Tuesday, 24th December 2024

Shashikumar K Column: ಭಾರತ ಜ್ಞಾನದ ಹಬ್‌ ಆಗಲಿದೆಯೇ ?

ಅಭಿಮತ

ಶಶಿಕುಮಾರ್‌ ಕೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 2047ರ ವೇಳೆಗೆ 100 ವರ್ಷಗಳಾಗುತ್ತವೆ. ಈ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬುದು ಕೇಂದ್ರ ಸರಕಾರದ ಕನಸು. 2047ರ ವೇಳೆಗೆ ವಿಕಸಿತ ಭಾರತದ ಕನಸು ನನಸಾಗ ಬೇಕಾದರೆ ಅದಕ್ಕೆ ದೇಶದಲ್ಲಿ ಸಂಶೋಧನೆಗಳ ಅಗತ್ಯವಿದೆ. ಭಾರತ ಒಂದು ನಾಲೆಡ್ಜ್ ಎಕಾನಮಿಯಾಗಿ ಮುಂದೆ ಸಾಗಬೇಕು. ಇದೆಲ್ಲ ಆಗಬೇಕೆಂದರೆ ಮಾಹಿತಿಯು ತುಂಬಾ ಅಗತ್ಯವಾಗಿ ಬೇಕಾಗಿದೆ ಜೊತೆಗೆ ರೀಸರ್ಚ್ ಪೇಪರ್ಸ್‌ಗಳು ಸಹ ತುಂಬಾ- ತುಂಬಾ ಅಗತ್ಯವಾಗಿವೆ.

2020ರಲ್ಲಿ ಕೇಂದ್ರ ಸರಕಾರದ science and technology and innovation policy(STIP) ಯ draft-5 ನಮಗೆ one
Nation one subscription ಇರಬೇಕೆಂದು ಹೇಳಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಜವಾನ್ – ಜೈ ಕಿಸಾನ್ ಎಂದು ಹೇಳಿದರೆ, ಅಟಲ್ ಬಿಹಾರಿ ವಾಜಪೇಯಿರವರು ಈ ವಾಕ್ಯಕ್ಕೆ ವಿಜ್ಞಾನ್ ಸೇರಿಸಿದರೆ, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರು ಈ ಘೋಷಣೆಗೆ ಅನುಸಂಧಾನ್ ಸೇರಿಸಿದ್ದಾರೆ. ಅನು ಸಂಧಾನ್ ಎಂದರೆ ಇನ್ನೋವೇಶ ಎಂದರ್ಥ. ಇನ್ನೋವೇಶಗಳು ಭಾರತದಲ್ಲಿ ಹೆಚ್ಚಾಗಬೇಕಾದರೆ ನಮ್ಮ ಸಂಶೋಧಕರಿಗೆ ಉತ್ತಮ ಮಾರ್ಗ ಅಥವಾ ಹಾದಿ ಅವಶ್ಯಕವಾಗಿದೆ.

ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗುವ ಅತ್ಯುನ್ನತ ಮಟ್ಟದ ಜರ್ನಲ್ಸ್, ರಿಸರ್ಚ್ ಪೇಪರ್ಸ್, ಆರ್ಟಿಕಲ್ಸ್‌ ಗಳನ್ನು ಭಾರತೀಯ ಸಂಶೋಧಕರು ನೋಡುವಂತಾಗಬೇಕು ಹಾಗೂ ಕೊಳ್ಳುವಂತಾಗಬೇಕು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಳ್ಳುವ ಜರ್ನಲ್ಸ್ ಮತ್ತು ಆರ್ಟಿಕಲ್ ಗಳು ತುಂಬಾ ದುಬಾರಿ‌ ಯಾಗಿರುತ್ತವೆ. ‌

ಮುಖ್ಯವಾಗಿ Elsevier, spring nature, wiley& black well, Taylor and Francis, Oxford University Press ಇವರು ಪ್ರಕಟಿಸುವ ಜರ್ನಲ್ ಗಳು ತುಂಬಾ ದುಬಾರಿಯಾಗಿರುತ್ತವೆ. ಕೆಲವು ಜರ್ನಲ್ ಗಳು 3000-4000 ಡಾಲರ್‌ ಗಳಾಗಿರುತ್ತವೆ. ಇದರಿಂದ ಸಂಶೋಧಕರು, ವಿದ್ಯಾರ್ಥಿಗಳು, ಸ್ಕಾಲರ್‌ಗಳು ಇವುಗಳನ್ನು ಸುಲಭವಾಗಿ ಪಡೆದು ಕೊಳ್ಳಲು ಸಾಧ್ಯವಿಲ್ಲ. ಇಂತಹ ಜರ್ನಲ್‌ಗಳನ್ನು ಸರಕಾರವೇ ನೀಡುವಂತಾದರೆ ವಿದ್ಯಾರ್ಥಿಗಳಲ್ಲಿ, ಸಂಶೋಧಕ ರಲ್ಲಿ ಸಂಶೋಧನಾ ಜ್ಞಾನ ಮತ್ತಷ್ಟು ವೃದ್ಧಿಯಾಗುತ್ತದೆ.

ಇಂತಹ ಉದ್ದೇಶದಿಂದಲೇ ಅನುಸಂಧಾನ್ ರೀಸರ್ಚ್ ಫೌಂಡೇಶನ್ ಅಡಿಯಲ್ಲಿ ಯುಜಿಸಿಯ inflibnet ಅಡಿಯಲ್ಲಿ ದೇಶದಲ್ಲಿ ಸರಕಾರಿ ಸಂಶೋಧನಾ ಸಂಸ್ಥೆಗಳ ಅಥವಾ ಆರ್ ಅಂಡ್ ಡಿ ಇವೆಲ್ಲವುಗಳನ್ನು ಅನು ಸಂಧಾನ ಮಾಡಿ ಮ್ಯಾಗಝೀ ಮತ್ತು ಜರ್ನಲ್‌ಗಳಿಗಾಗಿ ಸರಕಾರವೇ ಫಂಡ್ ಬಿಡುಗಡೆ ಮಾಡಲಿದೆ.

ಮುಂಬರುವ ಮೂರು ವರ್ಷಗಳಿಗಾಗಿ 6000 ಕೋಟಿ ರುಪಾಯಿಗಳ ಫಂಡ್‌ನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದರ ಪ್ರಮುಖವಾದ ಪಬ್ಲಿಷರ್‌ಗಳು ಬಿಡುಗಡೆಗೊಳಿಸುವ ಸರಿಸುಮಾರು 13000 ಇ- ಜರ್ನಲ್ಸ್ ೧೩ ಪಬ್ಲಿಷರ್‌ಗಳಿಂದ ಸರಕಾರವೇ ಜರ್ನಲ್‌ಗಳನ್ನು ಕೊಳ್ಳಲಿದೆ. ಇದರಿಂದ 1.8 ಕೋಟಿ ಮಂದಿ ಭಾರತೀಯ ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿದೆ.

ಪ್ರಮುಖವಾಗಿ ಬೆಂಗಳೂರು,ಮುಂಬೈ, ಚೆನ್ನೈನಲ್ಲಿ ಇರುವಂತಹ ವಿದ್ಯಾರ್ಥಿಗಳಿಗಲ್ಲದೆ ಟಯರ್-‌2, ಟಯರ್-3 ನಗರಗಳಲ್ಲಿ ಇರುವ ಸಂಶೋಧನಾ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ. ಟಾಪ್ ಇಂಟರ್ನ್ಯಾ ಷನಲ್ ಜರ್ನಲ್ಸ್ ಇವರ ಕೈಗೆ ಉಚಿತವಾಗಿ ಎಟುಕಲಿವೆ. ಈ ಎಲ್ಲ ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಸ್ ಗಳನ್ನು inflibnet ಮುಖಾಂತರ ಸರಕಾರವೇ ವಿದ್ಯಾ ರ್ಥಿಗಳಿಗೆ ಪೂರೈಸಲಿದೆ. ಈ ಸೌಲಭ್ಯ ಜನವರಿ, 1 2025 ರಿಂದ ಆರಂಭ ವಾಗಲಿದೆ. ಈ ಜರ್ನಲ್‌ಗಳ ಪುಸ್ತಕಗಳನ್ನು ಪಡೆಯಲು ಸಾಧ್ಯವಿಲ್ಲ, ಕೇವಲ ಆನ್ಲೈನ್ ಮುಖಾಂತರ ಮಾತ್ರ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

ಈ ಯೋಜನೆಯಿಂದ ಸಂಶೋಧಕರಿಗೆ ಜಗತ್ತಿನ ಯಾವ ಜರ್ನಲ್ಸ್ ಮತ್ತು ಆರ್ಟಿಕಲ್ಸ್ ಬೇಕಾದರೂ ಪಡೆಯಲು
ಸಾಧ್ಯವಾಗುತ್ತದೆ. ಈ ಯೋಜನೆಗೆ ವೆಚ್ಚವಾಗುವ ಒಟ್ಟು‌ 6000 ಕೋಟಿ ರುಪಾಯಿಗಳ ಮೊತ್ತವನ್ನು ಕೇಂದ್ರ
ಸರಕಾರವೇ ಭರಿಸಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಡಿಯಲ್ಲಿ ಬರುವಂತಹ 6300 ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಸೌಲಭ್ಯದ ಲಾಭ ಪಡೆಯಲಿವೆ.

ಯಾವ ದೇಶವೇ ಆಗಲಿ ಮುಂದೆ ಸಾಗಬೇಕಾದರೆ ಸಂಶೋಧನೆಗಳು ತುಂಬಾ ಅಗತ್ಯವಾಗಿವೆ. ಆದರೆ ಭಾರತದಲ್ಲಿ ಮಾತ್ರ ರೀಸರ್ಚ್ ಫಂಡಿಂಗ್ ತುಂಬಾ ಕಡಿಮೆ ಇದೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ನೀಡಿದ ಮಾಹಿತಿ ಪ್ರಕಾರ ದೇಶದ ಜಿಡಿಪಿಯ ಶೇಕಡ 0.7 ರಷ್ಟು ಮೊತ್ತವನ್ನು ಮಾತ್ರ ನಾವು ಸಂಶೋಧನೆಗಳಿಗೆ ಬಳಸುತ್ತಿದ್ದೇವೆ. ಆದರೆ ವಿದೇಶಗಳಲ್ಲಿ ಈ ಪ್ರಮಾಣ ಜಾಸ್ತಿ ಇದೆ. ಚೀನಾ ಶೇಕಡ 2.4 ರಷ್ಟು, ಅಮೆರಿಕ ಶೇಕಡಾ 3.5ರಷ್ಟು, ಇಸ್ರೇಲ್ ಶೇಕಡ 5.4ರಷ್ಟು ತನ್ನ ಜಿಡಿಪಿಯ ಮೊತ್ತವನ್ನು ಸಂಶೋಧನೆಗಳಿಗೆ ಖರ್ಚು ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಭಾರತವೂ ಸಹ ಸಂಶೋಧನೆಗಳ ಹಾದಿ ಸುಲಭಗೊಳಿಸಲು ಮತ್ತು ಹೊಸ-ಹೊಸ ಸಂಶೋಧನೆಗಳನ್ನು ಬೆಳೆಸಲು ಮುಂದಾಗಿರುವುದು ಬಹುದೊಡ್ಡ ವಿಷಯವೆಂದೇ ಹೇಳಬಹುದು. ಇದರ ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸುಧಾರಣೆಗಳು ಸಹ ತುಂಬಾ ಅವಶ್ಯಕ. ಟೀಚಿಂಗ್ ಸ್ಟೈಲ್ ನಲ್ಲಿ ಬದಲಾವಣೆಗಳು ಬೇಕಾಗಿವೆ. ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ಸ್‌ ಗಳಲ್ಲಿ ತಮ್ಮ ಸಂಶೋಧನಾ ಆರ್ಟಿಕಲ್ಸ್‌ಗಳನ್ನು ಹಾಕಲು ಅವರಿಗೆ ಸಂಶೋಧಕರು ಹಣ ನೀಡಬೇಕಾಗಿತ್ತು. ತಮ್ಮ ಜರ್ನಲ್ಸ್ ಗಳಲ್ಲಿ ಪ್ರಕಟವಾದ ಆರ್ಟಿಕಲ್ಸ್‌ ಗಳನ್ನು ಓದಬೇಕಾದರೂ ಸಹ ಸಂಶೋಧನಾ ವಿದ್ಯಾರ್ಥಿಗಳು ಹಣವನ್ನು ಪಾವತಿಸಬೇಕಾಗಿತ್ತು.

ಹೀಗೆ ಎರಡು ಕಡೆಯಿಂದಲೂ ಸಹ ಅವರಿಗೆ ಲಾಭವಿದೆ. ಈಗ ಕೇಂದ್ರಸರಕಾರದ ಯೋಜನೆಯಿಂದ ಅಂತಾ ರಾಷ್ಟ್ರೀಯ ಮಟ್ಟದ ಜರ್ನಲ್ಸಗಳಲ್ಲಿ ಪ್ರಕಟವಾದ ಅಂಕಣಗಳನ್ನು, ಲೇಖನಗಳನ್ನು ಓದಲು ಸಂಶೋಧನಾ ವಿದ್ಯಾರ್ಥಿಗಳು ಹಣವನ್ನು ಪಾವತಿಸಬೇಕಾಗಿಲ್ಲ.

ಒಎನ್‌ಒಎಸ್ ಪ್ರಮುಖ ಲಕ್ಷಣಗಳು

1. ಸಂಸ್ಥೆಗಳಾದ್ಯಂತ ಏಕೀಕೃತ ಪ್ರವೇಶ: ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ರಾಷ್ಟ್ರೀಯ
ಪ್ರಾಮುಖ್ಯತೆಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ವಿವಿಧ ಶೈಕ್ಷಣಿಕ ವಿಭಾಗ ಗಳನ್ನು ವ್ಯಾಪಿಸಿರುವ ನಿಯತಕಾಲಿಕಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಕೇಂದ್ರ ಸರಕಾರದ ಅಡಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಸಹ ಸೇರಿಸಲಾಗುವುದು, ರಾಷ್ಟ್ರವ್ಯಾಪಿ ಸುಮಾರು 6300 ಸಂಸ್ಥೆಗಳನ್ನು ಒಳಗೊಂಡಿದೆ.

2.ರಾಷ್ಟ್ರೀಯ ಸಬ್ಸ್ಕ್ರಿಪ್ಶನ್ ಮಾದರಿ: ಈ ಯೋಜನೆಯು ಎಲ್ಸೆವಿಯರ್ ಸೈನ್ಸ್ ಡೈರೆಕ್ಟ್, ಸ್ಪ್ರಿಂಗರ್ ನೇಚರ್, ವೈಲಿ
ಬ್ಲ್ಯಾಕ್ವೆಲ್ ಪಬ್ಲಿಷಿಂಗ್ ಮತ್ತು ಇತರ ಪ್ರಮುಖ ಅಂತಾರಾಷ್ಟ್ರೀಯ ಪ್ರಕಾಶಕರಿಗೆ INFLIBNET ನಿಂದ ಸಂಯೋಜಿಸ ಲ್ಪಟ್ಟ ಕೇಂದ್ರ ಪಾವತಿಗಳನ್ನು ಒಳಗೊಂಡಿರುತ್ತದೆ. ONOS ಅಡಿಯಲ್ಲಿ ಒಳಗೊಳ್ಳದ ಪ್ರಕಾಶಕರಿಗೆ ಹೆಚ್ಚುವರಿ ಚಂದಾದಾರಿಕೆಗಳಿಗಾಗಿ ಸಂಸ್ಥೆಗಳು ತಮ್ಮ ಬಜೆಟ್ ಅನ್ನು ನಿಯೋಜಿಸಬಹುದು.

3. ಹಣಕಾಸಿನ ವೆಚ್ಚ: ಈ ಉಪಕ್ರಮಕ್ಕೆ ಮೂರು ವರ್ಷಗಳವರೆಗೆ (2027 ರವರೆಗೆ) 6000 ಕೋಟಿ ರುಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ, ಇದು ದೀರ್ಘಾವಧಿಯ ಸುಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಚಂದಾ ದಾರಿಕೆಗಳು ಪ್ರಮುಖ ಪ್ರಕಾಶಕರಿಂದ ಪ್ರಧಾನ ಜರ್ನಲ್‌ಗಳನ್ನು ಒಳಗೊಂಡಿರುತ್ತವೆ.

4. ವಿಶಾಲ ವ್ಯಾಪ್ತಿ: ONOS ವೈಯಕ್ತಿಕ ಮತ್ತು ವಿಭಜಿತ ಚಂದಾದಾರಿಕೆ ಮಾದರಿಗಳನ್ನು ಬದಲಾಯಿಸುತ್ತದೆ, ಅವುಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿಯಾಗಿ ಮಾಡುತ್ತದೆ. ಈ ಹಿಂದೆ ಸಮಗ್ರ ಚಂದಾ
ದಾರಿಕೆಗಳನ್ನು ಪಡೆಯಲು ಸಾಧ್ಯವಾಗದ ಸಂಸ್ಥೆಗಳು ಈಗ ಗುಣಮಟ್ಟದ ಸಂಪನ್ಮೂಲಗಳಿಗೆ ಸಮಾನ ಪ್ರವೇಶ ದಿಂದ ಪ್ರಯೋಜನ ಪಡೆಯುತ್ತವೆ.

ಒಎನ್‌ಒಎಸ್‌ಅನ್ನು 2025ರ ಜನವರಿ 1 ರಂದು ಆರಂಭಿಸಲಾಗುತ್ತದೆ. ಭಾರತದ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್‌ಗಳನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಲಿದೆ. ಈ ಯೋಜನೆಯಲ್ಲೂ ಸಹ ಕೆಲವು ಹುಳುಕುಗಳಿವೆ.
ಭಾರತೀಯ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಆರ್ಟಿಕಲ್ಸಗಳನ್ನು ಅಂತಾರಾಷ್ಟ್ರೀಯ
ಮಟ್ಟದ ಜರ್ನಲ್ಸ್‌ ಗಳಲ್ಲಿ ಹಾಕಿಸಬೇಕಾದರೆ ಈಗಲೂ ಸಹ ಹಣ ನೀಡಬೇಕಾಗಿದೆ. ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಎನ್‌ಒಎಸ್ ಸೌಲಭ್ಯ ಲಭ್ಯವಾಗುವುದಿಲ್ಲ.

(ಲೇಖಕರು: ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Shashikumar K Column: ಮಧ್ಯಪ್ರಾಚ್ಯವೀಗ ಸುಡುತ್ತಿರುವ ಕಡಾಯಿ !