Monday, 25th November 2024

ಸಸಾರವಲ್ಲದ ಸಾಗರಗಢ…

ಅಲೆಮಾರಿಯ ಡೈರಿ

ಸರ್.. ದೇಶದಲ್ಲ ಅತಿ ಹೆಚ್ಚು ಕೋಟೆಗಳಿರೋದು ಮಧ್ಯ ಪ್ರದೇಶದಲ್ಲಿ. ಆದರೂ ನಮಗೆ ಇವತ್ತಿಗೂ ಹೆಚ್ಚು ಕೇಳಿಸೋದು ಮಹಾರಾಷ್ಟ್ರದ ಕೋಟೆಗಳೆ ಸರ್. ಇಷ್ಟೊಂದು ಅಲ್ಲ ಮೆಂಟೇನೂ ಮಾಡಿಲ್ಲ ಬಿಡಿ.

ಆದರೂ ಇಲ್ಲ ಇರೋದನ್ನು ದೇಶದ ಪೂರ್ತಿ ಜನ ಹುಡುಕಿ ಬರ್ತಾರೆ ನೋಡಿ. ಬಿಡಿ ಅದು ನಮಗೆ ದೂರ. ಆದರೆ ನೀವು ಹಿಂಗೆ ವರ್ಷಕ್ಕೆ ಎರಡೋ ಮೂರೋ ಕೋಟೆ ಗೋಡೆ ಹಿಡಿದು. ಲೆಕ್ಕ ಹಾಕಿ ಮೇಲಕ್ಕೆ ಹತ್ತುತ್ತ ಇದ್ದರೂ, ಇದೆಲ್ಲ ನಮ್ಮ ರಾಜ್ಯದ ಕೋಟೆ ಕೊತ್ತಲ ಮುಗಿ ಸೋಕೆ ನಿಮಗೆ ಏನಿಲ್ಲವೆಂದರೂ ಹತ್ತು ವರ್ಷ ಬೇಕಾಗುತ್ತದೆ ಎಂದಿದ್ದು ಮಿತ್ರ ಜೋಶಿ. ಅವನು ಹೇಳಿದ್ದರಲ್ಲಿ ಸುಳ್ಳಿರಲಿಲ್ಲ.

ಕಾರಣ ಹೀಗೆ ನೂರಾರು ಕೋಟೆ ಎನ್ನುವ ಗಢಗಳನ್ನು ಹೊಂದಿರುವ ಒಂದೇ ರಾಜ್ಯದ ತಿರುಗಾಟಕ್ಕೆ ಹೊರಟರೆ ಇನ್ನೂರಕ್ಕೂ ಹೆಚ್ಚು ಜಾಗ ಗಢಗಳದ್ದೇ ಆಗುತ್ತದೆ. ಇತಿಹಾಸ ಪ್ರಸಿದ್ಧ ‘ಗಢ ಆಲ ಪಣ ಸಿಂಹ ಗೇಲಾ’ ಎಂದ ಶಿವಾಜಿ ಮಾತು ಇವತ್ತಿಗೂ ಗಢಕ್ಕಿರುವ ಮಹತ್ವ ಸಾರುತ್ತಿದ್ದರೆ, ನನ್ನ ಈ ಸಾಗರ ಗಢ ಅಥವಾ ಸಜ್ಜನಗಢದ ಕ್ವಿಕ್ಕಿ ಆಗಿದ್ದು ಕೂಡಾ ಅನಿರೀಕ್ಷಿತವಾಗೇ.

ಪೂನಾ ಮೂಲದ ಮಿತ್ರರ ಮಂಡಳಿ ಅನಿರೀಕ್ಷಿತವಾಗಿ ಖಂಡಾಲ ಕಡೆಯ ಹೋಗುವ ರೂಟ್ನು ಇದ್ದಕ್ಕಿದಂತೆ, ಅಲಿಗಢ್ ಕಡೆಯ ಫಾರ್ಮ್ಹೌಸ್ ಒಂದಕ್ಕೆ ತೀರ್ಥಯಾತ್ರೆಗೆ ಹೊರಟಾಗ ಇದರ ತಾಣ ಕೈಗೆಟುಕಿದ್ದು ಎಕ್ಸ್‌ಟ್ರಾ ಬೊನಸ್ ತರಹ. ಈ ಸಾಗರಗಢ ಎಂಬ ಕೋಟೆ ಹೆಸರು ಮತ್ತು ಸೌಂದರ್ಯ ಜೊತೆಗೆ ಇತಿಹಾಸಿಕ ಶೌರ್ಯದ ಪರಾಕ್ರಮಕ್ಕೂ ಹೆಸರಾದ ಶಿವಾಜಿಯ ಜೊತೆಗೆ ತಳುಕು ಹಾಕಿಕೊಂಡಿರುವ ಈ ಕೋಟೆಯ ತುದಿಗೆ ಅದ್ಯಾಕಾದರೂ ಹತ್ತುವ ಇರಾದೆ ಬಂತೋ ಗೊತ್ತಿಲ್ಲ. ಆದರೆ ಅಲ್ಲಿಂದ ತಪ್ಪಿ ಒಂದೇ ಹೆಜ್ಜೆ ಆಚೀಚೆ ಆದರೂ ದೇವರಾಣೆ ದೇವರೂ ಕಾಪಾಡಲ್ಲ ನಿಮ್ಮನ್ನು.

ಅದಕ್ಕಾಗೇ ಹಿಂದೆಲ್ಲ ಇಲ್ಲಿಂದಲೇ ಜನರನ್ನು ದಬ್ಬಿ ಕೊಲ್ಲುವ ಪರಿಪಾಠವೂ ಇತ್ತೆನ್ನುವಾಗ ಆ ತುದಿಯಲ್ಲಿ ನಿಂತು ಇಣುಕಿದರೆ ಸಮುದ್ರ ಅಲೆಗಳು ಬಡಿಯುವ ಕೊರಕಲಿನ ಮಧ್ಯೆ ಎದರೂ ಅಕಸ್ಮಾತಾಗಿ ಎದ್ದು ಯಾವುದೋ ಕಾಲದ ಮಾನವ ಬುರುಡೆ ಯೊಂದು ಹಾಯ್ ಎಂದು ಬಿಟ್ಟರೆ ಎನ್ನುವ ರೋಚಕ ಯೋಚನೆ ಆ ರಣಗಾಳಿ ಮತ್ತು ಎತ್ತರದಲ್ಲಿ ಮಜ ಕೊಡುವುದಂತೂ ಹೌದು.

ಸಮುದ್ರ ಮತ್ತು ಕೋಟೆ ಎರಡನ್ನೂ ಹೊಂದಿದ್ದ ಸಾಗರಗಢ ಅತ್ತ ಮುಂಬೈ ಮತ್ತು ಇತ್ತ ಸಾತಾರವರೆಗಿನ ಪ್ರವಾಸಿಗರಿಗೆ  ಅದರಲ್ಲೂ ಒಂದಿನ ಟ್ರೆಕ್ ಮಾಡುವವರಿಗೆ ಹೇಳಿ ಮಾಡಿಸಿದ ಪ್ರರ್ವತ, ಹಸಿರು ಜಲಪಾತ, ಕೋಟೆ, ಎತ್ತರ, ಕಾಲ್ನಡಿಗೆ ಮತ್ತು ಮುಂದುವರೆದು ಬಂದರೆ ಬಿಸಿ ಬಿಸಿ ಲೊನಾವಳ ಚಿಕ್ಕಿಗೂ ಹೇಳಿ ಮಾಡಿಸಿದ ಪ್ರದೇಶ. ಜೊತೆಗೆ ಅಲ್ಲಿಗೆ ಹೋದವರೆಲ್ಲ ಸ್ಥಳೀಯ ಚಾಕೋಲೇಟ್ಗೂ ಅದರ ತುದಿಯ ಚಳಿಗೂ ಬಾಯ್ಬಿಡುವ ಹಾಗೆ, ಲೋನಾವಳದ ಹತ್ತಿರದ ಇರುವ ಹಳ್ಳಿ ಕಾ-ರ್‌ಗಾಂವದಲ್ಲಿ ಸ್ಥಳೀಯ ಡೈರಿಯ ಮಾಡುವ ಶ್ರೀಖಂಡ್ ಬೇರೆ ಇದೆ ಎಂದ ಮೇಲೆ ನನ್ನ ಉಳಿದ ಪ್ರವಾಸ ಮುಲಾಜಿಲ್ಲದೆ ಮೊಟಕುಗೊಳಿಸಿ
ಸಾಗರಗಢಕ್ಕೆ ತಿರುಗಿದ್ದೆ.

ಬರುವಾಗ ತಪ್ಪದೇ ಕಾ-ರ್ ಗಾಂವೆಗೆ ತಿರುಗಿಸುವ ಕಂಡಿಶನ್ ಮೇರೆಗೆ. ಮೊದಲೇ ಮಹಾರಾಷ್ಟ್ರ ಹೇಳಿ ಕೇಳಿ ಕೋಟೆಗಳಿಗೆ ಪ್ರಸಿದ್ಧಿ
ಮತ್ತು ಸಹ್ಯಾದಿ ಪರ್ವತ ಶ್ರೇಣಿಗೂ. ಅದರಲ್ಲೂ ಖಂಡಾಲಾ ಮತ್ತು ಲೋನಾವಳ ಆಚೀಚೆಗೆ ಲೆಕ್ಕ ತಪ್ಪಿ ಪರ್ವತ ತುದಿಗಳು ಮೇಲ್ಮುಖ ಮಾಡಿ ನಿಂತಿದ್ದರೆ ಅದನ್ನು ಏರುವ ಅದನ್ನೆ ಪಿಕ್ನಿಕ್ ಮಾಡಿಕೊಳ್ಳುವ ಅದಾಗದಿದ್ದರೆ ಸುಮ್ಮನೆ ಕೂತೆದ್ದು ಬರುವ ಷ್ಟಾದರೂ ಒಂದು ಕಡೆಯಿಂದ ಹತ್ತಿ ಬಿಡೋಣ ಎಂದು ಮುಂಬೈನಿಂದ ನುಗ್ಗಿ ಬರುವವರ ಜೊತೆಗೆ ಇತ್ತಲಿನ ಕೊಪುರ ಮತ್ತು ಸಾತಾರ, ನಾಸಿಕ ಆದಿಯಾಗಿ ಜನರ ಹೆಚ್ಚಿನ ಕೇಂದ್ರಗಳು ಇರುವುದು ಇಲ್ಲಿಯೇ. ಹಾಗಾಗಿ ಅಲಿಗಢ್ ಕೂಡಾ ಅದಕ್ಕೆ ಸೇರಿ ಕೊಳ್ಳುವುದರೊಂದಿಗೆ ಸಾಗರ ಗಢ ಬಕೆಟ್ ಲಿ ಯಾವಾಗಲೂ.

ಐತಿಹಾಸಿಕ ಪುರುಷ ಪರಾಕ್ರಮಿ ಮರಾಠಿಗರ ಕಣ್ಮಣಿ ಶಿವಾಜಿಯ ಪ್ರಮುಖ ಜಯದಂದಾದ ಈ ಕೋಟೆಯನ್ನು ಶಿವಾಜಿ 1663 ರ ಏಪ್ರಿಲ್ ಹೊತ್ತಿಗೆ ಆದಿಲ್ ಶಾಹಿಯಿಂದ ಕಿತ್ತುಕೊಂಡು ತಮ್ಮ ಮರಾಠಾ ಆಡಳಿತಕ್ಕೆ ವಹಿಸಿಕೊಳ್ಳುತ್ತಾನೆ. ಮೂಲತಃ ಬಹಮನಿ ಸುಲ್ತಾನರು ಸುಮಾರು ಹದಿಮೂರನೆಯ ಶತಮಾನದಲ್ಲಿ ಆರಂಭಿಸಿದ ಇದು ಹದಿನೈದನೆಯ ಶತಮಾನದವರೆಗೂ ಅವರ ವಶದ
ಆಸ್ತಿತ್ವದಲ್ಲೂ, ಆಳ್ವಿಕೆಯಲ್ಲೂ ಇತ್ತು.

ನಂತರವಷ್ಟೆ ಇದು ಆದಿಲ್ಶಾಹಿ ಆಡಳಿತಕ್ಕೆ ಮರಳಿದ್ದು. ಆದರೆ ಪುನಃ ಆದಿಲ್ಶಾಹಿಗಳ ಕೈ ತಪ್ಪಿಸಿದ್ದು ಶಿವಾಜಿ ಮಹಾರಾಜ. ಬಹುಶಃ ಶಿವಾಜಿಯ ಕಾಲಾವಧಿ ಮೊಘಲ್ ಮತ್ತು ಇತರ ಆಡಳಿತಗಾರರಿಗೆ ಒಂದು ಸಿಂಹ ಸ್ವಪ್ನವೇ ಸರಿ. ಹಾಗಾಗಿ ಪ್ರತಿ ಕೋಟೆ ಗೋಡೆಗಳಲ್ಲೂ ಶಿವಾಜಿಯ ಉಸಿರು ಕಾಣುತ್ತದೆ. ತನ್ನ ಆಳ್ವಿಕೆಯಲ್ಲಿ ಪ್ರಮುಖ ಹಂತದ ರಾಜ್ಯಗಳನ್ನು ಮರಾಠ ಆಡಳಿತದಡಿಗೆ ತಂದುಕೊಂಡ ಶಿವಾಜಿ ಇದನ್ನೂ ಕೈವಶ ಮಾಡಿಕೊಂಡು ಸಮುದ್ರ ಮತ್ತು ಕೋಟೆ ಎರಡರ ಸಂಗಮದಂತಿರುವ ಕಾರಣ ಇದಕ್ಕೆ ಸಾಗರಗಢ ಎಂದು ನಾಮಕರಣ ಮಾಡಿದ ಎನ್ನಲಾಗುತ್ತಿದೆ.

ಆಗಿನ ಕಾಲಕ್ಕೆ ಪರಾಳಿ ಎಂದು ಕರೆಸಿಕೊಳ್ಳುತ್ತಿದ್ದ ಇದು ಮೂಲತಃ ಸಜ್ಜನಗಢ ಕೂಡಾ ಹೌದು. ಅದರಾಚೆಗೆ ನಿರಂತರ ಮರಾಠರ
ಖಾಯಂ ವಸತಿಯಾಗಿ ಆಳ್ವಿಕೆಯಲ್ಲಿದ್ದರೂ ಮತ್ತೊಮ್ಮೆ 1700 ರಲ್ಲಿ ಫತೆಉಖಾನ್ ಮೂಲಕ ಆಕ್ರಮಣಕ್ಕೆ ತುತ್ತಾಯಿತು. ಅಂತಿಮ ವಾಗಿ ಅದೇ ಖಾನ್ನಿಂದ ಜಯಿಸಲ್ಪಟ್ಟು ಮೊಘಲ್ ಸಾಮ್ರಾಜ್ಯಕ್ಕೆ ಸೇರುವುದರೊಂದಿಗೆ ಸಜ್ಜನಗಢ ‘ನವರಾಷ್ಟ್ರ’ ಎಂದು ಮರು ನಾಮಕರಣ ಮಾಡಲ್ಪಟ್ಟಿತ್ತು.

ಆದರೆ ಮೊಘಲ್ರಿಗೆ ಈ ಖುಷಿ ಅಥವಾ ಆಯಕಟ್ಟಿನ ಜಾಗ ಹೆಚ್ಚು ದಿನ ತಡೆಯಲಿಲ್ಲ. ಬಾಜಿರಾವ್ ಕಾಲದಲ್ಲಿ ಮತ್ತೆ ಕೈವಶ ಮಾಡಿಕೊಳ್ಳುವುದರೊಂದಿಗೆ ಪುನಃ ಮರಾಠ ಹಿಡಿತಕ್ಕೆ ಬಂತು ಅಂತಿಮವಾಗಿ ಬ್ರಿಟಿಷ ಆಡಳಿತದವರೆಗೂ ಇದು ಸುಲಲಿತ ದಿನಗಳನ್ನು ಕಂಡ ಸಾಗರಗಢ ಇತ್ತಿಚೆಗೆ ಏನೇ ಅದರ ಸೌಂದರ್ಯ ಇತ್ಯಾದಿ ಕಾಯ್ದುಕೊಂಡರೂ ನಿರಂತರ ನಿರ್ವಹಣೆ ಇಲ್ಲದೆ ತುಸು ಸೊರಗಿದ್ದು ಹೌದು. ಕಾರಣ ಇದೆಲ್ಲವನ್ನು ಕಿ.ಮೀ.ಗಟ್ಟಲೇ ದೂರದವರೆಗೆ ಬೇಲಿ ಹಾಕಿಟ್ಟು ಕಾಯ್ದುಕೊಳ್ಳುವುದೂ ಕಷ್ಟ ಸಾಧ್ಯವೇ.

ಆದರೆ ಪ್ರತಿವರ್ಷ ಮಳೆಯ ಹನಿಗೆ ಸಿಕ್ಕು ಮತ್ತೆ ಮತ್ತೆ ಚಿಗುರಿಕೊಳ್ಳುವ ಹಸಿರ ಉಸಿರಿನ ಕಾರಣ, ಸೀಸನ್ ಕಾಲಾವಧಿಯಲ್ಲಿ ಜನರನ್ನು ಜೂನ್‌ನಿಂದ ಜನೇವರಿಯವರೆಗೂ ಆಕರ್ಷಿಸುತ್ತವೆ. ಚಳಿ ಮತ್ತು ಮಳೆಗಾಲದ ಹಾಟ್ ಸ್ಪಾಟ್ ಸಾಗರಗಢ, ಕ್ರಮೇಣ ಬಿಸಿಲಿಗೆ ತೆರೆದುಕೊಳ್ಳುವುದರಿಂದ ಮೇಲೆರುವುದು ಅಪರ ಬೆಂಕಿಯ ಗಾಳಿಗೆ ಸಿಲುಕಿದಂತಾಗುತ್ತದೆ.

ಮಹಾರಾಷ್ಟ್ರದಲ್ಲಿ ರಣ ಬಿಸಿಲಿಗೂ ಒರಟುತನಕ್ಕೂ ಹೆಸರುವಾಸಿಯಾದ ರಾಯಗಢ ಜಿಯ ಅಲಿಭಾಗನಲ್ಲಿದೆ ಸಾಗರಗಢ. ಇದು ಅಲಿಭಾಗ ತಾಲೂಕಿನಲ್ಲಿ ಪೇನ್ ರಸ್ತೆಯ ಮೂಲಕ ಕಾಲ್ನಡಿಯೆ ಚೆಂದದ ದಾರಿ ಇಲ್ಲಿಗೆ ಬರಲು. ಅದು ನಿಮ್ಮನ್ನು ಕೋಟೆ ಗಿಂತಲೂ ಹೆಚ್ಚು ಆಕರ್ಷಿಸುತ್ತದೆ. ಕಾರಣ ಹಸಿರಿಗೆ ತೆರೆದುಕೊಂಡ ಸಣ್ಣ ಕುರುಚಲಿನ ಕಾಡು ದಾರಿ ಸಾಗರಗಢವರೆಗೂ ಒಂದೇ ತೆರನಾಗಿದ್ದರೆ, ದಾರಿಯ ಮೇಲೆ ಸಿಕ್ಕುವ ಧೋಡ್ನೆ ಜಲಪಾತ ಮಳೆಗಾಲದಲ್ಲಿ ಮಾತ್ರ ಸಿಕ್ಕರೂ ನಿಜವಾದ ಬೋನಸ್. ಎರಡು ಹಂತದಲ್ಲಿ ಬೀಳುವ ಧೋಡಾಣೆ ನೇರ ಕೈಗೆಟುಕಲಾರದು. ಆದರೆ ಮದಕ್ಕೂ ಮುದಕ್ಕೂ ಬರವಿಲ್ಲ. ಅದಕ್ಕಾಗಿ ಜೂನ್ನಿಂದ ಅಕ್ಟೋಬರ್ ವರೆಗೆ ಮಳೆಯ ಹೆಚ್ಚು ಕಡಿಮೆ ಪ್ರತಿ ದಿನ ಇಲ್ಲಿ ಜನ ಸಿಕ್ಕೇ ಸಿಗುತ್ತಾರೆ.

ಅದರಲ್ಲೂ ಮಳೆಯ ಇರುಚಲಿಗೆ ಅಲ್ಲಲ್ಲಿ ಮಸಾಲೆ ಚಹ ಮತ್ತು ವಡಾ ಪಾವ ಕೈಗೆ ತಂದು ಕೊಡುವಾಗ ಬಿಸಿ ಬಿಸಿ ಮಸಾಲೆ ಮತ್ತಿಷ್ಟು ನಿಧಾನಕ್ಕೆ ಹೊರಡಿಸುತ್ತದೆ. ಎಲ್ಲ ಕೋಟೆಗಳೂ ಹೆಚ್ಚು ಕಡಿಮೆ ಯಾವುದಾದರೊಂದು ಪರ್ವತದ ತುದಿಗೆ ಹೋಗಿ ತಲುಪುವಂತೆ ನಿರ್ಮಿಸಿರುವುದರಿಂದ ಮತ್ತು ತೀರ ಕೊನೆಕೊನೆಗೆ ಹೋಗಿರುವ ಎತ್ತರ (ಇದರ ಎತ್ತರ ಸುಮಾರು ಸಾವಿರದಾ
ನಾನೂರು ಅಡಿ) ಹೆಚ್ಚಿನ ಹಾನಿಗೂ ಒಳಗಾಗದಿರುವ ಕಾರಣ ಎಲ್ಲ ಕೋಟೆಗಳಂತೆ ಇದರ ಮೇಲ್ಭಾಗ ಮಾತ್ರ ನಶಿಸದೆ ಉಳಿದಿದ್ದು, ಬಾಕಿ ಎಡೆ ಆದಂತೆ ಕೆಳಭಾಗದ ಮೆಟ್ಟಿಲ ಆದಿಯಾಗಿ ಪ್ರತಿಯೊಂದೂ ನಶಿಸುತ್ತಿದ್ದು ಉರುಳೀ ಬೀಳುತ್ತಾ ಅಲ ಕರಗುತ್ತಿವೆ.

ದಾರಿಯ ಮಧ್ಯದ ಸಿದ್ಧೇಶ್ವರ ದೇವಸ್ಥಾನ ಕುಡಿಯುವ ನೀರಿಗೆ ಆಸರೆ ಮತ್ತು ಒಂದು ಪ್ರಮುಖ ಲ್ಯಾಂಡ್ಮಾರ್ಕ್ ಕೂಡಾ. ಕಾರಣ ಕಂಡಲಾ ಗ್ರಾಮದಿಂದ ಹೊರಡುವ ಬೇಸ್ ಕ್ಯಾಂಪ್ ಆಗಿದ್ದರೂ, ಅಲ್ಲಲ್ಲಿ ಸಿಗುವ ಜನರನ್ನು ಕೇಳಿ ಮುಂದುವರೆಯುವುದು ಸೂಕ್ತ. ಹಲವು ಕಡೆಯ ಮಾರ್ಗಗಳ ತಿರುವುಗಳು ನಮ್ಮನ್ನು ಆಚೆಗೆ ಹೋಗಲು ಪ್ರಚೋದಿಸುವುದೂ ಇದೆ. ಹಾಗಾಗಿ ಕೊಂಚಾ ಅಚೀಚೆ ಆಗುವುದು ಪಕ್ಕಾ.

ಜೊತೆಗೆ ನಿಮಗೆ ಸಾಹಸದ ಚಾರಣ ಆಗಬೇಕೆಂದರೆ ಇಳಿಯುವಾಗ ಬಮ್‌ಗಾಂವ್ ದಾರಿಯ ಮೂಲಕ ಇಳಿದು ಕಂಡಾಲೆ ಗ್ರಾಮದ ಕಡೆ ಬರುವುದನ್ನು ನಿರ್ಧರಿಸಿದ್ದರೆ ನಿಜಕ್ಕೂ ಸಾಹಸಮಯ ಚಾರಣದ ಒಂದು ಪರ್ವ ಕೂಡಾ ಇದರಲ್ಲಿ ಲಭ್ಯ. ಎರಡು ತುದಿಗಳ ಪೈಕಿ ಎಡಭಾಗಕ್ಕೆ ಸಣ್ಣ ಕಾಲ್ದಾರಿಯ ಹಾಗೇ ತೆರೆದುಕೊಳ್ಳುವ ಬಮ್‌ಗಾಂವ್ ಹಳ್ಳಿಯ ಕಡೆಗೆ ಹೊರಡುವ ಇಳಿಜಾರು ಎಪ್ಪತ್ತು ಡಿಗ್ರಿ ಇಳಿಯುವಿಕೆಗೆ ದೂಡುತ್ತದೆ.

ವೇಗ ಮತ್ತು ಅಪಾಯಕಾರಿ ತುದಿಗಳನ್ನು ಇದು ಹೊಂದಿದ್ದು ಅಲ್ಲಲ್ಲಿ ಕೊರಕಲಿನ ಕಲ್ಲಿನಲ್ಲಿ ಕೂತೆದ್ದು ಸರ್ಕಸ್ ಮಾಡುತ್ತಾ
ಜರಗುತ್ತಿದ್ದರೆ, ಬಮ್‌ಗಾಂವ್ ಮಾರ್ಗದ ಪ್ರವಾಸ ಸಾಗರಗಢವನ್ನು ಸಹಜ ಪಿಕ್‌ನಿಕ್ ಬದಲಾಗಿ ಚಾರಣಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ. ವಯ್ನಾಡ್- ಕುರ್ಲಾಪಾಸ್ ಮೂಲಕ ಇನ್ನೊಂದು ಚಾರಣಕ್ಕೆ ದಾರಿ ಇದ್ದು ಅಲೆಮಾರಿಗಳಿಗೆ ಮೋಸವಿಲ್ಲ. ಸಾಕಷ್ಟು ನೀರಿನ ವ್ಯವಸ್ಥೆ ಪ್ರತಿಯೊಬ್ಬರ ಬೇಕೆ ಬೇಕು.

ಅರ್ಧ ದಾರಿಯ ನಂತರ ಅಂದು ಇಲೊಂದು ನಾಲ್ಕಾರು ಮನೆಗಳ ಜನವಸತಿ ಸಿಕ್ಕರೂ ನಮ್ಮ ಸಂಪೂರ್ಣ ತಯಾರಿ ಮಾತ್ರ ಸಾಗರಗಢವನ್ನು ಸಸಾರವನ್ನಾಗಿಸಿ ನಿಮ್ಮನ್ನು ಅಲೆದಾಡಿಸಿದ್ದಕ್ಕೂ ಮಜ ಕೊಡಬಲ್ಲದು. ಆದರೂ ಕೈಗೊಂದು ಕಾಲಿಗೊಂದು ಇಂಥ ತುದಿಗಳ ಸರಮಾಲೆ ಈ ಜನ್ಮಕ್ಕೆ ಅಡ್ಡಾಡಿ ಮುಗಿಸುವುದಾಗುವುದೇ ಎನ್ನಿಸದಿರಲಾರದು.