Wednesday, 27th November 2024

Shaji K V Column: ಸಹಕಾರಿ ವಲಯದ ಪುನರುಜ್ಜೀವನದ ಪರ್ವಕಾಲ

ಸಹಕಾರಹಸ್ತ

ಶಾಜಿ ಕೆ.ವಿ.

ಅಂತಾರಾಷ್ಟ್ರೀಯ ಸಹಕಾರ ವರ್ಷ’ವಾಗಿ 2025ರ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವ ಸಜ್ಜಾಗುತ್ತಿರುವ ಹೊತ್ತಿನ ಲ್ಲಿಯೇ, ಭಾರತದ ಸಹಕಾರಿ ಕ್ಷೇತ್ರವು ರಾಷ್ಟ್ರದಾದ್ಯಂತ ಹರಡಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪ್ಯಾಕ್ಸ್) ಮೂಲಕ ಹೊಸ, ಸದೃಢ ಮತ್ತು ವೇಗದ ಸಂರಚನೆಯೊಂದಿಗೆ ತನ್ನನ್ನು ತಾನು ಭದ್ರವಾದ ನೆಲೆಯಲ್ಲಿ ಕಂಡು ಕೊಳ್ಳುತ್ತಿದೆ. ಆರ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳೊಂದಿಗೆ ಸಜ್ಜುಗೊಂಡಿರುವ ಈ ‘ಪ್ಯಾಕ್ಸ್’ಗಳು, ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹಕಾರದಿಂದಲೇ ‘ಸಮೃದ್ಧಿ’ಯ ದೂರದೃಷ್ಟಿಯನ್ನು ಗ್ರಾಮೀಣ ಕೃಷಿ ಭಾರತದಲ್ಲಿ ವಾಸ್ತವಿಕವಾಗಿ ಸಾಕಾರಗೊಳಿಸಲು ಸಿದ್ಧವಾಗಿವೆ.

ಭಾರತದ ಸಹಕಾರಿ ಕ್ಷೇತ್ರವು ಭವ್ಯ ಇತಿಹಾಸವನ್ನು ಹೊಂದಿದ್ದರೂ, ಬಿಕ್ಕಟ್ಟಿನ ಸಮಯದಲ್ಲಿ ಸರಕಾರದ ಸಾಕಷ್ಟು
ಬೆಂಬಲದ ಕೊರತೆ ಮತ್ತು ಅಗತ್ಯ ಸುಧಾರಣೆಗಳ ಅನುಪಸ್ಥಿತಿಯಿಂದಾಗಿ ಪೆಟ್ಟು ತಿಂದಿದೆ. ಆದರೂ ಪ್ರಧಾನಿ
ಮೋದಿಯವರು ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಸಹಕಾರ ಸಚಿವಾಲಯವನ್ನು ಸ್ಥಾಪಿಸಿ, ತಮ್ಮ ವಿಶ್ವಾ ಸಾರ್ಹ ಸಹವರ್ತಿ ಅಮಿತ್ ಶಾ ಅವರಿಗೆ ಅದರ ಚುಕ್ಕಾಣಿ ವಹಿಸಿದ ನಂತರ ಬದಲಾವಣೆಯ ಗಾಳಿ ಬೀಸಲಾ ರಂಭಿಸಿತು.

ಇದನ್ನೂ ಓದಿ: Vishweshwar Bhat Column: ಲಾಂಫೇಳಲೋಉಳಲೋಗುಲೊಳುಲೆಪಲುಳೊಳ

ಅಮಿತ್ ಶಾ ಅವರು ಗುಜರಾತ್‌ನಲ್ಲಿ ನಡೆದ ಸಹಕಾರ ಚಳವಳಿಗೆ ಹೊಸರೂಪ ನೀಡುವ ಸುಧಾರಣೆಗಳನ್ನು
ಕೈಗೊಂಡು ಮುಂಚೂಣಿಗೆ ತಂದು ಹೆಸರುವಾಸಿಯಾಗಿದ್ದಾರೆ. ಸಚಿವಾಲಯದ ಅಧಿಕಾರ ವಹಿಸಿಕೊಂಡ ನಂತರ
ರಾಷ್ಟ್ರೀಯ ಸಹಕಾರಿ ಚಿತ್ರಣದಲ್ಲಿ ಮಹತ್ವದ ಬದಲಾವಣೆಗಳನ್ನು ತಂದು, ಇಡಿ ವಿಶ್ವವೇ ಆ ವಲಯದತ್ತ ನೋಡುವಂತೆ ಮಾಡಿದ್ದಾರೆ. ದೇಶದ ಭವಿಷ್ಯ ರೂಪಿಸುವಲ್ಲಿ ಸಹಕಾರಿ ವಲಯದ ಸಾಮರ್ಥ್ಯವೇನೆಂಬುದು ತಡವಾಗಿಯಾದರೂ ಗಮನಾರ್ಹವಾಗಿ ಅರಿವಾಗಿದೆ. ಹಣಕಾಸು ವಲಯದ ಇತ್ತೀಚಿನ ಬಜೆಟ್ ಸಮಾಲೋಚನೆ ಗಳಲ್ಲಿ, ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟವು (ಎನ್‌ಸಿಯುಐ) ಪ್ರಮುಖ ಕ್ಷೇತ್ರಗಳಲ್ಲಿ ಸೇವಾ ವಿತರಣೆ ಹೆಚ್ಚಿಸಲು ಸಹಕಾರಿ ವಲಯದ ವಿಶಾಲ ಜಾಲವನ್ನು ನಿಯಂತ್ರಿಸಲು ಶಿಫಾರಸು ಮಾಡಿದೆ.

ಅಮಿತ್ ಶಾ ಅವರು ಒಬ್ಬ ಅನುಭವವಿಯಾಗಿ, ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗುವ ಸಮಸ್ಯೆಗಳ ಬಗ್ಗೆ
ಚೆನ್ನಾಗಿ ಅರಿತಿದ್ದಾರೆ. ‘ಪ್ಯಾಕ್ಸ್’ಗಳಲ್ಲಿ ಅವರು ನಿರ್ವಹಿಸಿದ ಪ್ರಮುಖ ಕಾರ್ಯವೆಂದರೆ, ಉಪನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದ್ದು. ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸಲು ಮಾದರಿ ಉಪಕಾನೂನುಗಳನ್ಜು ತರುವ ಮೂಲಕ ‘ಪ್ಯಾಕ್ಸ್’ಗಳನ್ನು ಬಹೂಪಯೋಗಿ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅವುಗಳ ವ್ಯವಹಾರವನ್ನು ೨೫ಕ್ಕೂ ಅಧಿಕ ವ್ಯಾಪಾರ ಚಟುವಟಿಕೆಗಳಿಗೆ ವಿಸ್ತರಣೆ ಮಾಡಲು ಇದು ಅವರಿಗೆ ಸಹಾಯ ಮಾಡಿದೆ.

ಈಗ ಅವು ಸಾಮಾನ್ಯ ಸೇವಾಕೇಂದ್ರಗಳಾಗಿ (ಸಿಎಸ್‌ಸಿ) ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾರತದಲ್ಲಿ ಬ್ಯಾಂಕಿಂಗ್, ವಿಮೆ, ಆಧಾರ್ ನೋಂದಣಿ/ಪರಿಷ್ಕರಣೆ, ಆರೋಗ್ಯ ಸೇವೆಗಳು, ಪ್ಯಾನ್ ಕಾರ್ಡ್ ಮತ್ತು ಐಆರ್‌ಟಿಸಿ/ಬಸ್/ವಿಮಾನ ಟಿಕೆಟ್ ಗಳಂಥ ೩೦೦ಕ್ಕೂ ಅಧಿಕ ಇ-ಸೇವೆಗಳನ್ನು ಒದಗಿಸುತ್ತಿವೆ. ಈವರೆಗೆ 35000ಕ್ಕೂ ಅಧಿಕ ‘ಪ್ಯಾಕ್ಸ್’ಗಳು ಗ್ರಾಮೀಣ ನಾಗರಿಕರಿಗೆ ಸಿಎಸ್‌ಸಿ ಸೇವೆಗಳನ್ನು ಒದಗಿಸಲು ಆರಂಭಿಸಿವೆ.

ಅಲ್ಲದೆ ಅವುಗಳನ್ನು ಈಗ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು, ಜಲಸಮಿತಿಗಳು, ಎಲ್‌ಪಿಜಿ ವಿತರಕರು,
ಚಿಲ್ಲರೆ ಪೆಟ್ರೋಲ್/ಡೀಸೆಲ್ ಮಳಿಗೆಗಳು, ರೈತ ಉತ್ಪಾದಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ ಸಕ್ರಿಯಗೊಳಿಸ ಲಾಗುತ್ತಿದೆ. ಗ್ರಾಮಗಳಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಜೆನರಿಕ್ ಔಷಧಿಗಳ ವಿತರಣೆಗಾಗಿ ‘ಪ್ಯಾಕ್ಸ್’ ಈಗ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಇದರಿಂದಾಗಿ ಗ್ರಾಮೀಣ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವ ಜತೆಗೆ ಮತ್ತೊಂದು ಆದಾಯದ
ಮೂಲವನ್ನು ಒದಗಿಸುತ್ತವೆ. ಈ ಎಲ್ಲಾ ಪ್ರಯತ್ನಗಳು ‘ಪ್ಯಾಕ್ಸ್’ಗಳ ಆದಾಯವನ್ನು ಹೆಚ್ಚಿಸುತ್ತವೆ ಮತ್ತು ಅವು ಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸುತ್ತವೆ. ದಶಕಗಳ ಕಾಲ ದುರಾಡಳಿತದ ನಿದರ್ಶನಗಳಿಂದ ತತ್ತರಿಸಿ ಹೋಗಿದ್ದ ವಲಯದಲ್ಲಿ ಮತ್ತೆ ಜನರ ವಿಶ್ವಾಸವನ್ನು ಗಳಿಸುವುದು ಸಚಿವಾಲಯದ ಮುಂದಿನ ಮಹತ್ವದ ಕಾರ್ಯವಾಗಿದೆ. ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು 63000 ‘ಪ್ಯಾಕ್ಸ್’ಗಳ ಗಣಕೀಕರಣವು ನಡೆಯುತ್ತಿದೆ.

ಈವರೆಗೆ 23 ಸಾವಿರಕ್ಕೂ ಅಧಿಕ ‘ಪ್ಯಾಕ್ಸ್’ಗಳನ್ನು ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ಇಆರ್‌ಪಿ) ಸಾಫ್ಟ್‌ ವೇರ್
ನೊಂದಿಗೆ ಸಂಯೋಜಿಸಲಾಗಿದ್ದು, ‘ಪ್ಯಾಕ್ಸ್’ಗಳ ಗಣಕೀಕರಣವು ಅವುಗಳನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾ
ಭಿವೃದ್ಧಿ ಬ್ಯಾಂಕ್ (ನಬಾರ್ಡ್)ನೊಂದಿಗೆ ನೇರವಾಗಿ ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯ
ಲೆಕ್ಕ ವ್ಯವಸ್ಥೆ (ಕಾಮನ್ ಅಕೌಂಟಿಂಗ್ ಸಿಸ್ಟಂ- ಸಿಎಎಸ್) ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆ (ಮ್ಯಾನೇಜ್‌ ಮೆಂಟ್ ಇನರ್ಮೇಷನ್ ಸಿಸ್ಟಂ- ಎಂಐಎಸ್) ಕಾರ್ಯಾಚರಣೆಗಳ ಏಕರೂಪತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ‘ಪ್ಯಾಕ್ ’ಗಳ ಕಾರ್ಯಾಚರಣೆಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ವೃದ್ಧಿಸುತ್ತದೆ.

ಸಹಕಾರಿ ಕ್ಷೇತ್ರವು ಹೊಸ ಆತ್ಮವಿಶ್ವಾಸ ಮತ್ತು ಛಲದಿಂದ ಈಗ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದ್ದು,
ಹೆಚ್ಚು ಪ್ರಯೋಜನಕಾರಿಯಾಗಿದೆ. ಸಹಕಾರಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುವಂತೆ ಸಹಕಾರಿ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ. ಅವರ ಪ್ರಕಾರ, ಸಹಕಾರಿಗಳ ನಡುವಿನ ಸಹಕಾರವು ಸದೃಢ ಆರ್ಥಿಕ ತತ್ವವಾಗಿದ್ದು, ಇದು ಬಲವಾದ ಸಹಕಾರಿ ಕ್ಷೇತ್ರವನ್ನು ನಿರ್ಮಿಸಲು ಪ್ರಾಥಮಿಕ ಅಗತ್ಯವಾಗಿದೆ.

2024ರಲ್ಲಿ ಸಹಕಾರ ಸಚಿವಾಲಯದ ಹೊಣೆಗಾರಿಕೆಯನ್ನು ಎರಡನೇ ಬಾರಿಗೆ ವಹಿಸಿಕೊಂಡ ಅಮಿತ್ ಶಾ, ನೀತಿಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಕ್ಷೇತ್ರವನ್ನು ಬಲಪಡಿಸಲು ಸಂಕಲ್ಪ ಮಾಡಿದ್ದಾರೆ. ತಮ್ಮ ಹಿಂದಿನ ಅವಧಿಯಲ್ಲಿ ನೀತಿಯ ಚೌಕಟ್ಟನ್ನು ರಚಿಸುವ ಕಡೆಗೆ ಗಮನಹರಿಸಲಾಗಿತ್ತು ಮತ್ತು ಸದ್ಯದ ಅಧಿಕಾರಾವಧಿಯಲ್ಲಿ ಈ ನೀತಿಗಳನ್ನು ತಳಮಟ್ಟಕ್ಕೆ ಕೊಂಡೊಯ್ಯಿವುವುದು ತಮ್ಮ ಆದ್ಯತೆ ಯಾಗಿದೆ ಎಂದು ಅವರು ಹೇಳಿದ್ದಾರೆ.

ಸಹಕಾರ ಸಚಿವಾಲಯವು ಕೈಗೊಂಡ ಪ್ರಮುಖ ಉಪಕ್ರಮಗಳಲ್ಲಿ, ಸಹಕಾರಿ ವಲಯದಲ್ಲಿ ‘ವಿಶ್ವದ ಅತಿದೊಡ್ಡ
ವಿಕೇಂದ್ರೀಕೃತ ಧಾನ್ಯ ಸಂಗ್ರಹ ಕಾರ್ಯಕ್ರಮ’ವನ್ನು ಆರಂಭಿಸಿರುವುದೂ ಒಂದು. ಇದು ‘ಪ್ಯಾಕ್ಸ್’ ಮಟ್ಟದಲ್ಲಿ
ಧಾನ್ಯ ಸಂಗ್ರಹಣೆಗಾಗಿ ವಿಕೇಂದ್ರೀಕೃತ ಗೋದಾಮುಗಳು, ನೇಮಕ ಕೇಂದ್ರಗಳು, ಪ್ರಾಥಮಿಕ ಸಂಸ್ಕರಣಾ ಘಟಕಗಳು
ಮತ್ತು ಇತರ ಕೃಷಿ ಮೂಲಸೌಕರ್ಯಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಸರಕಾರದ ವಿವಿಧ ಯೋಜನೆ‌ ಗಳಾದ ಕೃಷಿ ಮೂಲಸೌಕರ್ಯ ನಿಧಿ (ಐಎಎಫ್), ಕೃಷಿ ಮಾರುಕಟ್ಟೆ ಮೂಲಸೌಕರ್ಯ (ಎಎಂಐ), ಕೃಷಿ ಯಾಂತ್ರೀ ಕರಣದ ಉಪಮಿಷನ್ (ಎಸ್‌ಎಂಎಎಂ), ಪ್ರಧಾನ ಮಂತ್ರಿಗಳ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಸಾಂಸ್ಥೀ ಕರಣ (ಪಿಎಂಎಫ್‌ ಎಂಎಫ್) ಇತ್ಯಾದಿಗಳನ್ನು ವಿಲೀನಗೊಳಿಸಿ, ರಾಷ್ಟ್ರಕ್ಕೆ ಸದೃಢವಾದ ಶೇಖರಣಾ ಸಾಮರ್ಥ್ಯದ ಯೋಜನೆ‌ಯನ್ನು ಒದಗಿಸಲು ಇದು ಪ್ರಯತ್ನಿಸುತ್ತದೆ.

ಇದು ಆಹಾರ ಧಾನ್ಯಗಳು ವ್ಯರ್ಥವಾಗುವುದನ್ನು ತಪ್ಪಿಸುತ್ತದೆ ಮತ್ತು ಸಾಗಣೆ ವೆಚ್ಚವನ್ನು ತಗ್ಗಿಸುತ್ತದೆ. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಹಾಗೂ ‘ಪ್ಯಾಕ್ಸ್’ ಮಟ್ಟ ದಲ್ಲಿಯೇ ವಿವಿಧ ಕೃಷಿ ಅಗತ್ಯಗಳನ್ನು ಪೂರೈಸಲಾಗುತ್ತದೆ. ‘ಪ್ಯಾಕ್ಸ್’ಗಳು ಗ್ರಾಮೀಣಾಭಿವೃದ್ಧಿಯ ಬೆನ್ನೆಲು
ಬಾಗಿರುವುದರಿಂದ ಅವುಗಳ ಏಕೀಕರಣ ಮತ್ತು ಪುನರುಜ್ಜೀವ ಶೀಘ್ರದಲ್ಲಿಯೇ ಗ್ರಾಮೀಣ ಆರ್ಥಿಕತೆಯ ಪ್ರಗತಿಗೆ
ಶಕ್ತಿ ತುಂಬುತ್ತವೆ. ‘ಪ್ಯಾಕ್ಸ್’ ಸಂಬಂಽತ ಚಟುವಟಿಕೆಗಳು ಹೆಚ್ಚಾಗುವುದರಿಂದ ಋತುಮಾನಗಳಲ್ಲಿ ಆಗುತ್ತಿದ್ದ ನಿರು
ದ್ಯೋಗ ನಿವಾರಣೆಯಾಗುವ ಸಾಧ್ಯತೆಯಿದೆ.

ಇದರಿಂದಾಗಿ, 1 ಲಕ್ಷ ‘ಪ್ಯಾಕ್ಸ್’ಗಳ ಜತೆ ನೇರವಾಗಿ ಸಂಬಂಧ ಹೊಂದಿರುವ 13 ಕೋಟಿ ರೈತರು ಲಾಭ ಪಡೆಯ ಲಿದ್ದಾರೆ ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಆದಾಯ ಸೃಷ್ಟಿಯಾಗಲಿವೆ.

(ಲೇಖಕರು ನಬಾರ್ಡ್‌ನ ಅಧ್ಯಕ್ಷರು)