Thursday, 28th November 2024

ಶ್ರೀಗಳು ತಮ್ಮ ಬುದ್ದಿಗೆ ಸಾಣೆ ಹಿಡಿಯಬೇಕಿದೆ!

ಪ್ರತಿಸ್ಪಂದನ

ರಮೇಶ ಶಂಕ್ರಪ್ಪ ಮಂಟೂರ

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ‘ನೂರೆಂಟು ವಿಶ್ವ’ ಅಂಕಣದಲ್ಲಿ (ವಿಶ್ವವಾಣಿ ಆ.೧೫) ಸಾಣೇಹಳ್ಳಿ ಶ್ರೀಗಳ ಕುರಿತಾಗಿ ಬರೆದಿರುವ ಲೇಖನ ಮನಸ್ಸಿಗೆ ತಾಗಿತು. ನಿಜ ಭಟ್ರೇ, ಹಿಂದೂ ವಿರೋಽ ಮನಸ್ಥಿತಿಯ ಈ ಸಾಣೇಹಳ್ಳಿ ಶ್ರೀಗಳ ಬಗ್ಗೆ ನನ್ನ ಮನಸ್ಸು ಕೂಡ ಹೀಗೆಯೇ ವಿಚಾರಿಸಿದ್ದು ಶತಪ್ರಮಾಣ ಸತ್ಯ. ನನ್ನ ಮನಸ್ಸಿನಲ್ಲಿ ಮೂಡಿದ್ದ ಭಾವನೆಗಳಿಗೆ ಅಕ್ಷರ ರೂಪಕೊಟ್ಟ ತಮಗೆ ಕೋಟಿ ಕೋಟಿ ನಮಸ್ಕಾರಗಳು.

ಇಡೀ ಜಗತ್ತಿಗೆ ಮಾದರಿಯಾದ, ಎಲ್ಲ ಧರ್ಮದವರೂ ಓದಬ ಹುದಾದ ಮತ್ತು ಅನುಸರಿಸಬಹುದಾದ ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಗಳನ್ನು ಕೊಟ್ಟ ಹಿಂದೂ ಧರ್ಮದ ಬಗ್ಗೆ ಶ್ರೀಗಳು ಈ ರೀತಿ ಹೇಳುವುದು ಸುತರಾಂ ಸರಿ ಕಾಣುವುದಿಲ್ಲ. ಅವರು ಹಿಂದೂ ಭಕ್ತರು ಕೊಟ್ಟಿರುವ ಪ್ರಸಾದ ಸ್ವೀಕರಿಸಿ ಓದುತ್ತಾ ಕುಳಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂ ಡಿದ್ದಿದ್ದರೆ ಈ ರೀತಿಯ ಹೇಳಿಕೆಗಳನ್ನು ಖಂಡಿತ ಕೊಡುತ್ತಿರಲಿಲ್ಲ. ಸಾಣೇಹಳ್ಳಿ ಶ್ರೀಗಳು ಸ್ವಾಮಿ ವಿವೇಕಾನಂದರ, ವಿಜಯಪುರದ ಸಿದ್ದೇಶ್ವರ ಶ್ರೀಗಳ, ತುಮಕೂರಿನ ಶ್ರೀ ಶಿವಕುಮಾರ ಸ್ವಾಮಿಗಳ, ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಮಾತುಗಳನ್ನು, ಪುಸ್ತಕಗಳನ್ನು, ಕಾಯಕ ಗಳನ್ನು ಕೇಳಿಲ್ಲ, ಓದಿಲ್ಲ ಮತ್ತು ನೋಡಿಲ್ಲ ಎನಿಸುತ್ತದೆ.

ಇಂಗ್ಲಿಷ್ ಭಾಷೆಯ ಜ್ಞಾನವಿರುವ ಶ್ರೀಗಳು ಅಕ್ಷತ್ ಗುಪ್ತಾ ಅವರು ಬರೆದಿರುವ ’Seಛಿ ಏಜಿbbಛ್ಞಿ ಏಜ್ಞಿb ’ ಪುಸ್ತಕ ಸರಣಿಯನ್ನು ಒಮ್ಮೆ ಓದಿದರೆ ಒಳ್ಳೆಯದು. ಈ ಎಲ್ಲದರಿಂದ  ಶ್ರೀಗಳಿಗೆ ಹಿಂದೂ ಧರ್ಮದ ಸಾರ, ಅದರ ವ್ಯಾಪ್ತಿ, ಮಹತ್ವ ಮತ್ತು ಪ್ರಾಮುಖ್ಯದ ಬಗ್ಗೆ ತಿಳಿಯುತ್ತದೆ. ಸಾಣೇಹಳ್ಳಿ ಶ್ರೀಗಳಂಥ ತಥಾಕಥಿತ ವಿಚಾರವಾದಿಗಳು, ಪ್ರಗತಿಪರ ಚಿಂತಕರು ಇತಿಹಾಸದಲ್ಲಿ ಎಷ್ಟೋ ಜನ ಬಂದುಹೋಗಿದ್ದಾರೆ; ಆದರೆ ಜನರ ಹೃದಯದಲ್ಲಿ, ಅವರ ಕಾಯಕದಲ್ಲಿ, ಪೂಜಾಪದ್ಧತಿಯಲ್ಲಿ ಹಾಗೂ ವಿಧಿ-ವಿಧಾನಗಳಲ್ಲಿ ಹಾಸು ಹೊಕ್ಕಾಗಿರುವ ಹಿಂದೂ ಧರ್ಮದ ಬೇರುಗಳನ್ನು ಯಾರಿಂದಲೂ ಅಲುಗಾಡಿಸಲಾಗಿಲ್ಲ ಎಂಬುದನ್ನು ಮರೆಯಲಾಗದು.

ಈಗಲೂ ಕಾಲ ಮಿಂಚಿಲ್ಲ. ಶ್ರೀಗಳು ಮತ್ತಷ್ಟು ಓದಿನಲ್ಲಿ ತೊಡಗಿಸಿಕೊಂಡು ಜ್ಞಾನವನ್ನು ವಿಸ್ತರಿಸಿಕೊಳ್ಳುವುದರ ಕಡೆಗೆ, ಸಮಾಜವನ್ನು ಒಂದು ಗೂಡಿಸುವ ಮತ್ತು ಸಮಾಜಮುಖಿ ಕಾಯಕಗಳನ್ನು ಮಾಡುವ ಕಡೆಗೆ ಮನಸ್ಸು ಮಾಡಿದರೆ, ಅದರಿಂದ ಅವರಿಗೂ ಮತ್ತು ಸಮಾಜಕ್ಕೂ ಒಳಿತಾಗುತ್ತದೆ
ಎಂಬುದರಲ್ಲಿ ಸಂಶಯವಿಲ್ಲ. ‘ಸರ್ವೇ ಜನಾಃ ಸುಖಿನೋ ಭವಂತು’…. ‘ವಸುಧೈವ ಕುಟುಂಬಕಂ’… ‘ಜೈ ಹಿಂದ್’…. ‘ವಂದೇ ಮಾತರಂ’.

(ಲೇಖಕರು ಹವ್ಯಾಸಿ ಬರಹಗಾರರು)