದೇಗುಲದ ದರ್ಶನ ಮಾಡಬೇಕಾದ ಅನಿವಾರ್ಯತೆ ಇನ್ನೂ ಕೆಲವು ಸಮಯವಾದರೂ ಮುಂದುವರಿಯಬೇಕಾದೀತು. ಸರ್ವೋಚ್ಚ ನ್ಯಾಾಯಾಲಯವು ಈ ಭೂಮಿಯನ್ನು, ದೇಗುಲ ನಿರ್ಮಿಸಲು ಉಪಯೋಗಿಸಬೇಕು ಎನ್ನುವಾಗಲೇ ಇದು ‘ಇಸ್ಲಾಾಮಿಕ್ ಒರಿಜಿನ್’ ಜಾಗ ಅಲ್ಲ ಎಂದಿರುವುದು ಬಹು ಮುಖ್ಯ. ನಾವು ಆ ಜಾಗವನ್ನು ನೋಡಲು ಹೋದಾಗ, ರಾಮಲಲ್ಲಾಾ ಹತ್ತಿಿರ, ಸಾಲಾಗಿ ನಿಂತಿದ್ದ ಜನರ ಸಾಲಿನಲ್ಲಿ ಹಲವರು, ಭಕ್ತಿಿಯಿಂದ ಕೈಮುಗಿದಿದ್ದರು. ನಿಶ್ಯಬ್ದವಾಗಿ ಪ್ರಾಾರ್ಥಿಸುತ್ತಿಿದ್ದರು; ಮನದಾಸೆಯನ್ನು ಬೇಡಿಕೊಳ್ಳುತ್ತಿಿದ್ದರು. ಈ ಜಾಗ ಪವಿತ್ರ ಎಂದು ಈಗ ಸೂಚನೆ ಇಂತಹ ಭಾವುಕರಿಗೆ ನೆಮ್ಮದಿ ನೀಡಬಲ್ಲದು.
ಈ ಸ್ಥಳದಲ್ಲೇ ರಾಮಮಂದಿರ ನಿರ್ಮಿಸಬೇಕು ಎಂಬ ಚಳವಳಿಗೆ ಕಾವು ದೊರೆತದ್ದು 1990ರ ದಶಕದಲ್ಲಿ. ರಾಮ್‌ಕೋಟ್ ಎಂಬ ಜಾಗದಲ್ಲಿದ್ದ ಬಾಬರಿ ಮಸೀದಿಯು ಒಂದು ವಿವಾದಿತ ಸ್ಥಳ ಎಂದು ಗೊತ್ತಿಿದ್ದರೂ, ಮಂದಿರವನ್ನು ಅಲ್ಲೇ ನಿರ್ಮಿಸುವೆವು ಎಂಬ ಘೋಷಣೆಗೆ ಬದ್ಧರಾಗಿ, ದೇಗುಲದ ಕೆಲಸ ಆಗಲೇ ಆರಂಭಗೊಂಡಿತ್ತು. 268 ಅಡಿ ಉದ್ದ, 140 ಅಡಿ ಅಗಲ, 128 ಅಡಿ ಎತ್ತರದ ಶಿಲಾ ದೇಗುಲ ನಿರ್ಮಾಣಕ್ಕೆೆ ಅಗತ್ಯ ಎನಿಸುವ ಕಂಬಗಳು ಅದಾಗಲೇ ಅಯೋಧ್ಯೆೆಯಲ್ಲಿ ತಯಾರಾಗಿವೆ. ಉದ್ದೇಶಿತ ದೇಗುಲ ನಿರ್ಮಾಣ ಸ್ಥಳದಿಂದ ಒಂದೆರಡು ಕಿಮೀ ದೂರದಲ್ಲಿ ‘ಕಾರ್ಯಶಾಲಾ’ದಲ್ಲಿ ಹಲವು ವರ್ಷಗಳಿಂದ ಕೆಲಸ ನಡೆಯುತ್ತಿಿದೆ. ನಾವು ಹೋಗಿದ್ದಾಾಗ, ನಾಲ್ಕಾಾರು ಶಿಲ್ಪಿಿಗಳು ಕಂಬವೊಂದಕ್ಕೆೆ ಅಂತಿಮ ಸ್ವರೂಪ ನೀಡುತ್ತಿಿದ್ದರು. ನೂರಾರು ಶಿಲಾಸ್ತಂಭ, ತೊಲೆಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಇಟ್ಟಿಿದ್ದರು. ದೂರದ ರಾಜಸ್ಥಾಾನದಿಂದ ತರಿಸಿದ ಅಮೃತಶಿಲೆಯ ಬಂಡೆಗಳನ್ನು ಕತ್ತರಿಸಿ, ಕುಸುರಿ ಕೆಲಸ ನಡೆದಿದೆ. ಕಾರ್ಯಶಾಲಾದ ಪ್ರವೇಶದಲ್ಲಿ ಅಯೋಧ್ಯೆೆಯ ಉದ್ದೇಶಿತ ರಾಮಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಿದ್ದರು. ಇನ್ನೊೊಂದೆಡೆ, ಸಾವಿರಾರು ಜೋಡಿಸಿ, ಪ್ರದರ್ಶನಕ್ಕೆೆ ಇಟ್ಟಿಿದ್ದರು. 1990ರ ದಶಕದಲ್ಲಿ ದೇಶದ ನಾನಾ ಭಾಗಗಳಿಂದ ತರಿಸಿದ ಇಟ್ಟಿಿಗೆಗಳು ಅವು. ಹಳ್ಳಿಿ ಹಳ್ಳಿಿಗಳಿಂದ ಈ ಇಟ್ಟಿಿಗೆಗಳನ್ನು ಕಳಿಸಿದ ಜನರಿಗೆ, ಮೊನ್ನೆೆಯ ತೀರ್ಪು ಕೇಳಿ ಸಂತಸ ಎನಿಸಿರಬಹುದು. ತಾವು ಕಳಿಸಿದ ಇಟ್ಟಿಿಗೆಯು ಎರಡು-ಮೂರು ದಶಕಗಳ ನಂತರವಾದರೂ, ದೇಗುಲದ ಗೋಡೆಯಲ್ಲಿ ಅಡಕಗೊಳ್ಳುತ್ತವೆ ಎಂಬ ವಿಚಾರ ತಿಳಿದು.
ಅಯೋಧ್ಯೆೆಯನ್ನು ನಾವು ನೋಡಿದ್ದು ಕೇವಲ ಒಂದು ದಿನ; ನಮ್ಮ ಪ್ರವಾಸಿ ಆಪರೇಟರ್‌ನ ದಿನಚರಿಯ ಪ್ರಕಾರ ಅಲ್ಲಿ ನಮಗೆ ಅಷ್ಟೇ ಸಮಯ. ಜಿಲ್ಲೆೆಯಲ್ಲಿರುವ ಅಯೋಧ್ಯೆೆ ಅಥವಾ ಅವಧ್-ಔಧ್ ಅಥವಾ ಸಾಕೇತಪುರಿಯನ್ನು (ಈ ಒಂದೊಂದು ಹೆಸರಿಗೂ ಒಂದೊಂದು ಕಥೆ ಇದೆ) ಸಂಪೂರ್ಣವಾಗಿ ನೋಡಲು, ಅಲ್ಲಿನ ಗಲ್ಲಿಗಲ್ಲಿಯ ಕಥನ, ಕಲ್ಲು ಕಲ್ಲಿನ ಕವನ ಕೇಳಲು, ಆ ಜಾಗದ ಸಾಂಸ್ಕೃತಿಕ, ಪೌರಾಣಿಕ ಪರಂಪರೆಯ ಝಲಕ್‌ನ್ನು ಅನುಭವಿಸಲು ಒಂದೆರಡು ವಾರಗಳ ಕಾಲಾವಕಾಶವಾದರೂ ಬೇಕು. ರಾಮನ ಜನ್ಮಸ್ಥಾಾನದ ಭದ್ರಕೋಟೆಯ ಜತೆಯಲ್ಲೇ, ಅಲ್ಲಿ ಸೀತಾ ರಸೋಯಿ ಇದೆ, ಹನುಮಾನ್ ಕೋಟೆ, ನಾಗೇಶ್ವರನಾಥ್ ದೇಗುಲ, ವಿಜಯರಾಘವ ದೇಗುಲ ಇವೆ. ಅಯೋಧ್ಯೆೆಯ ಬೀದಿ ಅದೆಷ್ಟೋೋ ನೂರು ದೇಗುಲಗಳಿವೆ, ಹಲವು ಅರಮನೆಗಳಿವೆ, ರಾಮ-ಲಕ್ಷ್ಮಣ-ಸೀತೆ-ಹನುಮಾನ್ ಓಡಾಡಿದ್ದು ಎಂದು ನಂಬಲಾಗಿರುವ ಜಾಗಗಳಿವೆ.
ಸಂಜೆಯಾಗಿತ್ತು; ಸರಯೂ ನದಿಯ ತೀರಕ್ಕೆೆ ಹೋದೆವು. ಅದೊಂದು ಸುಂದರ ತಾಣ. ಸಂಜೆಯ ಇಳಿಬಿಸಿಲಿನಲ್ಲಿ ಆ ವಿಶಾಲ ನದಿಯ ಶುಭ್ರ ನೀರು ಫಳಫಳನೆ ಹೊಳೆಯುತ್ತಿಿತ್ತು. ನೀರಿನ ತರಂಗಗಳು ದಡಕ್ಕೆೆ ಬಂದು ಬಡಿಯುತ್ತಾಾ, ಪಿಸುಮಾತಾಡುತ್ತಿಿದ್ದವು. ನದಿಯಲ್ಲಿ ನಾಲ್ಕಾಾರು ನಾವೆಗಳು ಸಂಚರಿಸುತ್ತಿಿದ್ದವು-ಬದಲಾವಣೆಯ ಗಾಳಿಗೆ ಹಾಯಿಯನ್ನು ಬಿಡಿಸಿಕೊಂಡು, ಧೀಮಂತ ನಡೆಯಲ್ಲಿ ಸಾಗುತ್ತಿಿದ್ದವು. ನೇಸರನ ಕೇಸರಿ ಕಿರಣಗಳಿಂದ ತೋಯ್ದಿಿದ್ದ ಸರಯೂ ನದಿಯ ನೋಟವು, ಅಂದು ನಮ್ಮ ಮನದಲ್ಲಿ ಮೂಡಿಸಿದ ಅಮೂರ್ತ ಭಾವನೆಗಳು ಹಲವು.
‘ಧನರಾಜನ ಶಾಸನ’ ಅಯೋಧ್ಯೆೆ ಎಷ್ಟು ಪುರಾತನ? ಈ ಪ್ರಶ್ನೆೆಯನ್ನು ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಬಾರಿ ಹಲವರು ಕೇಳಿದ್ದಾಾರೆ. ರಾಮ ಜನ್ಮಭೂಮಿಯ ಅಭಿಮಾನಿಗಳಿಂದ ಇದಕ್ಕೆೆ, ‘ಹತ್ತಾಾರು ಸಾವಿರ ವರ್ಷಗಳ ಹಿಂದೆ ರಾಮ ಹುಟ್ಟಿಿದ್ದು ಇಲ್ಲೇ’ ಎಂದು ಭಾವನಾತ್ಮಕವಾದ ಉತ್ತರ ದೊರೆಯುತ್ತದೆ. ಇಂದು ಸ್ವೀಕಾರ ಎನಿಸಿರುವ ಲಿಖಿತ ಅಥವಾ ಶಾಸನಬದ್ಧ ದಾಖಲೆಗಳು ಅಯೋಧ್ಯೆೆಯ ಇತಿಹಾಸವನ್ನು ಕ್ರಿಿ.ಪೂ. 1ನೇಯ ಶತನಮಾನದ ಕೊಂಡೊಯ್ಯುತ್ತವೆ.
ಕ್ರಿಿ.ಪೂ.130 ಮತ್ತು 158ರ ನಡುವೆ ಅಯೋಧ್ಯೆೆಯನ್ನು ಆಳಿದ ಧನ ಅಥವಾ ಧನದೇವನ ಕಾಲದ ಒಂದು ಶಾಸನ ದೊರೆತಿದೆ. ಇಂದು ಅಯೋಧ್ಯೆೆಯ ರಾನಾಪೋಲಿ ಮಠದಲ್ಲಿರುವ ಈ ಸಂಸ್ಕೃತ ಶಾಸನ ಮತ್ತು ಆ ರಾಜನ ಕಾಲದ ಕೆಲವು ನಾಣ್ಯಗಳು, ಅಯೋಧ್ಯೆೆಯಲ್ಲಿ ಕನಿಷ್ಠ 2200 ವರ್ಷಗಳ ಹಿಂದೆ ರಾಜನೊಬ್ಬ ಆಳ್ವಿಿಕೆ ಮಾಡುತ್ತಿಿದ್ದ ಎಂದು ರುಜುವಾತು ಮಾಡುತ್ತವೆ. ಜತೆಗೆ, ಅದಕ್ಕೂ ಸುಮಾರು ಎರಡರಿಂದ ಮೂರು ಶತಮಾನಗಳ ಹಿಂದಿನ ರಾಜರ ಆಳ್ವಿಿಕೆಯನ್ನೂ ಖಚಿತಪಡಿಸುತ್ತವೆ.
ಈ ಅಶ್ವಮೇಧ ಕುದುರೆಯ ಕುರಿತು ಹೇಳುವುದು ಕುತೂಹಲ ಮೂಡಿಸುತ್ತದೆ. ‘ಎರಡು ಬಾರಿ ಅಶ್ವಮೇಧವನ್ನು ನಡೆಸಿದ, ಸೇನಾಪತಿ ಪುಷ್ಯಮಿತ್ರರ 6ನೇ ರಾಜ, ಕೌಸಿಕಿಯ ಮಗ, ಕೋಸಲದ ರಾಜ ಧನನು, ಧರ್ಮರಾಜನ ತಂದೆಯಾದ ಫಲ್ಗುದೇವನ ನೆನಪಿನಲ್ಲಿ ಒಂದು ಸ್ಮಾಾರಕವನ್ನು (ದೇಗುಲ) ನಿರ್ಮಿಸಿದನು’ ಎನ್ನುತ್ತದೆ ಈ ಶಾಸನ. ಆ ಕಾಲಮಾನದಲ್ಲಿ ಅಶ್ವಮೇಧವು ಪ್ರತಿಷ್ಠಿಿತ ಯಾಗವಾಗಿ ಚಾಲ್ತಿಿಯಲ್ಲಿತ್ತು ಎಂಬುದನ್ನು ಇದು ಪುಷ್ಠೀಕರಿಸುತ್ತದೆ.
ಸ್ವಲ್ಪ ಮಟ್ಟಿಿಗೆ ಹಾನಿಗೊಳಗಾಗಿರುವ ಈ ಶಾಸನವು ಸುಂಗ ಸಂತತಿಯು ಅಯೋಧ್ಯೆೆಯನ್ನು ಕ್ರಿಿಸ್ತಪೂರ್ವ ಯುಗದಲ್ಲೇ ಎಂದು ಖಚಿತಪಡಿಸುತ್ತದೆ. ಯಶಸ್ವಿಿ ರಾಜರ ಹೆಸರಿನಲ್ಲಿ ದೇಗುಲ ಅಥವಾ ಸ್ಮಾಾರಕ ನಿರ್ಮಾಣ ಅಂದು ಬಳಕೆಯಲ್ಲಿತ್ತು ಎಂದು ಋಜುವಾತುಪಡಿಸುತ್ತದೆ. ನಮ್ಮ ದೇಶದ ಇತಿಹಾಸದಲ್ಲಿ ಅಶ್ವಮೇಧ ಯಾಗದ ಪ್ರಾಾಮುಖ್ಯತೆಯನ್ನು ಸಹ ಈ ಶಾಸನ ಎತ್ತಿಿ ತೋರಿಸುತ್ತದೆ.