ಬಸವ ಮಂಟಪ
ರವಿ ಹಂಜ್
ಬಸವಣ್ಣ, ಕಾಯಕ, ಶರಣ ಚಳವಳಿ ಮತ್ತು ಕಲ್ಯಾಣ ಕ್ರಾಂತಿಗಳ ಮೂಲೋದ್ದೇಶಗಳನ್ನು ಅಪ್ಪಟ ಸಮಾಜವಾದಿ ಕಮ್ಯುನಿಸ್ಟ್ ಚಿಂತನೆ ಎಂದು ಬಿಂಬಿಸುವ ಸಾಕಷ್ಟು ಸಂಕಥನಗಳನ್ನು ಬುದ್ಧಿಜೀವಿಗಳು ಕಟ್ಟಿಕೊಟ್ಟಿದ್ದಾರೆ. ಅಂಥ ಪಂಥದ ವಕ್ತಾರರಾದ ಶರಣ ರಂಜಾನ್ ದರ್ಗಾ ಅವರ
ಲೇಖನಗಳ ಮುಖ್ಯಾಂಶದ ಹೇಳಿಕೆಗಳನ್ನು ಇಲ್ಲಿ ವಿಶ್ಲೇಷಿಸೋಣ. ಏಕೆಂದರೆ ಇಂಥ ಚಿಂತನೆಗಳನ್ನೇ ಕರ್ನಾಟಕ ಕಮ್ಯುನಿಸ್ಟ್ ಸಮಾಜವಾದಿಗಳು ಸದಾ ಹೇಳುವುದು. ಹಾಗಾಗಿ ಇದು ಕೇವಲ ಶರಣ ದರ್ಗಾ ಅವರ ಹೇಳಿಕೆಗಳಷ್ಟೇ ಅಲ್ಲದೆ ಕರ್ನಾಟಕದ ಸಮಸ್ತ ಎಡಪಂಥೀಯ ಚಿಂತಕರ ಹೇಳಿಕೆಗಳು ಎಂದೇ ಪರಿಗಣಿಸಬೇಕಿದೆ. ಅಂದ ಹಾಗೆ ಈ ಹೇಳಿಕೆಗಳನ್ನು ಜಾಗತಿಕ ಲಿಂಗಾಯತ ಮಹಾಸಭಾದ ಲಿಂಗಾಯತ ಧರ್ಮ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. ಈ ಹೇಳಿಕೆಗಳನ್ನು ಇಲ್ಲಿ ಕ್ರಮಾಂಕದಲ್ಲಿ ಕೊಟ್ಟು ಅವುಗಳ ಕೆಳಗೆ ವಿಶ್ಲೇಷಣೆಯನ್ನು ಮಾಡಲಾಗಿದೆ, ಗಮನಿಸಿ:
೧ “ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣದಲ್ಲಿಯೂ ವೀರಶೈವ ಪದ ಬಳಕೆಯಾಗಿಲ್ಲ. ಈತನ ಕೃತಿಯ ಆಧಾರದ ಮೇಲೆ ಭೀಮಕವಿಯ ‘ಬಸವಪುರಾಣ’ (1368) ರಚನೆಯಾಗಿದೆ. ಇಲ್ಲಿ ಮೊದಲಬಾರಿಗೆ ‘ವೀರಮಾಹೇಶ್ವರ’ ಬದಲಿಗೆ ‘ವೀರಶೈವ’ ಪದ ಬಳಕೆ ಯಾಗಿದೆ. ಅಂದರೆ 14ನೇ ಶತಮಾನದವರೆಗೆ ಕನ್ನಡ ಭಾಷೆಯಲ್ಲಿ ‘ವೀರಶೈವ’ ಪದ ಬಳಕೆಯಾಗಿರಲಿಲ್ಲ”. ಕಲಬುರ್ಗಿಯವರ ತಥಾಕಥಿತ ಸಂಶೋಧನಾಧರಿತ ಈ ಹೇಳಿಕೆ ಸುಳ್ಳು ಎಂದು ಆಗಲೇ ಸಾಬೀತುಮಾಡಿದ್ದೇನೆ. ಈಗ ಸಾಂದರ್ಭಿಕವಾಗಿ ಮತ್ತೊಮ್ಮೆ ಉಖಿಸುತ್ತಿದ್ದೇನೆ. ಪಾಲ್ಕುರಿಕೆ ಸೋಮನಾಥನು ತನ್ನ ‘ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಕಲಬುರ್ಗಿಯವರೇ ಕೊಟ್ಟಿರುವ ಪಿಎಚ್ಡಿ ಪುರಾವೆಯಲ್ಲಿಯೇ ಇದು ತಪ್ಪೆಂದು ಸಾಬೀತಾಗಿರುವುದನ್ನು ಕಳೆದೆರಡು ವಾರಗಳ ಹಿಂದಷ್ಟೇ ಓದಿದ್ದೀರಿ. ಇದು ಕಮ್ಯುನಿಸ್ಟರ ಸಂಶೋಧದೊಳಗಣ ‘ಗೋಬೆಲ್ಸ ತಂತ್ರ!’
೨ “ಲಿಂಗಾಯತವು ಅವೈದಿಕ ಧರ್ಮವಾಗಿದೆ. ಬಸವಣ್ಣನವರು ವೇದಗಳ ಜತೆಗೆ ಆಗಮಗಳನ್ನೂ ತಿರಸ್ಕರಿಸಿದ್ದಾರೆ. ‘ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗ ಕೊಯಿವೆ’ ಎಂದು ವೇದಾಗಮಗಳನ್ನು ತಿರಸ್ಕರಿಸಿದ್ದಾರೆ. ವೈದಿಕ ನೆಲೆಯ ಮೇಲೆ ನಿಂತ ಹಿಂದೂ ಧರ್ಮಕ್ಕೂ ಜನರ ಅನುಭವದ ನೆಲೆಯ ಮೇಲೆ ನಿಂತ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವೇ ಪರಮಾತ್ಮನ ಕುರುಹು. ಬಸವಣ್ಣನವರೇ ಧರ್ಮಗುರು, ವಚನಗಳೇ ಧರ್ಮಗ್ರಂಥ, ಅನುಭವದ ಮೂಲಕ ಬರುವ ಅನುಭಾವವೇ ಧರ್ಮದ ದರ್ಶನ,
ಈ ದರ್ಶನವನ್ನು ಲಿಂಗಾದ್ವೈತ ಅಥವಾ ಬಸವಾದ್ವೈತ ಎಂದೂ ಕರೆಯುತ್ತಾರೆ”.
ಇದು ಅರಿವಳಿಕೆ. ಬಸವಣ್ಣನು ಹೇಳಿಹನೆಂದು ವೇದಕ್ಕೆ ಒರೆಯ ಕಟ್ಟುವೆ, ಶಾಸಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ ಎಂದರೆ ಅದು ಕೇವಲ ಮೌಢ್ಯ ಮಾತ್ರ. ಏಕೆಂದರೆ ವೇದವೆಂಬುದು ಒಂದು ಕಾಲದ ಸಂವಿಧಾನ, ಶಾಸ್ತ್ರವೆಂಬುದು ವಿಜ್ಞಾನ, ತರ್ಕವೆಂಬುದು ಈಗಲೂ ಇಂದಿನ ಮೊಬೈಲಿನಲ್ಲಿರುವ ತಂತ್ರಾಶ!
ಇದೆಲ್ಲವೂ ಜಡವಲ್ಲದೆ ಬದಲಾಗುತ್ತಲೇ ಬದಲಾಗಲೇಬೇಕಾದ ಚಲನ ಶೀಲ ಅಂಶಗಳು. ಅದನ್ನೇ ಬಸವ ಬದಲಾಯಿಸಿದ್ದು, ಇಂದು ನಾವುಗಳು ಬದಲಾಯಿಸಬೇಕಾದ್ದು! ಇದೆಲ್ಲಕ್ಕೂ ತರ್ಕವು ಮೂಲದ್ರವ್ಯ. ಇನ್ನು ವೀರಶೈವವು ಬೌದ್ಧ, ಜೈನ, ಸಿಖ್ ಧರ್ಮಗಳಂತೆಯೇ ಹಿಂದೂ ಸಂಸ್ಕೃತಿಯ ಕವಲು ಎನ್ನುವುದು ಐತಿಹಾಸಿಕ ಸತ್ಯ. ಇನ್ನು ಇವರು ಹೇಳುವ ‘ಲಿಂಗಾದ್ವೈತ’, ‘ಬಸವಾದ್ವೈತ’ ಎಂದರೆ ಏನು? ಇದನ್ನು ರಚಿಸಿದವನು ಯಾರು? ಇದರ ಅಪ್ಪ ಅಮ್ಮ ಯಾರು? (ಹಿಂದೂ ಧರ್ಮದ ಬಗ್ಗೆ ಇವರು ಕೇಳುವ ಧಾಟಿಯಲ್ಲಿ ಓದಿಕೊಳ್ಳಿ). ಚರ್ಚಾದಾಖಲೆಯ ವಚನಗಳು ಧರ್ಮಗ್ರಂಥವಲ್ಲವೇ ಅಲ್ಲ. ಏಕೆಂದರೆ ವಚನಗಳನ್ನು ಕವನಗಳಂತೆ ಅವರವರ ಭಾವಕ್ಕೆ ವರ್ಣಿಸಬಹುದು. ಅವರವರ ಅನಿಸಿಕೆಗೆ ನಿರ್ವಚಿಸಿದರೆ ಸಮಗ್ರ ನಿಶ್ಚಿತ ಧರ್ಮಸ್ವರೂಪವು ಸಿಗುವುದಾದರೂ ಹೇಗೆ? ಸದ್ಯದ ‘ವಚನದರ್ಶನ’ ಮತ್ತು ‘ವಚನ ನಿಜದರ್ಶನ’ದಂಥ ಪರಸ್ಪರರು ದೂಷಿಸುವ ವಚನ ವ್ಯಾಖ್ಯಾನಗಳೇ ಇದಕ್ಕೆ ಜ್ವಲಂತ ಸಾಕ್ಷಿ. ಒಂದು ವೇಳೆ ವಚನಗಳೇ ಧರ್ಮಗ್ರಂಥ, ಬಸವಣ್ಣನೇ ಮತಸಂಸ್ಥಾಪಕ ಎನ್ನುವುದಾದರೆ ಯಾವುದೇ ಪೂರ್ವಗ್ರಹ ರಹಿತ ಶ್ರೀಸಾಮಾನ್ಯನಿಗೆ ಏನೆನ್ನಿಸುವುದೆಂದರೆ, ಪುರಾಣ/ ವಚನಗಳ ಪ್ರಕಾರ ಬಸವಣ್ಣ ಬಿಜ್ಜಳನ ಕೋಶವನ್ನು ‘ಕದ್ದು’ ಜಂಗಮಕ್ಕೆ ವ್ಯಯಿಸಿದ್ದಾನೆ. ಆ ಬಗ್ಗೆ ಬಿಜ್ಜಳನಿಗೆ ‘ಹುಸಿಯ’ ನುಡಿದಿದ್ದಾನೆ.
ಬಿಜ್ಜಳನ ಕೊಲೆಗೆ ಶರಣರಿಗೆ ಒಪ್ಪಿಗೆ ನೀಡಿ ‘ಕೊಲೆ’ ಮಾಡಿಸಿದ್ದಾನೆ. ಅನ್ಯಪಂಥದ ಅವಹೇಳನ ಮಾಡಿ ‘ಅನ್ಯರಿಗೆ ಅಸಹ್ಯ’ ಪಟ್ಟಿದ್ದಾನೆ. ಹೀಗಿದ್ದಾಗ ಇನ್ನೆಲ್ಲಿಯ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ? ‘ಇವನಾರವ ಎನ್ನದೆ ಇವನಮ್ಮವನೆನಿಸಯ್ಯ’ ಎಂದು ನುಡಿದು ಬೊಟ್ಟು ಮಾಡಿ
‘ಇವ ಪರವಾದಿ ಪರವಾದಿ’ ಎಂಬ ನಡೆ ತೋರಿದ್ದಾನೆ.
‘ಅವರ ನಡೆಯೊಂದು ನುಡಿಯೊಂದಾದಡೆ ಶಿವಾಚಾರಕ್ಕವರು ಸಲ್ಲರಯ್ಯ’ ಎಂದು ತನ್ನ ನುಡಿಯಂತೆ ತಾನೇ ಸಲ್ಲದಾಗುತ್ತಾನೆ. ಇದೇ ರೀತಿ ಎಲ್ಲಾ ವಚನಕಾರರು ತಮ್ಮ ತಮ್ಮ ವಚನಗಳ ಇಂದಿನ ತಾಲಿಬಾನರಿಗಿಂತ ಮತಾಂಧರೆನಿಸುವಷ್ಟು ದ್ವಂದ್ವ ತೋರಿ ರದ್ದಾಗಿಬಿಡುತ್ತಾರೆ. ಅದಕ್ಕಾಗಿಯೇ ವಚನಗಳು ಅನುಭವ ಮಂಟಪದ ಆಯಾಯ ದಿನದ ಚರ್ಚೆಯ ಸನ್ನಿವೇಶಕ್ಕೆ ವ್ಯಕ್ತಪಡಿಸಿದ ಅನಿಸಿಕೆಗಳ ದಾಖಲೆಗಳೇ ಹೊರತು ಇನ್ನೇನೂ ಅಲ್ಲ! ವಚನಗಳು ಎಂದಿಗೂ ಧರ್ಮಗ್ರಂಥವಾಗುವ ಮಾನ್ಯತೆಯನ್ನು ಪಡೆದಿಲ್ಲ. ಅವು ಅರ್ಹವೂ ಅಲ್ಲ. ಚರ್ಚೆಯ ಆವೇಶದಲ್ಲಿ ಮಾಡಿರುವ ಪರಮತ ಅಸಹಿಷ್ಣುತೆಯು ವಚನಗಳಲ್ಲಿ ಪರಾಕಾಷ್ಠೆಯನ್ನು ತಲುಪಿದೆ.
ಮುಂದಿನ ಪೀಳಿಗೆಯ ವೀರಶೈವ ಲಿಂಗಾಯತ ಧರ್ಮೀಯರು ಈ ಅಸಹಿಷ್ಣುತೆಯನ್ನು ಹೇಗೆ ತಾನೇ ತಮ್ಮ ಧರ್ಮದ ಪ್ರೌಢನೀತಿ ಎಂದು
ಬಗೆದಾರು? ವಚನಗಳನ್ನು ಧರ್ಮಗ್ರಂಥ ಎಂದು ಪೆದ್ದು ಪೆದ್ದಾಗಿ ಅಳವಡಿಸಿದರೆ ಅದು ಲಿಂಗಾಯತವನ್ನು ಸರ್ವನಾಶ ಮಾಡುವುದು ಶತಸ್ಸಿದ್ಧ. ಇದು ಕಮ್ಯುನಿಸ್ಟರ ಅತ್ಯಂತ ವ್ಯವಸ್ಥಿತ ಲಿಂಗಾಯತ ನಾಶದ ದೂ(ದು)ರಾಲೋಚಿತ ‘ಗೋಬೆಲ್ಸ್ ತಂತ್ರ’.
ಹಾಗಾಗಿ ಕೇವಲ ಆದ್ಯರ ಸಿದ್ಧಾಂತ ಶಿಖಾಮಣಿ, ಕರಣ ಹಸುಗೆ, ಮಂತ್ರಗೋಪ್ಯ, ಮಿಶ್ರಾರ್ಪಣಗಳೇ ವೀರಶೈವರ ಧರ್ಮಗ್ರಂಥಗಳು. ಹಾಗೆಂದು ಅಂದಿನ ಶೂನ್ಯಾಪೀಠಾಧ್ಯಕ್ಷ ಅಲ್ಲಮ, ಚೆನ್ನಬಸವಣ್ಣ, ಸಿದ್ಧರಾಮರಾದಿಯಾಗಿ ಇತ್ತೀಚಿನ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳವರವರೆಗೆ ಆಗಿಹೋದ ಎಲ್ಲಾ ಶೂನ್ಯ ಪೀಠಾಧಿಪತಿಗಳು ಮಾನ್ಯ ಮಾಡಿದ್ದಾರೆ.
ಇದನ್ನು ಬದಲಿಸಲು ಜಾತಿಪೀಠಿಗಳಿಗೆ, ಕಮ್ಯುನಿಸ್ಟರಿಗೆ, ಬಾಲಿಶ ಸಂಶೋಧಕರಿಗೆ, ಕೋಲೆಬಸವನಂಥ ಮಠಾಧೀಶರಿಗೆ, ‘ಟಾಮ್-ಡಿಕ್-ಹ್ಯಾರಿ’ಗಳಿಗೆ ಯಾರು ಹಕ್ಕು ಕೊಟ್ಟಿರುವರು? ಇದು ಕಮ್ಯುನಿಸ್ಟರು ದಡ್ಡ ಹೆಡ್ಡ ಮಠಾಧೀಶರನ್ನು ಬಳಸಿಕೊಂಡು ಹೇರಿರುವ ಹಕ್ಕೊತ್ತಾಯದ
‘ಗೋಬೆಲ್ಸ ತಂತ್ರ’!
೩“ಕಳೆದ ಶತಮಾನದಲ್ಲಿ ಕ್ಯೂಬಾ ದೇಶ ಅಮೆರಿಕದ ಅಧೀನದಲ್ಲಿದ್ದಾಗ ಅದರ ರಾಜಧಾನಿ ಹವಾನಾ ವೇಶ್ಯಾವಾಟಿಕೆಗಳಿಂದ ತುಂಬಿ ಹೋಗಿತ್ತು. ಸ್ವಾತಂತ್ರ್ಯಾನಂತರ ಕಮ್ಯುನಿ ಯುವಕರ ನೇಕರು ವೇಶ್ಯೆಯರನ್ನು ಮದುವೆಯಾಗುವ ಮೂಲಕ ಆದರ್ಶ ಮೆರೆದರು. ಕಲ್ಯಾಣದಲ್ಲಿ ಶರಣರು ಪಣ್ಯಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡಿ ವೇಶ್ಯಾ ಸಮಸ್ಯೆಯನ್ನು ಬಗೆಹರಿಸುವತ್ತ ಮುನ್ನಡೆದರು”.
ಸುಳ್ಳು. ಕ್ಯೂಬಾದ ಪುಣ್ಯಸೀಯರಿಗೆ ಬಾಳು ಕೊಟ್ಟ ಕಮ್ಯುನಿಸ್ಟ್ ವೀರರ ಸುಳ್ಳಿನ ಬಗ್ಗೆ ‘ವಿಶ್ವವಾಣಿ’ ಅಕ್ಟೋಬರ್ ೮ರ ‘ಬಸವ ಮಂಟಪ’ ಅಂಕಣದಲ್ಲಿ ಓದಿದ್ದೀರಿ. ಇದು ಭಾವುಕ ಶೋಷಣೆಯ ‘ಗೋಬೆಲ್ಸ ತಂತ್ರ’!
೪“19ನೇ ಶತಮಾನದಲ್ಲಿ ಕಮ್ಯುನಿಸ್ಟ್ ತತ್ತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ‘ಜಗತ್ತಿನ ಕಾರ್ಮಿಕರೇ ಒಂದಾಗಿರಿ, ನೀವು ಒಂದಾದರೆ ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ’ ಎಂದು ಸಾರಿದರು. ಬಸವಣ್ಣ ನವರು 12ನೇ ಶತಮಾನದ ಭಾರಿ ತೆರಿಗೆ ಮತ್ತು ಸುಲಿಗೆಯಿಂದ ನರಳುತ್ತಿದ್ದ ಕಾಯಕಜೀವಿಗಳನ್ನು, ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ದಲಿತರನ್ನು, ಎಲ್ಲ ಹಕ್ಕುಗಳಿಂದ ವಂಚಿತರಾಗಿದ್ದ ಮಹಿಳೆಯರನ್ನು ವಿಮೋಚನೆಯ ದಾರಿಯೆಡೆಗೆ ತಂದರು”.
ಇದು ಅರಿವಳಿಕೆ. ಕಮ್ಯುನಿಸ್ಟ್ ಪ್ರಚಾರಕ್ಕೆ ಬಸವಣ್ಣನ ಬಳಕೆಯಷ್ಟೇ. ಇವರೇ ಹೇಳುವಂತೆ ಒಬ್ಬ ‘ಧರ್ಮ ಅಫೀಮು’ ಎಂದವನು, ಮತ್ತೊಬ್ಬ ಧರ್ಮಸ್ಥಾಪಕ! ಹಾಗಾಗಿ ಇವರನ್ನು ಅಫೀಮು ಹಂಚುವವರು ಎನ್ನಬಹುದು. ಇನ್ನು 12ನೇ ಶತಮಾನದ ಭಾರಿ ತೆರಿಗೆ, ಸುಲಿಗೆ, ಅಸ್ಪೃಶ್ಯತೆ ಆಧಾರರಹಿತ ಆಪಾದನೆಗಳು. ಕೇಳುವವರಿದ್ದರೆ ಬಸವಣ್ಣನೇ ಲೆನಿನ್ನು, ಸ್ಟಾಲಿನ್ನು, ಐನ್ಸ್ಟೀನು.
ವಚನಗಳ ಕಟ್ಟೇ ಪೆನಿಸಿಲಿನ್ನು, ಟೆಟ್ರಾಸೈಕ್ಲಿನ್ನು, ಅಮಾಕ್ಸಿಸಿಲಿನ್ನು, ಹೈಡ್ರಾಕ್ಸಿಕ್ಲೋರೋಕ್ವೀನು! ಅಕಟಕಟಾ, ಎತ್ತಣ ಮಾಮರ ಎತ್ತಣ ಕೋಗಿಲೆ! ಇದು ಆಫೀಮಿನ ನಶೆಯ ಉದ್ರೇಕದ ‘ಗೋಬೆಲ್ಸ ತಂತ್ರ!’
೫“… ‘ಕಾಯಕದ ಮೂಲಕ ಗಳಿಸಿದ ಒಂದು ಡಾಲರಿನ ಮೌಲ್ಯ ಪುಕ್ಕಟೆ ಸಿಕ್ಕ ಐದು ಡಾಲರಿಗಿಂತ ಬಹಳಷ್ಟು ಹೆಚ್ಚಿಗೆ ಇರುತ್ತದೆ ಎಂಬುದನ್ನು ನನ್ನ ಮಗನಿಗೆ ಕಲಿಸಿರಿ’ ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಮಗ ಕಲಿಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾ ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೀಗೆ ಕಾಯಕ ನಮ್ಮ ನೈತಿಕ ಶಕ್ತಿಯನ್ನು ಹೆಚ್ಚಿಸುವುದು. ‘ರಾಟೆ ತಿರುಗಿಸಲು ನನಗೆ ಶಕ್ತಿ ಇದ್ದು, ಜಪಮಣಿಗಳನ್ನು ಎಣಿಸುವುದು ಅಥವಾ ರಾಟೆ ತಿರುಗಿಸುವುದು ಇವುಗಳ ನಡುವೆ ಆಯ್ಕೆ ಮಾಡಬೇಕಾದಲ್ಲಿ, ಬಡತನ ಮತ್ತು ಉಪವಾಸವು ದೇಶವನ್ನು ಗುಪ್ತವಾಗಿ ಬೆನ್ನಟ್ಟಿರುವುದನ್ನು ಕಾಣುತ್ತಿರುವವರೆಗೆ ನಾನು ಖಂಡಿತವಾಗಿಯೂ ರಾಟೆಯ ಪರವಾಗಿ ತೀರ್ಮಾನಿಸುತ್ತೇನೆ ಮತ್ತು ಅದನ್ನೇ ನಾನು ನನ್ನ ಜಪಸರವನ್ನಾಗಿ ಮಾಡಿಕೊಳ್ಳುತ್ತೇನೆ’ ಎಂದು ಗಾಂಧೀಜಿ ಕಾಯಕದ ಮಹತ್ವವನ್ನು ಸಾರಿದ್ದಾರೆ. ‘ತಮ್ಮ ಕೈಯಿಂದ ಸಂಪಾದಿಸಿದುದಕ್ಕಿಂತ ಉತ್ತಮ ಆಹಾರ ವನ್ನು ಎಂದೂ ಯಾರೂ ತಿಂದಿಲ್ಲ’ ಎಂದು ಮುಹಮ್ಮದ್ ಪೈಗಂಬರರು ಹೇಳುತ್ತಾರೆ”.
ತಮ್ಮ ವಾದಕ್ಕೆ ಶಕ್ತಿ ನೀಡಲು ಗಾಂಧಿ, ಲಿಂಕನ್, ಪೈಗಂಬರ್ ಎಂಬ ಕತ್ತಿ-ಗುರಾಣಿ, ರಕ್ಷಾಕವಚಗಳನ್ನು ಸರಳತೆಯ ನಿರಾಕಾರಕ್ಕೆ ತೊಡಿಸಿ ವೈಭವೀಕರಿಸಿ ಸ್ಟೆರಾಯ್ಡ ಚುಚ್ಚುವ ಸಿದ್ಧಮಾದರಿ ತಂತ್ರವಿದು. ಹೀಗೆ ಸುಳ್ಳನ್ನೇ ಸೃಷ್ಟಿಸಿ ಸುಳ್ಳನ್ನೇ ಹೇಳಿ ಸುಳ್ಳಿನ ಸಿದ್ಧಾಂತವನ್ನು ಹೇರಿ ಸಂಪಾದಿಸುವುದು ಕಾಯಕದ ಮಂತ್ರದೊಳಗಣ ನಿಜಾರ್ಥದ ‘ಗೋಬೆಲ್ಸ್ ತಂತ್ರ!’
“ಕನ್ನಡವೇ ಲಿಂಗಾಯತದ ಧರ್ಮಭಾಷೆ. ಪಂಚಾಚಾರ್ಯರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪುವುದಿಲ್ಲ. ವಚನಗಳನ್ನು ಧರ್ಮಗ್ರಂಥಗಳೆಂದು ಒಪ್ಪುವುದಿಲ್ಲ. ಅನುಭಾವವನ್ನು ತತ್ತ್ವ ಜ್ಞಾನವೆಂದು ಒಪ್ಪುವುದಿಲ್ಲ. ಕನ್ನಡವನ್ನು ಧರ್ಮಭಾಷೆ ಎಂದು ಒಪ್ಪುವುದಿಲ್ಲ”.
ಕನ್ನಡ ಭಾಷಾ ಅಭಿಮಾನವನ್ನು ಉದ್ರೇಕಿಸಿ, ಪಂಚಾಚಾರ್ಯ ದ್ವೇಷ ಬಿತ್ತರಿಸಿ ಸಾಮಾನ್ಯರನ್ನು ತಮ್ಮ ತೆಕ್ಕೆಗೆ ಬೀಳಿಸಿಕೊಳ್ಳುವ
ಮತ್ತೊಂದು ಭಾವುಕ ಉದ್ರೇಕದ ‘ಗೋಬೆಲ್ಸ ತಂತ್ರ!’ ಇವರ ಎಲ್ಲಾ ಹೇಳಿಕೆ/ಲೇಖನಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣುವ ಅಂಶವೆಂದರೆ, “ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಮನಸ್ಸಿಗೆ ನಾಟುವಂತೆ ಪ್ರಭಾವಿಸಿ ಹರಡುವ ಕಮ್ಯುನಿಸ್ಟ್ (Psychological Propaganda) ತಂತ್ರ!” ಪ್ರಸಿದ್ಧ ವ್ಯಕ್ತಿಗಳ ಹೆಸರು, ಹೇಳಿಕೆ, ಉದ್ಘೋಷಗಳನ್ನು ತಮ್ಮ ಸಿದ್ಧಾಂತಕ್ಕೆ ಸಮೀಕರಿಸಿ ಓದುಗರ ಅಥವಾ ಕೇಳುಗರ ಭಾವುಕತೆ, ಭಯ, ಭಕ್ತಿ, ಪ್ರೇಮ, ಸಿಟ್ಟು, ದೈನ್ಯತೆ, ಕೃತಜ್ಞತಾ ಭಾವಗಳನ್ನು ಉಕ್ಕಿಸಿ ಅವರ ಮನದಲ್ಲಿ ತಮ್ಮ ಸಿದ್ಧಾಂತ ನೆಲೆಸುವಂತೆ ಮಾಡುವುದು. ಹೀಗೆ
ಹಸ್ತಕಮಸ್ತಕ ಸಂಯೋಜಿಸಿ ತಲೆಯನ್ನು ತೊಳೆದು ಅಲ್ಲಿ ‘ನಾವು’ ಭಾವವನ್ನು ಸೃಷ್ಟಿಸಿ ‘ಅವರು’ ಎನ್ನುವ ವೈರತ್ವವನ್ನು ಪ್ರತಿಷ್ಠಾಪಿಸುವುದು ರಷ್ಯನ್ ತಂತ್ರ.
ಇದನ್ನು ಮನಶ್ಶಾಸ್ತ್ರಜ್ಞರು, ‘ಮಾನಸಿಕ ಸಂಗ್ರಾಮ ಮನೋವಿಕಾರ’ ಎನ್ನುತ್ತಾರೆ. ಈ ಮನೋವಿಕಾರವನ್ನು ಸೃಷ್ಟಿಸುವಲ್ಲಿ ಕಮ್ಯುನಿಸ್ಟರು ವಿಶ್ವವಿಖ್ಯಾತರಾಗಿದ್ದಾರೆ. ಹಾಗಾಗಿಯೇ ಅವರ ಸುಳ್ಳುಗಳ ಬಗ್ಗೆ ಯಾರು ಎಷ್ಟೇ ಸಾಕ್ಷಿಪುರಾವೆಗಳನ್ನು ಕೊಟ್ಟರೂ ವಿಚಾರಿಸದೆ ತಮ್ಮ ಭ್ರಮಾಽನ ಆಫೀಮಿನ ಕೂಪಸಿದ್ಧಾಂತದಾಚೆಗಿನ ವಾಸ್ತವ ಪ್ರಪಂಚವನ್ನೇ ಪರಿಗಣಿಸರು. ಹಾಗಾಗಿ ಅವರ ಬಗ್ಗೆ ಅವರ ಕುಟುಂಬದ ಸದಸ್ಯರೇ ಗೌರವ
ಕೊಡುವುದಿಲ್ಲ.
ಸಾಕಷ್ಟು ಕಮ್ಯುನಿಸ್ಟರು ಬಹಳಷ್ಟು ವಿರಕ್ತರಿಗೆ, “ಬ್ರಹ್ಮಚರ್ಯಳ್ಳು. ನಿಮಗೆ ಸ್ವಪ್ನಸ್ಖಲನವಾಗಿದೆಯೆಂದರೆ ನಿಮ್ಮ ಬ್ರಹ್ಮಚರ್ಯ ಹರಿದಂತೆ. ಕಾಮವನ್ನು ಅನುಭವಿಸದೆ ಸಂಪೂರ್ಣ ಜ್ಞಾನಪ್ರಾಪ್ತಿ ಸಿಕ್ಕದು. ಶಂಕರಾಚಾರ್ಯ ಸಹ ಅದಕ್ಕಾಗಿಯೇ ಪರಕಾಯ ಪ್ರವೇಶ ಮಾಡಿದ್ದು. ಪರಕಾಯಪ್ರವೇಶ ಸಹ ರೇಣುಕನ ಅವತಾರ ದಷ್ಟೇ ಸುಳ್ಳು. ಶಂಕರನು ಸಹ ಕಾಮವನ್ನು ನಮ್ಮ ನಿಮ್ಮಂತೆಯೇ ಸ್ವಕಾಯನಾಗಿ ಅನುಭವಿಸಿದ್ದ” ಎಂದೆ ಉಪದೇಶಿಸಿ ಹಾದಿ ತಪ್ಪಿಸಿದ್ದಾರೆ. ಇದನ್ನು ನಂಬಿ ಅಡುಗೆಯವಳನ್ನೋ/ಅಡುಗೆಯ ವನನ್ನೋ, ಭಕ್ತೆಯನ್ನೋ/ಭಕ್ತನನ್ನೋ, ನವ್ಯ ಚಿಂತನೆಯ ತರುಣಿಯರನ್ನೋ/ತರುಣರನ್ನೋ ಅವರವರ ಶಕಾನುಸಾರ ಕಾಮಿಸಿ ಸಿಕ್ಕಿಬಿದ್ದ ಎಷ್ಟೋ ಮಠಾಧೀಶರ ಬಗ್ಗೆ ಪತ್ರಿಕೆಗಳಲ್ಲಿ
ಓದಿದ್ದೀರಿ. ಅವರಲ್ಲಿ ಕೆಲವು ಧೈರ್ಯಸ್ಥರು ಸಂಸಾಯಾದರೆ, ಧೈರ್ಯವಿಲ್ಲದವರು ಆತ್ಮಹತ್ಯೆ ಮಾಕೊಂಡಿದ್ದಾರೆ.
ಶಕ್ತಿಶಾಲಿ ಅನುರಕ್ತರು ಸಾಮ-ಭೇದ-ದಂಡ ನೀತಿಗಳಿಂದ ಸಂತ್ರಸ್ತರ/ ಸಂತ್ರಸ್ತೆಯರ ಬಾಯಿ ಮುಚ್ಚಿಸಿ ಮುನ್ನಡೆದಿದ್ದಾರೆ. ಕೆಲವರು ರೊಚ್ಚಿಗೆದ್ದ ಪ್ರೇಮಿಗಳಿಂದ ವಿಷಪ್ರಾಶನಗೊಂಡು ಲಿಂಗೈಕ್ಯರಾಗಿದ್ದಾರೆ. ಇದು ಕಮ್ಯುನಿಸ್ಟರ ನಿಜಗುಣ ‘ಗೋಬೆಲ್ಸ್ ತಂತ್ರ!’ ವಿಜಯ್ ಮಲ್ಯ ತಮ್ಮ ಕ್ಯಾಲೆಂಡರ್ ಕನ್ಯೆಯರ ಫೋಟೋಶೂಟ್ ಮಾಡಿಸಿದಂಥ ಥಾಯ್ಲೆಂಡ್, ಮಾರಿಷಸ್, ಹವಾಯಿ, ಆಸ್ಟ್ರೇಲಿಯಾ ಬೀಚುಗಳಿಗೆಲ್ಲ ವಿರಕ್ತರ ಜತೆ ಖುದ್ದು ಪ್ರವಾಸ ಹೋಗಿ ಲಿಂಗಾಂಗಸಾಮರಸ್ಯ ಹೊಂದಿದ್ದಾರೆ.
ಬಸವಣ್ಣನು ಸಮಾಜದಲ್ಲಿ ಬದಲಾವಣೆ ತರಲು ಬಿಜ್ಜಳನ ಖಜಾನೆಯನ್ನು ಖಾಲಿ ಮಾಡಿರಲಿಲ್ಲವೇ! ಹಾಗೆಯೇ ನಾವೂ ನಮ್ಮ ಸಮಾಜದಲ್ಲಿ
ನಾವೀನ್ಯ ತರಲು ಮಠದ ಆಸ್ತಿ ಖರ್ಚು ಮಾಡಿದ್ದೇವೆ ಎಂಬ ಸೊಕ್ಕಿನ ಸಮಜಾಯಿಷಿ ಸಮೀಕರಣ ಸೂತ್ರವನ್ನು ಮಠದ ಆಸ್ತಿ ಮಾರಿದ ವಿರಕ್ತರಿಗೆ ಹೇಳಿಕೊಟ್ಟಿರುವುದು ಇವರ ಆರ್ಥಿಕ ಸಮಜಾಯಿಷಿ ‘ಗೋಬೆಲ್ಸ ತಂತ್ರ!’ ಕಲಬುರ್ಗಿಯವರು ಪಿಎಚ್ಡಿ ಗಳಿಸಿರುವ ಕವಿರಾಜ ಮಾರ್ಗ
ದಲ್ಲಿ, ‘ಸೈರಿಸಲಾರ್ಪೊಡೆ ಪರ ಧರ್ಮಮಂ ಪರ ವಿಚಾರಮುಮಂ’ ಎಂದಿದೆ. ಇಂಥ ಘನ ವಿಚಾರವನ್ನು ಬಾಯಲ್ಲಿ ಮಂತ್ರಿ ಸುತ್ತಲೇ ವೈದಿಕ-ಅವೈದಿಕ, ಆರ್ಯ-ದ್ರಾವಿಡ, ವೀರಶೈವ-ಲಿಂಗಾಯತ ಎಂದೆ ಅಸಹನೆ ತುಂಬುವುದೇ ಈ ಸಮಾಜವಾದಿಗಳ ನಿಜಾರ್ಥದ ಕ್ರಿಯಾಶೀಲ ‘ಗೋಬೆಲ್ಸ ತಂತ್ರ!’ ‘ಇವನಾರವ ಇವನಾರವ’ ಎಂದು ಪಠಿಸುತ್ತಲೇ ‘ಇವ ನಾರುವ ಇವ ನಾರುವ’ ಎಂದು ಅಸಹ್ಯಿಸುವ ಸಮಾಜವಧೀಗರು ಇವರೇ ಹೊರತು ಸಮಾಜವಾದಿಗಳಲ್ಲ.
ಸಮಾಜವನ್ನು ಛಿದ್ರಛಿದ್ರ ಮಾಡುವ ಇವರ ಇಂಥ ಅನೇಕ ವಧೆಗಳು ಮೇಲ್ನೋಟಕ್ಕೆ ಹೀಗೆ ಸಾಬೀತಾಗುತ್ತ ಸಾಗುತ್ತವೆ. ತಿರುಪತಿಯ ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬಿದ್ದಿತ್ತು ಎನ್ನುವ ಇತ್ತೀಚಿನ ಭ್ರಷ್ಟಾಚಾರದ ಸುದ್ದಿಯನ್ನು ಸನಾತನದ ವಿರುದ್ಧ ಸಮಾನತೆಯ ಸಂಕೇತದ
ಕ್ರಾಂತಿ ಎಂಬಷ್ಟು ಸಂತೋಷಿಸಿ ಸಂದೇಶಗಳನ್ನು ಹಂಚಿಕೊಂಡಿರುವುದು ಇವರ ಸಮಾಜವಧೆಯ ತಾಜಾ ಸಾಕ್ಷಿ. ಹೀಗೆ ‘ಅನ್ಯರಿಗೆ
ಅಸಹ್ಯ ಪಡಬೇಡ’ ಎಂಬ ಶಿಶುವಿಹಾರದ ವಚನವನ್ನೇ ಬಾಳದವರು ಅಲ್ಲಮನ ಸ್ನಾತಕೋತ್ತರ ವಚನಗಳಂತೆ ಜೀವಿಸಬಲ್ಲರೆ?
ಕುಂಡಲಿನಿಯನ್ನು ಜಾಗೃತಗೊಳಿಸಿಕೊಳ್ಳಬಲ್ಲರೆ? ‘ಜಾಣಪ್ರಜ್ಞೆ’ ಮತ್ತು ‘ಜ್ಞಾನಪ್ರಜ್ಞೆ’ ಇವುಗಳ ನಡುವಿನ ವ್ಯತ್ಯಾಸ ಅಜಗಜಾಂತರ.
ಒಂದು ಬುಡುಬುಡುಕೆ, ಇನ್ನೊಂದು ಡಮರುಗ! ಇವರೆಲ್ಲರೂ ಹೇಳುವುದು ಲಿಂಗಾಯತವಲ್ಲ, ‘ಲಿಂಗಾಹತ’.
ಆದರೂ ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರeನದ ಈ ಕಾಲದಲ್ಲೂ ಜನರು ಇವರನ್ನು ನಂಬುತ್ತಾರೆಂದರೆ ಸಮಾಜದ ಒಂದಿಡೀ
ವರ್ಗವೇ ಸ್ಟಾಕ್ಹೋಮ್ ಸಿಂಡ್ರೋಮಿನಲ್ಲಿದೆ ಎಂದರ್ಥ. ಇನ್ನು ಕರ್ನಾಟಕದ ಬಹಳಷ್ಟು ಕಮ್ಯುನಿಸ್ಟರಿಗೆ ಒಂದು ನಿಶ್ಚಿತ ಕಾಯಕ ಇಲ್ಲ. ಇವರನ್ನು ಪ್ರೇಮಿಸಿ ಮದುವೆಯಾದ ಮೇಲ್ಜಾತಿಯ ಪತ್ನಿಯರು ಮಾತ್ರ ಉತ್ತಮ, ಸುಭದ್ರ, ಗೌರವಾನ್ವಿತ ಉದ್ಯೋಗಗಳಲ್ಲಿzರೆ. ಅಂಥವರನ್ನು ಹುಡುಕಿಯೇ ಈ ಚಿಂತಕರು ಪ್ರೇಮಿಸಿ ಮದುವೆಯಾಗಿ ಸಂಸಾರದ ಆರ್ಥಿಕ ಜವಾಬ್ದಾರಿಯಿಂದ ತಪ್ಪಿಸಿಕೊಂಡಿರುತ್ತಾರೆ. ಇದು ಇವರ ‘ಕಾಯಕವೇ ಕೈಲಾಸ’ದ ಅನುಷ್ಠಾನ. ಓರ್ವ ಧೀಮಂತ ಕನ್ನಡ ಕಮ್ಯುನಿಸ್ಟರು ತಮ್ಮ ಶಿಷ್ಯರ ಜತೆ ಬೆರೆತಾಗ, “ನನ್ನ ಹೆಂಡತಿ ಜಂಗಮರವಳು.
ನಮ್ಮಪ್ಪ ಪಾದಪೂಜೆ ಮಾಡಿದ್ದ ಜಾತಿಯೋಳ ಹತ್ರ ನಿತ್ಯ ಪಾದ ಒತ್ತಿಸಿಕೊಳ್ತೀನಿ. ಆ ಗುಲಾಮಿ ಪಾದಪೂಜೆ ನೆನಪಾದ್ರ ಸಾಕು, ‘ಏಯ್ ಬಾ ಇಲ್ಲಿ, ಕಾಲು ಒತ್ತು’ ಎಂದು ಮಂಚದ ಮೇಲೆ ವಿರಾಜಮಾನವಾಗಿ, ಆಕೆ ಕಾಲು ಒತ್ತುವಾಗ ಮೀಸೆ ತಿರುವಿ ನಸುನಗುತ್ತೇನೆ” ಎಂದು ತನ್ನ ಪ್ರೇಮವನ್ನೇ ಅಪಮಾನಿಸುತ್ತಾರೆ.
ಇದನ್ನು ಕೇಳಿದ ಅವರ ಮಹಿಳಾ ಸಮಾನತೆಯ ಹೋರಾಟಗಾರ್ತಿ ಶಿಷ್ಯೆಯರು ಕಣ್ಣರಳಿಸಿ, “ಹೌದಾ! ಮಾವನವರೇ!” ಎಂದು
ಸಂತೋಷಿಸುತ್ತಾರೆ. ಮತ್ತೋರ್ವ ಪ್ರಗತಿಪರ ನಾಯಕರು, “ನನ್ನ ಹೆಂಡತಿ ಬ್ರಾಹ್ಮಣರವಳು. ನನಗೆ ಬ್ರಾಹ್ಮಣ್ಯ ನೆನಪಾದಾಗಲೆಲ್ಲ
ಅವಳನ್ನ ಕರೆದು ಮುಖಮೈಥುನ ಮಾಡಿಸಿಕೊಳ್ಳುತ್ತೇನೆ. ಬ್ರಾಹ್ಮಣ್ಯದ ವಿರುದ್ಧ ಸೇಡು ತೀರಿಸಿಕೊಳ್ಳುವ ಈ ವಿಧಾನ… ಆಹಾ!” ಎಂದು ತನ್ನ ಶಿಷ್ಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಇದು ಅಮರ, ಮಧುರ, ನಿಷ್ಕಲ್ಮಷ, ಪವಿತ್ರ ಇತ್ಯಾದಿ ಸಮಸಮಾಜ ಪದಗಳಲ್ಲಿ ‘ತಮ್ಮ ಕವಿತ್ವ ಮೆರೆವವರ’ ಪ್ರೇಮದ ಅಸಲಿಯತ್ತು. ಮಹಿಳಾ ಸಮಾನತೆಯ ಹಕೀಕತ್ತು.
ನಿಜಾರ್ಥದ ಕ್ರಿಯಾಶೀಲ ‘ಗೋಬೆಲ್ಸ ತಂತ್ರ!’ದ ಮಸಲತ್ತು.
ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬದ ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಸಮಥನೆಯನ್ನು ಸಮರ್ಥಿಸಿಕೊಳ್ಳಲಾಗದ ಆತ್ಮವಿರದ ಆತ್ಮಗೇಡಿಗಳು ಬರಿಯ ಲಿಂಗವ ದಿಟ್ಟಿಸಿದೊಡವೇನು ಫಲ!
ಶೂನ್ಯಪೀಠಾಧೀಶ್ವರ ಚೆನ್ನಬಸವಣ್ಣನು ಕಾಲಜ್ಞಾನಿಯಾಗಿ ಇಂಥ ‘ತಮ್ಮ ಕವಿತ್ವವ ಮೆರೆವವರ’ ಗೋಬೆಲ್ಸ ತಂತ್ರಜ್ಞರಿಗಾಗಿಯೇ ಬರೆದ ಎಚ್ಚರಿಕೆಯ ವಚನ ಹೀಗಿದೆ: “ನಮ್ಮ ಪುರಾತನರ ವಚನಂಗಳನೆಲ್ಲ ಓದದೆ ಇದ್ದಾರು, ಓದಿಯೂ ನಂಬಿಗೆ ಇಲ್ಲದೆ ಇದ್ದಾರು, ನೂರ ಕ್ಕೊಬ್ಬರಲ್ಲದೆ ನಂಬರು, ನಮ್ಮ ಆದ್ಯರ ವಚನಂಗಳ ಜರೆದಾರು, ‘ತಮ್ಮ ಕವಿತ್ವವ ಮೆರೆ’ದಾರು, ನಮ್ಮ ಆದ್ಯರ ವಚನಂಗಳಿಂದೊದಗಿದ ಜ್ಞಾನವೆಂಬುದನ ರಿಯರು. ತಾಯಿಯಿಂದ ಮಕ್ಕಳಾದರೆಂಬುದನರಿಯರು. ಊರೆಲ್ಲಕ್ಕೆ ಹುಟ್ಟಿದ ಹಾಗೆ ನುಡಿದಾರು ನಮ್ಮ ಪುರಾತನರ ವಚನವೆ ತಾಯಿ ತಂದೆ ಎಂದರಿಯರು.
ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು ನಮ್ಮ ಆದ್ಯರ ಚನ ಮದ ಮಾತ್ಸರ್ಯಾದಿ ಅರಿಷಡ್ವರ್ಗ ಸಪ್ತವ್ಯಸನ
ಪಂಚೇಂದ್ರಿಯ ದಶವಾಯುಗಳಿಚ್ಛೆಗೆ ಹರಿವ ಮನವ ಸ್ವಸ್ಥವಾಗಿ ನಿಲಿಸಿತ್ತು ನಮ್ಮ ಆದ್ಯರ ವಚನ ಅಂಗೇಂದ್ರಿಯಂಗಳ ಲಿಂಗೇಂದ್ರಿ
ಯಂಗಳೆನಿಸಿತ್ತು. ನಮ್ಮ ಆದ್ಯರ ವಚನ ನೂರೊಂದುಸ್ಥಲವ ಮೀರಿದ ಮಹದಲ್ಲಿ ನೆಲಸಿತ್ತು. ನಮ್ಮ ಆದ್ಯರ ವಚನ ಇನ್ನೂರ
ಹದಿನಾರು ಲಿಂಗಕ್ಕೆ ಸರ್ವೇಂದ್ರಿಯವ ಸನ್ಮತವ ಮಾಡಿ, ಸಾಕಾರವ ಸವೆದು ನಿರಾಕಾರವನರಿದು ನಿರವಯಲ ನಿತ್ಯಸುಖದಲ್ಲಿರಿಸಿತ್ತು.
ಇಂತಪ್ಪ ಆದ್ಯರ ವಚನಭಂಡಾರವ, ನಮ್ಮ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳು ಅಂಖ್ಯಾತ
ಪುರಾತನರು, ಪ್ರಮಥಗಣಂಗಳು ಕೇಳಿ ಹೇಳಿ ಕೊಂಡಾಡಿದ ಕಾರಣ ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸರ್ವಸುಖವ
ಸೂರೆಗೊಂಡು ಸ್ವಯಲಿಂಗವಾದರು (ಸಮಗ್ರ ವಚನ ಸಂಪುಟ: ೩, ವಚನದ ಸಂಖ್ಯೆ: ೧೨೯೪).
ಇಷ್ಟೆ ಕೇಳಿದ ಮೇಲೆ ಸ್ಟಾಕ್ಹೋಮ್ ಸಿಂಡ್ರೋಮಿಗರು, ‘ಓಂ ಶ್ರೀ ಗುರು ಬಸವಲಿಂಗಾಯ ನಮಃ’ ಎಂದು ಪಠಿಸಬೇಕೋ ಅಥವಾ ‘ಕಾಮ್ರೇಡ್ ಬಸವಣ್ಣ ಅಮರ್ ರಹೇ, ಲಾಲ್ ಸಲಾಂ ಜಿಂದಾಬಾದ್’ ಎಂದು ಘೋಷಣೆ ಕೂಗಬೇಕೋ ಲಿಂಗಾಹತ ಸಭಾ ಸದಸ್ಯರೇ ಆeಪಿಸಬೇಕು. ಇನ್ನು, ನನ್ನ ಸಾಕಷ್ಟು ಸುಸಂಸ್ಕೃತ ಸಭ್ಯ ವಿದ್ವಾಂಸ ಮಿತ್ರರು, “ತಕ್ಷಣದ ಪರಿಣಾಮ ಯಾವತ್ತೂ ಅಲ್ಪಾಯುಷಿ. ನಿಧಾನವಾಗಿ ಪರಿಣಾಮ ಬೀರುವುದೇ ಶಕ್ತಿಶಾಲಿ ಬರವಣಿಗೆಯ ಗುಣ ಮತ್ತು ಶಕ್ತಿ. ಸಾಕಷ್ಟು ಅಧ್ಯಯನ ಮಾಡಿ ಬರೆಯುವ ನೀವು ಕುಟುಕುವುದು ಬೇಡ, ಎಚ್ಚರಿಸುವ ಕೆಲಸ ಮಾಡಿದರೆ ಒಳಿತು” ಎಂದು ಸಲಹೆ ನೀಡಿದ್ದಾರೆ.
ಅದು ಅತ್ಯಂತ ಸಮಂಜಸ ಕೂಡ. ಆದರೆ ಒಂದು ತಲೆಮಾರಿನ ಯುವಶಕ್ತಿಯನ್ನು ತಮ್ಮ ಗೋಬೆಲ್ಸ್ ತಂತ್ರಗಳಿಂದ ಯಾಮಾರಿಸಿ ಮೂರ್ಖರನ್ನಾಗಿಸಿ ಸ್ಟಾಕ್ಹೋಮ್ ಸಿಂಡ್ರೋಮಿನಲ್ಲಿರಿಸಿದ ವ್ಯವಸ್ಥೆಯನ್ನು ವ್ಯವಸ್ಥಿಗರನ್ನು ಕುಟುಕಿ ಕಟಕಿಯಾಡದೇ ಎಚ್ಚರಿಸಲು ಕಾಳಾಮುಖ ‘ವೀರ’ಶೈವ ಪರಂಪರೆಯ ಶರಣ ಬರಹಗಳಿಗೆ ಹೇಗೆ ಸಾಧ್ಯ!
ಎಲ್ಲಾ ಶರಣರೂ ತಮ್ಮ ವೀರಪರಂಪರೆಯಂತೆ ವಚನಗಳಲ್ಲಿ ಕುಟುಕಿ ಕಟಕಿಯಾಡಿಯೇ ಸಮಾಜಕ್ಕೆ ತಿಳಿ ಹೇಳಿದ್ದಾರೆ. ಶರಣಸಂಹಿತೆಯ ಈ
ಪರಂಪರೆಯನ್ನು ಮುಂದುವರಿಸಬೇಕಾದ ಅವರದೇ ಮಾರ್ಗದ ಶರಣ ಜವಾಬ್ದಾರಿ ನನಗರಿವಿಲ್ಲದೆ ನನ್ನ ಹೆಗಲೇರಿರುವ ಕಾರಣ ಈ
ಕುಟುಕುನೀತಿ ಈ ಬರಹಗಳಲ್ಲಿ ಅತ್ಯಂತ ಅನಿವಾರ್ಯವಾಗಿ ಮೂಡಿಬಂದಿದೆ. ಅಂದಹಾಗೆ ಓಂ ಎನ್ನುವಾಗ ಪೂರಕ, ನಮಃ ಎನ್ನುವಾಗ ಕುಂಭಕ, ಶಿವಾಯ/ಬಸವಾಯ/ಜೀಸಸಾಯ/ ಅಹಾಯ/ರಂಭೋರ್ವಶಿಮೇನಕೇಯ ಎಂದು ನಿಮ್ಮಿಷ್ಟದ್ದು ಎನ್ನುವಾಗ ರೇಚಕ! ಇದು ಮಂತ್ರಪಠಣದ ಹಿಂದಿನ ಪ್ರಾಥಮಿಕ ಪ್ರಾಣಾಯಾಮ ತಂತ್ರ. ಇಲ್ಲಿಂದ ಅಲ್ಲಮ, ಅಕ್ಕ, ಚೆನ್ನಬಸವಣ್ಣನ ಕುಂಡಲಿನಿಯ ಹಾದಿ, ಇವರಿಂದ ಅನಂತಾನಂತ ದೂರದ
ಅಗಮ್ಯ ಅಗೋಚರ!
“ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ. ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲನಿ”.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)
ಇದನ್ನು ಓದಿ: Ravi Hunz: ತಿರಸ್ಕರಿಸಿದ್ದು ಏನನ್ನು, ಸೇರಿದ್ದು ಯಾವುದನ್ನು?