Monday, 6th January 2025

ರೋಹಿಂಗ್ಯಾಗಳಿಗೆ ಬೆಣ್ಣೆ, ಹಿಂದೂಗಳಿಗೆ ಸುಣ್ಣವೇ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1332hampiexpress1509@gmail.com

ಇಲ್ಲಿ ಲೋಕಮಾನ್ಯ ತಿಲಕರು ‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬ ಘೋಷಣೆಯೊಂದಿಗೆ ಅನೇಕ ನಾಯಕರನ್ನು ಕಟ್ಟಿಕೊಂಡು ಬ್ರಿಟಿಷರಿಗೆ ದೊಡ್ಡ ಆತಂಕ ಸೃಷ್ಟಿಸಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟವನ್ನು ಮಾಡುತ್ತಿದ್ದರೆ, ಅಂದು ಗಾಂಧೀಜಿಯವರು ಏನು ಎಲ್ಲಿದ್ದರು ಗೊತ್ತೇ?. ತಮ್ಮ ಉನ್ನತ ಮಟ್ಟದ ವ್ಯಾಸಂಗಕ್ಕಾಗಿ ದೂರದ ದಕ್ಷಿಣ ಆಫ್ರಿಕಾದಲ್ಲಿದ್ದರು.

ಅಲ್ಲಿ ಅವರನ್ನು ಭಾರತೀಯ ಎಂಬ ಕಾರಣಕ್ಕೆ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಪೀಟರ್‌ಮೆರಿಟ್ಜ್ ಬರ್ಗ್‌ನಲ್ಲಿ ರೈಲಿನ ಪ್ರಥಮ ದರ್ಜೆಯ ಬೋಗಿಯಿಂದ ಮೂರನೆಯ ದರ್ಜೆಗೆ ಬಲವಂತವಾಗಿ ಇಳಿಸಿ ಅವಮಾನಿಸಲಾಗಿತ್ತು. ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯ ವರ ಮೇಲೆ ಹಲ್ಲೆ ನಡೆಸಿದ. ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಅನೇಕ ಅಸಹಿಷ್ಣುತೆಗಳನ್ನು ಎದುರಿಸಬೇಕಾಯಿತು.

ಡರ್ಬನ್ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬ ಸಾಂಪ್ರದಾಯಿಕ ಪೇಟವನ್ನು ತೆಗೆಯಲು ಗಾಂಧಿ ಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿ ಖಂಡಿಸಿದರು. ಭಾರತೀಯರಿಗಾಗುತ್ತಿದ್ದ ಇಂಥ ಮಾನವ ವಿರೋಧಿ ನಡೆಗಳು, ಸಾಮಾಜಿಕ ಅನ್ಯಾಯ, ಸಾಂಸ್ಕೃತಿಕ ಅವಮಾನ, ಅಭದ್ರತೆ, ಅನಾಗರಿಕತೆ,
ವರ್ಣಭೇದಗಳಲ್ಲದೇ ಸಮಸ್ತ ಆಪ್ರಿಕೇತರ ನಾಗರಿಕರ ಮೇಲೆ ಆಫ್ರಿಕನ್ನರ ದಬ್ಬಾಳಿಕೆಯ ವಿರುದ್ಧ ದೊಡ್ಡ ಸಮರವನ್ನೇ (ಕ್ಷಮಿಸಿ, ಸತ್ಯಾಗ್ರಹ) ಸಾರಿ ದಕ್ಷಿಣ ಆಫ್ರಿಕಾದಲ್ಲಿ (1893-1914) ನಾಗರಿಕ ಹಕ್ಕುಗಳ ಆಂದೋಲನವನ್ನೇ ಹತ್ತಿಕ್ಕಿದರು. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿ ಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಽಯವರು ತಾವು ವ್ಯಾಸಾಂಗಕ್ಕೆ ಹೋದ ಉದ್ದೇಶವನ್ನೇ ಮರೆತು ಅಲ್ಲಿಯೇ ಉಳಿದುಕೊಂಡು ಹೋರಾಡಿದರು.

ಇದು ನಿಜವಾದ ಗಾಂಽಗಿರಿ. ನಮ್ಮ ಜನ ನಮ್ಮ ಧರ್ಮೀಯರು ನಮ್ಮ ಭಾರತೀಯರು ಎಂಬ ಸ್ವಾಭಿಮಾನ ಅವರಲ್ಲಿ ಸಹಜವಾಗಿತ್ತು. ಆದ್ದರಿಂದಲೇ ಅವರು
ಭಾರತದಲ್ಲಿನ ಗುಲಾಮಗಿರಿಯನ್ನು ಕಡೆಗಣಿಸಿ ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಪ್ರಜೆಗಳಿಗಾಗಿ ಹೋರಾಡಿದ್ದರು. ಆಗಿನ್ನು ಭಾರತದಲ್ಲಿನ ಕಾಂಗ್ರೆಸ್’ಗೂ ಗಾಂಧಿಗೂ ಸಂಬಂಧವೇ ಇರಲಿಲ್ಲ. ಹಾಗೇನಾದರು ಗಾಂಧಿಜಿಯವರಿಗೆ ಇಂದು ಮೋದಿಯವರು ತಂದಿರುವ ಸಿಎಎ ಕಾಯಿದೆಯೇನಾದರು ಸಿಕ್ಕಿದಿದ್ದರೆ ಅದನ್ನು ಕೂಡಲೇ ಜಾರಿಗೆ ತರಬೇಕೆಂದು ಸತ್ಯಾಗ್ರಹ ಕೂತು ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರನ್ನು ಭಾರತಕ್ಕೆ ಕರೆತಂದು ಪೌರತ್ವವನ್ನು ನೀಡುತ್ತಿದ್ದರು. ಅದಕ್ಕೇ ಹೇಳುವುದು ಅಂದಿನ ಗಾಂಧಿತತ್ವಗಳು ಗಾಂಧಿ ಕುಟುಂಬವೇ ಬೇರೆ, ಇಂದಿನ ಆಧುನಿಕ ಗಾಂಧಿ ಟೋಪಿಗಳೇ ಬೇರೆ, ಅಂದಿನ ಸಮಸ್ತ ಭಾರತೀಯರ ಹಿತದೃಷ್ಟಿಯ ಕಾಂಗ್ರೆಸ್ಸೇ ಬೇರೆ, ಇಂದಿನ ಸಿದ್ದರಾಮಯ್ಯನವರ ಉವಾಚ (ಹೈಬ್ರಿಡ್) ರಾಹುಲ್ ಗಾಂಧಿ ಕಾಂಗ್ರೆಸ್ಸೇ ಬೇರೆ.

ಮತ್ತು ಅಂದಿನ ರಘುಪತಿ ರಾಘವ ಗಾಂಧಿ ಕಾಂಗ್ರೆಸ್ಸೇ ಬೇರೆ, ಇಂದಿನ ‘ಬ್ರದರ್ಸ್’ ಆಧಾರಿತ ಡಿಕೆಶಿ ಕಾಂಗ್ರೆಸ್ಸೇ ಬೇರೆ. ಆಯ್ತು, ಮಾತೆತ್ತಿದರೆ ನಮ್ಮದು ಗಾಂಧಿಗಿರಿ, ಗಾಂಧೀಜಿ ಸಿದ್ಧಾಂತ, ಇಡೀ ದೇಶವನ್ನು ಗಾಂಧಿಮಯ ಮಾಡುತ್ತೇವೆ ಎನ್ನುತ್ತಾರ, ಅಂದು ದೂರದ ಆಫ್ರಿಕಾದಲ್ಲಿ ಭಾರತೀಯರು ಅನುಭವಿಸುತ್ತಿದ್ದ
ದೌರ್ಜನ್ಯ ಖಂಡಿಸಿ ಅಲ್ಲಿಗೇ ಹೋಗಿ ದೊಡ್ಡ ಹೋರಾಟವನ್ನು ಮಾಡಿದ ಗಾಂಧೀಜಿಯವರ ಸೈದ್ಧಾಂತಿಕತೆಯನ್ನು ಅನುಸರಿಸಿ ನಮ್ಮದೇ ಭೂಮಿಯ ಭಾಗ ವಾಗಿದ್ದ, ನಾವೇ ಕಟ್ಟಿಕೊಟ್ಟ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ಎಲ್ಲಾ ರೀತಿಯ ಸ್ವಾತಂತ್ರವನ್ನು ಕಸಿದುಕೊಂಡು ನಿರಂತರ ಕಿರುಕುಳ,
ಹತ್ಯೆ, ಅತ್ಯಾಚಾರ ನಡೆಸಿ ಅವರ ಬದುಕನ್ನು ನಾಶಪಡಿಸುತ್ತಿದ್ದರೆ ಒಬ್ಬನೇ ಒಬ್ಬ ಗಾಂಧಿವಾದಿಯಾಗಲಿ ಇನ್ನಿತರ ರಾಜಕೀಯ ಮುಖಂಡನಾಗಲಿ ಅದನ್ನು ಖಂಡಿಸಿ ಒಂದಾದರೂ ಹೇಳಿಕೆ ನೀಡುತ್ತಾನೆಯೇ ಎಂದು ಗಮನಿಸಿದರೇ ಎಲ್ಲರೂ ಬಾಯಿಯಲ್ಲಿ ಮಾತ್ರವಲ್ಲ ತಲೆಯಲ್ಲಿ ಹೃದಯದಲ್ಲೂ ವೋಟ್ ಬ್ಯಾಂಕ್ ಹೊಲಸನ್ನು ತುಂಬಿಕೊಂಡು ಮೌನವಾಗಿದ್ದಾರೆ.

ಇನ್ನು ರೋಹಿಂಗ್ಯಾಗಳ ತಂದೆಯರಿಂದಲೇ ಜನ್ಮಪಡೆದವರಂತೆ ಅವರ ಪರ ನಿಲ್ಲುವ ನಾಲಾಯಕ್ಕು ಚಿತ್ರಹಿಂಸೆಯ ನಟರು, ಮಾನವ ಹಕ್ಕು, ಲದ್ದಿಜೀವಿ
ಗಳು, ಪ್ರಗತಿಪರರು, ವಿಚಾರವ್ಯಾದಿಗಳೆಂಬ ತಿಗಣೆ ಗಿರಾಕಿಗಳು ಎಲ್ಲಿ ಶವಾಸನದಲ್ಲಿ ಸಮಾಧಿಯಾಗಿ ಹೀರೋ ಆ ಗಾಂಧಿಜೀಯೇ ಬಲ್ಲರು. ನೋಡಿ, ಮೊನ್ನೆ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳು ತಮ್ಮ ನವರಾತ್ರಿ ಉತ್ಸವವನ್ನು ಆಚರಿಸುತ್ತಿದ್ದ ಕಡೆಗಳಲ್ಲಿ ಅಲ್ಲಿನ ಜಿಹಾದಿ ‘ಬ್ರದರ್ಸ್’ಗಳು ದಾಳಿ ನಡೆಸಿ ದೇವಿ ಮೂರ್ತಿಗಳನ್ನು ಒಡೆದು ಹಾಕಿ, ಪೂಜಾಸ್ಥಳವನ್ನು ಅಪವಿತ್ರಗೊಳಿಸಿದ್ದಲ್ಲದೇ ನೂರಾರು ಹಿಂದೂಗಳ ಮನೆಗಳನ್ನು ಧ್ವಂಸ ಮಾಡಿ ಬೆಂಕಿಯಿಟ್ಟು ಅನೇಕರ ಸಾವಿಗೆ ಕಾರಣರಾಗಿದ್ದಾರೆ. ಇದೆಲ್ಲವೂ ಮೊನ್ನೆಯಷ್ಟೇ ವರದಿಯಾದ ಘಟನೆಗಳು. ಆದರೆ ಸ್ವಾತಂತ್ರ ಬಂದಾಗಿನಿಂದ ಅಲ್ಲಿನ ಅದೆಷ್ಟು ಕೋಟಿ ಹಿಂದೂ ಗಳನ್ನು ಸರ್ವನಾಶ ಮಾಡಿದ್ದಾರೆಂಬುದು ಲೆಕ್ಕವೇ ಇಲ್ಲ. ಮತ್ತು ಅದನ್ನು ಕೇಳುವ ಮತ್ತು ನಿಯಂತ್ರಿಸುವ ಗಂಡೆದೆ ನಮ್ಮ ಭಾರತದಲ್ಲಿ ಮೊನ್ನೆಯವರೆಗೂ ಯಾವ ಮಗನಿಗೂ ಇರಲಿಲ್ಲ.

ಆದರೆ ಇಂಥ ಶೋಷಿತ ಭಾರತೀಯರನ್ನು ನಮ್ಮ ದೇಶಕ್ಕೆ ಕರೆಸಿಕೊಂಡು ಅವರಿಗೆ ಆಶ್ರಯ ನೀಡುವ ಸಿಎಎ ಕಾಯಿದೆಯನ್ನು ಇಲ್ಲಿನ ಅವಿವೇಕಿಗಳು ಅಲ್ಪ ಸಂಖ್ಯಾತರಿಗೆ ಅಸಂಬದ್ಧವಾಗಿ ಅರ್ಥೈಸಿ ಎತ್ತಿಕಟ್ಟುವ ಕೆಲಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಭಾರತದಲ್ಲಿನ ರಾಜಕೀಯ ಎಷ್ಟು ಕುಲಗೆಟ್ಟಿದೆ ಯೆಂದರೆ ಮೋದಿಯವರು ಸೇನೆಯನ್ನು ಸದೃಢಗೊಳಿಸಿ, ಆಧುನಿಕ ಗುಲಾಮಗಿರಿಯಿಂದ ದೇಶವನ್ನು ಸ್ವಾಭಿಮಾನಿಯಾಗಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮೇಲೆತ್ತಿ, ದೇಶವಲ್ಲದೇ ವಿಶ್ವದಲ್ಲಿರುವ ಭಾರತೀಯರನ್ನೂ ರಕ್ಷಿಸುವ ಕೆಲಸಕ್ಕಿಳಿದಿದ್ದಾರೆ.

ಆದರೆ ಇಲ್ಲಿನ ರಾಜಕಾರಣಿಗಳು ದೇಶದ ಘನತೆಗೆ ಹೆಗಲು ನೀಡುವುದನ್ನು ಬಿಟ್ಟು ಬಾವಿಯೊಳಗಿನ ಕಪ್ಪೆಯಂತೆ ಕೇವಲ ಅಧಿಕಾರ-ವೋಟ್‌ಬ್ಯಾಂಕ್ ಆಧರಿತ ಟ್ವಿಟ್ಟರ್ ರಾಜಕಾರಣ ಮಾಡುತ್ತಿದ್ದಾರೆ ಹೊರತು ಹೊರದೇಶಗಳಲ್ಲಿನ ಭಾರತೀಯರ ಸ್ಥಿತಿಗತಿಗಳ ಕುರಿತು ಕಿಂಚಿತ್ತಾದರೂ ಕಾಳಜಿ ಇದೆಯೇ? ನಾವು ಎಷ್ಟೇ ಬಡತನ ನೋವು ಅನುಭವಿಸಿದರೂ ಈ ದೇಶಕ್ಕೆ ಅದರದೇ ಆದ ಪಾರಂಪರಿಕತೆ ಘನತೆ ಸ್ವಾಭಿಮಾನ ಸಾಂಸ್ಕೃತಿಕ ಮಾನವೀಯ ಮೌಲ್ಯಗಳಿವೆ. ಅದನ್ನೂ ಉಳಿಸಿಕೊಳ್ಳುವುದು ಇಲ್ಲಿನ ರಾಜಕಾರಣಿಗಳ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿ ಇಂಥದನ್ನೆ ಕಾಪಾಡಿಕೊಂಡು ಹೋಗಬೇಕಾದ ಬುದ್ದಿಜೀವಿಗಳೆಂಬ ಸಾಹಿತಿಗಳು ಲದ್ದಿಜೀವಿ ಎಂಬ ವಿರುದ್ಧ ಪದಕ್ಕೆ ಜನ್ಮನೀಡಿ ನಗದುರಹಿತ ಪ್ರಶಸ್ತಿ ವಾಪಸ್ ನೀಡಿ ಅಸಹಿಷ್ಣುಹಿಗಳಾಗಿದ್ದಾರೆ.

ವಿಚಾರವಾದಿಗಳೆಂಬುವವರು ಕನ್ನಯ್ಯನಂಥ ದೇಶದ್ರೋಹಿಗಳನ್ನು ಸಾಕಿಕೊಂಡು ದೇಶಕ್ಕೆ ವ್ಯಾದಿಗಳಾಗಿದ್ದಾರೆ. ಇನ್ನು ಪ್ರಗತಿ ಪರರೆಂಬ ನಿರಾಶ್ರಿತರು ಪಿತೃ ಪಕ್ಷಗಳ ಗಂಜಿ ಗಿರಾಕಿಗಳಾಗಿದ್ದಾರೆ. ಇನ್ನು ಬಾಂಗ್ಲಾ ಪಾಕಿಸ್ತಾನ ಆಫ್ಘಾನಿಸ್ತಾನದಂಥ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಪರ ದನಿ ಎತ್ತುವವರು ಯಾರು? ಅದಕ್ಕೆಂದೇ ಕೆಲ ಮನುಷ್ಯರು ಬದುಕಿರಬೇಕಲ್ಲವೇ?. ಅದಕ್ಕೆ ಹಿಂದೂ ಪರ ಸಂಘಟನೆಗಳು ಬಿಟ್ಟರೆ ಇನ್ನಾರಿಗೂ ಮನುಷ್ಯತ್ವಗಳಿಲ್ಲವೇ? ಇದನ್ನೇ ಅಂದು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಮಾಡಿ ಗೆದ್ದದ್ದು. ಅಂಥ ಗಾಂಧೀವಾದಿ ಪಕ್ಷದಲ್ಲಿ ಪಟೇಲರೇ ಪ್ರಥಮ ಪ್ರಧಾನಿಗಳಾಗಿ ದೇಶದ ಚುಕ್ಕಾಣಿ ಹಿಡಿ ದಿದ್ದರೆ ಇಂದು ನಮ್ಮ ದೇಶಕ್ಕೆ ಇಂಥ ದರಿದ್ರ ಸ್ಥಿತಿ ಬರುತ್ತಿರಲಿಲ್ಲ.

ಸುಭಾಷ್ ಚಂದ್ರ ಬೋಸರು ಅಂದು ಭಾರತೀಯರಿಗೆ ಭಾಗ್ಯಗಳನ್ನು ಕೊಡುತ್ತೇನೆಂದು ಹೇಳಲಿಲ್ಲ. ಬದಲಿಗೆ ನೀವೇ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ್ಯ ತರುತ್ತೇನೆಂದು ಹೇಳಿದ್ದರು. ಆದರೆ ಇಂದು ತಮ್ಮ ಸ್ವಾರ್ಥ, ಅಧಿಕಾರದ ದಾಹಕ್ಕೆ ಒಳಗಾಗಿ ದೇಶದ ಸಾರ್ವಭೌಮತೆಗೆ ಸಂವೇದನಾಹೀನರಾಗಿ ಕೇವಲ ಜಾತಿ ನಾಯಕರೆನಿಸಿಕೊಂಡಿದ್ದಾರಷ್ಟೆ. ಇಂಥವರಲ್ಲಿ ಗಾಂಧಿಗಿರಿಯನ್ನು ಕಾಣಲು ಹೇಗೆ ಸಾಧ್ಯ. ಈಗ ನೋಡಿ ಬಾಂಗ್ಲಾದೇಶ ಪಾಕಿಸ್ತಾನದಲ್ಲಿ ಹಿಂದೂಗಳ ಜನ ಸಂಖ್ಯೆಯ ಅನುಪಾತ ಅಳಿವಿನಂಚಿ ನಲ್ಲಿದೆ. ಅವರುಗಳೆಲ್ಲರೂ ನಮ್ಮೊಂದಿಗಿದ್ದ ಬಂಧುಗಳೇ ಆಗಿದ್ದಾರೆ. ಅವರ ಬದುಕು ನರಕಸದೃಶದಲ್ಲಿದೆ. ಅವರ ಪರ ಅಯ್ಯೋ ಎನ್ನುವ ಒಬ್ಬ ನಾಯಕನೂ ಇಲ್ಲಿ ಜೀವಂತವಾಗಿಲ್ಲ. ಮೋದಿಯಂಥವರು ಪೌರತ್ವ ನೀತಿ ಕಾಯಿದೆಯ ಮುಖಾಂತರ ಸಹಾಯಹಸ್ತ ಚಾಚಿದರೆ ಅವರನ್ನು ಕೋಮವಾದಿ ಎಂದು ಜರಿದು ಇಲ್ಲಿನ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ವೋಟ್ ಕಬಳಿಸುವ ಕಾರ್ಯಕ್ಕಿಳಿಯುತ್ತಾರೆ.

ಹೊರತು, ಪ್ರಧಾನಿಗಳು ಕೂಡಲೇ ಬಾಂಗ್ಲಾದೇಶದ ಪ್ರಧಾನಿಯೊಂದಿಗೆ ಮಾತನಾಡಿ ಅಲ್ಲಿನ ಹಿಂದೂಗಳ ರಕ್ಷಣೆ ಮಾಡಬೇಕೆಂಬ ಸಣ್ಣ ಸಲಹೆ ಆಗ್ರಹಿಸುವ ನೈತಿಕತೆ ಪ್ರಬುದ್ಧತೆ ತೋರುವುದಿಲ್ಲ. ಆದರೆ ಬಾಂಗ್ಲಾದಿಂದ ಕದ್ದುಮುಚ್ಚಿ ಬಂದ ರೋಹಿಂಗ್ಯಾಗಳಿಗೆ ಇದೇ ನವರಂಗಿಗಳು ಆಶ್ರಯನೀಡಿ ಅವರಿಗೆ ಮತದಾರ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಕೂಡ ಮಾಡಿಸಿಕೊಟ್ಟು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ವೋಟ್ ಬ್ಯಾಂಕ್ ವೃದ್ಧಿಸಿಕೊಳ್ಳುವ ‘ಕೈಂಕರ್ಯಕ್ಕೆ’ ಪರೋಕ್ಷ ಬೆಂಬಲ ನೀಡುತ್ತಾರೆ.

ರೋಹಿಂಗ್ಯಾಗಳಲ್ಲಿ ದೇಶದ್ರೋಹಿಗಳು, ಭಯೋತ್ಪಾದಕರು, ಸಮಾಜಘಾತ ಕರು ಇದ್ದರೂ ಇವರಿಗೆ ನೋ ಪ್ರಾಬ್ಲಂ. ತಮಗೆ ಮತ ಚಲಾಯಿಸುತ್ತಾರೆಂದರೆ ಹಿಂಡುಹಿಂಡು ತಾಲಿಬಾನಿಗಳು ಬಂದರೂ ಓಕೆ. ಅದೇ ಬಾಂಗ್ಲಾದಲ್ಲಿ ಹಿಂದೂಗಳು ತಿರುಗಿ ಬಿದ್ದು ಅಲ್ಲಿನ ಒಂದತ್ತು ‘ಜಿಹಾದಿ ಬ್ರದರ‍್ಸ್‌ಗಳ’ ಹೆಣ ಉರುಳಿಸಿದ ರೆನ್ನಿ. ಆಗ ಇಲ್ಲಿನ ಡೋಂಗಿಗಳ ಕೂಗು ಬಾಂಗ್ಲಾದೇಶದ ಬೀದಿನಾಯಿಯ ಕಿವಿಗೂ ಹೋಗಿ ಬಡಿಯುವಷ್ಟು ಆಕ್ರಂದನವಾಗಿರುತ್ತದೆ. ಇನ್ನು ಕೆಲ ಮಾನವಹಕ್ಕು ಗಳೆಂಬ ಡ್ರಾಮ ಸಿನಿಯರ‍್ಸ್‌ಗಳದ್ದು ಅದೆಂ ಥದೋ ಟಮ್ಸ ಅಂಡ್ ಕಂಡಿಷನ್ಸ್‌ಗಳು. ಸಂತ್ರಸ್ಥರು- ಶೋಷಿತರು ದಲಿತರು ಅಲ್ಪಸಂಖ್ಯಾತರಾ ಗಿದ್ದರೆ ಮಾತ್ರ ಇವರಿಗೆ ಪ್ರಜ್ಞೆ ಬರುತ್ತದೆ. ಅದರಲ್ಲೂ ಅವರು ಬಿಜೆಪಿ ಆಡಳಿತದ ರಾಜ್ಯದಲ್ಲಿ ನಡೆದರೆ ಮಾತ್ರ.

ಒಂದೊಮ್ಮೆ ಬಿಜೆಪಿಯೇತರ ಆಡಳಿತದ ರಾಜ್ಯದದರೆ ಅದಕ್ಕೆ ನೇರ ಮೋದಿ ಕಾರಣ ಎನ್ನುತ್ತಾರೆ. ಕಾಶ್ಮೀರದಲ್ಲಿನ ಹಿಂದೂಗಳು ಸತ್ತರೇ ಮೂರನ್ನೂ (ಕಣ್ಣು-ಕಿವಿ-ಬಾಯಿ) ಮುಚ್ಚಿಕೊಂಡಿ ರುವ ಇವರು ಗಳು, ಇನ್ನು ಬಾಂಗ್ಲಾದಲ್ಲಿ ಗೋಳಿಡುತ್ತಿರುವ ಹಿಂದೂಗಳ ಪರ ದನಿಯೆತ್ತುವುದನ್ನು ನಿರೀಕ್ಷಿಸಲು ಸಾಧ್ಯವೇ?. ಬಾಂಗ್ಲಾದಲ್ಲಿ ಮೊನ್ನೆಯಷ್ಟೇ ಅಲ್ಲಿನ ಇಸ್ಕಾನ್ ಸಂಸ್ಥೆ ರಂಜಾನ್ ಹಬ್ಬಕ್ಕೆ ಇಫ್ತಿಯಾರ್ ಕೂಟ ಏರ್ಪಡಿಸಿ ಸತ್ಕರಿಸಿತ್ತು. ಆದರೆ ಅಲ್ಲಿನ ಹಿಂದೂಗಳ ನವರಾತ್ರಿಗೆ ಜಿಹಾದಿಗಳು ನರಕರಾತ್ರಿ ತೋರಿಸಿದ್ದಾರೆ. ನಿಜಕ್ಕೂ ನಮಗೆ ನಾಚಿಕೆಯಾಗಬೇಕು. ಭಾರತಕ್ಕಿಂತ ಮೊದಲಾಗಿ ಅಮೆರಿಕ ದೇಶ ಹೀಗೆ ಅಲ್ಪಸಂಖ್ಯಾತರ ಮೇಲೆರಗುವುದನ್ನು ಖಂಡಿಸಿ ಎಚ್ಚರಿಕೆ ನೀಡಿದೆ. ಅಲ್ಲಿನ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯರು ರಸ್ತೆಗಿಳಿದು ಪ್ರತಿಭಟಿಸಿ ಬಾಂಗ್ಲಾದೇಶಕ್ಕೆ ಧಿಕ್ಕಾರ ಕೂಗಿದೆ.

ಆದರೆ ಇಲ್ಲಿ ಹೋಗಿ ಬಂದು ಮೂಗಿಯನ್ನು ಕಾಡಿದ ಎಂಬಂತೆ ಆರ್‌ಎಸ್‌ಎಸ್-ಮೋದಿ-ಕೋಮವಾದ ಈ ಮೂರು ಪದಗಳು ಬಿಟ್ಟರೆ ದೇಶ ಸಮಾಜ ಉದ್ಧಾರ ಮಾಡುವ ಯಾವ ಚಿಂತನೆಗಳು ಯೋಗ್ಯತೆಗಳೂ ಇವರಲ್ಲಿಲ್ಲ. ಒಬ್ಬ ಗಾಂಧಿವಾದಿಯಾಗಲಿ, ಅಥವಾ ದೇಶದ ಪ್ರಧಾನಿಯಂಥ ಹುದ್ದೆಯನ್ನು ಅಲಂಕರಿಸಿದ
ಮುತ್ಸದ್ದಿಯಾಗಲಿ ತಮ್ಮ ದೇಶಕ್ಕೆ ಸಂಬಂಧಿಸಿದ ನಾಗರಿಕರಿಗೆ ಆಯಾ ದೇಶದಲ್ಲಿ ಅನ್ಯಾಯವಾದಾಗ ಕನಿಷ್ಠ ಒಂದು ಖಂಡನಾರ್ಹ ಹೇಳಿಕೆಯನ್ನಾದರೂ
ನೀಡುವುದು ಅವರಿಗೆ ಶೋಭೆ ತರುತ್ತದೆ. ಆದರೆ ಅಂಥ ಹೇಳಿಕೆ ನೀಡಲು ಇವರಿಗೆ ಗಡಗಡ ನಡುಕ. ಇತರರು ಹೇಳಿಕೆ ನೀಡಿದರೆ ಮಾತ್ರ ಅವರು ಕೋಮುವಾದಿ
ಮನುವಾದಿ ಇತ್ಯಾದಿ. ಅಲ್ಪಸಂಖ್ಯಾತರು ಹಿಂದೂಗಳೊಡನೆ ಸ್ನೇಹ ಸೌಹಾರ್ದದಿಂದಿರಲು ಆರಂಭಿಸಿದರೆ ಇವರ ಅಸ್ತಿತ್ವವೇ ನಾಶವಾಗುತ್ತದೆ.

ಹೀಗಾಗಿ ಮೇಲ್ನೋಟಕ್ಕೆ ಸಂವಿಧಾನವೆಂಬ ಗುರಾಣಿಯನ್ನು ಹಿಡಿದುಕೊಂಡು ಅಲ್ಪಸಂಖ್ಯಾತರನ್ನು ದಾರಿತಪ್ಪಿಸಿ ಅವರನ್ನು ಮಲತಾಯಿ ಮಕ್ಕಳಂತೆಯೇ ಇರಿಸಿಕೊಂಡು ಬರುತ್ತಿದ್ದಾರೆ. ಇಂಥವರಿಗೆ ಅಧಿಕಾರ ನೀಡಿದರೆ ಭವಿಷ್ಯದಲ್ಲಿ ಭಾರತದ ಬಹುಸಂಖ್ಯಾತ ಹಿಂದುಗಳ ಸ್ಥಿತಿ ಹೀನಾಯ ವಾಗುತ್ತದೆಂದರೆ ಅತಿ ಶಯೋಕ್ತಿಯಲ್ಲ. ಈಗಾಗಲೇ ಪಶ್ಚಿಮಬಂಗಾಳದಲ್ಲಿ ಅಽಕಾರ ಹಿಡಿದ ದಿನವೇ ಹಿಂದೂಗಳ ಮಾರಣಹೋಮ ನಡೆಸಲಾಗಿದೆ. ಕರ್ನಾಟಕದ ಇಪ್ಪತ್ತಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರು ಬೀದಿನಾಯಿಗಳಂತೆ ಹತ್ಯೆಯಾಗಿದ್ದಾರೆ.

ಈಗ ನೋಡಿ, ತಾಲಿಬಾನಿಯರ ಆಫ್ಘಾನಿಸ್ತಾನದಲ್ಲಿ ಆಹಾರದ ಕೊರತೆಯಾಗಿ ಲಕ್ಷಾಂತರ ಮಂದಿ ಹಸಿವಿನಿಂದ ಸಾಯುವ ಸ್ಥಿತಿ ತಲುಪುತ್ತಿದ್ದಾರೆ. ಅಂಥ
ತಾಲಿಬಾನಿಗಳಿಗೆ ತಂದೆಯಂತಿರುವ ಪಾಕಿಸ್ತಾನದಂಥ ತಿರುಪೆ ದೇಶಗಳು ಹನಿ ನೀರನ್ನೂ ನೀಡುವ ಸ್ಥಿತಿಯಲಿಲ್ಲ. ಇಂಥ ತಾಲಿಬಾನಿಗಳಿಗೆ ಸಹಾಯಹಸ್ತ
ಚಾಚಿರುವ ದೇಶ ಯಾವುದು ಗೊತ್ತೆ?. ಭಾರತ!. ಭಾರತ ಸರಕಾರ ತಾಲಿಬಾನಿಗಳಿಗೆ ೫೦ ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಮತ್ತು ವೈದ್ಯಕೀಯ ನೆರವನ್ನು
ನೀಡುವುದಾಗಿ ಘೋಷಿಸಿದೆ. ಅಲ್ಲಿಗೆ ಸರ್ವೇ ಜನೋ ಸುಖಿನೋ ಭವಂತು ಎಂಬ ವಿಶ್ವವಾಣಿ ಮತ್ತೊಮ್ಮೆ ಮೊಳಗುತ್ತಿದೆ. ತಾಲಿಬಾನ್ ಆರ್‌ಎಸ್‌ಎಸ್ ಇಬ್ಬರೂ
ರಾಕ್ಷಸರು ಎಂದು ಹೋಲಿಸುವ ಅಯೋಗ್ಯರು ತಲೆಯಲ್ಲಿ ಮೆದುಳಿದ್ದರೆ ಈಗ ‘ಭಾರತ ಸರಕಾರ ಆರ್ ಎಸ್‌ಎಸ್‌ನಂಥ ಕ್ರೂರ ತಾಲಿಬಾನಿಗಳ ನೆರವಿಗೆ
ನಿಲ್ಲಬಾರದು, ತಾಲಿಬಾನಿಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡಬಾರದು’ ಎಂದು ಆಗ್ರಹಿಸಲಿ ನೋಡೋಣ !?. ಸುಮ್ಮನಿರಿ, ಬೆಕ್ಕುಗಳು ಕಣ್ಣುಮುಚ್ಚಿ ಕೊಂಡು ಹಾಲು ಕುಡಿಯುತ್ತಿದೆ.

Leave a Reply

Your email address will not be published. Required fields are marked *