Thursday, 9th January 2025

Sathyabodha Column: ಮನುಷ್ಯ ದೇಹವು ಯಂತ್ರವಲ್ಲ

ಕಳಕಳಿ

ಸತ್ಯಬೋಧ, ಬೆಂಗಳೂರು

ಪ್ರಸಿದ್ಧ ಐಟಿ ಉದ್ಯಮಿ ನಾರಾಯಣ ಮೂರ್ತಿಯವರು, “ನೌಕರರು ವಾರಕ್ಕೆ ಎಪ್ಪತ್ತು ಗಂಟೆ ದುಡಿಯುವುದು
ಅಗತ್ಯ” ಎಂದು ಹೇಳಿದ್ದು ಸಾಕಷ್ಟು ಸಂಚಲನೆ ಮೂಡಿಸಿದ್ದರ ಜತೆಗೆ ಹಲವರನ್ನು ಅಚ್ಚರಿಗೆ ದೂಡಿತು ಎನ್ನಲಡ್ಡಿ ಯಿಲ್ಲ. ನಿಜ, ಸುಖ- ಸಮೃದ್ಧಿಯನ್ನು ನಮ್ಮದಾಗಿಸಿಕೊಳ್ಳಲು, ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ದುಡಿಮೆ ಅತ್ಯಗತ್ಯ. ಆದರೆ, ದುಡಿಮೆಯೇ ಬದುಕಲ್ಲ. ಅದರಲ್ಲೂ ದುಡಿಮೆಗೆಂದು ಅತಿರೇಕದ ಅವಧಿಯನ್ನು ವಿನಿಯೋಗಿಸುವುದೂ ತರವಲ್ಲ.

ಸರಕಾರಿ ಕಚೇರಿಗಳಲ್ಲಿ ವಾರದಲ್ಲಿ 6 ದಿನ ಕರ್ತವ್ಯ, ಅದೂ ಬೆಳಗ್ಗೆ ೧೦ರಿಂದ ಸಾಯಂಕಾಲ ಐದು-ಐದೂವರೆ ವರೆಗೆ. ಮಧ್ಯೆ ಅರ್ಥಗಂಟೆ ವಿರಾಮ. ಕಾರ್ಖಾನೆಗಳಲ್ಲಿ ಎಂಟು ಗಂಟೆಯ ಪಾಳಿ. ಒಟ್ಟಾರೆಯಾಗಿ ಎಲ್ಲರ ಕೆಲಸ-ಕಾರ್ಯಗಳು ಸುಗಮ, ಹೀಗಾಗಿಯೇ ನೌಕರರು ಹೆಂಡತಿ-ಮಕ್ಕಳೊಂದಿಗೆ ಸಮಯ ವಿನಿಯೋಗಿಸಿ, ನೆಮ್ಮದಿಯ ಜೀವನ ಸಾಧ್ಯವಾಗಿ, ಆರೋಗ್ಯಕರ ಸಮಾಜ ಸೃಷ್ಟಿಯಾಗಿದೆ. ಆದರೆ ಐಟಿ-ಬಿಟಿ ವಲಯಗಳಲ್ಲಿ ದಿನಕ್ಕೆ ಕನಿಷ್ಠ 10
ಗಂಟೆ ಅವಽವರೆಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಸಂಪರ್ಕ/ಸೋಂಕಿನ ಭಯದಿಂದಾಗಿ ‘ಮನೆಯಿಂದ ಕೆಲಸ’ ಮತ್ತಷ್ಟು ತೀವ್ರವಾಗಿ ಜಾರಿಯಾಗಿ, ಉದ್ಯೋಗಿಗಳು ಸದಾ ಕಂಪ್ಯೂಟರ್ ಮುಂದೆ ಕೂರುವಂತಾಯಿತು.

ಈಗ ಕೋವಿಡ್ ಇಲ್ಲ, ಆದರೂ ಐಟಿ ಉದ್ಯಮಿಗಳು ನೌಕರರಿಂದ ಮನೆಯಿಂದಲೇ ದುಡಿಸಿಕೊಳ್ಳುವುದು ಮುಂದು ವರಿದಿದೆ, ಅದು ಕೂಡ ಸಮಯದ ನಿಗದಿಯಿಲ್ಲದೆ! ಹೀಗಾಗಿ, ‘ದೇಶದ ಅಭಿವೃದ್ಧಿಗೆ ವಾರಕ್ಕೆ 70 ಗಂಟೆ ಕರ್ತವ್ಯ ಅಗತ್ಯ’ ಎಂಬ ಚಿಂತನೆ ‘ಒಬ್ಬರ ವೇತನ ಕೊಟ್ಟು ಇಬ್ಬರ ಕೆಲಸ ತೆಗೆಯುವ’ ವ್ಯವಹಾರವಾಗಿ ಉದ್ಯಮಿ ಗಳಿಗೆ ಮಾತ್ರ ಲಾಭದಾಯಕವಾಗಿದೆ. ಆದರೆ ಉದ್ಯೋಗಿಗಳಿಗೆ? ‘ಪ್ರಧಾನಿ ಮೋದಿಯವರು ವಾರಕ್ಕೆ 100 ಗಂಟೆ ದುಡಿಯುತ್ತಾರೆ’ ಎನ್ನುವ ಉದಾಹರಣೆಯನ್ನು ಕೊಡುವ ಉದ್ಯಮಿಗಳಿದ್ದಾರೆ; ಆದರೆ ಹಾಗೆ ‘ಹಗಲು-ರಾತ್ರಿ’ ಎನ್ನದೆ ದುಡಿಯುವಂತೆ ಮೋದಿಯವರಿಗೆ ಯಾರಾದರೂ ಹೇಳಿದ್ದಾರೆಯೇ? ಎನ್ನುವ ಪ್ರಶ್ನೆ ಮುಖ್ಯ.

ಒಂದು ವೃತ್ತಿಯು ‘ಪ್ರವೃತ್ತಿ’ (ಸ್ವ-ಇಚ್ಛೆ) ಆದರೆ ಮಾತ್ರವೇ ಹಗಲಿರುಳು ದುಡಿದರೂ ಶ್ರಮವಾಗುವುದಿಲ್ಲ. ವೇತ
ನಕ್ಕೋ, ಬೇರೆಯವರ ಆದೇಶದಂತೆಯೋ ದುಡಿಯುವುದೆಂದರೆ ಕೇವಲ 8 ಗಂಟೆ ಮಾತ್ರ ಸಾಧ್ಯ. ಈ ಮಿತಿಯನ್ನು ಮೀರಿದ ಕೆಲಸವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ವೈದ್ಯಶಾಸ್ತ್ರವೇ ದೃಢಪಡಿಸಿದೆ.

ಜಪಾನ್, ಜರ್ಮನಿ ದೇಶದವರು ಹಗಲಿರುಳೂ ದುಡಿದಿದ್ದಾರೆ; ಕಾರಣ, ದ್ವಿತೀಯ ಮಹಾಯುದ್ಧದಿಂದ ಹಾಳಾದ ದೇಶವನ್ನು ಮರುನಿರ್ಮಾಣ ಮಾಡಬೇಕಿತ್ತು, ಅದಕ್ಕಾಗಿ ಅಂಥ ದುಡಿಮೆ ಅನಿವಾರ್ಯವಾಗಿತ್ತು. ಆದರೆ
ಭಾರತ ದಲ್ಲಿ ಅಂಥ ಸ್ಥಿತಿಯಿಲ್ಲ. ನೌಕರರಿಂದ ದುಪ್ಪಟ್ಟು ದುಡಿಸಿಕೊಳ್ಳುವುದು ಶೋಷಣೆ. ಅದೇ ಕೆಲಸವನ್ನು ಇಬ್ಬರಿಗೆ ಹಂಚುವುದು ಮಾನವೀಯತೆ. ಇದು ನಿರುದ್ಯೋಗ ಸಮಸ್ಯೆಗೆ ಪರಿಹಾರವೂ ಹೌದು. ಜೀತದಾಳು ಪದ್ಧತಿ
ತಪ್ಪಿಸಲು ಸರಕಾರವು ಅದನ್ನು ‘ಅಪರಾಧ’ ಎಂದು ಪರಿಗಣಿಸಿದಂತೆ, ದಿನಕ್ಕೆ 10-15 ಗಂಟೆ ದುಡಿಸಿಕೊಳ್ಳುವ ‘ಕೆಲಸದ’ ಹಣೆಪಟ್ಟಿಯ ಶೋಷಣೆಗೂ ಕಡಿವಾಣ ಹಾಕಬೇಕಿದೆ.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ

Leave a Reply

Your email address will not be published. Required fields are marked *