ವರ್ತಮಾನ
ರವೀ ಸಜಂಗದ್ದೆ
ಇತರ ದೇಶಗಳ ಮೇಲೆ ಹಿಡಿತ ಸಾಧಿಸಲು, ವಿಶ್ವದ ಹಲವು ದೇಶಗಳು ನಿರಂತರ ಪ್ರಯತ್ನಿಸುತ್ತಿವೆ. ಅದಕ್ಕಾ ಗಿಯೇ, ಒಂದು ಕಾಲದಲ್ಲಿ ಅಣುಬಾಂಬುಗಳು ವಿಶ್ವದ ಸ್ವಾಸ್ಥ್ಯ ಕೆಡಿಸಿದ್ದವು. ನಂತರ ಕ್ಷಿಪಣಿ ಯುದ್ಧ ಸದ್ದು ಮಾಡಿತು, ತರುವಾಯದಲ್ಲಿ ಆರ್ಥಿಕ ದಿಗ್ಬಂಧನಗಳ ಮೂಲಕ ಎದುರಾಳಿ ದೇಶಗಳನ್ನು ಬಗ್ಗು ಬಡಿಯ ಲಾಯಿತು.
ಮನುಕುಲದ ಬುದ್ಧಿಮತ್ತೆ ನಿರಂತರ ವಿಕಸಿತಗೊಳ್ಳುವ ಕ್ರಿಯೆ-ಪ್ರಕ್ರಿಯೆ’ ಎನ್ನುವುದು ವಿಕಾಸವಾದದ ವ್ಯಾಖ್ಯಾನ. ಹೀಗೆ ಬುದ್ಧಿ ವಿಕಸಿತವಾದಂತೆ ತನ್ನ ಅನುಕೂಲಕ್ಕೆ ಮತ್ತು ಸಂಘರ್ಷಕ್ಕೂ ವಿವಿಧ ಅವಿಷ್ಕಾರ, ತಂತ್ರಜ್ಞಾನವನ್ನು ಮನುಷ್ಯ ಅಭಿವೃದ್ಧಿ ಮಾಡಿಕೊಂಡು ಬಂದಿದ್ದಾನೆ. ಸಮುದಾಯದ ಉಪಯೋಗಕ್ಕೆ ಆವಿಷ್ಕಾರ ಮತ್ತು ತಂತ್ರ ಜ್ಞಾನವನ್ನು ಬಳಸಿದಷ್ಟೇ ಸಂಘರ್ಷ ಮತ್ತು ಶತ್ರುಸಂಹಾರಕ್ಕೂ ಇದೇ ಮಾದರಿ ಅಳವಡಿಸಿ ಅಸ್ತಿತ್ವ ಉಳಿಸಲು, ವಿಸ್ತರಿಸಲು ಪ್ರತಿಯೊಂದು ದೇಶವೂ ಹೋರಾಡುತ್ತಿದೆ.
ಶತ್ರುದೇಶದಲ್ಲಿ ಬಳಸುವ ತಂತ್ರಜ್ಞಾನ ಆಧರಿತ ಉಪಕರಣಗಳನ್ನು ಏಕಕಾಲಕ್ಕೆ ಸ್ಪೋಟಿಸಿ, ಅವರ ಜಂಘಾಬಲವೇ ಉಡುಗುವಂತೆ ಮಾಡಿದ ಹೆಚ್ಚುಗಾರಿಕೆ, ಗಾಬರಿಯ ಸಂಗತಿ ಸದ್ಯದ ಬಿಸಿಬಿಸಿ ಸುದ್ದಿ. ಹಿಜ್ಬುಲ್ಲಾ ಸಂಘಟನೆಯ ಸದಸ್ಯರು ಉಪಯೋಗಿಸುತ್ತಿದ್ದ ಪೇಜರ್ ಮತ್ತು ವಾಕಿಟಾಕಿ ಉಪಕರಣಗಳನ್ನು ಇಸ್ರೇಲ್ ಸ್ಪೋಟಿಸಿದ್ದು ವಿವಿಧ ಪ್ರಶ್ನೆಗಳನ್ನು, ತಂತ್ರಜ್ಞಾನ ಮತ್ತು ಈ ಸಂವಹನ ಸಾಧನಗಳ ಸುರಕ್ಷತೆಯ ಕುರಿತಾದ ನೂರಾರು ಸಂದೇಹಗಳನ್ನು, ಕೌತುಕಗಳನ್ನು ತೆರೆದಿಟ್ಟಿದೆ.
ಲೆಬನಾನ್ ಮತ್ತು ಸಿರಿಯಾದಲ್ಲಿ ಸಕ್ರಿಯವಾಗಿರುವ ಹಿಜ್ಬುಲ್ಲಾ ಸಂಘಟನೆಗೆ, ತಾನು ಬಳಸುವ ಮೊಬೈಲುಗಳನ್ನು
ಇಸ್ರೇಲ್ ಸ್ಪೋಟಿಸಬಹುದು ಎಂಬ ಬೇಹುಗಾರಿಕಾ ವರದಿ ಸಿಕ್ಕಿತ್ತು. ಅದರ ಪರಿಣಾಮವಾಗಿ ಆ ಸಂಘಟನೆಯು ತನ್ನ
ಸದಸ್ಯರಿಗೆ ಮೊಬೈಲ್ ಬದಲಾಗಿ ಪೇಜರ್ ಮತ್ತು ವಾಕಿ- ಟಾಕಿ ಸಾಧನಗಳನ್ನು ಬಳಸುವಂತೆ ಸೂಚಿಸಿ ಅವನ್ನು ಒದಗಿಸಿತ್ತು. ಇತ್ತೀಚೆಗೆ ಹಿಜ್ಬುಲ್ಲಾ ಸಂಘಟನೆಯ ಸಾವಿರಾರು ಸದಸ್ಯರು ತಂತಮ್ಮ ದೈನಂದಿನ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದಾಗ, ನಿರ್ದಿಷ್ಟ ಸಮಯಕ್ಕೆ ಶುರುವಾಗಿ ಒಂದು ಗಂಟೆಯೊಳಗಾಗಿ ಈ ಎಲ್ಲಾ ಪೇಜರುಗಳು ಸ್ಪೋಟ ಗೊಂಡಿವೆ.
ಮಾರುಕಟ್ಟೆ, ರಸ್ತೆ, ದಿನಸಿ ಅಂಗಡಿ, ಮನೆ ಹೀಗೆ ಎಲ್ಲೆಂದರಲ್ಲಿ ಈ ಪೇಜರ್‌ಗಳು ಸ್ಪೋಟಿಸಿ ಹಲವರು ಸಾವನ್ನಪ್ಪಿ ದ್ದಾರೆ. ಸೊಂಟದಲ್ಲಿ, ಕಿಸೆಯಲ್ಲಿ ಇಟ್ಟುಕೊಂಡಿದ್ದ ಈ ಉಪಕರಣ ಸ್ಪೋಗೊಂಡು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಮೊಸ್ಸಾದ್ ಸಂಸ್ಥೆ ಈ ಶತ್ರುಸಂಹಾರ ಯೋಜನೆಯ ರೂವಾರಿ. ಅಲ್ಲಿಗೆ ಇಸ್ರೇಲ್
ತನ್ನ ಶತ್ರುದೇಶಕ್ಕೆ ಮುಟ್ಟಿನೋಡಿಕೊಳ್ಳುವಂಥ ಪೆಟ್ಟು ನೀಡಿದೆ! ಮೊದಲಿಗೆ, ರೇಡಿಯೋ ತಂತು ಆಧರಿತ ಈ ಪೇಜರ್ ವ್ಯವಸ್ಥೆಯನ್ನು ‘ಹ್ಯಾಕ್’ ಮಾಡಲಾಯಿತು. ಅಲ್ಲಿ ಓಡಾಡುವ ಮೆಸೇಜುಗಳನ್ನು ಗಮನಿಸಿ, ಹಿಜ್ಬುಲ್ ಸದಸ್ಯರು ಭಯೋತ್ಪಾದನೆಗೆ ಬಳಸುತ್ತಿದ್ದ ಪೇಜರುಗಳ ಪಟ್ಟಿ ಮಾಡಲಾಯಿತು.
ತದನಂತರ ಖqseಟ್ಞಜಿoಛಿb ಆZoಠಿಜ್ಞಿಜ ತಂತ್ರಗಾರಿಕೆ ಉಪಯೋಗಿಸಿ, ಈ ತೀವ್ರಗಾಮಿ ಸಂಘಟನೆಯ ಸದಸ್ಯರು
ಬಳಸುತ್ತಿದ್ದ ಪೇಜರ್ ಸಾಧನಗಳು ಸ್ಪೋಟಗೊಳ್ಳುವಂತೆ ಮಾಡಲಾಗಿದೆ ಎಂಬುದು ತಂತ್ರಜ್ಞಾನ ವಿಶ್ಲೇಷಕರ ವಿವರಣೆ. ೨,೮೦೦ಕ್ಕೂ ಹೆಚ್ಚು ಪೇಜರ್‌ಗಳು ಸ್ಪೋಟಗೊಂಡ ಪರಿಣಾಮ ಹಲವರು ಸತ್ತಿದ್ದಾರೆ ಮತ್ತು ಅಷ್ಟೇ ಸಂಖ್ಯೆಯಲ್ಲಿ ಲೆಬನಾನ್, ಸಿರಿಯಾದ ಉಗ್ರರು ಮತ್ತು ಒಂದಷ್ಟು ಜನರು ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ.
ಪೇಜರುಗಳನ್ನು ಸ್ಪೋಟಿಸಿದ ರೀತಿ ಕುತೂಹಲಕಾರಿಯಾಗಿದೆ. ಅವುಗಳಲ್ಲಿ ಇದ್ದುದು ಲಿಥಿಯಂ ಅಯಾನ್ ಬ್ಯಾಟರಿ.
ಇದು ಅತಿಯಾಗಿ ಬಿಸಿಯಾದಾಗ ‘ಥರ್ಮಲ್ ರನ್ ವೇ’ ಎಂಬ ಪ್ರಕ್ರಿಯೆ ಚಾಲನೆಯಾಗಿ ಕೊನೆಗೆ ಬ್ಯಾಟರಿ ಬೆಂಕಿ ಯನ್ನು ಉಗುಳುತ್ತದೆ ಅಥವಾ ಸೋಟಿಸುತ್ತದೆ. ಪೇಜರ್ ಸ್ಪೋಟ ಹೀಗಾಗಿರಬಹುದು ಎನ್ನುವುದು ಒಂದು ವಾದ ವಾದರೆ, ಇನ್ನೊಂದು ವಿಶ್ಲೇಷಣೆ ಹೇಳುವುದೇ ಬೇರೆ. ಸಿಸಿಟಿವಿ ದೃಶ್ಯಾವಳಿ ನೋಡಿದಾಗ ಬ್ಯಾಟರಿ ಬಿಸಿಯಾಗಿ ಸೋಟಿಸಿದಂತೆ ಕಾಣುತ್ತಿಲ್ಲ.
ಪೇಜರ್ ಉಪಕರಣಗಳ ಒಳಗೆ ಸಣ್ಣ ಬಿಡಿಭಾಗಗಳ ರೂಪದ, ಮಿಲಿಟರಿ ಹಂತದ ಸ್ಪೋಟಕಗಳನ್ನು ಉತ್ಪಾದನಾ ಹಂತದಲ್ಲಿ ಇರಿಸಲಾದ ಸಾಧ್ಯತೆ ಇದೆ. ಆಲ್ಫಾ ನ್ಯೂಮರಿಕ್ ಸಂದೇಶ ಕಳುಹಿಸಿ, ಈ ಉಪಕರಣಗಳು ಸ್ಪೋಟಿಸು ವಂತೆ ಟ್ರಿಗರ್ ಮಾಡಲು ಸಾಧ್ಯ ಎಂಬುದು ಇನ್ನೂ ಕೆಲವು ತಜ್ಞರ ವಿವರಣೆ. ಲೆಬನಾನ್ ಮತ್ತು ಸಿರಿಯಾಗಳು ಪೇಜರ್ ಸ್ಟೋಟದ ಛಾಯೆಯಲ್ಲಿ ಇರುವಾಗಲೇ ಮತ್ತೊಂದು ಆಘಾತ ಎದುರಾಗಿದೆ. ಹಿಜ್ಬುಲ್ ಸಂಘಟನೆಯವರು ಉಪಯೋಗಿಸುತ್ತಿದ್ದ ಸಾವಿರಾರು ವಾಕಿ-ಟಾಕಿ ಸಾಧನಗಳೂ ಸ್ಪೋಟಗೊಂಡು, ಹಲವರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಕಳೆದ ಐದಾರು ತಿಂಗಳ ಹಿಂದೆ ಈ ಸಂಸ್ಥೆ ಖರೀದಿ ಸಿರುವ ಪೇಜರ್, ವಾಕಿ-ಟಾಕಿ, ರೇಡಿಯೋ, ಸ್ಥಿರ ದೂರವಾಣಿ ಉಪಕರಣಗಳೂ ಸ್ಪೋಟಿಸಿವೆಯಂತೆ!
ಪ್ರಪಂಚದ ಇತರ ದೇಶಗಳ ಮೇಲೆ ಹಿಡಿತ ಸಾಧಿಸಲು, ವಿಶ್ವದ ಸದೃಢ ದೇಶವಾಗಿ ಹೊರಹೊಮ್ಮಲು ಹಲವು ದೇಶಗಳು ನಿರಂತರ ಪ್ರಯತ್ನಿಸುತ್ತಿವೆ. ನೆರೆಯ ದೇಶಗಳನ್ನು ಹದ್ದುಬಸ್ತಿನಲ್ಲಿಡಲು ಅವು ಸತತವಾಗಿ ಕಾರ್ಯೋ ನ್ಮುಖವಾಗಿವೆ. ಅದಕ್ಕಾಗಿಯೇ, ಒಂದು ಕಾಲದಲ್ಲಿ ಅಣುಬಾಂಬುಗಳು ವಿಶ್ವದ ಸ್ವಾಸ್ಥ್ಯ ಕೆಡಿಸಿದ್ದವು. ನಂತರ ಕ್ಷಿಪಣಿ ಯುದ್ಧ ಸದ್ದುಮಾಡಿತು, ತರುವಾಯದಲ್ಲಿ ಆರ್ಥಿಕ ದಿಗ್ಬಂಧನಗಳ ಮೂಲಕ ಎದುರಾಳಿ ದೇಶಗಳನ್ನು ಬಗ್ಗು ಬಡಿಯಲಾಯಿತು. ಹೊಸ ಹೊಸ ವೈರಾಣುಗಳನ್ನು ಉತ್ಪಾದಿಸಿ, ಪಸರಿಸಿ, ವಿಶ್ವದ ಆರೋಗ್ಯ ಕೆಡಿಸಿದ ಆರೋಪ ಹಲವು ದೇಶಗಳ ಮೇಲಿದೆ. ಕೊರೋನಾವನ್ನು ವಿಶ್ವಕ್ಕೆ ಪಸರಿಸಿ ಆ ಮೂಲಕ ತಾನು ದೊಡ್ಡಣ್ಣನಾಗಲು ಚೀನಾ ಸಂಚು ಹೂಡಿತ್ತು ಎನ್ನುವುದು ಓಪನ್ ಸೀಕ್ರೆಟ್!
ತಂತ್ರಜ್ಞಾನ ಬಳಸಿ ಶತ್ರುವಿನ ಸಂವಹನ ಸಾಧನಗಳನ್ನು ಸ್ಪೋಟಿಸುವುದು ಮತ್ತು ಹಾನಿಮಾಡುವುದು ಯುದ್ಧ ತಂತ್ರಗಾರಿಕೆಯ ಹೊಸ ವ್ಯಾಖ್ಯಾನ ಮತ್ತು ಆವಿಷ್ಕಾರ! ಈಗ ಸಂಪರ್ಕ ಉಪಕರಣಗಳನ್ನು ಸೋಟಿಸುವ ಯುದ್ಧ. ಈ ರೀತಿಯ ಯುದ್ಧ ತುಂಬಾ ಆತಂಕಕಾರಿ, ಅಪಾಯಕಾರಿ. ಈ ಪರಿಯಲ್ಲಿ ಶತ್ರುಸಂಹಾರ ಮತ್ತು ಯುದ್ಧಗಳು ನಡೆ ಯಲು ಆರಂಭವಾದರೆ ಹಾಗೂ ಸಾಧ್ಯವಾದರೆ, ಯಾವುದೇ ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲು ಹಿಂಜರಿಯಬೇಕಾಗುತ್ತದೆ!
ಪೇಜರ್ ಮತ್ತು ವಾಕಿ-ಟಾಕಿ ಸಾಧನಗಳನ್ನು ಸ್ಪೋಟಿಸಲು ಸಾಧ್ಯ ಎಂದಾದರೆ, ನಾವು ದೈನಂದಿನ ಜೀವನದಲ್ಲಿ ಬಳಸುವ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಕಂಪ್ಯೂಟರ್, ಸ್ಕ್ಯಾನರ್, ಸ್ಮಾರ್ಟ್‌ಟಿವಿ, ದೂರವಾಣಿ, ಸರ್ವರ್, ಟವರ್, ಆಂಟೆನಾ ಇತ್ಯಾದಿ ಉಪಕರಣಗಳೂ ‘ಹ್ಯಾಕ್’ ಆಗಿ ಸ್ಪೋಟಗೊಳ್ಳಲಾರವು ಎನ್ನುವುದಕ್ಕೆ ಏನು ಗ್ಯಾರಂಟಿ, ಅಲ್ಲವೇ?! ಪ್ರತಿಯೊಂದು ದೇಶವೂ ತನ್ನದೇ ಆದ ಸುರಕ್ಷಿತ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನ, ಸೈಬರ್ ವ್ಯವಸ್ಥೆ ಯನ್ನು ಹೊಂದಿದೆ ಹಾಗೂ ನಿರಂತರ ದಾಳಿಗೂ ಒಳಗಾಗಿದೆ.
ಹಾಗಿದ್ದೂ ‘ಸಾಫ್ಟ್ ವೇರ್ ಉಗ್ರವಾದ’ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ ವಿಷಯ. ವಿವಿಧ ರೀತಿಯ ಆನ್ ಲೈನ್ ಸ್ಕ್ಯಾಮ್‌ಗಳ ಜತೆಗೆ, ದೈನಂದಿನ ಜೀವನದ ಭಾಗವಾಗಿ ನಾವು ಉಪಯೋಗಿ ಸುವ ಈ ಉಪಕರಣಗಳ ವಿಶ್ವಾಸಾರ್ಹತೆಯ ಕುರಿತು ಇಂಥ ಪ್ರಕರಣಗಳಾದರೆ, ಜನರ ಸಂದೇಹ ಮತ್ತು ಗೊಂದಲ ಮತ್ತಷ್ಟು ಹೆಚ್ಚುತ್ತದೆ. ‘ವಿದೇಶಗಳಿಂದ ಖರೀದಿಸಿ ತಂದ ಅಥವಾ ಆಮದು ಮಾಡಿಕೊಂಡ ಉಪಕರಣಗಳು ಕಡಿಮೆ ಸುರಕ್ಷಿತ’ ಎನ್ನುವುದು ಸೈಬರ್ ತಜ್ಞರ ಅಭಿಪ್ರಾಯ. ಶತ್ರುದೇಶದಲ್ಲಿ ಉಪಯೋಗದಲ್ಲಿರುವ ತಂತ್ರಜ್ಞಾನಾಧಾರಿತ ಸಾಧನಗಳನ್ನು ಕುಳಿತಲ್ಲಿಂದಲೇ ‘ಹ್ಯಾಕ್’ ಮಾಡಿ, ಸ್ಪೋಟಿಸಿ ಆತಂಕ ಸೃಷ್ಟಿಸುವುದು ಹೊಚ್ಚ ಹೊಸ ಯುದ್ಧ ಪ್ರಕಾರ. ಮನುಷ್ಯ ಅತಿ ಬುದ್ಧಿವಂತನಾದಂತೆ ಇಂಥ ಅಪದ್ಧ-ಅನಾಚಾರಗಳು ಕಾಣತೊಡಗಿವೆ, ಕಾಡತೊಡಗಿವೆ.
‘ಸದ್ಯ ನಮ್ಮ ದೇಶಕ್ಕೆ ಇಂಥ ಯಾವುದೇ ಅಪಾಯವಿಲ್ಲ’ ಎನ್ನುವ ಧೈರ್ಯವನ್ನು ಜನರಲ್ಲಿ ತುಂಬುವ ಕೆಲಸವನ್ನು ಭಾರತ ಸರಕಾರ ಜವಾಬ್ದಾರಿಯುತವಾಗಿ ಮಾಡಬೇಕು. ಇಂಥ ದಾಳಿಗಳನ್ನು ಮೂಲದಲ್ಲೇ ನಿರ್ಬಂಧಿಸಿ ಸಮರ್ಥ ವಾಗಿ ಮಟ್ಟಹಾಕಲು ಕಾರ್ಯಯೋಜನೆಯನ್ನೂ, ನಿಪುಣ ತಂಡವನ್ನೂ ರಚಿಸಿ ಅದನ್ನು ಮತ್ತಷ್ಟು ಗಟ್ಟಿ ಗೊಳಿಸಬೇಕು. ಇದು ಸದ್ಯದ ತುರ್ತುಕಾರ್ಯ. ಉಗ್ರರು ನಮ್ಮ ದೇಶದ ಮೇಲೆ ದಾಳಿ ನಡೆಸಲು ನಾನಾ ರೂಪದಲ್ಲಿ, ವಿವಿಧ ರೀತಿಯಲ್ಲಿ ನಿರಂತರ ಹೊಂಚು ಹಾಕುತ್ತಿದ್ದಾರೆ. ಈ ಹೊಸ ಪ್ರಕಾರದ ದಾಳಿಯಿಂದ ನಮ್ಮ ದೇಶವನ್ನು ಮತ್ತು ದೇಶದ ಸಂವಹನ ವ್ಯವಸ್ಥೆಯನ್ನು ಸುರಕ್ಷಿತವಾಗಿ ಕಾಪಾಡಬೇಕಾಗಿದೆ.
ಮುಂದಿನ ದಿನಗಳಲ್ಲಿ ‘ಸಂಪರ್ಕ ಸಾಧನಗಳಲ್ಲಿ ಸ್ಪೋಟ ನಿರೋಧಕ’ ಅಥವಾ ತತ್ಸಮಾನ ತಂತ್ರಜ್ಞಾನದ
ಅಭಿವೃದ್ಧಿ ಆಗಬೇಕಿದೆ; ಶತ್ರುವಿನ ದಾಳಿಯಾಗುವ ಸಂಭವವಿರುವಾಗ ನಾವು ಬಳಸುವ ಸಾಧನಗಳು ತಮ್ಮಷ್ಟಕ್ಕೆ ತಾವೇ ‘ಸ್ವಿಚ್ ಆಫ್’ ಆಗಿ ಸಂಬಂಧಿತ ಇಲಾಖೆಗೆ ಮಾಹಿತಿ ರವಾನೆಯಾಗುವಂಥ ಸಾಫ್ಟ್ ವೇರ್ ಆಧರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ.
ಅಂಥ ‘ಫುಲ್ ಪ್ರೂಫ್’ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಖಂಡಿತ ಹೆಚ್ಚಿನ ಬೇಡಿಕೆ ಇರುವ ಸಾಫ್ಟ್ ವೇರ್ ತಂತ್ರಜ್ಞಾನ ಎನಿಸಿಕೊಳ್ಳುತ್ತದೆ. ಅಂಥ ಸಾಫ್ಟ್ ವೇರ್ ಅನ್ನು ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅಭಿವೃದ್ಧಿ ಪಡಿಸುವಂತಾಗಲಿ. ಆ ಮೂಲಕ, ನಾವು ಬಳಸುವ ಉಪಕರಣಗಳು ಯಾವುದೇ ಸಂದರ್ಭದಲ್ಲೂ ಸ್ಪೋಟವಾಗ ದಂತೆ ತಡೆಯುವ ತಂತ್ರಜ್ಞಾನವನ್ನು ಅಭಿವೃ ದ್ಧಿಪಡಿಸಿದ ಮತ್ತು ಶಾಂತಿ-ಸುವ್ಯವಸ್ಥೆಯನ್ನು ಪಸರಿಸುವ ನಿಜಾರ್ಥದ ನಾಯಕನಾಗಿ ಭಾರತ ಹೆಸರುವಾಸಿಯಾಗಲಿ. ‘ತಂತ್ರಜ್ಞಾನ ಆಧರಿತ ಭಯೋತ್ಪಾದನೆ’ ಎಂಬ ಪ್ರಪಂಚದ ಕಾಯಿಲೆಯು ತನ್ಮೂಲಕ ಶಾಶ್ವತವಾಗಿ ವಾಸಿಯಾಗಲಿ.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)
ಇದನ್ನೂ ಓದಿ: Ravi Hunj Column: ಶರಣರು ಸನಾತನ ಧರ್ಮದ ವಿರುದ್ದ ಹೋರಾಡಿದ್ದರೇ ?